ತಕ್ಕ ಶಾಸ್ತಿ : ತೆನಾಲಿ ರಾಮಕೃಷ್ಣನ ಹಾಸ್ಯಕಥೆಗಳು - Stories of Tenali Ramakrishna in Kannada - tenali rama stories in kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ತಕ್ಕ ಶಾಸ್ತಿ : ತೆನಾಲಿ ರಾಮಕೃಷ್ಣನ ಹಾಸ್ಯಕಥೆಗಳು - Stories of Tenali Ramakrishna in Kannada - tenali rama stories in kannada

ತಕ್ಕ ಶಾಸ್ತಿ : ತೆನಾಲಿ ರಾಮಕೃಷ್ಣನ ಹಾಸ್ಯಕಥೆಗಳು - Stories of Tenali Ramakrishna in Kannada

             ಶ್ರೀಕೃಷ್ಣ ದೇವರಾಯನ ತಾಯಿ ಪರಮ ದೈವಭಕ್ತೆಯಾಗಿದ್ದರು. ಅದಕ್ಕಾಗಿ ರಾಜಮಾತೆ ಸಾಯುವಾಗ ತಮಗಿಷ್ಟವಾದ ವಸ್ತುಗಳನ್ನು ದಾನ ಮಾಡಲು ಪ್ರಾರಂಭಿಸಿದರು.  ಆದರೆ ಅವರಿಗೆ ಮಾವಿನ ಹಣ್ಣೊಂದು ಸಿಗಲಿಲ್ಲ. ಏಕೆಂದರೆ ಆವಾಗ ಮಾವಿನ ಹಣ್ಣು ಮಾಗುವ ಕಾಲವಿರಲಿಲ್ಲ. ಶ್ರೀಕೃಷ್ಣ ದೇವರಾಯ ತನ್ನ ತಾಯಿಯ ಆಸೆಯನ್ನು ಪೂರೈಸುವುದಕ್ಕಾಗಿ ಎಲ್ಲೆಡೆಗೆ ಮಾವಿನ ಹಣ್ಣುಗಳಿಗಾಗಿ ಹುಡುಕಾಡಿಸಿದನು. ಆದರೆ ಅವರಿಗೆ ಎಲ್ಲಿಯೂ ಮಾವಿನ ಹಣ್ಣುಗಳು ಸಿಗಲಿಲ್ಲ. ಬೇರೆ ರಾಜ್ಯದಿಂದ ಮಾವಿನ ಹಣ್ಣುಗಳನ್ನು ಹುಡುಕಿ ತರುವಷ್ಟರಲ್ಲಿ ರಾಜಮಾತೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ರಾಯ ತಾನಿಷ್ಟು ದೊಡ್ಡ ಸಾಮ್ರಾಟನಾಗಿದ್ದರೂ ಸಹ ತನ್ನ ತಾಯಿಯ ಒಂದು ಸಣ್ಣ ಕೊನೆಯಾಸೆಯನ್ನು ನೆರವೇರಿಸಲಾಗಲಿಲ್ಲವಲ್ಲ ಎಂದು ಚಿಂತಾಕ್ರಾಂತನಾದನು. ರಾಯ ಅದೇ ಚಿಂತೆಯಲ್ಲಿ ಪುರೋಹಿತರನ್ನು ಕರೆಯಿಸಿ ತನ್ನ ತಾಯಿಯ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಏನು ಮಾಡಬೇಕೆಂದು ಕೇಳಿದನು. ಆಗ ಆಸೆಬುರುಕ ಬ್ರಾಹ್ಮಣರು "ಪ್ರಭು, ಇಷ್ಟು ಸಣ್ಣ ವಿಷಯಕ್ಕೆಲ್ಲ ತಾವು ಚಿಂತಿಸುವ ಅಗತ್ಯವಿಲ್ಲ. ನೀವು ಬಂಗಾರದ ಮಾವಿನ ಹಣ್ಣುಗಳನ್ನು ಮಾಡಿಸಿ ಅವುಗಳನ್ನು ರಾಜಮಾತೆಯವರ ಶ್ರಾದ್ಧದ ದಿನ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟರಾಯಿತು. ಇದರಿಂದ ರಾಜಮಾತೆಯವರ ಆತ್ಮಕ್ಕೆ ಶಾಂತಿ ಸಿಗುವುದು..." ಎಂದೇಳಿದರು. ಅದಕ್ಕೆ ಶ್ರೀಕೃಷ್ಣ ದೇವರಾಯ ಒಪ್ಪಿ, ಅವನ ತಾಯಿಯ ಶ್ರಾದ್ಧದಂದು ಬ್ರಾಹ್ಮಣರನ್ನು ಕರೆಯಿಸಿ ಅವರಿಗೆ ಮೃಷ್ಟಾನ್ನ ಭೋಜನ ಹಾಕಿಸಿ, ಹೋಗುವಾಗ ಒಂದೊಂದು ಬಂಗಾರದ ಮಾವಿನ ಹಣ್ಣುಗಳನ್ನು ದಾನವಾಗಿ ಕೊಟ್ಟನು. ಇದರಿಂದ ಸಂತೃಪ್ತರಾದ ಬ್ರಾಹ್ಮಣರು ರಾಜಮಾತೆಯ ಆತ್ಮಕ್ಕೆ ಶಾಂತಿ ಸಿಗಲೆಂದು ಹರಸಿ ತಮ್ಮ ಮನೆಗಳಿಗೆ ತೆರಳಿದರು. ಕೊನೆಗೂ ತನ್ನ ತಾಯಿಯ ಆತ್ಮಕ್ಕೆ ಶಾಂತಿ ಸಿಕ್ಕಿತಲ್ಲ ಎಂಬ ಖುಷಿಯಲ್ಲಿ ರಾಯ ರಾಜ್ಯಭಾರದ ಕಡೆಗೆ ಗಮನ ಹರಿಸಿದನು.
ತಕ್ಕ ಶಾಸ್ತಿ : ತೆನಾಲಿ ರಾಮಕೃಷ್ಣನ ಹಾಸ್ಯಕಥೆಗಳು -Stories of Tenali Ramakrishna in Kannada

                            ಶ್ರೀಕೃಷ್ಣ ದೇವರಾಯ ತನ್ನ ತಾಯಿಯ ಆತ್ಮಶಾಂತಿಗಾಗಿ ಬಂಗಾರದ ಮಾವಿನ ಣ್ಣುಗಳನ್ನು ಮಾಡಿಸಿ ಬ್ರಾಹ್ಮಣರಿಗೆ ದಾನವಾಗಿ ನೀಡಿದ್ದಾನೆ ಎಂಬ ಸುದ್ದಿ ರಾಜ್ಯದ ತುಂಬೆಲ್ಲ ಸದ್ದು ಮಾಡಿತು. ಈ ಸುದ್ದಿ ತೆನಾಲಿ ರಾಮಕೃಷ್ಣನ ನಿದ್ದೆ ಕದ್ದಿತು. ಯಾಕೆ ಬ್ರಾಹ್ಮಣರು ರಾಯನಿಗೆ ಆ ರೀತಿ ಸುಳ್ಳೇಲಿ ಮಾವಿನ ಹಣ್ಣುಗಳನ್ನು ಮೋಸದಿಂದ ದಾನವಾಗಿ ಪಡೆದುಕೊಂಡರು ಎಂಬುದು ಗೊತ್ತಾಯಿತು. ಅವನಿಗೆ ಬ್ರಾಹ್ಮಣರ ಕುಟಿಲತೆಗಳ ಮೇಲೆ ಕೆಟ್ಟ ಕೋಪ ಬಂದಿತು. ಅದಕ್ಕಾಗಿ ಆತ ಅವರಿಗೆ ತಕ್ಕ ಶಾಸ್ತಿ ಮಾಡಬೇಕೆಂದು ನಿರ್ಧರಿಸಿದನು. ಅವನಿಗೆ ಬಡವರ ಬಗ್ಗೆ ಕಾಳಜಿಯ ಜೊತೆಗೆ ಕನಿಕರವೂ ಇತ್ತು. ಹೀಗೆ ಬಿಟ್ಟರೆ ಈ ಆಸೆಬುರುಕ ಬ್ರಾಹ್ಮಣರು ಬಡವರನ್ನು ಹೆದರಿಸಿ ಅವರಿಂದ ಹೊಲಮನೆಗಳನ್ನು ಮಾರಿಸಿ ತಮ್ಮ ಬೇಳೆಗಳನ್ನು ಬೇಯಿಸಿಕೊಳ್ಳುತ್ತಾರೆ ಎಂಬುದು ಖಾತ್ರಿಯಾಯಿತು. ಆತ ಕೂಡಲೇ ಬ್ರಾಹ್ಮಣರಿಗೆ ಬುದ್ಧಿ ಕಲಿಸಲು ಮುಂದಾದನು.

ತಕ್ಕ ಶಾಸ್ತಿ : ತೆನಾಲಿ ರಾಮಕೃಷ್ಣನ ಹಾಸ್ಯಕಥೆಗಳು -Stories of Tenali Ramakrishna in Kannada

                                          ಮಾರನೇ ದಿನ ರಾಮಕೃಷ್ಣ ಬ್ರಾಹ್ಮಣರ ಮನೆಮನೆಗಳಿಗೆ ತೆರಳಿ "ನಾಳೆ ನನ್ನ ತಾಯಿಯ ತಿಥಿಯಿದೆ, ತಪ್ಪದೆ ಬರಬೇಕೆಂದು" ಕೇಳಿಕೊಂಡನು. ರಾಮಕೃಷ್ಣನ ಆಹ್ವಾನದಿಂದ ಬ್ರಾಹ್ಮಣರು ಪರಮಾನಂದಪಟ್ಟರು. ರಾಮಕೃಷ್ಣ ರಾಯನ ಪರಮಾಪ್ತ, ಅಲ್ಲದೆ ಆಸ್ಥಾನದ ವಿದ್ವಾಂಸ, ಶ್ರೀಮಂತ ಹೀಗಾಗಿ ಆತ ತಮಗೆ ಭಾರಿ ದಕ್ಷಿಣೆಯನ್ನೇ ಕೊಡುತ್ತಾನೆ ಎಂಬ ದುರಾಸೆಯಿಂದ ಬ್ರಾಹ್ಮಣರೆಲ್ಲ ಅವನ ಮನೆಗೆ ಸಡಗರದಿಂದ ಹೋದರು.

ತಕ್ಕ ಶಾಸ್ತಿ : ತೆನಾಲಿ ರಾಮಕೃಷ್ಣನ ಹಾಸ್ಯಕಥೆಗಳು -Stories of Tenali Ramakrishna in Kannada

                ಬೇರೆಯವರನ್ನು ಬೆದರಿಸಿ ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳುವ ಬ್ರಾಹ್ಮಣರ ಡೊಳ್ಳು ಹೊಟ್ಟೆಗಳನ್ನು ಕರಗಿಸುವುದಕ್ಕಾಗಿ ರಾಮಕೃಷ್ಣ ಬಾಗಿಲಲ್ಲೇ ಅವರ ದಾರಿ ಕಾಯುತ್ತಾ ನಿಂತಿದ್ದನು. ಬ್ರಾಹ್ಮಣರೆಲ್ಲ ಒಳಬರುತ್ತಿದ್ದಂತೆಯೇ ಆತ ಮನೆಯ ಬಾಗಿಲುಗಳನ್ನೆಲ್ಲ ಹಾಕಿದನು. ನಂತರ ಆತ ಕಬ್ಬಿಣದ ಸಲಾಕೆಗಳನ್ನು ಒಲೆಯಲ್ಲಿ ಹಾಕಿ ಅವುಗಳನ್ನು ಕೆಂಪಗೆ ಕಾಯಿಸಲು ಪ್ರಾರಂಭಿಸಿದನು. ಬ್ರಾಹ್ಮಣರಿಗೆ ಏನೊಂದೂ ಅರ್ಥವಾಗಲಿಲ್ಲ. ತಾಯಿಯ ಶ್ರಾದ್ಧ ಎಂದು ಕರೆಯಿಸಿ ಏನೇನೋ ಮಾಡುತ್ತಿದ್ದಾನಲ್ಲವೆಂದು ಅವರು ತಮ್ಮತಮ್ಮಲ್ಲೇ ಮಾತಾಡಿಕೊಳ್ಳಲು ಪ್ರಾರಂಭಿಸಿದರು.

ತಕ್ಕ ಶಾಸ್ತಿ : ತೆನಾಲಿ ರಾಮಕೃಷ್ಣನ ಹಾಸ್ಯಕಥೆಗಳು -Stories of Tenali Ramakrishna in Kannada

ಬ್ರಾಹ್ಮಣರು : ಏನಯ್ಯ ರಾಮಕೃಷ್ಣ, ತಾಯಿಯ ಶ್ರಾದ್ಧವೆಂದು ನಮ್ಮನ್ನು ಕರೆಯಿಸಿ ನೀನು ಏನೋ ಕುಲುಮೆ ಕೆಲಸ ಮಾಡುತ್ತಿರುವೆಯಲ್ಲ? ನಾವೆಲ್ಲ ಹಸಿದಿದ್ದೇವೆ, ಬೇಗನೆ ಕೆಲಸಗಳನ್ನು ಆರಂಭಿಸು...

ತೆನಾಲಿ ರಾಮಕೃಷ್ಣ : ನಾನಿಗಾಗಲೇ ಕೆಲಸವನ್ನು ಪ್ರಾರಂಭಿಸಿರುವೆ. ಈ ಸಲಾಕೆಗಳು ಕಾದ ತಕ್ಷಣ ಕೆಲಸ ಮುಗಿದಂತೆಯೇ...

ಬ್ರಾಹ್ಮಣ : ಅಲ್ಲಯ್ಯಾ ರಾಮಕೃಷ್ಣ, ತಿಥಿಯಲ್ಲಿ ದಾನಧರ್ಮಗಳನ್ನು ಮಾಡುವುದು ಪ್ರತೀತಿ. ಅದನ್ನು ಬಿಟ್ಟು ಸಲಾಕೆಗಳನ್ನು ಏಕೆ ಕಾಯಿಸುತ್ತಿರುವೆ? ನಮಗೊಂದು ತಿಳಿಯುತ್ತಿಲ್ಲ...

ರಾಮಕೃಷ್ಣ : ನೋಡಿ ಬ್ರಾಹ್ಮಣರೇ, ನನ್ನ ತಾಯಿಗೆ ಆಗಾಗ ಸಂದು ನೋವು ಬರುತ್ತಿತ್ತು. ನೋವು ತಾಳಲಾರದೆ ಆಕೆ ನನ್ನನ್ನು ಕರೆದು ಕಾದ ಕಬ್ಬಿಣದ ಸಲಾಕೆಗಳಿಂದ ಸಂದುಸಂದಿಗೂ ಬರೆ ಹಾಕಲು ಹೇಳಿದಳು. ಆದರೆ ನಾನು ಸಲಾಕೆಗಳನ್ನು ಕಾಯಿಸಿಕೊಂಡು ಬರುವಷ್ಟರಲ್ಲಿ ಆಕೆ ತೀರಿಹೋಗಿದ್ದಳು. ನಾನು ನನ್ನ ತಾಯಿಯ ಕೊನೆಯಾಸೆಯನ್ನು ಈಡೇರಿಸಲಾಗಲಿಲ್ಲವೆಂದು ಕೊರಗುತ್ತಿರುವಾಗ ನಿಮ್ಮಂಥ ಒಬ್ಬ ಬ್ರಾಹ್ಮಣ ನನಗೆ "ನಿನ್ನ ತಾಯಿಯ ಶ್ರಾದ್ಧದ ದಿನ ಅತಿ ಉತ್ತಮ ಬ್ರಾಹ್ಮಣರನ್ನು ಕರೆಯಿಸಿ, ಕಾದ ಕಬ್ಬಿಣದ ಸಲಾಕೆಗಳಿಂದ ಅವರಿಗೆ ಬರೆ ಹಾಕಿದರೆ ಸಾಕು. ನಿನ್ನ ತಾಯಿಯಾತ್ಮಕ್ಕೆ ಶಾಂತಿ ಸಿಗುವುದೆಂದು" ಹೇಳಿದ್ದಾರೆ. ಅದಕ್ಕಾಗಿಯೇ ನಿಮ್ಮೆಲ್ಲರನ್ನು ಕರೆಸಿರುವೆ. ಇನ್ನೇನು ಎಲ್ಲ ಸಲಾಕೆಗಳು ಕಾಯುತ್ತವೆ. ಶೀಘ್ರದಲ್ಲೇ ಶ್ರಾದ್ಧ ವಿಧಿಯನ್ನು ಆರಂಭಿಸುತ್ತೇನೆ.

ಬ್ರಾಹ್ಮಣರು : ರಾಮಕೃಷ್ಣ ನಿನಗೆ ಆ ಬ್ರಾಹ್ಮಣ ಸುಳ್ಳೇಳಿ ತಲೆ ಕೆಡಿಸಿದ್ದಾನೆ. ನಿನ್ನ ತಾಯಿಯ ಸಂದು ನೋವಿಗೂ, ನಾವು ಬರೆ ಹಾಕಿಸಿಕೊಳ್ಳುವುದಕ್ಕೂ ಏನು ಸಂಬಂಧ?

ತೆನಾಲಿ ರಾಮಕೃಷ್ಣ : ಇಲ್ಲ ಪೂಜ್ಯರೇ, ಆ ಬ್ರಾಹ್ಮಣ ಸುಳ್ಳು ಹೇಳಿಲ್ಲ. ಮಾವಿನ ಹಣ್ಣುಗಳನ್ನು ದಾನ ಮಾಡಲಾಗದೆ ಸತ್ತ ಮಹಾರಾಣಿಯವರ ಆತ್ಮಕ್ಕೆ ನೀವೆಲ್ಲ ಬಂಗಾರದ ಮಾವಿನ ಹಣ್ಣುಗಳನ್ನು ಸ್ವೀಕರಿಸಿ ಶಾಂತಿಯನ್ನು ಕೊಡಿಸಿರುವಾಗ, ನೀವು ಕಾದ ಸಲಾಕೆಗಳಿಂದ ಬರೆಯನ್ನು ಸ್ವೀಕರಿಸಿ ನನ್ನ ತಾಯಿಯ ಆತ್ಮಕ್ಕೂ ಶಾಂತಿಯನ್ನು ಕೊಡಿಸಬಹುದಲ್ಲವೇ? 

ತಕ್ಕ ಶಾಸ್ತಿ : ತೆನಾಲಿ ರಾಮಕೃಷ್ಣನ ಹಾಸ್ಯಕಥೆಗಳು - Stories of Tenali Ramakrishna in Kannada

                           ದಯವಿಟ್ಟು ನೀವು ಬರೆ ಹಾಕಿಸಿಕೊಂಡು ನಮ್ಮಮ್ಮನ ಆತ್ಮಕ್ಕೂ ಶಾಂತಿ ಕೊಡಿಸಿ ಎನ್ನುತ್ತಾ ರಾಮಕೃಷ್ಣ ಬ್ರಾಹ್ಮಣರ ಬಳಿ ಕಾದ ಸಲಾಕೆಯನ್ನು ತಂದನು. ಬ್ರಾಹ್ಮಣರಿಗೆ ರಾಮಕೃಷ್ಣನ ಜಾಣ್ಮೆ ಅರ್ಥವಾಯಿತು. ಅವರು ಹೆದರಿ ನಡಗಲು ಪ್ರಾರಂಭಿಸಿದರು. ಅವನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ರಾಯನಿಂದ ತಾವು ಪಡೆದ ಬಂಗಾರದ ಮಾವಿನ ಹಣ್ಣುಗಳನ್ನು ರಾಮಕೃಷ್ಣನಿಗೆ ನೀಡಿ ಅಲ್ಲಿಂದ ಓಡಿ ಹೋಗಿ ರಾಯನ ಬಳಿ ದೂರು ಕೊಟ್ಟರು. ರಾಮಕೃಷ್ಣ ಹೀಗೆಲ್ಲ ವರ್ತಿಸಿದ್ದಾನೆ ಎಂಬುದನ್ನು ರಾಯ ನಂಬದಾದನು. ಅಷ್ಟರಲ್ಲಿ ರಾಮಕೃಷ್ಣ ಆಸ್ಥಾನವನ್ನು ಪ್ರವೇಶಿಸಿ ನಡೆದ ಸಂಗತಿಗಳನ್ನೆಲ್ಲ ವಿವರಿಸಿ, ತಾನೇಕೆ ಹೀಗೆ ಮಾಡಿದೆ ಎಂಬುದಕ್ಕೆ ಸಮಜಾಯಿಸಿ ಕೊಟ್ಟನು. ಪಾಪ ಬ್ರಾಹ್ಮಣರ ಪೇಚಿನ ಮುಖಗಳನ್ನು ನೋಡಲಾಗದೆ ಅವರ ಬಂಗಾರದ ಮಾವಿನ ಹಣ್ಣುಗಳನ್ನು ಹಿಂತಿರುಗಿಸಿದನು. ರಾಮಕೃಷ್ಣನ ಬುದ್ಧಿವಂತಿಕೆಗೆ, ಬಡವರ ಬಗ್ಗೆ ಅವನಿಗಿದ್ದ ಕಾಳಜಿಗೆ ರಾಯ ತಲೆದೂಗಿದನು. ಜೊತೆಗೆ ಬ್ರಾಹ್ಮಣರಿಗೆ ತಕ್ಕ ಶಾಸ್ತಿ ಮಾಡಿದ ರಾಮಕೃಷ್ಣನನ್ನು ಹೊಗಳಿ, ಬ್ರಾಹ್ಮಣರ ಸುಲಿಗೆಯನ್ನು ತಡೆಯಲು ಕಟ್ಟು ನಿಟ್ಟಾದ ಕಾನೂನೊಂದನ್ನು ರೂಪಿಸಿದನು... To be Continued...
Click Here To Read Next Part ⇩⇩




ತಕ್ಕ ಶಾಸ್ತಿ : ತೆನಾಲಿ ರಾಮಕೃಷ್ಣನ ಹಾಸ್ಯಕಥೆಗಳು - Stories of Tenali Ramakrishna in Kannada

Blogger ನಿಂದ ಸಾಮರ್ಥ್ಯಹೊಂದಿದೆ.