
ನಮಸ್ತೆ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಗೆಳೆಯರೇ, ಈ ಜಗತ್ತಿನಲ್ಲಿ ಬಹಳಷ್ಟು ಜನ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ, ಮತ್ತೆ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ ಎಂಬುದನ್ನು ನೀವು ಕೂಡ ಗಮನಿಸಿರಬಹುದು. ಇದಕ್ಕೆ ಮುಖ್ಯ ಕಾರಣ ಏನಪ್ಪಾ ಅಂದ್ರೆ Difference of Mindset. ಯಾರತ್ರ Rich Mindset ಇದೆನೋ ಅವರು Rich ಆಗುತ್ತಾರೆ, ಯಾರತ್ರ Poor Mindset ಇದೆನೋ ಅವರು Poor ಆಗುತ್ತಾರೆ. ಅದಕ್ಕಾಗಿ ನೀವು ನಿಮ್ಮಲ್ಲಿರುವ Poor Mindsetನ್ನು ಡೀಲಿಟ ಮಾಡಿ Rich Mindsetನ್ನು ಬೆಳೆಸಿಕೊಳ್ಳಬೇಕು. Rich Mindset ಹಾಗೂ Poor Mindsetಗೂ ಇರುವ ಮುಖ್ಯ ವ್ಯತ್ಯಾಸಗಳು ಇಂತಿವೆ ;
Difference 01: Rich Mindsetನ ಜನ ಜಾಸ್ತಿ ಹಣವನ್ನು ಗಳಿಸಿ ಶ್ರೀಮಂತರಾಗಲು ಟ್ರಾಯ್ ಮಾಡ್ತಾರೆ. "Earn More, Save More, Invest More, and Grow More" ಸಿದ್ಧಾಂತವನ್ನು ಫಾಲೋ ಮಾಡ್ತಾರೆ. ಆದರೆ Poor Mindsetನ ಜನ ಜಾಸ್ತಿ ಹಣವನ್ನು ಉಳಿಸಿ ಶ್ರೀಮಂತರಾಗುವ ಕನಸನ್ನು ಕಾಣ್ತಾರೆ. ಬರೀ Save More, Save More ಅಂತಾ ಸಾಯ್ತಾರೆ. ಜಾಸ್ತಿ ಹಣವನ್ನು ಗಳಿಸಲು, ಉಳಿಸಲು, ಬೆಳೆಸಲು ಯೋಚಿಸುವ ಬದಲು ಬರೀ ಉಳಿಸಲು ನೋಡ್ತಾರೆ.

Difference 02: Rich Mindsetನ ಜನ ದುಡ್ಡನ್ನು ಖರ್ಚು ಮಾಡಿ ಟೈಮನ್ನು ಉಳಿಸುತ್ತಾರೆ. ಅದಕ್ಕಾಗಿಯೇ ಅವರು ಮತ್ತಷ್ಟು ಶ್ರೀಮಂತರಾಗುತ್ತಲೇ ಹೋಗುತ್ತಾರೆ. ಆದರೆ Poor Mindsetನ ಜನ ಟೈಮನ್ನು ವೇಸ್ಟ್ ಮಾಡಿ ಚಿಲ್ಲರೆ ದುಡ್ಡನ್ನು ಉಳಿಸುತ್ತಾರೆ. ಇದಕ್ಕಾಗಿಯೇ ಇವರು ಬಡವರಾಗುತ್ತಾ ಹೋಗುತ್ತಾರೆ.

Difference 03: Rich Mindsetನ ಜನ ರೀಸ್ಕ ತೆಗೆದುಕೊಂಡು ಬಿಜನೆಸ ಮಾಡಲು ಮುಂದಾಗುತ್ತಾರೆ. ಆದರೆ Poor Mindsetನ ಜನ ರೀಸ್ಕ್ ಬೇಡವೆ ಬೇಡ ಅಂತಾ ಸಿಕ್ಕ ಜಾಬ್ ಮಾಡುತ್ತಾರೆ.

Difference 04: Rich Mindsetನ ಜನ ತಮಗೆ ಗೊತ್ತಿರುವ ಯಾರಾದರೂ ವ್ಯಕ್ತಿ ತಮ್ಮ ಲೈಫಲ್ಲಿ ಮುಂದೆ ಹೊರಟರೆ, ಬಿಜನೆಸ ಪ್ರಾರಂಭಿಸಿದರೆ, ಸಕ್ಸೆಸಫುಲ್ ಆದರೆ ಅವರನ್ನು ಅಪ್ರೀಸಿಯೆಟ್ ಮಾಡ್ತಾರೆ. ಮತ್ತೆ ಅವರ ಬಗ್ಗೆ ಹೆಮ್ಮೆಯಿಂದ ಎಲ್ಲರಿಗೂ ಹೇಳ್ತಾರೆ. ಆದರೆ Poor Mindsetನ ಜನ ತಮಗೆ ಗೊತ್ತಿರುವ ಯಾರಾದರೂ ವ್ಯಕ್ತಿ ತಮ್ಮ ಲೈಫಲ್ಲಿ ಮುಂದೆ ಹೊರಟರೇ, ಬಿಜನೆಸ್ ಪ್ರಾರಂಭಿಸಿದರೆ, ಸಕ್ಸೆಸಫುಲ್ ಆದರೆ ಅವರನ್ನು ಕ್ರಿಟಿಸೈಜ್ ಮಾಡ್ತಾರೆ, ಮತ್ತೆ ಅವರ ಬಗ್ಗೆ ಕೆಟ್ಟ ಗಾಳಿಸುದ್ದಿಗಳನ್ನು ಹಬ್ಬಿಸುತ್ತಾರೆ.

Difference 05: Rich Mindsetನ ಜನ ದೊಡ್ಡ ಕನಸುಗಳನ್ನು ಕಾಣುತ್ತಾರೆ, ದೊಡ್ಡ ಗೋಲ್ಸಗಳನ್ನು ಸೆಟ್ ಮಾಡುತ್ತಾರೆ, ಅಪಾರ್ಚುನಿಟಿಗಳನ್ನು ಕ್ರಿಯೆಟ್ ಮಾಡಿಕೊಂಡು ಕೆಲಸ ಪ್ರಾರಂಭಿಸುತ್ತಾರೆ. ಆದರೆ Poor Mindsetನ ಜನ ಸಣ್ಣ ಕನಸುಗಳನ್ನು ಕಾಣುತ್ತಾರೆ, ಸಣ್ಣಸಣ್ಣ ಗೋಲ್ಸಗಳನ್ನು ಸೆಟ್ ಮಾಡಿ ಅದರಲ್ಲಿ ಸಕ್ಸೆಸಫುಲ್ ಆಗುತ್ತಾರೆ. ಮತ್ತೆ ಜೀವನಪೂರ್ತಿ ಒಳ್ಳೇ ಅಪಾರ್ಚುನಿಟಿಗಳಿಗಾಗಿ ಕಾಯುತ್ತಾ ಕೂಡುತ್ತಾರೆ.

Difference 06: Rich Mindsetನ ಜನ Solution ಮೇಲೆ ಫೋಕಸ್ ಮಾಡುತ್ತಾರೆ, Successನ ಮೇಲೆ ಫೋಕಸ್ ಮಾಡುತ್ತಾರೆ, Profitನ ಮೇಲೆ ಫೋಕಸ್ ಮಾಡುತ್ತಾರೆ. ಆದರೆ Poor Mindsetನ ಜನ Problemನ ಮೇಲೆ ಫೋಕಸ್ ಮಾಡುತ್ತಾರೆ, ಸೋಲಿನ ಮೇಲೆ ಫೋಕಸ್ ಮಾಡುತ್ತಾರೆ, Lossನ ಮೇಲೆ ಫೋಕಸ್ ಮಾಡುತ್ತಾರೆ.

Difference 07: Rich Mindsetನ ಜನ Educationಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಹೊಸ ಹೊಸ Skillsಗಳನ್ನು ಕಲಿಯುತ್ತಲೇ ಇರುತ್ತಾರೆ. ಆದರೆ Poor Mindsetನ ಜನ Entertainmentಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಹೊಸ ಹೊಸ Skillsಗಳನ್ನು ಬೆಳೆಸಿಕೊಳ್ಳುವ ಬದಲು ಹೊಸ ಹೊಸ ಚಟಗಳನ್ನು ಬೆಳೆಸಿಕೊಳ್ಳುತ್ತಾರೆ.

Difference 08: Rich Mindsetನ ಜನ Multiple Income Sourceಗಳನ್ನು ಬಿಲ್ಡ್ ಮಾಡುತ್ತಾರೆ, Passive Income Modelಗಳನ್ನು ಬಿಲ್ಡ್ ಮಾಡುತ್ತಾರೆ. ತಮ್ಮತ್ರ ಇರುವ ದುಡ್ಡನ್ನು ದುಡಿಸುತ್ತಾರೆ. ಆದರೆ Poor Mindsetನ ಜನ ಬರೀ Single Income Source ಮೇಲೆಯೇ ಫುಲ್ಲಿ ಡಿಪೆಂಡ್ ಆಗುತ್ತಾರೆ. Active Income Model ಮೇಲೆ ಡಿಪೆಂಡ್ ಆಗುತ್ತಾರೆ. ಮತ್ತೆ ದುಡ್ಡಿಗಾಗಿ ಜೀವನಪೂರ್ತಿ ದುಡಿಯುತ್ತಾರೆ.

Difference 09: Rich Mindsetನ ಜನ ತಮ್ಮ ಲೈಫಿಗೆ ವ್ಯಾಲೂ ಆ್ಯಡ್ ಮಾಡಿದವರನ್ನು ಗೌರವಿಸುತ್ತಾರೆ, ಪ್ರೀತಿಸುತ್ತಾರೆ. ಉದಾಹರಣೆಗೆ; ಯಾರಾದರೂ ಅವರಿಗೆ Insuranceಗಳನ್ನು ಮಾರಿದರೆ ನಮ್ಮ ಆರೋಗ್ಯ ಹಾಗೂ ಫ್ಯಾಮಿಲಿಯನ್ನು ಪ್ರೊಟೆಕ್ಟ್ ಮಾಡ್ತಿರುವುದಕ್ಕೆ ಥ್ಯಾಂಕ್ಸ್ ಅಂತಾರೆ. ಯಾರಾದರೂ ಅವರಿಗೆ Online Course / Training Program ಮಾರಿದರೆ ನಮ್ಮ ನಾಲೇಜನ್ನು ಹೆಚ್ಚಿಸಿದಕ್ಕೆ ಥ್ಯಾಂಕ್ಸ ಅಂತಾರೆ. ಆದರೆ Poor Mindsetನ ಜನ ತಮ್ಮ ಲೈಫಿಗೆ Value Add ಮಾಡಿದವರನ್ನು ಗೌರವಿಸುವುದಿಲ್ಲ. ಉದಾಹರಣೆಗೆ; ಯಾರಾದರೂ ಅವರಿಗೆ Insuranceಗಳನ್ನು ಮಾರಿದರೆ ಎಷ್ಟು ಕಮಿಷನ್ ಸಿಕ್ತೋ ಏನೋ ಅಂತಾರೆ. ಯಾರಾದರೂ ಅವರಿಗೆ Online Course / Training Program ಮಾರಿದರೆ ಕಲಿತು ಮುಂದೆ ಹೋಗುವ ಬದಲು ಈತ ಎಷ್ಟು ಕೋಟಿ ಗಳಿಸುತ್ತಾನೋ ಏನೋ ಅಂತಾ ಬೈಯ್ತಾರೆ.

Difference 10: Rich Mindsetನ ಜನ Financial Planning ಮಾಡುತ್ತಾರೆ. Long-term Vision ಮೇಲೆ Life Lead ಮಾಡುತ್ತಾರೆ. ಆದರೆ Poor Mindsetನ ಜನ ಬರೀ Family Planning ಮಾಡುತ್ತಾರೆ. Short Term ಸುಖಕ್ಕಾಗಿ ಒದ್ದಾಡುತ್ತಾರೆ. ಬರೀ ಟೈಮಪಾಸ್ ಮಾಡುತ್ತಾರೆ.

Difference 11: Rich Mindsetನ ಜನ ತಮಗೆ ಇಷ್ಟವಿರುವ ಕೆಲಸಗಳನ್ನು ಇಷ್ಟಪಟ್ಟು ಮಾಡುತ್ತಾರೆ. ತಮ್ಮ ಕನಸುಗಳನ್ನು ನನಸಾಗಿಸಲು ಕೆಲಸ ಮಾಡುತ್ತಾರೆ. ಆದರೆ Poor Mindsetನ ಜನ ತಮಗೆ ಇಷ್ಟವಿಲ್ಲದ ಕೆಲಸಗಳನ್ನು ಕಷ್ಟಪಟ್ಟು ಮಾಡುತ್ತಾರೆ. ಬೇರೆಯವರ ಕನಸುಗಳನ್ನು ನನಸಾಗಿಸಲು ಕಾಲಾಳುಗಳಾಗಿ ಕೆಲಸ ಮಾಡುತ್ತಾರೆ.

Difference 12: Rich Mindsetನ ಜನ Price ನೋಡಲ್ಲ, Value ನೋಡ್ತಾರೆ. ಉದಾಹರಣೆಗೆ; Costly ಆದರೂ Quality Products ತಗೊತಾರೆ. ಆದರೆ Poor Mindsetನ ಜನ Value ನೋಡಲ್ಲ, ಬರೀ Price ನೋಡ್ತಾರೆ. ಉದಾಹರಣೆಗೆ; ಸಸ್ತಾ ಇದೆಯಂತ ಲೋ ಕ್ವಾಲಿಟಿ ಕಚರಾ ಐಟೆಮ್ಸ ಖರೀದಿಸುತ್ತಾರೆ.

Difference 13: Rich Mindsetನ ಜನ ಹಣವನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ, ಪೂಜಿಸುತ್ತಾರೆ. ಆದರೆ Poor Mindsetನ ಜನ ಹಣವನ್ನು ಗುಟ್ಟಾಗಿ ಮೋಹಿಸುತ್ತಾರೆ. ಹಣವನ್ನು ದ್ವೇಷಿಸುತ್ತಾರೆ. ಹಣದ ಬಗ್ಗೆ ಯಾವಾಗಲೂ ಕೆಟ್ಟದಾಗಿ ಮಾತಾಡುತ್ತಾರೆ.

Difference 14: Rich Mindsetನ ಜನ ರಿಯಲ್ ರಿಚ್ ಆಗಲು ಎಫರ್ಟ್ ಹಾಕುತ್ತಾರೆ. Simple Living High Thinking ನಿಯಮ್ ಫಾಲೋ ಮಾಡ್ತಾರೆ. ಆದರೆ Poor Mindsetನ ಜನ ಫೇಕ್ ರಿಚನೆಸ್ ತೋರಿಸುತ್ತಾ ತಿರುಗುತ್ತಾರೆ. ಸಾಲ ಮಾಡಿ ಶೋಕಿ ಮಾಡುತ್ತಾರೆ. ಡಮ್ಮಿ ರಿಚ್ ಆಗಿ ಒಣ ಬಿಲ್ಡಪ್ ಕೊಡುತ್ತಾರೆ.

Difference 15: Rich Mindsetನ TV ನೋಡಲ್ಲ Booksಗಳೊಂದಿಗೆ ದೋಸ್ತಿ ಮಾಡುತ್ತಾರೆ. ಆದರೆ Poor Mindsetನ ಜನ TV ನೋಡ್ತಾರೆ, Booksಗಳೊಂದಿಗೆ ದುಶ್ಮನಿ ಮಾಡ್ತಾರೆ.

Difference 16: Rich Mindsetನ ಜನ ಮೊದಲು Assetsಗಳನ್ನು ಖರೀದಿಸುತ್ತಾರೆ. ಅದರಿಂದ ಬಂದ Extra Incomeದಿಂದ ಮನೆ, ಕಾರು, ಐಫೊನಗಳಂಥ ಲಕ್ಸುರಿಗಳನ್ನು ಖರೀದಿಸುತ್ತಾರೆ. ಆದರೆ Poor Mindsetನ ಜನ ತಮ್ಮ ಇನಕಮದಿಂದ ನೇರವಾಗಿ ಮನೆ, ಕಾರು, ಐಫೊನಗಳನ್ನು ಖರೀದಿಸಿ Liabilityಗಳನ್ನು ಕ್ರಿಯೆಟ್ ಮಾಡಿಕೊಳ್ಳುತ್ತಾರೆ.

Difference 17: Rich Mindsetನ ಜನ ತಮ್ಮ ಮೇಲೆ, ತಮ್ಮ ಕೆಲಸದ ಮೇಲೆ, ತಮ್ಮ ಸಕ್ಸೆಸನ ಮೇಲೆ ಫೋಕಸ್ ಮಾಡುತ್ತಾರೆ. ಆದರೆ Poor Mindsetನ ಜನ Dirty Politics, Dirty Films, Dirty Cricketನ ಮೇಲೆ ಫೋಕಸ್ ಮಾಡುತ್ತಾರೆ.

Difference 18: Rich Mindsetನ ಜನ Wisdom ಹಾಗೂ Specialised Knowledgeಗೆ ಬೆಲೆ ಕೊಡುತ್ತಾರೆ. ಆದರೆ Poor Mindsetನ ಜನ ಫಾಲತೂ General Knowledge ಹಾಗೂ ಕೆಲ್ಸಕ್ಕೆ ಬಾರದ ಕಾಲೇಜ್ ಡಿಗ್ರಿಗಳಿಗೆ ಮಾತ್ರ ಬೆಲೆ ಕೊಡುತ್ತಾರೆ.

ಇವೀಷ್ಟು Rich Mindset ಹಾಗೂ Poor Mindsetಗೆ ಇರುವ ವ್ಯತ್ಯಾಸಗಳು. Rich Mindset ಇರೋರು ರಿಚ್ ಆಗುತ್ತಾರೆ. ಆದರೆ ಎಲ್ಲ ರಿಚ್ ವ್ಯಕ್ತಿಗಳತ್ರ Rich Mindset ಇರಲ್ಲ. ಇದರ ಬಗ್ಗೆ ಇನ್ನಷ್ಟು ಡಿಟೆಲಾಗಿ ತಿಳಿದುಕೊಳ್ಳಲು ನೀವು ನನ್ನ ಚಾನೆಲಗೆ ಮೆಂಬರ್ ಆಗಿ 100 Days Life Changing Courseನ್ನು ಫಾಲೋ ಮಾಡಿ. ಧನ್ಯವಾದಗಳು.