ಭಾರತದ ಯಾವುದೇ ಐತಿಹಾಸಿಕ ಮಂದಿರಕ್ಕೆ ಭೇಟಿ ನೀಡಿದರೂ ಸಹ ಅಲ್ಲಿ ನಮಗೆ ಮಂದಿರದ ಗೋಡೆಗಳ ಮೇಲೆ ಶಿಲಾಬಾಲಿಕೆಯರ ದರ್ಶನ ಆಗೇ ಆಗುತ್ತದೆ. ಇದರಿಂದ ನಾವು ನಮ್ಮ ಪೂರ್ವಜರು ಬೌದ್ಧಿಕವಾಗಿ ಎಷ್ಟು ಪ್ರಭುದ್ಧರಾಗಿದ್ದರೂ ಎಂಬುದನ್ನು ಕಂಡುಕೊಳ್ಳಬಹುದು. ಸೆ** ಎಜುಕೇಷನ್ ಎಂದಾಗ ಮಡಿವಂತಿಕೆ ತೋರಿಸುವ ಇವತ್ತಿನ ಸಮಾಜಕ್ಕೂ ಮತ್ತೆ ಸೆ**ನ್ ಬಗ್ಗೆ ಸರಿಯಾದ ಅರಿವು ಮೂಡಿಸುವುದಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ ಅವತ್ತಿನ ಸಮಾಜಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂಬುದನ್ನು ನಾವು ಒಪ್ಪಲೇಬೇಕು. ಆದರೆ ಬಹಳಷ್ಟು ಜನ ಇಂದಿಗೂ ಸಹ ಇಂಥ ಐತಿಹಾಸಿಕ ಮಂದಿರಗಳಿಗೆ ಭೇಟಿ ನೀಡಿದಾಗ ಕುಚೇಷ್ಟೆ ಮಾಡುತ್ತಾರೆ. ಪೋಲಿ ಹುಡುಗರು ಶಿಲಾಬಾಲಿಕೆಯರ ಮೂರ್ತಿಗಳನ್ನು ಮತ್ತೆ ಕೆತ್ತನೆಗಳನ್ನು ನೋಡಿ ಅವುಗಳ ಮೇಲೆ ಅಶ್ಲೀಲ್ ಕಾಮೆಂಟ್ ಮಾಡುತ್ತಾರೆ, ಕುಚೇಷ್ಟೆ ಮಾಡುತ್ತಾರೆ. ಹುಡುಗಿಯರು ಅವುಗಳನ್ನು ನೋಡಲೇಬಾರದು ಎಂಬಂತೆ ಅವುಗಳನ್ನು ಇಗ್ನೋರ್ ಮಾಡಿ ಮುಂದೆ ಹೋಗುತ್ತಾರೆ.
![ಸ್ನೇಹಿತೆಯ ಎದುರು ಶಿಲಾಬಾಲಿಕೆಯನ್ನು ನೋಡುವ ಸಾಹಸ... Kannada Romantic Love Stories ಸ್ನೇಹಿತೆಯ ಎದುರು ಶಿಲಾಬಾಲಿಕೆಯನ್ನು ನೋಡುವ ಸಾಹಸ... Kannada Romantic Love Stories](https://blogger.googleusercontent.com/img/b/R29vZ2xl/AVvXsEiLq7XhTjH6Ww8BkoybP-tKSU2AmJoK5p2L3pLDGpJy8LWDS_D4Bye25jXiaAHt8a65z6rz9emXLGomX5fonmuwJu1E09tO0MMeC3PXor7h_koruygHYVfNFAtbc1svisGJepB1vWbGs4SCtNELxtw0A-v7JcR7tfTu-qv-BcH92bo-4ZUBMq_vvnGL86w/w400-h225/Shilabalika%20with%20Satishkumar.jpg)
ನಾನು ಕೆಲವು ದಿನಗಳ ಹಿಂದೆ ಖಿದ್ರಾಪುರದ ಶ್ರೀ ಕೊಪೇಶ್ವರ ಬಂದಿರಕ್ಕೆ ನನ್ನ ಸ್ನೇಹಿತೆ ಆಕಾಂಕ್ಷಾಳ ಜೊತೆಗೆ ಭೇಟಿ ನೀಡಿದ್ದೆ. ನಾನು ನನ್ನ Vlog ಶೂಟ್ ಮಾಡುತ್ತಿದ್ದೆ. ಆಕೆ ನನ್ನ ಜೊತೆಗಿದ್ದು ನನ್ನನ್ನೇ ಗಮನಿಸುತ್ತಿದ್ದಳು. ನಾನು ಭಗ್ನವಾದ ಶಿಲಾಬಾಲಿಕೆಯ ಫೋಟೋ ಕ್ಲಿಕ್ ಮಾಡಿದಾಗ ಆಕೆ ಸಡನ್ನಾಗಿ ನನ್ನ ಕಡೆಗೆ ನೋಡಿ ಮುಗುಳ್ನಗೆ ಚೆಲ್ಲಿದಳು. ಆಕೆ ಬಾಯ್ಬಿಚ್ಚಿ ಏನನ್ನೂ ಹೇಳದಿದ್ದರೂ ಕೂಡ ಆಕೆಯ ಕಣ್ಣುಗಳನ್ನು ನೋಡಿ ಆಕೆ ಸೈಲೆಂಟಾಗಿ ಕ್ಯಾಕರಿಸಿ ಉಗಿದು ಏನೋ ಭಯಂಕರವಾಗಿ ಬೈಯ್ತಿದ್ದಾಳೆ ಎಂಬುದನ್ನು ನನ್ನ ಕಣ್ಣುಗಳು ಅರ್ಥ ಮಾಡಿಕೊಂಡವು. ಅದಾದ ನಂತರ ನಮ್ಮಿಬ್ಬರ ಮಧ್ಯೆ ಅರ್ಧ ಗಂಟೆ ಯಾವುದೇ ಮಾತುಗಳಾಗಲಿಲ್ಲ. ಆಕೆ ಪದೇಪದೇ ನನ್ನ ನೋಡಿ ಸೈಲೆಂಟಾಗಿ ನಗುತ್ತಿದ್ದಳು. ಅವಳ ನಗುವಲ್ಲೇ ಆಕೆ ಸಾವಿರಾರು ಬೈಗುಳಗಳನ್ನು ಬೈದಿದ್ದಾಳೆ ಅನ್ನಿಸಿ ನಂಗೆ ಸ್ವಲ್ಪ ಮುಜುಗುರವೂ ಆಯಿತು. ಕೊನೆಗೆ Vlog ಶೂಟ್ ಮಾಡಿ ಮುಗಿಸಿ ಅವಳಿಗೆ ನಂದೊಂದು ಫೋಟೋ ಕ್ಲಿಕ್ ಮಾಡು ಎಂದೆ. ಆಗಾಕೆ "ಇಲ್ಲ್ಯಾಕ್ ಅಲ್ಲಿ ಶಿಲಾಬಾಲಿಕೆ ಜೊತೆ ತಕ್ಕೋ ಫೋಟೋ...!" ಎಂದಾಗ ನಾನು ನಾಚಿ ನೀರಾಗಿದ್ದೆ. ಅವಳಿಗೆ ಮುಖ ಕೊಟ್ಟು ಉತ್ತರಿಸಲಾಗದೆ ಸುಮ್ಮನೆ ಕ್ಯಾಮೆರಾದ ಕಣ್ಣುಗಳಿಗೆ ಪೋಸ್ ಕೊಟ್ಟು ಮೌನವಾಗಿ ಮುನ್ನಡೆದೆ...
![ಸ್ನೇಹಿತೆಯ ಎದುರು ಶಿಲಾಬಾಲಿಕೆಯನ್ನು ನೋಡುವ ಸಾಹಸ... Kannada Romantic Love Stories ಸ್ನೇಹಿತೆಯ ಎದುರು ಶಿಲಾಬಾಲಿಕೆಯನ್ನು ನೋಡುವ ಸಾಹಸ... Kannada Romantic Love Stories](https://blogger.googleusercontent.com/img/b/R29vZ2xl/AVvXsEhhCX2fWpPu-wOi8MQePMewDs7Pg-uQpWnmZQWuSwDEwzFUKmmOXOmeH7Ooedupfip7Ghk7fxEG1OEbcgf9p7lgzephcNoCLSqBXGlgQx9UCVVDbjJ8FzgW6Aat-2FkgSN02kmKZRPDfCMNp6fGTLbqDh4YhkPWYWDe5ZLc3rRVayv0InR0muIEbO-FUvw/w300-h400/dsk%20in%20Kopeshwar%20temple.jpg)