ಸೆಕ್ಸ ಒಳ್ಳೆಯದಾ ಅಥವಾ ಕೆಟ್ಟದಾ? Is Sex is Good or Bad? In Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಸೆಕ್ಸ ಒಳ್ಳೆಯದಾ ಅಥವಾ ಕೆಟ್ಟದಾ? Is Sex is Good or Bad? In Kannada

ಸೆಕ್ಸ ಒಳ್ಳೆಯದಾ ಅಥವಾ ಕೆಟ್ಟದಾ? Is Sex is Good or Bad? In Kannada

                                 ಸೆಕ್ಸ, ಸೆಕ್ಸ ಲೈಫ್, ಓವರ ಸೆಕ್ಸ, ಸೆಕ್ಸ ಅಡಿಕ್ಷನಗೆ ಸಂಬಂಧಿಸಿದಂತೆ ಬಹಳಷ್ಟು ಕ್ವೇಷನಗಳು ಬಂದಿವೆ‌. ಅವೆಲ್ಲವುಗಳ ಬಗ್ಗೆ ಒಂದೊಂದಾಗಿ ಡಿಸ್ಕಸ ಮಾಡೋದಕ್ಕಿಂತ ಹೋಲಸೇಲಾಗಿ "ಸೆಕ್ಸ ಒಳ್ಳೆಯದಾ ಅಥವಾ ಕೆಟ್ಟದಾ?" ಎಂಬ ಟಾಪಿಕ ಮೇಲಷ್ಟೇ ಡಿಸ್ಕಸ ಮಾಡುವೆ. ಯಂಗ ಜನರೇಷನಗೆ ಸರಿಯಾದ ಗೈಡನ್ಸ ಕೊಡುವುದು ಅವಶ್ಯಕವಾಗಿದೆ ಎಂಬ ಕಾರಣಕ್ಕಷ್ಟೇ ಈ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿರುವೆ. ಬೇರೆ ಯಾವುದೇ ಉದ್ದೇಶವಿಲ್ಲ. ಆ್ಯನಿ ವೇ ಲೆಟ್ಸ ಬಿಗೀನ... 

ಸೆಕ್ಸ ಒಳ್ಳೆಯದಾ ಅಥವಾ ಕೆಟ್ಟದಾ? Is Sex is Good or Bad? 

                      ಅನ್ನ, ನೀರು, ಗಾಳಿ, ಆಶ್ರಯದಂತೆ ಸೆಕ್ಸ ಕೂಡ ಪ್ರತಿ ಮನುಷ್ಯನ ಪ್ರಾಥಮಿಕ ಬೇಡಿಕೆಗಳಲ್ಲಿ ಒಂದಾಗಿದೆ. ಸಂತತಿಯ ಮುಂದುವರಿಕೆಗೆ, ಜೀವ ಸಂಕುಲದ ಮುಂದುವರಿಕೆಗೆ, ವಂಶ ಪರಂಪರೆಗಳ ಮುಂದುವರಿಕೆಗೆ ಸೆಕ್ಸ ಅವಶ್ಯಕವಾಗಿದೆ ಹಾಗೂ ಅನಿವಾರ್ಯವಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ, ಮುಜುಗುರವಿಲ್ಲ. ಇದು 100% ಒಳ್ಳೆಯದಾಗಿದೆ, ಪವಿತ್ರವಾಗಿದೆ. ಇದರ ಬಗ್ಗೆ ಕೆಟ್ಟದಾಗಿ ಅಥವಾ ಅಶ್ಲೀಲವಾಗಿ ಯೋಚಿಸಿ ಮನಸ್ಸನ್ನು ಮಲಿನ ಮಾಡಿಕೊಳ್ಳುವ ನೆಸಿಸಿಟಿಯಿಲ್ಲ. ಸೆಕ್ಸ ಒಳ್ಳೆಯದಾಗಿದೆ, ಇದರಿಂದ ಕಪಲ್ಸಗಳ ನಡುವೆ ಬಾಂಡಿಂಗ ಹೆಚ್ಚಾಗುತ್ತದೆ, ಪ್ರೀತಿ ಹೆಚ್ಚಾಗುತ್ತದೆ, ಒಳ್ಳೆ ನಿದ್ದೆ ಬರುತ್ತದೆ, ಹಲವಾರು ಲಾಭಗಳಿವೆ‌. ಇದರ ಬಗ್ಗೆ ನಿಮಗೆಲ್ಲ ಗೊತ್ತು. ಇದರ ಬಗ್ಗೆ ನಾನು ಹೆಚ್ಚಿಗೆ ಮಾತಾಡಲ್ಲ. ಏಕೆಂದರೆ ಇದರಲ್ಲಿ ನೀವೆಲ್ಲ ಎಕ್ಸಪರ್ಟ ಆಗಿರುವಿರಿ. ಸೆಕ್ಸ ಒಳ್ಳೆಯದಾಗಿದೆ. ಆದರೆ ಇದು ಹೆಚ್ಚಾದರೆ ಹೇಗೆ ನಿಮ್ಮನ್ನು ಹಾಳು ಮಾಡುತ್ತದೆ ಎಂಬುದರ ಬಗ್ಗೆ ಶಾರ್ಟಾಗಿ ನೋಡೋಣಾ. 

ಸೆಕ್ಸ ಒಳ್ಳೆಯದಾ ಅಥವಾ ಕೆಟ್ಟದಾ? Is Sex is Good or Bad? In Kannada

ಅತಿಯಾದ ಸೆಕ್ಸನ ಸೈಡ ಎಫೆಕ್ಟ್ಸಗಳು : Side Effects of Over Sex 

                         ಅತಿಯಾದರೆ ಅಮೃತವೂ ವಿಷವಾಗುತ್ತದೆ. ಅದೇ ರೀತಿ ಈ ಸೆಕ್ಸ ಕೂಡ ಅತಿಯಾದರೆ ಮನುಷ್ಯನನ್ನು ಹಾಳು ಮಾಡುತ್ತದೆ. ಇದರ ಸೈಡ ಎಫೆಕ್ಟ್ಸಗಳು ಇಂತಿವೆ ; 

1) ಭಗವದ್ಗೀತೆಯಲ್ಲಿ ಹೇಳಿರುವಂತೆ ಕಾಮ ಅಂದರೆ ಸೆಕ್ಸುವಲ್ ಡಿಸೈರ ಅಥವಾ ಲಸ್ಟ ಎಂದೂ ಆರದ ಅಗ್ನಿಯಾಗಿದೆ‌. ಅದು ಅತಿಯಾದರೆ ಮನುಷ್ಯನನ್ನು ಹಾಳು ಮಾಡುತ್ತದೆ. ಎಷ್ಟೇ ಸೆಕ್ಸ ಮಾಡಿದರೂ ಕಾಮದ ಅಗ್ನಿ ಶಾಂತವಾಗಲ್ಲ, ಸಂತೃಪ್ತವಾಗಲ್ಲ. ಮಾಡಿದಷ್ಟು ಮತ್ತೆ ಮತ್ತೆ ಮತ್ತಷ್ಟು ಮಾಡಬೇಕು ಅಂತಾ ಅನಿಸುತ್ತೆ. ಕ್ರಮೇಣವಾಗಿ ಕಾಮ ಮನುಷ್ಯನನ್ನು ತನ್ನ ಗುಲಾಮನನ್ನಾಗಿ ಮಾಡಿಕೊಳ್ಳುತ್ತದೆ. ಅವನ ಸಂಪೂರ್ಣ ಎನರ್ಜಿ, ಮೈಂಡ, ಸೆನ್ಸ ಹಾಗೂ ಬಾಡಿಯನ್ನು ತನ್ನ ಕೈವಶ ಮಾಡಿಕೊಳ್ಳುತ್ತದೆ. ಅವನಿಂದ ಥಿಂಕಿಂಗ ಪವರನ್ನು ಕಿತ್ತುಕೊಳ್ಳುತ್ತದೆ, ಡಿಸಿಜನ ಮೇಕಿಂಗ ಪವರನ್ನು ಕಿತ್ತುಕೊಳ್ಳುತ್ತದೆ. ಅವನನ್ನು ಅವನ ಗೋಲನಿಂದ ದಾರಿ ತಪ್ಪಿಸಿ ಸೋಲಿನ ಸುಳಿಗೆ ತಳ್ಳಿ ಅವನ ಜೀವನವನ್ನು ಬರ್ಬಾದ ಮಾಡುತ್ತದೆ. ಜೀವನಪೂರ್ತಿ ಆರ್ಡಿನರಿಯಾಗಿ ಒದ್ದಾಡುತ್ತಾ ಬಾಳುವಂತೆ ಮಾಡುತ್ತದೆ. 

ಸೆಕ್ಸ ಒಳ್ಳೆಯದಾ ಅಥವಾ ಕೆಟ್ಟದಾ? Is Sex is Good or Bad? In Kannada

2) ಈ ಸೆಕ್ಸನಿಂದಲೇ ಎಷ್ಟೋ ಸಾಮ್ರಾಜ್ಯಗಳು ಉರುಳಿವೆ, ಸಾಮ್ರಾಟರು ಅಳಿದು ಮಣ್ಣಾಗಿದ್ದಾರೆ. ಸೆಕ್ಸುವಲ್ ಡಿಜೈರ ಬಹಳಷ್ಟು ಪವರಫುಲ್ಲಾಗಿದೆ. ಒಂದ್ಸಲ ಮನುಷ್ಯ ಅದಕ್ಕೆ ಅಡಿಕ್ಟಾದರೆ ಮುಗೀತು ಆತ ಸೆಕ್ಸಗಾಗಿ ಏನು ಬೇಕಾದರೂ ಮಾಡಲು ತಯಾರಾಗುತ್ತಾನೆ‌. ಲಸ್ಟ ಎಲ್ಲ ಬ್ಯಾಡ ಈವಿಲಗಳ ಮೂಲ ರೂಟಾಗಿದೆ. ಸೆಕ್ಸಗಾಗಿ ಮನುಷ್ಯ ಕೊಲೆ ದರೋಡೆ ಮಾಡಲು ಮುಂದಾಗುತ್ತಾನೆ, ಅನೀತಿ, ಅತ್ಯಾಚಾರ, ಭ್ರಷ್ಟಾಚಾರಗಳನ್ನು ಮಾಡುತ್ತಾನೆ, ಅಷ್ಟೇ ಏಕೆ ಸೆಕ್ಸಗಾಗಿ ಎಷ್ಟೋ ಜನ ತಮ್ಮ ಸ್ವಂತ ಗಂಡನಿಗೆ, ಹೆಂಡತಿಗೆ ಮೋಸ ಮಾಡುತ್ತಾರೆ. ತಮ್ಮ ಗಂಡನ ಕೊಲೆ ಮಾಡಿಸುತ್ತಾರೆ, ಹೆಂಡತಿಯ ಕೊಲೆ ಮಾಡುತ್ತಾರೆ. ಅಕ್ರಮ ಸಂಬಂಧಗಳಿಗೆ ಮೂಲ ಕಾರಣವೇ ಸೆಕ್ಸಿನ ದುರಾಸೆಯಾಗಿದೆ. ಇದರಿಂದಲೇ ಎಷ್ಟೋ ಸಂಸಾರಗಳು ಹಾಳಾಗಿವೆ, ಎಷ್ಟೋ ಮಕ್ಕಳು ಬೀದಿಪಾಲಾಗಿದ್ದಾರೆ. 

ಸೆಕ್ಸ ಒಳ್ಳೆಯದಾ ಅಥವಾ ಕೆಟ್ಟದಾ? Is Sex is Good or Bad? In Kannada
3) ನೀವು ಆಧ್ಯಾತ್ಮಿಕ ಸಾಧನೆ ಮಾಡಲು ಅಂದರೆ ಬ್ರಹ್ಮಚರ್ಯ ಮಾಡಲು ಮುಂದಾದರೆ ಈ ಲಸ್ಟ ನಿಮ್ಮನ್ನು ಜನ್ಮ ಜನ್ಮಾಂತರದ ಶತ್ರುವಿನಂತೆ ಕಾಡುತ್ತದೆ. ನಿಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಮುಳ್ಳಿನಂತೆ ಎದುರಾಗುತ್ತದೆ. ಎಷ್ಟೋ ಜನ ಬ್ರಹ್ಮಚರ್ಯ ಪಾಲಿಸಬೇಕು ಅಂತಾ ಅಂದುಕೊಳ್ಳುತ್ತಾರೆ. ಆದರೆ ಪದೇಪದೇ ವಿಫಲರಾಗಿ ಸಂಸಾರ ಸುಖದಲ್ಲಿ ಮುಳುಗಿ ಹೋಗುತ್ತಾರೆ. ಮದುವೆಯಾಗುವುದು, ಸೆಕ್ಸ ಮಾಡುವುದು ತಪ್ಪಲ್ಲ. ಆದರೆ ಅದಕ್ಕೆ ಅಡಿಕ್ಟಾಗುವುದು, ಅದರ ಹಿಂದೆ ಕ್ರಾವಲಿಂಗ ಮಾಡುವುದು ಸರಿಯಲ್ಲ. ಏಕೆಂದರೆ ನಮ್ಮ ವೈಟಲ ಫ್ಲುಡ್ ಅಂದರೆ ಸಿಮೇನ ವೇಸ್ಟಾಗದೇ ಬಾಡಿಯಲ್ಲಿ ಸ್ಟೋರ ಆದಾಗ ಅದು ಊರ್ದ್ವಾಗಮನವಾಗುತ್ತದೆ. ಅಂದರೆ ನಿಮ್ಮ ಮೈಂಡಿಗೆ ತಲುಪುತ್ತದೆ. ಇದರಿಂದ ನಿಮಗೆ ಗ್ರೇಟ ನಾಲೇಜ ಸಿಗುತ್ತದೆ. ನಿಮ್ಮ ಲರ್ನಿಂಗ್ ಕ್ಯಾಪ್ಯಾಸಿಟಿ ಹೆಚ್ಚಾಗುತ್ತದೆ. ನೀವು ನಿಮ್ಮ ಲೈಫಲ್ಲಿ ಗ್ರೇಟ ಸಕ್ಸೆಸ್ಸನ್ನು ಅಚೀವ ಮಾಡುತ್ತೀರಿ. ಆದರೆ ಅದೇ ನೀವು ನಿಮ್ಮ ಸಂಪೂರ್ಣ ಟೈಮ, ಫೋಕಸ ಹಾಗೂ ಎನರ್ಜಿಯನ್ನು ಬರೀ ಸೆಕ್ಸಲ್ಲಿ ವೇಸ್ಟ ಮಾಡಿದರೆ ನಿಮಗೆ ನಿಮ್ಮ ಗೋಲನ್ನು ಅಚೀವ ಮಾಡಲು ಇಂಟರೆಸ್ಟ ಸಾಲಲ್ಲ‌. ನಿಮ್ಮ ಮೈಂಡ ಹಾಗೂ ಬಾಡಿ ಕೆಲಸ ಮಾಡಲು ನಿರಾಕರಿಸುತ್ತದೆ, ನೀವು ಆರ್ಡಿನರಿ ಲೈಫಿಗೆ ಕಮ್ಮಿಟ್ಟಾಗಿ ಗೋಲ ಬಿಟ್ಟು ಸಿಂಪಲಾಗಿ ಉಳಿಯುತ್ತೀರಿ. ನಿಮ್ಮ ಮೈಮನಸ್ಸಿನ ತುಂಬೆಲ್ಲ ಬರೀ ಅಶ್ಲೀಲ ವಿಚಾರಗಳೇ, ಅಶ್ಲೀಲ ಆಸೆಗಳೇ ತುಂಬಿಕೊಳ್ಳುತ್ತವೆ. ನಿಮಗೆ ಯಾವುದೇ ಮಹಾ ಜ್ಞಾನ ಸಿಗಲ್ಲ. ನಿಮ್ಮಿಂದ ಮಹಾನ ಕಾರ್ಯಗಳು ಸಹ ಆಗಲ್ಲ‌. 
ಸೆಕ್ಸ ಒಳ್ಳೆಯದಾ ಅಥವಾ ಕೆಟ್ಟದಾ? Is Sex is Good or Bad? In Kannada

4) ಪ್ರಾಣಿಗಳು ಅನಾವಶ್ಯಕವಾಗಿ ಸೆಕ್ಸ ಮಾಡಲ್ಲ. ಉದಾಹರಣೆಗೆ : ಸಿಂಹ ಆನೆಗಳಂಥ ಬಲಿಷ್ಠ ಪ್ರಾಣಿಗಳು ಸಹ ಸೆಕ್ಸ ಮೇಲೆ ಬೆಟರ ಕಂಟ್ರೋಲನ್ನು ಹೊಂದಿವೆ. ಸಿಂಹಗಳು ವರ್ಷದಲ್ಲಿ ಬರೀ ಒಂದು ಸಲವಷ್ಟೇ ಮಿಲನವಾಗುತ್ತವೆ. ಅದಾದ ನಂತರ ಮರಿ‌ ಸಿಂಹ ಜನಿಸಿ, ಹೆಣ್ಣು ಸಿಂಹ ಹೆಲ್ದಿ & ಸ್ಟ್ರಾಂಗ ಆಗುವ ತನಕ ಹೆಣ್ಣು ಸಿಂಹ ಗಂಡು ಸಿಂಹದ ಜೊತೆ ಸೇರಲ್ಲ. ಆದರೆ ಮನುಷ್ಯ ಮಾತ್ರ ವಿವೇಚನೆ ಕಳೆದುಕೊಂಡು ಮದುವೆಯಾದ ನಂತರ ಹಗಲು ರಾತ್ರಿ ಅದರಲ್ಲೇ ಮುಳುಗುತ್ತಾನೆ. ಪ್ರಾಣಿಗಳು ಪ್ರಕೃತಿಯ ನಿಯಮಗಳನ್ನು ಬ್ರೇಕ ಮಾಡಲ್ಲ. ಆದರೆ ಮನುಷ್ಯ ಎಲ್ಲದರಲ್ಲೂ ಪ್ರಕೃತಿಯ ನಿಯಮಗಳನ್ನು ಬ್ರೇಕ ಮಾಡುತ್ತಾನೆ. ಹೀಗಾಗಿ ಆತ ಜೀವನಪೂರ್ತಿ ರೋಗಗಳಿಂದ ನರಳುತ್ತಾನೆ‌. ಉದಾಹರಣೆಗೆ : ಬೇಗನೆ ಸೌಂದರ್ಯವನ್ನು ಕಳೆದುಕೊಂಡು ಬಹಳಷ್ಟು ಏಜ ಆದವರಂತೆ ಕಾಣುವುದು, ದೇಹದಲ್ಲಿ ಎನರ್ಜಿ ಇಲ್ಲದಿರುವುದು, ಮುಖದ ಮೇಲೆ ಕಾಂತಿ ಮನಸ್ಸಲ್ಲಿ ಶಾಂತಿ ಇಲ್ಲದಿರುವುದು, ನಿತ್ಸೇಜವಾಗಿ ಜೀವಂತ ಶವದಂತೆ ಜೀವನ ಸಾಗಿಸೋದು, ಬೆನ್ನು ನೋವು, ಮಂಡಿ ನೋವಿಗೆ ತುತ್ತಾಗೋದು ಇತ್ಯಾದಿ.

                                    ನಾನು ಈ ಎಪಿಸೋಡನ್ನು ಮಾಡಲು ಸ್ವಾಮಿ ಶಿವಾನಂದರ "Practice of Brahmacharya" ಬುಕನಿಂದ ಕೆಲವೊಂದಿಷ್ಟು ಪಾಯಿಂಟ್ಸಗಳನ್ನು ಆಯ್ಕೆ ಮಾಡಿಕೊಂಡಿರುವೆ. ಇಂಟರೆಸ್ಟ ಇರುವವರು ಈ ಬುಕನ್ನು ಓದಿ ಒಳ್ಳೆ ಫ್ಯಾಮಿಲಿ ಮ್ಯಾನ, ಫ್ಯಾಮಿಲಿ ವ್ಯುಮನಗಳಾಗಬಹುದು. ಇಂಟರೆಸ್ಟ ಇದ್ದರೆ ಓದಿ, ಹ್ಯಾಪಿಯಾಗಿರಿ. All the Best and Thanks You...

* READ MORE :- ಒಂದು ಹನಿ ವೀರ್ಯದ ಶಕ್ತಿ - Importance of Semen / Vital Fluid in Kannada 

* READ MORE :- ಹಸ್ತಮೈಥುನ ಒಳ್ಳೆಯದಾ? ಅಥವಾ ಕೆಟ್ಟದಾ? - Is Masturbation Good or Bad? In Kannada 

ಸೆಕ್ಸ ಒಳ್ಳೆಯದಾ ಅಥವಾ ಕೆಟ್ಟದಾ? Is Sex is Good or Bad? In Kannada
Blogger ನಿಂದ ಸಾಮರ್ಥ್ಯಹೊಂದಿದೆ.