ನಮಸ್ತೆ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಇವತ್ತಿನ ಅಂಕಣದಲ್ಲಿ ನಾನು ರಯಾನ್ ಹಾಲಿಡೇ ಅವರು ಬರೆದ "ಈಗೋ ಇಸ್ ದಿ ಎನಿಮಿ" ಬುಕ್ಕಿನ ಸಮರಿಯನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಿರುವೆ.
Book Link - https://www.roaringcreationsfilms.com/ego-is-the-enemy-book-by-ryan-holiday

ಆಥರ ರಯಾನ್ ಹಾಲಿಡೇ ಅವರು ತಮ್ಮ ಜೀವನದ ಸ್ವಂತ ಅನುಭವದ ಆಧಾರದ ಮೇಲೆ "ಈಗೋ ಇಸ್ ದ ಎನಿಮಿ" ಪುಸ್ತಕವನ್ನು ಬರೆದಿದ್ದಾರೆ. ನೀವು ನಿಮ್ಮ ಜೀವನದ ಯಾವುದೇ ಸ್ಟೇಜನಲ್ಲಿರಿ ನಿಮ್ಮೊಂದಿಗೆ ಈಗೋ ಇದ್ದೇ ಇರುತ್ತದೆ. ನೀವು ಯಾವುದಾದರೂ ಒಂದು ಮಹತ್ವಾಕಾಂಕ್ಷೆಯ ಹಿಂದೆ ಬಿದ್ದಿದ್ದರೂ ಕೂಡ, ಸ್ಟ್ರಗಲ ಮಾಡ್ತಿದ್ರೂ ಕೂಡ, ಸಕ್ಸೆಸಫುಲ್ ಆಗಿದ್ರೂ ಕೂಡ, ಮಿಲೆನಿಯರ್ ಆಗಿದ್ರೂ ಕೂಡ ನಿಮ್ಮ ಶತ್ರು ಈಗೋ ಸದಾ ನಿಮ್ಮ ಜೊತೆಗಿರುತ್ತದೆ. ನೀವು ಎಲ್ಲೇ ಇರಿ, ಹೇಗೆ ಇರಿ, ಏನೇ ಆಗಿರಿ ನಿಮ್ಮ ದೊಡ್ಡ ಶತ್ರು ಈಗೋ ನಿಮ್ಮೊಂದಿಗೆ ಇದ್ದೇ ಇರುತ್ತದೆ. ಈ ಪುಸ್ತಕದಲ್ಲಿ ಆಥರ್ Self Centered Ambition - Ego ಅಂದ್ರೆ ಆ್ಯರೋಗನ್ಸ ಬಗ್ಗೆ ಹೇಳ್ತಾ ಇದಾರೆ. ಅಹಂಕಾರದ ಬಗ್ಗೆ ಹೇಳ್ತಾ ಇದಾರೆ.

ಪ್ರತಿಯೊಬ್ಬ ವ್ಯಕ್ತಿಯ ಲೈಫಲ್ಲಿ ಮೂರು ಸ್ಟೇಜಸಗಳು ಬಂದೇ ಬರುತ್ತವೆ.
1) Aspiration Stage - ಮಹತ್ವಾಕಾಂಕ್ಷೆಯ ಹಂತ (ಏನನ್ನಾದರೂ ಸಾಧಿಸಲು ಸ್ಟ್ರಗಲ ಮಾಡುತ್ತಿರುವ ಹಂತ)
2) Success Stage - ಯಶಸ್ಸಿನ ಹಂತ (ಏನನ್ನಾದರೂ ಸಾಧಿಸಿದ ಹಂತ)
3) Failure Stage - ವಿಫಲತೆಯ ಹಂತ (ಏನನ್ನಾದರೂ ಸಾಧಿಸಿ ಮತ್ತೆ ಸೋತ ಹಂತ)
ಈ ಮೂರು ಹಂತಗಳಲ್ಲಿ ನಿಮ್ಮ ಅತೀ ದೊಡ್ಡ ಶತ್ರು ಈಗೋ ನಿಮ್ಮ ಜೊತೆಗಿರುತ್ತದೆ. ಮತ್ತೆ ನಿಮ್ಮ ದಾರಿ ತಪ್ಪಿಸುತ್ತದೆ. ಹೇಗೆ ಅಂತಾ ಒಂದೊಂದಾಗಿ ನೊಡೊಣಾ...

1) Aspiration Stage - ಮಹತ್ವಾಕಾಂಕ್ಷೆಯ ಹಂತ
ಯಾವಾಗ ನೀವು Aspiration Satgeನಲ್ಲಿರುತ್ತಿರೋ ಆವಾಗಲೂ ಈ ಈಗೋ ನಿಮ್ಮಲ್ಲಿರುತ್ತದೆ. ನಿಮ್ಮ ಆ್ಯಂಬಿಷನ್ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ನಿಮ್ಮಲ್ಲಿ ಈಗೋ ಇದ್ದೇ ಇರುತ್ತದೆ. ಈ ಹಂತದಲ್ಲಿ ನಿಮ್ಮ ಸೆಲ್ಪ ಕಾನ್ಫಿಡೆನ್ಸ್ ಆ್ಯರೋಗನ್ಸಾಗಿ ಬದಲಾಗುತ್ತದೆ. Your Self Confidence becomes Arrogance. It sucks you down like the law of Gravity. Egoism is like Alcoholism. ಈಗೋ ನಿಮ್ಮಿಂದ ತಪ್ಪುಗಳನ್ನು ಮಾಡಿಸುತ್ತದೆ ಮತ್ತೆ ನಿಮ್ಮ ಯಶಸ್ಸನ್ನು ತಡೆಯುತ್ತದೆ.
ಯಾವಾಗ ನಿಮ್ಮಲ್ಲಿ ಈಗೋ ಹೆಚ್ಚಾಗುತ್ತದೆಯಲ್ಲ ಆವಾಗ
* You don't receive feedback - ನೀವು ಫೀಡಬ್ಯಾಕನ್ನು ರೀಸಿವ ಮಾಡಲ್ಲ
* You don't hear suggestions - ನೀವು ಸಲಹೆಗಳನ್ನು ಕೇಳಿಸಿಕೊಳ್ಳಲ್ಲ
* You fail to catch opportunities - ನೀವು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗ್ತೀರಿ
* You forget to Practice - ನೀವು ಪ್ರ್ಯಾಕ್ಟೀಸ್ ಮಾಡುವುದನ್ನು ಮರೆತು ಬಿಡುತ್ತಿರಿ
* You fail to analyze your actual strength & weakness - ನೀವು ನಿಮ್ಮ ಅಸಲಿ ಶಕ್ತಿ ಸಾಮರ್ಥ್ಯ ವಿಕನೆಸನ್ನು ಅಂದಾಜಿಸುವಲ್ಲಿ ನೀವು ವಿಫಲರಾಗ್ತಿರಿ
* You fail to see the reality - ನೀವು ವಾಸ್ತವಿಕತೆಯನ್ನು ನೋಡುವಲ್ಲಿ ನೀವು ವಿಫಲರಾಗ್ತಿರಿ.
* You stops learning New Things - ನೀವು ಹೊಸ ವಿಷಯಗಳನ್ನು ಕಲಿಯುವುದನ್ನ ನಿಲ್ಲಿಸುತ್ತಿರಿ. ನನಗೆಲ್ಲ ಬರುತ್ತದೆ ಎಂಬ ಅಹಂ ನಿಮ್ಮಲ್ಲಿ ಬರುತ್ತದೆ. ಉದಾಹರಣೆಗೆ ; ನಾವು ಯೂಟ್ಯೂಬ್ ಕ್ರಿಯೆಟರ ಕೋರ್ಸ ಹಾಗೂ ಪ್ರೋಫೆಷನಲ್ ವಿಡಿಯೋ ಎಡಿಟಿಂಗ್ ಕೊರ್ಸಗಳನ್ನು ಲಾಂಚ್ ಮಾಡಿದಾಗ ಬಹಳಷ್ಟು ಜನ ಅದರಲ್ಲಿ ಕಲಿಯುವಂಥದ್ದು ಏನಿದೆ ಅಂತಾ ಕಿಂಡಲ ಮಾಡಿದರು. ಆದರೆ ನಂಬಿಕೆಯಿಟ್ಟು ಕಲಿತ ಸಾವಿರಾರು ಜನ ಇವತ್ತು ತಿಂಗಳಿಗೆ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ನಮ್ಮ ಆನಲೈನ ಕೊರ್ಸಗಳಿಗೆ ಸೇರಿಕೊಳ್ಳಲು www.Roaringfilmschool.comಗೆ ವಿಜಿಟ ಮಾಡಿ.
ಈ ರೀತಿ ನಿಮ್ಮ ಈಗೋ ನಿಮ್ಮನ್ನು ಆರಂಭದಲ್ಲೇ ಹಾಳು ಮಾಡುತ್ತದೆ. ನೀವು ಈ ಹಂತದಲ್ಲಿ ಈಗೋದಿಂದ ಬಚಾವಾಗಬೇಕೆಂದರೆ ನೀವು Humbleಲಾಗಿರಬೇಕು. Be Humble while Aspiring.

2) Success Stage - ಯಶಸ್ಸಿನ ಹಂತ
ಯಾವಾಗ ನೀವು ಸಕ್ಸೆಸಿನ ಸಿಹಿಯನ್ನು ಎಂಜಾಯ ಮಾಡ್ತಾ ಇರ್ತಿರೋ ಆವಾಗ ನಿಮ್ಮಲ್ಲಿ ಅಟೋಮ್ಯಾಟಿಕಾಗಿ ಈಗೋ ಹೆಚ್ಚಾಗುತ್ತದೆ. ನಿಮಗೆ ನಾನೇ ಶ್ರೇಷ್ಟ ಎಂಬ ಅಹಂಕಾರ ಬಂದೇ ಬರುತ್ತದೆ. ಈ ಅಹಂಕಾರವೇ ನಿಮ್ಮನ್ನು ಹಾಳು ಮಾಡುತ್ತದೆ. ಅದಕ್ಕಾಗಿ ನೀವು ಈ ಹಂತದಲ್ಲಿ Kindfull ಆಗಿರಬೇಕು.
ಯಶಸ್ಸಿನ ಹಂತದಲ್ಲಿ ಈ ಈಗೋ ನಿಮ್ಮನ್ನು ಈ ರೀತಿ ಹಾಳು ಮಾಡುತ್ತದೆ.
* Ego Shortens your Success - ಈಗೋ ನಿಮ್ಮ ಸಕ್ಸೆಸ್ಸಿನ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ನಿಮಗೆ ಸಕ್ಸೆಸ ಸಿಕ್ಕಾಗ ನೀವು ಹೊಸ ವಿಷಯಗಳನ್ನು ಕಲಿಯುವುದನ್ನ ನಿಲ್ಲಿಸುತ್ತಿರಿ, ಪ್ರ್ಯಾಕ್ಟೀಸ್ ಮಾಡುವುದನ್ನ ನಿಲ್ಲಿಸುತ್ತಿರಿ, ಕೆಲಸ ಮಾಡುವುದನ್ನ ನಿಲ್ಲಿಸುತ್ತಿರಿ. ಹೀಗಾಗಿ ನಿಮ್ಮ ಪರಿಶ್ರಮ ಬೇಗನೆ ವ್ಯರ್ಥವಾಗಿ ಹೋಗುತ್ತದೆ. ಮತ್ತೆ ನೀವು ಹಳೇ ಪೋಜಿಷನಗೆ ಹೋಗುತ್ತಿರಿ. So always stay as a Student. Improve your knowledge, skills everyday.
* Ego Spoils You & Your Success - It's very difficult to handle the success. ಸಕ್ಸೆಸನ್ನು ಹ್ಯಾಂಡಲ್ ಮಾಡುವುದು ತುಂಬಾನೇ ಕಷ್ಟಕರವಾಗಿದೆ. ನೀವು ಸಕ್ಸೆಸಫುಲ್ಲಾಗಿರುವಾಗ ಈಗೋ ನಿಮ್ಮ Honesty, Morality, Humanity, Goodness ಎಲ್ಲವನ್ನು ಹಾಳು ಮಾಡಬಹುದು. ನಿಮ್ಮನ್ನು ದುಶ್ಚಟಗಳಿಗೆ ಅಂಟಿಸಿ ನಿಮ್ಮನ್ನು ಕೆಳಗೆ ಬೀಳಿಸಬಹುದು.
ಅದಕ್ಕಾಗಿ ಈ ಹಂತದಲ್ಲಿ ನಿಮಗೆ ಏನು ಬೇಕು? ಏನಿಷ್ಟ? ಎಂಬುದನ್ನು ಸರಿಯಾಗಿ ಕಂಡುಕೊಳ್ಳಿ. Manage yourself, Manage your Money, Manage your Time, Manage your Relationships. ಒಂದು ವೇಳೆ ನೀವು ಟೈಮ ಮ್ಯಾನೇಜಮೆಂಟನ್ನು ಕಲಿಯುವರಿದ್ದರೆ www.RoaringBusinessschool.comಗೆ ವಿಜಿಟ ಮಾಡಿ Ultimate Time Management Courseಗೆ ಸೇರಿಕೊಳ್ಳಿ.
ಮತ್ತೆ Don't Die from the disease of Me. ನಾನು ಎಂಬ ರೋಗದಿಂದ ಸಾಯಬೇಡಿ. ನಿಮ್ಮ ಯಶಸ್ಸಿಗಾಗಿ ಯಾರೆಲ್ಲ ಕೆಲಸ ಮಾಡಿದ್ದಾರೋ ಅವರಿಗೆ ಸರಿಯಾಗಿ ಕ್ರೆಡಿಟ ಕೊಡಿ, ಅವರಿಗೆ ಸಲ್ಲಬೇಕಾದ ಸಂಬಳ ಅಥವಾ ಶೇರನ್ನು ಪ್ರಾಮಾಣಿಕವಾಗಿ ಕೊಡಿ.

3) Failure Stage - ವಿಫಲತೆಯ ಹಂತ
ಯಾವಾಗ ನೀವು ಸೋಲ್ತಿರೋ ಆವಾಗಲೂ ಈಗೋ ನಿಮ್ಮ ಜೊತೆಗಿರುತ್ತದೆ. ಛೇ ನಾನು ಇಷ್ಟೆಲ್ಲ ಮಾಡಿದರೂ ಏನು ಪ್ರಯೋಜನವಾಗಿಲ್ಲವಲ್ಲ ಅಂತಾ ನೀವು ನಿಮ್ಮನ್ನು ಹಾಗೂ ನಿಮ್ಮ ಕೆಲಸವನ್ನು ದ್ವೇಷಿಸಲು ಸ್ಟಾರ್ಟ ಮಾಡ್ತಿರಾ. So please don't do like this. Don't hate yourself and your work when you fail. ನೀವು ಸೋತಾಗ ನಿಮ್ಮನ್ನು ಮತ್ತು ನಿಮ್ಮ ಕೆಲಸವನ್ನು ದ್ವೇಷಿಸಬೇಡಿ. When failure slaps you, your Ego gets hurt. When you fail, Smile and appreciate your effort and hard work. ಯಾವಾಗ ನೀವು ಸೋಲ್ತಿರೋ ಆವಾಗ ನೀವು ನಿಮ್ಮ ಎಫರ್ಟ ಹಾಗೂ ಹಾರ್ಡವರ್ಕನ್ನು ಅಪ್ರಿಸಿಯೆಟ್ ಮಾಡಿ. ಬೇಜಾರು ಅಥವಾ ಸಿಟ್ಟನ್ನು ಮಾಡಿಕೊಳ್ಳಬೇಡಿ. ಹತಾಶರಾಗಿ ದುಡುಕಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. Ego can block your next attempt and Makes you hate what you love most. So always love your work and Try to come back again.

ಇದೀಷ್ಟು "ಈಗೋ ಇಸ ದ ಎನಿಮಿ" ಬುಕನ ಸಾರಾಂಶ. ಈಗೋ ಅಂದರೆ ಅಹಂಕಾರ ಒಳ್ಳೆಯದಲ್ಲ ಇದನ್ನು ಸಾಯಿಸಿ. ಇಲ್ಲವಾದರೆ ನೀವು ಸಹ ರಾವನನಂತೆ ಇಲ್ಲ ಕೌರವರಂತೆ ಸಾಯ್ತೀರಾ. ಇದೇ ರೀತಿಯ ಇಂಟರೆಸ್ಟಿಂಗ ವಿಷಯಗಳಿಗಾಗಿ ಡೈರೆಕ್ಟರ್ ಸತೀಶಕುಮಾರ ಯೂಟ್ಯೂಬ್ ಚಾನೆಲಗೆ ಹಾಗೂ ಇನಸ್ಟಾಗ್ರಾಮ ಪೇಜಗೆ ಫಾಲೋ ಮಾಡಿ. ಧನ್ಯವಾದಗಳು...