ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನಗಳು - Speeches Of Shri Siddheshwar Swamiji Bijapur - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನಗಳು - Speeches Of Shri Siddheshwar Swamiji Bijapur

ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನಗಳು - Speeches Of Shri Siddheshwar Swamiji Bijapur

                         ನಮಸ್ತೆ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ನನಗೆ ಸೆಕೆಂಡ್ ಹ್ಯಾಂಡ್ಸ್ ಬುಕ್ಸ್ ಸೇಲ್ಸನಲ್ಲಿ ಬಹಳಷ್ಟು ಒಳ್ಳೊಳ್ಳೆ ಬುಕ್ಸ್ ಸಿಕ್ಕಿದ್ದವು. ಅದರಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನಗಳ ಸಂಗ್ರಹ ಪುಸ್ತಕಗಳು ಸಹ ಇದ್ದವು. ಮುಖ್ಯವಾಗಿ ಬದುಕು, ಮನೆಯೊಡೆಯ, ಮತ್ತು ಮಹಾಬೆಳಕು ಪುಸ್ತಕಗಳು. ಇವುಗಳನ್ನು ನಾನು ಟ್ರಾವೆಲ್ ಮಾಡ್ತಾ ಓದಿ ಮುಗಿಸಿದೆ. ಇವುಗಳಿಂದ ಬಹಳಷ್ಟು ಗ್ರೇಟ್ ಲೈಫ್ ಲೆಸೆನ್ಸ್ ಕಲಿಯೋಕೆ ಸಿಕ್ಕವು. ಅವು ಇಂತಿವೆ... 

ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನಗಳು - Speeches Of Shri Siddheshwar Swamiji Bijapur

01) ನಮ್ಮ ಬದುಕು ಒಂದು ನಿರಂತರ ಹರಿಯುವ ಪ್ರವಾಹ. ಇದನ್ನು ನಿಲ್ಲಿಸಲು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ನಾವು ನಮ್ಮ ಬದುಕನ್ನು ಅನುಭವಿಸಬೇಕು. ಬರೀ ಕೂಡಿಡುವುದರಲ್ಲೇ ಜೀವನ ಕಳೆದರೆ ಕೂಡಿಟ್ಟಿರುವುದನ್ನು ಅನುಭವಿಸುವುದು ಯಾವಾಗ? ನಿಮ್ಮತ್ರ ಇರುವದನ್ನ ಅನುಭವಿಸುವ ಕಲೆ ನಿಮ್ಮಲ್ಲಿರಬೇಕು. ಆ ಕಲೆ ಇರದಿದ್ದರೆ ನಿಮ್ಮತ್ರ ಸ್ವರ್ಗವಿದ್ದರೂ ಅದು ನರಕವೇ.

02) ನೀವು ನಿಜವಾಗಿಯೂ ಶ್ರೀಮಂತರಾಗಬೇಕೆಂದರೆ ನೀವು ನಿಜವಾಗಿಯೂ ಬಡವರಾಗಬೇಕು. ಅಂದರೆ ನೀವು ಹಣ, ಆಸ್ತಿ ಪಾಸ್ತಿ, ಸೌಂದರ್ಯ, ಸಂಪತ್ತು, ಬಂಗಾರ, ಪದವಿ, ಪ್ರತಿಷ್ಟೆಗಳ ವ್ಯಾಮೋಹದಿಂದ ಹೊರಬರಬೇಕು. ಸುಖ ಶಾಂತಿ ನೆಮ್ಮದಿ ತ್ಯಾಗ ಸಂತ್ರಪ್ತಿಗಳನ್ನು ಅಪ್ಪಿಕೊಳ್ಳಬೇಕು. ಬಾಹ್ಯ ಸಿರಿತನಕ್ಕಿಂತ ಆಂತರಿಕ ಸಿರಿತನಕ್ಕೆ ಪ್ರಾಮುಖ್ಯತೆ ಕೊಡಬೇಕು. ಆದರೆ ಇದನ್ನು ಎಲ್ಲರೂ ನಿರ್ಲಕ್ಷಿಸಿದ್ದಾರೆ. ಎಲ್ಲರೂ ತಮ್ಮ ಮಕ್ಕಳು ಡಾಕ್ಟರ್ಸ, ಇಂಜಿನಿಯರ್ಸ, ಲಾಯರ್ಸ, ಪೋಲಿಸ್ ಆಗಲಿ ಅಂತಾ ಹಂಬಲಿಸುತ್ತಾರೆ. ಆದರೆ ಯಾರು ಕೂಡ ತಮ್ಮ ಮಕ್ಕಳು ಗುಣವಂತರಾಗಲಿ, ಹ್ರದಯವಂತರಾಗಲಿ ಅಂತಾ ಹಂಬಲಿಸಲ್ಲ.

03) ಇಷ್ಟು ಸಾಕು ಎನ್ನುವ ಮಂತ್ರವು ಜೀವನ ಸಿದ್ಧಿಗೆ ಹಾಗೂ ಸಂತಸಕ್ಕೆ ಕಾರಣವಾಗಿದೆ. ಇನ್ನಷ್ಟು ಬೇಕು ಎನ್ನುವುದು ನಿಮ್ಮ ಜೀವನದ ವೈಫಲ್ಯಕ್ಕೆ ಅಸಂತೋಷಕ್ಕೆ ಕಾರಣವಾಗಿದೆ. ಸಾಕು ಎಂದವನೇ ಸಿರಿವಂತ, ಬೇಕು ಎಂದವನೇ ಬಡವ. ಅದಕ್ಕಾಗಿ ನಿಮ್ಮ ಬದುಕಿಗೆ ಬೇಕಾಗಿರುವುದೆಲ್ಲ ಸಿಕ್ಕಾಗ ಇಷ್ಟು ಸಾಕು ಎಂದೇಳುವುದನ್ನ ಕಲಿಯಿರಿ.

04) ನಿಮ್ಮತ್ರ ಹ್ರದಯ ಸಿರಿವಂತಿಕೆ ಇರಬೇಕು. ನೀವು ಅರಮನೆಯಲ್ಲಿದ್ದರೂ ನಿಮ್ಮ ಮನಸ್ಸು ವಿಶಾಲವಾಗಿರದಿದ್ದರೆ ನೀವು ಬಡವರೇ. ಅದೇ ನೀವು ಗುಡಿಸಲಿನಲ್ಲಿದ್ದರೂ ನಿಮ್ಮ ಮನಸ್ಸು ವಿಶಾಲವಾಗಿದ್ದರೆ ನೀವು ಶ್ರೀಮಂತರೇ.

05) ಬಡವರಿರಲಿ ಶ್ರೀಮಂತರಿರಲಿ ಎಲ್ಲರೂ ತಮ್ಮ ಬದುಕಲ್ಲಿ ಸುಖ ಶಾಂತಿ ಸಮಾಧಾನವನ್ನೇ ಹುಡುಕುತ್ತಿದ್ದಾರೆ. ಇದು ಸಿಕ್ಕಾಗಲೇ ಎಲ್ಲರ ಬದುಕು ಸಾರ್ಥಕ. ಅದಕ್ಕಾಗಿ ಸಜ್ಜನರ ಸಂಗ ಮಾಡಬೇಕು. ಅಳುವವರ ಕೂಡಿ ಅಳೊದಕ್ಕಿಂತ ನಗುವವರ ಕೂಡಿ ನಗುವುದು ಒಳ್ಳೆಯದು. ನಾವು ಸಜ್ಜನರ ಸಂಗ ಮಾಡಿದರೆ ನಮ್ಮ ಬದುಕಿನ ಅಂಗಳದಲ್ಲಿ ಸಂತಸದ ಹೂವು ತಾನಾಗಿಯೇ ಅರಳುತ್ತದೆ. ಶಾಂತಿಯ ಸುಗಂಧವನ್ನು ಸೂಸುತ್ತದೆ. ನಮ್ಮಲ್ಲಿ ಸದ್ಭಾವನೆಗಳು ಮೂಡುತ್ತವೆ.

06) ಜಗತ್ತು ಸಂಪದ್ಭರಿತವಾಗಿದೆ. ಅದಕ್ಕಾಗಿಯೇ ಇದಕ್ಕೆ ವಸುಧಾ ಎನ್ನುತ್ತಾರೆ. ವಸು ಎಂದರೆ ಸಂಪತ್ತು. ಇಲ್ಲಿರುವ ಹೂ ಬಳ್ಳಿ,  ಗಿಡ ಮರ, ಪಶು ಪಕ್ಷಿ, ಹಳ್ಳ ಕೊಳ್ಳ ನದಿ ಸಮುದ್ರ, ಕಾಡು, ರವಿ ತಾರೆ ಎಲ್ಲವೂ ಸಂಪತ್ತೇ ಆಗಿದೆ. ಆದರೆ ನಾವು ಬೆಳ್ಳಿ ಬಂಗಾರ ಮುತ್ತು ರತ್ನ ಹಣವನ್ನಷ್ಟೇ ಸಂಪತ್ತು ಎಂದು ನಂಬಿದ್ದೇವೆ. ಬೆಳ್ಳಿ ಬಂಗಾರದಿಂದ ಜೀವಜಲ ಹರಿಯುವುದಿಲ್ಲ, ಮುತ್ತು ರತ್ನಗಳಿಂದ ಪ್ರಾಣವಾಯು ಬೀಸುವುದಿಲ್ಲ. ಹೀಗಾಗಿ ನಿಸರ್ಗವೇ ನಿಜವಾದ ಸಂಪತ್ತು...

07) ನಮ್ಮ ಈ ದೇಹ ಒಂದು ಸುಂದರ ಮನೆಯಾಗಿದೆ. ಇದು ನಡೆದಾಡುವ, ಮಾತನಾಡುವ ನಕ್ಕು ನಲಿಯುವ ಮುದ್ದಿನ ಮನೆಯಾಗಿದೆ. ದೇವರು ಜಗತ್ತಿಗೆ ಒಡೆಯನಾದರೆ ನಾವು ಈ ಮನೆಯೊಡೆಯರಾಗಿದ್ದೇವೆ. ಹೀಗಾಗಿ ನಮ್ಮೀ ಮನೆಯನ್ನು ನಿತ್ಯನೂತನವಾಗಿ, ಸ್ವಚ್ಛ ಸುಂದರವಾಗಿ ಇಟ್ಟುಕೊಂಡು ಜಾಣತನದಿಂದ ಜಾಗ್ರತೆಯಿಂದ ಬದುಕಿದರೆ ಅದುವೇ ಸಮ್ರದ್ಧ ಜೀವನ...

08) ನಾವು ನಮ್ಮ ಜೀವನದಲ್ಲಿ ಮಾಡುವುದೆಲ್ಲವು ಸುಖಕ್ಕಾಗಿಯೇ. ಆದರೆ ಯಾವ ಸುಖವೂ ಶಾಶ್ವತವಲ್ಲ. ಸುಖ ಬರುತ್ತೆ ಹೋಗುತ್ತೆ. ಇದು ನಮಗೆ ಅರಿವಾದರೆ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ.

09) ಶಿಕ್ಷಣ ಎಂದರೆ ಬರೀ ತಲೆ ತುಂಬೋದಲ್ಲ, ಕೈ ತುಂಬೋದಲ್ಲ, ಎದೆ ತುಂಬೋದು. ಎದೆ ಯಾವತ್ತೂ ಬತ್ತಬಾರದು. ಅಂದರೆ ಹ್ರದಯ ಶ್ರೀಮಂತಿಕೆ ಯಾವತ್ತೂ ಸಾಯಬಾರದು.

10) ಮನೆಯನ್ನು ಇಟ್ಟಿಗೆ ಕಲ್ಲುಗಳಿಂದ ಕಟ್ಟುತ್ತೇವೆ, ಬದುಕನ್ನು ಭಾವನೆಗಳಿಂದ ಕಟ್ಟಬೇಕು, ಎಲ್ಲದಕ್ಕೂ ಎದೆ ಬೇಕು. ಅದನ್ನು ಬಳಸಬೇಕು.

11) ನಾಯಿಗಳು ನಿಷ್ಟೆಯನ್ನು ಹೊಂದಿವೆ, ಅವು ನಿಸ್ವಾರ್ಥವಾಗಿ ಮನುಷ್ಯರನ್ನು ಪ್ರೀತಿಸುತ್ತವೆ. ಆದರೆ ಮನುಷ್ಯರ ಪ್ರೀತಿ ಹಂಗಲ್ಲ, ಮನುಷ್ಯರ ಪ್ರೀತಿಯಲ್ಲಿ ನಿಸ್ವಾರ್ಥಕ್ಕಿಂತ ಹೆಚ್ಚಾಗಿ ಸ್ವಾರ್ಥವಿರುತ್ತದೆ, ಸಾಕಷ್ಟು ಲೆಕ್ಕಾಚಾರಗಳಿರುತ್ತವೆ. Our Love depends on profit & loss.

12) ಉತ್ಸಾಹ, ಸಂಕಲ್ಪ ಮತ್ತು ತ್ಯಾಗ ಇವು ಯಶಸ್ಸಿನ ೩ ಮೂಲ ಸೂತ್ರಗಳಾಗಿವೆ. 

                    ಇವಿಷ್ಟು ಜೀವನಪಾಠಗಳು ನನಗೆ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನಗಳಿಂದ ಕಲಿಯೋಕೆ ಸಿಕ್ಕಿವೆ. ನಿಮಗೆ ಇವು ಇಷ್ಟವಾದರೆ ನೀವು ಫಾಲೋ ಮಾಡಬಹುದು. ಆಲ್ ದ್ ಬೆಸ್ಟ್... 

ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರವಚನಗಳು - Speeches Of Shri Siddheshwar Swamiji Bijapur

Blogger ನಿಂದ ಸಾಮರ್ಥ್ಯಹೊಂದಿದೆ.