ನಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಣ್ಣುಗಳ ಚಲನವಲನಗಳ ಮೂಲಕ ನಾವು ಅವರ ಮನಸ್ಸಿನ ಮಾತುಗಳನ್ನು ತಿಳಿದುಕೊಳ್ಳಬಹುದು. ಷೇಕ್ಸ್‌ಪಿಯರ್ ಹೇಳಿದಂತೆ ಕಣ್ಣುಗಳು ಮನಸ್ಸಿನ ಕಿಟಕಿಗಳಾಗಿವೆ. ಅವು ಮನಸ್ಸಿನ ಕನ್ನಡಿಯಾಗಿವೆ.
* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ನಿಮ್ಮೊಂದಿಗೆ Eye Contact ಮಾಡಿದರೆ ಅವರಿಗೆ ನಿಮ್ಮೊಂದಿಗೆ ಮಾತನಾಡಲು ಆಸಕ್ತಿಯಿದೆ ಎಂದರ್ಥ. ಒಂದು ವೇಳೆ ಅವರು ನಿಮ್ಮೊಂದಿಗೆ Eye Contact ಮಾಡದಿದ್ದರೆ ಅವರಿಗೆ ನಿಮ್ಮೊಂದಿಗೆ ಮಾತನಾಡಲು ಅಷ್ಟೊಂದು ಆಸಕ್ತಿ ಇಲ್ಲ ಅಥವಾ ಅವರು Uncomfortable ಆಗಿದ್ದಾರೆ ಎಂದರ್ಥ. ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ನಿಮ್ಮನ್ನು ಒಂದೇ ಸಮನೆ ಗುರಾಯಿಸುತ್ತಿದ್ದರೆ ಅವರಿಗೆ ನಿಮ್ಮ ಮೇಲೆ ಕೋಪವಿದೆ ಅಥವಾ ಕೆಟ್ಟ ಉದ್ದೇಶವಿದೆ ಎಂದರ್ಥ. ಈ ಪಾಯಿಂಟ್ ನಿಮಗೆ ಅರ್ಥವಾಗದಿದ್ದರೆ "ಕಣ್ಣಿನಲ್ಲಿ ಕಣ್ಣನ್ನಿಟ್ಟು ನೋಡಬಾರದೆ, ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೇ..." ಹಾಡನ್ನು ಒಮ್ಮೆ ನೆನಪಿಸಿಕೊಳ್ಳಿ.
* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಣ್ಣು ಕುಡ್ಡೆಗಳು (Eye Balls) ವಿಕಸಿತವಾಗಿದ್ದರೆ ಅಂದರೆ ಹಿಗ್ಗಿದ್ದರೆ ಅವರು ನಿಮ್ಮೆಡೆಗೆ ಆಕರ್ಷಿತರಾಗಿದ್ದಾರೆ ಎಂದರ್ಥ.
* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಣ್ಣು ಗುಡ್ಡೆಗಳು ಎಡ ಮೇಲ್ಭಾಗದ ಕಡೆಗೆ (Left Upper Side) ಚಾಚಿದ್ದರೆ ಎದುರಿಗಿರುವ ವ್ಯಕ್ತಿ ಏನನ್ನೋ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದರ್ಥ. ಒಂದು ವೇಳೆ ಆ ವ್ಯಕ್ತಿಯ ಕಣ್ಣು ಗುಡ್ಡೆಗಳು ಬಲ ಮೇಲ್ಭಾಗದ ಕಡೆಗೆ (Right Upper Side) ಚಾಚಿದ್ದರೆ ಎದುರುಗಡೆ ಇರುವ ವ್ಯಕ್ತಿ ಏನನ್ನೋ ಕಲ್ಪಿಸಿಕೊಳ್ಳುತ್ತಿದ್ದಾನೆ ಎಂದರ್ಥ. ಈ ಸಂದರ್ಭದಲ್ಲಿ ಆ ವ್ಯಕ್ತಿ ಸುಳ್ಳುಗಳನ್ನು ಹೇಳುವ ಸಾಧ್ಯತೆ ಅಧಿಕವಾಗಿರುತ್ತದೆ.
* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯ ಕಣ್ಣ ರೆಪ್ಪೆಗಳು ಅಬನಾರ್ಮಲ್ಲಾಗಿ ಬಡಿಯುತ್ತಿದ್ದರೆ ಅವರು ಟೆನ್ಶನಲ್ಲಿದ್ದಾರೆ ಎಂದರ್ಥ. ಒಂದು ವೇಳೆ ಅವರು ಕಣ್ಣ ರೆಪ್ಪೆಗಳನ್ನು ಬಡಿಯದಂತೆ ತಡೆಯುತ್ತಿದ್ದರೆ ಅವರು ತಮ್ಮ ಭಾವನೆಗಳನ್ನು ನಿಮ್ಮಿಂದ ಮುಚ್ಚಿಡುತ್ತಿದ್ದಾರೆ ಎಂದರ್ಥ.