ಮಹಾಭಾರತದ ಜೀವನ ಪಾಠಗಳು : Life Lessons from Mahabharat in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮಹಾಭಾರತದ ಜೀವನ ಪಾಠಗಳು : Life Lessons from Mahabharat in Kannada

                                ಮಹಾಭಾರತದ ಜೀವನ ಪಾಠಗಳು : Life Lessons from Mahabharat in Kannada


                            ಹಾಯ್ ಗೆಳೆಯರೇ, ಗುಡ್ ಮಾರ್ನಿಂಗ್. ನನ್ನ ಪ್ರಕಾರ ಮಹಾಭಾರತ ಬೆಸ್ಟ ಪ್ರಾಬ್ಲಮ ಮ್ಯಾನೇಜ್ಮೆಂಟ್ ಬುಕ್ ಆಗಿದೆ‌. ನೀವು ಮಹಾಭಾರತವನ್ನು ಓದಿದರೆ ನಿಮ್ಮಲ್ಲಿ ಪ್ರಾಬ್ಲಮ್ಸಗಳನ್ನು ಹ್ಯಾಂಡಲ ಮಾಡುವ ಗ್ರೇಟ ಸ್ಕೀಲ ಡೆವಲಪ  ಆಗುತ್ತದೆ‌. ಮಹಾಭಾರತದಿಂದ ನಮಗೆ ಸಿಗುವ ಗ್ರೇಟ ಲೈಫ ಲೆಸನಗಳು ಇಂತಿವೆ ; 

ಮಹಾಭಾರತದ ಜೀವನ ಪಾಠಗಳು : Life Lessons from Mahabharat in Kannada

1) ಸರಿಯಾದ ಸಂಗತಿಗಳ ಪರ, ಸತ್ಯದ ಪರ, ನ್ಯಾಯದ ಪರ ನಿಂತರೆ ಮಾತ್ರ ನಾವು ಸೇಫಾಗಿರುತ್ತೇವೆ‌. ಇಲ್ಲವಾದರೆ ಸರ್ವನಾಶವಾಗುತ್ತೇವೆ. 

2) ಹಾಫ್ ನಾಲೇಜ ಡೆಂಜರಸ್ಸಾಗಿದೆ‌. ಯಾವುದೇ ಕೆಲಸಕ್ಕೆ ಕೈ ಹಾಕುವ ಮುಂಚೆ ನಾವು ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಅರ್ಧಂಬರ್ದ ನಾಲೇಜನೊಂದಿಗೆ ತಿಳಿಯದ ಕೆಲಸಕ್ಕೆ ಕೈ ಹಾಕಿದರೆ ಅಭಿಮನ್ಯುವಿನಂತೆ ನಮ್ಮ ತಲೆ ಹೋಗುತ್ತದೆ‌. 

ಮಹಾಭಾರತದ ಜೀವನ ಪಾಠಗಳು : Life Lessons from Mahabharat in Kannada

3) ದುರಹಂಕಾರ, ದುಷ್ಟತನ ಹಾಗೂ ದುಷ್ಕರ್ಮಗಳು ನಿಮ್ಮನ್ನು ಡೆಸ್ಟ್ರಾಯ ಮಾಡುತ್ತವೆ. ನೀವು ಇವುಗಳಿಂದ ದೂರವಿರಬೇಕು, ಇಲ್ಲವಾದರೆ ದುರ್ಯೋಧನ, ದುಶ್ಯಾಸನರಂತೆ ನೀವು ಕೂಡ ದುರಂತ ಸಾವಿಗೆ ತುತ್ತಾಗುತ್ತೀರಿ. 

4) ಎಲ್ಲ ತರಹದ ಜೂಜು ಹಾಗೂ ದುರಾಸೆ ನಿಮ್ಮನ್ನು ದುಸ್ಥಿತಿಗೆ ತಳ್ಳುತ್ತವೆ. ಜೂಜಿನಿಂದ ನೀವು ದೂರವಿರದಿದ್ದರೆ ನೀವು ಸಹ ಧರ್ಮರಾಯನಂತೆ ಹಣ, ಆಸ್ತಿ, ಅಂತಸ್ತಿನೊಂದಿಗೆ ಹೆಂಡತಿಯನ್ನು ಸಹ ಕಳೆದುಕೊಂಡು ತಲೆ ತಗ್ಗಿಸಿಕೊಂಡು ಕೂಡಬೇಕಾಗುತ್ತದೆ. 

ಮಹಾಭಾರತದ ಜೀವನ ಪಾಠಗಳು : Life Lessons from Mahabharat in Kannada

5) ಎಷ್ಟೇ ಕಷ್ಟವಾದರೂ ನಾವು ಹಿಡಿದ ಕೆಲಸವನ್ನು ಬಿಡಬಾರದು. Never Give Up ಆ್ಯಟಿಟ್ಯೂಡನ್ನು ಬೆಳೆಸಿಕೊಳ್ಳಬೇಕು. ನಾವು ಸಿಂಗಲ್ ಮೈಂಡೆಡಾಗಿ ಫೋಕಸ್ಡಾಗಿ ಕೆಲಸ ಮಾಡಿದರೆ ನಾವು ಬೇಗನೆ ನಮ್ಮ ಗೋಲಗಳನ್ನು ರೀಚ ಆಗುತ್ತೇವೆ. 

6) ದ್ರೌಪದಿಯ ಚುಚ್ಚು ಮಾತುಗಳು ದುರ್ಯೋಧನನ ಮತ್ಸರಕ್ಕೆ ಮುನ್ನುಡಿಯನ್ನು ಬರೆದವು. ಸೋ ಮಾತಾಡುವುದಕ್ಕಿಂತ ಮುಂಚೆ ನಾವು ಸಾವಿರ ಸಲ ಯೋಚಿಸಬೇಕು. ಇಲ್ಲವಾದರೆ ದ್ರೌಪದಿಯ ಸ್ಥಿತಿ ನಮಗೂ ಬರುತ್ತದೆ. 

7) ನಮ್ಮ‌ ಲೈಫಲ್ಲಿ ಶ್ರೀಕೃಷ್ಣನಂಥ ಗುಡ್ ಫ್ರೆಂಡ ಹಾಗೂ ಗ್ರೇಟ ಗುರುವಿನ ಅವಶ್ಯಕತೆ ತುಂಬಾನೆ ಇದೆ. ನಾವು ಶ್ರೀಕೃಷ್ಣನಂಥ ಗುರುವಿನ ಸ್ನೇಹ ಮಾಡಿದರೆ ದುರಂತ ಸಾವು ಹಾಗೂ ಸೋಲು ನಮ್ಮೆಡೆಗೆ ಸುಳಿಯಲ್ಲ. 

ಮಹಾಭಾರತದ ಜೀವನ ಪಾಠಗಳು : Life Lessons from Mahabharat in Kannada

8) ಎಮೋಷನಲ ಫೂಲಾಗಿರುವುದು ಹಾರ್ಮಫುಲ್ಲಾಗಿದೆ. ಪ್ರೀತಿ ಹಾಗೂ ವ್ಯಾಮೋಹದಲ್ಲಿ ಕುರುಡರಾದರೆ ನಮ್ಮನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ. ಸೋ ಧೃತರಾಷ್ಟ್ರನಂಥ ಕುರುಡು ಪ್ರೀತಿ ಹಾಗೂ ಪುತ್ರ ವ್ಯಾಮೋಹ ಒಳ್ಳೆಯದಲ್ಲ. 

9) ಹೆಣ್ಣಿನ ಕೋಪ ತಾಪ ಶಾಪ ಶುಭವಲ್ಲ, ಹೆಣ್ಣನ್ನು ಗೌರವಿಸದಿದ್ದರೆ ನಾವು ಮಣ್ಣಾಗುತ್ತೇವೆ. ಸೋ ನಾವು ಹೆಣ್ಣನ್ನು ಗೌರವಿಸಬೇಕು. ಪಾಂಡವರು ಕುಂತಿ ಹಾಗೂ ದ್ರೌಪದಿಯ ಮಾತನ್ನು ಕೇಳುತ್ತಿದ್ದರು, ಹೀಗಾಗಿ ಅವರು ವಿಜಯಿಯಾದರು. ಆದರೆ ‌ಕೌರವರು ಗಾಂಧಾರಿಯ ಒಳ್ಳೆ ಮಾತುಗಳನ್ನು, ಸಲಹೆಗಳನ್ನು ಕೇಳಿಸಿಕೊಳ್ಳುತ್ತಿರಲಿಲ್ಲ. ಸೋ ಅವರು ಸರ್ವನಾಶವಾದರು. ನಾವು ಸಕ್ಸೆಸಫುಲ್ಲಾಗಿರಬೇಕೆಂದರೆ, ಸೇಫಾಗಿರಬೇಕೆಂದರೆ ಹೆಣ್ಣನ್ನು ಗೌರವಿಸಬೇಕು, ಮನೆಯಲ್ಲಿರುವ ಮಾತೆಯರ ಮಾತನ್ನು ಚಾಚು ತಪ್ಪದೆ ಕೇಳಬೇಕು. ಅವರ ಸಲಹೆಗಳನ್ನು ಸ್ವೀಕರಿಸಬೇಕು. 

ಮಹಾಭಾರತದ ಜೀವನ ಪಾಠಗಳು : Life Lessons from Mahabharat in Kannada

10) ಪ್ಯಾಷನ ಪವರಫುಲ್ ಮೋಟಿವೇಟರರಾಗಿದೆ. ನಮಗೆ ಕಲಿಯುವ ಪ್ಯಾಷನನಿದ್ದರೆ ನಾವು ಏಕಲವ್ಯನಂತೆ ಗುರುವಿಲ್ಲದಿದ್ದರೂ ಕಲಿಯಬಹುದು. 

11) ಶಕುನಿಯಂಥ ಹಿತಶತ್ರುಗಳನ್ನು ದೂರವಿಡದಿದ್ದರೆ ನಮ್ಮ ಸಮಾಧಿಯನ್ನು ನಾವೇ ತೋಡಿಕೊಳ್ಳುತ್ತೇವೆ. 

12) ಸೇಡಿಗಾಗಿ ಹೊರಟವನು ಕೊನೆಗೆ ಸುಡುಗಾಡು ಸೇರುತ್ತಾನೆ, ಸ್ವರ್ಗಕ್ಕಲ್ಲ. ನಾವು ಸೇಡಿಗೆ ಹೊರಟರೆ ಕೌರವರಿಗೆ ಬಂದ ದುಸ್ಥಿತಿ ನಮಗೂ ಬರುತ್ತದೆ. ಬೇರೆಯವರನ್ನು ಹಾಳು ಮಾಡಲು ಯತ್ನಿಸಿದರೆ ನಾವು ಕೂಡ ಹಾಳಾಗುತ್ತೇವೆ. 

ಮಹಾಭಾರತದ ಜೀವನ ಪಾಠಗಳು : Life Lessons from Mahabharat in Kannada

13) ಒಗ್ಗಟ್ಟು ಹಾಗೂ ಟೀಮ ವರ್ಕ ಯಶಸ್ಸಿನ ಕೀಲಿ ಕೈಯಾಗಿದೆ. ನಾವು ಪಂಚ ಪಾಂಡವರಂತೆ ಒಗ್ಗಟ್ಟಾಗಿದ್ದರೆ, ಒಳ್ಳೇ ಟೀಮನೊಂದಿಗೆ ಮುನ್ನುಗ್ಗಿದ್ದರೆ ನಮ್ಮನ್ನು ತಡೆಯುವ ಸಾಮರ್ಥ್ಯ, ಸೋಲಿಸುವ ಸಾಮರ್ಥ್ಯ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. 

14) ನೀವು ನಿಮ್ಮ ಪಾಲಿನ ಆಸ್ತಿಯನ್ನು ತ್ಯಾಗ ಮಾಡಿದರೆ ರಾಮಾಯಣವಾಗುತ್ತದೆ. ಅದೇ ನೀವು ನಿಮ್ಮ ಪಾಲಿನ ಆಸ್ತಿಯನ್ನು ಕೇಳಿದರೆ ಮಹಾಭಾರತ ಶುರುವಾಗುತ್ತದೆ. ನಿಮ್ಮ ಹಕ್ಕನ್ನು ಪಡೆದುಕೊಳ್ಳಲು ಹೋರಾಡಬೇಕಾದ ಸ್ಥಿತಿ ಬಂದರೆ ನೀವು ಧೈರ್ಯವಾಗಿ ಹೋರಾಡಬೇಕು. ಏಕೆಂದರೆ ಬದುಕಿನ ಯುದ್ಧಭೂಮಿಯಲ್ಲಿ ನಿಮ್ಮ ಎದುರುಗಡೆ ನಿಂತವರ್ಯಾರು ನಿಮ್ಮ ಸೋದರ ಸಂಬಂಧಿಗಳಲ್ಲ, ಮಿತ್ರರಲ್ಲ. 

ಮಹಾಭಾರತದ ಜೀವನ ಪಾಠಗಳು : Life Lessons from Mahabharat in Kannada

                         ಇವೀಷ್ಟು ಮಹಾಭಾರತದಿಂದ ನಮಗೆ ಸಿಗುವ ಲೈಫ ಲೆಸನಗಳು. ಸೋ ಗೆಳೆಯರೇ, ಕಂಪಲ್ಸರಿಯಾಗಿ ಒಂದ್ಸಲ ಮಹಾಭಾರತವನ್ನು ಓದಿ. ಲಿಂಕ ವಿಡಿಯೋ ಡಿಸ್ಕ್ರಿಕ್ಷನಲ್ಲಿದೆ ಚೆಕೌಟ ಮಾಡಿ. ನಿಮಗೆ ಫ್ರಿಯಾಗಿ ಮಹಾಭಾರತದ ಕಥೆಗಳನ್ನು ಓದಲು ಇಂಟರೆಸ್ಟ ಇದ್ದರೆ ನೀವು www.Skkannada.comಗೆ ವಿಜಿಟ ಮಾಡಿ ಫ್ರಿಯಾಗಿ ಓದಬಹುದು. ಈ ವಿಡಿಯೋವನ್ನು ಲೈಕ ಮಾಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ ಮಾಡಿ ಮತ್ತು ಈ ವಿಡಿಯೋವನ್ನು ಹೆಮ್ಮೆಯಿಂದ ಎಲ್ಲೆಡೆಗೆ ಶೇರ್ ಮಾಡಿ. ಇದೇ ತರಹದ ಇಂಟರೆಸ್ಟಿಂಗ ವಿಡಿಯೋಗಳನ್ನು ನೋಡಲು ಈ ಚಾನೆಲಗೆ ಸಬಸ್ಕ್ರೈಬ ಮಾಡಿ ಹಾಗೂ ಫೇಸ್ಬುಕನಲ್ಲಿ ಡೈರೆಕ್ಟರ್ ಸತೀಶಕುಮಾರ ಪೇಜನ್ನು ಫಾಲೋ ಮಾಡಿ. All the best and Thanks you.....

BOOK LINKS :

1) ಸಂಪೂರ್ಣ ಮಹಾಭಾರತ : Sampurna Mahabharata Kannada Link :- https://www.roaringcreationsfilms.com/sampurna-mahabharata-book-in-kannada/


2) ಸಂಪೂರ್ಣ ರಾಮಾಯಣ : Sampurna Ramayana Kannada Link :- https://www.roaringcreationsfilms.com/sampurna-ramayana-book-in-kannada/


3) ಕನ್ನಡದಲ್ಲಿ ಭಗವದ್ಗೀತಾ ಯಥಾರೂಪವನ್ನು ನೀವು ಈ ಪುಸ್ತಕದಲ್ಲಿ ಓದಬಹುದು. 

ಮಹಾಭಾರತದ ಜೀವನ ಪಾಠಗಳು : Life Lessons from Mahabharat in Kannada

Blogger ನಿಂದ ಸಾಮರ್ಥ್ಯಹೊಂದಿದೆ.