The Monk Who Sold His Ferrari by Robin Sharma Book Summary in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

The Monk Who Sold His Ferrari by Robin Sharma Book Summary in Kannada

The Monk Who Sold His Ferrari by Robin Sharma Book Summary in Kannada

            ನಮಸ್ತೆ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ್. ಜಸ್ಟ್ ನಾನು ರಾಬಿನ್ ಶರ್ಮಾ ಅವರು ಬರೆದ "The Monk Who Sold His Ferrari" ಬುಕನ್ನು ಓದಿ ಮುಗಿಸಿದೆ. ಇದೊಂದು ಸೆಲ್ಫ್ ಹೆಲ್ಪ್ ಬುಕ್ ಆಗಿದೆ. ಈ ಬುಕ್ನಲ್ಲಿ ಆಥರ್ Enlightened Livingಗಾಗಿ, Mental Peaceಗಾಗಿ, Self-Disciplineಗಾಗಿ, ಒಂದು Meaningful ಲೈಫನ್ನು ಲೀಡ್ ಮಾಡುವುದಕ್ಕಾಗಿ 7 ಬೆಸ್ಟ್ ಲೈಫ್ ಲೆಸನ್ಸಗಳನ್ನು ಶೇರ್ ಮಾಡಿದ್ದಾರೆ. ಅವುಗಳನ್ನು ನಾನು ಇವತ್ತು ನಿಮ್ಮೊಂದಿಗೆ ಶೇರ್ ಮಾಡುವವನಿದ್ದೇನೆ. ಈ ಬುಕ್ ಕನ್ನಡದಲ್ಲೂ ಕೂಡ ಲಭ್ಯವಿದೆ. ಫೆರಾರಿ ಮಾರಿದ ಫಕೀರ್ ಎಂಬ ಹೆಸರಿದೆ. ನಿಮಗೆ ಇಂಟರೆಸ್ಟ್ ಇದ್ದರೆ ನೀವು ಓದಬಹುದು. ಲಿಂಕ್ ಇಂತಿದೆ - https://www.roaringcreationsfilms.com/the-monk-who-sold-his-ferrari-by-robin-sharma/

The Monk Who Sold His Ferrari by Robin Sharma Book Summary in Kannada

               The Monk Who Sold His Ferrari ಬುಕ್ನಲ್ಲಿ ಆಥರ್ ಜೂಲಿಯನ್ ಮ್ಯಾಂಟಲ್ ಎಂಬ ಕಾಲ್ಪನಿಕ ಪಾತ್ರದ ಮೂಲಕ ಈ 7 ಲೈಫ್ ಲೆಸನ್ಸಗಳನ್ನು ವಿವರಿಸಿದ್ದಾರೆ. ಇದೊಂದು ಕಾಲ್ಪನಿಕ ಕಥೆಯಾಗಿದೆ. ಆಥರ್ ಬುದ್ಧಿಸ್ಟ್ ಹಾಗೂ ಜಪಾನೀಸ್ ಜೀವನ ಶೈಲಿಯ ಟ್ರಿಕ್ಸಗಳಿಂದ ಇನ್ಸ್ಪೈರ್ ಆಗಿ ಈ ಕಥೆಯನ್ನು ಬರೆದಿದ್ದಾರೆ ಅನಿಸುತ್ತದೆ. ಜೂಲಿಯನ್ ಒಬ್ಬ ಫೇಮಸ್ & ಮೋಸ್ಟ ಸಕ್ಸಸಫುಲ್ ಲಾಯರ್ ಆಗಿರ್ತಾನೆ. ಆತನ ಬಳಿ ಮಿಲಿಯನಗಟ್ಟಲೆ ಹಣ, ದೊಡ್ಡ ಮನೆ, ಪ್ರೈವೇಟ್ ಜೆಟ್, ರೆಡ್ ಫೆರಾರಿ ಎಲ್ಲವೂ ಇರುತ್ತೆ. ಆತ ತನ್ನ ಪ್ರೊಫೆಷನಲ್ ಲೈಫಲ್ಲಿ ಹೈಲಿ ಸಕ್ಸಸಫುಲ್ ಆಗಿರ್ತಾನೆ. ಆದರೆ ಪರ್ಸನಲ್ ಲೈಫಲ್ಲಿ ಫ್ಲಾಪ್ ಆಗಿರ್ತಾನೆ. ಆತ ಬರೀ ಕೆಲಸ, ದುಡ್ಡು, ಫೇಮ್ ಅಂತೇಳಿ ಫುಲ್ಲಿ ತನ್ನ ಪ್ರೊಫೆಶನ್ ಮೇಲೆ ಫೋಕಸ್ ಮಾಡುತ್ತಾನೆ. ತನ್ನ ಹೆಲ್ತ್, ಫ್ಯಾಮಿಲಿ ಎಲ್ಲವನ್ನು ಮರೆತು ಬಿಡುತ್ತಾನೆ. ಅವನಿಗೆ ಡೈವೋರ್ಸ್ ಕೂಡ ಆಗಿರುತ್ತೆ. ಒಂದಿನ ಕೋರ್ಟಲ್ಲಿ ವಾದ ಮಾಡುವಾಗ ಸಡನಲಿ ಅವನಿಗೆ ಹಾರ್ಟ್ ಅಟ್ಯಾಕ್ ಆಗುತ್ತೆ. ಡಾಕ್ಟರ್ ಅವನಿಗೆ ಓವರ್ ಸ್ಟ್ರೆಸ್ ತೆಗೆದುಕೊಳ್ಳದೆ ರೆಸ್ಟ್ ಮಾಡೋಕೆ ಹೇಳ್ತಾರೆ. ನೂರಾರು ಕೇಸಗಳನ್ನು ಗೆದ್ದ ಜೂಲಿಯನ್ ತನ್ನ ಸ್ವಂತ ಲೈಫಿನ ಕೇಸನ್ನು ಸೋತು ಬಿಡ್ತಾನೆ. ಅವನಿಗೆ ತನ್ನ ತಪ್ಪುಗಳ ಅರಿವಾಗುತ್ತೆ. ಅವನಿಗೆ ಹೆಲ್ತ್ ಹಾಗೂ ಫ್ಯಾಮಿಲಿಯ ಪ್ರಾಮುಖ್ಯತೆ ಬಗ್ಗೆ ಅರಿವಾಗುತ್ತೆ. ನಾನು ದೊಡ್ಡ Pleasureಗಳನ್ನು ಚೇಸ್ ಮಾಡುತ್ತಾ ಸಣ್ಣ ಸಣ್ಣ ಹ್ಯಾಪಿನೆಸ ಹಾಗೂ ಬೆಸ್ಟ್ ಮೊಮೆಂಟ್ಸಗಳನ್ನು ಮಿಸ್ ಮಾಡಿರುವೆ ಎಂಬುದು ಗೊತ್ತಾಗುತ್ತೆ. ಆಗ ಜೂಲಿಯನ್ ತನ್ನ ಎಲ್ಲ ಹಣ, ಸಂಪತ್ತು, ಮನೆಯ ಜೊತೆಗೆ  ಫೆರಾರಿಯನ್ನು ಸಹ ಮಾರಿ ನೆಮ್ಮದಿಯ ಹುಡುಕಾಟದಲ್ಲಿ ಭಾರತದ ಹಿಮಾಲಯಕ್ಕೆ ಬರುತ್ತಾನೆ. ಅಲ್ಲಿರುವ ಕೆಲ ಸಾಧುಗಳನ್ನು ಭೇಟಿಯಾಗುತ್ತಾನೆ. ಅವರಿಂದ ಅವನಿಗೆ ಕಲಿಯಲು ಸಿಕ್ಕ ಲೈಫ್ ಲೆಸನ್ಸಗಳನ್ನೇ ಆಥರ್ ಈ ಬುಕ್ನಲ್ಲಿ ವಿವರಿಸಿದ್ದಾರೆ. ಆ ಗ್ರೇಟ್ ಲೈಫ್ ಲೆಸೆನ್ಸಗಳು ಇಂತಿವೆ ; 

The Monk Who Sold His Ferrari by Robin Sharma Book Summary in Kannada

Life Lesson - 01: Master Your Mind 

          ನೀವು ನಿಮ್ಮ ಮೈಂಡನ್ನು ಸರಿಯಾಗಿ ಕಲ್ಟಿವೇಟ್ ಮಾಡಬೇಕು. ನಮ್ಮ ಮೈಂಡನ್ನು ನಾವು ಸರಿಯಾಗಿ Fertile Landನಂತೆ Nourish ಮಾಡಿದರೆ ಇದೊಂದು ಬ್ಯೂಟಿಫುಲ್ ಗಾರ್ಡನ್ ಆಗುತ್ತೆ. ನಾವು ಇದರಲ್ಲಿ ಟಾಕ್ಸಿಕ್ ವೇಸ್ಟ ಥಾಟ್ಸಗಳನ್ನು ತುಂಬಿದರೆ ಇದೊಂದು ಕಸ ಹತ್ತಿದ ಹಾಳು ಗದ್ದೆಯಾಗುತ್ತೆ. ಪ್ರತಿದಿನ ಆನ್ an ಆವರೇಜ್ ನಮ್ಮ ಮೈಂಡಲ್ಲಿ 60,000 ಥಾಟ್ಸಗಳು ಬರುತ್ತವೆ. ಅದರಲ್ಲಿ 99% ಥಾಟ್ಸ್ Useless & Negative ಆಗಿರುತ್ತವೆ. ನಮ್ಮ ಲೈಫಿನ ಕ್ವಾಲಿಟಿ ನಮ್ಮ ಥಾಟ್ಸಗಳ ಕ್ವಾಲಿಟಿ ಮೇಲೆ ಡಿಪೆಂಡ್ ಆಗುತ್ತದೆ. ಹೀಗಾಗಿ ನಾವು ನಮ್ಮ ಮೈಂಡನ್ನು ಸರಿಯಾಗಿ ಕಲ್ಟಿವೇಟ್ ಮಾಡಬೇಕು, ನಮ್ಮ ಮೈಂಡಿಗೆ ನಾವು ಮಾಸ್ಟರ್ ಆಗಬೇಕು. 

The Monk Who Sold His Ferrari by Robin Sharma Book Summary in Kannada

Life Lesson - 02: Follow Your Purpose 

                ನಮ್ಮ ಲೈಫಿಗೆ ನಾವೊಂದು Purposeನ್ನು ಹುಡುಕಬೇಕು. ನಮ್ಮ ಜೀವನಕ್ಕೆ ಒಂದು ಅರ್ಥ ಸಿಗಬೇಕೆಂದರೆ ಅದಕ್ಕೊಂದು ಮುಖ್ಯ ಉದ್ದೇಶ ಬೇಕು. ನಾವು ಒಂದು Meaningless ಲೈಫನ್ನು ಲೀಡ್ ಮಾಡಬಾರದು. ಅದಕ್ಕಾಗಿಯೇ ನಮ್ಮ ಲೈಫಿಗೆ ನಾವೊಂದು Purposeನ್ನು ಹುಡುಕಬೇಕು. ಸಾವಿರಾರು ಮೈಲುಗಳು ಜರ್ನಿ ಒಂದು ಸಣ್ಣ ಹೆಜ್ಜೆಯೊಂದಿಗೆ ಶುರುವಾಗುತ್ತೆ. ಸೋ ನೀವು ಸಹ ನಿಮ್ಮ ಲೈಫಿಗೊಂದು Purposeನ್ನು ಹುಡುಕಿ ಮತ್ತೆ ಅದನ್ನು ಫಾಲೋ ಮಾಡಿ. Goal Setting & Goal Getting ಕಲೆಯನ್ನು ಕಲಿಯಿರಿ. 

The Monk Who Sold His Ferrari by Robin Sharma Book Summary in Kannada

Life Lesson - 03: Practice Kaizen

                  ನೀವು Kaizen ಅನ್ನು ಪ್ರಾಕ್ಟೀಸ್ ಮಾಡಬೇಕು. Kaizen ಇದೊಂದು ಜಪಾನೀಸ್ ವರ್ಡ್ ಆಗಿದೆ. Kaizen ಎಂದರೆ Constant & Never Ending Improvement ಎಂದರ್ಥ. ಇದಕ್ಕೆ ನೀವು Self-Mastery ಅಂತಲೂ ಕರೆಯಬಹುದು. ನೀವು ನಿಮ್ಮ ಮೈಂಡ್ ಹಾಗೂ ಬಾಡಿಯನ್ನು ಇಂಪ್ರೂವ್ ಮಾಡಿಕೊಳ್ಳುವುದಕ್ಕೆ ಹಾರ್ಡ್ ವರ್ಕ್ ಮಾಡಬೇಕು. ನಿಮ್ಮ ಮೈಂಡ್, ಬಾಡಿ, ಹಾಗೂ ಸೋಲ್ ಅನ್ನು Enlightenmentಗಾಗಿ ಪ್ರಿಪೇರ್ ಮಾಡಬೇಕು. ನಿಮಗೆ ಯಾವ ಸಂಗತಿಗಳಿಂದ ಭಯವಾಗುತ್ತೋ ಅವುಗಳನ್ನು ನೀವು ಮಾಡಬೇಕು. ಈ ರೀತಿ ಮಾಡುವ ಮೂಲಕ ನೀವು ನಿಮ್ಮ ಲೈಫಿನ ಎಲ್ಲ ಆಸ್ಪೆಕ್ಟ್ಸಗಳಲ್ಲಿ ನಿಮ್ಮನ್ನು ನೀವು ಇಂಪ್ರೂವ್ ಮಾಡಿಕೊಳ್ಳುತ್ತಲೇ ಹೋಗಬೇಕು. Constant & Never Ending Improvement ಮಾಡ್ತಾನೆ ಇರಬೇಕು. ಇದೇ ಕೈಜೆನ್ ಆಗಿದೆ, ಇದನ್ನು ಪ್ರಾಕ್ಟೀಸ್ ಮಾಡಿ. 

The Monk Who Sold His Ferrari by Robin Sharma Book Summary in Kannada

Life Lesson - 04: Live With Discipline 

                               ನೀವು ನಿಮ್ಮ ಎಲ್ಲ ಗೋಲ್ಸಗಳನ್ನು ಅಚೀವ ಮಾಡಿ ಸಕ್ಸಸಫುಲ್ ಆಗಬೇಕೆಂದರೆ ನೀವು ಡಿಸಿಪ್ಲಿನನೊಂದಿಗೆ ಬದುಕಬೇಕು. ಡಿಸಿಪ್ಲಿನ ಇರದಿದ್ದರೆ ನಿಮ್ಮ ಸಂಪೂರ್ಣ ಜೀವನ ಅಸ್ತವ್ಯಸ್ತವಾಗುತ್ತದೆ, ವ್ಯರ್ಥವಾಗುತ್ತದೆ. ನೀವು ಎಲ್ಲ ಬ್ಯಾಡ ಹ್ಯಾಬಿಟ್ಸಗಳಿಗೆ ಹಾಗೂ ನೆಗೆಟಿವ್ ಥಾಟ್ಸಗಳಿಗೆ ಬೈ ಹೇಳಬೇಕು. ಸಣ್ಣ ಸಣ್ಣ ಬೇಬಿ ಸ್ಟೆಪ್ಸಗಳನ್ನು ಇಡುತ್ತಾ ವಿಲ್ ಪವರ್ ಅನ್ನು ಬಿಲ್ಡ್ ಮಾಡಬೇಕು ಮತ್ತೆ ಡಿಸಿಪ್ಲಿನನೊಂದಿಗೆ ಬದುಕಬೇಕು.

The Monk Who Sold His Ferrari by Robin Sharma Book Summary in Kannada

Life Lesson - 05: Respect Your Time 

                        ನೀವು ನಿಮ್ಮ ಟೈಮಿಗೆ ರೆಸ್ಪೆಕ್ಟನ್ನ ಕೊಡಬೇಕು. ಏಕೆಂದರೆ ಟೈಮ್ Most Precious Commodity ಆಗಿದೆ ಮತ್ತೆ ಇದು Non-Renewable ಆಗಿದೆ. ಅದಕ್ಕಾಗಿ ನೀವು ನಿಮ್ಮ ಸಮಯಕ್ಕೆ ಗೌರವ ಕೊಡಬೇಕು. ನಿಮ್ಮ ಪ್ರಿಯೋರಿಟಿಗಳ ಮೇಲೆ ಫೋಕಸ್ ಮಾಡಬೇಕು. 80-20 ರೂಲ್ ಫಾಲೋ ಮಾಡಿ, No ಹೇಳೋಕೆ ಕಲಿಯಿರಿ. ಮತ್ತೆ ನಿಮ್ಮ ಟೈಂನ್ನು ಸರಿಯಾಗಿ ಮ್ಯಾನೇಜ್ ಮಾಡಿ. ಇದರಿಂದ ನಿಮ್ಮಿಷ್ಟದ ಎಲ್ಲ ಕೆಲಸಗಳನ್ನು ಮಾಡೋಕೆ ನಿಮಗೆ ಟೈಮ್ ಸಿಗುತ್ತೆ. Visit to Roaringbusinessschool.com to Learn Time Management Skills. 

The Monk Who Sold His Ferrari by Robin Sharma Book Summary in Kannada

Life Lesson - 06: Selflessly Serve Others 

                   ನಿಮಗೆ ಎಷ್ಟು ಸಾದ್ಯವಾಗುತ್ತೋ ಅಷ್ಟು ನೀವು ಬೇರೆಯವರಿಗೆ ನಿಸ್ವಾರ್ಥದಿಂದ ಸಹಾಯ ಮಾಡಬೇಕು. ನೀವು ಯಾಕೆ ಈ ಭೂಮಿ ಮೇಲೆ ಹುಟ್ಟಿದಿರಿ ಎಂಬುದನ್ನ ನೀವು ಯೋಚಿಸಬೇಕು. ನೀವು ಬರಿಗೈಯಲ್ಲಿ ಬಂದು ಬರಿಗೈಯಲ್ಲಿ ಹೋಗ್ತೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ನೀವು Kind ಆಗಬೇಕು, Needy Peoplesಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಬೇರೆಯವರಿಗೆ ಸಹಾಯ ಮಾಡುವುದರಿಂದ ನಿಮಗೂ ಕೂಡ ಬಹಳಷ್ಟು ಸಹಾಯವಾಗುತ್ತದೆ. ನಿಮ್ಮನ್ನು ನೀವು ಅಪ್ಗ್ರೇಡ್ ಮಾಡಿಕೊಂಡು ಒಂದು ಗ್ರೇಟ್ ಲೆವೆಲಗೆ ಹೋಗೋಕೆ ಇದು ಹೆಲ್ಪ್ ಮಾಡುತ್ತೆ. ನಿಮ್ಮ ನೇಮ್ ಫೇಮ್ ನೆಟ್ವರ್ಕ್ ಬೆಳೆಯುತ್ತೆ. ನಿಮಗೆ Rich Relationshipಗಳು ಸಿಗುತ್ತವೆ. ಅದಕ್ಕಾಗಿ ನೀವು ನಿಮ್ಮಿಂದ ಎಷ್ಟು ಸಾದ್ಯವಾಗುತ್ತೋ ಅಷ್ಟು ಬೇರೆಯವರಿಗೆ ನಿಸ್ವಾರ್ಥದಿಂದ ಸಹಾಯ ಮಾಡಬೇಕು.

The Monk Who Sold His Ferrari by Robin Sharma Book Summary in Kannada

Life Lesson - 07: Live in the Present 

               ನೀವು ಪ್ರಸೆಂಟನಲ್ಲಿ ಬದುಕಬೇಕು. Forget the Past & Plan for Future. But Don't worry too much. Live Every Moment. ನೀವು ಪ್ರತಿಯೊಂದು ಕ್ಷಣವನ್ನು ಬದುಕಬೇಕು. ಪ್ರತಿಯೊಂದು ದಿನವನ್ನು ನೀವು ಇದು ನಿಮ್ಮ ಕೊನೆ ದಿನ ಎಂಬಂತೆ ಬದುಕಬೇಕು. Live each day as your last day. ಹ್ಯಾಪಿನೆಸ್ ಅನ್ನೊದು ಒಂದು ಡೆಸ್ಟಿನೇಷನ್ ಅಲ್ಲ, ಅದೊಂದು ಜರ್ನಿಯಾಗಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಮತ್ತೆ ಪ್ರಸೆಂಟನಲ್ಲಿ ಬದುಕಬೇಕು.

The Monk Who Sold His Ferrari by Robin Sharma Book Summary in Kannada

             Enlightened Livingಗಾಗಿ, Mental Peaceಗಾಗಿ, Self-Disciplineಗಾಗಿ, ಒಂದು Meaningful ಲೈಫನ್ನು ಲೀಡ್ ಮಾಡುವುದಕ್ಕಾಗಿ ನೀವು ಈ 7 ಟಿಪ್ಸ ಫಾಲೋ ಮಾಡಬಹುದು. ಇದಿಷ್ಟು ಈ ಪುಸ್ತಕದ ಶಾರ್ಟ್ ಸಮರಿ. ಧನ್ಯವಾದಗಳು.... 



Blogger ನಿಂದ ಸಾಮರ್ಥ್ಯಹೊಂದಿದೆ.