ಒಬ್ಬ ವ್ಯಕ್ತಿ ನಗುವ ರೀತಿಯಿಂದ ನಾವು ಅವರ ಮನಸ್ಸಲ್ಲಿರುವ ಮಾತನ್ನು ತಿಳಿದುಕೊಳ್ಳಬಹುದು. ನಗೆಯಲ್ಲಿ ಹಗೆಯ ಸಂಚಿರುತ್ತೆ, ನಗೆಯಲ್ಲಿ ನೋವಿನ ಸಂತೆಯಿರುತ್ತೆ ಎಂಬುದನ್ನು ಮರೆಯದಿರಿ.
* ನಿಮ್ಮ ಎದುರಿಗಿರುವ ವ್ಯಕ್ತಿ ನಕ್ಕಾಗ ಅವರ ಕಣ್ಣುಗಳ ಕೆಳಗೆ ಕ್ರಿಂಕಲ್ಸ (Crinkles) ಮೂಡಿದರೆ ಅವರು ನಿಜವಾಗಿಯೂ ಸಂತೋಷದಿಂದ ನಗುತ್ತಿದ್ದಾರೆ ಎಂದರ್ಥ. ಅವರದ್ದು ರಿಯಲ್ ಸ್ಮೈಲ್ ಎಂದರ್ಥ. ಒಂದು ವೇಳೆ ಕ್ರಿಂಕಲ್ಸಗಳು ಮೂಡದಿದ್ದರೆ ಅವರು ತೋರಿಕಗೆ ನಗುತ್ತಿದ್ದಾರೆ ಎಂದರ್ಥ. ಅವರದ್ದು ಫೇಕ್ ಸ್ಮೈಲ್ ಎಂದರ್ಥ.
* ಒಬ್ಬ ವ್ಯಕ್ತಿಯ ನಗು 1ರಿಂದ 2 ಸೆಕೆಂಡುಗಳಿಗೆ ಸೀಮಿತವಾದರೆ ಅವರು ದು:ಖ ಅಥವಾ ಕೋಪದಲ್ಲಿದ್ದಾರೆ ಎಂದರ್ಥ.
* ಒಬ್ಬ ವ್ಯಕ್ತಿ 3 ರಿಂದ 6 ಸೆಕೆಂಡಗಳ ತನಕ ನಕ್ಕರೆ ಅವರು ತೋರಿಕೆಗೆ ನಗುತ್ತಿದ್ದಾರೆ ಎಂದರ್ಥ.
* ಒಬ್ಬ ವ್ಯಕ್ತಿಯ ನಗು 6 ಸೆಕೆಂಡುಗಳ ನಂತರವೂ ಮುಂದುವರೆದರೆ ಅವರು ನಿಜವಾಗಿಯೂ ಮನಸ್ಸತುಂಬಿ ಸಂತೋಷದಿಂದ ನಗುತ್ತಿದ್ದಾರೆ ಎಂದರ್ಥ.