ಡಾ.ಎ.ಪಿ.ಜೆ.ಅಬ್ದುಲ್ ಕಲಾಮರ Top 10 Success ಸೂತ್ರಗಳು - Top 10 Success Tips of APJ Abdul Kalam in Kannada
ಡಾ.ಎ.ಪಿ.ಜೆ. ಅಬ್ದುಲ್ ಕಲಾಮರು ಭಾರತ ಕಂಡ ಅಚ್ಚುಮೆಚ್ಚಿನ ಪ್ರಾಧ್ಯಾಪಕ, ವಿಜ್ಞಾನಿ ಹಾಗೂ ರಾಷ್ಟ್ರಪತಿಯಾಗಿದ್ದಾರೆ. ನವಯುವಕರಿಗೆ ಅವರೊಂದು ಸ್ಪೂರ್ತಿಯ ಸೆಲೆ. ಅವರು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ರಾಜಕಾರಣಿಗಳಿಗೆ ಅತೀ ದೊಡ್ಡ ಮಾದರಿ ವ್ಯಕ್ತಿಯಾಗಿದ್ದಾರೆ. ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸುತ್ತೇನೆ ಎನ್ನುವವರಿಗೆ ಅವರೊಂದು ದಾರಿದೀಪ. ಅವರ ಕೊಡುಗೆಗಳು ಅಖಂಡ ಭಾರತ ದೇಶ ಹೆಮ್ಮೆ ಪಡುವಂತೆ ಮಾಡಿವೆ. ಭಾರತದ ಯುವಜನತೆ ಅವರ ತತ್ವಾದರ್ಶಗಳನ್ನು ಅನುಸರಿಸಿ ಅವರಂತೆ ಕೊಡುಗೆಗಳನ್ನು ನೀಡಬೇಕಾಗಿದೆ. ಸಾಧಕರಿಗೆ ಅಬ್ದುಲ್ ಕಲಾಮರು ಶಿಕ್ಷಕರಿದ್ದಂತೆ. ಅವರ ಆತ್ಮಕಥೆಯಾದ Wings of Fire ನಲ್ಲಿ ಹಲವಾರು ಸ್ಪೂರ್ತಿದಾಯಕ ಚಿಂತನೆಗಳು ಹಾಗೂ ಸಾವಿರಾರು ನುಡಿಮುತ್ತುಗಳಿವೆ. ಅವರಲ್ಲಿದ್ದ ಸರಳತೆ ಅವರನ್ನು ಮಹಾನ್ ಸಾಧಕನನ್ನಾಗಿಸಿದೆ. ಅವರ ಹತ್ತಿರ 2500 ಪುಸ್ತಕಗಳು, ಒಂದು ವೀಣೆ, ಕೆಲವು ಬಟ್ಟೆಗಳು ಹಾಗೂ ಎರಡು ಜೊತೆ ಪಾದರಕ್ಷೆಗಳನ್ನು ಬಿಟ್ಟರೆ ಇನ್ಯಾವುದೇ ಬೆಲೆಬಾಳುವ ವಸ್ತುಗಳಿರಲಿಲ್ಲ. ಅವರ ಬಳಿ TV, AC ಅಥವಾ ಕಾರ್ ಯಾವುದು ಇರಲಿಲ್ಲ. ಅವರ ಮೇರು ವ್ಯಕ್ತಿತ್ವ ಹಾಗೂ ಸರಳ ಸಜ್ಜನಿಕೆಯನ್ನು ಸಾಬೀತುಪಡಿಸಲು ಇಷ್ಟು ಸಾಕು. ಅವರನ್ನು ನೋಡಿ ಇವತ್ತಿನ ಶಿಕ್ಷಕರು ಹಾಗೂ ರಾಜಕಾರಣಿಗಳು ಕಲಿಯುವುದು ಸಾಕಷ್ಟಿದೆ.
ಡಾ.ಎ.ಪಿ.ಜೆ.ಅಬ್ದುಲ್ ಕಲಾಮರ Top 10 Success ಸೂತ್ರಗಳು ಇಂತಿವೆ ;
1) ನಿಮ್ಮ ಕನಸುಗಳನ್ನು ಹಿಂಬಾಲಿಸಿ :
ಇಷ್ಟವಿಲ್ಲದ ವಿಷಯದಲ್ಲಿ ಒತ್ತಾಯದ ಮೇರೆಗೆ ಓದುವುದು ಅಥವಾ ಇಷ್ಟವಿಲ್ಲದ ಕೆಲಸವನ್ನು ಕಾಟಾಚಾರಕ್ಕೆ ಮಾಡುವುದು ಇವೆಲ್ಲ ನಿಮ್ಮ ಕನಸುಗಳ ಕೊಲೆಯಾಗಲು ಮುನ್ನುಡಿ ಬರೆಯುತ್ತವೆ. ಯಾವುದೇ ಕಾರಣಕ್ಕೂ ನಿಮ್ಮ ಕನಸುಗಳನ್ನು ಕೊಲ್ಲದಿರಿ. ನಿದ್ರಿಸುವಾಗ ಕಾಣುವ ಕನಸು ಕನಸೇ ಅಲ್ಲ. ಯಾವುದಕ್ಕಾಗಿ ನಾವು ನಿದ್ದೆಗೆಟ್ಟು ಕಾಯುತ್ತೇವೆಯೋ ಅದು ನಿಜವಾದ ಕನಸು. ನೀವು ಏನಾದರೂ ಒಂದನ್ನು ಸಾಧಿಸುವ ಬಯಕೆ ಹೊಂದಿದ್ದರೆ ಮೊದಲು ಈಗಲೇ ಕನಸು ಕಾಣಲು ಪ್ರಾರಂಭಿಸಿ. ಆ ಕನಸುಗಳ ಈಡೇರಿಕೆಗೆ ಸ್ವಲ್ಪವಲ್ಲ, ಸ್ವಲ್ಪ ಜಾಸ್ತಿನೇ ಕಷ್ಟ ಪಡಿ. ಇಷ್ಟಪಟ್ಟಿದ್ದು ಸಿಗಬೇಕೆಂದರೆ ಕಷ್ಟಪಡಲೇಬೇಕಲ್ಲವೆ?
2) ಯಾವಾಗಲೂ ಏನಾದರೂ ಒಂದನ್ನು ಕಲಿಯಲು ಉತ್ಸುಕರಾಗಿರಿ :
ಜೀವನದಲ್ಲಿ ಯಾವಾಗಲೂ ಹೊಸ ಹೊಸ ವಿಚಾರಗಳನ್ನು ಹಾಗೂ ವಿಷಯಗಳನ್ನು ಕಲಿಯುತ್ತಲೇ ಇರಬೇಕು. ಸದಾ ಕಲಿಯುತ್ತಲೇ ಇರುವುದರಿಂದ ನಿಮ್ಮ ಕ್ರಿಯಾಶೀಲತೆ ಬೆಳೆಯುತ್ತದೆ. ನಿಮ್ಮ ಕ್ರಿಯಾಶೀಲತೆ ಬೆಳೆದಾಗ ನಿಮ್ಮಲ್ಲಿ ಹೊಸಹೊಸ ಯೋಚನೆಗಳು ಬರುತ್ತವೆ. ಈ ಯೋಚನೆಗಳು ನಿಮಗೆ ಜ್ಞಾನವನ್ನು ನೀಡುತ್ತವೆ. ಜ್ಞಾನ ನಿಮಗೆ ಸಮಾಜದಲ್ಲಿ ಒಂದು ಶ್ರೇಷ್ಠವಾದ ಸ್ಥಾನವನ್ನು ತಂದುಕೊಡುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಲಿಯುವುದನ್ನು ನಿಲ್ಲಿಸದಿರಿ. ಸದಾ ಕಲಿಯುತ್ತಲೇ ಇರಿ.
3) ನೀವು ನೀವಾಗಿರಲು ಪ್ರಯತ್ನಿಸಿ :
ನೀವು ನೀವಾಗಿರಲು ಹೋರಾಡಬೇಕು. ಬೇರೆಯವರಂತಾಗಬಾರದು. ನಿಮಗೆ ನಿಮ್ಮದೇ ಆದ ಒಂದು ವಿಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇರಬೇಕು. ನೀವು ನಿಮ್ಮ ಸಾಧನೆಗಾಗಿ ಒಂದು ಹೊಸ ಮಾರ್ಗವನ್ನು ನಿರ್ಮಿಸಿಕೊಂಡು ಮುಂದೆ ಸಾಗಬೇಕು. ಬೇರೆಯವರನ್ನು ಅನುಸರಿಸಿ ಕುರುಡು ದಾರಿಯಲ್ಲಿ ಹೋಗಬಾರದು. ನೀವು ಯಶಸ್ವಿಯಾಗಬೇಕಾದರೆ ನೀವು ನೀವಾಗಿರಬೇಕು.
4) ನಿಮ್ಮ ಕೊರತೆಗಳನ್ನು ಮುರಿದು ಹಾಕಿ :
ನಿಮ್ಮ ಕುಂದು ಕೊರತೆಗಳ ಬಗ್ಗೆ ತಲೆಕೆಡಿಸಿಕೊಂಡು ಕಾಲಹರಣ ಮಾಡಬೇಡಿ. ನಿಮ್ಮಲ್ಲಿ ಒಂದು ಉನ್ನತವಾದ ದೂರದೃಷ್ಟಿ ಇರಬೇಕು. ನೀವು ಸದಾ ಜ್ಞಾನವನ್ನು ಸಂಪಾದಿಸಲು ಹಂಬಲಿಸಬೇಕು. ಸತತ ಪರಿಶ್ರಮಗಳಿಂದ ಬಯಸಿದ್ದನ್ನು ಪಡೆಯಲು ಕಷ್ಟ ಪಡಬೇಕು. ಕಷ್ಟಗಳಿಗೆ ಹೆದರಿ ದೂರ ಓಡಬಾರದು. ಜಗತ್ತಿನ ಊಹೆಗಳನ್ನು ಮೀರಿ ಹೊಸದನ್ನು ನೀವು ಸಾಧಿಸಬೇಕು. ನಿಮ್ಮ ಇತಿಮಿತಿಗಳನ್ನು ಮುರಿದಾಕಿ ಊಹೆಗೂ ಮೀರಿದನ್ನು ಸಾಧಿಸಿ. ನಿಮ್ಮ ಸಾಧನೆ ಹಾಗೂ ಸಂಶೋಧನೆಗಳಿಂದ ಜಗತ್ತನ್ನು ಬದಲಿಸಿ.
5) ಒಗ್ಗಟ್ಟಿನಿಂದ ಕೆಲಸ ಮಾಡಿ :
ಒಗ್ಗಟ್ಟಿನಲ್ಲಿರುವ ಬಲ ನಿಮಗೆ ಗೊತ್ತೆ ಇದೆ. ತಾಳ್ಮೆ, ಶಾಂತಿ, ಸಂಯಮ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡಿ ಯಶಸ್ವಿಯಾಗಿರಿ.
6) ಫಲಿತಾಂಶವನ್ನು ಊಹಿಸಿ :
ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲೇ ಅದರ ಫಲಿತಾಂಶವನ್ನು ಊಹಿಸಿ. ಕೆಲಸವನ್ನು ಶುರುಮಾಡುವ ಮೊದಲು ನಿಮ್ಮ ಸಾಮರ್ಥ್ಯವನ್ನು ಅಂದಾಜಿಸಿ, ಸರಿಯಾದ ರೂಪರೇಷೆಯೊಂದಿಗೆ ಮುನ್ನುಗ್ಗಿ.
7) ಸೋಲನ್ನು ನಿಭಾಯಿಸುವುದನ್ನು ಕಲಿಯಿರಿ :
ಯಶಸ್ಸನ್ನು ಸದಾ ಕಾಲ ಸಂಭಾಳಿಸುವ ಮಹದಾಸೆಯನ್ನು ಹೊಂದಿದ್ದರೆ, ನೀವು ಮೊದಲು ಸೋಲನ್ನು ಸರಿಯಾಗಿ ನಿಭಾಯಿಸುವುದನ್ನು ಕಲಿಯಬೇಕು. ಸೋಲಿನಿಂದ ಕುಗ್ಗದೆ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಸಾಧನೆಯತ್ತ ಸಾಗಬೇಕು. ಸೋಲು ಯಶಸ್ಸಿನ ಮೊದಲ ಮೆಟ್ಟಿಲು ಎಂಬ ಮಾತು ನಿಮಗೆ ಸದಾ ನೆನಪಿರಬೇಕು.
8) ಸದಾ ಶಾಂತಚಿತ್ತದಿಂದ ವರ್ತಿಸಬೇಕು :
ಅಶಾಂತ ಹಾಗೂ ಚಂಚಲ ಸ್ವಭಾವ ನಿಮ್ಮಲ್ಲಿದ್ದರೆ ಯಶಸ್ಸು ನಿಮ್ಮ ಸಮೀಪಕ್ಕೆ ಸುಳಿಯುವುದಿಲ್ಲ. ಆದಕಾರಣ ಸದಾ ಶಾಂತಚಿತ್ತದಿಂದ ವರ್ತಿಸಿ. ನೀವು ಶಾಂತಚಿತ್ತದಿಂದ ಸಂತೋಷವಾಗಿರಬೇಕಾದರೆ ನಿಮ್ಮ ನಗು ಹಾಗೂ ಒಳ್ಳೆಯ ಮಾತುಗಳನ್ನು ಹಂಚಲು ಮುಂದಾಗಿ.
9) ನಿಮ್ಮ ಕೆಲಸವನ್ನು ಪ್ರೀತಿಸಿ :
ಯಾವುದೇ ಕಾರಣಕ್ಕೂ ನಿಮ್ಮ ಕೆಲಸವನ್ನು ಕೀಳಾಗಿ ಕಾಣಬೇಡಿ. ನಿಮ್ಮ ಕೆಲಸವನ್ನು ಪ್ರೀತಿಸಿ. ಆಲಸ್ಯವನ್ನು ಸಾಯಿಸಿ ಸದಾ ಕ್ರಿಯಾಶೀಲರಾಗಿರಿ. ನಿಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ. ನಿಮ್ಮ ಕೆಲಸವನ್ನು ಇಷ್ಟಪಟ್ಟು ಮಾಡಿದರೆ, ಮುಂದೊಂದು ದಿನ ಕಷ್ಟಪಡುವ ಅವಶ್ಯಕತೆ ಇರುವುದಿಲ್ಲ.
10) ಶಿಕ್ಷಕರಾಗಿರಿ ಹಾಗೂ ಇತರರನ್ನು ಹುರಿದುಂಬಿಸಿ :
ನೀವು ಶಿಕ್ಷಕರಾಗಿರಿ. ನಿಮ್ಮಲ್ಲಿರುವ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಿ. ಯಾವಾಗಲೂ ಇತರರನ್ನು ಹುರಿದುಂಬಿಸಿ. ಸಾಧಿಸಲು ಹೋರಟವರಿಗೆ ಸ್ಪೂರ್ತಿ ತುಂಬಿ.
ಈ ಅಂಕಣವನ್ನು ಇಷ್ಟಪಟ್ಟು ಓದಿದ್ದಕ್ಕೆ ಧನ್ಯವಾದಗಳು. ನಿಮ್ಮ ಕನಸುಗಳೆಲ್ಲವು ನನಸಾಗಲಿ. ನೀವು ಕೂಡ ಓರ್ವ ಯಶಸ್ವಿ ವ್ಯಕ್ತಿಯಾಗಿ ನಮ್ಮ ದೇಶಕ್ಕೆ ಕೊಡುಗೆಗಳನ್ನು ನೀಡುವಂತಾಗಲಿ ಎಂಬ ಹಾರೈಕೆ ನಮ್ಮದು. All the Best.... ಇನ್ನೂ ಹೆಚ್ಚಿನ ಚಿಂತನೆಗಳಿಗಾಗಿ, ಕಥೆಗಳಿಗಾಗಿ ನನ್ನ ಫೇಸಬುಕ್ ಪೇಜನ್ನು ಲೈಕ್ ಮಾಡಿ. ನೀವು ನಿಮ್ಮ ಜೀವನದಲ್ಲಿ ಮಹತ್ತರವಾದದ್ದನ್ನು ಸಾಧಿಸಲೇಬೇಕು, ಸಾಧಿಸಿಯೇ ಸಾಯುತ್ತೇನೆ ಎಂಬ ನಂಬಿಕೆ ನಿಮ್ಮಲಿದ್ದರೆ ಮಾತ್ರ ಈ ಅಂಕಣವನ್ನು ಶೇರ್ ಮಾಡಿ. ಒಳ್ಳೆಯದಾಗಲಿ...