ತುಟಿಗಳು ಬಡಿದಾಗ ಮಾತುಗಳು ಹೊರ ಬರುತ್ತವೆ. ಆದರೆ ಅವು ಬಡಿಯದಿದ್ದರೂ ಅವು ಮನಸ್ಸಿನಲ್ಲಿರುವ ಮಾತುಗಳನ್ನು ವ್ಯಕ್ತಪಡಿಸುತ್ತವೆ.
* ನೀವು ಮಾತನಾಡುವಾಗ ನಿಮ್ಮ ಎದುರಿಗಿರುವ ವ್ಯಕ್ತಿ ತುಟಿಗಳನ್ನು ಗಟ್ಟಿಯಾಗಿ ಮುಚ್ಚಿದರೆ ಅವರಿಗೆ ನಿಮ್ಮ ಮಾತಿನಲ್ಲಿ ಸಹಮತವಿಲ್ಲ ಎಂದರ್ಥ.
* ನಿಮ್ಮೊಂದಿಗೆ ಮಾತನಾಡುವಾಗ ಎದುರಿಗಿರುವ ವ್ಯಕ್ತಿ ಪದೇ ಪದೇ ತುಟಿಗಳನ್ನು ಕಚ್ಚಿಕೊಳ್ಳುತ್ತಿದ್ದರೆ ಅವರು ಟೆನ್ಶನ ಅಥವಾ ಸ್ಟ್ರೇಸಲ್ಲಿದ್ದಾರೆ ಎಂದರ್ಥ.
* ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ಪದೇಪದೇ ತನ್ನ ಕೈಗಳಿಂದ ತುಟಿಗಳನ್ನು ಮುಚ್ಚುತ್ತಿದ್ದರೆ ಅವರು ನಿಮ್ಮಿಂದ ಅವರ ಭಾವನೆಗಳನ್ನು ಬಚ್ಚಿಡುತ್ತಿದ್ದಾರೆ ಎಂದರ್ಥ. ಅವರು ನಿಮ್ಮಿಂದ ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ.