ಮ್ಯುಚುವಲ್ ಫಂಡಗಳ ಸಂಪೂರ್ಣ ಮಾಹಿತಿ | Everything About Mutual Funds in Kannada - ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? : How to invest in Mutual Funds? in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮ್ಯುಚುವಲ್ ಫಂಡಗಳ ಸಂಪೂರ್ಣ ಮಾಹಿತಿ | Everything About Mutual Funds in Kannada - ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? : How to invest in Mutual Funds? in Kannada

ಮ್ಯುಚುವಲ್ ಫಂಡಗಳ ಸಂಪೂರ್ಣ ಮಾಹಿತಿ | Everything About Mutual Funds in Kannada - ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? How to invest in Mutual Funds? in Kannada


              ಭಾರತದಲ್ಲಿ ಬಡವರು ದುಡ್ಡಿಗಾಗಿ ದುಡಿಯುತ್ತಾರೆ. ಆದರೆ ಶ್ರೀಮಂತರು ದುಡ್ಡನ್ನು ದುಡಿಸಿ ಮತ್ತಷ್ಟು ದುಡ್ಡು ಮಾಡುತ್ತಾರೆ. ಬಡವರು ತಮ್ಮ ದುಡ್ಡನ್ನು ಸೇವಿಂಗ್ ಬ್ಯಾಂಕ ಅಕೌಂಟಗಳಲ್ಲಿ ಇಲ್ಲವೇ FD-RDಗಳಲ್ಲಿ ಹೂಡಿಕೆ ಮಾಡುತ್ತಾರೆ ಮತ್ತು ಕಡಿಮೆ ಹಣ ಸಂಪಾದಿಸುತ್ತಾರೆ. (FD=Fixed Deposit, RD= Recurring Deposit) ಹೆಚ್ಚಿನ ಶ್ರೀಮಂತರು ಮ್ಯುಚುವಲ ಫಂಡ್ಸ ಮತ್ತು ಶೇರ್ ಮಾರ್ಕೆಟನಲ್ಲಿ ಹಣ ಹೂಡಿಕೆ ಮಾಡುತ್ತಾರೆ ಮತ್ತು ಹೆಚ್ಚಿನ ಹಣವನ್ನು ಸಂಪಾದಿಸುತ್ತಾರೆ. ಯಾಕೆ ಹೀಗೆ? ಬಡವರ್ಯಾಕೆ ಮ್ಯುಚುವಲ ಫಂಡ್ಸ ಮತ್ತು ಶೇರ್ ಮಾರ್ಕೆಟನಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಸಂಪಾದಿಸಲ್ಲ? ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲ್ಲ? ಏಕೆಂದರೆ

1) ಬಹಳಷ್ಟು ಜನರಿಗೆ ಮ್ಯುಚುವಲ ಫಂಡ್ಸ ಮತ್ತು ಶೇರ್ ಮಾರ್ಕೆಟ್ ಬಗ್ಗೆ ಜ್ಞಾನವಿಲ್ಲ.
2) ಶ್ರೀಮಂತರ ಬಳಿ Extra ದುಡ್ಡಿದೆ. ಆದರೆ ಬಡವರತ್ರ ದುಡ್ಡಿಲ್ಲ. ಅವರ ಸಂಪಾದನೆಯೆಲ್ಲ ಮನೆ ಖರ್ಚಿನಲ್ಲಿ ಕಳೆದು ಹೋಗುತ್ತದೆ.
3) ದುಡ್ಡನ್ನು ಕಳೆದುಕೊಳ್ಳುವ ಭಯ. ಈಗಾಗಲೇ ಬಹಳಷ್ಟು ಜನ ದುಡ್ಡನ್ನು ಡಬ್ಬಲ ಮಾಡ್ತೀನಿ ಅಂತಾ ಬಡವರನ್ನು ಚೆನ್ನಾಗಿ ಯಾಮಾರಿಸಿದ್ದಾರೆ. ಅದಕ್ಕಾಗಿ ಜನ ಹಣವನ್ನು ಹೂಡಿಕೆ ಮಾಡಲು ಹೆದರುತ್ತಾರೆ. ನಿಮ್ಮ ಬಳಿ ಸರಿಯಾದ ಜ್ಞಾನವಿದ್ದರೆ ನೀವು ಹೆದರುವ ಅವಶ್ಯಕತೆಯಿಲ್ಲ.

ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? How to invest in Mutual Funds?

                                   ಬನ್ನಿ ಗೆಳೆಯರೇ, ಇವತ್ತಿನ ಎಪಿಸೋಡನಲ್ಲಿ ನಾವು ಮ್ಯುಚುವಲ್ ಫಂಡ್ಸಗಳ ಬಗ್ಗೆ ಡಿಟೇಲಾಗಿ ತಿಳಿದುಕೊಳ್ಳೋಣಾ. ಈ ಎಪಿಸೋಡನಲ್ಲಿ ನೀವು ಮ್ಯುಚುವಲ ಫಂಡಗಳ ಬಗ್ಗೆ ಎಲ್ಲವನ್ನು ಡಿಟೇಲಾಗಿ ತಿಳಿದುಕೊಳ್ಳುತ್ತೀರಿ. ಅಂದ್ರೆ
1) ಮ್ಯುಚುವಲ್ ಫಂಡ್ಸ ಎಂದರೇನು?
2) ಮ್ಯುಚುವಲ್ ಫಂಡ್ಸ ಹೇಗೆ ಕೆಲಸ ಮಾಡುತ್ತವೆ?
3) ಮ್ಯುಚುವಲ್ ಫಂಡ್ಸ ಸೇಫಾಗಿವೆಯಾ? ಅಥವಾ ಇಲ್ವಾ? ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡಬೇಕಾ ಅಥವಾ ಬೇಡ್ವಾ? ರಿಸ್ಕ ರೇಷೋ ಎಷ್ಟಿದೆ?
4) ಮ್ಯುಚುವಲ ಫಂಡಗಳ ವಿಧಗಳು?
5) ಯಾವ ಮ್ಯುಚುವಲ ಫಂಡ್ಸ ಬೆಸ್ಟ?
6) ಮೊಬೈಲ್ ಆ್ಯಪಗಳಿಂದ ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡೋದು ಸೇಫಾಗಿದೆಯಾ? ಎಂಬಿತ್ಯಾದಿ ವಿಷಯಗಳ ಬಗ್ಗೆ ಡಿಟೇಲಾಗಿ ತಿಳಿದುಕೊಳ್ಳೊಣಾ. Lets Begin...

1) ಮ್ಯುಚುವಲ್ ಫಂಡ್ಸ ಎಂದರೇನು? What are Mutual Funds? in Kannada

                    ಮ್ಯುಚುವಲ್ ಫಂಡಗಳು ಪ್ರೊಫೆಷನಲಿ ಮ್ಯಾನೇಜ ಮಾಡಲಾಗುವ ಇನವೆಸ್ಟಮೆಂಟ್ ಫಂಡಗಳಾಗಿವೆ. ಇವು ಮ್ಯುಚುವಲ್ ಫಂಡ ಕಂಪನಿಗಳಿಂದ ಮತ್ತು ಅಸೆಟ್ ಮ್ಯಾನೇಜಮೆಂಟ ಕಂಪನಿಗಳಿಂದ (AMC) ನಡೆಸಲ್ಪಡುತ್ತವೆ. ಸೇವಿಂಗ ಬ್ಯಾಂಕ ಅಕೌಂಟ, FD, RDಗಳಿಗಿಂತ ಹೆಚ್ಚಿನ ರಿಟರ್ನ್ಸ ಬಯಸುವವರು ಮ್ಯುಚುವಲ ಫಂಡಗಳಲ್ಲಿ ಇನವೇಸ್ಟ ಮಾಡಬಹುದು. ಸರಿಯಾದ ನಾಲೇಡ್ಜ ಇರುವ ಯಾರು ಬೇಕಾದರೂ ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಸಂಪಾದಿಸಬಹುದು.

2) ಮ್ಯುಚುವಲ ಫಂಡ್ಸಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ? How Mutual Funds works? in Kannada

                                ಮ್ಯುಚುವಲ್ ಫಂಡಗಳು ಅಸೆಟ್ ಮ್ಯಾನೇಜಮೆಂಟ ಕಂಪನಿಗಳಿಂದ ಮತ್ತು ಮ್ಯುಚುವಲ್ ಫಂಡ ಕಂಪನಿಗಳಿಂದ ನಿರ್ವಹಿಸಲ್ಪಡುತ್ತವೆ. ಮ್ಯುಚುವಲ್ ಫಂಡ ಕಂಪನಿಗಳು ಬಹಳಷ್ಟು ಸಣ್ಣಸಣ್ಣ ಇನ್ವೇಸ್ಟರಗಳಿಂದ ಹಣವನ್ನು ಪಡೆದುಕೊಂಡು ಅದನ್ನು ಒಂದು ದೊಡ್ಡ ಪ್ರೊಜೆಕ್ಟನಲ್ಲಿ ಹೂಡಿಕೆ ಮಾಡುತ್ತವೆ. ಅಂದರೆ ಮ್ಯುಚುವಲ್ ಫಂಡಗಳು ನಿಮ್ಮಿಂದ ಹಣವನ್ನು ಪಡೆದುಕೊಂಡು ಅದನ್ನು ಈಕ್ವಿಟಿ ಶೇರಗಳಲ್ಲಿ ಮತ್ತು ಬಾಂಡ್ಸಗಳಲ್ಲಿ ಹೂಡಿಕೆ ಮಾಡುತ್ತವೆ. ನಿಗದಿತ ಅವಧಿಯ ನಂತರ ಆ ಹೂಡಿಕೆಯಿಂದ ರಿಟರ್ನ್ಸ ಬಂದಾಗ ತಮ್ಮ ಕಮಿಷನನ್ನು ಕಟ್ ಮಾಡಿಕೊಂಡು ಮಿಕ್ಕಿದ ಲಾಭವನ್ನು ಆಯಾ ಇನ್ವೆಸ್ಟರಗಳಿಗೆ ನೀಡುತ್ತವೆ. ಹೆಚ್ಚು ಟೈಮ ಹಾಗೂ ಹೆಚ್ಚು ರಿಸ್ಕ ಇದ್ದಾಗ ಇವು ಹೆಚ್ಚಿನ ರಿಟರ್ನ್ಸನ್ನು ತಂದು ಕೊಡುತ್ತವೆ. ಈ ಕೆಳಗಿನ ಗ್ರಾಫನ್ನು ಗಮನಿಸಿ ನಿಮಗೆ ಮ್ಯುಚುವಲ್ ಫಂಡಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಒಂದು ಕಲ್ಪನೆ ಮೂಡುತ್ತದೆ.

ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? How to invest in Mutual Funds?

3) ಮ್ಯುಚುವಲ್ ಫಂಡ್ಸಗಳು ಸೇಫಾಗಿವೆಯಾ? Are Mutual Funds are Safe? in Kannada

                    ಮ್ಯುಚುವಲ್ ಫಂಡಗಳು ಸೇಫಾಗಿವೆ, ಹೆದರುವ ಅವಶ್ಯಕತೆಯಿಲ್ಲ. ಏಕೆಂದರೆ ಮ್ಯುಚುವಲ್ ಫಂಡ್ಸ ಕಂಪನಿಗಳು SEBI (Securities and Exchange Board of India) ಮತ್ತು AMFI (Association of Mutual Funds India)ದಿಂದ ಸುರಕ್ಷಿತವಾಗಿ ನಿಯಂತ್ರಿಸಲ್ಪಡುತ್ತವೆ. They are strictly regulated and supervised by SEBI.

               SEBI ಮ್ಯುಚುವಲ್ ಫಂಡ್ಸ ಕಂಪನಿಗಳಿಗೆ ಇನ್ವೆಸ್ಟರಗಳ ಎಲ್ಲ ಹಣವನ್ನು ಕ್ಯಾಷನಲ್ಲಿ ಕನವರ್ಟ ಮಾಡಿಕೊಂಡು ಓಡಿ ಹೋಗಲು ಅವಕಾಶ ಮಾಡಿಕೊಡುವುದಿಲ್ಲ. ನಿಮ್ಮ ಹಣವನ್ನು ಕ್ಯಾಷನಲ್ಲಿ ಕನವರ್ಟ ಮಾಡಿಕೊಂಡು ಓಡಿ ಹೋಗಲು ಮ್ಯುಚುವಲ್ ಫಂಡ್ಸ ಕಂಪನಿಗಳಿಗೆ ಸಾಧ್ಯವಿಲ್ಲ. SEBI ಸರಿಯಾಗಿ ಕೆಲಸ ಮಾಡುವ ತನಕ ನಿಮ್ಮ ಮ್ಯುಚುವಲ್ ಫಂಡ್ಸಗಳು ಸೇಫಾಗಿರುತ್ತವೆ. ಆದರೆ 100% ಸೇಫಾಗಿರುತ್ತವೆ ಅಂತಾ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ಏಕೆಂದರೆ ಹೆಚ್ಚಿನ ಲಾಭವಿದೆ,  ರಿಟರ್ನ್ಸಯಿದೆ ಎಂದಾಗ ರಿಸ್ಕ ಕೂಡ ಇದ್ದೇ ಇರುತ್ತದೆ. ಅಲ್ಲದೆ ದೇಶದ ಜಿಡಿಪಿ ಮತ್ತು ಎಕಾನಮಿ ಬಿದ್ದಾಗ ನಿಮ್ಮ ಮ್ಯುಚುವಲ್ ಫಂಡ್ಸಗಳು ನಷ್ಟದಲ್ಲಿ ಹೋಗುತ್ತವೆ. ಮ್ಯುಚುವಲ್ ಫಂಡ್ಸ ಕಂಪನಿಗಳು ಬ್ಯಾಂಕಗಳಷ್ಟು ಸೇಫಾಗಿವೆ. ಆದರೆ ಬ್ಯಾಂಕಲ್ಲಿರೋ ಹಣವನ್ನು ಬ್ಯಾಂಕ್ ಮಾಲಿಕರೇ ತೆಗೆದುಕೊಂಡು ದೇಶ ಬಿಟ್ಟು ಓಡಿ ಹೋಗುತ್ತಿರುವಾಗ ಏನಾಗುತ್ತೆ ಅಂತಾ ಹೇಳೊಕ್ಕಾಗಲ್ಲ. ಸದ್ಯದ ಪರಿಸ್ಥಿತಿಗಳು ನಿಮಗೆಲ್ಲಾ ಚೆನ್ನಾಗಿ ಗೊತ್ತಿವೆ.

4) ಮ್ಯುಚುವಲ್ ಫಂಡ್ಸಗಳಲ್ಲಿ ಹಣ ಹೂಡಿಕೆ ಮಾಡಬೇಕಾ ಅಥವಾ ಬೇಡ್ವಾ?

                 ಎಲ್ಲ ಇನವೆಸ್ಟಮೆಂಟಗಳಲ್ಲಿ ರಿಸ್ಕ ಇದ್ದೇ ಇರುತ್ತದೆ. ಹಾಯ್ ರಿಟರ್ನ್ಸ ಇದೆ ಅಂದ್ಮೇಲೆ ಹಾಯ್ ರಿಸ್ಕ ಕೂಡ ಇರುತ್ತದೆ. ಮಾರುಕಟ್ಟೆಯಲ್ಲಿ ಏರಿಳಿತಗಳು ಆಗುತ್ತಲೇ ಇರುತ್ತವೆ. ಅವೆಲ್ಲ ಕಾಮನ. ಲಾಭನಷ್ಟಗಳು ಕಾಮನ. ನಿಮಗೆ ಮ್ಯುಚುವಲ್ ಫಂಡಗಳಲ್ಲಿ ಹೂಡಿಕೆ ಮಾಡಿದ ಒಟ್ಟು ಮೊತ್ತ ಸಿಕ್ಕೆ ಸಿಗುತ್ತದೆ ಅಂತಾ ಹೇಳೊಕ್ಕಾಗಲ್ಲ. (FD ಮತ್ತು RDಗಳಂತೆ). ಆದರೆ ನೀವು ಸರಿಯಾಗಿ ರಿಸರ್ಚ್ ಮಾಡಿ, ಸರಿಯಾದ ಮ್ಯುಚುವಲ್ ಫಂಡ್ಸಗಳಲ್ಲಿ ಹಣ ಹೂಡಿಕೆ ಮಾಡಿದರೆ ನಿಮಗೆ FDಗಿಂತ ಜಾಸ್ತಿ ರಿಟರ್ನ್ಸ ಸಿಗುತ್ತದೆ. ಡಬ್ಬಲ ಕೂಡ ಸಿಗಬಹುದು. ಸೋ ನೀವು ಮ್ಯುಚುವಲ್ ಫಂಡ್ಸಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು.

ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? How to invest in Mutual Funds?

5) ಮ್ಯುಚುವಲ್ ಫಂಡ್ಸಗಳ ವಿಧಗಳು : Types of Mutual Funds in Kannada

ಮ್ಯುಚುವಲ್ ಫಂಡ್ಸಗಳಲ್ಲಿ ಬಹಳಷ್ಟು ವಿಧಗಳಿವೆ. ನಾನಿಲ್ಲಿ ಮುಖ್ಯವಾಗಿರುವ ಮೂರನ್ನು ಹೇಳುತ್ತಿರುವೆ.

೧) ಈಕ್ವಿಟಿ ಮ್ಯುಚುವಲ್ ಫಂಡ್ಸ : Equity Mutual Funds

                 ಈಕ್ವಿಟಿ ಮ್ಯುಚುವಲ್ ಫಂಡ್ಸಗಳಲ್ಲಿ ಇನ್ವೇಸ್ಟರಗಳ ಹಣವನ್ನು ಈಕ್ವಿಟಿ ಸ್ಟಾಕಗಳಲ್ಲಿ, ಕಂಪನಿ ಶೇರಗಳಲ್ಲಿ ಮತ್ತು ಶೇರ್ ಮಾರ್ಕೆಟನಲ್ಲಿ ಹೂಡಿಕೆ ಮಾಡಲಾಗುತ್ತದೆ. ಇಲ್ಲಿ ಹಾಯ್ ರಿಸ್ಕ ಮತ್ತು ಹಾಯ್ ರಿಟರ್ನ್ಸಯಿದೆ.

೨) ದೆಬ್ಟ ಮ್ಯುಚುವಲ್ ಫಂಡ್ಸಗಳು : Debt Mutual Funds

              ಇಲ್ಲಿ ಇನ್ವೇಸ್ಟರಗಳ ಹಣವನ್ನು ಕಂಪನಿ ಡಿಬೆಂಚರುಗಳಲ್ಲಿ, ಕಾರ್ಪೋರೆಟ ಬಾಂಡ್ಸಗಳಲ್ಲಿ, ಗವರ್ನಮೆಂಟ್ ಬಾಂಡ್ಸಗಳಲ್ಲಿ ಮತ್ತು ಇನ್ನಿತರೇ ಫಿಕ್ಸ್ಡ ಇನಕಮ್ ಅಸೆಟ್ಸಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇಲ್ಲಿ ರಿಸ್ಕ ಕಡಿಮೆಯಿದೆ. ಜೊತೆಗೆ ಇದು ಸೇಫ್ ಇನವೆಸ್ಟಮೆಂಟಾಗಿದೆ. ಇಲ್ಲಿ ನಿಮಗೆ ಕಮ್ಮಿ ರಿಟರ್ನ್ಸ ಬಂದರೂ ಫಿಕ್ಸ್ಡ ರಿಟರ್ನ್ಸ ಬರುತ್ತದೆ.

೩) ಹೈಬ್ರಿಡ ಮ್ಯುಚುವಲ್ ಫಂಡ್ಸಗಳು : Hybrid Mutual Funds

           ಇಲ್ಲಿ ಇನ್ವೇಸ್ಟರಗಳ ಹಣವನ್ನು ಈಕ್ವಿಟಿ ಮ್ಯುಚುವಲ್ ಫಂಡ್ಸ ಮತ್ತು ದೆಬ್ಟ ಮ್ಯುಚುವಲ್ ಫಂಡ್ಸ ಎರಡರಲ್ಲೂ ಹೂಡಿಕೆ ಮಾಡಲಾಗುತ್ತದೆ. ಇದು ಸೆಮಿ ರಿಸ್ಕ ಇನವೇಸ್ಟಮೆಂಟಾಗಿದೆ. ಇದು ಇನಕಮ ಜನರೇಷನಗೆ ಹಾಗೂ ಗ್ರೋಥಗೆ ಬೆಸ್ಟಾಗಿದೆ.

ಇವುಗಳನ್ನು ಹೊರತುಪಡಿಸಿ ಇನ್ನೂ ನೂರಾರು ತರಹದ ಮ್ಯುಚುವಲ್ ಫಂಡ್ಸಗಳಿವೆ.

ಉದಾ : Money Market Funds, Growth Mutual Funds, Income Mutual Funds, Liquid Funds, Tax Saving Funds, Sector Mutual Funds, Real Estate Mutual Funds, Pension Funds, Index Funds, Funds of Funds, Global Funds, Capital Protection Funds, Fixed Maturity Funds, International Funds etc.

ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? How to invest in Mutual Funds?

6) ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? How to invest in Mutual Funds? in Kannada

                         ಯಾವುದೇ ಮ್ಯುಚುವಲ್ ಫಂಡ್ಸಗಳಲ್ಲಿ ಇನ್ವೇಸ್ಟ್ ಮಾಡುವುದಕ್ಕಿಂತ ಮುಂಚೆ ನೀವು ೨ ವಿಷಯಗಳ ಮೇಲೆ ಗಮನ ಹರಿಸಬೇಕು.
೧) ನಿಮ್ಮತ್ರ ಎಷ್ಟು ದುಡ್ಡಿದೆ? ಅಂದರೆ ನಿಮ್ಮ Saving.
೨) ನಿಮಗೆ ಎಷ್ಟು ರಿಟರ್ನ್ಸ್ ಬೇಕಿದೆ? ಅಂದರೆ ನಿಮ್ಮ Investment Goal.
ಈ ಎರಡು ವಿಷಯಗಳ ಆಧಾರದ ಮೇಲೆ ನೀವು ಮ್ಯುಚುವಲ್ ಫಂಡ್ಸಗಳಲ್ಲಿ ಹಣ ಹೂಡಿಕೆ ಮಾಡಬೇಕು. ಮ್ಯುಚುವಲ್ ಫಂಡ್ಸಗಳಲ್ಲಿ ಹಣ ಹೂಡಿಕೆ ಮಾಡಲು ಎರಡು ವಿಧಾನಗಳಿವೆ. ಒಂದು ಒನ್ ಟೈಮ್ ಇನ್ವೆಸ್ಟಮೆಂಟ್, ಎರಡನೆಯದ್ದು ರೆಗ್ಯುಲರ್ ಇಂಟರ್ವಲ್ ಇನ್ವೆಸ್ಟಮೆಂಟ್.

A) One Time Investment (Lump Sum Investment)

            ಈ ಒನ್ ಟೈಮ್ ಇನ್ವೆಸ್ಟಮೆಂಟಲ್ಲಿ ನಿಮಗೆ ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಒಂದು ನಿರ್ದಿಷ್ಟ ಸಮಯದ ತನಕ ಮ್ಯುಚುವಲ್ ಫಂಡ್ಸಗಳಲ್ಲಿ ಒಮ್ಮೆಲೇ ಹೂಡಿಕೆ ಮಾಡಬೇಕಾಗುತ್ತದೆ. ಹೂಡಿಕೆಯ ಒಟ್ಟು ಹಣವನ್ನು ನಿಮಗೆ ಒಂದೇ ಬಾರಿಗೆ ಒಮ್ಮೆಲೇ ಕೊಡಬೇಕಾಗುತ್ತದೆ. One Amount for One fixed interval and One Time investment.

B) Regular Interval Investment (SIP)

           ರೆಗ್ಯುಲರ್ ಇಂಟರ್ವಲ್ ಇನ್ವೆಸ್ಟಮೆಂಟಲ್ಲಿ ನಿಮಗೆ ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಒಂದು ನಿರ್ದಿಷ್ಟ ಸಮಯದ ತನಕ ಮ್ಯುಚುವಲ್ ಫಂಡ್ಸಗಳಲ್ಲಿ ಹಂತಹಂತವಾಗಿ ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ನಿಮಗಿಲ್ಲಿ ಹೂಡಿಕೆಯ ಒಟ್ಟು ಹಣವನ್ನು ಒಂದೇ ಬಾರಿಗೆ ಕೊಡಬೇಕಾಗಿಲ್ಲ. ನೀವು SIP ಮೂಲಕ ಸುಲಭವಾಗಿ ಮ್ಯುಚುವಲ್ ಫಂಡ್ಸಗಳಲ್ಲಿ ಹಣ ಹೂಡಿಕೆ ಮಾಡಬಹುದು. SIP ಅಂದರೆ Systematic Investment Plan. ಇದು ಅತ್ಯಂತ ಸುವ್ಯಸ್ಥಿತ ಹಾಗೂ ಸುಲಭವಾದ ವಿಧಾನವಾಗಿದೆ. SIP ಮೂಲಕ ಒಂದು ನಿರ್ದಿಷ್ಟ ಮೊತ್ತದ ಹಣ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಅಕೌಂಟನಿಂದ ಡಿಡಕ್ಟ್ ಆಗಿ ಮ್ಯುಚುವಲ್ ಫಂಡ್ಸಗಳಲ್ಲಿ ಹೂಡಿಕೆಯಾಗುತ್ತದೆ. SIPಗಾಗಿ KYC ಕಂಪಲ್ಸರಿಯಾಗಿದೆ. KYCಗೆ ನಿಮ್ಮ ID Proof ಹಾಗೂ Address Proof ಬೇಕಾಗುತ್ತವೆ. ಸ್ಟಾಕ್ ಎಕ್ಸ್ಚೇಂಜ್ ಮ್ಯುಚುವಲ್ ಫಂಡ್ಸಗಳನ್ನು ಹೊರತುಪಡಿಸಿದರೆ ನಿಮಗೆ ಡಿಮ್ಯಾಟ್ ಅಕೌಂಟನ ಅವಶ್ಯಕತೆ ಎಲ್ಲಿಯೂ ಎದುರಾಗುವುದಿಲ್ಲ. ಮೊದಲು ನಿಮ್ಮ ಗೋಲನ್ನು ಡಿಸೈಡ್ ಮಾಡಿ, ಆನಂತರ ನಿಮಗೆ ಸರಿಹೊಂದುವ ಮ್ಯುಚುವಲ್ ಫಂಡ್ಸನ್ನು ಸೆಲೆಕ್ಟ್ ಮಾಡಿ ಮತ್ತು ಆ ಮ್ಯುಚುವಲ್ ಫಂಡ್ಸ ಕಂಪನಿಯ ಇಲ್ಲವೇ ಬ್ಯಾಂಕನ ವೆಬಸೈಟಗೆ ವಿಸಿಟ್ ಮಾಡಿ SIP ಮೂಲಕ ನೇರವಾಗಿ ಹಣ ಹೂಡಿಕೆ ಮಾಡಿ. ಇಲ್ಲವೇ ಆ ಕಂಪನಿಯ ಬ್ರಾಂಚಗೆ ಭೇಟಿ ಕೊಡಿ ಮತ್ತು ಬ್ರ್ಯಾಂಚ್ ಮೂಲಕ ಹಣ ಹೂಡಿಕೆ ಮಾಡಿ. 

ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? How to invest in Mutual Funds?

7) ಬೆಸ್ಟ ಮ್ಯುಚುವಲ್ ಫಂಡ್ಸ ಯಾವುವು?

ಇದು ಬೆಸ್ಟ ಅಥವಾ ಇದು ವರ್ಸ್ಟ ಅಂತಾ ನಿರ್ದಿಷ್ಟವಾಗಿ ಹೇಳೊಕ್ಕಾಗಲ್ಲ. ಎಲ್ಲ ತರಹದ ಮ್ಯುಚುವಲ್ ಫಂಡ್ಸಗಳಲ್ಲಿ ರಿಸ್ಕಯಿದೆ. ದೆಬ್ಟ ಮ್ಯುಚುವಲ್ ಫಂಡ್ಸಗಳಲ್ಲಿ ಕಡಿಮೆ ರಿಸ್ಕಯಿದೆ. ಈಕ್ವಿಟಿ ಮ್ಯುಚುವಲ್ ಫಂಡ್ಸಗಳಲ್ಲಿ ಜಾಸ್ತಿ ರಿಸ್ಕಯಿದೆ. ಹೈಬ್ರಿಡ್ ಮ್ಯುಚುವಲ್ ಫಂಡ್ಸಗಳಲ್ಲಿ ಮಾಡರೇಟ್ ರಿಸ್ಕಯಿದೆ.

ನಿಮ್ಮ ಬಳಿ ಹಣ ಎಷ್ಟಿದೆ? ನೀವು ಎಷ್ಟು ವರ್ಷಗಳಲ್ಲಿ ಎಷ್ಟು ಹಣವನ್ನು ಸಂಪಾದಿಸಲು ಬಯಸುತ್ತೀರಿ? ಎಂಬುದರ ಆಧಾರದ ಮೇಲೆ ಯಾವ ಮ್ಯುಚುವಲ್ ಫಂಡ್ಸ ನಿಮಗೆ ಬೆಸ್ಟ ಆಗುತ್ತೆ ಅಂತಾ ನೀವೇ ಡಿಸೈಡ್ ಮಾಡಬೇಕು. ಯಾವುದೇ ಮ್ಯುಚುವಲ್ ಫಂಡ್ಸಗಳಲ್ಲಿ ನಿಮ್ಮ ಹಣವನ್ನು ಇನ್ವೇಸ್ಟ ಮಾಡುವುದಕ್ಕಿಂತ ಮುಂಚೆ ಅದರ ಬಗ್ಗೆ ಸರಿಯಾಗಿ ರಿಸರ್ಚ ಮಾಡಿ. ಮ್ಯುಚುವಲ್ ಫಂಡ್ಸ ಕಂಪನಿಯ ವೆಬಸೈಟಗೆ ಭೇಟಿ ನೀಡಿ ಟರ್ಮ್ಸ & ಕಂಡಿಷನಗಳನ್ನು ಓದಿ. ಅವರ ಪ್ಲ್ಯಾನ್ಸಗಳ ಬಗ್ಗೆ ಓದಿ. ರಿಟರ್ನ್ಸ ರೇಟ್, ರಿಟರ್ನ್ಸ ಪಾಲಿಸಿ, ರಿಫಂಡ್ ಪಾಲಿಸಿ, ರಿಪೋರ್ಟ್ ಕಾರ್ಡ್, ರಿಟರ್ನ & ಸೇಫ್ಟಿ ಗ್ರೇಡ್ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಿ. ಅವರ Reviews ಮತ್ತು Ratings ನೋಡಿ. ಜನರ ಫೀಡಬ್ಯಾಕ ಮತ್ತು ಕಮೆಂಟಗಳನ್ನು ನೋಡಿ. 4ರಿಂದ 5 ರೇಟಿಂಗಯಿದ್ದರೆ ಮಾತ್ರ ಅವುಗಳಲ್ಲಿ ಹಣ ಹೂಡಿಕೆ ಮಾಡಿ. ಯುಟ್ಯೂಬ ಬಾಬಾಗಳ ಮಾತನ್ನು ಕೇಳಿ ಯಾವುದ್ಯಾವುದೋ ಸ್ಕೀಮಗಳಲ್ಲಿ ಹಣ ಹೂಡಿ ನಾಮಾ ಹಾಕಿಸಿಕೊಳ್ಳಬೇಡಿ. ಅವಶ್ಯಕತೆಯಿದೆ ಅಂತನಿಸಿದರೆ ಒಳ್ಳೇ ಮ್ಯುಚುವಲ್ ಫಂಡ್ಸ ಅಡ್ವೈಜರನ್ನು ಕನಸಲ್ಟ ಮಾಡಿ. ಅವರೊಂದಿಗೆ ಮಾತನಾಡಿ. ನಿಮ್ಮ ಗೋಲಗೆ ತಕ್ಕಂತೆ ಡಿಸಿಜನ ತೆಗೆದುಕೊಳ್ಳಿ.

8) ಮೊಬೈಲ್ ಆ್ಯಪ್ಸಗಳಿಂದ ಮ್ಯುಚುವಲ್ ಫಂಡ್ಸಗಳಲ್ಲಿ ಇನ್ವೇಸ್ಟ ಮಾಡೋದು ಸೇಫಾ?

ತುಂಬಾ ಜನರಿಗೆ ಇದೆ ಅನುಮಾನವಿದೆ. ಮೊಬೈಲ್ ಆ್ಯಪ್ಸಗಳಿಂದ ಮ್ಯುಚುವಲ್ ಫಂಡ್ಸಗಳಲ್ಲಿ ಇನ್ವೇಸ್ಟ ಮಾಡೋದು ಸೇಫಾ? ಎಂಬ ಪ್ರಶ್ನೆಯಿದೆ.  ನನಗೆ ವೈಯಕ್ತಿಕವಾಗಿ ಮೊಬೈಲ್ ಆ್ಯಪಗಳಿಂದ ಹಣ ಹೂಡಿಕೆ ಮಾಡುವುದು ಅಷ್ಟೊಂದು ಸೇಫ್ ಅಂತಾ ಅನಿಸಲ್ಲ. ಏಕೆಂದರೆ
೧) ಕೇರಲೆಸ್ ಕಸ್ಟಮರ್ ಸಪೋರ್ಟ್
೨) ಯಾವುದೇ ಚಾರ್ಜಸ ಕಟ್ ಮಾಡ್ತಿಲ್ಲ ಅಂದ್ರೆ ಸರಿಯಾಗಿ ಸರ್ವಿಸ್ ಕೊಡಲ್ಲ, ಕೇರ್ ತೆಗೆದುಕೊಳ್ಳಲ್ಲ.
೩) ಮೊಬೈಲ್ ಆ್ಯಪ್ಸನವರು ಫ್ರಿ ಸರ್ವಿಸ್ ಕೊಡ್ತಿದಾರೆ ಅಂದ್ರೆ ಅದರ ಹಿಂದೆ ಒಂದಲ್ಲ ಒಂದು ಸ್ಕ್ಯಾಮ ಇದ್ದೆ ಇರುತ್ತದೆ. ಇವರು ಫ್ರೀ ಸರ್ವಿಸ್ ಅಂತೇಳಿ ಬಿಜನೆಸ್ ಹೆಸರಲ್ಲಿ ಸ್ಕ್ಯಾಮಗಳನ್ನು ಮಾಡುತ್ತಾರೆ. ನಿಮ್ಮ ಡಾಟಾವನ್ನು ಬೇರೆ ಕಂಪನಿಗಳಿಗೆ, ಪೊಲಿಟಿಕಲ್ ಪಾರ್ಟಿಗಳಿಗೆ ಮಾರಿ ದುಡ್ಡು ಮಾಡ್ತಾರೆ. ನಿಮ್ಮ ಇನಕಮ್ ಡಿಟೇಲ್ಸ, KYC ಡಿಟೇಲ್ಸ ಇತ್ಯಾದಿಗಳನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇಲ್ಲಿ ಅಧಿಕವಾಗಿದೆ. ಈ ಆ್ಯಪಗಳಲ್ಲಿ ನಿಮ್ಮ ಡಾಟಾ ಸೇರಿಸುವುದು ಸುಲಭವಾಗಿದೆ. ಆದರೆ ಅದನ್ನು ಅಲ್ಲಿಂದ ಡಿಲಿಟ್ ಮಾಡುವುದು ದುರ್ಲಭವಾಗಿದೆ. ಅದನ್ನು ಶಾಶ್ವತವಾಗಿ ಡಿಲಿಟ್ ಮಾಡಿಸಲು ಸಾಧ್ಯವಿಲ್ಲ. ಸೋ ನನಗೇನೋ ಈ ಮೊಬೈಲ್ ಆ್ಯಪಗಳಿಂದ ಹಣ ಹೂಡಿಕೆ ಮಾಡೋದು ಅಷ್ಟೊಂದು ಸೇಫ ಆ್ಯಂಡ್ ಬೆಸ್ಟ ಅನ್ನಿಸ್ತಿಲ್ಲ. ಅಲ್ಲದೆ ಮನಿ ಇನ್ವೆಸ್ಟ ಮಾಡೋದಂದ್ರೆ ಅಮೆಜಾನನಿಂದ ಪ್ರೋಡಕ್ಟ ಆರ್ಡರ್ ಮಾಡಿದಂಗಲ್ಲ. ನೀವು ಜೀವನಪೂರ್ತಿ ಕಷ್ಟಪಟ್ಟು ಬೆವರು ಸುರಿಸಿ ಗಳಿಸಿದ ದುಡ್ಡನ್ನು ಯಾರೋ ಬೇರೆಯವರ ಜೇಬಿಗಾಕೋದು ಸರಿಯಲ್ಲ. ಸೋ ಗೆಳೆಯರೇ, ಸರಿಯಾಗಿ ಯೋಚನೆ ಮಾಡಿ. ಸರಿಯಾಗಿ ರಿಸರ್ಚ ಮಾಡಿ. ಯಾವುದೇ ಥರ್ಡ್ ಪಾರ್ಟಿ ಆ್ಯಪ ಅಥವಾ ಫೇಕ್ ಆ್ಯಜೆಂಟಗಳ ಸಹಾಯವಿಲ್ಲದೆ ನೇರವಾಗಿ ಮ್ಯುಚುವಲ್ ಫಂಡ್ಸ ಕಂಪನಿಗಳಲ್ಲಿ ಇನ್ವೇಸ್ಟ ಮಾಡಿ. ಅವಶ್ಯಕತೆಯಿದೆ ಅಂತನಿಸಿದರೆ ಸರಿಯಾದ ಎಕ್ಸಪರ್ಟಗಳ ಇಲ್ಲವೇ ಕನ್ಸಲ್ಟಂಟಗಳ ಸಹಾಯ ಪಡೆದುಕೊಳ್ಳಿ. ಧನ್ಯವಾದಗಳು....


ಬೆಸ್ಟ ಇನ್ವೆಸ್ಟಮೆಂಟ ಪ್ಲ್ಯಾನ್ - Best Investment Plan Blogger ನಿಂದ ಸಾಮರ್ಥ್ಯಹೊಂದಿದೆ.