ಚಿಂತಿಸದಿರಿ ನಿಮ್ಮ ಟೈಮ ಬಂದೇ ಬರುತ್ತೆ - Your Time Will Come Don't Worry - Motivation Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಚಿಂತಿಸದಿರಿ ನಿಮ್ಮ ಟೈಮ ಬಂದೇ ಬರುತ್ತೆ - Your Time Will Come Don't Worry - Motivation Kannada

                                       ಚಿಂತಿಸದಿರಿ ನಿಮ್ಮ ಟೈಮ ಬಂದೇ ಬರುತ್ತೆ - Your Time Will Come Don't Worry - Motivation Kannada

                       ಹಾಯ್ ಗೆಳೆಯರೇ, ನಮಸ್ತೆ, ನಾನು ನಿಮ್ಮ ಸತೀಶಕುಮಾರ. ಲೈಫಲ್ಲಿ ಎಲ್ಲ ಚೆನ್ನಾಗಿ ಸಾಗುತ್ತಿರುವಾಗ ಸಡನ್ನಾಗಿ ಸಂಕಷ್ಟ ಬಂದ್ರೆ ಇಲ್ಲ ನಮ್ಮವರೇ ನಮಗೆ ಮೋಸ ಮಾಡಿ ಬೆನ್ನಿಗೆ ಚೂರಿ ಹಾಕಿದ್ರೆ ಇಲ್ಲ ಯಾರಾದರೂ ನಮಗೆ ಅನಾವಶ್ಯಕವಾಗಿ ಅವಮಾನ ಮಾಡಿದ್ರೆ ಇಲ್ಲ ನಾವು ಕಷ್ಟದಲ್ಲಿರುವಾಗ ನಮ್ಮವರೇ ನಮ್ಮ ಕೈಬಿಟ್ರೆ ನಮಗೆ ಸಿಕ್ಕಾಪಟ್ಟೆ ಕೋಪ ಬರುತ್ತಲ್ಲ? ಕೋಪ ಬರಲೇಬೇಕು. ಈ ಟೈಮಲ್ಲಿ ಎಷ್ಟೇ ಕೋಪ ಬಂದ್ರೂ ಕೂಡ ಕಂಟ್ರೋಲ ಮಾಡಿಕೊಳ್ಳಿ. ಯಾರಿಗೂ ಏನನ್ನೂ ಹೇಳಬೇಡಿ. ಯಾರಿಗೂ ಬೈಯ್ಯಬೇಡಿ. ಜಸ್ಟ ಅದನ್ನೊಂದು ಕೆಟ್ಟ ಕನಸೆಂದುಕೊಂಡು ಮರೆತು ಬಿಡಿ. ನೀವು ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಹೋಗಿ ಮುಂದೆ ಒಂದಲ್ಲ ಒಂದಿನ ನಿಮ್ಮ ಗುಡ್ ಟೈಮ ಬಂದೇ ಬರುತ್ತದೆ. ನಿಮಗೆ ಬ್ಯಾಡ್ ಟೈಮ ತಂದವರನ್ನು ಬರ್ಬಾದ ಮಾಡೇ ಮಾಡುತ್ತದೆ. ಅವರು ಮಾಡಿದ ಕೆಟ್ಟ ಕೆಲಸಗಳ ಕರ್ಮಫಲ ಅವರನ್ನು ಸೈಲೆಂಟಾಗಿ ಸಾಯಿಸುತ್ತದೆ. ಹೀಗಿರುವಾಗ ನೀವ್ಯಾಕೆ ಸುಮ್ಮನೆ ಟೆನ್ಶನ ಮಾಡಿಕೊಳ್ಳುತ್ತೀರಾ? ನೀವ್ಯಾಕೆ ಸೇಡು ತೀರಿಸಿಕೊಳ್ಳಲು ಹೋಗಿ ನಿಮ್ಮ ಟೈಮ ಹಾಗೂ ಎನರ್ಜಿಯನ್ನು ವೇಸ್ಟ ಮಾಡುತ್ತಿರಾ? 

ಚಿಂತಿಸದಿರಿ ನಿಮ್ಮ ಟೈಮ ಬಂದೇ ಬರುತ್ತೆ - Your Time Will Come Don't Worry - Motivation Kannada

                ನಿಮಗೆ ಎಷ್ಟೇ ಕಷ್ಟವಾಗಲಿ, ನಷ್ಟವಾಗಲಿ, ಅವಮಾನವಾಗಲಿ, ಅನ್ಯಾಯವಾಗಲಿ ಆ ಟೈಮಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ಆವೇಶದಲ್ಲಿ ಕೂಗಾಡಿ ಅನಾಹುತ ಮಾಡಿಕೊಳ್ಳಬೇಡಿ. ಸ್ಮೈಲ ಮಾಡಿ ಸೈಲೆಂಟಾಗಿ ನಿಮ್ಮ ಕೆಲಸವನ್ನು ಮಾಡುತ್ತಲೇ ಹೋಗಿ. ನಿಮ್ಮ ಹಾರ್ಡ ವರ್ಕ ನಿಮಗೆ ಗುಡ್ ಟೈಮಿನ ಜೊತೆಗೆ ಸಕ್ಸೆಸನ್ನು ತಂದು ಕೊಡುತ್ತದೆ. ನಿಮ್ಮ ಗುಡ್ ಟೈಮ ಬಂದಾಗ ನಿಮಗೆ ಮೋಸ ಮಾಡಿದವರು, ನಿಮಗೆ ಹರ್ಟ ಮಾಡಿದವರು, ನಿಮ್ಮನ್ನು ಇಗ್ನೋರ ಮಾಡಿದವರು ತಾವಾಗಿಯೇ ಪಾಠ ಕಲಿಯುತ್ತಾರೆ. ಸೋ ನಿಮ್ಮ ಟೈಮ ಬರುವ ತನಕ ವೇಟ ಮಾಡಿ. ಮುಂದೆ ಒಂದಲ್ಲ ಒಂದಿನ ನಿಮ್ಮ ಟೈಮ ಬಂದೇ ಬರುತ್ತದೆ. ನಿಮ್ಮನ್ನು ಅಳಿಸಿದವರನ್ನು ಅಳಿಸುತ್ತದೆ, ನಿಮ್ಮನ್ನು ಅವಮಾನಿಸಿದವರನ್ನು ಅವಮಾನಿಸುತ್ತದೆ. 

ಉದಾಹರಣೆಗೆ ಹೇಳಬೇಕೆಂದರೆ ;

                   ನನಗೆ ಆವತ್ತು ಬಿಜಿನೆಸ್ ಹೆಸರಲ್ಲಿ ಮೋಸ ಮಾಡಿದ ನನ್ನ ಗೆಳೆಯರು ಇವತ್ತು ಅವರ ಗರ್ಲಫ್ರೆಂಡಗಳಿಂದಲೇ ಬರ್ಬಾದ ಆಗಿ ಬೀದಿಬೀದಿ ಅಲೆಯುತ್ತಿದ್ದಾರೆ. ಸ್ನೇಹಕ್ಕಿಂತ ಪ್ರೀತಿ ಮೇಲು ಅಂತಾ ಬೆನ್ನಿಗೆ ಚೂರಿ ಹಾಕಿದವರು ಇವತ್ತು ತಮ್ಮ ಪ್ರೇಯಸಿಯರಿಂದಲೇ ಪರದೇಶಿಗಳಾಗಿದ್ದಾರೆ. 

                           ನನಗೆ ಆ್ಯಕ್ಸಿಡೆಂಟಾದಾಗ ನಾನು ಸಾಯಲಿ ಅಂತಾ ಆಸೆಪಟ್ಟವರು ಇವತ್ತು ನಡೆದಾಡೋಕ್ಕಾಗದೆ ಫುಲ್ ಬೆಡರೆಸ್ಟನಲ್ಲಿದ್ದಾರೆ‌. ತಿನ್ನೋದು ಮಲಗೋದು ಹೆಲೋದು ಎಲ್ಲ ಬೆಡಲ್ಲೇ‌‌‌‌‌ ಮಾಡ್ತಿದಾರೆ. 

                  ನಾನು ಬಿಜಿನೆಸ್ ಸ್ಟಾರ್ಟ ಮಾಡಿದಾಗ ನನ್ನ ನೋಡಿ ಕಿಂಡಲ್ ಮಾಡಿದವರು ಇವತ್ತು ತಮ್ಮ ನವರಂಧ್ರಗಳನ್ನು ಮುಚ್ಚಿಕೊಂಡು ಆರ್ಡಿನರಿ ಜಾಬ ಮಾಡುತ್ತಿದ್ದಾರೆ. ನನ್ನೆದುರಿಗೆ ಬಂದಾಗ ಮಾತನಾಡಿಸುವ ಧೈರ್ಯವಿಲ್ಲದೆ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. 

                  ಅವತ್ತು ನನ್ನನ್ನು ಇಗ್ನೋರ ಮಾಡಿದ ನಮ್ಮ ಕ್ಲಾಸಮೇಟ್ಸಗಳು ಇವತ್ತು ನನ್ನನ್ನು ಮೀಟಾಗುವುದಕ್ಕಾಗಿ ವೇಟ ಮಾಡ್ತಿದಾರೆ. 

              ಕಾಲೇಜಿನಲ್ಲಿರುವಾಗ ನನ್ನನ್ನು ಫೇಸ್‌ಬುಕ್ಕಲ್ಲಿ ಬ್ಲಾಕ್ ಮಾಡಿದ ನಮ್ಮ ಕ್ಲಾಸ್ ಟಾಪರ್ ಇವತ್ತು ನನ್ನ ಪರ್ಸನಲ್ ಫೋನ ನಂಬರನ್ನು ಗೂಗಲನಲ್ಲಿ ಹುಡುಕಾಡುತ್ತಿದ್ದಾಳೆ. 

                ಅವತ್ತು ನೀನು ಲೈಫಲ್ಲಿ ಮುಂದೆ ಹೋಗಲ್ಲ ಎಂದವರು ಇವತ್ತು ತಮ್ಮ ಲೈಫಲ್ಲಿ ಏನಾಗ್ತಿದೆ ಅಂತಾ ಗೊತ್ತಾಗದೇ ಓಡಾಡುತ್ತಿದ್ದಾರೆ. ಹಣಕ್ಕಾಗಿ ಒದ್ದಾಡುತ್ತಿದ್ದಾರೆ. 

                  ಅವತ್ತು ನನ್ನಿಂದ ದೂರ ಓಡಿದವರು ಇವತ್ತು ನನ್ನ ದೋಸ್ತಿ ಮಾಡಲು ಸಾಯುತ್ತಿದ್ದಾರೆ. ಅವತ್ತು ನನ್ನ ಕಾಲನ್ನು ಕಟ್ ಮಾಡಿದವರು ಇವತ್ತು ನನ್ನೊಂದಿಗೆ ಮಾತಾಡಲು ದಿನಾ ಕಾಲ ಮಾಡುತ್ತಾರೆ, ಲೈನ ಬಿಜಿ ಎಂಬ ಟ್ಯೂನ ಕೇಳಿ ತಮ್ಮನ್ನು ತಾವೇ ಬೈದುಕೊಳ್ಳುತ್ತಿದ್ದಾರೆ. 

                  ಅವತ್ತು ನನ್ನನ್ನು ಅಳಿಸಲು ಟ್ರಾಯ ಮಾಡಿದವರು ಇವತ್ತು ಅಳುತ್ತಿದ್ದಾರೆ. ಅವತ್ತು ನನ್ನ ಕಾಲೆಳೆದವರು ಇವತ್ತು ತಮ್ಮ ಕಾಲ್ಮೇಲೆ ತಾವೇ ಕಲ್ಲಾಕಿಕೊಂಡಿದ್ದಾರೆ. 

                ಅವತ್ತು ನನ್ನನ್ನು ನೋಡಿ ನಗುತ್ತಿದ್ದವರು ಇವತ್ತು ಈಡೀ ಜಗತ್ತಿನ ಮುಂದೆ ಜೋಕರ್ ಆಗಿದ್ದಾರೆ‌. ಅವತ್ತು ನಮ್ಮನ್ನು ನೋಡಿ ಬೊಗಳುತ್ತಿದ್ದ ನಾಯಿಗಳು ಇವತ್ತು ಬಾಲ ಮುಚ್ಚಿಕೊಂಡು ಬಿದ್ದಿವೆ. 

                ಅವತ್ತು ನನ್ನ ಮೊಬೈಲ್ ನಂಬರಿಗೆ ವ್ಯಾಲೂ ಇರಲಿಲ್ಲ. ಆದರೆ ಇವತ್ತು ಅದೇ ಮೊಬೈಲ್ ನಂಬರಗಾಗಿ ಲಕ್ಷಾಂತರ ಜನ ಹುಡುಕಾಡುತ್ತಿದ್ದಾರೆ. 

              ಅವತ್ತು ನಿನಗೆ ಗರ್ಲಫ್ರೆಂಡಿಲ್ಲ, ನಿನಗೆ ಮದುವೆಯಾಗಲ್ಲ ಎಂದವರು ಇವತ್ತು ನನ್ನ ಹಾಗೂ ರಾಣಿಯ ಜೋಡಿ ನೋಡಿ ಉರಿದುಕೊಂಡು ಬರ್ನಾಲ ಖರೀದಿಸಿದ್ದಾರೆ. 

                   ಅವತ್ತು ನನ್ನನ್ನು ತುಳಿಯಲು ಬಂದವರನ್ನು ಇವತ್ತು ನನ್ನನ್ನು ಪ್ರೀತಿಸುವ ಜನ ಕಾಲು ಮುರಿದು ಕೂಡಿಸಿದ್ದಾರೆ. ಇವತ್ತು ನನಗೆ ನನ್ನದೇ ಆದ ದೊಡ್ಡ ಫ್ರೆಂಡ್ಸ್ ಗ್ಯಾಂಗ ಇದೆ. ಫ್ಯಾನ್ಸ ಗ್ಯಾಂಗ ಕೂಡ ರೆಡಿಯಾಗ್ತಿದೆ.

                    ಅವತ್ತು ನಮಗೆ ಲೋನ ಕೊಡಲ್ಲ ಎಂದವರು ನಿನ್ನೆ ನಮ್ಮ ಆಫೀಸಿಗೆ ಬಂದು ಲೋನ ಬೇಕಿದ್ರೆ ಪ್ಲೀಜ ನಮಗೆ ಹೇಳಿ ನಾವೇ ಖುದ್ದಾಗಿ ಬಂದು ಕೊಡ್ತಿವಿ ಅಂತಾ ಹೇಳಿದ್ದಾರೆ. 

                        ಅವತ್ತು ನನ್ನನ್ನು ಊಟದಲ್ಲಿ ವಿಷ ಹಾಕಿ ಕೊಲ್ಲಲು ಟ್ರಾಯ ಮಾಡಿದವರು ಇವತ್ತು ನನ್ನ ಸಕ್ಸೆಸನ್ನು ನೋಡಿ ಹುಚ್ಚರಾಗಿದ್ದಾರೆ. ಹೊಟ್ಟೆ ಉರಿದುಕೊಂಡು ಸುಟ್ಟು ಸರ್ವನಾಶವಾಗಿದ್ದಾರೆ. ಜೀವಂತ ಶವದಂತೆ ಬದುಕುತ್ತಿದ್ದಾರೆ. 

              ಡಾರ್ಲಿಂಗ ಈಗ ನನ್ನ ಗುಡ ಟೈಮ ಬಂದಿದೆ. ನಾನು ಸಿಂಪಲ್ & ಹಂಬಲಾಗೇ ಬದುಕುವೆ, ನನ್ನ ಗುಡ ಟೈಮನ್ನು ಯಾವಾಗಲೂ ನನ್ನ ಜೊತೆಗೇನೆ ಜೋಪಾನವಾಗಿಟ್ಟುಕೊಳ್ಳುವೆ. 

                    ಮೈ ಡಿಯರ್ ಫ್ರೆಂಡ್ಸ್ ನಿಮ್ಮ ಟೈಮ ಕೂಡ ಬಂದೇ ಬರುತ್ತದೆ. ಅಲ್ಲಿ ತನಕ ಸ್ವಲ್ಪ ವೇಟ ಮಾಡಿ. ಈ ಅಂಕಣಕ್ಕೆ ಲೈಕ‌ ಮಾಡಿ ಕಮೆಂಟ ಮಾಡಿ ಶೇರ್ ಮಾಡಿ. ಜೊತೆಗೆ ಫೇಸ್‌ಬುಕ್‌ ಹಾಗೂ ಇನಸ್ಟಾಗ್ರಾಮಗಳಲ್ಲಿ ಡೈರೆಕ್ಟರ್ ಸತೀಶಕುಮಾರ ಪೇಜನ್ನು ಫಾಲೋ ಮಾಡಿ. ಧನ್ಯವಾದಗಳು...

ಚಿಂತಿಸದಿರಿ ನಿಮ್ಮ ಟೈಮ ಬಂದೇ ಬರುತ್ತೆ - Your Time Will Come Don't Worry - Motivation Kannada

Blogger ನಿಂದ ಸಾಮರ್ಥ್ಯಹೊಂದಿದೆ.