ಕನ್ನಡ ನೀತಿ ಕಥೆಗಳು - Moral Stories in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಕನ್ನಡ ನೀತಿ ಕಥೆಗಳು - Moral Stories in Kannada


ಕನ್ನಡ ನೀತಿ ಕಥೆಗಳು - Moral Stories in Kannada - Kannada Neethi Kathegalu - Kannada Neeti Kathegalu

1) ಅವಳು ಮಾತಾಡಿದಾಗ : Kannada Moral Story - ಕನ್ನಡ ನೀತಿ ಕಥೆ


ಅವಳು ಮಾತಾಡಿದಾಗ : Kannada Moral Stories - Moral Stories in Kannada
                            
   ಒಂದಿನ ಮಾನವನೊಬ್ಬ ಸೌದೆ ತರಲು ಕಾಡಿಗೆ ಹೋದ. ಒಂದು ದೊಡ್ಡ ಮರವನ್ನು ಹುಡುಕಿ, ಅದರ ಕೊಂಬೆಗೆ ತನ್ನ ಹರಿತವಾದ ಕೊಡಲಿಯನ್ನು ಬೀಸಿದ. ಮರುಕ್ಷಣವೇ ಆ ಮರವು ಕಣ್ಣೀರಾಕುತ್ತಾ, "ಅಯ್ಯೋ ಪರಿಸರ ಮಾತೆ ಈ ಬುದ್ಧಿಯಿಲ್ಲದ, ಉಪಕಾರವರಿಯದ ಮನುಷ್ಯನನ್ನು ಕ್ಷಮಿಸಿ, ರಕ್ಷಿಸು ತಾಯಿ" ಎಂದು ಕೀರುಚಿತು. ಆಗ ಎಚ್ಚೆತ್ತ ಮಾನವ ಮರದೊಂದಿಗೆ ಮಮಕಾರದ ಮಾತುಗಳನ್ನು ಪ್ರಾರಂಭಿಸಿದನು.


ಅವಳು ಮಾತಾಡಿದಾಗ :  Kannada Moral Stories


ಮಾನವ :  ಯೇ ಮರವೇ, ಯಾಕೆ ಅಳುತ್ತಿರುವೆ?

ಮರ :  ನಿನ್ನ ಕರುಣೆಯಿಲ್ಲದ ಕೊಡಲಿ ಏಟು ನನ್ನನ್ನು ನೋಯಿಸಲಿಲ್ಲ. ನಿನ್ನಂಥ ಉಪಕಾರವರಿಯದ ಮನುಷ್ಯರ ಅಮಾನವೀಯತೆ ನನ್ನನ್ನು ನೋಯಿಸುತ್ತಿದೆ. ಅದಕ್ಕಾಗಿ ಅಳುತ್ತಿದ್ದೇನೆ.

ಮಾನವ :  ಇದೇನಿದು? ಇಷ್ಟೊಂದು ಒಗಟು-ಒಗಟಾಗಿ ಮಾತನಾಡುತ್ತಿರುವೆ? ಸ್ವಲ್ಪ ಅರ್ಥವಾಗುವಂತೆ ಹೇಳಬಾರದೇ?

ಮರ :  ಯೇ ಮೂರ್ಖ ಮನುಜ, ನೀನು ನಮ್ಮ ಹೊಟ್ಟೆಯಲ್ಲಿ ಹುಟ್ಟದಿದ್ದರೂ ನೀ ನಮ್ಮ ತನುಜನೇ. ನೀನು ನಮ್ಮ ಮಡಿಲಲ್ಲಿ ಆಟವಾಡಿಕೊಂಡು ಬೆಳೆದು ಬದುಕುತ್ತಿರುವ ಮುಗ್ಧ ಮಗು. ನಿಮಗೆ ನಾವು ಎಲ್ಲವನ್ನೂ ಧಾರೆಯೆರೆದು ಕೊಟ್ಟು ಬೆಳೆಸುತ್ತಿದ್ದೇವೆ. ಗಾಳಿ, ನೀರನ್ನು ಪುಕ್ಕಟೆಯಾಗಿ ಕೊಡುವುದಲ್ಲದೇ, ನಾವೇ ಸತ್ತು ನಿಮಗೆ ಆಹಾರವಾಗಿ ನಿಮ್ಮ ಹೊಟ್ಟೆ ಹಸಿವನ್ನು ನೀಗಿಸುತ್ತಿದ್ದೇವೆ. ಆದರೆ ನಿಮಗೆ ಕೃತಜ್ಞತೆ ಇಲ್ಲ. ನಮ್ಮ ಉಪಕಾರದ ಅರಿವು ಕೂಡ ನಿಮಗಿಲ್ಲ. ನಾವು ನಿಮಗಾಗಿ ಜೀವವನ್ನೇ ಕೊಟ್ಟಿದ್ದೇವೆ. ಆದರೆ ನೀವು ನಮಗೇನು ಕೊಟ್ಟಿರುವಿರಿ? ಬರೀ ನೋವು, ಕಣ್ಣೀರು, ಕಲುಷಿತ ಗಾಳಿ ಕೊನೆಗೆ ಸಾವು ಇಷ್ಟೇ. !!


ಅವಳು ಮಾತಾಡಿದಾಗ :  Kannada Moral Stories


ಮಾನವ : ಓ ಮಹಾತಾಯಿ ಈ ಪಾಪಿಯನ್ನು ಕ್ಷಮಿಸಿ ಬಿಡು. ಅರಿಯದೆ ತಪ್ಪು ಮಾಡುತ್ತಿದ್ದ ಕಟುಕನ ಕಣ್ಣು ತೆರೆಸಿ ಕರುಣೆ ಹುಟ್ಟಿಸಿದ ದೇವತೆ ನೀನು.

ಮರ : ಮಗು, ಇಷ್ಟು ದೊಡ್ಡ ಮಾತುಗಳೇಕೆ?  ಮಗು ಒದ್ದರೆ ತಾಯಿಗೆ ನೋವಾಗುವುದೇ? ಇಲ್ಲ ತಾನೇ? ಹಾಗೆ ನೀವು ಅವಿವೇಕದಿಂದ ಎಸಗಿದ ಅಪಚಾರವನ್ನು ಮನ್ನಿಸಿ ನಾವೆಲ್ಲ ನಿಮ್ಮನ್ನು ಪ್ರೀತಿಸುತ್ತೇವೆ. ನಾವಷ್ಟೇ ಅಲ್ಲ. ನಮ್ಮ ಪರಿಸರ ಮಾತೆ ನಿಸರ್ಗ ದೇವತೆಯು ನಿಮ್ಮನ್ನು ಪ್ರೀತಿಸುತ್ತಾಳೆ. ಆದ್ದರಿಂದಲೇ ನೀವು ಮನುಷ್ಯರು ರಾಕ್ಷಸ ರೂಪ ತಾಳಿದರೂ ಇನ್ನೂ ಉಸಿರಾಡುತ್ತಿರುವಿರಿ. ನಿಸರ್ಗಕ್ಕೆ ಅಪಚಾರವೆಸಗಬೇಡಿ. ನಿಸರ್ಗವನ್ನು ಪ್ರೀತಿಸಿ.... ಶುದ್ಧ ಗಾಳಿ, ಪರಿಶುದ್ಧ ವಾತಾವರಣದೊಂದಿಗೆ ಸಂತೋಷವಾಗಿ ಬಾಳಿ...

ಮಾನವ : ಎಂಥ ಉದಾರಿಗಳು ತಾಯಿ ನೀವು. ನಾನು ಇಂದಿನಿಂದ ನಿಸರ್ಗವನ್ನು ಪ್ರೀತಿಸುತ್ತೇನೆ, ಪೂಜಿಸುತ್ತೇನೆ. ಆದರೆ ಕನಸಲ್ಲೂ ನಿಸರ್ಗವನ್ನು ಮೋಹಿಸುವುದಿಲ್ಲ. ನನ್ನ ಕಣ್ಣು ತೆರೆಸಿದ್ದಕ್ಕೆ ಧನ್ಯವಾದಗಳು ತಾಯಿ. ನಾನು ಇತರೇ ನನ್ನ ಸೋದರರ ಕಣ್ಣು ತೆರೆಸಲು ಹೋರಡುತ್ತೇನೆ. ಆರ್ಶಿವಧಿಸು ತಾಯಿ ಹೋಗಿ ಬರುತ್ತೇನೆ...


ಅವಳು ಮಾತಾಡಿದಾಗ :  Kannada Moral Stories
      
  ಗೆಳೆಯರೇ ನಿಸರ್ಗವನ್ನು ಪ್ರೀತಿಸಿ ಮತ್ತು ರಕ್ಷಿಸಿ. ಆದರೆ ಮೋಹಿಸಬೇಡಿ. ಇವತ್ತು ನೀವು ನಿಸರ್ಗವನ್ನು ಸರ್ವನಾಶ ಮಾಡಿದರೆ, ಮುಂದೊಂದು ದಿನ ಬದುಕಿರುವಾಗಲೇ ನರಕವನ್ನು ನೋಡಬೇಕಾಗುತ್ತದೆ. ಎಲ್ಲೆಡೆ ಆಮ್ಲಜನಕದ ಟ್ಯಾಂಕಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.  ಈಗಲೇ ಎಚ್ಚೆತ್ತುಕೊಳ್ಳಿ... ನಿಸರ್ಗವನ್ನು ಪ್ರೀತಿಸಿ, ಪೂಜಿಸಿ ಮತ್ತು ಸಂರಕ್ಷಿಸಿ...

ಕನ್ನಡ ಕಥೆ ಪುಸ್ತಕಗಳು - Kannada Story Books
ಅವಳು ಮಾತಾಡಿದಾಗ :  Kannada Moral Stories
NoteThis article is coming out in the form of Animated Short Movie. For more updates keep in touch with Roaring Creations/YouTube. 

2) ಹಿತ ಶತ್ರುಗಳು : Kannada Motivational Story 


ಹಿತ ಶತ್ರುಗಳು : Kannada Motivational Story
           
   ಅವತ್ತು ಗಟ್ಟಿ ಗುಂಡಿಗೆಯ ಹರೆಯದ ಹುಡುಗನ ಕಣ್ಣಲ್ಲಿ ಕಣ್ಣೀರ ಧಾರೆ ಜಲಪಾತದಂತೆ ಧುಮುಕುತ್ತಿತ್ತು. ಅವನೆದೆಯಲ್ಲಿನ ನೋವು, ಆಕ್ರೋಶ, ಹತಾಶೆಗಳೆಲ್ಲವು ಕಣ್ಣೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು. ಸಿಡಿಲಿಗು ಹೆದರದ ಗುಂಡಿಗೆ ಒಂದು ಸಣ್ಣ ನಷ್ಟಕ್ಕೆ ನಲುಗಿ ಹೋಗಿತ್ತು. ಅವನಿಗೆ ಮುಂದೇನು ಮಾಡಬೇಕು ಎಂಬುದು ತೋಚದಾಗಿತ್ತು. ಕಾಲ ಕೆಳಗಿನ ನೆಲ ಕಳಚಿದಂತಾಗಿತ್ತು. ಆತ ಬಿಕ್ಕಿಬಿಕ್ಕಿ ಅತ್ತು ಮನಸ್ಸನ್ನು ಹಗುರಾಗಿಸಿಕೊಂಡು ಹೈವೇ ಪಕ್ಕದಲ್ಲಿ ಸುಮ್ಮನೆ ಸೋಂಬೆರಿಯಂತೆ ಕುಳಿತ್ತಿದ್ದನು. ಆತ ಸುಮ್ಮನೆ ಕೂರುವ ವ್ಯಕ್ತಿಯೇ ಅಲ್ಲ. ಆದರೂ ಅವನಿಗೆ ಬಂದ ಸಂಕಷ್ಟ ಅವನ ಕೈಕಾಲುಗಳನ್ನು ಕಟ್ಟಿ ಹಾಕಿತ್ತು. ಅವನಿಗೆ ಜೀವದ ಮೇಲಿನ ಆಸೆಯೇ ಹೊರಟು ಹೋಗುವ ಹಂತಕ್ಕೆ ತಲುಪಿತ್ತು. ಅಷ್ಟರಲ್ಲಿ ಅವನಿಗೆ ಅವನ ಜೀವದ ಗೆಳತಿ ಆಕಾಂಕ್ಷಾಳ ಕರೆ ಬಂದಿತು. ಅವಳಿಗೆ ಅವನ ನೋವಿಗೆ ಕಾರಣವೇನೆಂಬುದು ಆಗಲೇ ಗೊತ್ತಾಗಿತ್ತು. ಆಕೆ "ದೋಸ್ತ ಬದುಕಲ್ಲಿ ಇವೆಲ್ಲ ಕಾಮನ್. ಸಕ್ಸೆಸನ್ನು ಸೆಲೆಬ್ರೆಟ್ ಮಾಡಬೇಕೆಂದರೆ ಇಂಥ ಸಂಕಷ್ಟಗಳು ಇರಲೇಬೇಕು ಬಿಡು. ಡೋಂಟ್ ವರಿ. ನಿನ್ನ ಬೆಂಬಲಕ್ಕೆ ನಾನಿದೀನಿ..." ಎಂದೇಳುತ್ತಿದ್ದಳು. ಅಷ್ಟರಲ್ಲಿ ಆತ ದು:ಖ ತಾಳಲಾರದೆ ಮತ್ತೊಮ್ಮೆ ಅತ್ತು ಬಿಟ್ಟನು. ಅವನಿಗೆ ಆತ್ಮೀಯರಂಥ ಇರುವುದು ಅವಳೊಬ್ಬಳೇ. ೧೨ ವರ್ಷದಿಂದ ಬೆಸ್ಟ್ ಫ್ರೆಂಡ್ ಅವಳು. ಅವನ ಪ್ರತಿ ಹೆಜ್ಜೆಗೆ ಹೆಗಲು ಕೊಟ್ಟವಳು ಅವಳೊಬ್ಬಳೇ. ಅವನ ಮುಖದಲ್ಲಿನ ಮಂದಹಾಸಕ್ಕೆ, ಎದೆಯಲ್ಲಿನ ಕಿಚ್ಚಿಗೆ ಸ್ಪೂರ್ತಿ ಅವಳೊಬ್ಬಳೇ. ಅವಳ ಸ್ಪೂರ್ತಿಯ ಮಾತುಗಳಿಂದ ಅವನು ಕಳೆದುಕೊಂಡಿದ್ದ ಆತ್ಮವಿಶ್ವಾಸ ಮತ್ತೆ ಅವನೆದೆ ಸೇರಿತು. ಆತ ನೋವಲ್ಲಿಯೂ ನಗುತ್ತಾ ಅವಳಿಗೆ ಥ್ಯಾಂಕ್ಸ್ ಹೇಳುತ್ತಾ ರಸ್ತೆ ಬದಿಯ ಚಹಾದಂಗಡಿಯಲ್ಲಿ ಚಹಾ ತೆಗೆದುಕೊಂಡು ಅದರೊಂದಿಗೆ ಸಿಗರೇಟ್ ಹೊತ್ತಿಸಿ ಹಳೆಯ ಟೆಶ್ನನಗಳಿಂದ ಹೊರಬಂದನು.

ಹಿತ ಶತ್ರುಗಳು : Kannada Motivational Story

                        ಅವನಿಗೆ ಓದಿನಲ್ಲಿ ಅತೀವ ಆಸಕ್ತಿಯಿತ್ತು. ಆದರೆ ಕಾಲೇಜು ಓದು ಅವನ ಗುರಿಗೆ ಪೂರಕವಾಗಿರಲಿಲ್ಲ. ಅದಕ್ಕಾಗಿ ಆತ ಓದನ್ನು ಸ್ವಲ್ಪ ನಿರ್ಲಕ್ಷಿಸಿ ತನ್ನಿಷ್ಟದ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿದನು. ಯ್ಯುಟೂಬ ಗೂಗಲಗಳನ್ನು ಕಿತ್ತಾಕಿ ಹೊಸಹೊಸ ಸ್ಕೀಲಗಳನ್ನು ಕಲಿತನು. ಅದರ ಜೊತೆಗೆ ಪದವಿ ಕೂಡ ಮುಗಿಯಿತು. ಅವನಿಗೆ ಮುಂದೆ ಓದುವ ಮನಸ್ಸಿರಲಿಲ್ಲ. ಮನೆಯವರ ಒತ್ತಾಯಕ್ಕೆ ಓದಿ ಹಣವನ್ನು ವ್ಯಯಿಸುವ ಮುಠ್ಠಾಳತನ ಮಾಡುವ ಹುಡುಗ ಅವನಾಗಿರಲಿಲ್ಲ. ಅವನು ಮನೆಯವರ ಮನವೊಲಿಸಿ ತನ್ನಿಷ್ಟದ ಬ್ಯುಸಿನೆಸ್ ಮಾಡಲು ಮುಂದಾದನು. ಮನೆಯವರು ಸಂಗ್ರಹಿಸಿಟ್ಟ ಹಣವನ್ನು ಅವನಿಗೆ ನೀಡಿದರು. ಜೊತೆಗೆ ಸಂಬಂಧಿಕರು ಸಹ ಸಾಧ್ಯವಾದಷ್ಟು ಸಹಾಯ ಮಾಡಿದರು. ದೊಡ್ಡ ಪಟ್ಟಣದಲ್ಲಿ ದೊಡ್ಡ ಬಾಡಿಗೆ ಆಫೀಸ ಖರೀದಿಸುವಷ್ಟು ಹಣ ಅವನ ಬಳಿಯಿರಲಿಲ್ಲ. ಆತ ಆಫೀಸಿಗಾಗಿ ಬಿಲ್ಡಿಂಗ್ ಹುಡುಕುತ್ತಿರುವಾಗ ಅವನ ಅತೀ ಹತ್ತಿರದ ಸಂಬಂಧಿಯೊಬ್ಬರು ಬಂದು ನಮ್ಮ ಬಿಲ್ಡಿಂಗ್ ನಾಲ್ಕು ವರ್ಷದಿಂದ ಖಾಲಿ ಬಿದ್ದಿದೆ. ಸದ್ಯಕ್ಕೆ ನಮಗೇನು ದುಡ್ಡು ಕೊಡುವುದು ಬೇಡ, ಮುಂದೆ ನಿಮಗೆ ಸಕ್ಸೆಸ್ ಸಿಕ್ಕ ಮೇಲೆ ಖುಷಿಯಿಂದ ಸಾಧ್ಯವಾದಷ್ಟು ಕೊಡಿ ಎಂದೇಳಿದರು. ಅವರ ಮಾತನ್ನು ನಂಬಿ ಪಾಪ ಆ ಹುಡುಗ ೧೨ ಲಕ್ಷಕ್ಕೂ ಮೀರಿ ಸಾಲ ಮಾಡಿಕೊಂಡು ತನ್ನ ಬ್ಯುಸಿನೆಸ್ಸನ್ನು ಪ್ರಾರಂಭಿಸಿದನು. ಅವನ ಬ್ಯುಸಿನೆಸ್ ಸೂಪರಾಗಿ ಶುರುವಾಯಿತು. ಹಣ ಕೂಡ ಹರಿದು ಬರಲು ಪ್ರಾರಂಭವಾಯಿತು. ಅದಕ್ಕಾಗಿ ಅವನ ಮುಖದಲ್ಲಿ ನಗೆ ನಲಿದಾಡಿತು. ಆದರೆ ಅಷ್ಟರಲ್ಲಿ ಅವನಿಗೊಂದು ದೊಡ್ಡ ಆಘಾತ ಬಂದು ಎದೆಗಪ್ಪಳಿಸಿತು. ಆಫೀಸಗಾಗಿ ಬಿಲ್ಡಿಂಗ್ ನೀಡಿದ್ದವರು ದಿಢೀರನೆ ಬಂದು ಆಫೀಸ ಖಾಲಿ ಮಾಡಲು ಧರಣಿ ನಿಂತರು. ಅವನ ಕಾಲ ಕೆಳಗಿನ ನೆಲ ಒಮ್ಮೆಲೇ ಕೊಚ್ಚಿ ಹೋಯಿತು. ಅವನ ಕಣ್ಣಿನಿಂದ ಕಣ್ಣೀರಧಾರೆ ಜಲಪಾತದಂತೆ ಸುರಿಯಲು ಶುರುವಾಯಿತು. ಏಕೆಂದರೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಆತ ಬ್ಯುಸಿನೆಸ್ಸನ್ನು ಪ್ರಾರಂಭಿಸಿದ್ದನು. ಇದ್ದಕ್ಕಿದ್ದಂತೆ ಈ ರೀತಿ ಆಫೀಸ ಖಾಲಿ ಮಾಡಿ ಎಂದಾಗ ಅವನ ಆತ್ಮಸ್ಥೈರ್ಯ ಕುಸಿಯಿತು. ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾದವಳು ಆ ಬಿಲ್ಡಿಂಗನ ಮಾಲಕಿ ಮನೆಹಾಳಿ. ಅವಳಿಗೆ ಮೊದಲಿನಿಂದಲೂ ಆ ಹುಡುಗನ ಮೇಲೆ ಜಲಸಿಯಿತ್ತು. ಅವನ ಯಶಸ್ಸು ಅವಳಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಆಕೆ ಬೇಕಂತಲೇ ತನ್ನ ಗಂಡನ ಕಡೆಯಿಂದ ಹೇಳಿಸಿ ಬಿಲ್ಡಿಂಗ ಕೊಟ್ಟು ಮತ್ತೆ ಕಿತ್ತುಕೊಳ್ಳುವ ನಾಟಕವಾಡಿ ತನ್ನ ಕುಟಿಲತೆಯಲ್ಲಿ ಯಶಸ್ವಿಯಾದಳು. ಅವಳ ಮೈಯಲ್ಲಿ ರಕ್ತಕ್ಕಿಂತ ಹೆಚ್ಚಾಗಿ ಕೊಳಕುತನವೇ ತುಂಬಿತ್ತು. ಅವಳ ಒಣದ್ವೇಷಕ್ಕೆ ಆ ಹುಡುಗನ ಬ್ಯುಸಿನೆಸ್ ಹಾಡುಹಗಲೇ ನೆಲಕಚ್ಚಿತು. ಆತ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದನು.

ಹಿತ ಶತ್ರುಗಳು : Kannada Motivational Story

                  ತನ್ನ ಜೀವದ ಗೆಳೆಯ ತನ್ನ ಹತ್ತಿರದ ಸಂಬಂಧಿಗಳ ಕುತಂತ್ರಕ್ಕೆ ಬಲಿಯಾಗಿ ಬೀದಿಗೆ ಬಂದಿರುವ ಸುದ್ದಿ ಕೇಳಿ ಆಕಾಂಕ್ಷಾಳ ಕಣ್ಣುಗಳು ಸಹ ತುಂಬಿ ಬಂದವು. ಆದರೆ ಅವಳು ಧೈರ್ಯ ಕಳೆದುಕೊಳ್ಳದೆ ಅವನನ್ನು ಸಂತೈಸಿದಳು. ಅವನಿಗೆ ಧೈರ್ಯ ತುಂಬಿ ಮತ್ತೆ ಬ್ಯುಸಿನೆಸ್ಸನ್ನು ಹೊಸದಾಗಿ ಪ್ರಾರಂಭಿಸಲು ಹುರಿದುಂಬಿಸಿದಳು. ಅವಳ ಸ್ಪೂರ್ತಿದಾಯಕ ಮಾತುಗಳಿಂದ ಅವನ ಆತ್ಮವಿಶ್ವಾಸ ಹೆಚ್ಚಾಯಿತು. ಆತ ಸಂಬಂಧಿಕರು ಮಾಡಿದ ಕುಟಿಲತೆಗೆ ತಕ್ಕ ಶಾಸ್ತಿ ಮಾಡಲು ನಿರ್ಧರಿಸಿದನು. ತನ್ನನ್ನು ಕಾಲ ಕೆಳಗಾಕಿ ತುಳಿದವರನ್ನು ತಲೆತಗ್ಗಿಸಿ ನಿಲ್ಲುವಂತೆ ಮಾಡಲು ಪಣತೊಟ್ಟನು. ಮತ್ತೆ ಅಲ್ಲಿಇಲ್ಲಿ ಸಾಲ ಮಾಡಿ ಹೊಸ ಆಫೀಸಿನ್ನು ಖರೀದಿಸಿ ಮತ್ತೆ ಅದೇ ಬ್ಯುಸಿನೆಸ್ಸನ್ನು ಹೊಸದಾಗಿ ಪ್ರಾರಂಭಿಸಿದನು. ಹೊರಗಿನ ಶತ್ರುಗಳೊಡನೆ ಹೋರಾಡಿ ಗೆಲ್ಲಬಹುದು. ಆದರೆ ಒಳಗಿನ ಹಿತಶತ್ರುಗಳನ್ನು ಗುರ್ತಿಸುವುದು ಸಹ ಸುಲಭವಲ್ಲ ಎಂಬುದು ಅವನಿಗೆ ಅರಿವಾಯಿತು. ರಣಹದ್ದುಗಳ ನಡುವೆ ಸಿಲುಕಿಕೊಂಡು ಒದ್ದಾಡುತ್ತಿರುವ ಒಂಟಿ ಗುಬ್ಬಚ್ಚಿಯಂತೆ ಅವನಾಗಿರುವಾಗ  ಅವನಿಗೆ ಮಾನಸಿಕವಾಗಿ ಬೆಂಬಲ ನೀಡಿ ಮುಂದೆ ಸಾಗಲು ಸ್ಪೂರ್ತಿಯಾದ ಅವಳು ಮಾದರಿ ಗೆಳತಿಯಾದಳು. ಅವನ ಯಶಸ್ಸಿನ ಹಾದಿಗೆ ಆರಂಭದಲ್ಲೇ ಕಲ್ಲಾಕಿದ ಸಂಬಂಧಿಕರಲ್ಲಿನ ಕೊಳಕು ಹೆಣ್ಣು ಸಮಾಜದಲ್ಲಿ ಮಾನಗೇಡಿಯಾದಳು. ಅವನ ಯಶಸ್ಸನ್ನು ನೋಡಿ ಹೊಟ್ಟೆ ಉರಿದುಕೊಂಡು ಸಿಕ್ಕಲೆಲ್ಲ ಪರಚಿಕೊಂಡು ಹುಚ್ಚಿಯಾದಳು.

ಹಿತ ಶತ್ರುಗಳು : Kannada Motivational Story

                           ಗೆಳೆಯರೇ, ಈ ನೈಜ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಹಂಬಲ ನನಗಿರಲಿಲ್ಲ. ಆದರೆ ಈ ಕಥೆಯ ಕಥಾನಾಯಕನಂತೆ ಎಷ್ಟೋ ಜನ ಅಮಾಯಕರು ಮೋಸ ಹೋಗಿದ್ದಾರೆ. ನಮ್ಮ ದೇಶದ ಯುವಕರು ಬರೀ ನೌಕರಿಗಾಗಿ ನಾಯಿಯಂತೆ ಅಲೆಯುತ್ತಾರೆ. ಅಂಥದರಲ್ಲಿ ಧೈರ್ಯ ಮಾಡಿ ಸ್ವಂತ ಬ್ಯುಸಿನೆಸ್ ಪ್ರಾರಂಭಿಸಿದವರನ್ನು ಸ್ವಂತದ ಸಂಬಂಧಿಕರೇ ಹೊಸಕಿ ಹಾಕಲು ಶಕುನಿ ತಂತ್ರಗಳನ್ನು ಹೆಣೆಯುತ್ತಾರೆ. ಇದು ನಮ್ಮ ದೇಶದ ದೌರ್ಭಾಗ್ಯ. ಆದರೆ ನಾವು ಹೆದರಬಾರದು. ತುಳಿಯುವವರು, ತುಳಿದವರು ತಲೆಯೆತ್ತಿ ನೋಡುವಷ್ಟರ ಮಟ್ಟಿಗೆ ನಾವು ಬೆಳೆದು ನಿಲ್ಲಬೇಕು. ಸಾಧ್ಯವಾದರೆ ನೀವು ಒಂದು ಹೊಸ ಬ್ಯುಸಿನೆಸ್ಸನ್ನು ಪ್ರಾರಂಭಿಸಿ ಬಿಲೇನಿಯರಗಳಾಗಿ. ಸಾಧ್ಯವಾಗದಿದ್ದರೆ ನಿಮ್ಮ ಸುತ್ತಮುತ್ತ ಹೊಸದಾಗಿ ಬ್ಯುಸಿನೆಸ್ ಪ್ರಾರಂಭಿಸಿದ ನವ ಯುವಕರಿಗೆ ನೈತಿಕ ಬೆಂಬಲ ನೀಡಿ ಅವರನ್ನು ಪ್ರೋತ್ಸಾಹಿಸಿ Please. ಧನ್ಯವಾದಗಳು... 

3) ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... - Moral Story in Kannada on Mother

   Director Satishkumar

                                ನನ್ನ ಜೀವನದಲ್ಲಿ ಸದ್ಯಕ್ಕೆ ಹೇಳಿಕೊಳ್ಳುವಂಥ ದೊಡ್ಡ ವಿಷಯಗಳೇನು ಆಗಿಲ್ಲ. ಆದರೆ ಆಗುತ್ತಿರುವುದೆಲ್ಲವು ವಿಶೇಷವಾಗಿವೆ. ನನಗೆ ನಿಮ್ಮಂತೆ ಹತ್ತಾರು ಜನ ಗೆಳೆಯರಿಲ್ಲ. ನನಗೆ ಇರುವುದು ಇಬ್ಬರೇ ಗೆಳೆಯರು. ಅವರಲ್ಲಿ ಒಂದು ನನ್ನ ಲೇಖನಿಯಾದರೆ, ಮತ್ತೊಂದು ಅವಳು. ಅವಳಿಗೂ ಅಷ್ಟೇ..! ಅವಳಿಗೆ ಅವಳ ಕ್ಯಾಮೆರಾವನ್ನು ಬಿಟ್ಟರೆ ನಾನೊಬ್ಬನೇ ಗೆಳೆಯ. ನಿನ್ನೆ  ನಮ್ಮಿಬ್ಬರ ಕಣ್ಣಿಗೆ ಬಸ್ಸಲ್ಲಿ ಬಿಸಲೇರಿ ವಾಟರ್ ಬಾಟಲಗಳನ್ನು ಮಾರುತ್ತಿರುವ ೬೫ ವಯಸ್ಸಿನ ಒಬ್ಬಳು ಹಣ್ಣಾದ ಮುದುಕಿ ಕಾಣಿಸಿದಳು. ಅವಳನ್ನು ನೋಡಿದಾಗ ನನ್ನವಳ ಕಣ್ಣ೦ಚಲ್ಲಿ ಕಣ್ಣೀರು ಕಾಲು ಚಾಚಿತು.


        ಆ ಮುದುಕಿಗೆ ಮಗ, ಸೊಸೆ, ಮೊಮ್ಮಕ್ಕಳೆಲ್ಲರು ಇದ್ದಾರೆ. ಆದರೆ ಎಳ್ಳಷ್ಟು ಪ್ರಯೋಜನವಿಲ್ಲ. ಮಗ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಆ ಮಹಾತಾಯಿ ಕಷ್ಟ ಪಡುತ್ತಿರುವುದನ್ನು ನೋಡಿದರೆ ಎಂಥ ಕಟುಕನ ಕಲ್ಲು ಹೃದಯವಾದರೂ ಕರಗಿ ಕನಿಕರ ತೋರಿಸುತ್ತೆ. ಆದರೆ ಅವಳ ಮಗ ಮತ್ತು ಸೊಸೆಯ ಹೃದಯವೇಕೋ ಕಲ್ಲಾಗಿದೆ. ಅಂಥ ಪರಿಸ್ಥಿತಿ ಯಾವ ತಾಯಿಗೂ ಬರದಿರಲಿ ಎಂಬ ಕಳಕಳಿ ನನ್ನದು. "ತಾಯಿ ದೇವರಾಗಬಹುದು. ಆದರೆ ದೇವರು ಎಷ್ಟೇ ಪ್ರಯತ್ನಿಸಿದರೂ ಯಾವತ್ತು ತಾಯಿಯಾಗಲಾರ". ಪ್ಲೀಸ್ ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ತಾಯಿ ತೀರಿ ಹೋದಾಗ ನೀವು ಅತ್ತರೆ,,, ತಾಯಿ ಮತ್ತೆ ಮರಳಿ ಬಾರಳು ಎಂಬುದು ನೆನಪಿರಲಿ... ನೀನು ಚಿಕ್ಕವನಿದ್ದಾಗ ನೀನು ಸ್ವಲ್ಪ ಅತ್ತರೆ ಸಾಕು ತಾಯಿ ಎಲ್ಲಿದ್ದರೂ ಓಡೋಡಿ ಬರುತ್ತಿದ್ದಳು. ಆದರೆ ಈಗ ನೀ ಬಿಕ್ಕಿಬಿಕ್ಕಿ ಅತ್ತರೂ ತಾಯಿ ಮರಳಿ ಬಾರಳು...  


೧) ತಾಯಿ ಮತ್ತೆ ಮರಳಿ ಬಾರಳು...

ತಾಯಿ ಹಾಡಿದ ಜೋಗುಳದ ಗೀತೆ
ತಾಯಿ ಪ್ರೀತಿಯ ಮುಗಿಯದ ಕವಿತೆ
ತಾಯಿಯದ್ದು ಕರುಳು ಬಂಧದ ಮಮತೆ
ಅದನ್ಯಾಕೆ ನೀ ಮಡದಿ ಬಂದಾಗ ಮರೆತೆ?

ನವಮಾಸ ನಿನ್ನನ್ನು ಹೊತ್ತಳು
ನೀ ಹುಟ್ಟುವಾಗ ಸಂತಸದಿ ಅತ್ತಳು
ಜೀವತೆದು ನಿನ್ನ ಹೊಗಳಿ ಬೆಳೆಸಿದಳು
ನಿನಗಾಗಿ ವನವಾಸ ಅನುಭವಿಸಿದಳು..


ಓದಿಸಿದಳು ನಿನ್ನ ಹಗಲಿರುಳು ದುಡಿದು
ಮರುಗಿದಳು ದಿನಾ ಸಂಕಷ್ಟಗಳಲ್ಲಿ ಮಡಿದು
ನಿನ್ನ ಏಳ್ಗೆಗೆ ತಾಯಿ ಪಟ್ಟ ನೋವಿದು
ಇಂಥ ಮಾತೆಗೆ ಯಾವ ಉಡುಗೊರೆ ನಿನ್ನದು?

ನಿನ್ನ ಪ್ರೀತಿಗೆ ತಾಯಿ ಕೊಟ್ಟಳು ಒಪ್ಪಿಗೆ
ಬಂದ ಸೊಸೆ ಕಾಡುತಿಹಳು ಯಾವ ತಪ್ಪಿಗೆ?
ಜೀವ ಬಿಗಿಹಿಡಿದವಳೆ ಮೊಮ್ಮಕ್ಕಳ ಆಸೆಗೆ


ಮುದಿ ಮುದುಕಿ ಮೌನವಾಗಿರುವಳು
ನಿನ್ನ ಮುದ್ದಿನ ಮಡದಿಯ ಕಾಟಕ್ಕೆ.
ನೀನು ಹೋಗುವೆ ಖಂಡಿತ ನರಕಕ್ಕೆ...

ಸ್ವಾರ್ಥಿ ನಿನ್ನ ಹೆಂಡತಿ ತಾಯಿಯ ದೂಡಿದಳು
ಬೀದಿಲಿ ಬಿದ್ದ ತಾಯಿ ನಿನ್ನನ್ನೇ ಹರಸಿದಳು
ಕೊನೆಯುಸಿರೆಳೆದಳು ಸಿಗದೇ ಅನ್ನದಗಳು
ಈಗ ನೀ ಅತ್ತರೆ ತಾಯಿ ಮತ್ತೆ ಬಾರಳು...
ನೆನಪಿರಲಿ ತಾಯಿ ಮತ್ತೆ ಮರಳಿ ಬಾರಳು...

೨) ಅತ್ತೆ v/s ಕತ್ತೆ

ಮದುವೆಯ ಮುಂಚೆ ಮಕ್ಕಳು
ಹೆತ್ತವರಿಗೆ ಸೊಂಪಾದ ನೆರಳು
ಮದುವೆಯ ನಂತರ ಮಕ್ಕಳು
ಹೆಂಡ್ತಿ ಮಾತಿಗೆ ಮರಳು...

ಸೊಸೆ ತರುವ ಕಪಟ ತಿರುಳು
ಕಳಚುತ್ತೆ ಸಂಸಾರದ ಸರಳು
ಹೆಂಡತಿಯ ಮಾತಿಗೆ ಮಗ
ನೀಡ್ತಾನೆ ತನ್ನ ಮುಗ್ಧ ಕೊರಳು..


ಮಗನ ಅಗಲುವಿಕೆಯಿಂದ
ತತ್ತರಿಸುತ್ತೆ ಹೆತ್ತ ಕರಳು
ಇದು ಹೆಣ್ಣಿನ ದೌರ್ಭಾಗ್ಯದ ಉರುಳು
ತನ್ನ ಕಣ್ಣಲ್ಲೇ ಚುಚ್ಚಿಕೊಂಡ ಬೆರಳು...

ಹೆಣ್ಣಿಗೆ ಹೆಣ್ಣೆ ತಾನೆ ಶತ್ರುಳು?
ಹೆಣ್ಮಕ್ಕಳು ಒಂಥರಾ ಪಾಪಿ ದೇವತೆಗಳು.
ಏಕೆಂದರೆ ಈಗ ಅಳುತ್ತಿರುವ ಅತ್ತೆ,
ಒಂದು ಕಾಲದಲ್ಲಿ ಸೊಸೆಯಾಗಿ ಮೆರೆದ ಕತ್ತೆ...



3) True ಗರ್ಲಫ್ರೆಂಡ್ - One Friendship love story in Kannada


ಕನ್ನಡ ನೀತಿ ಕಥೆಗಳು - Moral Stories in Kannada - Kannada Neethi Kathegalu - Kannada Neeti Kathegalu
                   
            "True ಗರ್ಲಫ್ರೆಂಡ್" ಇದು ಹದಿಹರೆಯದ ಹುಡುಗ ಹುಡುಗಿಯರ ಕಣ್ಣು ತೆರೆಸುವ ಕಥೆಯಾಗಿದೆ. ಫೇಸ್ಬುಕ್ ಸ್ನೇಹವೇ ನಿಜವಾದ ಸ್ನೇಹವೆಂದು ಹೆಚ್ಚಿನ ಜನ ನಂಬಿದ್ದಾರೆ. ಆದರೆ ಅದು ನಿಜವಾದ ಸ್ನೇಹವಲ್ಲ. ನಕಲಿ ಫೇಸ್‌ಬುಕ್ ಸ್ನೇಹಿತರಿಗಿಂತ ಲೈಫ್‌ಬುಕ್ ಸ್ನೇಹಿತರು ಮುಖ್ಯ ಎಂದು ಈ ಕಥೆ ಸಾಬೀತುಪಡಿಸುತ್ತದೆ. ಫೇಸ್‌ಬುಕ್ ಮತ್ತು ಮೊಬೈಲ್ ಸ್ನೇಹಿತರು ನಿಜವಾದ ಸ್ನೇಹಿತರಾಗಿದ್ದಾರೆ ಹಾಗೂ ಅವರು ನಮ್ಮ ಸಂಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡಲು ಬರುತ್ತಾರೆ ಎಂದು ನಂಬಿದ್ದ ಇಬ್ಬರು ಒಡಹುಟ್ಟಿದವರ ಕಥೆ ಇದು. ಅವರು ಹೇಗೆ ನಕಲಿ ಸ್ನೇಹಿತರನ್ನು ಬಿಟ್ಟು ನಿಜವಾದ ಸ್ನೇಹಿತರನ್ನು ಕಂಡುಕೊಳ್ಳುತ್ತಾರೆ ಎಂಬುದು ಈ ಕಥೆಯ ಆತ್ಮವಾಗಿದೆ. ನಾನು ಈ ಕಥೆಯನ್ನು ಆರು ವರ್ಷಗಳ ಹಿಂದೆ ಬರೆದಿರುವೆ. ಆದರೆ ಇದು ಇಂದಿನ ಸಂದರ್ಭಗಳಿಗೆ ಹೆಚ್ಚು ಸೂಕ್ತವಾಗಿದೆ. ಫೇಸ್‌ಬುಕ್ ಸ್ನೇಹಿತರನ್ನು ನಿಜವಾದ ಸ್ನೇಹಿತರೆಂದು ನಂಬುವ,  ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಜನರು ಈ ಸಣ್ಣ ಕಥೆಯನ್ನು ಒಮ್ಮೆ ಓದಬೇಕು.
      
      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.
  

4) ಸುಂದರಿಯ ಗರ್ವಭಂಗ : Success Story of a Love Failured Boy


4) ಸುಂದರಿಯ ಗರ್ವಭಂಗ : Success Story of a Love Failured Boy
                 
  "ಸುಂದರಿಯ ಗರ್ವಭಂಗ" ಇದು ಮನಸ್ಸು ಮುರಿದ ಪ್ರೇಮಿಗಳಿಗೆ ಬೆಸ್ಟ್ ಮೋಟಿವೇಶನಲ್ ಕಥೆಯಾಗಿದೆ. ಪ್ರೇಮ ವೈಫಲ್ಯದಿಂದಾಗಿ ಜೀವನದಲ್ಲಿ ಹೀನಾಯವಾಗಿ ಸೋತ ಕುಮಾರ ಎಂಬ ಹುಡುಗನ ಯಶಸ್ಸಿನ ಕಥೆ ಇದು. ಕಾರು, ದೊಡ್ಡ ಮನೆ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಶ್ರೀಮಂತ ಸರ್ಕಾರಿ ನೌಕರನನ್ನು ಮದುವೆಯಾಗಲು ಅವನ ಪ್ರೇಯಸಿ ಸುಂದರಿ ಅವನನ್ನು ಬಿಡುತ್ತಾಳೆ.  ಅವನ ಬಡತನದಿಂದಾಗಿ ಅವಳು ಅವನನ್ನು ತಿರಸ್ಕರಿಸುತ್ತಾಳೆ. ಅದಕ್ಕಾಗಿ ಕುಮಾರ ತನ್ನ ಸಕ್ಸೆಸ ಮತ್ತು ಶ್ರೀಮಂತಿಕೆಯಿಂದ ಅವಳ ಮೇಲೆ ಸೇಡು ತೀರಿಸಿಕೊಳ್ಳಲು  ಹಠಮಾರಿಯಾಗುತ್ತಾನೆ.  ಅವನು ಅವಳ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ? ಮದುವೆಯ ನಂತರ ಸುಂದರಿಯ ಜೀವನದಲ್ಲಿ ಏನಾಗುತ್ತದೆ? ಎಂಬುದೇ ಈ ಕಥೆಯ ಜೀವವಾಗಿದೆ. ಪ್ರೀತಿಯಲ್ಲಿ ಮನಸ್ಸು ಮುರಿದುಕೊಂಡ ಎಲ್ಲ ಹುಡುಗ ಹುಡುಗಿಯರು ಓದಲೇಬೇಕಾದ ಬೆಸ್ಟ್ ಕಥೆಯಿದು. 

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

5) ಮಡದಿಯ ಪ್ರೇಮ ಪಾಠ - Life Lesson of Wife - One Romantic Love Story in Kannada


5) ಮಡದಿಯ ಪ್ರೇಮ ಪಾಠ - Life Lesson of Wife - One Romantic Love Story in Kannada
                     
   "ಮಡದಿಯ ಪ್ರೇಮ ಪಾಠ'' ಇದು ಹೊಸದಾಗಿ ಮದುವೆಯಾದ ಗಂಡ ಮತ್ತು ಹೆಂಡತಿಯರ ನಡುವೆ ನಡೆದ ಒಂದು ರೋಮ್ಯಾಂಟಿಕ್  ಪ್ರೇಮಕಥೆಯಾಗಿದೆ. ಜೀವನದಲ್ಲಿ ಯಾವುದೇ ದೊಡ್ಡ ಗುರಿಗಳನ್ನು ಹೊಂದಿರದ ಗಂಡ ಹಾಗೂ ಐಎಎಸ್ ಅಧಿಕಾರಿಯಾಗಲು ಬಯಸುವ ಹೆಂಡತಿಯ ಕಥೆ ಇದಾಗಿದೆ. ಒಂದು ಕಡೆ ಗಂಡ ಅವಳನ್ನು ದೈಹಿಕ ಸುಖಕ್ಕಾಗಿ ಬಲವಂತವಾಗಿ ಬಳಸಿಕೊಳ್ಳಲು ಮುಂದಾಗುತ್ತಾನೆ. ಮತ್ತೊಂದು ಕಡೆ ಅವನ ತಾಯಿ ಉದ್ದೇಶಪೂರ್ವಕವಾಗಿ ಅವನ ಹೆಂಡತಿಗೆ ಕಾಟ ಕೊಟ್ಟು ಹಿಂಸಿಸುತ್ತಾಳೆ. ಕಥೆ ಈ ರೀತಿ ಮುಂದುವರಿಯುತ್ತದೆ. ಕೊನೆಗೆ ಆ ಸೃಜನಶೀಲ ಹೆಂಡತಿಯ ಪ್ರೇಮಪಾಠದೊಂದಿಗೆ ಗಂಡನ ಮುಚ್ಚಿದ ಕಣ್ಣುಗಳು ತೆರೆಯುತ್ತವೆ, ಆತ ಬದಲಾಗುತ್ತಾನೆ. ಇಲ್ಲೊಂದು ರೋಚಕ ತಿರುವಿದೆ. ಅದನ್ನು ತಿಳಿಯಲು ಈ ಪುಸ್ತಕವನ್ನು ಓದಿ... 

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

  ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿClick 

6) ಮಾಜಿ ಪ್ರೇಯಸಿಗೊಂದು ಪತ್ರ - Letter to X Lover in Kannada - Love Letter in Kannada


ಮಾಜಿ ಪ್ರೇಯಸಿಗೊಂದು ಪತ್ರ - Letter to X Lover in Kannada - Love Letter in Kannada
             
   "ಮಾಜಿ ಪ್ರೇಯಸಿಗೊಂದು ಪತ್ರ" ಇದೊಂದು ಅತ್ಯುತ್ತಮ ಲವ್ ಬ್ರೇಕಪ್ ಮೋಟಿವೇಷನ್ ಬುಕ್ ಆಗಿದೆ. ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಒಬ್ಬ ಸುಂದರ ಹಾಗೂ ಯಶಸ್ವಿ ಹುಡುಗನಿಂದ ದೂರಾದ ಒಬ್ಬಳು ಅನಲಕ್ಕಿ ಹುಡುಗಿಯನ್ನು ಈ ಪುಸ್ತಕವು ಮೋಟಿವೇಟ್ ಮಾಡುತ್ತದೆ. ಟೀನೇಜಲ್ಲಿ ತಮ್ಮ ಹೃದಯಕ್ಕೆ ಗಾಯ ಮಾಡಿಕೊಂಡ ಎಲ್ಲ ಹರೆಯದ ಹುಡುಗಿಯರಿಗೆ ಜೀವನದಲ್ಲಿ ಸಕ್ಸೆಸಫುಲ್ಲಾಗಲು ಈ ಪುಸ್ತಕ ಪ್ರೇರೇಪಿಸುತ್ತದೆ. ಲವ್ವಲ್ಲಿ ಫೇಲಾದಾಗ ಲೈಫಲ್ಲಿ ಪಾಸಾಗಲು ಈ ಪುಸ್ತಕ ಉಪದೇಶಿಸುತ್ತದೆ. ಮನಸ್ಸು ಮುರಿದ ಹುಡುಗ ಅಥವಾ ಹುಡುಗಿ ಒಮ್ಮೆ ಓದಲೇಬೇಕಾದ ಪುಸ್ತಕವಿದು...   

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

7) ಪರ್ಲಿಯ ಪ್ರೇಮಕಥೆ : A sad love story of mermaid Pearly


ಪರ್ಲಿಯ ಪ್ರೇಮಕಥೆ : A sad love story of mermaid Pearly
                 
    ಪರ್ಲಿ ಒಬ್ಬಳು ಸುಂದರವಾದ ಮತ್ಯ್ಸ ಕನ್ಯೆ. ಜೊತೆಗೆ ಆಕೆ ಸಾಗರದ ರಾಣಿ. ಅವಳಿಗೆ ಸಮುದ್ರ ಜೀವನ ಬೇಸರವಾಗಿ ಒಬ್ಬ ಮಾಂತ್ರಿಕನ ಸಹಾಯ ಪಡೆದುಕೊಂಡು ಆಕೆ ಮನುಜೆಯಾಗಿ ಭೂಮಿಗೆ ಬರುತ್ತಾಳೆ. ಆಕೆ ಭೂಮಿಗೆ ಬಂದು ಭೂಮಿಯ ಸೌಂದರ್ಯವನ್ನು ಸವಿಯುವಾಗ ಆಕೆಗೆ ಒಬ್ಬ ಸುಂದರವಾದ ರಾಜಕುಮಾರ ಕಾಣಿಸುತ್ತಾನೆ. ಆಕೆ ಅವನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಆದರೆ ಅವಳ ರಾಜಕುಮಾರ ಈ ಮೊದಲೇ ಬೇರೆಯವಳನ್ನು ಪ್ರೀತಿಸುತ್ತಿರುತ್ತಾನೆ. ಅದಕ್ಕಾಗಿ ಆಕೆ ಅವನ ಪ್ರೇಯಸಿಯನ್ನು ಕೊಂದು ತಾನು ಅವನೊಂದಿಗೆ ಬಾಳಲು ನಿರ್ಧರಿಸುತ್ತಾಳೆ. ಪರ್ಲಿಗೆ ಅವಳು ಇಷ್ಟಪಟ್ಟ ರಾಜಕುಮಾರನ ಪ್ರೀತಿ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರವೇ ಪರ್ಲಿಯ ಪ್ರೇಮಕಥೆ...  

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.


8) ಒಂದು ಬಂಗಾರದ ಗುಲಾಬಿ : ಕಾಲೇಜ ಹುಡುಗಿಯ ಪ್ರೇಮಕಥೆ  Beautiful Love Story of a College girl


ಒಂದು ಬಂಗಾರದ ಗುಲಾಬಿ : ಕಾಲೇಜ ಹುಡುಗಿಯ ಪ್ರೇಮಕಥೆ  Beautiful Love Story of a College girl
               
    ರಶ್ಮಿ ಒಬ್ಬಳು ಭಾರತೀಯ ಕಾಲೇಜು ಹುಡುಗಿ. ಅವಳೇ ಕಾಲೇಜ ಟಾಪರ್. ಅವಳು ಕಾಲೇಜ್ ಟಾಪರ್ ಆಗಿದ್ದರೂ ಸಹ ಆಕೆ ಬಹು ಸುಂದರವಾಗಿದ್ದಳು. ಅವಳಂದಕ್ಕೆ ಜೊಲ್ಲು ಸುರಿಸಿ ನಾಲ್ಕಾರು ಶ್ರೀಮಂತ ಹುಡುಗರು ಅವಳ ಹಿಂದೆ ಸುತ್ತುತ್ತಿರುತ್ತಾರೆ. ಅವರಲ್ಲೊಬ್ಬ ಅವಳಿಗೆ ಬಂಗಾರದ ಗುಲಾಬಿಯನ್ನು ಗಿಫ್ಟಾಗಿ ಕೊಡುತ್ತಾನೆ. ಅವಳನ್ನು ಸೂರ್ಯ ಎಂಬ ಬಡ ಹುಡುಗ ಸಹ ಪ್ರೀತಿಸುತ್ತಿರುತ್ತಾನೆ. ರಶ್ಮಿ ಯಾರ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ ? ಮುಂದೆ ಏನು ಮಾಡುತ್ತಾಳೆ? ಎಂಬೆಲ್ಲ ಪ್ರಶ್ನೆಗಳಿಗೆ  ಉತ್ತರವೇ "ಒಂದು ಬಂಗಾರದ ಗುಲಾಬಿ" ಎಂಬ  ಪ್ರೇಮಕಥೆ...  

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 


9) ರೆಡಲೈಟ್ ಹುಡುಗಿಯ ಲೈಫಪಾಠ - Kannada Romantic Story


ರೆಡಲೈಟ್ ಹುಡುಗಿಯ ಲೈಫಪಾಠ - Kannada Romantic Story
               
   "ರೆಡಲೈಟ್ ಹುಡುಗಿಯ ಲೈಫಪಾಠ" ಇದು ಫಿಕ್ಷನಲ್ ರೋಮ್ಯಾನ್ಸ್ ಮತ್ತು ಸಾಮಾಜಿಕ ಸಂದೇಶವುಳ್ಳ ಸುಂದರ ಕಥೆಯಾಗಿದೆ. ಸಾರಾಯಿ ಕುಡಿದು ತಮ್ಮ ಬೆಡ್ರೂಮ್ ರಹಸ್ಯಗಳನ್ನು ಬೀದಿಗೆ ತಂದು ತಮ್ಮ ಹೆಂಡತಿಯರಿಗೆ ಕಿರುಕುಳ ಕೊಡುವ ಎಲ್ಲ ಗಂಡಂದಿರಿಗೆ ಇದು ಬದುಕು ಬದಲಾಯಿಸುವ ಕಥೆಯಾಗಿದೆ. ಹರಿ ಎಂಬ ದುಷ್ಟನ ಗೆಳೆತನ ಮಾಡಿ ತನ್ನ ಹೆಂಡತಿ ಲಕ್ಷ್ಮಿಗೆ ಕಿರುಕುಳ ಕೊಡುವ ಸಂತೋಷ ಈ ಕಥೆಯ ಮುಖ್ಯ ಪಾತ್ರದಾರಿಯಾಗಿದ್ದಾನೆ. ತನ್ನ ಗೆಳೆಯನ ಹೆಂಡತಿ ಲಕ್ಷ್ಮಿಯ ಮೇಲೆ ಕೆಟ್ಟ ಕಣ್ಣಿಟ್ಟಿರುವ ಹರಿ ಈ ಕಥೆಯ ವಿಲನ್ ಆಗಿದ್ದಾನೆ. ಹರಿ ಲಕ್ಷ್ಮಿಯನ್ನು ಪಡೆಯಲು ಅವಳಿಗೆ ಕಾಟ ಕೊಡುತ್ತಾನೆ. ಸಂತೋಷ ಮತ್ತು ಲಕ್ಷ್ಮಿಯ ಪರ್ಸನಲ್ ಜೀವನದಲ್ಲಿ ಮೂಗು ತೂರಿಸಿ ಅವರಿಬ್ಬರ ನಡುವೆ ತಡೆಗೋಡೆಯಾಗುತ್ತಾನೆ. ಆದರೆ ಓರ್ವ ರೆಡ್ ಲೈಟ್ ಹುಡುಗಿಯಿಂದಾಗಿ ಸಂತೋಷ ಸಂಪೂರ್ಣವಾಗಿ ಬದಲಾಗುತ್ತಾನೆ ಮತ್ತು ಲಕ್ಷ್ಮಿಯೊಡನೆ ಮತ್ತೆ ಒಂದಾಗುತ್ತಾನೆ. ಆ ರೆಡ್ ಲೈಟ್ ಹುಡುಗಿ ಯಾರು? ಅವಳ ಕಥೆಯೇನು? ಲಕ್ಷ್ಮಿ ಹರಿಯ ಸೊಕ್ಕನ್ನು ಹೇಗೆ ಮುರಿಯುತ್ತಾಳೆ? ಎಂಬೆಲ್ಲ ರೋಚಕ ವಿಷಯಗಳನ್ನು ತಿಳಿದುಕೊಳ್ಳಲು ಈ ರೋಮ್ಯಾಂಟಿಕ್ ಕಥೆಯನ್ನೊಮ್ಮೆ ಓದಿ. 

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.


10) ಒಂದು ಭಯಾನಕ ಕನಸು... One Dangerous Dream - Kannada Social Message Story


ಒಂದು ಭಯಾನಕ ಕನಸು... One Dangerous Dream - Kannada Social Message Story

                    ನಾನು ಡಿಗ್ರಿ ಸೆಕೆಂಡ್ ಇಯರನಲ್ಲಿ ಓದುತ್ತಿರುವಾಗ ಒಂದಿನ ಸೆಮಿನಾರ್ ಡೇ ಇತ್ತು. ಆವತ್ತು ನಮ್ಮ ಕ್ಲಾಸ್ ಟಾಪರ್ ರಾಜಿ ಒಳ್ಳೆ ಮದುವೆ ಹೆಣ್ಣಿಗಿಂತಲೂ ಹೆಚ್ಚಾಗಿ ಮೇಕಪ್ ಮಾಡಿಕೊಂಡು ಬಂದಿದ್ದಳು. ಸೆಮಿನಾರ್ ಮಾಡಬೇಕು ಅಂತಾ ಅಷ್ಟೊಂದು ಮೇಕಪ್ ಮಾಡಿಕೊಂಡು ಬಂದಿದ್ದಳೋ ಅಥವಾ ಯಾರನ್ನೋ ಇಂಪ್ರೆಸ್ ಮಾಡಬೇಕು ಅಂತಾ ಬಂದಿದ್ದಳೋ ಅದು ಅವಳಿಗೆ ಗೊತ್ತು. ಅವತ್ತು ಸೆಮಿನಾರ್ ನಡೆಯುತ್ತಿರುವಾಗ ಬೋರಾಗಿ  ನಾನು ಬೆಂಚ್ ಮೇಲೆಯೇ ನಿದ್ರೆಗೆ ಜಾರಿದೆ. ನಿದ್ರೆಯಲ್ಲಿ ನಾನೊಂದು ಭಯಾನಕ ಕನಸನ್ನು ಕಂಡೆ. ಆ ಕನಸನ್ನೇ ಈ ಪುಸ್ತಕದಲ್ಲಿ ಯಥಾವತ್ತಾಗಿ ಬರೆದಿರುವೆ. ಇದು ಎಲ್ಲ ಪುಸ್ತಕಗಳಂತೆ ಪ್ರೇಮ ಕಥೆಯಲ್ಲ. ಇದರಲ್ಲಿ ಒಂದು ಸಾಮಾಜಿಕ ಸಂದೇಶವಿದೆ, ಭವಿಷ್ಯದ ಬಗ್ಗೆ ಕಾಳಜಿಯಿದೆ ಅಷ್ಟೇ. 

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

11) ಬಿಳಿಕಾಗೆ : ಕಾಲೇಜ ಕಿರಾತಕಿಯ ಕಥೆ - Kannada Short Story - Kannada Moral Story


ಬಿಳಿಕಾಗೆ : ಕಾಲೇಜ ಕಿರಾತಕಿಯ ಕಥೆ - Kannada Short Story - Kannada Moral Story

                          ಎಷ್ಟೋ ಜನ ಫೆಮಿನಿಸಮ್ ಪಂಡಿತೆಯರಿಗೆ ಫೆಮಿನಿಸಮ್ ಪದದ ನಿಜವಾದ ಅರ್ಥ ಹಾಗೂ ಉದ್ದೇಶ ಗೊತ್ತಿಲ್ಲ. ಅವರು ತಾವು ಮಾಡುವ ದುಶ್ಚಟಗಳಿಗೆ ಫೆಮಿನಿಸಮನ ಲೇಬಲ್ ಅಂಟಿಸಿ ಜಾರಿಕೊಳ್ಳುತ್ತಾರೆ. ಎಲ್ಲ ತರಹದ ದುಶ್ಚಟಗಳನ್ನು, ಅಶ್ಲೀಲತೆಗಳನ್ನು ಮಾಡಿ ದಾರಿ ತಪ್ಪಿ ಹಾಳಾಗುತ್ತಾರೆ. ಅಂಥವರಲ್ಲಿ ಈ ಕಥೆಯ ನಾಯಕಿ ಅನಿ ಕೂಡ ಒಬ್ಬಳು. ಹುಡುಗಿಯರು ಫೇಕ್ ಫೆಮಿನಿಸಮನಿಂದ ಹೇಗೆ ದಾರಿ ತಪ್ಪುತ್ತಾರೆ ಎಂಬುದಕ್ಕೆ ಈ ಕಥೆಯ ನಾಯಕಿ ಉತ್ತಮ ಉದಾಹರಣೆಯಾಗಿದ್ದಾಳೆ. ಹುಡುಗಿಯರ ಉನ್ನತಿಗಾಗಿ ಫೆಮಿನಿಸಮ್ ಬೇಕು. ಆದರೆ ಅದನ್ನು ದುರುಪಯೋಗಪಡಿಸಿಕೊಂಡರೆ ಅದರಿಂದಲೇ ಅವರು ಅವನತಿಯಾಗುತ್ತಾರೆ ಎಂಬುದನ್ನು ಈ ಕಥೆ ನಿರೂಪಿಸುತ್ತದೆ. 

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

12) ದುರಾಸೆಯ ಹೆಂಡತಿ : ಒಂದು ನೀತಿಕಥೆ - Kannada Moral Story

ದುರಾಸೆಯ ಹೆಂಡತಿ : ಒಂದು ನೀತಿಕಥೆ - Kannada Moral Story

                       ಇನಕಮ್ ಟ್ಯಾಕ್ಸ್ ಡಿಪಾರ್ಟಮೆಂಟಲ್ಲಿ ಕೆಲಸ ಸಿಕ್ಕ ನಂತರ ಪ್ರವೀಣ ಯಾವುದೇ ದುರಾಸೆಗಳಿಲ್ಲದೆ ಸುಮಾ ಎಂಬ ಸುಂದರಿಯನ್ನು ಮದುವೆಯಾದನು. ಆದರೆ ಆಕೆ ದುರಾಸೆಗಳ ರಾಣಿಯಾಗಿದ್ದಳು. ಅವಳಿಗೆ ದೊಡ್ಡ ಮನೆಯಲ್ಲಿ ಐಷಾರಾಮಿ ಜೀವನ ನಡೆಸಬೇಕು, ಎಸಿ ಕಾರಲ್ಲಿ ಸುತ್ತಾಡಬೇಕು, ಮೈತುಂಬ ಬಂಗಾರ, ಬ್ರಾಂಡೆಂಡ್ ಬಟ್ಟೆಗಳನ್ನು ಹಾಕಿಕೊಂಡು ಬೇರೆಯವರ ಹೊಟ್ಟೆಯೂರಿಸಬೇಕು ಎಂಬೆಲ್ಲ ದುರಾಸೆಗಳಿದ್ದವು. ಅವಳ ದುರಾಸೆಗಳನ್ನು ಈಡೇರಿಸುವುದಕ್ಕಾಗಿ ಪ್ರವೀಣ ಭ್ರಷ್ಟನಾಗುತ್ತಾನೆ. ಮಡದಿಯ ಮಂಚಸುಖಕ್ಕಾಗಿ ಲಂಚ ಮುಟ್ಟುತ್ತಾನೆ. ಆದರೆ ಅವನು ಮಾಡಿದ ಕೆಟ್ಟ ಕರ್ಮಕ್ಕೆ ಅವನಿಗೆ ಕೊನೆಗೆ ಕೆಟ್ಟ ಫಲ ಸಿಗುತ್ತದೆ. ತಮ್ಮ ದುರಾಸೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಅಡ್ಡ ದಾರಿ ಹಿಡಿಯುವವರಿಗೆ ಈ ಕಥೆ ಜೀವನ ಪಾಠವಾಗಿದೆ... 

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 


13) ರಾತ್ರಿರಾಣಿಯ ಹಗಲುಗನಸು -  ಒಂದು ರೆಡಲೈಟ್ ಲವಸ್ಟೋರಿ - Love Story of a Red Light Girl in Kannada


ರಾತ್ರಿರಾಣಿಯ ಹಗಲುಗನಸು -  ಒಂದು ರೆಡಲೈಟ್ ಲವಸ್ಟೋರಿ - Love Story of a Red Light Girl in Kannada
         
     "ರಾತ್ರಿರಾಣಿಯ ಹಗಲುಗನಸು" ಇದೊಂದು ರೆಡಲೈಟ್ ಹುಡುಗಿಯ ಲವ್ ಮತ್ತು ಲೈಫ್ ಸ್ಟೋರಿಯಾಗಿದೆ. ಓರ್ವ ಹುಡುಗಿ ಪ್ರೀತಿಯಲ್ಲಿ ಮೋಸ ಹೋದ ನಂತರ ಹೇಗೆ ರೆಡ್ ಲೈಟ್ ಕಾಲೋನಿ ಪಾಲಾಗುತ್ತಾಳೆ, ಅಲ್ಲಿ ಆಕೆ ಯಾವ್ಯಾವ ತೊಂದರೆಗಳನ್ನು ಅನುಭವಿಸುತ್ತಾಳೆ, ಹಣಕ್ಕಾಗಿ ಮೈ ಮಾರಿಕೊಳ್ಳುವ ಪ್ರತಿ ಹುಡುಗಿಯ ಹಿಂದೆ ಒಂದೊಂದು ಕಣ್ಣೀರ ಕಥೆಯಿರುತ್ತೆ, ರಾತ್ರಿರಾಣಿಯರ ಸಮಸ್ಯೆಗಳೇನು ಎಂಬಿತ್ಯಾದಿ ಗಂಭೀರ ವಿಷಯಗಳ ಮೇಲೆ ಈ ಕಥೆ ಬೆಳಕು ಚೆಲ್ಲುತ್ತದೆ. ಈ ಕಥೆಯ ನಾಯಕಿ ಪ್ರೀತಿಯಲ್ಲಿ ಮೋಸಹೋಗಿ ಇಷ್ಟವಿಲ್ಲದಿದ್ದರೂ  ರಾತ್ರಿರಾಣಿಯಾಗುತ್ತಾಳೆ. ಅವಳ ಕನಸುಗಳೆಲ್ಲ ಕತ್ತಲ ಕೊನೆಯಲ್ಲಿ, ಅವಳ ಕಣ್ಣೀರಲ್ಲಿ ಕೊಚ್ಚಿಕೊಂಡು ಹೋಗುತ್ತವೆ. ಆದರೂ ಅವಳ ಬಳಿ ಕೇವಲ ಒಂದು ಕನಸು ಉಳಿದುಕೊಳ್ಳುತ್ತದೆ. ಆ ಕನಸು ಯಾವುದು? ಅದು ನನಸಾಗುತ್ತಾ? ಎಂಬುದನ್ನು ತಿಳಿಯಲು ನೀವು ಈ ಕಥೆಯನ್ನು ಓದಬೇಕು. ಯಾರನ್ನೋ ಪ್ರೀತಿಸಿ ಮನೆ ಬಿಟ್ಟು ಓಡೋಗುವ ಪ್ರತಿ ಹುಡುಗಿ ಓದಲೇಬೇಕಾದ ಕಥೆಯಿದು. ಅಯೋಗ್ಯರನ್ನು ಪ್ರೀತಿಸುವ ಪ್ರತಿ ಹುಡುಗಿಗೆ ಪಾಠವಾಗುವ ಕಥೆಯಿದು... 

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿClick 


14) ಕಣ್ತೆರೆಸಿದ ಹುಡುಗಿ : ಒಂದು ನೀತಿ ಕಥೆ - Kannada Moral Life Changing Story


ಕಣ್ತೆರೆಸಿದ ಹುಡುಗಿ : ಒಂದು ನೀತಿ ಕಥೆ - Kannada Moral Life Changing Story
                 
       ಹ್ರದಯ ಸೆಕೆಂಡ ಪಿಯುಸಿ ಮುಗಿದ ನಂತರ ತನ್ನ ಊರಲ್ಲಿ ಒಳ್ಳೇ ಡಿಗ್ರಿ ಕಾಲೇಜಿದ್ದರೂ ಹಠ ಮಾಡಿ ಒಂದು ಪಟ್ಟಣದ ಕಾಲೇಜು ಸೇರಿದನು. ಇದರ ಹಿಂದೆ ಕಲಿಯುವ ಉದ್ದೇಶವಿರಲಿಲ್ಲ. ಇದರ ಹಿಂದೆ ಹಳ್ಳಿಯಲ್ಲಿ ಸಿಗದ ಹುಡುಗಿಯರನ್ನು ಪಟ್ಟಣದ ಕಾಲೇಜಿನಲ್ಲಿ ಪಟಾಯಿಸುವುದಾಗಿತ್ತು. ಸಿನಿಮಾಗಳಲ್ಲಿ ತೋರಿಸಿದಂತೆ ಸೀಟಿ ಕಾಲೇಜಿನಲ್ಲಿ ಹುಡುಗಿಯರು ಮಾಡರ್ನಾಗಿ ಬರುತ್ತಾರೆ, ಸುಲಭವಾಗಿ ಸರಸಕ್ಕೆಲ್ಲ ಸಿಗುತ್ತಾರೆ ಎಂದುಕೊಂಡಿದ್ದನು. ಆದರೆ ಅವನಿಗೆ ಸೀಟಿ ಕಾಲೇಜ ಸೇರಿದ ಮೇಲೆ ಎಲ್ಲೆಡೆಗೆ ಹುಡುಗಿಯರು ಸಭ್ಯವಾಗಿಯೇ ಇರುತ್ತಾರೆ, ಸಿನಿಮಾದ ಸನ್ನಿವೇಶಗಳು ಸುಳ್ಳು ಎಂದು ಗೊತ್ತಾಯಿತು. ಅವನಿಗೆ  ಕಾಲೇಜ ಹುಡುಗಿಯರು ಬೀಳದಿದ್ದಾಗ ಆತ ತನ್ನ ರೂಮಿನ ಪಕ್ಕದಲ್ಲಿದ್ದ ಹೊಸದಾಗಿ ಮದುವೆಯಾಗಿದ್ದ ದಾರಿ ತಪ್ಪಿದ ಹೆಂಡತಿಯತ್ರ ಸೆ**ಗಾಗಿ ಹಿಂದೆ ಬೀಳುತ್ತಾಳೆ. ಆಗವಳು ತನ್ನ ವರ್ತನೆಯ ಮೂಲಕ ಅವನ ಕಣ್ಣನ್ನು ತೆರೆಸಿ ಅವನನ್ನು ಸರಿದಾರಿಗೆ ತರುತ್ತಾಳೆ. ಇದೊಂದು ನೀತಿಕಥೆಯಾಗಿದ್ದು, ಕಾಲೇಜು ದಿನಗಳಲ್ಲಿ ಓದುವುದನ್ನು ಬಿಟ್ಟು ಪ್ರೇಮಕಾಮಗಳನ್ನು ಮಾಡಲು ಬಯಸುವವರಿಗೆ ಈ ಕಥೆ ಒಂದು ಪಾಠವಾಗಿದೆ.

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

15) ಪರರ ಹೆಂಡತಿ ಪರಮ ಸುಂದರಿ  - Romantic Life Story of Cute Couples in Kannada


ಪರರ ಹೆಂಡತಿ ಪರಮ ಸುಂದರಿ  - Romantic Life Story of Cute Couples in Kannada
         
      ಪರರ ಹೆಂಡತಿ ಪರಮ ಸುಂದರಿ" ಇದು ಎರಡು ಮುದ್ದಾದ ದಂಪತಿಗಳ ನಡುವೆ ನಡೆಯುವ ಒಂದು ರೋಮ್ಯಾಂಟಿಕ್ ಕಥೆಯಾಗಿದೆ. ಬಹಳಷ್ಟು ಜನರಿಗೆ ಪರರ ಹೆಂಡತಿ ಪರಮ ಸುಂದರಿಯಾಗಿ ಕಾಣುತ್ತಾಳೆ, ಪರರ ಗಂಡ ಪರಮಾಪ್ತನಂತೆ ಕಾಣುತ್ತಾನೆ. ಈ ವಿಷಯ ಈ ಕಥೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ. ಒಂದೇ ಅಪಾರ್ಟಮೆಂಟಲ್ಲಿ ಎದುರು ಬದುರು ವಾಸವಾಗಿದ್ದ ಎರಡು ವಿವಾಹಿತ ದಂಪತಿಗಳು ಪರ ಹೆಂಡತಿ ಮತ್ತು ಪರ ಗಂಡನ ಮೇಲೆ ಆಕರ್ಷಿತರಾಗುತ್ತಾರೆ. ದಾರಿ ತಪ್ಪುವ ಹಂತಕ್ಕೆ ತಲುಪುತ್ತಾರೆ. ಮುಂದೇನಾಗುತ್ತೆ ಎಂಬುದನ್ನು ಕಥೆಯಲ್ಲಿ ಓದಿ... 

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

16) ಒಂಟಿ ಹೆಣ್ಣಿನ ದಿಟ್ಟ ಹೆಜ್ಜೆಗಳು : ಒಂದು ಡೈವೋರ್ಸಿನ ಕಥೆ - One Divorce Story in Kannada


ಒಂಟಿ ಹೆಣ್ಣಿನ ದಿಟ್ಟ ಹೆಜ್ಜೆಗಳು : ಒಂದು ಡೈವೋರ್ಸಿನ ಕಥೆ - One Divorce Story in Kannada

                        "ಒಂಟಿ ಹೆಣ್ಣಿನ ದಿಟ್ಟ ಹೆಜ್ಜೆಗಳು" ಇದೊಂದು ಡೈವೋರ್ಸ್ ಆದ ಒಬ್ಬ ಹುಡುಗಿಯ ಜೀವನ ಕಥೆಯಾಗಿದೆ. ಡೈವೋರ್ಸ್ ಆದ ಹೆಣ್ಣು ಮಗಳು ಏನೆಲ್ಲಾ ತೊಂದರೆಗೆ ಒಳಗಾಗುತ್ತಾಳೆ? ನೀಲಿ ಕಣ್ಣುಗಳುಳ್ಳ ಸಮಾಜ ಅವಳನ್ನು ಹೇಗೆ ನೋಡುತ್ತದೆ ಎಂಬಿತ್ಯಾದಿ ವಿಷಯಗಳ ಮೇಲೆ ಈ ಕಥೆ ಬೆಳಕು ಚೆಲ್ಲುತ್ತದೆ. ಡೈವೋರ್ಸ್ ಆದ ಸೋದರಿಯರಿಗೆ ಸ್ಫೂರ್ತಿ ತುಂಬುವ ಮೋಟಿವೇಶನಲ್ ಕಥೆ ಇದಾಗಿದೆ... 

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

17) ದಾರಿ ತಪ್ಪಿದ ಪ್ರೇಮಿಗಳು : ಒಂದು ನೀತಿ ಕಥೆ - Kannada Moral Story


ದಾರಿ ತಪ್ಪಿದ ಪ್ರೇಮಿಗಳು : ಒಂದು ನೀತಿ ಕಥೆ - Kannada Moral Story

              "ದಾರಿ ತಪ್ಪಿದ ಪ್ರೇಮಿಗಳು" ಇದು ಎಲ್ಲ ಕಾಲೇಜ ವಿದ್ಯಾರ್ಥಿಗಳು, ಅವರ ಪಾಲಕರು, ಲೆಕ್ಚರರಗಳು ತಪ್ಪದೇ ಓದಲೇಬೇಕಾದ ಕಥೆಯಾಗಿದೆ. ಒಂದಿನ ತಮ್ಮ ಮಗಳು ರಾಣಿ ಬಸ್ ಮಿಸ್ಸಾಗಿ ಲೇಟಾಗಿ ಬಂದಿದ್ದಕ್ಕಾಗಿ ಅವರಮ್ಮ ಅವಳಿಗೆ ಮುಂದೆ ಏನಾದ್ರು ಸಮಸ್ಯೆಯಾದರೆ ಮನೆಗೆ ವಿಷಯ ತಿಳಿಸುವುದಕ್ಕಾಗಿ ಮೊಬೈಲ್ ಕೊಡಿಸಿದರು. ಆದರೆ ಅವಳು ಓದು ಬಿಟ್ಟು ಫೇಸ್ಬುಕ್ಕಲ್ಲಿ ಸೆಲ್ಫಿಗಳನ್ನು ಹಾಕುತ್ತಾ ಕುಳಿತಳು. ಅವಳ ಫೋಟೋಗಳಿಗೆ ಕಾಮೆಂಟ್ ಮಾಡಿ ಅವಳ ಕ್ಲಾಸ್ಮೇಟ್ ರವಿ ಅವಳೊಂದಿಗೆ ಸ್ನೇಹ ಬೆಳೆಸಿದನು. ರಾಣಿ ಒಂದಿನ ಕ್ಲಾಸಲ್ಲಿ ಅವನೊಂದಿಗೆ ಚಾಟಿಂಗ್ ಮಾಡುವಾಗ ಸುಮಾ ಮಿಸ್ ಕೈಗೆ ಸಿಕ್ಕಿ ಬಿದ್ದಳು. ಅವರು ಅವಳ ಮೊಬೈಲನ್ನು ಜಪ್ತಿ ಮಾಡಿದರು. ಅವರಿಗೆ ಅವಳ ಮೊಬೈಲನ್ನು ತೆಗೆದು ನೋಡಿದಾಗ ಅವಳು ದಾರಿ ತಪ್ಪಿದ್ದು ತಿಳಿಯಿತು. ಜೊತೆಗೆ ಯಾರ ಕ್ಲಾಸಿಗೂ ಸರಿಯಾಗಿ ಬರದ ಹುಡುಗರು ನನ್ನ ಕ್ಲಾಸಿಗೆ ಯಾಕೆ ತಪ್ಪದೆ ಬರುತ್ತಾರೆ? ಬಂದರೂ ಯಾಕೆ ಕಮ್ಮಿ ಅಂಕ ತೆಗೆದುಕೊಳ್ಳುತ್ತಾರೆ? ಯಾಕೆ ನನ್ನ ಶರೀರದ ಖಾಸಗಿ ಅಂಗಗಳನ್ನು ಗುರಾಯಿಸುತ್ತಾರೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಬಿಗಡಾಯಿಸಿದ ಈ ವಿದ್ಯಾರ್ಥಿಗಳನ್ನು ಸುಮಾ ಮಿಸ್ ಹೇಗೆ ಬದಲಾಯಿಸುತ್ತಾರೆ ಎಂಬುದು ಈ ಕಥೆಯ ಇಂಟರೆಸ್ಟಿಂಗ್ ಭಾಗವಾಗಿದೆ... 

    ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

Blogger ನಿಂದ ಸಾಮರ್ಥ್ಯಹೊಂದಿದೆ.