ನಮಸ್ಕಾರ ಗೆಳೆಯರೇ, ನಾನು ನಿಮ್ಮ ಸತೀಶ್‌ಕುಮಾರ್. ಶುಭೋದಯ. ನೀವೆಲ್ಲಾ ಹೇಗಿದ್ದೀರಾ? ನೀವೆಲ್ಲರೂ ತುಂಬಾ ಚೆನ್ನಾಗಿರುವಿರಿ ಎಂದು ನಾನು ಭಾವಿಸುತ್ತೇನೆ. ನೀವೆಲ್ಲರೂ ಯಾವಾಗಲೂ ಹೀಗೆಯೇ ಚೆನ್ನಾಗಿರಬೇಕೆಂದು ನಾನು ಆಶಿಸುವೆ . ಹಾಗಾಗಿ ನಾನು ನಿಮಗೆ ಒಂದು ಗೋಲ್ಡನ್ ಟಿಪ್ ಕೊಡಲು ಬಯಸುವೆ. ಅದೇನಪ್ಪ ಎಂದರೆ "ನಿಮ್ಮ ದೇಹವನ್ನು ಪ್ರೀತಿಸಿ". ಹೌದು ನಿಮ್ಮ ದೇಹವನ್ನು ಪ್ರೀತಿಸಿ. Love your Body. ಏಕೆಂದರೆ ಈ ದೇಹವು ದೇವರು ನಮಗೆ ನೀಡಿದ ಅತ್ಯಂತ ದುಬಾರಿ ಕೊಡುಗೆಯಾಗಿದೆ. ಅದನ್ನು ಆರೋಗ್ಯಕರ -ವಾಗಿಟ್ಟುಕೊಳ್ಳುವುದು, ಸಂತೋಷವಾಗಿಟ್ಟುಕೊಳ್ಳುವುದು, ಸದೃಢವಾಗಿಟ್ಟುಕೊಳ್ಳುವುದು ಮತ್ತು ಕ್ರಿಯಾಶೀಲವಾಗಿಡುವುದು ನಮ್ಮ ಜವಾಬ್ದಾರಿಯಾಗಿದೆ. ಸಾಯುವವರೆಗೂ ನಮಗೆ ಈ ದೇಹ ಬೇಕು. ಆದ್ದರಿಂದ ನಿಮ್ಮ ದೇಹವನ್ನು ಪ್ರೀತಿಸಿ. ಗೆಳೆಯರೇ ದಯವಿಟ್ಟು ನಿಮ್ಮ ದೇಹವನ್ನು ಪ್ರೀತಿಸಿ.
ಹೇಗೆ ಡೆಸ್ಟಿನೇಷನ್ ತಲುಪಬೇಕೆಂದರೆ ಗಾಡಿ ಚೆನ್ನಾಗಿರಬೇಕೋ ಅದೇ ರೀತಿ ನಾವು ನಮ್ಮ ಜೀವನದಲ್ಲಿ ನಮ್ಮ ಎಲ್ಲ ಗುರಿಗಳನ್ನು ಸಾಧಿಸಬೇಕೆಂದರೆ ನಮ್ಮ ಬಾಡಿ ಚೆನ್ನಾಗಿರಬೇಕು. ಅದಕ್ಕಾಗಿ ನಮ್ಮ ದೇಹವನ್ನು ಸುಸ್ಥಿತಿಯಲ್ಲಿಡುವುದು ಮುಖ್ಯವಾಗಿದೆ. ನಾನು ಮೊದಲಿನಿಂದಲೂ ನನ್ನ ದೇಹವನ್ನು ಬಹಳಷ್ಟು ಪ್ರೀತಿಸುವೆ. ಇದಕ್ಕಾಗಿ ಪ್ರತಿದಿನ ಒಂದು ಗಂಟೆ ಮೀಸಲಿಟ್ಟಿರುವೆ. ಈ ನಡುವೆ, ನನ್ನ ಸ್ಟಾರ್ಟಪ್ ಹೋರಾಟದಿಂದಾಗಿ ನಾನು ನನ್ನ ಬೆಳಗಿನ ದಿನಚರಿಯನ್ನು ಕಳೆದುಕೊಂಡೆ. ಇಂದಿನಿಂದ ಮತ್ತೆ ಸರಿಪಡಿಸುತ್ತಿದ್ದೇನೆ. ಅದಕ್ಕೇ ಹೊಸ ಶೂಗಳನ್ನೂ ಖರೀದಿಸಿದ್ದೇನೆ. ಸ್ವಲ್ಪ ಹೊಟ್ಟೆ ಕೂಡ ಬಂದಿದೆ. ಇದನ್ನು ಬೇಗನೆ ಕರಗಿಸಬೇಕು. ದೇಹವನ್ನು ಮತ್ತೆ ಫಿಟ್ ಶೇಪ್ ಗೆ ತರಬೇಕು. ಅದಕ್ಕಾಗಿಯೇ ನಾನು ಇಂದಿನಿಂದ ದೈಹಿಕ್ ಕಸರತ್ತನ್ನು ಪ್ರಾರಂಭಿಸುತ್ತಿದ್ದೇನೆ.
ಬಹಳಷ್ಟು ಜನ ತಮ್ಮ ದೇಹವನ್ನು ಇಷ್ಟಪಡುವುದಿಲ್ಲ. ಇಂಥವರು ತಮ್ಮನ್ನು ತಾವು ಬೇರೆಯವರೊಂದಿಗೆ ಹೋಲಿಸಿಕೊಂಡು ಕೊರಗುತ್ತಲೇ ಇರುತ್ತಾರೆ. ನಾನು ಕುಳ್ಳಗಿದ್ದೇನೆ, ದಪ್ಪಗಿದ್ದೇನೆ, ತೆಳ್ಳಗಿದ್ದೇನೆ ಅಥವಾ ಕಪ್ಪಗಿದ್ದೇನೆ ಎಂದು ಭಾವಿಸಿ ಜನರು ತಮ್ಮ ದೇಹವನ್ನು ದ್ವೇಷಿಸುತ್ತಾರೆ. ನೀವು ಈ ತಪ್ಪನ್ನು ಮಾಡಬೇಡಿ. ನೀವು ಹೇಗೆ ಇದ್ದರೂ ಸಹ ನೀವು ಬೆಸ್ಟ್ ಆಗಿರುವಿರಿ. ನೀವು ಯಾರಿಗೂ ಕಮ್ಮಿಯಿಲ್ಲ. ನೀವು ಯುನಿಕ್ ಆಗಿದ್ದೀರಿ ಇದನ್ನು ಅರ್ಥಮಾಡಿಕೊಳ್ಳಿ. ಅನೇಕ ಜನರು ಇತರರ ದೇಹವನ್ನು ಪ್ರೀತಿಸುತ್ತಾರೆ. ಹುಡುಗರು ಹುಡುಗಿಯರ ಫ್ಯಾಟ್ ಮತ್ತೆ ಬೂ**ಗಳನ್ನು ನೋಡಿ ಫೀದಾ ಆದರೆ ಹುಡುಗಿಯರು ಹುಡುಗರ ಆಬ್ಸ್ ಮತ್ತೆ ಸಿಕ್ಸ್ ಪ್ಯಾಕ್ಸ್ ಮೇಲೆ ಫೀದಾ ಆಗ್ತಾರೆ. ಮತ್ತೆ ಕೆಲವು ಮೂರ್ಖರು ಬ್ಲೂ ಫಿಲಂಗಳಲ್ಲಿ ಇತರರ ದೇಹವನ್ನು ನೋಡುವ ಮೂಲಕ ತಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುತ್ತಾರೆ. ಆತ್ಮೀಯ ಸ್ನೇಹಿತರೇ, ನೀವು ಸುಂದರವಾಗಿದ್ದೀರಿ ಮತ್ತು ಬೆಸ್ಟ್ ಆಗಿದ್ದೀರಿ. ಬೇರೊಬ್ಬರ ದೇಹವನ್ನು ಪ್ರೀತಿಸುವ ಮೊದಲು, ನಿಮ್ಮ ದೇಹವನ್ನು ಪ್ರೀತಿಸಿ. ನಿಮ್ಮ ದೇಹವನ್ನು ಪ್ರೀತಿಸಿ ಮತ್ತು ಅದನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಿ.
ಆದರೆ ಇಂದು ಯಾರತ್ರನೂ ಸಮಯವಿಲ್ಲ. ಎಲ್ಲರೂ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಬೇರೆಯವರಿಗೆ ಬಿಡಿ ಸದ್ಯಕ್ಕೆ ಜನರತ್ರ ಸ್ವತಕ್ಕಾಗಿಯೂ ಟೈಮಿಲ್ಲ. ಏಕೆಂದರೆ ಅವರು ತಮ್ಮ ಸಮಯವನ್ನು ಸರಿಯಾಗಿ ನಿರ್ವಹಿಸುವುದಿಲ್ಲ. ಅದಕ್ಕೇ ಅವರ ಬಳಿ ಟೈಮ್ ಇಲ್ಲ. ಅಂತಹ ಜನರಲ್ಲಿ ನೀವೂ ಕೂಡ ಒಬ್ಬರಾಗಿದ್ದರೆ, ಈಗಲೇ www.RoaringBusinessschool.com ಗೆ ಭೇಟಿ ನೀಡಿ ಮತ್ತು ಅಲ್ಟಿಮೇಟ್ ಟೈಮ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಜಾಯಿನ್ ಆಗಿ. ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಮತ್ತು ನಿಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಿಕೊಳ್ಳಿ. ಆಲ್ ದಿ ಬೆಸ್ಟ್ ಮತ್ತು ಧನ್ಯವಾದಗಳು...