ಕನ್ನಡ ಸಣ್ಣ ಕಥೆಗಳು - Kannada Short Stories - Kannada Small Stories - Sanna Kathegalu - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಕನ್ನಡ ಸಣ್ಣ ಕಥೆಗಳು - Kannada Short Stories - Kannada Small Stories - Sanna Kathegalu

ಕನ್ನಡ ಸಣ್ಣ ಕಥೆಗಳು - Kannada Short Stories - Kannada Small Stories - Sanna Kathegalu

1) ನನ್ನ ಮೊದಲ ಕ್ರಶ್ : My 1st Crush - Kannada Love Story

ನನ್ನ ಮೊದಲ ಕ್ರಶ್  My 1st Crush

                             ಇದೊಂದು ಹರೆಯದ ಹುಡುಗನ ಭಾವನೆಗಳನ್ನು, ಹೆಣ್ಣಿನ ಮೇಲಾಗುವ ಕ್ರಶ್ ಅಂದರೆ ಆಕರ್ಷಣೆಯನ್ನು ವ್ಯಕ್ತಪಡಿಸುವ ಕಥೆಯಾಗಿದೆ. ಇದು ಯುವಕರ ವೇದನೆಯ ಕಥೆಯಾಗಿದ್ದರೂ ಇಂಟರೆಸ್ಟಿಂಗಾಗಿದೆ.    

        ನಿಜವಾದ ಪ್ರೀತಿ ಒಂದೇ ಸಲ ಆಗುತ್ತೆ ಅಂತಾರೆ. ಆದರೆ ಕ್ರಶ್ (Crush) ಸಾಕಷ್ಟು ಸಲ ಆಗುತ್ತೆ. ಈ ಕ್ರಶನ್ನು ಅಚ್ಚಗನ್ನಡದಲ್ಲಿ ಆಕರ್ಷಣೆ ಎನ್ನಬಹುದು. ಪ್ರೀತಿಯ ಪ್ರಭಾವ ಜೀವನಪೂರ್ತಿ ಇರಬಹುದು. ಆದರೆ ಕ್ರಶ್ ಸ್ವಲ್ಪ ದಿನ ಮಾತ್ರ ಕಾಡುತ್ತೆ. ಕ್ರಶ್ ಒಂಥರಾ ಕಿಕ್ ಇದ್ದಂತೆ. Yes, Crush is a kind of kick. ಕ್ರಶ್ ಆದ ಹುಡುಗಿಯನ್ನು ಅಥವಾ ಹುಡುಗನನ್ನು ಕಣ್ಣರೆಪ್ಪೆ ಮಿಟುಕಿಸದೆ ಒಂದೇ ಸಮನೆ ನೋಡುವುದು ಒಂಥರಾ ಮಜಾ ಕೊಡುತ್ತೆ. ಕ್ರಶ್ಶಾದ ಹುಡುಗಿಯನ್ನು ಕದ್ದುಮುಚ್ಚಿ ನೋಡುವುದರಲ್ಲಿ ಏನೋ ಒಂದು ಖುಷಿಯಿದೆ. ಕೆಲವು ಕಾಲೇಜು ಹುಡುಗರು ತಮ್ಮ ಕ್ರಶ್ಶನ್ನು ಕಣ್ತುಂಬಿಕೊಳ್ಳಲು ದಿನಾ ತಪ್ಪದೇ ಕಾಲೇಜಿಗೆ ಬರುತ್ತಾರೆ. ಹುಡುಗರ ಹಾರ್ಟು ಸುಮಾರಾಗಿರೋ ಹುಡುಗಿಯನ್ನು ನೋಡಿದರೂ ಹೆಚ್ಚಿಗೆ ಬಡಿದುಕೊಳ್ಳುತ್ತದೆ. ಕಾಲೇಜಿನಲ್ಲಿ ಆಗುವ  ಕ್ರಶ್ಶಗಳಿಗೆ ಲೆಕ್ಕವಿಡಲು ಸಾಧ್ಯವಿಲ್ಲ. ಸುಂದರವಾಗಿರೋ ಪ್ರತಿಯೊಂದರ ಮೇಲೂ ಕ್ರಶ್ಶಾಗುತ್ತೆ.

ನನ್ನ ಮೊದಲ ಕ್ರಶ್ : My 1st Crush

                            ನನಗೆ ಹುಡುಗಿಯರ ಬಗ್ಗೆ ಹೆಚ್ಚಿಗೆ ಜನರಲ್ ನಾಲೇಡ್ಜ್ ಇಲ್ಲ. ಯಾಕೆಂದರೆ ನಾನು ಓದಿದ್ದು ಸರ್ಕಾರಿ ಕನ್ನಡ ಮಾಧ್ಯಮ ಗಂಡು ಮಕ್ಕಳ ಶಾಲೆಯಲ್ಲಿ. ಅಲ್ಲಿ ಹುಡುಗಿಯರ ನೆರಳು ಸಹ ಬೀಳುತ್ತಿರಲಿಲ್ಲ. ನಂತರ ಹೈಸ್ಕೂಲು ಅಷ್ಟೇ. ಅಲ್ಲಿಯೂ ಎಲ್ಲರೂ ಗಂಡುಗಲಿಗಳೇ. ಅಲ್ಲಿ ಹುಡುಗಿಯರು ಬರುವುದು ರಾತ್ರಿ ಕನಸಲ್ಲಿ ಮಾತ್ರ. ಹೀಗಾಗಿ ನನಗೆ ನಾಚಿಕೆ ಸ್ವಭಾವ ಹೆಚ್ಚಾಗಿ ನಮಗೂ ಹುಡುಗಿಯರು ಅಷ್ಟಕಷ್ಟೇ ಎಂಬಂತಾಯಿತು. ಆದರೆ ಕಾಲೇಜಿಗೆ ಕಾಲಿಟ್ಟ ಮೇಲೆ ಎಲ್ಲ  ಹುಡುಗರ ಥರಾ ನನ್ನ ಸ್ಟೈಲ್ ಕೂಡ ಬದಲಾಯ್ತು.

ನನ್ನ ಮೊದಲ ಕ್ರಶ್ : My 1st Crush

                ಹುಡುಗಿಯರೆಂದರೆ ದೂರ ಓಡುತ್ತಿದ್ದ ನಾನು ಎಲ್ಲ ಹುಡುಗಿಯರೊಡನೆ ಮುಕ್ತವಾಗಿ ಮಾತಾಡತೊಡಗಿದೆ. ನಮ್ಮ ಕಾಲೇಜಲ್ಲಿ ಸಾವಿರಾರು ಸುಂದರಿಯರಿದ್ದರು. ಆದರೆ ಒಬ್ಬರೂ ಸಹ ನನ್ನದೆಯ ಕದವನ್ನು ತಟ್ಟುವ ಪ್ರಯತ್ನ ಮಾಡಲಿಲ್ಲ. ನನಗೆ ಇಷ್ಟವಾದ ಹುಡುಗಿಯರಿಗೆ ನಾನು ಇಷ್ಟವಾಗುತ್ತಿರಲಿಲ್ಲ. ನನ್ನನ್ನು ಇಷ್ಟಪಡುತ್ತಿರುವ ಹುಡುಗಿಯರು ನನಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಕಾಲೇಜ ಲೈಫಲ್ಲಿ ಪ್ರೇಯಸಿ ಎಂಬ ವಿಚಿತ್ರಪ್ರಾಣಿ ಇಲ್ಲದೆ ಸ್ವಲ್ಪ ಬೋರಾದರೂ ನಾನು ತುಂಬಾ ಆರಾಮಾಗಿದ್ದೆ.

         ಸ್ನೇಹಿತರೆಲ್ಲ ಅವರವರ ಗರ್ಲಫ್ರೆಂಡಗಳ ಜೊತೆ ಸಿನಿಮಾಗೋದರೆ ನಾನೊಬ್ಬನೇ ಹುಡುಗರ ಜೊತೆ ಸಿನಿಮಾಗೆ ಹೋಗುತ್ತಿದ್ದೆ. ಕೆಲವು ಸಲ ನನಗೂ ಒಬ್ಬಳು ಗರ್ಲಫ್ರೆಂಡ ಇರಬೇಕಿತ್ತು ಅಂತಾ ಅನ್ನಿಸುತಿತ್ತು. ಆದರೆ ನನ್ನ ಗೆಳೆಯರು ಅವರ ಗರ್ಲಫ್ರೆಂಡಗಳ ಆಸೆಗಳಿಗಾಗಿ ಇಡೀ ಕಾಲೇಜ ಅಷ್ಟೇ ಅಲ್ಲದೆ ಹಾಸ್ಟೇಲನಲ್ಲೂ ಸಾಲ ಮಾಡಿಕೊಂಡು ವಾಪಸ್ ಕೊಡೊಕ್ಕಾಗದೆ ಮುಖಮುಚ್ಚಿಕೊಂಡು ಓಡಾಡುವುದನ್ನು ನೋಡಿ ನನಗೆ ಗರ್ಲಫ್ರೆಂಡ ಬೇಡವೆ ಬೇಡ ಎಂದೆನಿಸಿತು. ಆದರೂ ಹೃದಯದ ಯಾವುದೋ ಒಂದು ಮೂಲೆಯಲ್ಲಿ ಸ್ವಲ್ಪ  ಬೇಜಾರಿತ್ತು. ಈ ಒಣ ಬೇಜಾರಿನ ಜೊತೆಗೆ ಬೇಸಿಗೆ ರಜೆಯನ್ನು ಕಳೆಯಲು ನಾನು ನಾಸಿಕಗೆ ( ನಾಸಿಕ ಮಹಾರಾಷ್ಟ್ರದ ಒಂದು ಜಿಲ್ಲೆ ಹಾಗೂ ದೊಡ್ಡ ನಗರ) ಹೋದೆನು.

          ಕಾಲೇಜ ಲೈಫಲ್ಲಿ ಪ್ರೇಯಸಿ ಇಲ್ಲದಿದ್ದರೆ ಟೆನ್ಶನ್, ಅನಾವಶ್ಯಕ ತೊಂದರೆ, ಸಮಯದ ಹಾಗೂ ಹಣದ ವ್ಯರ್ಥ ಖರ್ಚು, ಮುಂಜಾನೆ ಮುಸ್ಸಂಜೆ ಮೆಸೇಜು, ಮಧ್ಯರಾತ್ರಿಯ ಮಿಸ್ಡಕಾಲು, ಓದಿಗೆ ಅಡ್ಡಗಾಲು ಯಾವುದೂ ಇರುವುದಿಲ್ಲ. ಆದರೆ ಜೊತೆಗೆ ನೆಮ್ಮದಿನೂ ಇರುವುದಿಲ್ಲ ಎಂಬುದು ನನಗೆ ಅರಿವಾಯಿತು. ಅರಿವಾದರೇನು ಪ್ರಯೋಜನ ಬಯಸಿದ ತಕ್ಷಣ ಪ್ರೇಯಸಿ ಸಿಗಬೇಕಲ್ಲವೇ? ಖಂಡಿತ ಸಿಗಲ್ಲ.

ನನ್ನ ಮೊದಲ ಕ್ರಶ್ : My 1st Crush

          ಮೊದಮೊದಲು ನಮ್ಮ ಕಾಲೇಜಿನ ಥರಾ ನಾಸಿಕ ಕೂಡ ನರಕದ ರೀತಿ ಕಂಡಿತು. ಆದರೆ ಅದರ ಸುತ್ತಮುತ್ತಲಿನ ಸುಂದರ ತಾಣಗಳಿಗೆ ಭೇಟಿ ಕೊಟ್ಟಾಗ ಅದು ಯಾವ ಸ್ವರ್ಗಕ್ಕೂ ಕಮ್ಮಿಯಿಲ್ಲ ಎಂದು ಗೊತ್ತಾಯಿತು. ಒಂದಿನ ನಾನು ನನ್ನ ಗೆಳೆಯ ವಿನಾಯಕನೊಂದಿಗೆ ಲಾವಣಿ ನೃತ್ಯ ಪ್ರದರ್ಶನವನ್ನು ವೀಕ್ಷಿಸಲು ಒಂದು ರಂಗಮಂದಿರಕ್ಕೆ ಹೋದೆನು. ಲಾವಣಿ ಮಹಾರಾಷ್ಟ್ರದ ಪ್ರಖ್ಯಾತ ಜಾನಪದ ನೃತ್ಯವಾಗಿದೆ. ಲಾವಣಿ ಇಂದಿಗೂ ಅಲ್ಲಿ ಜೀವಂತವಾಗಿದೆ. ಥೀಯೆಟರಿಗೆ್ ಹೋಗಿ ಸಿನಿಮಾ ನೋಡದ ಜನ ಕೂಡ ನೂರಾರು ರೂಪಾಯಿ ಕೊಟ್ಟು ಲಾವಣಿ ಡ್ಯಾನ್ಸ್ ನೋಡಲು ಬಂದೇ ಬರುತ್ತಾರೆ.  ಲಾವಣಿಯಲ್ಲಿ ಡೋಲ್ಕಿಯ ವೇಗದ ತಾಳಕ್ಕೆ ಸುಂದರ ತರುಣಿಯರು ಹೆಜ್ಜೆಹಾಕುವುದನ್ನು ನೋಡುವುದೇ ಒಂದು ಸೌಭಾಗ್ಯ.

ನನ್ನ ಮೊದಲ ಕ್ರಶ್ : My 1st Crush

                    ಲಾವಣಿ ನೃತ್ಯದ ಪ್ರದರ್ಶನ ಶುರುವಾದಾಗ ನೃತ್ಯಗಾರ್ತಿಯರ ಎನರ್ಜಿಯನ್ನು ನೋಡಿ ನಾನು ಬೆರಗಾದೆ. ಡೋಲ್ಕಿಯ ಅಷ್ಟೊಂದು ವೇಗದ ತಾಳಕ್ಕೆ ಒಂಚೂರು ಎಡವದೆ ಹೆಜ್ಜೆ ಹಾಕುವುದು ಸುಲಭದ ಕೆಲಸವಲ್ಲ. ಮೊದಮೊದಲು ಮಜಾ ಕೊಡುತ್ತಿದ್ದ ಪ್ರದರ್ಶನ ಮಧ್ಯದಲ್ಲಿ ಸ್ವಲ್ಪ ಬೋರ್ ಹೊಡೆಸಿತು. ಅರ್ಧಕ್ಕೆ ಬಿಟ್ಟು ಹೋರಬರಬೇಕೆನ್ನುವಷ್ಟರಲ್ಲಿ ಒಬ್ಬಳು ಸುಂದರ ಯುವತಿ ವೇದಿಕೆಗೆ ಬಂದಳು. ಅವಳಿಗೆ ಸುಮಾರು ಇಪ್ಪತ್ತು ವರ್ಷವಿರಬಹುದು. ಅವಳ ಕಾಲಲ್ಲಿನ ಗೆಜ್ಜೆ ಸದ್ದಿಗೆ ರಂಗಮಂದಿರ ಒಂದೆರಡು ಕ್ಷಣ ಸಂಪೂರ್ಣ ಮೌನವಾಯಿತು.

ನನ್ನ ಮೊದಲ ಕ್ರಶ್ : My 1st Crush

              ಅವಳ ಆ ಎಂಟ್ರಿಗೆ ಎಲ್ಲರೂ ದಂಗಾಗಿ ಅವಳನ್ನೇ ಕಣ್ಣುಕಣ್ಣು ಬಿಟ್ಟು ನೋಡತೊಡಗಿದರು. ಅವಳ ಅಂದಚೆಂದ ವೈಯ್ಯಾರವೆಲ್ಲವು ಅಲ್ಲಿದ್ದರವರನ್ನು ಆಕರ್ಷಿಸಿತ್ತು. ಅವಳ ಮೇಲೆ ನನಗೆ ಹೆವ್ವಿ ಕ್ರಶ್ ಆಯಿತು. ಅವಳ ಹಾರಾಡುವ ಕೂದಲುಗಳು, ಕೊಲ್ಲುವ ಕಣ್ಣೋಟ, ಮುಂಜಾನೆ ಮಂಜಿನಂಥ ಮುಗುಳ್ನಗೆ, ಮತ್ತೇರಿದಂತೆ ಕುಣಿಯುತ್ತಿದ್ದ ಅವಳ ಕಾಲ್ಗಳು ನನ್ನನ್ನು ತುಂಬಾನೆ ಡಿಸ್ಡರ್ಬ್ ಮಾಡಿದವು. ಅವಳಿಗೆ ನಾನು ಬಹಳಷ್ಟು ಆಕರ್ಷಿತನಾಗಿದ್ದೆ. ಆ ಲಾವಣಿ ಪ್ರದರ್ಶನದಲ್ಲಿ ಅವಳದ್ದು ಗೆಸ್ಟ್ ಅಪೀಯರನ್ಸ್ ಆಗಿತ್ತು. ಆ ಶೋ ಮುಗಿದ ನಂತರ ನಾನು ಅವಳನ್ನು ಎಲ್ಲ ಕಡೆ ಹುಡುಕಾಡಿದೆ. ಅವಳು ಸಿಗದಿದ್ದಾಗ ಅವರ ತಂಡದ ಮ್ಯಾನೇಜರ ಹತ್ರ ವಿಚಾರಿಸಿದೆ. ಅವಳು ಅವರ ಲಾವಣಿ ತಂಡವನ್ನು ಬಿಟ್ಟು ಸಿನಿಮಾದಲ್ಲಿ ನಟಿಸುವ ಆಸೆಗಾಗಿ ಮುಂಬೈಗೆ ಹೋದಳೆಂದು ಮ್ಯಾನೇಜರ ಹೇಳಿದನು. ಅವಳನ್ನು ಭೇಟಿಯಾಗಿ ಮಾತನಾಡಿಸಲು ಮುಂದಾಗಿದ್ದ ನನಗೆ ನಿರಾಸೆಯ ಕಾರ್ಮೋಡ ಎದುರಾಯಿತು. ಬೇಜಾರನ್ನು ಕಳಿಯಲು ಬಂದಿದ್ದ ನನಗೆ ನನ್ನ ಮೊದಲ ಕ್ರಶನಿಂದ ಮತ್ತೊಂದು ಬೇಜಾರಾಯಿತು. ಬೇಜಾರುಗಳ ಬಜಾರಲ್ಲಿಯೇ ನಾನು ಮತ್ತೆ ಕಾಲೇಜಿನ ಗೂಡಿಗೆ ಮರಳಿದೆ.

              ಎಲ್ಲರಂತೆ ನನಗೂ ಸಹ ನನ್ನ ಮೊದಲ ಕ್ರಶ್ ಒಂದು ಮರೆಯಲಾಗದ ಸವಿನೆನಪು. ನಾನಿನ್ನೂ ಸಾಧಿಸಿ ಬೆಳಕಿಗೆ ಬರಬೇಕು. ನನಗಿಂತ ಮುಂಚೆಯೇ ಅವಳು ಸಿನಿಮಾ ನಟಿಯಾಗಿ ಬೆಳಕಿಗೆ ಬರಬಹುದು ಎಂಬ ನಂಬಿಕೆ ನನ್ನದು. ಮತ್ತೆ ನನ್ನ ಮೊದಲ ಕ್ರಶ್ ಕಣ್ಣಿಗೆ ಬೇಗನೆ ಬೀಳಲಿ ಎಂಬ ಕಳ್ಳ ಆಸೆ ಮನಸ್ಸಿಗೆ.....

2) ಪರ್ಲಿಯ ಪ್ರೇಮಕಥೆ : Great Love Story of Mermaid Pearly

ಪರ್ಲಿಯ ಪ್ರೇಮಕಥೆ : Great Love Story of Mermaid Pearly

                 ಪರ್ಲಿ ಒಬ್ಬಳು ಸುಂದರವಾದ ಮತ್ಯ್ಸ ಕನ್ಯೆ. ಜೊತೆಗೆ ಆಕೆ ಸಾಗರದ ರಾಣಿ. ಅವಳಿಗೆ ಸಮುದ್ರ ಜೀವನ ಬೇಸರವಾಗಿ ಒಬ್ಬ ಮಾಂತ್ರಿಕನ ಸಹಾಯ ಪಡೆದುಕೊಂಡು ಆಕೆ ಮನುಜೆಯಾಗಿ ಭೂಮಿಗೆ ಬರುತ್ತಾಳೆ. ಆಕೆ ಭೂಮಿಗೆ ಬಂದು ಭೂಮಿಯ ಸೌಂದರ್ಯವನ್ನು ಸವಿಯುವಾಗ ಆಕೆಗೆ ಒಬ್ಬ ಸುಂದರವಾದ ರಾಜಕುಮಾರ ಕಾಣಿಸುತ್ತಾನೆ. ಆಕೆ ಅವನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಆದರೆ ಅವಳ ರಾಜಕುಮಾರ ಈ ಮೊದಲೇ ಬೇರೆಯವಳನ್ನು ಪ್ರೀತಿಸುತ್ತಿರುತ್ತಾನೆ. ಅದಕ್ಕಾಗಿ ಆಕೆ ಅವನ ಪ್ರೇಯಸಿಯನ್ನು ಕೊಂದು ತಾನು ಅವನೊಂದಿಗೆ ಬಾಳಲು ನಿರ್ಧರಿಸುತ್ತಾಳೆ. ಪರ್ಲಿಗೆ ಅವಳು ಇಷ್ಟಪಟ್ಟ ರಾಜಕುಮಾರನ ಪ್ರೀತಿ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರವೇ ಪರ್ಲಿಯ ಪ್ರೇಮಕಥೆ...  

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click  

3) ಪೋಲಿ ಪ್ರೇಮ ಕಥೆಗಳು - Kannada Short Love Stories

ಪೋಲಿ ಪ್ರೇಮ ಕಥೆಗಳು - Kannada Short Love Stories

            "ಪೋಲಿ ಪ್ರೇಮಕಥೆಗಳು" ಈ ಪುಸ್ತಕ ನನ್ನ ಕಾಲೇಜು ದಿನಗಳಲ್ಲಾದ ಸಣ್ಣಸಣ್ಣ ಗುಪ್ತ ಪ್ರೇಮ ಕಥೆಗಳ ಸಂಗ್ರಹವಾಗಿದೆ. ಈ ಕಥೆಗಳು ನಿಮ್ಮ ಕಾಲೇಜು ದಿನಗಳ ಕ್ರಶ್‌ಗಳನ್ನು, ಮಾಜಿ ಪ್ರೀತಿಪಾತ್ರರನ್ನು ನೆನಪಿಸುತ್ತವೆ. ಈ ಕಥೆಗಳು ನಿಮ್ಮನ್ನು ನಗಿಸುತ್ತವೆ, ಅಳಿಸುತ್ತವೆ ಮತ್ತು ಸ್ವಲ್ಪ ಸಮಯದವರೆಗೆ ಯೋಚಿಸುವಂತೆ ಮಾಡುತ್ತವೆ. ಇಂದಿನ 4ಜಿ ಯುಗದಲ್ಲಿ ಯಾರಿಗೂ ದೊಡ್ಡ ಕಥೆಗಳನ್ನು ಓದುವಷ್ಟು ಸಮಯವಿಲ್ಲ. ಹಾಗಾಗಿ ನಾನು ಈ ಸಣ್ಣ ಪ್ರೇಮಕಥೆಗಳ ಸಂಗ್ರಹವನ್ನು ಬರೆದಿದ್ದೇನೆಇದು ನನ್ನ ಹೊಸ ಪ್ರಯತ್ನ. ದಯವಿಟ್ಟು ಈ ಪುಸ್ತಕವನ್ನು ಒಮ್ಮೆ ಓದಿ ಮತ್ತು ನಿಮ್ಮ ಪ್ರಾಮಾಣಿಕ ವಿಮರ್ಶೆಗಳನ್ನು ನೀಡಿ. 

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

4) ಒಂದು ಬಂಗಾರದ ಗುಲಾಬಿ - ಕಾಲೇಜ ಹುಡುಗಿಯ ಪ್ರೇಮಕಥೆ   One Golden Rose - Love Story of Indian College Girl in Kannada 

ಒಂದು ಬಂಗಾರದ ಗುಲಾಬಿ - ಕಾಲೇಜ ಹುಡುಗಿಯ ಪ್ರೇಮಕಥೆ   One Golden Rose - Love Story of Indian College Girl in Kannada

                  ರಶ್ಮಿ ಒಬ್ಬಳು ಭಾರತೀಯ ಕಾಲೇಜು ಹುಡುಗಿ. ಅವಳೇ ಕಾಲೇಜ ಟಾಪರ್. ಅವಳು ಕಾಲೇಜ್ ಟಾಪರ್ ಆಗಿದ್ದರೂ ಸಹ ಆಕೆ ಬಹು ಸುಂದರವಾಗಿದ್ದಳು. ಅವಳಂದಕ್ಕೆ ಜೊಲ್ಲು ಸುರಿಸಿ ನಾಲ್ಕಾರು ಶ್ರೀಮಂತ ಹುಡುಗರು ಅವಳ ಹಿಂದೆ ಸುತ್ತುತ್ತಿರುತ್ತಾರೆ. ಅವರಲ್ಲೊಬ್ಬ ಅವಳಿಗೆ ಬಂಗಾರದ ಗುಲಾಬಿಯನ್ನು ಗಿಫ್ಟಾಗಿ ಕೊಡುತ್ತಾನೆ. ಅವಳನ್ನು ಸೂರ್ಯ ಎಂಬ ಬಡ ಹುಡುಗ ಸಹ ಪ್ರೀತಿಸುತ್ತಿರುತ್ತಾನೆ. ರಶ್ಮಿ ಯಾರ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ ? ಮುಂದೆ ಏನು ಮಾಡುತ್ತಾಳೆ? ಎಂಬೆಲ್ಲ ಪ್ರಶ್ನೆಗಳಿಗೆ  ಉತ್ತರವೇ "ಒಂದು ಬಂಗಾರದ ಗುಲಾಬಿ" ಎಂಬ  ಪ್ರೇಮಕಥೆ...  

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

5) ಕಾದಿರುವೆ ನಿನಗಾಗಿ - One Dreamy Love Story of a Lonely lad in Kannada

ಕಾದಿರುವೆ ನಿನಗಾಗಿ - One Dreamy Love Story of a Lonely lad in Kannada

             "ಕಾದಿರುವೆ ನಿನಗಾಗಿ..." ಇದೊಂದು ಭಾರತದ ಒಂಟಿ ಹುಡುಗನ ಕನಸಿನ ಕನ್ಯೆಯ ಪ್ರೇಮಕಥೆ. ಯಾವುದೇ ಗರ್ಲಫ್ರೆಂಡಗಳಿಲ್ಲದ ಒಂಟಿ ಹುಡುಗ ಯಾವ ರೀತಿಯ ವ್ಯಥೆಯನ್ನು ಅನುಭವಿಸುತ್ತಾನೆ  ಎಂಬುದರ ಮೇಲೆ ಈ ಕಥೆ ಬೆಳಕು ಚೆಲ್ಲುತ್ತದೆ. ಆ ಹುಡುಗನಿಗೆ ಕನಸ್ಸಲ್ಲೊಬ್ಬಳು ಅಪ್ಸರೆ ಸಿಗುತ್ತಾಳೆ. ಅವಳಿಗಾಗಿ ಆತ ಎಲ್ಲವನ್ನು ಮಾಡುತ್ತಾನೆ. ಆದರೆ ಆಕೆ ಅವನಿಂದ ದೂರಾಗುತ್ತಾಳೆ. ಅವನ ಕಾಯುವಿಕೆಯೊಂದಿಗೆ ಹೇಗೆ ಕಥೆ ಮುಗಿಯುತ್ತದೆ ಎಂಬುದಕ್ಕೆ ನೀವು ಪೂರ್ತಿ ಕಥೆಯನ್ನು ಓದಬೇಕು...  

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

6) ಹೀಗೊಂದು ಪ್ರೇಮಕಥೆ - One Beautiful Love Story a Parrot and Fish in Kannada

ಹೀಗೊಂದು ಪ್ರೇಮಕಥೆ - One Beautiful Love Story a Parrot and Fish in Kannada

             "ಹೀಗೊಂದು ಪ್ರೇಮಕಥೆ..." ಇದೊಂದು ಸರೋವರದ ಮೀನು ಮತ್ತು ಕಾಡಿನ ಗಿಳಿಗಳ ಮಧ್ಯೆ ನಡೆಯುವ ಸುಂದರವಾದ ಪ್ರೇಮಕಥೆಯಾಗಿದೆ. ಮೀನು ಹಾಗೂ ಗಿಳಿಗಳು ಪರಸ್ಪರ ಪ್ರೀತಿಸುತ್ತವೆ. ಆದರೆ ಅವುಗಳಿಗೆ ಅವುಗಳ ದೈಹಿಕ ದುರ್ಬಲತೆಗಳ ಕಾರಣಗಳಿಂದ ಜೊತೆಯಾಗಿ ಬಾಳಲಾಗುವುದಿಲ್ಲ. ಹೀಗಾಗಿ ಅವು ಬೇರೆ ಬೇರೆಯಾಗುತ್ತವೆ. ಯಾಕೆ ಈ ಕಥೆ ಅವರಿಬ್ಬರ ದುರಂತ ಸಾವುಗಳಲ್ಲಿ ಕೊನೆಯಾಗುತ್ತದೆ ಎಂಬುದೇ ಈ ಪ್ರೇಮಕಥೆಯ ರಹಸ್ಯ.... 

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು. 

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

7) ಮಡದಿಯ ಪ್ರೇಮ ಪಾಠ - Life Lesson of Wife - One Romantic Love Story in Kannada

ಮಡದಿಯ ಪ್ರೇಮ ಪಾಠ - Life Lesson of Wife - One Romantic Love Story in Kannada

                    "ಮಡದಿಯ ಪ್ರೇಮ ಪಾಠ'' ಇದು ಹೊಸದಾಗಿ ಮದುವೆಯಾದ ಗಂಡ ಮತ್ತು ಹೆಂಡತಿಯರ ನಡುವೆ ನಡೆದ ಒಂದು ರೋಮ್ಯಾಂಟಿಕ್  ಪ್ರೇಮಕಥೆಯಾಗಿದೆ. ಜೀವನದಲ್ಲಿ ಯಾವುದೇ ದೊಡ್ಡ ಗುರಿಗಳನ್ನು ಹೊಂದಿರದ ಗಂಡ ಹಾಗೂ ಐಎಎಸ್ ಅಧಿಕಾರಿಯಾಗಲು ಬಯಸುವ ಹೆಂಡತಿಯ ಕಥೆ ಇದಾಗಿದೆ. ಒಂದು ಕಡೆ ಗಂಡ ಅವಳನ್ನು ದೈಹಿಕ ಸುಖಕ್ಕಾಗಿ ಬಲವಂತವಾಗಿ ಬಳಸಿಕೊಳ್ಳಲು ಮುಂದಾಗುತ್ತಾನೆ. ಮತ್ತೊಂದು ಕಡೆ ಅವನ ತಾಯಿ ಉದ್ದೇಶಪೂರ್ವಕವಾಗಿ ಅವನ ಹೆಂಡತಿಗೆ ಕಾಟ ಕೊಟ್ಟು ಹಿಂಸಿಸುತ್ತಾಳೆ. ಕಥೆ ಈ ರೀತಿ ಮುಂದುವರಿಯುತ್ತದೆ. ಕೊನೆಗೆ ಆ ಸೃಜನಶೀಲ ಹೆಂಡತಿಯ ಪ್ರೇಮಪಾಠದೊಂದಿಗೆ ಗಂಡನ ಮುಚ್ಚಿದ ಕಣ್ಣುಗಳು ತೆರೆಯುತ್ತವೆ, ಆತ ಬದಲಾಗುತ್ತಾನೆ. ಇಲ್ಲೊಂದು ರೋಚಕ ತಿರುವಿದೆ. ಅದನ್ನು ತಿಳಿಯಲು ಈ ಪುಸ್ತಕವನ್ನು ಓದಿ... 

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

  ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

8) ಕಾಡಿನಲ್ಲೊಂದು ಕ್ರೈಮಸ್ಟೋರಿ - Crime Love Story in Kannada

ಕಾಡಿನಲ್ಲೊಂದು ಕ್ರೈಮಸ್ಟೋರಿ - Crime Love Story in Kannada

                              "ಕಾಡಿನಲ್ಲೊಂದು ಕ್ರೈಮಸ್ಟೋರಿ" ಇದು ವಾರಾಂತ್ಯದಲ್ಲಿ ಪರಿಶುದ್ಧ ಏಕಾಂತವನ್ನು ಅರಸಿ ಒಂದು ಜನ ನಿಬಿಡ ಬೆಟ್ಟಕ್ಕೆ ಹೋದ ಯುವ ಪ್ರೇಮಿಗಳ ದುರಂತ ಕಥೆಯಾಗಿದೆ.  ದುರದೃಷ್ಟವಶಾತ್ ಬೆಟ್ಟಕ್ಕೆ ಹೋದ ಆ ಕಾಲೇಜ ಪ್ರೇಮಿಗಳು, ಅಲ್ಲಿ ಈಗಾಗಲೇ ಬೇರೊಬ್ಬರಿಗಾಗಿ ಕಾಯುತ್ತಿದ್ದ ಗೂಂಡಾಗಳ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆ ಪ್ರೇಮಿಗಳಲ್ಲಿ, ಹುಡುಗನನ್ನು ಆ ಗೂಂಡಾಗಳು ಬೆಟ್ಟದಿಂದ ತಳ್ಳಿ ಸಾಯಿಸುತ್ತಾರೆ ಮತ್ತು ಹುಡುಗಿಯನ್ನು ತಮ್ಮ ಕಾಮದಾಹಕ್ಕೆ ಬಳಸಿಕೊಳ್ಳುತ್ತಾರೆ. ಕಮರ್ಷಿಯಲ್ ಬ್ಲೂ ಫಿಲಂ ತಯಾರಿಸುವುದಕ್ಕಾಗಿ ಅವಳನ್ನು ನಾನಾ ತರಹದಲ್ಲಿ ಹಿಂಸಿಸುತ್ತಾರೆ. ಅವಳ ಕೋಮಲ ದೇಹ ಕಾಮದ ಬೇಗೆಯಲ್ಲಿ ದಹಿಸಿ ಹೋದರೂ ಆ ಕಾಮುಕರ ದಾಹ ತೀರುವುದಿಲ್ಲ. ಆಕೆ ಅಲ್ಲಿಯೇ ಕಣ್ಮುಚ್ಚುತ್ತಾಳೆ.  ಇಂತಹ ಅಪಾಯಕಾರಿ ಸ್ಥಳಗಳಿಗೆ ಡೇಟಿಂಗ್ ಮಾಡಲು ಹೋಗುವ ಯುವ ಪ್ರೇಮಿಗಳಿಗೆ ಈ ಕ್ರೈಂ ಸ್ಟೋರಿ ಒಂದು ಎಚ್ಚರಿಕೆಯ ಗಂಟೆಯಾಗಿದೆ.   

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

9) ಬುದ್ಧಿವಂತ ಪತ್ನಿ - One Husband Wife Love Story

ಬುದ್ಧಿವಂತ ಪತ್ನಿ - One Husband Wife Love Story

             "ಬುದ್ಧಿವಂತ ಪತ್ನಿ" ಇದು ಹೊಸದಾಗಿ ಮದುವೆಯಾದ ರಾಣಿ ಎಂಬ ಸುಂದರ ಪತ್ನಿಯ ಸುಂದರ ಸಣ್ಣ ಕಥೆಯಾಗಿದೆ. ಆಕೆ ರವಿ ಎಂಬ ಮಿಡಲ್ ಕ್ಲಾಸ್ ಇಂಜಿನಿಯರನನ್ನು ಮದುವೆಯಾಗಿರುತ್ತಾಳೆ. ಆದರೆ ಮದುವೆಯಾದ ಕೆಲವು ತಿಂಗಳುಗಳ ನಂತರ ರವಿ ಕೆಟ್ಟ ಸ್ನೇಹಿತರ ಸಹವಾಸ ದೋಷದಿಂದ ಮದ್ಯ ಮಾದಕ ವಸ್ತುಗಳ ದಾಸನಾಗುತ್ತಾನೆ ಮತ್ತು ತನ್ನ ಪತ್ನಿ ರಾಣಿಯನ್ನು ಕಾಡಲು ಪ್ರಾರಂಭಿಸುತ್ತಾನೆ. ಅವನನ್ನು ಹತೋಟಿಯಲ್ಲಿಡಲು ರಾಣಿ ಅವನೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುತ್ತಾಳೆ. ಆದರೆ ಆತ ಅವಳ ಬೆಡ್ರೂಮ್ ಬ್ರಹ್ಮಾಸ್ತ್ರಕ್ಕೆ ಬಗ್ಗುವುದಿಲ್ಲ. ಆಗ ಬುದ್ಧಿವಂತ ಪತ್ನಿ ರಾಣಿ ಒಂದು ಖತರ್ನಾಕ ಉಪಾಯ ಮಾಡಿ ತನ್ನ ಗಂಡನ ಚಟವನ್ನು ಬಿಡಿಸುತ್ತಾಳೆ. ಅವಳ  ಖತರ್ನಾಕ ಉಪಾಯ, ಪ್ರೀತಿ ಮತ್ತು ಪ್ರಣಯದ ಕಥೆಯ ಮಜಾ ಅನುಭವಿಸಲು ಈ ಪುಸ್ತಕವನ್ನು ಓದಿ. 

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

10) True ಗರ್ಲಫ್ರೆಂಡ್ - One Friendship love story in Kannada

True ಗರ್ಲಫ್ರೆಂಡ್ - One Friendship love story in Kannada

                        "True ಗರ್ಲಫ್ರೆಂಡ್" ಇದು ಹದಿಹರೆಯದ ಹುಡುಗ ಹುಡುಗಿಯರ ಕಣ್ಣು ತೆರೆಸುವ ಕಥೆಯಾಗಿದೆ. ಫೇಸ್ಬುಕ್ ಸ್ನೇಹವೇ ನಿಜವಾದ ಸ್ನೇಹವೆಂದು ಹೆಚ್ಚಿನ ಜನ ನಂಬಿದ್ದಾರೆ. ಆದರೆ ಅದು ನಿಜವಾದ ಸ್ನೇಹವಲ್ಲ. ನಕಲಿ ಫೇಸ್‌ಬುಕ್ ಸ್ನೇಹಿತರಿಗಿಂತ ಲೈಫ್‌ಬುಕ್ ಸ್ನೇಹಿತರು ಮುಖ್ಯ ಎಂದು ಈ ಕಥೆ ಸಾಬೀತುಪಡಿಸುತ್ತದೆ. ಫೇಸ್‌ಬುಕ್ ಮತ್ತು ಮೊಬೈಲ್ ಸ್ನೇಹಿತರು ನಿಜವಾದ ಸ್ನೇಹಿತರಾಗಿದ್ದಾರೆ ಹಾಗೂ ಅವರು ನಮ್ಮ ಸಂಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡಲು ಬರುತ್ತಾರೆ ಎಂದು ನಂಬಿದ್ದ ಇಬ್ಬರು ಒಡಹುಟ್ಟಿದವರ ಕಥೆ ಇದು. ಅವರು ಹೇಗೆ ನಕಲಿ ಸ್ನೇಹಿತರನ್ನು ಬಿಟ್ಟು ನಿಜವಾದ ಸ್ನೇಹಿತರನ್ನು ಕಂಡುಕೊಳ್ಳುತ್ತಾರೆ ಎಂಬುದು ಈ ಕಥೆಯ ಆತ್ಮವಾಗಿದೆ. ನಾನು ಈ ಕಥೆಯನ್ನು ಆರು ವರ್ಷಗಳ ಹಿಂದೆ ಬರೆದಿರುವೆ. ಆದರೆ ಇದು ಇಂದಿನ ಸಂದರ್ಭಗಳಿಗೆ ಹೆಚ್ಚು ಸೂಕ್ತವಾಗಿದೆ. ಫೇಸ್‌ಬುಕ್ ಸ್ನೇಹಿತರನ್ನು ನಿಜವಾದ ಸ್ನೇಹಿತರೆಂದು ನಂಬುವ,  ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಜನರು ಈ ಸಣ್ಣ ಕಥೆಯನ್ನು ಒಮ್ಮೆ ಓದಬೇಕು.

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.
  
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

11) ಬಿಳಿಕಾಗೆ : ಕಾಲೇಜ ಕಿರಾತಕಿಯ ಕಥೆ - Kannada Short Story - Kannada Moral Story

ಬಿಳಿಕಾಗೆ : ಕಾಲೇಜ ಕಿರಾತಕಿಯ ಕಥೆ - Kannada Short Story - Kannada Moral Story
 
                   ಎಷ್ಟೋ ಜನ ಫೆಮಿನಿಸಮ್ ಪಂಡಿತೆಯರಿಗೆ ಫೆಮಿನಿಸಮ್ ಪದದ ನಿಜವಾದ ಅರ್ಥ ಹಾಗೂ ಉದ್ದೇಶ ಗೊತ್ತಿಲ್ಲ. ಅವರು ತಾವು ಮಾಡುವ ದುಶ್ಚಟಗಳಿಗೆ ಫೆಮಿನಿಸಮನ ಲೇಬಲ್ ಅಂಟಿಸಿ ಜಾರಿಕೊಳ್ಳುತ್ತಾರೆ. ಎಲ್ಲ ತರಹದ ದುಶ್ಚಟಗಳನ್ನು, ಅಶ್ಲೀಲತೆಗಳನ್ನು ಮಾಡಿ ದಾರಿ ತಪ್ಪಿ ಹಾಳಾಗುತ್ತಾರೆ. ಅಂಥವರಲ್ಲಿ ಈ ಕಥೆಯ ನಾಯಕಿ ಅನಿ ಕೂಡ ಒಬ್ಬಳು. ಹುಡುಗಿಯರು ಫೇಕ್ ಫೆಮಿನಿಸಮನಿಂದ ಹೇಗೆ ದಾರಿ ತಪ್ಪುತ್ತಾರೆ ಎಂಬುದಕ್ಕೆ ಈ ಕಥೆಯ ನಾಯಕಿ ಉತ್ತಮ ಉದಾಹರಣೆಯಾಗಿದ್ದಾಳೆ. ಹುಡುಗಿಯರ ಉನ್ನತಿಗಾಗಿ ಫೆಮಿನಿಸಮ್ ಬೇಕು. ಆದರೆ ಅದನ್ನು ದುರುಪಯೋಗಪಡಿಸಿಕೊಂಡರೆ ಅದರಿಂದಲೇ ಅವರು ಅವನತಿಯಾಗುತ್ತಾರೆ ಎಂಬುದನ್ನು ಈ ಕಥೆ ನಿರೂಪಿಸುತ್ತದೆ. 

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

12) 5 ಕಾಲೇಜ ಪ್ರೇಮ ಕಥೆಗಳು - ಸಣ್ಣ ಪ್ರೇಮ ಕಥೆಗಳ ಸಂಗ್ರಹ College Love Stories - Collection Small Love Stories

5 ಕಾಲೇಜ ಪ್ರೇಮ ಕಥೆಗಳು - ಸಣ್ಣ ಪ್ರೇಮ ಕಥೆಗಳ ಸಂಗ್ರಹ College Love Stories - Collection Small Love Stories

                      "5 ಕಾಲೇಜ ಪ್ರೇಮ ಕಥೆಗಳು" ಇದು ನನ್ನ ಕಾಲೇಜ್ ಜೇವನದಲ್ಲಿ ಸಂಭವಿಸಿದ ಸಣ್ಣ ಪ್ರೇಮಕಥೆಗಳ ಸಂಗ್ರಹವಾಗಿದೆ. ಪ್ರತಿಯೊಬ್ಬರೂ ಈ ಕಥೆಗಳೊಂದಿಗೆ ತಮ್ಮನ್ನು ತಾವು ರಿಲೇಟ್ ಮಾಡಿಕೊಳ್ಳಬಹುದು. ಈ ಪುಸ್ತಕವು 5 ಸಣ್ಣ ಪ್ರೇಮ ಕಥೆಗಳನ್ನು ಒಳಗೊಂಡಿದೆ ;

1) ಆಕರ್ಷಣೆಯ ಪ್ರೀತಿ - One Friendship Story

2) ರಾಣಿ ಮಹಲ್ - One Cute Love Story

3) ವೈದ್ಯರ ಧರ್ಮ ಸಂಕಟ - One Love Story with Death

4) ಹೇಳದೆ ಉಳಿದ ಪ್ರೀತಿ - Story of Unexpressed Love 

5) ಸಂದೀಪನ ಸಂದೇಹ - Love Story of Doubtful Boy

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

13) ಮೋಸಗಾರ ರಾಜ - The King Cheater - Kannada Sad Love Stories 

ಮೋಸಗಾರ ರಾಜ - The King Cheater - Kannada Sad Love Stories

                            "ಮೋಸಗಾರ ರಾಜ" ಇದು ರಾಜಕುಮಾರಿ ಅಮೃತಾ ಹಾಗೂ ಸಾಮಾನ್ಯ ಗುಮಾಸ್ತ ಅಗಸ್ತ್ಯನ ಕಾಲ್ಪನಿಕ ಪ್ರೇಮಕಥೆಯಾಗಿದೆ. ಅಮೃತಾಳ ತಂದೆ ಕ್ರೂರ ರಾಜ ಸುದರ್ಶನನೇ ಈ ಕಥೆಯ ಮೋಸಗಾರ ರಾಜ. ಅವನು ಕ್ರೂರ ರಾಜನಾಗಿದ್ದರೂ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಿದ್ದನು. ಆದರೆ ಕೊನೆಯಲ್ಲಿ ಆತ ಅಮೃತಾಳನ್ನು ಬರ್ಬರವಾಗಿ ಕೊಲ್ಲುತ್ತಾನೆ. ಆತ ಯಾಕೆ ಅವಳನ್ನು ಕೊಲ್ಲುತ್ತಾನೆ? ಹೇಗೆ ಕೊಲ್ಲುತ್ತಾನೆ? ಅಗಸ್ತ್ಯ ಏನಾಗುತ್ತಾನೆ? ಎಂಬುದೇ ಈ ಕಥೆಯ ಮುಖ್ಯ ಕಥಾವಸ್ತು. ಒಟ್ಟಿನಲ್ಲಿ ಇದು ಅಮೃತಾಳ ಪ್ರೀತಿ ಹಾಗೂ ಸುದರ್ಶನನ ದ್ವೇಷದ ರೋಚಕ ಕಥೆಯಾಗಿದೆ. 

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

14) ಮಾಜಿ ಪ್ರೇಯಸಿಗೊಂದು ಪತ್ರ -  A letter to X lover in Kannada

ಮಾಜಿ ಪ್ರೇಯಸಿಗೊಂದು ಪತ್ರ -  A letter to X lover in Kannada

                          "ಮಾಜಿ ಪ್ರೇಯಸಿಗೊಂದು ಪತ್ರ" ಇದೊಂದು ಅತ್ಯುತ್ತಮ ಲವ್ ಬ್ರೇಕಪ್ ಮೋಟಿವೇಷನ್ ಬುಕ್ ಆಗಿದೆ. ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಒಬ್ಬ ಸುಂದರ ಹಾಗೂ ಯಶಸ್ವಿ ಹುಡುಗನಿಂದ ದೂರಾದ ಒಬ್ಬಳು ಅನಲಕ್ಕಿ ಹುಡುಗಿಯನ್ನು ಈ ಪುಸ್ತಕವು ಮೋಟಿವೇಟ್ ಮಾಡುತ್ತದೆ. ಟೀನೇಜಲ್ಲಿ ತಮ್ಮ ಹೃದಯಕ್ಕೆ ಗಾಯ ಮಾಡಿಕೊಂಡ ಎಲ್ಲ ಹರೆಯದ ಹುಡುಗಿಯರಿಗೆ ಜೀವನದಲ್ಲಿ ಸಕ್ಸೆಸಫುಲ್ಲಾಗಲು ಈ ಪುಸ್ತಕ ಪ್ರೇರೇಪಿಸುತ್ತದೆ. ಲವ್ವಲ್ಲಿ ಫೇಲಾದಾಗ ಲೈಫಲ್ಲಿ ಪಾಸಾಗಲು ಈ ಪುಸ್ತಕ ಉಪದೇಶಿಸುತ್ತದೆ. ಮನಸ್ಸು ಮುರಿದ ಹುಡುಗ ಅಥವಾ ಹುಡುಗಿ ಒಮ್ಮೆ ಓದಲೇಬೇಕಾದ ಪುಸ್ತಕವಿದು...   

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

15) ಗುಪ್ತ ಪ್ರೇಯಸಿ : ಕನ್ನಡ  ಗುಪ್ತ ಪ್ರೇಮಕಥೆ Kannada Sad Love Story

ಗುಪ್ತ ಪ್ರೇಯಸಿ : ಕನ್ನಡ  ಗುಪ್ತ ಪ್ರೇಮಕಥೆ Kannada Sad Love Story

                 ಅವರಿಬ್ಬರದು ಇತಿಹಾಸದ ಪುಟ ಸೇರುವ ಸ್ನೇಹವಾಗಿತ್ತು. ಅವರಿಬ್ಬರು ಪ್ರೇಮಿಗಳಿಗಿಂತ ಹೆಚ್ಚು ಹತ್ತಿರವಾಗಿದ್ದರು. ಅವರಿಬ್ಬರ ಮಧ್ಯೆ ಯಾವುದೇ ಮುಚ್ಚುಮರೆಯಿರಲಿಲ್ಲ. ಅವನು ಅವಳನ್ನು ಬೆಸ್ಟ ಫ್ರೆಂಡ್ ಎಂದುಕೊಂಡಿದ್ದನು. ಅವನ ಮನಸ್ಸಲ್ಲಿ ಪ್ರೇಮ ಗೀಮವೇನು ಇರಲಿಲ್ಲ. ಆದರೆ ಅವಳ ಮನಸ್ಸಲ್ಲಿ ಅವನ ಮೇಲೆ ಪ್ರೇಮವಿರುತ್ತದೆ. ಆದರೆ ಆಕೆ ಅದನ್ನು ಅವನಿಗೆ ಹೇಳುವುದಿಲ್ಲ.  ತರಾತುರಿಯಲ್ಲಿ ಅವಳ ಮದುವೆ ನಡೆದು ಹೋಗುತ್ತದೆ. ಮದುವೆಯಾದ ನಂತರ ಅವಳು ಅವನಿಗೆ ಮೆಸೇಜ್ ಮಾಡಿ "ನಾನು ನಿನ್ನನ್ನು ಪ್ರೀತಿಸುತ್ತಿದ್ದೆ..." ಎಂದೆಲ್ಲ ಹೇಳಿದಳು. ಇದಾದ ನಂತರ ಅವನ ಮನಸ್ಸಲ್ಲಿ ಇಲ್ಲದ ಪ್ರೀತಿ ಕಾಯಿಲೆ ಹುಟ್ಟಿಕೊಳ್ಳುತ್ತದೆ. ಮುಂದೆ ಅವರಿಬ್ಬರ ಜೀವನದಲ್ಲಿ ಏನಾಗುತ್ತದೆ ಎಂಬುದೇ ಈ "ಗುಪ್ತ ಪ್ರೇಯಸಿ" ಎಂಬ ಸಣ್ಣ ಪ್ರೇಮಕಥೆಯಾಗಿದೆ.

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

Blogger ನಿಂದ ಸಾಮರ್ಥ್ಯಹೊಂದಿದೆ.