ನಮಸ್ತೆ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಗೆಳೆಯರೇ ಟೈಟಲ್ ಹಾಗೂ ಥಂಬ್ನೇಲ್ ನೋಡಿ ನಿಮಗೆ ಏನಿದು ಯುಸಲೇಸ ಹಾಗೂ ನಾನ್ಸೆನ್ಸ್ ವಿಷಯ ಹೇಳೋಕೆ ಹೊರಟಿದ್ದಾನೆ ಅಂತಾ ಅನ್ನಿಸಬಹುದು. ನಿಮಗೆ ಏನೇ ಅನ್ನಿಸಿದರೂ ಕೂಡ ಪರವಾಗಿಲ್ಲ. ಇದು ತುಂಬಾನೇ ಮಹತ್ತರವಾದ ವಿಷಯವಾಗಿದೆ. ಇದನ್ನ ಅರ್ಥ ಮಾಡಿಸುವುದಕ್ಕಾಗಿ ನಾನು ನಿಮಗೆ ಎರಡು ಇಮೇಜ್ಗಳನ್ನು ತೋರಿಸುವೆ. ಅವುಗಳನ್ನು ಕೇರ್ಫುಲ್ಲಾಗಿ ಗಮನಿಸಿ.

ನೀವು ಈ ಎರಡು ಇಮೇಜ್ಗಳನ್ನು ಸರಿಯಾಗಿ ಗಮನಿಸಿದ್ದೀರಿ ಅಂತಾ ಭಾವಿಸುವೆ. ಮೊದಲ ಇಮೇಜನ್ನ ನೋಡಿದ ನಂತರ ನಿಮಗೆ ಏನ್ ಅನ್ನಿಸುತ್ತದೆ? ಎಷ್ಟೊಂದು ಒಳ್ಳೇ ಹುಡುಗ ಮೆಡಿಟೇಶನ್ ಮಾಡ್ತಿದ್ದಾನೆ, ನಮ್ಮ ಭಾರತೀಯ ಪರಂಪರೆ ಪಾಲಿಸುತ್ತಿದ್ದಾನೆ ಅಂತಾ ಅನ್ನಿಸುತ್ತದೆಯಲ್ಲ? ಆದರೆ ಎರಡನೇ ಇಮೇಜ್ ನೋಡಿದ ನಂತರ ನಿಮಗೆ ಏನ್ ಅನ್ನಿಸುತ್ತದೆ? ಛೇ ಏನ್ ಈತ ಒಳ್ಳೆ ಹುಡುಗ ಅಂತ ಅಂದುಕೊಂಡಿದ್ವಿ. ಆದರೆ ಈತ ದಾರಿ ತಪ್ಪಿದ್ದಾನೆ, ದುಡ್ಡಿನ ದರ್ಪದಿಂದ ದುಶ್ಚಟಕ್ಕೆ ಬಿದ್ದಿದ್ದಾನೆ ಅಂತಾ ಬೈಗುಳಗಳು ಸಲೀಸಾಗಿ ಬಾಯಿಗೆ ಬರ್ತಾವೆ ಅಲ್ಲ? ಸರಿ ತಾನೇ? ಇದಕ್ಕೆ ನಾನು ನಿಮಗೆ ಹೇಳ್ತಾ ಇರೋದು ಕಾಣೋದೆಲ್ಲ ನಿಜವಲ್ಲ, ಕೇಳಿದ್ದೆಲ್ಲ ನಿಜವಲ್ಲ ಅಂತಾ...!

ಸದ್ಯಕ್ಕೆ ಡೂಪ್ಲಿಕೇಟ್ ಜಮಾನಾ ನಡೀತಿದೆ. ಸುಳ್ಳು ಸತ್ಯದ ಡ್ರೆಸ್ ಹಾಕಿಕೊಂಡು ಓಡಾಡುತ್ತಿದೆ. ಸತ್ಯ ಬಟ್ಟೆಯಿಲ್ಲದೆ ಸಮಾಜದ ಮುಂದೆ ಹೇಗೆ ಬರೋದು ಅಂತಾ ಕತ್ತಲಲ್ಲಿ ಕೊಳಿತಿದೆ. ಎಲ್ಲವು ಫೇಕ್ ಆಗಿದೆ. ಬರೀ ಸೋಶಿಯಲ್ ಮೀಡಿಯಾ ಮಾತ್ರವಲ್ಲ ನ್ಯೂಸ್ ಮೀಡಿಯಾಗಳು ಕೂಡ ಫೇಕ್ ಆಗಿವೆ. ಕೆಲವೊಂದಿಷ್ಟು ಸ್ವಾಭಿಮಾನಿ ಸ್ವತಂತ್ರ ಪತ್ರಕರ್ತರ ಚಾನೆಲ್ ಬಿಟ್ಟರೆ ಮಿಕ್ಕಿದೆಲ್ಲವು ಫೇಕ್ ಆಗಿವೆ. ದುಡ್ಡಿಗೋಸ್ಕರ ತಮ್ಮನ್ನು ತಾವು ಮಾರಿಕೊಂಡಿವೆ. ದುಡ್ಡು ಕೊಟ್ರೆ ಸಾಕು ಪೊಲೀಸರು ಯಾರನ್ನ ಬೇಕಾದರೂ ಅರೆಸ್ಟ್ ಮಾಡಿ ಅವನ ಲೈಫನ್ನು ಹಾಳು ಮಾಡ್ತಾರೆ. ವಿಜಯಾ ಟೈಮ್ಸನ ವಿಜಯಲಕ್ಷ್ಮಿಯವರು ಹೇಳಿದಂತೆ ಈ ಮೀಡಿಯಾದವರು ದುಡ್ಡು ತಗೊಂಡು ಭ್ರಷ್ಟ ದುಷ್ಟ ರೇಪಿಸ್ಟರನ್ನು ಸಹ ದೇವ ಮಾನವನನ್ನಾಗಿ ಮಾಡ್ತಾರೆ. #ಸೌಜನ್ಯ ರೇಪ್ & ಮರ್ಡರ್ ಕೇಸ್. ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡ್ತಾರೆ. ಅದಕ್ಕೆ ಪ್ರಜ್ಞಾವಂತ ನಾಗರಿಕರಾದ ನಾವು ಕಣ್ಣಿಗೆ ಕಂಡದ್ದನ್ನೆಲ್ಲ ಕಿವಿಗೆ ಬಿದ್ದಿದ್ದನ್ನೆಲ್ಲ ನಿಜ ಅಂತ ನಂಬಬಾರದು. ಎಲ್ಲವನ್ನು ಎರಡೆರಡು ಸರ್ತಿ ಪರಿಶೀಲಿಸಿ ಪರಾಮರ್ಶಿಸಿ ಆನಂತರ ನಮ್ಮ ಅನಿಸಿಕೆ ಅಥವಾ ಅಭಿಪ್ರಾಯವನ್ನು ರೂಪಿಸಬೇಕು. ಆದರೆ ನಾವು ಆ ರೀತಿ ಮಾಡ್ತಿಲ್ಲ. ಎಲ್ಲೋ ಏನು ಬಂತು ಅಂತಾ ಅದನ್ನು ಹಿಂದು ಮುಂದು ನೋಡದೆ ನಂಬತ್ತಿವಿ. ಬೇರೆಯವರೊಂದಿಗೆ ಶೇರ್ ಮಾಡಿ ಕೆಟ್ಟದಾಗಿ ಕಾಮೆಂಟ್ ಹಾಕಿ ಅಮಾಯಕರ ಜೀವನ ಹಾಳು ಮಾಡ್ತೀವಿ. ಒಂದಸಲ ನಿಮ್ಮ ಜೊತೆಗೆ ಈ ರೀತಿ ಆದ್ರೆ ಹೇಗಾಗುತ್ತೆ ಅಂತಾ ಯೋಚನೆ ಮಾಡಿ.

ಇದೇ ತರಹದ ಸುಳ್ಳು ಸುದ್ದಿಗಳಿಂದ ಗಾಸಿಪಗಳಿಂದ ಬಹಳಷ್ಟು ಜನರ ಜೀವನ ಹಾಳಾಗಿದೆ. ಬಹಳಷ್ಟು ಜನ ಹೆಣ್ಮಕ್ಕಳ ಮಾನ ಪ್ರಾಣ ನಡು ಬೀದಿಯಲ್ಲಿ ಹರಾಜಾಗಿದೆ. ಜಾತಿ ಧರ್ಮದ ದಂಗೆಗಳಾಗಿವೆ, ಮಣಿಪುರದಂಥ ನಾಚಿಕೆಗೇಡು ಕೃತ್ಯಗಳಾಗಿವೆ. ಕೊಲೆಗಳಾಗಿವೆ. ಏನೇನೆಲ್ಲ ಆಗಬಾರದೋ ಅವೆಲ್ಲವೂ ಆಗಿವೆ. ಅದಕ್ಕಾಗಿ ನಾವು ಫೇಕ್ ನ್ಯೂಸಗೆ ಕಡಿವಾಣ ಹಾಕಲೇಬೇಕು. ಇಲ್ಲವಾದರೆ ಇನ್ನೂ ಬಹಳಷ್ಟು ಅನೀತಿ ಅತ್ಯಾಚಾರ ಅಧರ್ಮ ಕೊಲೆ ದಂಗೆಗಳು ಆಗ್ತಾನೆ ಇರ್ತವೆ. ಅಮಾಯಕ ಜೀವಗಳು ಬಲಿಯಾಗ್ತಾನೆ ಇರ್ತವೆ. ಈ ಪಾಪದಲ್ಲಿ ನೀವು ಭಾಗಿಯಾಗಬೇಡಿ ಅನ್ನೋ ಕಳಕಳಿ ಅಷ್ಟೇ ನನ್ನದು. ಮತ್ತೇನಿಲ್ಲ.
ಭಾರತದಲ್ಲಿ ಕೆಲವೊಂದಿಷ್ಟು ಗಂಡಸರು ಹೆಣ್ಮಕ್ಕಳ ಮೇಲೆ ಎಲ್ಲ ತರಹದ ದೌರ್ಜನ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಅವರ ರಕ್ಷಣೆಗಾಗಿ ಬಲಿಷ್ಠವಾದ ಕಾನೂನುಗಳಿಲ್ಲ, ಇರೋ ಕಾನೂನು ಕೆಲಸ ಮಾಡ್ತಿಲ್ಲ. ಆದರೆ ಗಂಡಸರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ರಕ್ಷಣೆಗೆ ಯಾವುದೇ ಕಾನೂನೇ ಇಲ್ಲ. ಪರಿಸ್ಥಿತಿ ಹೆಂಗಿದೆ ಅಂದ್ರೆ ಹೆಂಡ್ತಿ ಗಂಡನ ಮೇಲೆ ದಬ್ಬಾಳಿಕೆ ಮಾಡಿದ್ರೆ ಕಾನೂನಿನಲ್ಲಿ ಯಾವುದೇ ರಕ್ಷಣೆ ಇಲ್ಲ. ಯಾವಳೋ ಒಬ್ಬಳು ಹುಡುಗಿ ವೈಯಕ್ತಿಕ ದ್ವೇಷಕ್ಕೆ ಹುಡುಗನ ಮೇಲೆ ಲೈಂಗಿಕ ಕಿರುಕುಳ ಇಲ್ಲವೇ ರೇಪ್ ಕೇಸ್ ಹಾಕಿದ್ರೆ ಅವನಿಗೆ ಯಾವುದೇ ರಕ್ಷಣೆ ಇಲ್ಲ. ಅವನನ್ನು ಬಂಧಿಸುತ್ತಲೇ ಮೀಡಿಯಾದವರು ಅವನನ್ನು ಅಪರಾಧಿ ಅನ್ನೋ ತರ ತೋರಿಸಿ ಅವನ ಹೆಸರು ಭವಿಷ್ಯ ಎಲ್ಲ ಹಾಳ ಮಾಡ್ತಾರೆ. ಯಾರನ್ನೋ ಬಚಾವ ಮಾಡುವುದಕ್ಕಾಗಿ ಪೊಲೀಸರು ಅಮಾಯಕನನ್ನು ಜೈಲಿಗೆ ತಳ್ಳುತ್ತಾರೆ ಇಲ್ಲವೇ ಅಮಾಯಕರ ಎನ್ಕೌಂಟರ್ ಮಾಡಿ ಬಿಲ್ಡಅಪ್ ತೆಗೆದುಕೊಳ್ತಾರೆ. ಈ ಕಳ್ಳ ಪೊಲೀಸ್ ಆಟದಲ್ಲಿ ಅಮಾಯಕ ಹುಡುಗ ಹುಡುಗಿಯರ ಮಾರಣಹೋಮ ಆಗುತ್ತಿದೆ. ನಾವು ಜನ ಎಚ್ಚೆತ್ತುಕೊಳ್ಳದಿದ್ದರೆ ಇವತ್ತು ಹೆಂಗೆ ಬೇರೆಯವರ ಮನೆಮಕ್ಕಳ ಜೀವ ಹೋಗುತ್ತಿದಿಯೋ ಅದೇ ರೀತಿ ನಾಳೆ ಒಂದಿನ ಈ ಕೊಳಕು ಬೆಂಕಿ ನಿಮ್ಮ ಮನೆಯನ್ನು ಕೂಡ ಸುಟ್ಟೆ ಸುಡುತ್ತದೆ. ಅದಕ್ಕಾಗಿ ಬೇರೆಯವರ ಮನೆ ಸುಡುತ್ತಿರುವಾಗ ನಗುತ್ತಾ ಕೂಡಬೇಡಿ, ಸಾಧ್ಯವಾದಷ್ಟು ಸಹಾಯ ಮಾಡಿ. ಫೇಕ್ ನ್ಯೂಸಗಳಿಗೆ ತಕ್ಕ ಪಾಠ ಕಲಿಸಿ...
ನಾನು ಜಾಸ್ತಿ ಮಾತನಾಡೋಕೆ ಹೋಗಲ್ಲ. ಏಕೆಂದರೆ ಕಳೆದ ಒಂದು ತಿಂಗಳಿಂದ ನನ್ನ ಮನಸ್ಸು ಸರಿಯಿಲ್ಲ. ಊಟ ಸೇರ್ತಿಲ್ಲ, ನಿದ್ದೆ ಬರ್ತಿಲ್ಲ. ಕೆಲಸಾನೂ ಮಾಡೋಕೆ ಆಗ್ತಿಲ್ಲ. ಕೆಲವೊಂದಿಷ್ಟು ಕೊಳಕು ಜನ ನನ್ನನ್ನು ಖತಮ ಮಾಡೋಕೆ ಕುತಂತ್ರ ಮಾಡ್ತಿದಾರೆ. ನಾನು ನನ್ನ ಬಿಜನೆಸ್ ಹಕ್ಕುಗಳನ್ನು ಕೇಳಿದ್ದಕ್ಕೆ, ಮುದ್ರಾ ಲೋನ್ ನನಗೆ ಕೊಟ್ಟಿಲ್ಲ ಅಂದಿದ್ದಕ್ಕೆ, ಕೆಲವೊಂದಿಷ್ಟು ಜಾತಿಗಳಿಂದಾಗಿ ನನ್ನ Startupಗೆ ಸಿಗಬೇಕಾದ ಫಂಡ್ ಹಾಗೂ ಪರ್ಮಿಷನ್ ಸಿಕ್ಕಿಲ್ಲ ಅನ್ನೋದನ್ನ ಹೇಳಿದಕ್ಕೆ ಇಷ್ಟೆಲ್ಲ ಕುತಂತ್ರ ಮಾಡುತ್ತಿದ್ದಾರೆ. ಬೇಕುಬೇಕಂತಲೇ ನನ್ನ ಕಾರಿಗೆ ಅಡ್ಡ ಬಂದು ಬೀಳಲು ಕೆಟ್ಟ ಜನರಿಗೆ ದುಡ್ಡು ಕೊಟ್ಟಿದಾರೆ, ದಿನರಾತ್ರಿ ಹತ್ತಾರು ಬೆದರಿಕೆ ಕರೆಗಳು, ನನ್ನ ಕಾರನ್ನು ಚೆಕ್ ಮಾಡುವ ನೆಪದಲ್ಲಿ ಟೋಲ್ ಬಳಿ ನನ್ನ ಕಾರಲ್ಲಿ ಏನೋ ಇಟ್ಟು ನನ್ನನ್ನು ಯಾವುದಾದರೂ ಒಂದರಲ್ಲಿ ಸಿಲುಕಿಸಿ ಬದನಾಮ ಮಾಡಿಸಲು ಪೊಲೀಸರಿಗೆ ಆಜ್ಞೆ ಇನ್ನೂ ಏನೇನೋ ನಡೀತಿವೆ. ಪೊಲೀಸ್ ಹಾಗೂ ಕಾನೂನು ನೆರವು ತೆಗೆದುಕೊಳ್ಳೋಕೆ ಹೋದ್ರೆ "ನಿನ್ನಂಥವರಿಂದ ದೇಶಕ್ಕೆ ಆಗೋದೇನಿದೆ, ಯಾರೋ ಸತ್ರೆ ನಮಗೇನು, ನಮಗೆ ಟೈಮ್ ಇಲ್ಲ" ಅನ್ನೋ ಉಡಾಫೆ ಮಾತುಗಳು. ನಾನು ಸತ್ರೆ ನನಗೆ ಅಳೋಕೆ ಯಾರಿಲ್ಲ. ನಾನೊಬ್ಬ ಅನಾಥ ಸತ್ರೆ ಯಾರಿಗೂ ಏನು ನಷ್ಟವಿಲ್ಲ. ಆದರೆ ನಿಮಗೆ ಫ್ಯಾಮಿಲಿ ಇದೆ, ಮಕ್ಕಳಿದ್ದಾರೆ ಅದಕ್ಕೆ ಎಚ್ಚರವಾಗಿರಿ. ಧನ್ಯವಾದಗಳು...
