ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

                                       ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

                   ನಮಸ್ತೆ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ್. ಒಂದು ವೇಳೆ ನೀವು ಓರ್ವ Lovable and Respectable Person ಆಗ್ಬೇಕು ಅನ್ನೋ ಆಸೆಯನ್ನು ಹೊಂದಿದ್ದರೆ ಈ 20 Social Rulesಗಳನ್ನು ಫಾಲೋ ಮಾಡಿ... 

Rule-01: ಯಾರಿಗೂ ಕೂಡ ಎರಡಕ್ಕಿಂತ ಹೆಚ್ಚು ಬಾರಿ Continuously ಕಾಲ್ ಮಾಡ್ಬೇಡಿ. ಆ ವ್ಯಕ್ತಿ ಕರೆಯನ್ನ ಸ್ವೀಕರಿಸದಿದ್ದರೆ ಅವರು ಯಾವುದಾದರೂ ಒಂದು ಮಹತ್ತರವಾದ ಕೆಲಸ ಮಾಡ್ತಾ ಇರಬಹುದು ಅಥವಾ ಯಾವುದಾದರೂ ತೊಂದರೆಯಲ್ಲಿ ಸಿಲುಕಿಕೊಂಡಿರಬಹುದು ಅಥವಾ ಹಾಸ್ಪಿಟಲ್ ಎಮರ್ಜೆನ್ಸಿಯಲ್ಲಿರಬಹುದು. So don't call someone more than twice continuously.

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-02: ನೀವು ಯಾರಿಂದಲಾದರೂ ಹಣವನ್ನು ಸಾಲವಾಗಿ ತೆಗೆದುಕೊಂಡಿದ್ದರೆ ಅವರು ಕೇಳುವ ಮೊದಲೇ ಹಣವನ್ನು ಹಿಂತಿರುಗಿಸಿ. Prove your Credibility. 

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-03: ನೀವು ಸಂತೋಷವಾಗಿರದಿದ್ದರೂ ಕೂಡ, ನಿಮ್ಮ ಲೈಫಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿದ್ದರೂ ಕೂಡ ನಿಮ್ಮ ಮುಖದ ಮೇಲೆ ಯಾವಾಗಲೂ ಒಂದು ಸುಂದರವಾದ ನಗುವನ್ನು ಇಟ್ಟುಕೊಳ್ಳಿ. Always keep a cute smile on your face.  

Rule-04: ನೀವು ಬೇರೆಯವರ ಲಂಚ್ ಅಥವಾ ಡಿನ್ನರ್ ಪಾರ್ಟಿಗೆ ಹೋದಾಗ ಮೆನುವಿನಿಂದ Expensive Dishesಗಳನ್ನ ಆರ್ಡರ್ ಮಾಡಬೇಡಿ. ಯಾರು ಪಾರ್ಟಿ ಕೊಡ್ತಿದಾರೋ ಅವರಿಗೇನೇ ಆರ್ಡರ್ ಮಾಡೋಕೆ ಹೇಳಿ. ಯಾಕೆಂದರೆ ಅವರತ್ರ ಎಷ್ಟು ಬಜೆಟ್ ಇದೆ ಎಂಬುದು ಅವರಿಗಷ್ಟೇ ಗೊತ್ತಿರುತ್ತೆ. ಒಂದು ವೇಳೆ ಅವರ ಬಜೆಟ್ ಟೈಟಾಗಿದ್ದರೆ ಆಮೇಲೆ ಸಮಸ್ಯೆಯಾಗುತ್ತೆ... 

Rule-05: ಬೇರೆಯವರಿಗೆ Awkward Questionsಗಳನ್ನ ಕೇಳಬೇಡಿ. ಉದಾಹರಣೆಗೆ; ನೀವು ಯಾಕೆ ಇನ್ನೂ ಮದುವೆಯಾಗಿಲ್ಲ? ನಿಮಗೇಕೆ ಇನ್ನೂ ಮಕ್ಕಳಾಗಿಲ್ಲ? ನೀವು ಯಾವಾಗ ಸ್ವಂತ ಮನೆ ತಗೋತ್ತೀರಾ? ನಿಮ್ಮ ಬಳಿ ಕಾರ ಯಾಕಿಲ್ಲ? ಇತ್ಯಾದಿ. ಪ್ರತಿಯೊಬ್ಬರ ಜೀವನ ಬೇರೆಯಾಗಿರುತ್ತದೆ. ಜನರು ತಮ್ಮ ಲೆಕ್ಕಾಚಾರದಂತೆ ಮುಂದುವರಿಯುತ್ತಾರೆ. ಅದಕ್ಕಾಗಿ ಅವರನ್ನು ಡಿಮೋಟಿವೇಟ್ ಮಾಡ್ಬೇಡಿ, ಇನ್ಸಲ್ಟ್ ಮಾಡ್ಬೇಡಿ... 

Rule-06: ಈ ಸಲ ನಿಮ್ಮ ಫ್ರೆಂಡ್ ಟ್ಯಾಕ್ಸಿ ಬಿಲ್ ಅಥವಾ ರೆಸ್ಟೋರೆಂಟ್ ಬಿಲ್ ಪೇ ಮಾಡಿದ್ರೆ ಮುಂದಿನ ಸಲ ನೀವು ಬಿಲ್ ಪೇ ಮಾಡಿ. ಪದೇಪದೇ ಬೇರೆಯವರ ಮೇಲೆ ಹೊರೆ ಹಾಕಬೇಡಿ. ಪ್ರತಿಯೊಬ್ಬರಿಗೂ ತಮ್ಮದೇ ಆದ ಖರ್ಚುಗಳಿರುತ್ತವೆ. ಪ್ರತಿಯೊಬ್ಬರಿಗೂ ಫ್ಯಾಮಿಲಿ ಇರುತ್ತದೆ. 

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-07: ಬೇರೆಯವರ ಅಭಿಪ್ರಾಯಗಳನ್ನು ಸಹ ಗೌರವಿಸಿ. ಬೇರೆಯವರ ಪಾಯಿಂಟ್ ಆಫ್ ವ್ಯೂಅನ್ನ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ದೃಷ್ಟಿಯಲ್ಲಿ ಒಂದು ವಿಷಯ 6 ಆಗಿದ್ದರೆ, ಅದೇ ವಿಷಯ ಬೇರೆಯವರ  ದೃಷ್ಟಿಯಲ್ಲಿ 9 ಆಗಿರುವ ಸಾಧ್ಯತೆ ಇರುತ್ತೆ. So always respect others opinion. 

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-08: ಯಾರಾದರೂ ನಿಮಗೆ ಸಹಾಯ ಮಾಡಿದರೆ, ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಅವರಿಗೆ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿ. Always Be Thankful. 

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-09: ನಿಮ್ಮಿಂದ ತಿಳಿದೋ ತಿಳಿಯದೆನೋ ಏನಾದರೂ ತಪ್ಪಾದರೆ ತಕ್ಷಣವೇ ಕ್ಷಮೆ ಕೇಳಿ. ನಿಮ್ಮ ತಪ್ಪುಗಳನ್ನು ಬೇಗನೆ ಸರಿಪಡಿಸಿಕೊಂಡು ಮುಂದೆ ಸಾಗಿ. ನಿಮ್ಮ ತಪ್ಪುಗಳನ್ನು ಪುನರಾವರ್ತಿಸಬೇಡಿ.

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-10: ಯಾರೊಂದಿಗಾದರೂ ಮಾತನಾಡುವಾಗ, ಮೊದಲು ಅವರ ಮಾತನ್ನು ಚೆನ್ನಾಗಿ ಆಲಿಸಿ, ನಂತರ ಮಾತನಾಡಿ. ಅವರು ಮಾತನಾಡುವಾಗ ಮಧ್ಯದಲ್ಲಿ ಅಡ್ಡಿಪಡಿಸಬೇಡಿ. Please don't interrupt when someone is talking. 

Rule-11: ಯಾರಾದರೂ ಕಾಮಿಡಿಯನ್ನು ಇಷ್ಟಪಡದಿದ್ದರೆ, ಅಂತಹ ಜನರೊಂದಿಗೆ ಎಂದಿಗೂ ಮೋಜಿನ ಚಟುವಟಿಕೆಗಳನ್ನು ಮಾಡಬೇಡಿ. ಅವರನ್ನು ಟೀಸ್ ಮಾಡಬೇಡಿ ಅಥವಾ ಟ್ರೋಲ್ ಮಾಡಬೇಡಿ. ಅವರು ನಿಮ್ಮ ಸ್ನೇಹಿತನಾಗಿದ್ದರೂ ಸಹ ಅವರೊಂದಿಗೆ ತಮಾಷೆ ಮಾಡಬೇಡಿ. 

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-12: ಬೇರೆಯವರ ಬಾಡಿ ವೇಟ್, ಲುಕ್ಸ್, ಬಾಡಿ ಕಲರ್, ಬಾಡಿ ಶೇಪ್, ಬಾಡಿ ಪಾರ್ಟ್ಸಗಳ ಮೇಲೆ ಯಾವುದೇ ರೀತಿಯ ಕಾಮೆಂಟ್‌ಗಳನ್ನು ಮಾಡಬೇಡಿ. Strictly no any comments on others' body and looks. 

Rule-13: ನೀವು ಯಾರನ್ನಾದರೂ Appreciate ಮಾಡಲು ಬಯಸಿದರೆ ನಾಲ್ಕು ಜನರ ಮುಂದೆ ಅವರನ್ನು ಮುಕ್ತವಾಗಿ appreciate ಮಾಡಿ. ನೀವು ಯಾರನ್ನಾದರೂ criticize ಮಾಡಲು ಅಥವಾ ಸಲಹೆ ನೀಡಲು ಬಯಸಿದರೆ, ಅದನ್ನು ಪ್ರೈವೇಟ್ ಕೋಣೆಯೊಳಗೆ ಗುಪ್ತವಾಗಿ ನೀಡಿ. Praise publicly and criticize privately. 

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-14: ನಿಮ್ಮ ಪರ್ಸನಲ್ ಪ್ರಾಬ್ಲಮಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. ನಿಮ್ಮ ಸಮಸ್ಯೆಗಳಿಗೆ ಮತ್ತೆ ಈ ಸ್ವಾರ್ಥ್ ಜಗತ್ತಿಗೆ ಯಾವುದೇ ಸಂಬಂಧವಿಲ್ಲ. ನಿಮ್ಮ ಪರ್ಸನಲ್ ಪ್ರಾಬ್ಲಮಗಳನ್ನು ಯಾವಾಗಲೂ ಪ್ರೈವೇಟ್ ಆಗಿಡಿ ಮತ್ತು ಅವುಗಳನ್ನು ನೀವೇ ಪರಿಹರಿಸಿಕೊಳ್ಳಿ. 

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-15: ಯಾರಾದರೂ ನಿಮಗೆ ಅವರ ಫೋನ್‌ನಲ್ಲಿ ಫೋಟೋ ತೋರಿಸಿದರೆ, ನೀವು ಅದನ್ನ ಮಾತ್ರ ನೋಡಿ ಸುಮ್ಮನಾಗಿ. ಫೋಟೋ ನೋಡಿದ ನಂತರ ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಬೇಡಿ. ಮುಂದಿನ ಫೋಟೋ ಅಥವಾ ವಿಡಿಯೋ ಏನಿದೆ ಎಂಬುದು ಯಾರಿಗೆ ಗೊತ್ತು? ಮುಂದೆ ಏನು ಬೇಕಾದರೂ ಇರಬಹುದು. 

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-16: ಬೇರೆಯವರ ವೈಯಕ್ತಿಕ ಜೀವನದಲ್ಲಿ ನಿಮ್ಮ ಮೂಗನ್ನು ತೂರಿಸಬೇಡಿ. Always mind your business. ಯಾರಾದರೂ ನಿಮ್ಮತ್ರ ಅವರ ವೈಯಕ್ತಿಕ ಜೀವನದ ಬಗ್ಗೆ ಅಥವಾ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಹೇಳಿದರೆ, ನಿಮ್ಮಿಂದ ಸಾಧ್ಯವಾದರೆ ಅವರಿಗೆ ಸಹಾಯ ಮಾಡಿ. ಮತ್ತೆ ಇದನ್ನು ರಹಸ್ಯವಾಗಿಡಿ. ಬೇರೆಯವರ  ವೈಯಕ್ತಿಕ ಜೀವನದ ಬಗ್ಗೆ ಇತರರಿಗೆ ಹೇಳಬೇಡಿ.

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-17: ಎಲ್ಲರೊಂದಿಗೆ ಪ್ರೀತಿ ಹಾಗೂ ಗೌರವದಿಂದ ನಡೆದುಕೊಳ್ಳಿ. ನಿಮ್ಮ ಕಂಪನಿಯ CEO ಆಗಿರಲಿ ಅಥವಾ ಆಫೀಸ್ ಕ್ಲೀನರ್ ಆಗಿರಲಿ ಎಲ್ಲರೊಂದಿಗೆ ಪ್ರೀತಿ ಹಾಗೂ ಗೌರವದಿಂದ ನಡೆದುಕೊಳ್ಳಿ. Treat everyone with love and respect.

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-18: ಯಾರೊಂದಿಗಾದರೂ ಮಾತನಾಡುವಾಗ  "Eye Contact" ಮಾಡಿ. ನೀವು ಸನ್ಗ್ಲಾಸ್ ಧರಿಸಿದ್ದರೆ, ಅವುಗಳನ್ನು ತೆಗೆದು ಮಾತನಾಡಿ. ಮಾತನಾಡುವಾಗ ಪದೇ ಪದೇ ಮೊಬೈಲ್ ನೋಡಬೇಡಿ ಅಥವಾ ಅಲ್ಲಿ ಇಲ್ಲಿ ನೋಡಬೇಡಿ. ನೀವು ಹೆಣ್ಮಕ್ಕಳೊಂದಿಗೆ ಮಾತನಾಡುವಾಗ ಅವರ ಮುಖವನ್ನು ನೋಡಿ ಮಾತನಾಡಿ.  ಅವರ ಬಾಡಿ ಪಾರ್ಟ್ಸಗಳನ್ನು especially Boobs & Cleavagesಗಳನ್ನು ಗುರಾಯಿಸಬೇಡಿ. 

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-19: ನೀವು ಹಲವು ವರ್ಷಗಳ ನಂತರ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾದಾಗ ಅವರಿಗೆ ಹಳೆಯ ವಿಷಯಗಳನ್ನು ಕೇಳಬೇಡಿ. ಕಾಲೇಜ್ ಗರ್ಲಫ್ರೆಂಡ್ಸ್ / ಎಕ್ಸ್ ಲವರ್ಸ್ /ಬ್ಯಾಡ ಇನ್ಸಿಡೆಂಟ್ಸ್ ಬಗ್ಗೆ ಕೇಳಬೇಡಿ. ಅವರಾಗೇ ಅವುಗಳ ಬಗ್ಗೆ ಹೇಳಲು ಪ್ರಾರಂಭಿಸಿದರೂ ಕೂಡ ನೀವು ಅದನ್ನು ಕೇಳುವಲ್ಲಿ ಜಾಸ್ತಿ ಇಂಟರೆಸ್ಟ್ ತೋರಿಸಬೇಡಿ. ಮತ್ತೆ ಅವ್ರಿಗೆ ಅವರ ಸ್ಯಾಲರಿ ಬಗ್ಗೆ ಕೇಳಬೇಡಿ. ಅವರ ಯೋಗಕ್ಷೇಮದ ಬಗ್ಗೆಯಷ್ಟೇ ಕೇಳಿ.

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Rule-20: ಬಡವರೊಂದಿಗೆ ನಿಮ್ಮ ಶ್ರೀಮಂತಿಕೆಯನ್ನು ಚರ್ಚಿಸಬೇಡಿ. ದುಃಖಿ ವ್ಯಕ್ತಿಯ ಮುಂದೆ ನಿಮ್ಮ ಖುಷಿಯನ್ನು ಸೆಲೆಬ್ರೇಟ್ ಮಾಡಬೇಡಿ. ಸಾವಿನ ಮನೆಯಲ್ಲಿ ಮಗು ಹುಟ್ಟಿದ ಶುಭಸುದ್ದಿ ಹೇಳಬೇಡಿ. ಮದುವೆ ಸಮಾರಂಭಕ್ಕೆ ಹೋಗಿ ಅಲ್ಲಿ ನಿಮ್ಮ ಡೈವೋರ್ಸ್ ಅಥವಾ ಬ್ರೇಕಪ್ ಕಥೆಗಳನ್ನು ಹೇಳಬೇಡಿ. ಸ್ವಲ್ಪ Mature ಆಗಿ ವರ್ತಿಸಲು ಪ್ರಯತ್ನಿಸಿ.

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

                  ನೀವು ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿದರೆ ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ ಮತ್ತು ನಿಮ್ಮನ್ನು ಪ್ರೀತಿಸುತ್ತಾರೆ. ಇವುಗಳನ್ನು ಖಂಡಿತವಾಗಿ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಒಳ್ಳೆಯದಾಗಲಿ...

ಈ 20 ಸಾಮಾಜಿಕ ನಿಯಮಗಳನ್ನು ಅನುಸರಿಸಿ - Follow these 20 Social Rules

Blogger ನಿಂದ ಸಾಮರ್ಥ್ಯಹೊಂದಿದೆ.