ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಇವತ್ತಿನ ಅಂಕಣದಲ್ಲಿ ನಾನು ಈ ಹಣ ಕೆಟ್ಟದ್ದಾ / ಒಳ್ಳೆಯದ್ದಾ? ಎಂಬ ಟಾಪಿಕನ ಮೇಲೆ ಡಿಸ್ಕಸ ಮಾಡುತ್ತಿರುವೆ. ಲೆಟ್ಸ ಬಿಗಿನ...
ಬಹಳಷ್ಟು ಜನ ಬಹಿರಂಗವಾಗಿ ಹಣವನ್ನು ತೆಗಳುತ್ತಾರೆ, ಹಣದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಆದರೆ ಎಲ್ಲರೂ ಗುಟ್ಟಾಗಿ ಹಣವನ್ನು ಇಷ್ಟಪಡ್ತಾರೆ, ಹಣಕ್ಕಾಗಿ ಹಂಬಲಿಸುತ್ತಾರೆ. ಕೆಲವರು ಹಣ ಕೆಟ್ಟದ್ದು ಅಂತಾರೆ, ಇನ್ನು ಕೆಲವರು ಹಣ ಒಳ್ಳೆಯದು ಅಂತಾರೆ. ನಿಮಗೆ ಏನ ಅನಿಸುತ್ತದೆ ಎಂಬುದನ್ನ ಕಾಮೆಂಟ್ ಮಾಡಿ.

ಬಹಳಷ್ಟು ಜನ ಹೇಳ್ತಾರೆ "Money is the Root of all Evil" ಅಂತಾ. ಬಟ್ ನಾನ್ ಹೇಳ್ತಿನಿ "No, Money is not the Root of all Evil. Lust for money is the root of all evil" ಅಂತಾ. ಹಣ ಎಲ್ಲ ಕೆಟ್ಟ ಸಂಗತಿಗಳಿಗೆ ಕಾರಣವಲ್ಲ, ಹಣದ ದುರಾಸೆ ಎಲ್ಲ ಕೆಟ್ಟ ಸಂಗತಿಗಳಿಗೆ ಮೂಲ ಕಾರಣವಾಗಿದೆ. ಹಣ ಒಳ್ಳೆಯದು ಅಲ್ಲ, ಕೆಟ್ಟದ್ದು ಅಲ್ಲ. ಅದೊಂದು ಸಾಧನವಾಗಿದೆ. ಹಣವನ್ನು ಯಾರು ಹೇಗೆ ಬಳಸುತ್ತಾರೆ ಎಂಬುದರ ಮೇಲೆ ಅದಕ್ಕೆ ಒಳ್ಳೆ ಹೆಸರು ಇಲ್ಲವೇ ಕೆಟ್ಟ ಹೆಸರು ಬರುತ್ತದೆ. ಹಣ ಒಂಥರಾ ಕರೆಂಟ್ ಇದ್ದಂಗೆ ಬೆಳಕು ಕೊಡುತ್ತೆ, ಆಟವಾಡಿದರೆ ಜೀವ ತೆಗೆಯುತ್ತದೆ.


ನಿಮ್ಮತ್ರ ಹಣ ಇದ್ದರೆ ಕೆಟ್ಟದಾಗುತ್ತೊ ಬಿಡುತ್ತೊ ಗೊತ್ತಿಲ್ಲ. ಆದರೆ ನಿಮ್ಮತ್ರ ಹಣವಿಲ್ಲದಿದ್ದರೆ ಖಂಡಿತ ನಿಮಗೆ ಎಲ್ಲ ಕೆಟ್ಟ ಅನುಭವಗಳಾಗುತ್ತವೆ. Lack of Money is the Root of all Evil things. For Example - No Home, No Shelter, No Dress, No Food, No Education, No Health, No Respect, No Safety etc. ಅದಕ್ಕಾಗಿ ಹಣವನ್ನು ದೂಷಿಸಬೇಡಿ. ಹಣ ಒಳ್ಳೆಯದಾಗಿದೆ, ಮತ್ತೆ ನಿಮಗೆ ಕಡ್ಡಾಯವಾಗಿ ಬೇಕಾಗಿರುವ ಸಾಧನವಾಗಿದೆ.

ಡೊಂಗಿ ಬಾಬಾಗಳ ಮಾತನ್ನು ಧಿಕ್ಕರಿಸಿ ನಿಯತ್ತಾಗಿ ಸಾಕಷ್ಟು ಹಣ ಗಳಿಸಿ. ಹಣದಿಂದ ಸಾಕಷ್ಟು ಪ್ರಯೋಜನಗಳಿವೆ. ಉದಾಹರಣೆಗೆ ;
1) Money is the Fuel for your life journey. It is the essential tool for your Survival. ನಿಮ್ಮ ಜೀವನದ ಪಯಣಕ್ಕೆ ಹಣ ಒಂಥರಾ ಇಂಧನವಿದ್ದಂತೆ. ಹೇಗೆ ಪೇಟ್ರೊಲ, ಡೀಸೆಲ್ ಇಲ್ಲದೇ ಗಾಡಿ ಸಾಗಲ್ಲವೋ ಅದೇ ರೀತಿ ಹಣ ಇಲ್ಲದೆ ನಿಮ್ಮ ಜೀವನ ಮುಂದೆ ಸಾಗಲ್ಲ. ನೀವ ಬದುಕಬೇಕೆಂದರೆ ಹಣ ಬೇಕೆ ಬೇಕು.

2) Money can't buy Happiness. But it can buy everything in which your Happiness is hidden. ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಆದರೆ ಹಣದಿಂದ ನಿಮ್ಮ ಸಂತೋಷ ಯಾವುದರಲ್ಲಿ ಅಡಗಿರುತ್ತೋ ಅದೆಲ್ಲವನ್ನು ಖರೀದಿಸಿ ಖುಷಿಯಾಗಿರಬಹುದು.

3) Money gives you a good lifestyle, Name, Fame, Power, Property, Respect, and status in Society. ಹಣ ನಿಮಗೆ ಒಳ್ಳೇ ಲೈಫಸ್ಟೈಲನ ಜೊತೆಗೆ ಸಮಾಜದಲ್ಲಿ ಒಂದು ಸ್ಟೇಟಸನ್ನು ಕೊಡುತ್ತದೆ. More money gives you a better life, better lifestyle, Time Freedom, Financial freedom, Happiness, and Health.

4) Money can be used for lot of good works. ಕೆಲವೊಂದಿಷ್ಟು ಜನ ಹೇಳ್ತಾರೆ ದುಡ್ಡಿನಿಂದ ದೊಡ್ಡವರ ರೋಗಗಳ ಬರ್ತವೆ, ದುಡ್ಡು ನಿಮ್ಮ ದಾರಿ ತಪ್ಪಿಸುತ್ತದೆ ಅಂತಾ. ಆದರೆ ನೀವು ದುಡ್ಡನ್ನು ಕೆಟ್ಟದಕ್ಕೆ ಬಳಸುವ ಬದಲು ಬಹಳಷ್ಟು ಒಳ್ಳೇ ಕೆಲಸಗಳಿಗೆ ಬಳಸಬಹುದು. ಅದಕ್ಕೆ ನಿಮ್ಮ ನಿಯತ್ತು ಚೆನ್ನಾಗಿರಬೇಕು ಅಷ್ಟೇ.

5) You need Money to take Birth and to Die. ಸದ್ಯಕ್ಕೆ ಹುಟ್ಟೋಕು ಹಣ ಬೇಕು, ನೆಮ್ಮದಿಯಾಗಿ ಸಾಯೋಕು ದುಡ್ಡು ಬೇಕು, ಸತ್ತ ಮೇಲೆ ನಿಮ್ಮನ್ನು ಹುಳೋಕು ಹಣ ಬೇಕು. ಎಲ್ಲದಕ್ಕೂ ಹಣ ಬೇಕೆ ಬೇಕು.

6) Money gives you Power and protect you from bad people. ಹಣ ನಿಮಗೆ ಪವರನ್ನು ಕೊಡುತ್ತದೆ. ಜೊತೆಗೆ ನಿಮಗೆ ಪ್ರೊಟೆಕ್ಷನ್ ಕೊಡುತ್ತೆ, ಸೇಫ್ಟಿ ಕೊಡುತ್ತೆ. ಕೆಟ್ಟವರಿಂದ ನಿಮ್ಮನ್ನು ಕಾಪಾಡುತ್ತದೆ. ಒಂದು ವೇಳೆ ನೀವೇ ಕೆಟ್ಟವರಾಗಿ ಬೇರೆಯವರಿಗೆ ಕೆಟ್ಟದ್ದನ್ನು ಮಾಡಿದರೂ ಕೂಡ ಕಾನೂನಿನಿಂದ ಈ ಹಣ ನಿಮ್ಮನ್ನು ಕಾಪಾಡುತ್ತದೆ. ದುಡ್ಡಿದ್ರೆ ಎಲ್ಲ ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ.

7) Money solves too many problems if you use it positively. ನೀವು ಹಣವನ್ನು ಧನಾತ್ಮಕವಾಗಿ ಬಳಸಿದರೆ ಇದು ನಿಮ್ಮ ಬಹಳಷ್ಟು ಸಮಸ್ಯೆಗಳನ್ನು ಸಾಲ್ವ ಮಾಡುತ್ತದೆ.

ಈ ರೀತಿ ಹಣದಿಂದ ಬಹಳಷ್ಟು ಪ್ರಯೋಜನಗಳಿವೆ. ಕೆಟ್ಟ ಯೋಚನೆಗಳನ್ನು ತಲೆಯಿಂದ ತೆಗೆದಾಕಿ. ಒಳ್ಳೆ ಮನಸ್ಸಿನಿಂದ ಪ್ರಾಮಾಣಿಕವಾಗಿ ನಿಮಗೆಷ್ಟು ಹಣ ಬೇಕೊ ಅಷ್ಟನ್ನು ಸಂಪಾದಿಸಿ. ಹಣಕ್ಕಾಗಿ ಹುಚ್ಚರಾಗಬೇಡಿ. ಜಾಸ್ತಿ ದುರಾಸೆ ಮಾಡಬೇಡಿ. ನಿಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟನ್ನು ಸಂಪಾದಿಸಿ ಲೈಫನ್ನು ಸೇಫಾಗಿ ಎಂಜಾಯ ಮಾಡಿ. ಆಲ ದ ಬೆಸ್ಟ್...