ಹಾಯ್ ಗೆಳೆಯರೇ, ಕಳೆದ ಸೆಷನನಲ್ಲಿ ನಾನು ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ? ಎಂಬುದರ ಬಗ್ಗೆ ಡಿಸ್ಕಸ್ ಮಾಡಿದ್ದೆ. ಅದನ್ನು ನೋಡಿದ ನಂತರ ಕೆಲವು ಜನ ನೀವು ಯಾವ ಪ್ಲ್ಯಾನಗಳಲ್ಲಿ ಹಣ ಹೂಡಿಕೆ ಮಾಡುತ್ತೀರಿ? ನೀವು ಯಾವುದರಲ್ಲಿ ನಿಮ್ಮ ಹಣವನ್ನು ಸ್ಪೆಂಡ ಮಾಡುತ್ತೀರಿ? ಎಂದೆಲ್ಲ ಕೇಳಿದ್ದಾರೆ. ಆದರೆ ಬಹಳಷ್ಟು ಜನ ಸರ್ ನಮಗೆಲ್ಲ ಮ್ಯುಚುವಲ್ ಫಂಡಗಳಲ್ಲಿ ಹಣ ಹೂಡಿಕೆ ಮಾಡೋ ಇಂಟರೆಸ್ಟ್ ಇಲ್ಲ. ನೀವು ಸೆಲ್ಫ ಇನ್ವೆಸ್ಟಮೆಂಟ್ ಬಗ್ಗೆ ವಿಡಿಯೋ ಮಾಡಿ ಅಂತ ಕಮೆಂಟ ಮಾಡಿದ್ದಾರೆ. ಸೋ ಇವತ್ತಿನ ಎಪಿಸೋಡನಲ್ಲಿ ಸೆಲ್ಫ ಇನ್ವೆಸ್ಟಮೆಂಟ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣಾ.
ಫ್ರೆಂಡ್ಸ್, Self investment is the best investment and safe investment. ಸೆಲ್ಫ ಇನ್ವೇಸ್ಟಮೆಂಟ ಬೆಸ್ಟ ಇನ್ವೆಸ್ಟಮೆಂಟಾಗಿದೆ. ಏಕೆಂದರೆ ನಿಮ್ಮಿಂದ ನಿಮ್ಮ ಹಣವನ್ನು, ಆಸ್ತಿ ಅಂತಸ್ತನ್ನು, ಕಾರನ್ನು, ಅಧಿಕಾರವನ್ನು, ಒಳ್ಳೆ ಹೆಸರನ್ನು, ಎಲ್ಲವನ್ನೂ ಕಿತ್ತುಕೊಳ್ಳಬಹುದು. ಆದರೆ ನಿಮ್ಮ ಬಳಿಯಿರುವ ಜ್ಞಾನವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಟ್ಯಾಲೆಂಟನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಜನ ನಿಮ್ಮ ಕಲೆಯನ್ನು ಕಾಪಿ ಮಾಡಬಹುದು, ಆದರೆ ನಿಮ್ಮ ಕ್ರಿಯೆಟಿವಿಟಿಯನ್ನು ಕದಿಯಲು ಅವರಿಂದ ಸಾಧ್ಯವಿಲ್ಲ. ಸದ್ಯಕ್ಕೆ ನಿಮ್ಮ ಬಳಿಯಿರುವ ಹಣ, ಆಸ್ತಿ, ಅಧಿಕಾರ, ಕಾರು, ಬಂಗಲೆ ಎಲ್ಲವೂ ನಿಮ್ಮನ್ನು ಬಿಟ್ಟು ಹೋಗಬಹುದು. ಆದರೆ ನಿಮ್ಮ ಬಳಿಯಿರುವ ನಾಲೇಡ್ಜ ನಿಮ್ಮನ್ನು ಯಾವತ್ತೂ ಬಿಟ್ಟೊಗಲ್ಲ. ನಿಮ್ಮ ಬಳಿ ಸರಿಯಾದ ನಾಲೇಡ್ಜಯಿದ್ದರೆ ನೀವು ಎಲ್ಲಿ ಬೇಕಾದರೂ ಬದುಕಬಹುದು, ಬೆಳೆಯಬಹುದು. ಅದಕ್ಕಾಗಿ ಸೆಲ್ಫ ಇನ್ವೇಸ್ಟಮೆಂಟ ಬೆಸ್ಟ ಇನ್ವೇಸ್ಟಮೆಂಟಾಗಿದೆ. ಅದಕ್ಕಾಗಿ ನಿಮ್ಮ ಹಣವನ್ನು ಅಲ್ಲಿಇಲ್ಲಿ ಪೋಲು ಮಾಡದೆ ನಿಮ್ಮ ಮೇಲೆ ಹೂಡಿಕೆ ಮಾಡಿ. ಅಂದರೆ ನಿಮ್ಮ ಹಣವನ್ನು ನಿಮ್ಮ ಕಲಿಕೆಗಾಗಿ, ಸ್ಕೀಲಗಳಿಗಾಗಿ ಖರ್ಚು ಮಾಡಿ. ನಿಮ್ಮ ಫೀಲ್ಡಲ್ಲಿ ನೀವು ಗ್ರೋ ಆಗುವುದಕ್ಕಾಗಿ ಖರ್ಚು ಮಾಡಿ.
ಉದಾಹರಣೆಗಾಗಿ : ನಿಮಗೆಲ್ಲಾ ಗೊತ್ತಿರುವಂತೆ ನಾನು ಕಾಲೇಜಿನಲ್ಲಿರುವಾಗ ನ್ಯೂಜಪೇಪರಗಳಲ್ಲಿ ಫ್ರಿಯಾಗಿ ಅಂಕಣಗಳನ್ನು, ಕಥೆ-ಕವನಗಳನ್ನು ಬರೆಯುತ್ತಿದ್ದೆ. ಇದರಿಂದ ಮುಂದೆ ನನಗೆ ಒಂದು ನ್ಯೂಸಪೇಪರನಲ್ಲಿ ಎಡಿಟಿಂಗ ಡಿಪಾರ್ಟಮೆಂಟಲ್ಲಿ ಕೆಲಸ ಸಿಕ್ಕಿತು. ಅಲ್ಲಿ ನನಗೆ ಸಿಕ್ಕ ಸ್ಯಾಲರಿಯನ್ನು ನಾನು ನನ್ನ ಡಿಗ್ರಿ ಓದಿಗೆ ಹಾಗೂ ಬಿಜನೆಸ್ ಸ್ಟಡಿಗಳಿಗೆ, ವರ್ಕಶಾಪಗಳಿಗೆ ಬಳಸಿಕೊಂಡೆ. ನಂತರ ಆ ಕೆಲಸ ಹೋದ ನಂತರ ನಾನು ಕೆಲವು ತಿಂಗಳುಗಳ ಕಾಲ ಪಾರ್ಟಟೈಮ ಕಾರ ಡ್ರೈವರಾಗಿ ಕೆಲಸ ಮಾಡಿದೆ. ಅಲ್ಲಿ ಸಿಕ್ಕ ಸ್ಯಾಲರಿಯಿಂದ ನಾನು ಬ್ಲಾಗಿಂಗ ಸ್ಟಾರ್ಟ ಮಾಡಿದೆ. ನಂತರ ಬ್ಲಾಗಿಂಗನಿಂದ ಬಂದ ಹಣದಿಂದ ನಾನು ಮುಂಬೈಯಲ್ಲಿ ಫಿಲ್ಮಮೇಕಿಂಗ್ ಹಾಗೂ ಪುಣೆಯಲ್ಲಿ ಪ್ರೋಫೆಷನಲ್ ಫೋಟೋಗ್ರಾಫಿಯನ್ನು ಕಲಿತೆ. ಹೀಗೆ ನಾನು ನನಗೆ ಸಿಕ್ಕ ಸಂಪೂರ್ಣ ಹಣವನ್ನು ನನ್ನ ಕಲಿಕೆಯಲ್ಲಿ ಇನ್ವೇಸ್ಟ ಮಾಡಿರುವೆ, ಸ್ಕೀಲ್ ಡೆವಲೆಪಮೆಂಟಲ್ಲಿ ಇನ್ವೇಸ್ಟ ಮಾಡಿರುವೆ. ನಮ್ಮ ತಂದೆತಾಯಿಗಳು ಅಷ್ಟೇ, ಅವರ ದುಡ್ಡನ್ನು ನಮ್ಮ ಕಲಿಕೆಗಾಗಿ ಖರ್ಚು ಮಾಡಿದ್ದಾರೆ. ಅವರು ಆಸ್ತಿ ಮಾಡುವ ಬದಲು ನಮ್ಮನ್ನು ಆಸ್ತಿ ಮಾಡಿದ್ದಾರೆ.
ಮೊದಲು ನಾನು ನನ್ನೆಲ್ಲ ಹಣವನ್ನು ನನ್ನ ಕಲಿಕೆಗಾಗಿ ಇನ್ವೇಸ್ಟ ಮಾಡುತ್ತಿದ್ದೆ. ಈಗ ನಾನು ನನ್ನೆಲ್ಲ ಟೈಮನ್ನು, ಟ್ಯಾಲೆಂಟನ್ನು, ಹಣವನ್ನು ಸಂಪೂರ್ಣವಾಗಿ ನಮ್ಮ Roaring Creations Private Limited ಕಂಪನಿಯಲ್ಲಿ ಇನ್ವೇಸ್ಟ ಮಾಡುತ್ತಿರುವೆ. I am investing my everything in my business. ನಾವು ನಮ್ಮ ಕಂಪನಿಯ ಎಲ್ಲ ಹಣವನ್ನು ಟ್ಯಾಲೆಂಟೆಡ್ ಎಂಪ್ಲಾಯರಗಳಿಗಾಗಿ, ಬಿಜನೆಸ್ ಮೆಂಟರಗಳಿಗಾಗಿ, ಬಿಜನೆಸ್ ಕನ್ಸಲ್ಟಂಟಗಳಿಗಾಗಿ, CA, CS, Legal Adviserಗಳಿಗಾಗಿ, ಟ್ರೆಡಮಾರ್ಕ ಹಾಗೂ ಕಾಪಿರೈಟ್ಸಗಳಿಗಾಗಿ, ಬೆಸ್ಟ ಕ್ವಾಲಿಟಿ ಈಕ್ವೀಪಮೆಂಟಗಳಿಗಾಗಿ ಇನ್ವೇಸ್ಟ ಮಾಡುತ್ತಿದ್ದೇವೆ. ಸೆಲ್ಫ ಇನ್ವೇಸ್ಟಮೆಂಟ ಮಾಡುತ್ತಿದ್ದೇವೆ. ಏಕೆಂದರೆ ನಾವು ಇವತ್ತು ಮಾಡುತ್ತಿರುವ ಸೆಲ್ಫ ಇನ್ವೆಸ್ಟಮೆಂಟ ನಮ್ಮನ್ನು ಮುಂದೊಂದಿನ ಸೆಲ್ಫಮೇಡ್ ಬಿಲೆನಿಯರಗಳನ್ನಾಗಿ ಮಾಡುತ್ತದೆ.
ನಾನು ನನ್ನ ಸೇವಿಂಗ್ ಅಕೌಂಟನಲ್ಲಿ ಯಾವತ್ತೂ ಅವಶ್ಯಕತೆಗಿಂತ ಅಧಿಕವಾಗಿ ಹಣವನ್ನು ಇಡುವುದಿಲ್ಲ. ಬದುಕುವುದಕ್ಕಾಗಿ ಹಾಗೂ ಎಮರ್ಜೆನ್ಸಿ ಕೇಸಗಳಿಗಾಗಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ನಾನು ಬ್ಯಾಂಕಲ್ಲಿಡುತ್ತೇನೆ. ಮಿಕ್ಕಿದ ಹಣವನ್ನು ನನ್ನ ಮೇಲೆ, ನನ್ನ ಸ್ಕೀಲಗಳ ಮೇಲೆ, ನಮ್ಮ ಕಂಪನಿ ಮೇಲೆ, ನನ್ನ ಕಲಿಕೆಯ ಮೇಲೆ ಖರ್ಚು ಮಾಡುತ್ತೇನೆ. ನಾನು ನನ್ನ ಸೆಲ್ಫ ಇಂಪ್ರೂವಮೆಂಟ ಮೇಲೆ, ನಾಲೇಜ್ಡ ಹಾಗೂ ಸ್ಕೀಲ್ ಸೆಟ ಮೇಲೆ ಸಾಕಷ್ಟು ಖರ್ಚು ಮಾಡಿರುವೆ, ಈಗಲೂ ಮಾಡುತ್ತಿರುವೆ, ಮುಂದೇನು ಮಾಡುವೆ. ನಾನು ಮೊದಲು ಲರ್ನಿಂಗ ಮೇಲೆ ಹಣವನ್ನು ಹೂಡಿಕೆ ಮಾಡಿರುವೆ. ಅದಕ್ಕಾಗಿ ಈಗ ಸಾಕಷ್ಟು ಅರ್ನಿಂಗ್ ಮಾಡುತ್ತಿರುವೆ. ಅದಕ್ಕಾಗಿ ನೀವು ಸಹ ನಿಮ್ಮ ಲರ್ನಿಂಗ ಮೇಲೆ ಹಣ ಹೂಡಿಕೆ ಮಾಡಿ. ಅರ್ನಿಂಗ್ ತಾನಾಗಿಯೇ ಬರುತ್ತದೆ. ಮ್ಯುಚುವಲ್ ಫಂಡ್ಸಗಳಲ್ಲಿ ಹಣ ಹಾಕಿದ್ರೆ 5 ವರ್ಷ, 10 ವರ್ಷ ಬಿಟ್ಟು ರಿಟರ್ನ್ಸ ಬರುತ್ತದೆ. ಆದರೆ ಲರ್ನಿಂಗ್ ಮೇಲೆ ಹಣ ಹಾಕಿದ್ರೆ 3 ತಿಂಗಳಲ್ಲಿ ರಿಟರ್ನ್ಸ ಬರುತ್ತದೆ.
OK fine ಗೆಳೆಯರೇ, ಬಿಟ್ಟಿ ಬಡ್ಡಿ ಹಣ ಬಹಳಷ್ಟು ಆರೋಗ್ಯಕರವಲ್ಲ. ಹಣ ಡಬ್ಬಲ ಆಗುತ್ತೆ ನಿಮ್ಮ ಹಣವನ್ನು ಅಲ್ಲಿಇಲ್ಲಿ ಹಾಕಿ ನಾಮ ಹಾಕಿಸಿಕೊಳ್ಳಬೇಡಿ. ನಿಮ್ಮ ಹಣವನ್ನು ನಿಮ್ಮ ಮೇಲೆ ಹೂಡಿಕೆ ಮಾಡಿ. ನಿಮ್ಮ ಲರ್ನಿಂಗ್ ಮೇಲೆ ಹೂಡಿಕೆ ಮಾಡಿ. ನಿಮ್ಮ ಬಿಜನೆಸ್ಸಲ್ಲಿ ಹೂಡಿಕೆ ಮಾಡಿ. I strongly suggest you to invest upon yourself, on your learning and on your business. All the best and Thanks you.