Dr. A.P.J. ಅಬ್ದುಲ್ ಕಲಾಂರ 50 ನುಡಿಮುತ್ತುಗಳು - 50 Best Quotes of Dr. A.P.J. Abdul Kalam in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

Dr. A.P.J. ಅಬ್ದುಲ್ ಕಲಾಂರ 50 ನುಡಿಮುತ್ತುಗಳು - 50 Best Quotes of Dr. A.P.J. Abdul Kalam in Kannada

Dr. A.P.J.  ಅಬ್ದುಲ್ ಕಲಾಂರ ನುಡಿಮುತ್ತುಗಳು - 50 Best Quotes of Dr. A.P.J. Abdul Kalam in Kannada

೧) ಮನುಷ್ಯನಿಗೆ ಜೀವನದಲ್ಲಿ ಬಹಳಷ್ಟು ಸಂಕಷ್ಟಗಳು ಬೇಕಾಗುತ್ತವೆ. ಏಕೆಂದರೆ ಯಶಸ್ಸನ್ನು ಸಂಭ್ರಮಿಸಲು ಅವು ಬೇಕಾಗುತ್ತವೆ...
Best Quotes of Dr. A.P.J. Abdul Kalam in Kannada
೨) ವೈಫಲ್ಯ ಎಂಬ ರೋಗವನ್ನು ಕೊಲ್ಲಲು ಆತ್ಮ ವಿಶ್ವಾಸ ಮತ್ತು ಕಠಿಣ ಕೆಲಸಗಳು ಅತ್ಯುತ್ತಮ ಔಷಧಿಗಳಾಗಿವೆ.
Best Quotes of Dr. A.P.J. Abdul Kalam in Kannada
೩) ನಿಮ್ಮ ಜೀವನದಲ್ಲಿ ಏನೇ ಏರುಪೇರಾದರೂ ಆಲೋಚನೆಯೇ ನಿಮ್ಮ ಮೂಲ ಬಂಡವಾಳ ಮತ್ತು ಆಸ್ತಿಯಾಗಿರಬೇಕು.
Best Quotes of Dr. A.P.J. Abdul Kalam in Kannada
೪) ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ ಸೋಲು ಎಂದಿಗೂ ನಿಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ...
Best Quotes of Dr. A.P.J. Abdul Kalam in Kannada
೫) ನೀವು ವಿಫಲರಾದರೆ ಯಾವುದೇ ಕಾರಣಕ್ಕೂ ವಿಚಲಿತರಾಗಬೇಡಿ. ಏಕೆಂದರೆ Fail ಎಂದರೆ First Attempt in Learning ಎಂದರ್ಥ. End ಎಂದರೆ Effort Never Dies ಎಂದರ್ಥ. No ಎಂದರೆ Next Opportunity ಎಂದರ್ಥ. 
Best Quotes of Dr. A.P.J. Abdul Kalam in Kannada
೬) ಸೋಲು ಯಶಸ್ಸಿನ ಮೊದಲ ಮೆಟ್ಟಿಲು. 
Best Quotes of Dr. A.P.J. Abdul Kalam in Kannada
೭) ನೀವು ನಿಮ್ಮ ಗುರಿ ತಲುಪಬೇಕಾದರೆ ನೀವು ಒಂದೇ ಮನಸ್ಥಿತಿಯಿಂದ ನಿರಂತರವಾಗಿ ಪ್ರಯತ್ನಿಸಬೇಕು. 
Best Quotes of Dr. A.P.J. Abdul Kalam in Kannada
೮) ನಿಮ್ಮ ಮೊದಲ ಗೆಲುವಿನ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ. ಏಕೆಂದರೆ ನೀವು ಎರಡನೇ ಪ್ರಯತ್ನದಲ್ಲಿ ವಿಫಲರಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟವೆಂದು ಹೀಯಾಳಿಸಲು ಬಹಳಷ್ಟು ತುಟಿಗಳು ಕಾಯುತ್ತಿರುತ್ತವೆ. 
Best Quotes of Dr. A.P.J. Abdul Kalam in Kannada
೯) ಸಾಧಿಸೆ ಸಾಧಿಸುತ್ತೇನೆ ಎಂಬ ಕಿಚ್ಚಿನ ಮನಸ್ಸಿನ ಮುಂದೆ ಯಾವುದೇ ಅಡೆತಡೆ ನಿಲ್ಲಲಾರದು...
Best Quotes of Dr. A.P.J. Abdul Kalam in Kannada
೧೦) ಕ್ರಿಯಾಶೀಲತೆ ಯಶಸ್ಸಿನ ಕೀಲಿ ಕೈಯಾಗಿದೆ...
Best Quotes of Dr. A.P.J. Abdul Kalam in Kannada
೧೧) ನಾವು ಎಲ್ಲ ತರಹದಿಂದ ಸ್ವತಂತ್ರರಾಗಿರದಿದ್ದರೆ ಯಾರು ನಮ್ಮನ್ನು ಗೌರವಿಸುವುದಿಲ್ಲ...
Best Quotes of Dr. A.P.J. Abdul Kalam in Kannada
೧೨) ಮಹಾನ ಕನಸುಗಾರರ ಕನಸುಗಳು ಯಾವಾಗಲೂ ನನಸಾಗುತ್ತವೆ...
Best Quotes of Dr. A.P.J. Abdul Kalam in Kannada
೧೩) ಯಾವುದೇ ಸಮಸ್ಯೆಗೂ ಯುದ್ಧ ಶಾಶ್ವತವಾದ ಪರಿಹಾರವಲ್ಲ...
Best Quotes of Dr. A.P.J. Abdul Kalam in Kannada
೧೪) ಅತಿಯಾದ ಸಂತಸದಿಂದ ಇಲ್ಲವೇ ಆಳವಾದ ದುಃಖದಿಂದ ಮಾತ್ರ ಕವನ ಕುಡಿಯೊಡೆಯುತ್ತದೆ...
Best Quotes of Dr. A.P.J. Abdul Kalam in Kannada
೧೫) ಸಣ್ಣ ಗುರಿಯನ್ನು ಹೊಂದುವುದು ಅಪರಾಧವಾಗಿದೆ. ಆದ್ದರಿಂದ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಿ...
Best Quotes of Dr. A.P.J. Abdul Kalam in Kannada
೧೬) ಸಮಸ್ಯೆಗೆ ನಿಮ್ಮನ್ನು ಸೋಲಿಸುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕೊಡಬೇಡಿ...
Best Quotes of Dr. A.P.J. Abdul Kalam in Kannada
೧೭) ಸೂರ್ಯನಂತೆ ಹೊಳೆಯುವ ಆಸೆ ನಿಮಗಿದ್ದರೆ ಮೊದಲು ಸೂರ್ಯನಂತೆ ಹೊತ್ತಿ ಉರಿಯುವುದನ್ನು ಕಲಿಯಿರಿ...
Best Quotes of Dr. A.P.J. Abdul Kalam in Kannada
೧೮) ಆಕಾಶದೆಡೆಗೆ ನೋಡಿ, ಯಾರು ಒಂಟಿಯಾಗಿಲ್ಲ. ಇಡೀ ವಿಶ್ವವು ನಮಗೆ ಸ್ನೇಹಪರವಾಗಿದೆ. ಕನಸು ಕಂಡು ಕೆಲಸ ಮಾಡುವವರಿಗೆ ಬಯಸಿದ್ದೆಲ್ಲವೂ ಸಿಕ್ಕೇ ಸಿಗುತ್ತದೆ...
Best Quotes of Dr. A.P.J. Abdul Kalam in Kannada
೧೯) ದೊಡ್ಡ ಗುರಿಯನ್ನು ಹೊಂದುವುದು, ನಿರಂತರವಾಗಿ ಜ್ಞಾನವನ್ನು ಪಡೆದುಕೊಳ್ಳುವುದು, ಪರಿಶ್ರಮ ಪಡುವುದು, ತಾಳ್ಮೆಯಿಂದಿರುವುದು ಈ ನಾಲ್ಕು ವಿಷಯಗಳನ್ನು ಅನುಸರಿಸಿದರೆ ನೀವು ಏನನ್ನಾದರೂ ಸಾಧಿಸಬಹುದು...
Best Quotes of Dr. A.P.J. Abdul Kalam in Kannada
೨೦) ಎಕ್ಸಲೆನ್ಸ್ ಒಂದು ನಿರಂತರ ಪ್ರಕ್ರಿಯೆ. ನೀವು ಪರಫೆಕ್ಟ್ ಆಗಬೇಕಾದರೆ ನಿರಂತರವಾಗಿ ಪ್ರಯತ್ನಿಸಬೇಕು...
Best Quotes of Dr. A.P.J. Abdul Kalam in Kannada
೨೧) ಸದಾಕಾಲ ಕ್ರಿಯಾಶೀಲರಾಗಿರಿ. ನಿಮ್ಮ ಜವಾಬ್ದಾರಿಗಳನ್ನು ನೀವೇ ಹೊತ್ತುಕೊಳ್ಳಿ. ನಿಮ್ಮ ಕನಸುಗಳಿಗಾಗಿ ಕೆಲಸ ಮಾಡಿ. ಇಲ್ಲವಾದರೆ ನೀವು ನಿಮ್ಮ ಅದೃಷ್ಟವನ್ನು ಬೇರೆಯವರಿಗೆ ಶರಣಾಗಿಸುತ್ತೀರಿ...
Best Quotes of Dr. A.P.J. Abdul Kalam in Kannada
೨೨) ಚಿಂತನೆ ನಿಮ್ಮ ಮೂಲ ಬಂಡವಾಳವಾಗಿದೆ . ನಿಮ್ಮ ಎಲ್ಲ ಸಮಸ್ಯೆಗಳ ಪರಿಹಾರ ನಿಮ್ಮ ಹಾರ್ಡ್ ವರ್ಕನಲ್ಲಿದೆ...
Best Quotes of Dr. A.P.J. Abdul Kalam in Kannada
೨೩) ನಿಮ್ಮ ಪ್ರಯತ್ನವಿಲ್ಲದೆ ನೀವು ಯಶಸ್ವಿಗಳಾಗಲು ಸಾಧ್ಯವಿಲ್ಲ. ನಿಮ್ಮ ಸಂಪೂರ್ಣ ಪ್ರಯತ್ನ ನಿಮ್ಮ ಕೆಲಸದಲ್ಲಿದ್ದರೆ ನೀವು ವಿಫಲರಾಗಲು ಸಾಧ್ಯವಿಲ್ಲ...
Best Quotes of Dr. A.P.J. Abdul Kalam in Kannada
೨೪) ಶ್ರೇಷ್ಠ ವ್ಯಕ್ತಿಗಳಿಗೆ ಧರ್ಮವು ಸ್ನೇಹಿತರನ್ನು ಸಂಪಾದಿಸುವ ಮಾರ್ಗವಾಗಿದೆ. ಆದರೆ ಚಿಲ್ಲರೆ ವ್ಯಕ್ತಿಗಳಿಗೆ ಧರ್ಮ ಕಲಹವನ್ನು ಸೃಷ್ಟಿಸುವ ಅಸ್ತ್ರವಾಗಿದೆ...
Best Quotes of Dr. A.P.J. Abdul Kalam in Kannada
೨೫) ಡ್ರೀಮ್, ಡ್ರೀಮ್, ಡ್ರೀಮ್. ನಿರಂತರವಾಗಿ ಕನಸು ಕಾಣಿ. ನಿಮ್ಮೆಲ್ಲ ಕನಸುಗಳು ನಿಮ್ಮ ಯೋಚನೆಗಳಾಗಿ ಒಂದಲ್ಲ ಒಂದಿನ ನನಸಾಗುತ್ತವೆ...
Best Quotes of Dr. A.P.J. Abdul Kalam in Kannada
೨೬) ಮಳೆ ಬೀಳುವಾಗ ಎಲ್ಲ ಪಕ್ಷಿಗಳು ಮರದ ಆಸರೆಯನ್ನು ಪಡೆಯುತ್ತವೆ. ಆದರೆ ಹದ್ದುಗಳು ಮೋಡಗಳ ಮೇಲಿಂದ ಹಾರಾಡುವ ಸಾಹಸ ಮಾಡಿ ಮಳೆಯಿಂದ ತಪ್ಪಿಸಿಕೊಳ್ಳುತ್ತವೆ...
Best Quotes of Dr. A.P.J. Abdul Kalam in Kannada
೨೭) ಯಾವಾಗ ನಿಮ್ಮ ಸಹಿ ಅಟೋಗ್ರಾಫಾಗಿ ಬದಲಾಗುತ್ತದೆಯೋ ಅವತ್ತೇ ನೀವು ಸಕ್ಸೆಸಫುಲ್ ವ್ಯಕ್ತಿಯಾದಂತೆ... 
Best Quotes of Dr. A.P.J. Abdul Kalam in Kannada
೨೮) ಬರೀ ಯಶಸ್ಸಿನ ಕಥೆಗಳನ್ನಷ್ಟೇ ಓದಬೇಡಿ. ಯಶಸ್ಸಿನ ಕಥೆಗಳಿಂದ ನಿಮಗೆ ಸಂದೇಶಗಳಷ್ಟೇ ಸಿಗುತ್ತವೆ. ಸೋಲಿನ ಕಥೆಗಳನ್ನು ಓದಿ. ನಿಮಗೆ ಯಶಸ್ವಿಯಾಗಲು ಕೆಲವು ಉತ್ತಮ ಐಡಿಯಾಗಳು ಸಿಗುತ್ತವೆ...
Best Quotes of Dr. A.P.J. Abdul Kalam in Kannada
೨೯) ದೇಶದ ಬುದ್ಧಿವಂತ ಬ್ರೆನಗಳು ಕ್ಲಾಸ್ ರೂಮಿನ ಕೊನೆಯ ಬೆಂಚಿನ ಮೇಲೆ ಕಂಡು ಬರುತ್ತವೆ.
Best Quotes of Dr. A.P.J. Abdul Kalam in Kannada
೩೦) ನಿಮ್ಮ ಕೆಲಸವನ್ನು ಪ್ರೀತಿಸಿ. ಆದರೆ ನಿಮ್ಮ ಕಂಪನಿಯನ್ನು ಅತಿಯಾಗಿ ಪ್ರೀತಿಸಬೇಡಿ. ಏಕೆಂದರೆ ಯಾವಾಗ ನಿಮ್ಮ ಕಂಪನಿ ನಿಮ್ಮನ್ನು ಪ್ರೀತಿಸುವುದನ್ನು ನಿಲ್ಲಿಸುತ್ತದೆ ಎಂಬುದು ಯಾರಿಗೆ ಗೊತ್ತು...??
Best Quotes of Dr. A.P.J. Abdul Kalam in Kannada
೩೧) ಯಾರನ್ನಾದರೂ ಸೋಲಿಸುವುದು ಸುಲಭ. ಆದರೆ ಗೆಲುವುದು ತುಂಬಾ ಕಷ್ಟ... 
Best Quotes of Dr. A.P.J. Abdul Kalam in Kannada
೩೨) ನಿಮ್ಮ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನಿಮ್ಮಿಂದ ನಿಮ್ಮ ಹವ್ಯಾಸಗಳನ್ನು ಬದಲಿಸಲು ಸಾಧ್ಯವಿದೆ. ನಿಮ್ಮ ಹವ್ಯಾಸಗಳು ನಿಮ್ಮ ಭವಿಷ್ಯವನ್ನು ಖಂಡಿತ ಬದಲಾಯಿಸುತ್ತವೆ. 
Best Quotes of Dr. A.P.J. Abdul Kalam in Kannada
೩೩) ನೀವು ನಿದ್ರೆ ಮಾಡುವಾಗ ಕಾಣುವುದು ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು... 
Best Quotes of Dr. A.P.J. Abdul Kalam in Kannada
೩೪) ಈ ಜಗತ್ತಿನಲ್ಲಿ ಭಯಕ್ಕೆ ಜಾಗವಿಲ್ಲ. ಕೇವಲ ಶಕ್ತಿಯು ಶಕ್ತಿಯನ್ನು ಗೌರವಿಸುತ್ತದೆ... 
Best Quotes of Dr. A.P.J. Abdul Kalam in Kannada
೩೫) ಸಕ್ಸೆಸ್ ಸಿಗಬೇಕೆಂದರೆ ಸಂಕಷ್ಟಗಳನ್ನು ಎದುರಿಸಲೇಬೇಕು. ಸಂಕಷ್ಟಗಳು ಯಶಸ್ಸಿನ ಮುಖ್ಯ ಭಾಗವಾಗಿವೆ... 
Best Quotes of Dr. A.P.J. Abdul Kalam in Kannada
೩೬) ಕಠಿಣವಾದ ಕೆಲಸಗಳು ಅಸಾಧ್ಯವೆಂದಲ್ಲ. ಕಠಿಣವಾದ ಕೆಲಸಗಳಿಗೆ ಹೆಚ್ಚಿಗೆ ಕಷ್ಟಪಡಬೇಕಾಗುತ್ತದೆ... 
Best Quotes of Dr. A.P.J. Abdul Kalam in Kannada
೩೭) ನೆಗೆಟಿವ ಪರಿಸ್ಥಿತಿಗಳಲ್ಲಿಯೂ ನೀವು ಪಾಸಿಟಿವ್ ಆಗಿದ್ದರೆ ನೀವು ಪ್ರತಿ ಬಾರಿಯೂ ಗೆಲ್ಲುತ್ತೀರಿ... 
Best Quotes of Dr. A.P.J. Abdul Kalam in Kannada
೩೮) ನಿಮ್ಮನ್ನು ದ್ವೇಷಿಸುವವರನ್ನು ನೀವು ಯಾವತ್ತೂ ದ್ವೇಷಿಸಬೇಡಿ. ಏಕೆಂದರೆ ನೀವು ಅವರಿಗಿಂತ ಉತ್ತಮರೆಂದು ಅವರಷ್ಟೇ ಯೋಚಿಸುತ್ತಾರೆ... 
Best Quotes of Dr. A.P.J. Abdul Kalam in Kannada
೩೯) ನೀವು ಕೋಪಿಸಿಕೊಳ್ಳುವ ಪ್ರತಿ ನಿಮಿಷವೂ ನೀವು ೬೦ ಸೆಕೆಂಡುಗಳ ಸಂತೋಷವನ್ನು ಕಳೆದುಕೊಳ್ಳುತ್ತೀರಿ... 
Best Quotes of Dr. A.P.J. Abdul Kalam in Kannada
೪೦) ಕಷ್ಟಗಳು ಬಂದಿವೆ ಎಂದು ಇಷ್ಟಪಟ್ಟಿದ್ದನ್ನು ಬಿಡಬೇಡಿ. ಇವತ್ತಿನ ದಿನ ಕಷ್ಟಕರವಾಗಿರಬಹುದು. ನಾಳೆ ಅದಕ್ಕಿಂತ ಕೆಟ್ಟದಿರಬಹುದು. ಆದರೆ ಮುಂದೊಂದು ದಿನ ಎಲ್ಲವು ಸಂತೋಷವಾಗಿರುತ್ತದೆ... 
Best Quotes of Dr. A.P.J. Abdul Kalam in Kannada
೪೧) ನೀವು ತಪ್ಪು ಮಾಡಿದಾಗ ಅದನ್ನು ಮುಜುಗುರವಿಲ್ಲದೆ ಒಪ್ಪಿಕೊಂಡು ಸರಿಯಾದ ದಾರಿಯಲ್ಲಿ ನಡೆಯಿರಿ...
Best Quotes of Dr. A.P.J. Abdul Kalam in Kannada
೪೨) ಹಾರ್ಡ್ ವರ್ಕ್ ಎಂಬ ಚಕ್ರ ಮತ್ತು ಆತ್ಮ ವಿಶ್ವಾಸ ಎಂಬ ಇಂಧನದ ಮೇಲೆ ಸಕ್ಸೆಸ್ ಎಂಬ ವಾಹನ ಚಲಿಸುತ್ತದೆ... 
Best Quotes of Dr. A.P.J. Abdul Kalam in Kannada
೪೩) ಬೇರೆಯವರ ಸಲುಯಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬದಲಾಯಿಸಬೇಡಿ. ಏಕೆಂದರೆ ನಿಮ್ಮ ಪಾತ್ರವನ್ನು ನಿಮ್ಮಷ್ಟು ಉತ್ತಮವಾಗಿ ಬೇರೆಯವರಿಂದ ನಿಭಾಯಿಸಲು ಸಾಧ್ಯವಿಲ್ಲ... 
Best Quotes of Dr. A.P.J. Abdul Kalam in Kannada
೪೪) ಒಳ್ಳೆಯ ಜನರು ನಿಮಗೆ ಸಂತೋಷವನ್ನು ಕೊಟ್ಟರೆ, ಕೆಟ್ಟ ಜನ ನಿಮಗೆ ಅನುಭವವನ್ನು ಕೊಡುತ್ತಾರೆ ಎಂಬುದನ್ನು ಯಾವಾಗಲೂ ನೆನಪಿಡಿ... 
Best Quotes of Dr. A.P.J. Abdul Kalam in Kannada
೪೫) ನಿಮ್ಮ ಕೊನೆಯ ತಪ್ಪು ನಿಮ್ಮ ಉತ್ತಮ ಶಿಕ್ಷಕನಿದ್ದಂತೆ... 
Best Quotes of Dr. A.P.J. Abdul Kalam in Kannada
೪೬) ನಾನು ಸುಂದರವಾದ ಹುಡುಗನಲ್ಲ. ಆದರೆ ಸಹಾಯಕ್ಕಾಗಿ ಯಾರಾದರೂ ಕೈಚಾಚಿದರೆ ನಾನು ಸಹಾಯ ಮಾಡಬಲ್ಲೆ. ಸೌಂದರ್ಯ ಮನಸ್ಸಲ್ಲಿದೇ ಹೊರತು ಮುಖದಲ್ಲಿಲ್ಲ... 
Best Quotes of Dr. A.P.J. Abdul Kalam in Kannada
೪೭) ಈ ೩ ಕಾರಣಗಳಿಗಾಗಿ ಜನ ನಿಮ್ಮ ಬೆನ್ನ ಹಿಂದೆ ಮಾತಾಡುತ್ತಾರೆ. ಅವರು ನಿಮ್ಮ ಮಟ್ಟವನ್ನು ತಲುಪಲು ಸಾಧ್ಯವಾಗದಿದ್ದಾಗ, ನಿಮ್ಮ ಬಳಿ ಇರುವುದು ಅವರ ಬಳಿ ಇರದಿರುವಾಗ, ಅವರು ನಿಮ್ಮ ಜೀವನ ಶೈಲಿಯನ್ನು ನಕಲಿಸಲು ಪ್ರಯತ್ನಿಸಿ ಸೋತಾಗ... 
Best Quotes of Dr. A.P.J. Abdul Kalam in Kannada
೪೮) ಅದೃಷ್ಟದಲ್ಲಿ ನಂಬಿಕೆ ಇಡಬೇಡಿ. ಹಾರ್ಡ್ ವರ್ಕನಲ್ಲಿ ನಂಬಿಕೆಯಿಡಿ... 
Best Quotes of Dr. A.P.J. Abdul Kalam in Kannada
೪೯) ಒಂದು ಅತ್ಯುತ್ತಮ ಪುಸ್ತಕವು ನೂರು ಸ್ನೇಹಿತರಿಗೆ ಸಮಾನವಾದರೆ; ಒಬ್ಬ ಉತ್ತಮ ಸ್ನೇಹಿತನು ಗ್ರಂಥಾಲಯಕ್ಕೆ ಸಮವಾಗುತ್ತಾನೆ...
Best Quotes of Dr. A.P.J. Abdul Kalam in Kannada
೫೦) ಕಪ್ಪು ಬಣ್ಣವು ಭಾವನಾತ್ಮಕವಾಗಿ ಕೆಟ್ಟದು. ಆದರೆ ಪ್ರತಿಯೊಂದು ಕಪ್ಪು ಬೋರ್ಡ್ ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನಗೊಳಿಸುತ್ತದೆ...
Blogger ನಿಂದ ಸಾಮರ್ಥ್ಯಹೊಂದಿದೆ.