Life is What You Make It by Preeti Shenoy - Book Summary In Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

Life is What You Make It by Preeti Shenoy - Book Summary In Kannada

Life is What You Make It by Preeti Shenoy - Book Summary In Kannada

                   ನನ್ನ ಲೈಫಲ್ಲಿ ಕಮ್ಮಿ ಫ್ರೆಂಡ್ಸ್ ಇರುವುದರಿಂದ ನಾನು ಹೆಚ್ಚಾಗಿ ಬುಕ್ಸಗಳೊಂದಿಗೆ ದೋಸ್ತಿ ಮಾಡುವೆ. ರೀಸೆಂಟ್ ಆಗಿ ನಾನು ಪ್ರೀತಿ ಶೆಣಾಯ್ ಅವರ "Life is What You Make It" ಪುಸ್ತಕವನ್ನು ಓದಿದೆ. ಟೈಟಲ್ ನೋಡಿ ನನಗಿದೊಂದು Motivational ಅಥವಾ Self Help ಬುಕ್ ಅಂತಾ ಅನಿಸಿತು. ಆದರೆ ಇದೊಂದು ಕಾಂಪ್ಲೆಕ್ಸ್ ಲವ್ ಸ್ಟೋರಿಯೊಂದಿಗೆ "Bipolar Disorder"ನ್ನು ವಿವರಿಸುವ ಬುಕ್ ಆಗಿದೆ. ಈ ಬುಕ್ನಲ್ಲಿ ಇವತ್ತಿನ Youthsಗೆ & ಅವರ ಪೇರೆಂಟ್ಸಗಳಿಗೆ ಕೆಲವೊಂದಿಷ್ಟು ಲವ್ ಟಿಪ್ಸಗಳಿವೆ. ಅವುಗಳನ್ನು ನಿಮ್ಮೊಂದಿಗೆ ಶೇರ್ ಮಾಡುವನಿದ್ದೇನೆ. 

🚩 Read Book "Life is What You Make It'' - https://amzn.to/4e6y7QQ 🚩 Read Book "Life is What You Make It'' English - https://www.amazon.in/Life-What-Make-Preeti-Shenoy/dp/9380349300/

              ಅಂಕಿತಾ ಶರ್ಮಾ ಎಂಬ ಸುಂದರ ಹುಡುಗಿ ಇರುತ್ತಾಳೆ. ಆಕೆ ಕೇರಳದ ಕಾಲೇಜ್ ಒಂದರಲ್ಲಿ ಡಿಗ್ರಿ ಓದ್ತಾ ಇರ್ತಾಳೆ. ಆಕೆ ಓದಿನಲ್ಲಿ ಮತ್ತೆ ಕಲ್ಚರಲ್ ಆಕ್ಟಿವಿಟಿಗಳಲ್ಲಿ ಸ್ಮಾರ್ಟ್ ಆಗಿರುತ್ತಾಳೆ. ಅವಳ ಸೌಂದರ್ಯಕ್ಕೆ ಮಾರುಹೋಗಿ ಹುಡುಗರು ಅವಳಿಂದೆ ಸುತ್ತುತ್ತಿರುತ್ತಾರೆ. ಆದರೆ ಆಕೆ ತನ್ನ ಬಾಲ್ಯದ ಸಹಪಾಠಿ ಗೆಳೆಯ ವೈಭವನೊಂದಿಗೆ ಲಾಂಗ್ ಡಿಸ್ಟನ್ಸ ರಿಲೇಷನ್ಶಿಪನಲ್ಲಿರುತ್ತಾಳೆ. ಆತ IIT ಡೆಲ್ಲಿಯಲ್ಲಿ ಓದ್ತಾ ಇರ್ತಾನೆ. ಅಂಕಿತಾಳಿಗೆ ಇಂಟರ್ ಕಾಲೇಜ್ ಕಾಂಪಿಟಿಷನನಲ್ಲಿ ಅಭಿಷೇಕ್ ಎಂಬ ಹುಡುಗ ಪರಿಚಯವಾಗ್ತಾನೆ. ಆತ ಅವಳ ಸೌಂದರ್ಯಕ್ಕೆ ಸೋತು ಅವಳಿಗೆ ಪ್ರೊಪೋಸ್ ಮಾಡುತ್ತಾನೆ. ಆದರೆ ಆಕೆ ವೈಭವ ಎಂಬ Boyfriend ಇದಾನೆ ಎಂದೇಳಿ ಅಭಿಷೇಕನಿಂದ ದೂರಾಗುವ ಪ್ರಯತ್ನ ಮಾಡುತ್ತಾಳೆ. ಆದರೂ ಅಭಿಷೇಕ್ ಹಠ ಬಿಡದೇ ಟ್ರೈ ಮಾಡ್ತಾನೆ. ಅಂಕಿತಾ ಅವನೊಂದಿಗೆ ಸೈಲೆಂಟ್ ಲವಲ್ಲಿ ಬಿಳ್ತಾಳೆ. ಅವನೊಂದಿಗೆ ಪದೇಪದೇ Hug & Kiss ಮಾಡ್ತಾಳೆ. ಅಂಕಿತಾಳಿಗೆ MBA ಮಾಡಿ ಕಾರ್ಪೊರೇಟ್ ಫೀಲ್ಡಲ್ಲಿ ಚೆನ್ನಾಗಿ ದುಡ್ಡು ಮಾಡುವ ಕನಸಿರುತ್ತೆ. ಅದಕ್ಕಾಗಿ ಆಕೆ ಡಿಗ್ರಿ ಮುಗಿಯುತ್ತಿದ್ದಂತೆಯೇ ಅಭಿಷೇಕನನ್ನ ಡಂಪ್ ಮಾಡಿ ಮುಂಬೈಗೆ ಹೋಗುತ್ತಾಳೆ. ಅಭಿಷೇಕ್ ಸೂಸೈಡ್ ಮಾಡ್ಕೊಂಡು ಸಾಯ್ತಾನೆ. ಅಂಕಿತಾ ತಾನು ಇಷ್ಟಪಟ್ಟಂತೆ ಮುಂಬೈನ ಒಂದು ಪ್ರತಿಷ್ಠಿತ ಕಾಲೇಜಗೆ ಸೇರಿಕೊಳ್ತಾಳೆ. ಅಲ್ಲಿ ಆಕೆ ಸ್ಟಡೀಸ್ ಹಾಗೂ ಕಲ್ಚರಲ್ ಇವೆಂಟ್ಸ್ ಎರಡರಲ್ಲೂ ಟಾಪ್ ಮಾಡ್ತಾಳೆ. ಕಾಲೇಜಲ್ಲಿ ಫೇಮಸ್ ಆಗ್ತಾಳೆ. ಅಲ್ಲಿ ಜೋಸೆಫ್ ಎಂಬ ಹುಡುಗನೊಂದಿಗೆ ಮತ್ತೆ ಕ್ಲೋಸ್ ಆಗುತ್ತಾಳೆ. ಅವನೊಂದಿಗೂ ಸಹ ಪದೇಪದೇ Hug & Kiss ಮಾಡ್ತಾಳೆ. ತಮ್ಮ ಮಗಳು ಅಂಕಿತಾ ಮೂರುಮೂರು ಹುಡುಗರನ್ನು ಸುತ್ತಿಸುತ್ತಿದ್ದಾಳೆ ಎಂಬುದು ಅವಳ ಪೆರೆಂಟ್ಸಗೆ ಗೊತ್ತಾಗುತ್ತದೆ. ಆವಾಗ ಅವರು ಅಂಕಿತಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅವಳ ಲವ್ ಲೆಟರಗಳನ್ನು ಅವಳ ಮುಂದೆಯೇ ಸುಟ್ಟಾಕುತ್ತಾರೆ. ಇದರಿಂದ ಆಕೆ ಸಡನ್ ಡಿಪ್ರೆಶನಗೆ ಹೋಗ್ತಾಳೆ. ಅದು  "Bipolar Disorder" ಎಂಬ ಮೆಂಟಲ್ ಇಲ್ನೆಸ್ಸ್ ಆಗಿರುತ್ತದೆ. ಇದರಿಂದ ಆಕೆ ಮೆಂಟಲ್ ಹಾಸ್ಪಿಟಲ್ ಸೇರ್ತಾಳೆ. ಅದರಿಂದ ಅಂಕಿತಾ ಹೇಗೆ ಹೊರ ಬರುತ್ತಾಳೆ? ಹೇಗೆ ಹೋಪನೊಂದಿಗೆ ತನ್ನ ಬದುಕನ್ನು ಪುನಃ ರೂಪಿಸಿಕೊಳ್ತಾಳೆ ಅನ್ನೋದು ಈ ಬುಕನ ಸ್ಟೋರಿ ಲೈನ್ ಆಗಿದೆ. ಈಗ ಇದರಿಂದ ನಿಮಗೇನು ಲವ್ ಟಿಪ್ಸಗಳಿವೆ ಅನ್ನೋದನ್ನ ಹೇಳುವೆ. 

Life is What You Make It by Preeti Shenoy - Book Summary In Kannada

Tip - 01: ನೀವು ಟೀನೇಜಿನಲ್ಲಿರುವಾಗ ಮತ್ತೆ ಕಾಲೇಜಿನಲ್ಲಿರುವಾಗ ಈ ಪ್ರೀತಿ ಪ್ರೇಮಗಳಲ್ಲಿ ಬಿಳೋಕೆ ಹೋಗ್ಬಾರ್ದು. ಏಕೆಂದರೆ ಇದು ನಿಜವಾದ ಪ್ರೀತಿ ಆಗಿರಲ್ಲ. ಜಸ್ಟ್ ಫಿಸಿಕಲ್ ಅಟ್ರಾಕ್ಷನ್ ಆಗಿರುತ್ತದೆ. ಇದು ನಿಮ್ಮನ್ನು ಹಾಗೂ ನಿಮ್ಮ ಲೈಫನ್ನ ಹಾಳು ಮಾಡುತ್ತದೆ ಅಷ್ಟೇ. 

Life is What You Make It by Preeti Shenoy - Book Summary In Kannada

Tip - 02: ಒನ್ ವೇ ಲವಗೆ ಯಾವುದೇ ಬೆಲೆ ಇರಲ್ಲ. ಒನ್ ವೇ ಲವ ನಿಮಗೆ ಬರೀ ನೋವನ್ನ ಕೊಡುತ್ತದೆ. ಕೊನೆಗೆ ಸಾವನ್ನ ಕೊಡುತ್ತದೆ. ಉದಾಹರಣೆಗೆ; ಅಂಕಿತಾ ತನಗೆ ಬಾಯ್ಫ್ರೆಂಡ್ ಇದಾನೆ ಅಂತಾ ಹೇಳಿದ ಮೇಲೂ ಅಭಿಷೇಕ್ ಅವಳಿಂದೆ ಬೀಳುತ್ತಾನೆ. Hug & Kissಗಳು ಸಿಗುತ್ತವೆ. ಆದರೆ ಪ್ರೀತಿ ಸಿಗಲ್ಲ. ಅಂಕಿತಾ ತನ್ನ ಲೈಫ್ ಗೋಲಗಾಗಿ ಅವನನ್ನ ಡಂಪ್ ಮಾಡಿ ಮುಂಬೈಗೆ  ಹೋಗುತ್ತಾಳೆ. ಅಭಿಷೇಕ್ ಸೂಸೈಡ್ ಮಾಡ್ಕೊಂಡು ಸಾಯುತ್ತಾನೆ. ಒನ್ ವೇ ಲವನಿಂದ ನಿಮಗೆ ಸಿಗೋದು ನೋವು ಸಾವು ಅಷ್ಟೇ ಬೇರೇನಿಲ್ಲ. 

Life is What You Make It by Preeti Shenoy - Book Summary In Kannada

Tip - 03: Long Distance Relationshipಗೆ ಯಾವುದೇ ಫ್ಯೂಚರ್ ಇರಲ್ಲ. ನಾವು ನಿಯತ್ತಾಗಿದ್ರೂ ನಮ್ಮ ಲವರ್ ನಮ್ಮ ಬೆನ್ನಿಂದೆ ನಿಯತ್ತಾಗಿ ಇರ್ತಾರೆ ಅನ್ನೋದಕ್ಕೆ ಗ್ಯಾರಂಟಿ ಇರಲ್ಲ. ಅವಕಾಶ ಸಿಕ್ಕಾಗ ಎಲ್ರೂ ತಮ್ಮ ಬೆಳೆ ಬೇಯಿಸಿಕೊಂಡು ಬಿಡುತ್ತಾರೆ. ಉದಾಹರಣೆಗೆ; ವೈಭವ ಅಂಕಿತಾಳಿಗೆ ಲಾಯಲ್ ಆಗಿರುತ್ತಾನೆ. ಆದರೆ ಅಂಕಿತಾ ಮೊದಲು ಅಭಿಷೇಕನೊಂದಿಗೆ ಆನಂತರ ಜೋಸೆಫನೊಂದಿಗೆ ಕಾಲು ಜಾರುತ್ತಾಳೆ. ವೈಭವನಿಗೆ ಮೋಸ್ ಮಾಡ್ತಾಳೆ. ಆದರೆ ಅವಳಿಗೆ ಸ್ವಲ್ಪವೂ ಪಾಪಪ್ರಜ್ಞೆ ಇರಲ್ಲ, ನಾಚಿಕೆ ಬರಲ್ಲ. ಮೆಂಟಲ್ ಹಾಸ್ಪಿಟಲನಿಂದ ಹುಷಾರಾಗಿ ಹೊರಬಂದಾಗ ಕೊನೆಗಾಕೆ ವೈಭವನನ್ನ ಬಿಟ್ಟು ಬೇರೊಬ್ಬನನ್ನು ಮದುವೆಯಾಗ್ತಾಳೆ. ಸೋ Long Distance Relationshipಗೆ ಯಾವುದೇ ಫ್ಯೂಚರ್ ಇರಲ್ಲ. ನಿಮ್ಮ ಜೊತೆಗಿರೋದು ಮತ್ತೆ ಕಣ್ಮುಂದೆ ಇರೋದಷ್ಟೇ ಸತ್ಯ ಎಂಬುದನ್ನ ಅರ್ಥ ಮಾಡ್ಕೊಳ್ಳಿ. 

Life is What You Make It by Preeti Shenoy - Book Summary In Kannada

Tip - 04: ಯಾವಾಗ ನಿಮ್ಮ ಮಕ್ಕಳು ಹರೆಯಕ್ಕೆ ಬರ್ತಾರೋ ಆವಾಗ ನೀವು ಅವರೊಂದಿಗೆ ಫ್ರೆಂಡ್ಸಗಳಾಗಿ ಅವರೊಂದಿಗೆ ಸ್ಪೆಷಲ್ ಟೈಮ್ ಸ್ಪೆಂಡ್ ಮಾಡಿ. ಅವರು ದಾರಿತಪ್ಪದಂತೆ ನೋಡಿಕೊಳ್ಳಿ. ಏನಾದರೂ ನಿಮ್ಮ ಮಕ್ಕಳು ಡೈವರ್ಟ್ ಆದರೆ ಅವರನ್ನು ಪ್ರೀತಿಯಿಂದ ತಿದ್ದಿ ತಿಡಿ ಸರಿದಾರಿಗೆ ತನ್ನಿ. ನೀವು ಕೋಪತಾಪ ಬಡಿಹೊಡಿ ಮಾಡಿದರೆ ನಿಮ್ಮ ಮಕ್ಕಳು ನಿಮ್ಮ ಕೈಬಿಟ್ಟು ಹೋಗ್ತಾರೆ. ಅವರು ಮನೆಬಿಟ್ಟು ಓಡೋಗಬಹುದು, ಕಾಲೇಜ್ ಡ್ರಾಪ್ಔಟ್ ಮಾಡಬಹುದು ಇಲ್ಲ ಸೂಸೈಡ್ ಮಾಡಿಕೊಂಡು ಸಾಯಬಹುದು. ಅದಕ್ಕಾಗಿ ಎಳೆ ಮನಸ್ಸುಗಳನ್ನು ಬಹಳಷ್ಟು ಕೇರಫುಲ್ಲಾಗಿ ಹ್ಯಾಂಡಲ್ ಮಾಡಿ. 

Life is What You Make It by Preeti Shenoy - Book Summary In Kannada

Tip - 05: ನಿಮ್ಮ ಪ್ರೀತಿಪಾತ್ರರು ಡಿಪ್ರೆಶನಗೆ ಹೋದಾಗ ಅವರಿಗೆ ಮೆಡಿಸಿನಗಳಿಗಿಂತ  ಮುಖ್ಯವಾಗಿ ಅವರನ್ನು ಜಡ್ಜ ಮಾಡದೇ ಅವರ ಮನಸ್ಸಿನ ಮಾತುಗಳನ್ನು ಕೇಳಿ ಅವರಿಗೆ ಸಮಾಧಾನ ಹೇಳುವವರ ಅವಶ್ಯಕತೆಯಿರುತ್ತೆ. ಅವರಿಗೆ "ನೀನು ಹೆದರಬೇಡ ನಿನ್ನೊಂದಿಗೆ ನಾನಿದ್ದೀನಿ" ಅಂತಾ ಧೈರ್ಯ ಹೇಳುವವರ ಅವಶ್ಯಕತೆಯಿರುತ್ತೆ. ಇದನ್ನು ಅರ್ಥ ಮಾಡಿಕೊಳ್ಳದೆ ನೀವು ಅವರನ್ನು ಒಂಟಿಯಾಗಿರಲು ಬಿಟ್ಟರೆ ಅವರು ಸೂಸೈಡ್ ಮಾಡಿಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಮೆಂಟಲ್ Illness ಕಾಮನ್ ಆಗಿದೆ. ಇದರಿಂದ ಡಿಪ್ರೆಶನಗೆ ಹೋಗಿರುವವರನ್ನ ಹುಚ್ಚರೆಂದುಕೊಳ್ಳುವುದು ಮೂರ್ಖತನವಾಗಿದೆ. ಅವರಿಗೆ ಸರಿಯಾದ ಟ್ರೀಟ್ಮೆಂಟ್ ಸಿಕ್ರೆ ಅವರು ಬೇಗನೆ ನಾರ್ಮಲ್ ಆಗುತ್ತಾರೆ. ಅದೇನು ವಾಸಿಯಾಗದ ಕಾಯಿಲೆಯೇನಲ್ಲ.  

                   ಇವಿಷ್ಟು ಟಿಪ್ಸಗಳನ್ನು ನೀವು "Life is What You Make It" ಪುಸ್ತಕದಿಂದ ಕಲಿಯಬಹುದು. ಆಲ್ ದ್ ಬೆಸ್ಟ್... 

Life is What You Make It by Preeti Shenoy - Book Summary In Kannada

Blogger ನಿಂದ ಸಾಮರ್ಥ್ಯಹೊಂದಿದೆ.