
ಕನ್ನಡದಲ್ಲಿ ಕಥೆಗಳು : Stories in Kannada
1) ಪ್ರೇಮದ ಕಣ್ಣಲ್ಲಿ ಕಾಮದ ಹುಣ್ಣು ಗಂಡಹೆಂಡತಿಯ ಕಥೆ - Husband Wife Romantic Love Story in Kannada
Disclaimer
This story doesn't belongs to anyone in any way. This is fully imaginary story written for commercial web series purpose. All images used in this story are for illustration purpose only.
ಕರೋನಾ ಮಹಾಮಾರಿ ಬಂದು ಭಾರತದ ಅರ್ಥ ವ್ಯವಸ್ಥೆಯನ್ನು ನುಂಗಿ ನೀರು ಕುಡಿಯುವುದಲ್ಲದೇ ಜನರ ಮಾನಸಿಕ ಆರೋಗ್ಯವನ್ನು ಸಹ ನಾಶ ಮಾಡಿದೆ. ಲಾಕಡೌನನಿಂದ ಸುಮಾರು 75 ದಿನ ಮನೆಲಿದ್ದು ಜನ ಡಿಪ್ರೆಶನಕ್ಕೆ ತುತ್ತಾಗಿದ್ದಾರೆ. ನಿಮಗೆ ಇದನ್ನು ಓದಲು ಬೋರಾಗುತ್ತಿದೆ ತಾನೇ? ಇದೇ ರೀತಿ ಲಾಕಡೌನನಿಂದ ಕೆಲಸಕ್ಕೆ ಹೋಗಲಾಗದೇ ಮನೆಲಿದ್ದು ಸಿದ್ದನಿಗೂ ಬೋರಾಗುತ್ತಿತ್ತು. ಆತ ಚಾನೆಲಗಳ ಮೇಲೆ ಚಾನೆಲಗಳನ್ನು ಬದಲಾಯಿಸುತ್ತಿದ್ದ. ಆದರೆ ಅವನಿಗೆ ಮಜಾ ಕೊಡುವ ಒಂದು ವಿಷಯವೂ ಯಾವುದೇ ಚಾನೆಲನಲ್ಲಿ ಸಿಗದಾಗಿತ್ತು. ಎಲ್ಲ ನ್ಯೂಜ ಚಾನೆಲಗಳಲ್ಲಿ ಅದೇ ಕರೋನಾ ಬಗ್ಗೆ ಕೂಯ್ತಾ ಇದ್ರು. ಆಗ ಆತ ಯಾವುದೋ ಚಾನೆಲನಲ್ಲಿ ಸಿನಿಮಾ ನೋಡಲು ಸ್ಟಾರ್ಟ ಮಾಡಿದ. ಅಷ್ಟರಲ್ಲಿ ಅದರಲ್ಲಿ ಅವನ ತಲೆ ಕೆಡಿಸುವ ಸೀನ ಬಂತು. ಆ ಸೀನನಲ್ಲಿ ಸಿನಿಮಾದ ಹೀರೋ ಹೀರೋಯಿನಳಿಗೆ ಸೀರೆ ಉಡಿಸುತ್ತಿದ್ದನು. ಸಿದ್ದ ಅದನ್ನು ಜೊಲ್ಲು ಸುರಿಸಿಕೊಂಡು ನೋಡುತ್ತಿದ್ದನು. ಪೋಲಿ ಪ್ರೇಕ್ಷಕರನ್ನು ಉದ್ರೇಕಿಸುವುದಕ್ಕಾಗಿ ಸಾವಿರಾರು ಸಿನಿಮಾಗಳಲ್ಲಿ ಇಂಥದ್ದೊಂದು ಸೀನನ್ನು ಕಂಪಲ್ಸರಿಯಾಗಿ ಮಾಡಿದ್ದಾರೆ. ಎಲ್ಲ ಟಾಪ ನಟರು ತಮ್ಮ ಸಿನಿಮಾಗಳಲ್ಲಿ ಹೀರೋಯಿನಗಳಿಗೆ ಸೀರೆಯುಡಿಸುವ, ಸೊಂಟ ಸವರುವ, ನಾಭಿಗೆ ಮುತ್ತಿಡುವ ಸೀನಗಳನ್ನು ಮಾಡಿದ್ದಾರೆ. ಅದು ಕಮರ್ಷಿಯಲ್ ಉದ್ದೇಶಕ್ಕಾಗಿ ಮಾಡಿದ ಡಮ್ಮಿ ಸಿನಿಮಾವಾದರೂ ಅದನ್ನು ನೋಡಿ ಸಿದ್ದನಂಥವರ ಮನಸ್ಸು ಕಾಮುಕವಾಗುತ್ತೆ ಎಂಬುದು ಸಿನಿಮಾದವರಿಗೆ ತಿಳಿದರೂ ಅವರು ಅದನ್ನು ಮಾಡದೇ ಬಿಡಲ್ಲ. ಏಕೆಂದರೆ ಅದು ಒಂದು ಕಲೆ. ಅಲ್ಲದೇ ಅದು ಅವರ ಕಾಯಕ.

ಹೀರೋ ಹೀರೋಯಿನಗೆ ಸೀರೆಯುಡಿಸುವ ಸೀನನ್ನು ಸಿದ್ದ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ. ಅಷ್ಟರಲ್ಲಿ ಅವನ ಹೆಂಡತಿ ಬಂದು ಅವನ ಕೈಯಿಂದ ರಿಮೋಟನ್ನು ಕಿತ್ತುಕೊಂಡು ಹಿಂದಿ ಸೀರಿಯಲನ್ನು ಹಚ್ಚಿದಳು. ಬರೀ ಸಿನಿಮಾಗಳಲ್ಲಿ ಮಾತ್ರ ಸೀರೆ ಪುರಾಣಯಿದೆ ಎಂದುಕೊಂಡಿದ್ದ ಸಿದ್ದನಿಗೆ ಸೀರಿಯಲ್ ಸುಂದರಿಯರ ಸೀರೆ ಸ್ಟೈಲ, ಸಿಂಗಾರ ಎಲ್ಲ ನೋಡಿ ಮತ್ತಷ್ಟು ತಲೆ ಕೆಟ್ಟಿತು. ಆತ ನೀಲಿ ಚಿತ್ರಗಳನ್ನು ನೋಡಿದಾಗಲೂ ಸಹ ಇಷ್ಟೊಂದು ಡಿಸ್ಟರ್ಬ ಆಗಿರಲಿಲ್ಲ. ಆದರೆ ಸೀರೆಯಲ್ಲಿ ಸುಂದರಿಯರನ್ನು ನೋಡಿ ಡಿಸ್ಟರ್ಬಾದನು. ಸುಮ್ಮನೆ ಹೇಳುತ್ತಾರೆಯೇ ಕವಿ ಮಹಾಶಯರು "ಸೀರೆಗಿಂತ ಸೆ**ಕ್ಸಿ ಡ್ರೆಸ್ಸಿಲ್ಲ..." ಅಂತ. ಸಿದ್ದನ ಮನಸ್ಸು ಸಂಪೂರ್ಣವಾಗಿ ಕದಡಿತು. ಆತ ತನ್ನ ರೂಮಿಗೆ ಹೋಗಿ ಬಾಗಿಲಾಕಿಕೊಂಡು ಮೊಬೈಲನಲ್ಲಿ "Indian heroine saree videos..." ಎಂದು ಸರ್ಚ ಮಾಡಿದನು. ಸಾಫ್ಟವೇರ್ ಇಂಜಿನಿಯರಗೆ ಇದನ್ನ ಹೇಳಿ ಕೊಡುವ ಅವಶ್ಯಕತೆ ಏನಿರಲಿಲ್ಲ. ಗೂಗಲ ಸರ್ಚ ರಿಜಲ್ಟ್ಸಗಳಲ್ಲಿ ಸಾಲುಸಾಲು ಸೀರೆ ವಿಡಿಯೋಗಳು ಬಂದು ಬಿದ್ದವು. ಅವುಗಳ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ ಸಿದ್ದ ಯುಟ್ಯೂಬಗೆ ಹೋದನು. ಅವನ ಎಲ್ಲ ಭಾಷೆಯ ಫೆವರೇಟ ಹೀರೋಗಳೆಲ್ಲರು ಹೀರೋಯಿನಗಳಿಗೆ ಸೀರೆಯುಡಿಸುವ ಸೀನಗಳನ್ನು ಮಾಡಿದ್ದರು. ಅವುಗಳನ್ನೆಲ್ಲ ನೋಡಿ ಸಿದ್ದನ ಮನಸ್ಸು ತಲೆ ಎರಡು ಕದಡಿದವು.

ಸತತ ಮೂರು ಗಂಟೆ ಆತ ಇಂಥಹ ವಿಡಿಯೋಗಳನ್ನು ನೋಡಿದನು. ಎಲ್ಲ ವಿಡಿಯೋಗಳಲ್ಲಿ ಒಂದೇ ಕಥೆಯಿದ್ದರೂ ಆತ ಸ್ವಲ್ಪವೂ ಬೋರಾಗದೆ ಅವುಗಳನ್ನು ನೋಡಿದನು. ಎಲ್ಲ ವಿಡಿಯೋಗಳಲ್ಲಿ ಸೀರೆ ಉಡೋಕೆ ಬರದ ಹೀರೋಯಿನಗೆ ಹೀರೋ ಸೀರೆ ಉಡಿಸೋದು, ನಂತರ ಅವಳ ಸೊಂಟ ಸವರೋದು, ನಾಭಿಗೆ ಮುತ್ತಿಡೋದು ಇವೇ ಸೀನಗಳು ಬೇರೆನಿಲ್ಲ. ಇವುಗಳನ್ನೆಲ್ಲ ನೋಡಿ ಸಿದ್ದ ಪೋಲಿಯಾದ. ಆತನ ಕಣ್ಣಿನ ಹಸಿವು ಇನ್ನು ನೀಗಿರಲಿಲ್ಲ. ಅವನ ಪ್ರೇಮದ ಕಣ್ಣಲ್ಲಿ ಅವನಿಗೆ ತಿಳಿಯದಂತೆಯೇ ಕಾಮದ ಹುಣ್ಣು ಹುಟ್ಟಿಕೊಂಡಿತು. ಅಷ್ಟರಲ್ಲಿ ಇಂಟರನೆಟ್ ಪ್ಯಾಕ್ ಖಾಲಿಯಾಯಿತು. ಆತ ಯಾವತ್ತೂ ಫುಲ್ HDಯಲ್ಲಿ ವಿಡಿಯೋಗಳನ್ನು ನೋಡಿದವನೇ ಅಲ್ಲ. ಇಂಟರನೆಟ್ ಪ್ಯಾಕ್ ಮುಗಿದ ಮೇಲೆ ಸಿದ್ದ ಸಿನಿಮಾ ಸುಂದರಿಯರ ಮೋಹದಿಂದ ಹೊರಬಂದು ತನ್ನ ಅಸಲಿ ಹೀರೋಯಿನಳ ಹಿಂದೆ ಬಿದ್ದನು.

ಸಿದ್ದನ ಮಡದಿ ಪೂಜಾ ಸಹ ಸಾಫ್ಟವೇರ್ ಇಂಜಿನಿಯರ್ ಆಗಿದ್ದಳು. ಇಬ್ಬರೂ ಲ್ಯಾಪ್‌ಟಾಪಲ್ಲೇ ಎರಡು ವರ್ಷ ಸಂಸಾರ ಮಾಡಿದ್ದರು. ವಾರವೆಲ್ಲ ಕಂಪನಿ ಕೆಲಸ, ವಿಕೆಂಡ ರಜೆ ಸಿಕ್ಕಾಗ ದಿನವೆಲ್ಲ ನಿದ್ದೆ ಬಿಟ್ಟರೆ ಅವರು ಮಾಡಿದ್ದೇನು ಇರಲಿಲ್ಲ. ಕಾಟಾಚಾರಕ್ಕೆ ಮಾಡಿದರೆ ಯಾವ ಕೆಲಸದಲ್ಲೂ ಫಲ ಸಿಗಲ್ಲ ಎಂಬುದನ್ನು ಅವರಿಬ್ಬರಿಗೆ ಮಕ್ಕಳಾಗದಿರುವುದನ್ನು ನೋಡಿ ಅಕ್ಕಪಕ್ಕದ ಮನೆಯವರು ತಿಳಿದುಕೊಂಡಿದ್ದರು. ಆದರೆ ಅವರಿಗೆ ಅದು ಗೊತ್ತಾಗಿರಲಿಲ್ಲ. ಸಿದ್ದ ಸೋಮಾರಿ ಸಿದ್ದನಾದರೆ ಪೂಜಾ ಸಿಡುಕುವ ಸಿಡಿಲಾಗಿದ್ದಳು. ಆಕೆ ಮೊಂಡು ಮೂಗಿನ ತುದಿಯಲ್ಲೇ ಕೋಪವಿಟ್ಟುಕೊಂಡು ಸಿದ್ದನಿಗೆ ತಾಳ್ಮೆಯ ಪಾಠವನ್ನು ಕಲಿಸುತ್ತಿದ್ದಳು. ಆಕೆ ವರ್ಣಿಸುವಷ್ಟೇನು ಸುಂದರಿಯಾಗಿರಲಿಲ್ಲ. ಆದರೆ ಸಿದ್ದನ ಮೂತಿಗೆ ಅವಳು ವಿಶ್ವಸುಂದರಿಗಿಂತಲೂ ಒಂದು ಕೈ ಮೇಲಾಗಿದ್ದಳು. ಈಗ ಸಿದ್ದ ಅವಳನ್ನೇ ನೋಡುತ್ತಾ ಕುಂತನು.

ನಾನು ಸಿನಿಮಾಗಳಲ್ಲಿ ನೋಡಿದ್ದು ಸುಳ್ಳು, ಅದು ಬರೀ ನಾಟಕ, ನಟನೆ ಎಂಬುದನ್ನು ಸಿದ್ಧನ ಮನಸ್ಸು ನಂಬದಾಗಿತ್ತು. ಆತನ ಮನಸ್ಸು ಅವನಿಗೆ "ನಿನ್ನ ಫೆವರೇಟ ಹೀರೋಗಳೆಲ್ಲ ಸೀರೆ ಉಡಿಸಿದ್ದಾರೆಂದರೆ ನೀನು ಸಹ ನಿನ್ನ ಹೀರೋಯಿನಗೆ ಸೀರೆ ಉಡಿಸಲೇಬೇಕು" ಎಂದೇಳುತ್ತಿತ್ತು. ಅದಕ್ಕಾಗಿ ಆತ ಪೂಜಾಳನ್ನು ಬೇರೆ ರೀತಿಯಲ್ಲಿ ನೋಡುತ್ತಿದ್ದನು. ಆದರೆ ಆಕೆ ಸೀರೆ ಧರಿಸಿರಲಿಲ್ಲ. ಅದರ ಬದಲಾಗಿ ನೈಟಿ ಧರಿಸಿ ಕಂಫರ್ಟೆಬಲಾಗಿದ್ದಳು. ಸಿದ್ದನಿಗೆ ಅವಳನ್ನು ಆ ಡ್ರೆಸಲ್ಲಿ ನೋಡಿ ನಿರಾಸೆಯಾಗತೊಡಗಿತು. ಆತನಿಗೆ ಅರ್ಜೆಂಟಾಗಿ ಅವಳನ್ನು ಸೀರೆಯಲ್ಲಿ ನೋಡಬೇಕಿತ್ತು. ಆದರೆ ಅದನ್ನು ಅವಳಿಗೆ ಹೇಳುವುದೇಗೆ? ಹೇಳಿದರೆ ಮುಖಕ್ಕೆ ಕ್ಯಾಕರಿಸಿ ಉಗಿಯುತ್ತಾಳೆ ಎಂಬುದು ಗೊತ್ತಿತ್ತು ಅವನಿಗೆ. ಅದಕ್ಕಾಗಿ ಆತ ಸುಮ್ಮನಾದನು. ಸಂಜೆಯಾಯಿತು. ಆಕೆ ಟಿವಿ ಆಫ್ ಮಾಡಿ ಮನೆ ಕಸಗೂಡಿಸಿ ಅವನಿಗೆ ಟೀ ಮಾಡಿಕೊಟ್ಟು ರಾತ್ರಿ ಅಡುಗೆ ತಯಾರಿಯಲ್ಲಿ ತೊಡಗಿದಳು. ಆದರಾತ ಅಡುಗೆ ಮನೆಗೆ ನುಗ್ಗಿ ಅವಳನ್ನು ಸುಮ್ಮನೆ ರೇಗಿಸಲು ಪ್ರಾರಂಭಿಸಿದನು. ಅವಳಿಗೆ ಆತನ ಕಳ್ಳನೋಟ ಎಲ್ಲವೂ ಅರ್ಥವಾಗಿತ್ತು. ಆದರೂ ಆಕೆ ಏನನ್ನೂ ಗಮನಿಸದಂತೆ ಸುಮ್ಮನಿದ್ದಳು.

ರಾತ್ರಿ ಊಟ ಮಾಡಿ ಸಿದ್ದ ಬೆಡರೂಮ ಸೇರಿದನು. ಪೂಜಾ ಪಾತ್ರೆ ಉಜ್ಜಿಟ್ಟು ಬೆಡರೂಮಗೆ ಕಾಲಿಟ್ಟಳು. ಇಲ್ಲಿ ತನಕ ಸಿದ್ದ ಎಚ್ಚರವಾಗಿರುವುದನ್ನು ನೋಡಿ ಆಕೆ ಆಶ್ಚರ್ಯಚಕಿತಳಾದಳು. ದಿನಾ ಆತ ಅವಳು ಬೆಡರೂಮಿಗೆ ಬರುವುದಕ್ಕಿಂತ ಮುಂಚೆಯೇ ಗೊರಕೆ ಹೊಡೆಯುತ್ತಿದ್ದನು. ಅವನನ್ನು ನೋಡಿ ಆಕೆ ಅವನನ್ನು ರೇಗಿಸಿದಳು.
ಪೂಜಾ : ಏನಿವತ್ತು ಎಚ್ಚರವಾಗಿದ್ದಿರಿ, ನೈಟ ಡ್ಯುಟಿ ಮೇಲೆ ಹೋಗಬೇಕಾ?
ಸಿದ್ದ : ನೈಟ ಶಿಪ್ಟ ಮೇಲೆ ಹೋಗಲು ನಾನೇನು ಕಬ್ಬಿಣದ ಫ್ಯಾಕ್ಟರಿಲಿ ಕೆಲ್ಸ ಮಾಡ್ತಿದಿನಾ? ನಾನು ಸಾಫ್ಟವೇರ್ ಇಂಜಿನಿಯರ್ ಎಂಬುದು ನೆನಪಿರಲಿ...
ಪೂಜಾ : ಕೋಪ ಮೂಗಿನ ತುದಿಯಲ್ಲೇ ಇರುತ್ತಲ್ಲ ನಿಮಗೆ ?
(ಸಿದ್ದ ಎಲ್ಲ ನಿನ್ನಿಂದಲೇ ಬಂದಿದ್ದು ಎನ್ನುತ್ತಾ ಪೂಜಾಳನ್ನು ಅಪ್ಪಿಕೊಂಡು ಹಾಸಿಗೆಯ ಮೇಲೆ ಬಿದ್ದನು.)
ಪೂಜಾ : ಬಿಡ್ರಿ ಏನಿದು?
ಸಿದ್ದ : ಯಾಕ ಬಿಡಬೇಕು? ನನ್ನ ಹೆಂಡ್ತಿನಾ ನಾನ್ ತಬಕೊಂಡ್ರೆ ಏನಂತೆ?
ಪೂಜಾ : ಇಷ್ಟ ದಿನ ಎಲ್ಲೊಗಿದ್ರಿ? ನಾನು ನಿಮಗೆ ಇವತ್ತ ನೆನಪಾದ್ನಾ?
ಸಿದ್ದ : ಇಷ್ಟ ದಿನ ಕಂಪನಿ ಕೆಲಸ ಮಾಡಿ ಸುಸ್ತಾಗಿದೀನಿ ಅಂತಾನೆ ಲಾಕಡೌನ ಮಾಡಿಸಿ ನನಗೆ ರಜೆ ಕೊಟ್ಟಿದಾರೆ. ಯಾಕ ಗೊತ್ತಾ?
ಪೂಜಾ : ಯಾಕ ಕೊಟ್ಟಿದ್ದಾರೆ ಅಂದ್ರೆ ಜನ ಕರೋನಾದಿಂದ ಸಾಯಬಾರ್ದು ಅಂತಾ, ಅಷ್ಟು ಗೊತ್ತಾಗಲ್ವಾ ನನಗೆ?
ಸಿದ್ದ : ಅದಕ್ಕಲ್ವೇ, ಸರಸವಾಡೋಕೆ ರಜೆ ಕೊಟ್ಟಿದ್ದಾರೆ...
ಪೂಜಾ : ನಿಮ್ ಗಂಡಸರ ತಲೆಯಲ್ಲಿ ಯಾವಾಗಲೂ ಅದೆ ಇರುತ್ತೆ ಬಿಡಿ....

ಸಿದ್ದ ಹೌದಾ ಅನ್ನುತ್ತಾ ಅವಳನ್ನು ಮತ್ತಷ್ಟು ಬಲವಾಗಿ ಅಪ್ಪಿಕೊಂಡನು. ಅವಳ ತುಟಿಗಳನ್ನು ಕಚ್ಚಿದನು. ಅವಳು ಸಹ ಉದ್ರೇಕಗೊಂಡಳು. ಕಂಪನಿ ಕೆಲಸದ ಒತ್ತಡದಲ್ಲಿ ಅವರಿಬ್ಬರಿಗೆ ಯಾವಾಗ ಹಗಲಾಗುತ್ತೆ ಯಾವಾಗ ರಾತ್ರಿಯಾಗುತ್ತೆ ಎಂಬುದು ಗೊತ್ತಾಗುತ್ತಿರಲಿಲ್ಲ. ಸಂಡೇ ಮಾತ್ರ ಅವರಿಬ್ಬರು ಅವರ ಮುಖಗಳನ್ನು ನೇರವಾಗಿ ನೋಡುತ್ತಿದ್ದರು. ಆದರೆ ಅವತ್ತು ಸಹ ಅವರು ಮಧ್ಯಾಹ್ನದವರೆಗೆ ಮಲಗಿ ಲೇಟಾಗೆದ್ದು ರೆಡಿಯಾಗಿ ಮಿಕ್ಕ ಅರ್ಧ ದಿನವನ್ನು ಶಾಪಿಂಗ್ ಸಿನಿಮಾ ಅಂತಾ ಕಳೆಯುತ್ತಿದ್ದರು. ಮನೆಗೆ ಬರುತ್ತಿದ್ದಂತೆ ಸುಸ್ತಾಗಿ ಬೀಳುತ್ತಿದ್ದರು. ಆದರೆ ಈಗ ಅವರಿಗೆ ಲಾಕಡೌನ ನೆಪದಲ್ಲಿ ಲವಡೋಸ ಸಿಕ್ಕಿತ್ತು. ಅವರಿಬ್ಬರು ಸೌಂದರ್ಯ ಸಮರಕ್ಕೆ ಸಜ್ಜಾಗುತ್ತಿದ್ದರು. ಆದರೆ ಸಿದ್ದ ಅಷ್ಟರಲ್ಲಿ ಆಸಕ್ತಿ ಕಳೆದುಕೊಂಡನು. ದಿನವೆಲ್ಲ ಸೀರೆ ಸುಂದರಿಯರನ್ನು ನೋಡಿ ಉದ್ರೇಕಗೊಂಡಿದ್ದ ಸಿದ್ದ ಪೂಜಾಳನ್ನು ನೈಟಿಯಲ್ಲಿ ನೋಡಿ ನಿರಾಸಕ್ತನಾದನು. ಅವನಿಗೆ ಅವಳ ಮೇಲೆ ಮೋಹ ಮೂಡಲಿಲ್ಲ. ಆತ ಅವಳನ್ನು ಮೆಲ್ಲನೆ ದೂರ ತಳ್ಳಿದನು. ಆದರೆ ಆಕೆ ನಾಚಿಕೆ ಬಿಟ್ಟು ಬೆತ್ತಲಾಗಲು ತಯಾರಾಗಿದ್ದಳು. ಆಕೆ ಅವನ ಹತ್ತಿರ ಹೋದರೂ ಆತ ನಿದ್ರೆ ಬಂದವರಂತೆ ನಟಿಸಿ ನಿದ್ರಾವಶನಾದನು.

ತನ್ನನ್ನು ಕೆರಳಿಸಿ ಮನದಲ್ಲಿ ಆಸೆಯನ್ನು ಹುಟ್ಟಿಸಿ ನಂತರ ನಿರಾಸೆಗೊಳಿಸಿ ಸಿದ್ದ ಮಲಗಿದ್ದನ್ನು ನೋಡಿ ಪೂಜಾ ಅವನ ಮೇಲೆ ಕೋಪಗೊಂಡಳು. ಮದುವೆಯಾದ ಎರಡು ವರ್ಷದಿಂದಲೂ ಅವನದ್ದು ಇದೇ ಕತೆಯಾಗಿತ್ತು. ಆಕೆ ಅವನ ಈ ತರಹದ ಅರೆ ಸಂನ್ಯಾಸಿ ವರ್ತನೆಯಿಂದ ರೋಸಿ ಹೋಗಿದ್ದಳು. ಮದುವೆಯಾದರೂ ತನ್ನ ದೇಹದ ಹಸಿವನ್ನು ಈಡೇರಿಸಿಕೊಳ್ಳಲು ಆಕೆ ಒದ್ದಾಡುತ್ತಿದ್ದಳು. ಅವಳು ಸಹ ನೀಲಿ ಚಿತ್ರಗಳ ಆಸರೆ ಪಡೆದುಕೊಂಡು ದಿನ ತಳ್ಳುತ್ತಿದ್ದಳು. ಆವಾಗಾವಾಗ ಸಿದ್ದ ಈ ರೀತಿ ಕೆರಳಿಸಿ ಬಿಟ್ಟಾಗ ಹರೆಯದ ಯೌವ್ವನದ ಆಸೆಗಳನ್ನು ಅದುಮಿಟ್ಟುಕೊಳ್ಳಲಾಗದೆ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದಳು. ಅವಳಿಗೆ ಈ ತರಹದ ದೈಹಿಕ ಸುಖ ಬೇಡವಾಗಿತ್ತು. ಆದರೆ ಸಿದ್ದನ ಸೋಮಾರಿತನದಿಂದಾಗಿ ಅದು ಅವಳ ಅನಿವಾರ್ಯತೆಯಾಗಿತ್ತು. ಈಗಲೂ ಆಕೆ ನಿರಾಶಳಾಗಿ ನೀಲಿ ಚಿತ್ರಗಳ ಆಸರೆ ಪಡೆದುಕೊಂಡಳು. ಸಿದ್ದ ಪಕ್ಕದಲ್ಲೇ ಮಲಗಿದ್ದನು. ಆಕೆ ಕಿವಿಯಲ್ಲಿ ಈಯರ ಫೋನಗಳನ್ನು ಹಾಕಿಕೊಂಡು ಮಂಚದ ಮೇಲೆ ಡಬ್ಬು ಬಿದ್ದುಕೊಂಡು ಫುಲ್ ವ್ಯಾಲುಮನಲ್ಲಿ ನೀಲಿ ಚಿತ್ರಗಳನ್ನು ನೋಡುತ್ತಿದ್ದಳು. ಮಧ್ಯರಾತ್ರಿಯಾದರೂ ಆಕೆ ನೀಲಿ ಚಿತ್ರಗಳನ್ನು ನೋಡುತ್ತಿದ್ದಳು. ಅಷ್ಟರಲ್ಲಿ ಅವಳ ಮೊಬೈಲನ ಬ್ಯಾಟರಿ ಮುಗಿಯಿತು. ಆಗ ಆಕೆ ಅದನ್ನು ಚಾರ್ಜಗೆ ಹಾಕಿ ಸಿದ್ದನ ಮೊಬೈಲನ್ನು ಮೈಗೆತ್ತಿಕೊಂಡಳು. ಅದರಲ್ಲಿ ನೀಲಿ ಚಿತ್ರಗಳನ್ನು ನೋಡುವುದಕ್ಕೆ ಮುಂಚೆ ಸ್ವಲ್ಪ ಯುಟ್ಯೂಬ ಮೇಲೆ ಕಣ್ಣಾಡಿಸೋಣಾ ಅಂತಾ ಯುಟ್ಯೂಬ ಓಪನ ಮಾಡಿದಳು. ಆದರೆ ಟೈಮಲೈನ ಫೀಡನಲ್ಲಿ ಬರೀ ಸೀರೆ ಉಡುವ, ಸೆಳೆಯುವ ಸೀನಗಳುಳ್ಳ ವಿಡಿಯೋಗಳೇ ಸಗೆಸ್ಟಾದವು. ಅವಳು ಸಹ ಸಾಫ್ಟವೇರ್ ಇಂಜಿನಿಯರ್ ಆಗಿರುವುದರಿಂದ ಅವಳಿಗೆ ಯಾಕೆ ಈ ರೀತಿಯ ವಿಡಿಯೋಗಳು ಟೈಮಲೈನಗೆ ಬರ್ತಿವೆ ಎಂಬುದು ಗೊತ್ತಾಯಿತು.

ಆಕೆ ಅವನ ಬ್ರೌಸಿಂಗ್ ಹಿಸ್ಟರಿ ನೋಡಿದಳು. ಸಿದ್ದ ಸಾರಿ ಸೆ**ಕ್ಸ ವಿಡಿಯೋ, ಹಿರೋಯಿನ ಸಾರಿ ಎಂಬಿತ್ಯಾದಿ ಪದಗಳನ್ನು ಸರ್ಚ ಮಾಡಿ ಇಂಥ ನೂರಾರು ಅಶ್ಲೀಲ ವಿಡಿಯೋಗಳನ್ನು ನೋಡಿದ್ದನು. ಅದನ್ನು ನೋಡಿ ಅವಳಿಗೆ ಅವನ ತಲೆಯಲ್ಲಿ ಏನು ಓಡುತ್ತಿದೆ ಎಂಬುದು ಅರ್ಥವಾಯಿತು. ಆಕೆ ಮದುವೆಯಾಗಿ ಅವನೊಂದಿಗೆ ಬಂದಾಗ ಆಕೆ ಯಾವಾಗಲೂ ಸೀರೆಯನ್ನೇ ಉಡುತ್ತಿದ್ದಳು. ಆದರೆ ಆತ ಯಾವಾಗಲೂ ಅವಳ ಹಿಂದೇನೆ ಬೀಳುತ್ತಿದ್ದನು. ಅಲ್ಲದೇ ಆಕೆ ಆಫೀಸಿಗೆ ಲಕ್ಷಣವಾಗಿ ಸೀರೆಯುಟ್ಟುಕೊಂಡು ಹೋದಾಗ ಅವಳ ಕಲೀಗಗಳು ಅವಳಿಗೆ "ನೈಸ ಸಾರಿ, ಯು ಆರ್ ಲೂಕ್ಕಿಂಗ್ ಸೋ ಸೆ**ಕ್ಸಿ ಇನ ಸಾರಿ..." ಎಂದೆಲ್ಲ ಕಾಂಪ್ಲಿಮೆಂಟಗಳನ್ನು ಕೊಡುತ್ತಿದ್ದರು. ಕೆಲವೊಂದಿಷ್ಟು ಮದುವೆಯಾಗದ ತರುಣರು ಅವಳನ್ನು ದುರುಗುಟ್ಟುಕೊಂಡು ನೋಡುತ್ತಿದ್ದರು. ಸೀರೆಯಲ್ಲಿ ಅವಳ ದೇಹದ ಓರೆಕೋರೆಗಳನ್ನು ನೋಡಿ ಜೊಲ್ಲು ಸುರಿಸುತ್ತಿದ್ದರು. ಇವುಗಳಿಂದ ಬೇಸತ್ತು ಆಕೆ ಸೀರೆ ಬಿಟ್ಟು ಚೂಡಿದಾರ ಹಾಕಿಕೊಂಡು ಆಫೀಸಿಗೆ ಹೋಗಲು ಪ್ರಾರಂಭಿಸಿದಳು. ಮನೆಯಲ್ಲಿಯೂ ಹೆಚ್ಚಾಗಿ ಅದನ್ನೇ ಧರಿಸುತ್ತಿದ್ದಳು ಇಲ್ಲ ನೈಟಿ ಧರಿಸುತ್ತಿದ್ದಳು. ಆವಾಗನಿಂದಲೇ ಸಿದ್ದ ಅವಳಲ್ಲಿ ಆಸಕ್ತಿ ಕಳೆದುಕೊಂಡು ನೀಲಿ ಚಿತ್ರಗಳಿಗೆ, ಮಸಾಲಾ ಸಿನಿಮಾಗಳಿಗೆ ಅಡಿಕ್ಟಾಗಿದ್ದನು. ಅವಳು ಸೀರೆಯುಟ್ಟು ಒಂದು ವರ್ಷ ಮೇಲಾಗಿತ್ತು. ಅವಳು ಸೀರೆಯನ್ನು ದ್ವೇಷಿಸುತ್ತಿದ್ದಳು. ಆದರೆ ತನ್ನ ಗಂಡ ಸೀರೆ ಸುಂದರಿಯರ ಚಿತ್ರಗಳನ್ನು ಹುಡುಕಿ ನೋಡುತ್ತಿದ್ದಾನೆ ಎಂಬುದು ಅವನ ಬ್ರೌಸಿಂಗ್ ಹಿಸ್ಟರಿಯಿಂದ ಗೊತ್ತಾದಾಗ ನಾಳೆ ಅವಳು ಸೀರೆಯುಡಲು ನಿರ್ಧರಿಸಿ ಮಲಗಿಕೊಂಡಳು.

ಮರುದಿನ ಸಿದ್ದ ಪೂಜಾಳಿಗಿಂತಲೂ ಬೇಗನೆದ್ದನು. ಅವಳಿನ್ನೂ ಎದ್ದಿಲ್ಲವೆಂದು ಅವಳಿಗೆ ಮನಸ್ಸಲ್ಲೇ ಬೈಯುತ್ತಾ ಮನೆಯಾಚೆ ಕಸಗೂಡಿಸುತ್ತಿದ್ದನು. ಆತ ಕಸಗೂಡಿಸಿ ಸ್ನಾನಕ್ಕೆ ಹೋದರೂ ಅವಳಿನ್ನು ಮಲಗಿದ್ದಳು. ಆತ ಸ್ನಾನ ಮಾಡಿ ಬರುವಷ್ಟರಲ್ಲಿ ಪೂಜಾಳಿಗೆ ಎಚ್ಚರವಾಯಿತು. ಆದರೆ ಅವಳ ಕಣ್ಣಲ್ಲಿನ್ನು ನಿದ್ರೆಯಿತ್ತು. ಆದರೂ ಅವಳು ಮನಸ್ಸಿಲ್ಲದ ಮನಸ್ಸಿನಿಂದ ಎದ್ದು ರೆಡಿಯಾಗಲು ಪ್ರಾರಂಭಿಸಿದಳು. ಸಿದ್ದ ರೆಡಿಯಾಗಿ ಟಿವಿ ಮುಂದೆ ಕುಳಿತು ನ್ಯೂಜ ನೋಡುತ್ತಾ ಇವಳು ಯಾವಾಗ ಟಿಫಿನ ಮಾಡಿ ಕೊಡ್ತಾಳೊ ಅಂತಾ ಗೊಣಗುತ್ತಿದ್ದನು. ಆಕೆ ರೆಡಿಯಾಗಿ ದೇವರಿಗೆ ದೀಪ ಹಚ್ಚಿ ಟಿಫಿನ ಮಾಡಿಕೊಂಡು ಬರುವಷ್ಟರಲ್ಲಿ ಸಿದ್ದನ ಕೋಪ ನೆತ್ತಿಗೇರಿತ್ತು. ಆತ ಅವಳಿಗೆ ಚೆನ್ನಾಗಿ ಬೈದು ತರಾಟೆಗೆ ತೆಗೆದುಕೊಳ್ಳಲು ತಯಾರಾಗುತ್ತಿದ್ದನು. ಅಷ್ಟರಲ್ಲಿ ಪೂಜಾ ಅವನ ಕೈಗೆ ಟಿಫಿನ ಅಂತಾ ಉಪ್ಪಿಟ್ಟನ್ನು ತಂದು ಕೊಟ್ಟು ಬೇಗನೆ ಅಡುಗೆ ಮನೆಗೆ ಓಡಿ ಹೋದಳು. ಅವಳನ್ನು ಸೀರೆಯಲ್ಲಿ ನೋಡಿ ಸಿದ್ದನ ಕೋಪವೆಲ್ಲ ಒಂದೇ ಕ್ಷಣಕ್ಕೆ ಕರಗಿ ಹೋಯಿತು. ಆತನ ಮನಸ್ಸು ಮತ್ತೆ ಕದಡಿತು. ಬಹಳ ದಿನಗಳ ನಂತರ ಅವಳನ್ನು ಆತ ಸೀರೆಯಲ್ಲಿ ನೋಡಿದ್ದನು. ಈಗ ಅವನ ಮನಸ್ಸು ಹತೋಟಿ ಮೀರಿ ಹೊರಟಿತ್ತು. ಆತ ಉಪ್ಪಿಟ್ಟನ್ನು ತಿನ್ನಲು ಪ್ರಾರಂಭಿಸುತ್ತಿದ್ದಂತೆಯೇ ಬೇಕಂತಲೆ ಖಾರದ ಮೆಣಸಿನಕಾಯಿ ತಿಂದವರಂತೆ ಕೆಮ್ಮಿದನು. ಅವಳು ಕೂಡಲೇ ಅವನಿಗೆ ನೀರನ್ನು ತಂದುಕೊಟ್ಟು ಮತ್ತೆ ಅಡುಗೆ ಮನೆಗೆ ಓಡಿದಳು. ತನ್ನನ್ನು ನೋಡಿ ಸಿದ್ದನಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಅವಳು ಒಳಗೊಳಗೆ ಖುಷಿಪಡುತ್ತಿದ್ದಳು. ಆತ ಬೇಗನೆ ಉಪ್ಪಿಟ್ಟನ್ನು ತಿಂದು ಪ್ಲೇಟಯಿಡುವ ನೆಪದಲ್ಲಿ ಅಡುಗೆ ಮನೆಗೆ ನುಗ್ಗಿದನು.

ಮೊದಲ ಸಲ ಆತ ಈ ತರ ಪ್ಲೇಟ ಎತ್ತಿಕೊಂಡು ಅಡುಗೆ ಮನೆಗೆ ಬಂದಿರುವುದನ್ನು ನೋಡಿ ಪೂಜಾಳಿಗೆ ಎಲ್ಲವೂ ಅರ್ಥವಾಯಿತು. ಮುಂದೆ ಆತ ನನ್ನ ಹೊಗಳಿ ನನ್ನ ಮೈಮೇಲೆ ಬೀಳುತ್ತಾನೆ ಎಂದವಳು ಅಂದುಕೊಳ್ಳುತ್ತಿದ್ದಳು. ಅಷ್ಟರಲ್ಲಿ ಆತ ಅವಳಿಗೆ ನೈಸ್ ಡ್ರೆಸ್ ಅಂತಾ ಕಾಂಪ್ಲಿಮೆಂಟ ಕೊಟ್ಟು ಅವಳ ಹತ್ತಿರ ಹೋಗಲು ಮುಂದಾದನು. ಅಷ್ಟರಲ್ಲಿ ಆಕೆ ಅವನಿಗೆ ಬಿಸಿಬಿಸಿಯಾದ ಟೀ ಕೊಟ್ಟು ದೂರ ಸರಿಸಿದಳು. ಬಟ್ಟೆ ತೊಳೆಯಬೇಕೆಂದು ಅಲ್ಲಿಂದ ಜಾರಿಕೊಂಡು ಬಾಥರೂಮಿಗೆ ಹೋದಳು. ಸಿದ್ದ ಸಹ ನೆಪ ಮಾಡಿಕೊಂಡು ಬಾಥರೂಮಿಗೆ ಹೋಗಿ ಅವಳನ್ನೇ ನೋಡುತ್ತಾ ನಿಂತನು. ಆಕೆ ಅವನನ್ನು ಎಚ್ಚರಿಸಿ ಏನಾದರೂ ಕೆಲಸ ಮಾಡಲು ಹೇಳಿ ಕಳುಹಿಸಿದಳು. ನಂತರ ಅವನ ಪೇಚಾಟವನ್ನು ನೆನಪಿಸಿಕೊಂಡು ನಗಲು ಪ್ರಾರಂಭಿಸಿದಳು. ಸಿದ್ದ ನಿರಾಸೆಯಿಂದ ಟಿವಿ ನೋಡುತ್ತಾ ಕುಳಿತ್ತಿದ್ದನು. ಆಕೆ ಬಟ್ಟೆ ಒಗೆದು ಸಿದ್ದನನ್ನು ರೇಗಿಸಲು ಹಾಲನಲ್ಲಿ ಕೆಲಸ ಮಾಡುತ್ತಿರುವಂತೆ ನಾಟಕ ಮಾಡಿ ಓಡಾಡಿ ಹೋದಳು. ಸಿದ್ದನಿಗೆ ಈಗ ಸಿನಿಮಾ ಹಾಗೂ ಸೀರಿಯಲ್ ಸುಂದರಿಯರಿಗಿಂತ ಅವನ ಮಡದಿ ಪೂಜಾಳೇ ವಿಶ್ವಸುಂದರಿಯಂತೆ ಕಾಣುತ್ತಿದ್ದಳು. ಅವನಿಗೆ ತಡೆದುಕೊಳ್ಳಲಾಗಲಿಲ್ಲ. ಆತ ಟಿವಿ ಆಫ್ ಮಾಡಿ ಬೆಡರೂಮಿಗೆ ಹೋದನು.

ಬೆಡರೂಮಲ್ಲಿ ಪೂಜಾ ಬಟ್ಟೆಗಳನ್ನು ಮಡಿಕೆ ಹಾಕಿ ತೆಗೆದಿಡುತ್ತಿದ್ದಳು. ಸಿದ್ದ ಅವಳನ್ನು ಹಿಂದಿನಿಂದ ತಬ್ಬಿಕೊಂಡನು. ಅವಳು ಬಿಡಿಸಿಕೊಂಡು "ಬಿಡ್ರಿ ಏನ ನೀವು ಬೆಳಬೆಳಗ್ಗೆ" ಅಂತಾ ದೂರ ಹೋಗಿ ನಿಂತಳು. ಆದರೆ ಸಿದ್ದ ಸೋಲದೆ ಮತ್ತೆ ಅವಳನ್ನು ತಬ್ಬಿಕೊಂಡನು. ಆದರೆ ಈಗಲೂ ಆಕೆ ಅವನಿಂದ ದೂರ ಹೋಗಿ ನಿಂತಳು. ಅವಳಿಗೆ ನಿನ್ನೆ ಆತ ಮಾಡಿದ ನಿರಾಸೆಗೆ ಅವನನ್ನು ಸರಿಯಾಗಿ ಆಟವಾಡಿಸುವ ಆಸೆಯಿತ್ತು. ಅದಕ್ಕಾಗಿ ಆಕೆ ಹಾಗೆ ಮಾಡಿದಳು. ಅವಳ ಕಣ್ಣಲ್ಲಿನ ಹುಸಿ ಕೋಪವನ್ನು ನಿಜವೆಂದು ನಂಬಿ ಸಿದ್ದ ಹೆದರಿ ಹೊರ ನಡೆದನು.

ಸಿದ್ಧ ಪೂಜಾಳಿಗೆ ಬಹಳಷ್ಟು ಹೆದರುತ್ತಿದ್ದನು. ಆತ ಹೆದರಿ ಹೋಗುತ್ತಿರುವುದನ್ನು ನೋಡಿ ಪೂಜಾಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಅನಿಸಿತು. ಆಕೆ ತಾನಾಗಿಯೇ ಸೋತು ಅವನನ್ನು ಕೈಹಿಡಿದು ತಡೆದಳು. ಆದರೆ ಅವನಿಗೆ ಆಕೆ ಶರಣಾಗಿ ಬರುತ್ತಿದ್ದಾಳೆ ಎಂಬುದು ತಿಳಿಯಲಿಲ್ಲ. ಆತ ಹೆದರಿ ಹಿಂಜರಿದನು. ಆಕೆ ಅದನ್ನು ಗಮನಿಸಿ ತಾನಾಗಿಯೇ ಸೆರಗು ಜಾರಿಸಿ ಅವನ ಮುಂದೆ ಶರಣಾಗಿ ನಿಂತಳು. ಅವಳ ಏರು ಯೌವ್ವನದ ಎದೆಯುಬ್ಬುಗಳನ್ನು ನೋಡಿ ಸಿದ್ದನಲ್ಲಿದ್ದ ರಸಿಕ ಸಿಡಿದೆದ್ದನು. ಅವಳಲ್ಲಿ ಈಗ ಹರೆಯದ ಹುಚ್ಚು ಆಸೆಗಳು ಉಕ್ಕಿ ಬರುತ್ತಿದ್ದವು. ಸಿದ್ದ ಅವಳನ್ನೇ ನೋಡುತ್ತಾ ಹಾಗೇಯೇ ನಿಂತನು. ನಂತರ ಕೆರಳಿ ಅವಳನ್ನು ಅಪ್ಪಿಕೊಂಡು ಮಂಚದ ಮೇಲೆ ಬಿದ್ದನು. ಅವಳ ಸೀರೆಯನ್ನು ಸೆಳೆದು ಅವಳ ಮೇಲೆ ಮುತ್ತಿನ ಮಳೆ ಸುರಿಸಿದನು. ಮುಟ್ಟುತ್ತಿದ್ದಂತೆ ಸೋಪಿನಂತೆ ಕೈ ಜಾರಿ ಹೋಗುವ ಅವಳ ಸಪೂರ ಸೊಂಟವನ್ನು ಸಾಕಷ್ಟು ಸಲ ಸವರಿ ಖುಷಿಪಟ್ಟನು. ನೇರವಾಗಿ ಅವಳ ನಾಭಿಗೆ ಚುಂಚಿಸಿದನು. ಅವಳ ಉಸಿರಾಟದ ವೇಗ ಹೆಚ್ಚಾಯಿತು. ಉಸಿರಾಟದ ಆವೇಗಕ್ಕೆ ಅವಳೆದೆ ಪರ್ವತದಲ್ಲಾಗುತ್ತಿರುವ ಏರಿಳಿತಗಳನ್ನು ನೋಡಿ ಸಿದ್ದ ಉದ್ರೇಕಗೊಂಡನು. ಅವಳ ಅರೆಬೆತ್ತಲೆ ಸೌಂದರ್ಯವನ್ನು ನೋಡಿ ತಾನು ಬೆತ್ತಲಾಗುವುದರ ಜೊತೆಗೆ ಅವಳನ್ನು ಬೆತ್ತಲೆ ಮಾಡಿ ಬೆಡಶೀಟಿನೊಳಗೆ ಮಾಯವಾದನು. ಅವರಿಬ್ಬರು ಸೌಂದರ್ಯ ಸಮರವಾಡಿ ಸೋತು ಸಂಜೆ ತನಕ ಮಲಗಿಕೊಂಡರು. ಸಂಜೆ ಎದ್ದು ಸ್ನಾನ ಮಾಡಿ ರೆಡಿಯಾದರು. ಸಿದ್ದ ಟಿವಿ ಮುಂದೆ ಕುಂತರೆ, ಪೂಜಾ ಅಡುಗೆ ಮನೆ ಸೇರಿ ರಾತ್ರಿ ಊಟದ ತಯಾರಿಯಲ್ಲಿ ತೊಡಗಿದಳು.

ಪೂಜಾಳನ್ನು ಸೀರೆಯಲ್ಲಿ ನೋಡುವುದಷ್ಟೇ ಅಲ್ಲ ಅವಳಿಗೆ ಸೀರೆ ಉಡಿಸಿ ನಂತರ ಸೆಳೆದು ಸುಖಿಸಬೇಕು ಎಂಬಾಸೆ ಸಿದ್ದನ ತಲೆಯಲ್ಲಿ ಸುಳಿದಾಡುತ್ತಿತ್ತು. ಸೀರೆಯಲ್ಲಿ ನೋಡಿದಾಯ್ತು, ಸೀರೆ ಸೆಳೆದು ಸುಖಿಸಿದಾಯ್ತು. ಆದರೆ ಅವಳಿಗೆ ಸೀರೆಯುಡಿಸಬೇಕು ಎಂಬಾಸೆ ಅಪೂರ್ಣವಾಗಿತ್ತು. ಆ ಆಸೆ ಕಡೆಗೆ ಸಿದ್ದನ ಮನ ಹಂಬಲಿಸುತ್ತಿತ್ತು. ಅದಕ್ಕಾಗಿ ಆತ ಮತ್ತಷ್ಟು ಪೋಲಿಯಾದನು. ಮತ್ತೆ 17 ದಿನಗಳ ಕಾಲ ಲಾಕಡೌನ ವಿಸ್ತರಣೆಯಾಗಿದೆ ಎಂಬ ಸುದ್ದಿ ಟಿವಿಯಲ್ಲಿ ಬರುತ್ತಿರುವುದನ್ನು ನೋಡಿ ಆತ ಖುಷಿಪಟ್ಟನು. ಬೇರೆ ಗಂಡ ಹೆಂಡತಿಯರು ಲಾಕಡೌನದಲ್ಲಿ ಮನೆಲಿದ್ದು ಜಗಳಾಡಿ ಕಿತ್ತಾಡಿ ಡೈವೋರ್ಸ ತೆಗೆದುಕೊಳ್ಳುವ ಮಟ್ಟಿಗೆ ತಲುಪಿದ್ದರು. ಆದರೆ ಸಿದ್ದ ಹಾಗೂ ಪೂಜಾ ಮತ್ತಷ್ಟು ಹತ್ತಿರಕ್ಕೆ ಬಂದರು. ಹಗಲು ರಾತ್ರಿಯೆನ್ನದೆ ಸರಸ, ಪೋಲಿಯಾಟ, ಮುನಿಸು, ಮತ್ತೆ ಒಂದಾಗು, ಮುದ್ದಾಡು, ಗುದ್ದಾಡುವುದರಲ್ಲಿ ಬಿಜಿಯಾಗಿ ಬೇರ್ಪಡಿಸಲಾಗದಷ್ಟು ಅನೋನ್ಯ ದಂಪತಿಗಳಾದರು. ಅವರಲ್ಲಿದ್ದ ಪ್ರೀತಿ ನಂಬಿಕೆ ವಿಶ್ವಾಸ ಎಲ್ಲವೂ ನೂರು ಪಟ್ಟು ಹೆಚ್ಚಾದವು. ಅವರಿಬ್ಬರ ನಡುವೆ ಈಗ ಯಾವುದೇ ಮುಚ್ಚುಮರೆ ಇರಲಿಲ್ಲ. ಆದರೆ ರಾತ್ರಿ ಮಂಚದ ಮೇಲೆ ಒಂದಾಗಲು ಇನ್ನು ಬಹಳಷ್ಟು ಮುಜುಗುರವಿತ್ತು. ಹತ್ತಾರು ಸಲ ಮಿಲನವಾದರೂ ಅವರಿಗೆ ಪ್ರತಿ ರಾತ್ರಿ ಮೊದಲ ರಾತ್ರಿಯಂತೆ ಭಾಸವಾಗುತ್ತಿತ್ತು. ಹತ್ತಾರು ಸಾರಿ ಸಂಪೂರ್ಣವಾಗಿ ಬೆತ್ತಲಾದರೂ ಪೂಜಾಳಲ್ಲಿ ಲಜ್ಜೆಯೆಂಬುದು ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಅವಳು ಪ್ರತಿಸಲವೂ ನಾಚಿಕೊಳ್ಳುತ್ತಿದ್ದಳು. ಅವಳು ನಾಚಿಕೊಂಡಾಗಲೇ ಅವನಾಸೆಗಳು ನೂರ್ಮಡಿಯಾಗುತ್ತಿದ್ದವು.

ಒಂದೆರಡು ದಿನಗಳು ಕಳೆದವು. ಅಷ್ಟರಲ್ಲಿ ಸಿದ್ದ ಹಗಲು ರಾತ್ರಿ ಯುಟ್ಯೂಬಲ್ಲಿ ವಿಡಿಯೋಗಳನ್ನು ನೋಡಿ ಸೀರೆ ಉಡಿಸುವುದು ಹೇಗೆ ಎಂಬುದನ್ನು ಕಲಿತನು. ಕಲಿತಿರುವುದನ್ನು ಪೂಜಾಳ ಮೇಲೆ ಪ್ರಯೋಗಿಸಿ ತನ್ನ ಪೋಲಿಯಾಸೆಯನ್ನು ಈಡೇರಿಸಿಕೊಳ್ಳಲು ಆತ ಕಾಯುತ್ತಿದ್ದನು. ಮರುದಿನ ಸಿದ್ದ ತಡವಾಗಿ ಎಚ್ಚರಗೊಂಡನು. ಪೂಜಾ ಸಹ ತಡವಾಗಿ ಎಚ್ಚರಗೊಂಡಳು. ಆಕೆ ಸ್ನಾನಕ್ಕೆ ಟವೆಲ್ ತೆಗೆದುಕೊಂಡು ಬಾಥರೂಮಿಗೆ ಹೋಗುತ್ತಿರುವುದನ್ನು ಸಿದ್ದ ಹಾಸಿಗೆಯಲ್ಲಿ ಬಿದ್ದುಕೊಂಡೆ ಒಂದೇ ಕಣ್ತೆರೆದು ನೋಡಿದ್ದನು. ಅದಕ್ಕಾಗಿ ಆತ ಹಾಗೆಯೇ ಹಾಸಿಗೆಯಲ್ಲಿ ಬಿದ್ದುಕೊಂಡನು.

ಪೂಜಾ ಸ್ನಾನ ಮಾಡಿಕೊಂಡು ಟವೆಲ್ ಸುತ್ತಿಕೊಂಡು ಬೆಡರೂಮಿಗೆ ಬಂದಳು. ಬಂದು ಸಿದ್ದನ ಕಡೆಗೆ ನೋಡಿದಳು. ಆತ ಘಾಡವಾದ ನಿದ್ರೆಯಲ್ಲಿರುವಂತೆ ನಾಟಕವಾಡುತ್ತಿದ್ದನು. ಅದನ್ನು ನಿಜವೆಂದು ನಂಬಿ ಅವಳು ಟವೆಲ್ ಬಿಜ್ಜಾಕಿ ಒಳ ಉಡುಪುಗಳನ್ನು ಧರಿಸಿ ಸೀರೆಯುಡಲು ಪ್ರಾರಂಭಿಸಿದಳು. ಅಷ್ಟರಲ್ಲಿ ಸಿದ್ದ ಎಚ್ಚರವಾಗಿ ಅವಳನ್ನು ಹಿಂದೆನಿಂದ ಹೋಗಿ ತಬ್ಬಿಕೊಂಡನು. ಅವಳು ತಬ್ಬಿಬ್ಬಾಗಿ "ಬಿಡ್ರಿ ಇದೇನಿದು ಬೆಳಬೆಳಗ್ಗೆ..." ಅಂತಾ ರೇಗಿದಳು. ಅವಳ ಕೋಪದಲ್ಲಿ ಪ್ರೀತಿಯಿರುವುದು ಖಾತ್ರಿಯಾದ ನಂತರ ಸಿದ್ದ ಅವಳ ಕೈಯಿಂದ ಸೀರೆಯನ್ನು ಕಿತ್ತುಕೊಂಡನು. ಆಕೆ ಕೊಡ್ರಿ ಅಂದಾಗ ಆತ "ನಾನು ಉಡಿಸುವೆ ನೀನು ಸುಮ್ಮನೆ ನಿಲ್ಲು" ಎಂದಾಗ ಆಕೆ ನಾಚಿ ನೀರಾಗಿ ಸುಮ್ಮನೆ ನಿಂತಳು. ಅವಳು ತನ್ನ ಕೈಗಳನ್ನು ತನ್ನ ಸ್ನನಗಳಿಗೆ ಅಡ್ಡಲಾಗಿ ಹಿಡಿದುಕೊಂಡು ಶಿಲಾಬಾಲಿಕೆಯಂತೆ ನಿಂತುಕೊಂಡಳು. ಸಿದ್ದ ಅರ್ಧ ಗಂಟೆ ಹರಸಾಹಸ ಮಾಡಿ ಅವಳಿಗೆ ಸೀರೆಯುಡಿಸಿದನು. ಕೊನೆಗೆ ಆತುರದಲ್ಲಿ ಸೇಫ್ಟಿ ಪೀನ್ನನ್ನು ಸಿಲುಕಿಸುವಾಗ ಅವಳ ಭುಜಕ್ಕೆ ಪೀನ ಚುಚ್ಚಿತು. ಆದರೆ ಅವಳಿಗಿಂತ ಜಾಸ್ತಿ ಇವನಿಗೇನೆ ನೋವಾಯಿತು. ಸಿದ್ದ ತನಗೆ ತೋಚಿದಂತೆ ಅವಳಿಗೆ ಸಿಂಗಾರ ಮಾಡಿಕೊಳ್ಳಲು ಸಹಾಯ ಮಾಡಿದನು. ನಂತರ ಅವಳ ಹಣೆಗೆ ಬಿಂದಿಯನ್ನು ಇಟ್ಟನು. ಈಗವಳು ಅಕ್ಷರಶಃ ದೇವತೆಯಂತೆ ಕಾಣುತ್ತಿದ್ದಳು. ಸಿದ್ದ ತನ್ನ ಮೊಬೈಲನಿಂದ ಅವಳ ಫೋಟೋಗಳನ್ನು ತೆಗೆದನು. ನಂತರ ಸ್ನಾನ ಮಾಡಿ ಬಂದು ಹೊಸ ಬಟ್ಟೆಗಳನ್ನು ಧರಿಸಿ ಅವಳೊಂದಿಗೆ ಹತ್ತಾರು ಸೆಲ್ಫಿಗಳನ್ನು ತೆಗೆದುಕೊಂಡನು. ನಂತರ ಅವರಿಬ್ಬರು ತಮ್ಮತಮ್ಮ ಕೆಲಸಗಳಲ್ಲಿ ಬಿಜಿಯಾದರು.

ಇವತ್ತಿನ ದಿನ ಹೇಗೆ ಕಳೆಯಿತು ಎಂಬುದು ಅವರಿಬ್ಬರಿಗೆ ತಿಳಿಯಲೇ ಇಲ್ಲ. ರಾತ್ರಿ ಊಟವಾದ ಮೇಲೆ ಅವರಿಬ್ಬರು ಬೆಡರೂಮ ಸೇರಿದರು. ಪೂಜಾ ಸಿದ್ದನ ಎದೆ ಮೇಲೆ ತಲೆಯಿಟ್ಟು ಮಲಗಿ ಪ್ರೀತಿ ಮಾತುಗಳನ್ನು ಹೇಳುತ್ತಿದ್ದಳು. ಸಿದ್ದ ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಅವಳ ತಲೆ ಸವರುತ್ತಾ ಅವಳ ಮಾತುಗಳನ್ನು ಕೇಳುತ್ತಿದ್ದನು. ನಡುನಡುವೆ ಅವಳ ಸೊಂಟ ಸವರುತ್ತಿದ್ದನು. ಆಗ ಅವಳು "ಬರ್ತಾಬರ್ತಾ ನೀವು ಬಹಳಷ್ಟು ಪೋಲಿಯಾಗ್ತಿದಿರಿ..." ಎಂದೇಳಿ ಅವನನ್ನು ನಿಯಂತ್ರಿಸುತ್ತಿದ್ದಳು. ಮಾತಾಡುತ್ತಲೇ ಅವಳು ಅವನೆದೆ ಮೇಲೆ ನಿದ್ರೆಗೆ ಜಾರಿದಳು. ಆದ್ರೆ ಸಿದ್ದ ಏನನ್ನೋ ಆಳವಾಗಿ ಯೋಚಿಸುತ್ತಿದ್ದನು. ಅವನಿಗೆ ಕೊನೆಗೂ "ಹೆಣ್ಣನ್ನು ಬೆತ್ತಲೆ ನೋಡುವುದರಲ್ಲಿ ಮಜವಿಲ್ಲ. ಅವಳು ಸಂಪೂರ್ಣವಾಗಿ ಬಟ್ಟೆ ತೊಟ್ಟಾಗಲೇ ಅವಳ ಮೇಲೆ ಆಸೆ, ಪ್ರೀತಿ, ಗೌರವ ಹೆಚ್ಚಾಗೋದು. ಬೆತ್ತಲೆ ನಿಂತ ಹೆಣ್ಣಲ್ಲಿ ನನಗ್ಯಾವ ಸೌಂದರ್ಯವೂ ಕಾಣಿಸಲ್ಲ. ಮೈತುಂಬ ಸೀರೆಯುಟ್ಟ ಹೆಣ್ಣು ನನ್ನ ಕಣ್ಣಿಗೆ ಸಾಕ್ಷಾತ್ ಸೌಂದರ್ಯದ ದೇವತೆಯಂತೆ ಕಾಣುತ್ತಾಳೆ..." ಎಂಬುದು ಅವನ ಅರಿವಿಗೆ ಇವತ್ತು ಬೆಳಿಗ್ಗೆ ಬಂದಿತ್ತು. ಅದಕ್ಕಾಗಿ ಆತ ತನ್ನ ಆತ್ಮಶುದ್ಧಿ ಮಾಡಿಕೊಳ್ಳಲು ಪ್ರಾರಂಭಿಸಿದನು. ತನ್ನ ಮಡದಿ ಯಾವುದೇ ಸ್ವಾರ್ಥ ಶರತ್ತುಗಳಿಲ್ಲದೆ ಎಲ್ಲ ಬಿಟ್ಟು ನನ್ನೊಂದಿಗೆ ಬಂದಿದ್ದಾಳೆ. ಯಾವುದೇ ಬೇಡಿಕೆಗಳನ್ನು ಇಡದೇ ಅಥವಾ ಗಿಫ್ಟಗಳನ್ನು ಬೇಡದೇ ನನ್ನನ್ನು ದೈಹಿಕವಾಗಿ ಮಾನಸಿಕವಾಗಿ ಸಂತುಷ್ಟಗೊಳಿಸಿದ್ದಾಳೆ, ಸದಾಕಾಲ ಎಲ್ಲ ಸುಖಗಳನ್ನು ನೀಡಿದ್ದಾಳೆ. ಅವಳನ್ನು ಬರೀ ಪ್ರೀತಿಸುವುದಷ್ಟೇ ಅಲ್ಲ, ಮೋಹಿಸುವುದಷ್ಟೇ ಅಲ್ಲ, ಅವಳನ್ನು ಪೂಜಿಸುವುದು, ಗೌರವಿಸುವುದು, ಚೆನ್ನಾಗಿ ನೋಡಿಕೊಳ್ಳುವುದು ನನ್ನ ಆದ್ಯ ಕರ್ತವ್ಯ ಎಂಬುದನ್ನು ಆತ ಅರ್ಥಮಾಡಿಕೊಂಡನು. ಜೊತೆಗೆ ನಾಳೆಯಿಂದ ಅವಳಿಗೆ ಸಣ್ಣಪುಟ್ಟ ಸಂಗತಿಗಳಿಗೆಲ್ಲ ರೇಗದೆ ಜವಾಬ್ದಾರಿಯುತ ಗಂಡನಾಗಿ ಅವಳನ್ನು ರಾಣಿಯಂತೆ ನೋಡಿಕೊಳ್ಳಲು ನಿರ್ಧರಿಸಿದನು. ಅವನ ಪ್ರೇಮದ ಕಣ್ಣಲ್ಲಿ ಹುಟ್ಟಿದ್ದ ಕಾಮದ ಹುಣ್ಣು ವಾಸಿಯಾಯಿತು. ಅವರಿಬ್ಬರ ಸಂಸಾರದಲ್ಲಿ ಸರಸ ಸಲ್ಲಾಪ ಪ್ರೇಮದ ಉತ್ಸವ ಶುರುವಾಯಿತು....

2) ದೇವದಾಸನ ಪ್ರೇಮಕಥೆ : Love Story of Devadas and Paru in Kannada
ಪ್ರೇಮಿಗಳಿಗೆ ದೇವದಾಸನ ಹೆಸರು ಗೊತ್ತಿರದೆ ಇರಬಹುದು. ಆದರೆ ವಿರಹಿಗಳಿಗೆ ದೇವದಾಸನ ಹೆಸರು ಖಂಡಿತ ಗೊತ್ತಿರುತ್ತದೆ. ಹೃದಯ ಮುರಿದವರೆಲ್ಲ ದೇವದಾಸರೆ ಎಂಬ ಮಾತಿದೆ. ಎಲ್ಲರ ಮನ ಮುಟ್ಟಿದ ದೇವದಾಸನದ್ದು ನಿಜವಾದ ಪ್ರೇಮಕಥೆಯಲ್ಲ. ಅವನದ್ದು ಶರತ ಚಂದ್ರ ಚಟರ್ಜಿಯವರು 1900ರಲ್ಲಿ ಬೆಂಗಾಲಿಯಲ್ಲಿ ಬರೆದ ಕಾಲ್ಪನಿಕ ಪ್ರೇಮಕಥೆ. ದೇವದಾಸನ ಪ್ರೇಮಕಥೆ ಎಲ್ಲರ ಮನ ಕಲುಕಿದೆ. ಏಕೆಂದರೆ ಅದು ಸುಮಾರು 19 ಸಲ ವಿಭಿನ್ನ ಭಾಷೆಯ ಸಿನೆಮಾ ತೆರೆಯ ಮೇಲೆ ಮೂಡಿ ಬಂದಿದೆ. ದೇವದಾಸನ ಪ್ರೇಮಕಥೆ ಇಂತಿದೆ.
ಕಲ್ಕತ್ತಾ ಸಮೀಪದ ತಾಳಶೋನಪುರ ಎಂಬ ಹಳ್ಳಿಯಲ್ಲಿನ ಅಗರ್ಭ ಶ್ರೀಮಂತ ಬೆಂಗಾಲಿ ಬ್ರಾಹ್ಮಣ ಕುಟುಂಬದಲ್ಲಿ ದೇವದಾಸನ ಜನನವಾಯಿತು. ಅವನ ಗೆಳತಿಯೇ ಪಾರ್ವತಿ. ಎಲ್ಲರೂ ಅವಳನ್ನು ಪ್ರೀತಿಯಿಂದ ಪಾರು ಎಂದು ಕರೆಯುತ್ತಿದ್ದರು. ಅವಳು ದೇವದಾಸನ ಎದುರಿನ ಮನೆಯವಳು. ದೇವದಾಸ ಶ್ರೀಮಂತ ಬೆಂಗಾಲಿ ಬ್ರಾಹ್ಮಣ ಪರಿವಾರದ ವಂಶೋಧ್ಧಾರಕನಾಗಿದ್ದನು. ಆದರೆ ಅವನ ಬಾಲ್ಯದ ಗೆಳತಿ ಪಾರು ಒಂದು ಮಿಡಲ್ ಕ್ಲಾಸ್ ವ್ಯಾಪಾರಿ ಕುಟುಂಬದ ಮುದ್ದಿನ ಮಗಳಾಗಿದ್ದಳು. ಜಾತಿ ಅಂತಸ್ತನ್ನು ಮೀರಿ ಅವರಿಬ್ಬರ ಗೆಳೆತನ ಘಾಡವಾಗಿ ಬೆಳೆದಿತ್ತು. ಅವರಿಬ್ಬರ ಕುಟುಂಬಗಳ ಮಧ್ಯೆಯೂ ಒಂದು ಅನ್ಯೋನ್ಯತೆ ಇತ್ತು. ದೇವದಾಸನ ತಾಯಿ ಪಾರುವನ್ನು ಅತ್ಯಂತ ಇಷ್ಟಪಡುತ್ತಿದ್ದಳು. ಪಾರು ತನ್ನ ಹೆಚ್ಚಿನ ಸಮಯವನ್ನು ದೇವದಾಸನೊಂದಿಗೆ ಅವನ ಮನೆಯಲ್ಲಿಯೇ ಕಳೆಯುತ್ತಿದ್ದಳು. ದೇವದಾಸ ಅವಳೊಂದಿಗೆ ತುಂಟಾಟ ಆಡುತ್ತಾ ಅವಳನ್ನು ರೇಗಿಸುತ್ತಿದ್ದನು. ಈ ರೀತಿ ಬಾಲ್ಯದಲ್ಲಿಯೇ ದೇವದಾಸ ಹಾಗೂ ಪಾರುವಿನ ಮಧ್ಯೆ ಒಂದು ಮುರಿಯಲಾಗದ ಬೇಸುಗೆ ಬೆಳೆಯಿತು.
ದೇವದಾಸ ಹಾಗೂ ಪಾರು ಇಬ್ಬರು ಒಬ್ಬರನ್ನೊಬ್ಬರನ್ನು ಬಿಟ್ಟಿರುತ್ತಿರಲಿಲ್ಲ. ಆದರೆ ಸಂದರ್ಭ ಅವರನ್ನು ಬೇರ್ಪಡಿಸಿತು. ದೇವದಾಸ ತನ್ನ ತಂದೆಯ ಒತ್ತಾಯದ ಮೇರೆಗೆ ಶಿಕ್ಷಣವನ್ನು ಪಡೆಯುವುದಕ್ಕಾಗಿ ಕಲ್ಕತ್ತಾಗೆ ತೆರಳಿದನು. ಆತ 13 ವರ್ಷಗಳ ಕಾಲ ಓದಿಗಾಗಿ ಅಲ್ಲಿಯೇ ಉಳಿದನು. ಪಾರು ದೇವದಾಸನಿಗಾಗಿ ಪ್ರತಿಕ್ಷಣ ಪರಿತಪಿಸುತ್ತಿದ್ದಳು. ಅವನ ನೆನಪಲ್ಲಿ ಉಸಿರಾಡುತ್ತಿದ್ದಳು. ಅವನು ಸಹ ಅವಳನ್ನು ಪತ್ರಗಳ ಮುಖಾಂತರ ನೆನಪಿಸಿಕೊಳ್ಳುತ್ತಿದ್ದನು. ಶಾರೀರಿಕವಾಗಿ ದೂರಾದರೂ ಮಾನಸಿಕವಾಗಿ ಅವರಿಬ್ಬರು ಹತ್ತಿರವಾಗುತ್ತಲೇ ಹೋದರು. ದೇವದಾಸ 13 ವರ್ಷಗಳ ನಂತರ ತನ್ನ ಓದನ್ನು ಮುಗಿಸಿ ಮರಳಿ ಹಳ್ಳಿಗೆ ಬಂದಾಗ ಅವನು ಸಂಪೂರ್ಣವಾಗಿ ಬದಲಾಗಿದ್ದನು. ಚಿಕ್ಕವನಿದ್ದಾಗ ಪೆದ್ದನಂತಾಡುತ್ತಿದ್ದ ಹುಡುಗ ಈಗ ಒಬ್ಬ ಸುಶಿಕ್ಷಿತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದನು. ಅದೇ ರೀತಿ ಪಾರು ಕೂಡ ಸಾಕಷ್ಟು ಬದಲಾಗಿದ್ದಳು.
ಎಷ್ಟೋ ವರ್ಷಗಳ ನಂತರ ದೇವದಾಸ ತನ್ನ ಪಾರುವನ್ನು ನೋಡಿದಾಗ ಆತ ಅಚ್ಚರಿಗೆ ಒಳಗಾದನು. ಏಕೆಂದರೆ ಅವನ ಬಾಲ್ಯದ ಸ್ನೇಹಿತೆ ಪಾರು ಈಗ ಸಾಕಷ್ಟು ಬದಲಾಗಿದ್ದಳು. ಬಾಲ್ಯದಲ್ಲಿ ಅವನೊಂದಿಗೆ ಯಾವುದೇ ಮುಜುಗುರ, ಹಿಂಜರಿಕೆ, ನಾಚಿಕೆಯಿಲ್ಲದೆ ತುಂಟಾಟವಾಡುತ್ತಿದ್ದ ಪಾರು ಈಗ ಎದೆಯೆತ್ತರಕ್ಕೆ ಬೆಳೆದು ನಿಂತ ಸುಂದರ ಯುವತಿಯಾಗಿದ್ದಳು. ಅವಳ ಸೌಂದರ್ಯವನ್ನು ಕಂಡಾಕ್ಷಣ ದೇವದಾಸ ತನ್ನನ್ನು ತಾನು ನಂಬದಾದನು. ಅವರಿಬ್ಬರೂ ಪರಸ್ಪರ ಅಪ್ಪಿಕೊಂಡರು. ಏಕಾಂತದಲ್ಲಿ ತಮ್ಮ ಯೋಗಕ್ಷೇಮ ವಿಚಾರಿಸಿಕೊಂಡರು. ಈಗವರಿಗೆ "ತಾವಿಬ್ಬರು ಬರೀ ಸ್ನೇಹಿತರಾಗಿ ಉಳಿದಿಲ್ಲ, ಯುವ ಪ್ರೇಮಿಗಳಾಗಿದ್ದೇವೆ..." ಎಂಬುದು ಅರಿವಾಯಿತು. ತನ್ನ ಬಾಲ್ಯದ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗಿರುವುದರಿಂದ ಪಾರು ಪ್ರಪಂಚವನ್ನೇ ಗೆದ್ದ ಖುಷಿಯಲ್ಲಿದ್ದಳು. ಅದೇ ರೀತಿ ದೇವದಾಸ ಕೂಡ ಅಪರೂಪದ ಸುಂದರಿ ತನ್ನ ಸಂಗಾತಿಯಾಗುವಳು ಎಂಬ ಸಂತಸದಲ್ಲಿ ತೇಲಾಡಿದನು.
ದಿನಗಳು ಕಳೆದಂತೆ ದೇವದಾಸ ಹಾಗೂ ಪಾರುವಿನ ಪ್ರೀತಿ ಒಂದು ಪರದೆಯನ್ನು ದಾಟಿ ಮುಂದೆ ಸಾಗಿತು. ಆಕೆ ಚಿಕ್ಕ ವಯಸ್ಸಿನಂತೆಯೇ ಹೆಚ್ಚಿನ ಸಮಯವನ್ನು ದೇವದಾಸನೊಂದಿಗೆ ಅವನ ಮನೆಯಲ್ಲೇ ಕಳೆಯಲು ಪ್ರಾರಂಭಿಸಿದಳು. ಅವಳು ದೇವದಾಸನ ಕಣ್ಣುಗಳಲ್ಲಿ ತನ್ನ ಮೇಲಿರುವ ಪ್ರೀತಿಯನ್ನು ನೋಡುತ್ತಾ ಲೋಕವನ್ನೇ ಮರೆತು ಬಿಡುತ್ತಿದ್ದಳು. ಅವನ ಜೊತೆ ಕಿತ್ತಾಡುತ್ತಾ, ಕೋಪಿಸಿಕೊಂಡಂತೆ ನಾಟಕವಾಡುತ್ತಾ ತನ್ನನ್ನು ತಾನು ಮರೆತು ಬಿಡುತ್ತಿದ್ದಳು. ದೇವದಾಸ ಅವಳ ಮುದ್ದಾದ ನಗುವಿಗೆ ಮನಸೋತು ಮಗುವಿನಂತೆ ಅವಳನ್ನೇ ನೋಡುತ್ತಾ ಏನೇನೋ ಕಲ್ಪಿಸಿಕೊಳ್ಳುತ್ತಾ ಮೈಮರೆಯುತ್ತಿದ್ದನು. ಅವಳ ಮಡಿಲಲ್ಲಿ ಮಲಗಿಕೊಂಡು ಅವಳ ಸ್ಪರ್ಷಯನ್ನು ಸವಿಯುತ್ತಾ, ಅವಳ ಮುದ್ದಾದ ಮಾತುಗಳನ್ನು ಕೇಳುತ್ತಾ ನಿದ್ರೆಗೆ ಜಾರುತ್ತಿದ್ದನು. ಅವರಿಬ್ಬರ ಮನೆ ಎದುರು ಬದುರಾಗಿರುವುದರಿಂದ ಅವರಿಬ್ಬರಿಗೂ ಸುಲಭವಾಗಿ ಸಿಗಲು ಸಾಧ್ಯವಾಗುತ್ತಿತ್ತು. ಹೀಗಾಗಿ ಅವರಿಬ್ಬರ ಪ್ರೀತಿ ಸುಸೂತ್ರವಾಗಿ ಮುಂದೆ ಸಾಗಿತ್ತು.
ಯಾರ ಅಡ್ಡಿ ಆತಂಕವಿಲ್ಲದೆ ದೇವದಾಸ ಹಾಗೂ ಪಾರುವಿನ ಪ್ರೀತಿ ರಹಸ್ಯವಾಗಿ ಮುಂದೆ ಸಾಗಿತ್ತು. ಆದರೆ ಅವರ ಪ್ರೀತಿ ಪಾರುವಿನ ತಾಯಿಗೆ ಗೊತ್ತಾಯಿತು. ಅವಳ ತಾಯಿ ಅವಳ ಪ್ರೀತಿಯನ್ನು ಪ್ರೋತ್ಸಾಹಿಸಿದರು. ಏಕೆಂದರೆ ತಮ್ಮ ಮಗಳು ದೇವದಾಸನನ್ನು ಇಷ್ಟಪಡುತ್ತಿದ್ದಾಳೆ ಎಂಬುದು ಅವರಿಗೆ ಮೊದಲಿನಿಂದಲೂ ಗೊತ್ತಿತ್ತು. ಅದಕ್ಕಾಗಿ ಅವರು ಪಾರುವಿನ ಪ್ರೀತಿಗೆ ಪ್ರೋತ್ಸಾಹ ನೀಡಿದರು. ತಡಮಾಡದೆ ತಮ್ಮ ಮಗಳ ಮದುವೆಯನ್ನು ದೇವದಾಸನೊಂದಿಗೆ ನೆರವೇರಿಸಿ ಮೊಮ್ಮಕ್ಕಳನ್ನು ಎತ್ತಿ ಆಡಿಸುವ ಕನಸನ್ನು ಕಂಡರು. ಪಾರುವಿನ ತಾಯಿ ಬೆಂಗಾಲಿ ಸಂಪ್ರದಾಯದಂತೆ ದೇವದಾಸನ ತಾಯಿ ಹರಿಮತಿಗೆ ತಮ್ಮ ಮಗಳನ್ನು ನಿಮ್ಮನೆ ಸೊಸೆಯಾಗಿಸಿಕೊಳ್ಳುವಂತೆ ಕೇಳಿಕೊಂಡರು. ದೇವದಾಸ ಹಾಗೂ ಪಾರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದನ್ನು ಹೇಳಿ ಅವರಿಬ್ಬರ ಮದುವೆಯ ವಿಷಯವನ್ನು ಪ್ರಸ್ತಾಪಿಸಿದರು. ಆದರೆ ದೇವದಾಸನ ತಾಯಿ ಪಾರುವನ್ನು ತಮ್ಮ ಮನೆ ಸೊಸೆಯಾಗಿಸಿಕೊಳ್ಳಲು ಹಿಂದೇಟು ಹಾಕಿದರು. ಅವರಿಗೆ ತಮಗಿಂತಲೂ ಅಂತಸ್ತಿನಲ್ಲಿ, ಜಾತಿಯಲ್ಲಿ ಕೀಳಾಗಿರುವ ವ್ಯಾಪಾರಿಗಳ ಮನೆ ಮಗಳನ್ನು ತಮ್ಮ ಮನೆ ತುಂಬಿಸಿಕೊಳ್ಳುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅದಕ್ಕಾಗಿ ಅವರು ಪಾರುವಿನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದರು. ಜೊತೆಗೆ ಪಾರುವನ್ನು "ಹೀನ ಕುಲದವಳು, ನಡತೆಗೆಟ್ಟವಳು, ವ್ಯಾಪಾರಿ ವಂಶಸ್ಥಳು" ಎಂದೆಲ್ಲ ಹೀಯಾಳಿಸಿ ಅವಮಾನಿಸಿದರು. ದೇವದಾಸನ ತಂದೆ ನಾರಾಯಣ ಮುಖರ್ಜಿ "ನಮ್ಮ ಅಂತಸ್ತಿಗೆ ತಕ್ಕಷ್ಟು ವರದಕ್ಷಿಣೆಯನ್ನು ಕೊಡುವ ಯೋಗ್ಯತೆ ನಿಮಗಿಲ್ಲ..." ಎಂದು ಅವಮಾನಿಸಿ ಕಳುಹಿಸಿದರು. ಪಾರುವಿನ ತಾಯಿ ಇಂಥ ಉತ್ತರವನ್ನು ದೇವದಾಸನ ಮನೆಯಿಂದ ನಿರೀಕ್ಷಿಸಿರಲಿಲ್ಲ. ಅವಮಾನವಾದ ಕೋಪದಲ್ಲಿ ಪಾರುವಿನ ತಂದೆ ನೀಲಕಂಠ ಚಕ್ರವರ್ತಿಯವರು ಪಾರುವಿಗೆ ಒಂದೊಳ್ಳೆ ಶ್ರೀಮಂತ ವರನನ್ನು ಹುಡುಕಿ ಅವಳ ಮದುವೆಯ ಸಿದ್ಧತೆಗಳನ್ನು ಪ್ರಾರಂಭಿಸಿದರು.
ತರಾತುರಿಯಲ್ಲಿ ಸಾಗುತ್ತಿರುವ ತನ್ನ ಮದುವೆ ಸಿದ್ಧತೆಗಳನ್ನು ನೋಡಿ ಪಾರು ಗಾಬರಿಯಾದಳು. ಅವಳಿಗೆ ದೇವದಾಸನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗುವ ಮನಸ್ಸಿರಲಿಲ್ಲ. ಆಕೆಗೆ ದೇವದಾಸನ್ನು ಬಿಟ್ಟು ಖುಷಿಯಾಗಿರುವಷ್ಟು ಶಕ್ತಿಯೂ ಇರಲಿಲ್ಲ. ಅದಕ್ಕಾಗಿ ಆಕೆ ಧೈರ್ಯ ಮಾಡಿ ಎಲ್ಲರ ಕಣ್ತಪ್ಪಿಸಿ ಮಧ್ಯ ರಾತ್ರಿ ಎರಡು ಗಂಟೆಗೆ ಗುಟ್ಟಾಗಿ ದೇವದಾಸನನ್ನು ಭೇಟಿಯಾದಳು. ಅವನಿಗೆ ತನ್ನ ಪ್ರೀತಿಯನ್ನು ಮನಮುಟ್ಟುವಂತೆ ಹೇಳಿದಳು. ಆದರೆ ದೇವದಾಸ ಮೌನವಾಗಿದ್ದನು. ಏಕೆಂದರೆ ಅವನಿಗೆ ತನ್ನ ಮನೆಯವರೊಂದಿಗೆ ಮಾತಾಡಿ ತಮ್ಮಿಬ್ಬರ ಮದುವೆಗೆ ಒಪ್ಪಿಗೆ ಪಡೆದುಕೊಳ್ಳುವಷ್ಟು ಧೈರ್ಯವಿರಲಿಲ್ಲ. ಪಾರುವಿನ ಮನೆಯಲ್ಲಿ ಯಾವುದೇ ತಕರಾರುಗಳಿರಲಿಲ್ಲ. ಆದರೆ ದೇವದಾಸನ ಮನೆಯಲ್ಲಿ ಅವರ ಪ್ರೀತಿಗೆ ತೀವ್ರ ವಿರೋಧವಿತ್ತು. ಮನೆಯವರನ್ನು ವಿರೋಧಿಸಿ ಪಾರುವನ್ನು ಮದುವೆಯಾಗುವುಷ್ಟು ಭಂಡು ಧೈರ್ಯ ದೇವದಾಸನ ಎದೆಯಲ್ಲಿರಲಿಲ್ಲ. ಪಾರು ಅವನೊಂದಿಗೆ ಓಡೋಗಿ ಮದುವೆಯಾಗಲು ಸಹ ಸಿದ್ಧಳಿದ್ದಳು. ಆದರೆ ಆತ ಹೆದರು ಪುಕ್ಕಲಾಗಿದ್ದನು. ಆತ ಅವಳನ್ನು ಸಮಾಧಾನ ಮಾಡಿ ಅವಳನ್ನು ಮನೆಗೆ ಕಳುಹಿಸಿದನು. ಮರುದಿನ ತಮ್ಮಿಬ್ಬರ ಮದುವೆಗೆ ತನ್ನ ತಂದೆಯ ಮನವೊಲಿಸಲು ಹಲವಾರು ರೀತಿಯಲ್ಲಿ ಪ್ರಯತ್ನಿಸಿ ಸೋತನು. ಅವನ ಮನೆಯವರಿಗೆ ಮಗನ ಖುಷಿಗಿಂತ ಜಾತಿ ಹಾಗೂ ಅಂತಸ್ತಿನ ಅಹಂಕಾರವೇ ಹೆಚ್ಚಾಗಿತ್ತು.
ತನ್ನ ಮನೆಯವರ ಮನವೊಲಿಸುವಲ್ಲಿ ವಿಫಲನಾದಾಗ ದೇವದಾಸನಿಗೆ ಪಾರುವಿಗೆ ಮುಖ ತೋರಿಸುವ ಧೈರ್ಯವಾಗಲಿಲ್ಲ. ಅದಕ್ಕಾಗಿ ಆತ ಅವಳಿಗೆ ಹೇಳದೆ ಕೇಳದೆ ರಾತ್ರೋರಾತ್ರಿ ಕಲ್ಕತ್ತಾಗೆ ಹಾರಿ ಹೋದನು. ಒಂದೆರಡು ದಿನ ಬಿಟ್ಟು ಅವಳಿಗೆ "ನಮ್ಮ ಮದುವೆಗೆ ನಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅದಕ್ಕಾಗಿ ನಾವಿಬ್ಬರೂ ನಮ್ಮ ಪ್ರೀತಿಯನ್ನು ಮರೆತು ಬರೀ ಸ್ನೇಹಿತರಾಗಿ ಇರೋಣ..." ಎಂದೇಳಿ ಪತ್ರ ಬರೆದನು. ಅವನ ಪತ್ರವನ್ನು ಓದಿ ಪಾರು ಕಂಗಾಲಾದಳು. "ನಾನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ ದೇವದಾಸ ಇಷ್ಟೊಂದು ಹೇಡಿಯೇ?" ಎಂದವಳು ನೊಂದಕೊಂಡಳು. ಅದೇ ನೋವಲ್ಲಿ ಅವಳು ತನ್ನ ತಂದೆ ತೋರಿಸಿದ ಹುಡುಗನೊಂದಿಗೆ ಮದುವೆಯಾಗಲು ಮೌನ ಸಮ್ಮತಿ ಸೂಚಿಸಿದಳು. ಆದರೆ ಅವಳ ಮನಸ್ಸು ದೇವದಾಸನಿಗಾಗಿ ಹಾತೊರೆಯುತ್ತಿತ್ತು. ಅವಳ ಮದುವೆಯ ಸಿದ್ಧತೆಗಳೆಲ್ಲ ಭರದಿಂದ ಸಾಗಿದವು. ಅತ್ತ ಕಡೆ ದೇವದಾಸನಿಗೆ ತಡವಾಗಿ ಜ್ಞಾನೋದಯವಾಯಿತು. ನಾನೀಗ ಸುಮ್ಮನಿದ್ದರೆ ಪಾರುವನ್ನು ಶಾಶ್ವತವಾಗಿ ಕಳೆದುಕೊಳ್ಳುವೆ ಎಂಬ ಭಯ ರಾತ್ರೋರಾತ್ರಿ ಅವನನ್ನು ಮತ್ತೆ ಅವನ ಊರಿಗೆ ಎಳೆದುಕೊಂಡು ಬಂದಿತು.
ಪಾರುವಿನ ಮದುವೆಯ ಒಂದು ದಿನ ಮುಂಚಿತವಾಗಿ ದೇವದಾಸ ಅವಳನ್ನು ಒಂಟಿಯಾಗಿ ಭೇಟಿಯಾದನು. "ನಾನೀಗ ನಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿರುವೆ. ನಾವಿಬ್ಬರೂ ಓಡೋಗಿ ಮದುವೆಯಾಗೋಣ..." ಎಂದೇಳಿದನು. ಆದರೆ ಅವನ ಮಾತಿಗೆ ಪಾರು ಸೊಪ್ಪಾಕಲಿಲ್ಲ. ದೇವದಾಸನನ್ನು ಮತ್ತೆ ಬಯಸಿ ಅವಳ ತಂದೆತಾಯಿಗಳ ಮಾನವನ್ನು ಹರಾಜಾಕುವ ಕೆಟ್ಟ ಆಸೆ ಅವಳಲ್ಲಿ ಈಗ ಬರಲಿಲ್ಲ. ಅದಕ್ಕಾಗಿ ಆಕೆ ಅವನ ಬೇಜಾವಬ್ದಾರಿತನ ಮತ್ತು ಹೇಡಿತನವನ್ನು ನಿಂದಿಸಿ ಅವನ ಕೋರಿಕೆಯನ್ನು ತಳ್ಳಿ ಹಾಕಿದಳು. ದೇವದಾಸ ತನ್ನನ್ನು ಮದುವೆಯಾಗುವಂತೆ ಪಾರುವನ್ನು ನಾನಾ ರೀತಿಯಲ್ಲಿ ಕೇಳಿಕೊಂಡನು. ಆದರೆ ಅವಳ ಮನಸ್ಸಿಗ ಕಲ್ಲಾಗಿತ್ತು.
ದೇವದಾಸ ಎಷ್ಟೇ ಬೇಡಿಕೊಂಡರೂ ಪಾರು ಅವನೊಂದಿಗೆ ಮದುವೆಯಾಗಲು ಒಪ್ಪಲಿಲ್ಲ. ಅವಳ ನಿರ್ಧಾರ ಸರಿಯಾಗಿತ್ತು. ಏಕೆಂದರೆ ಮನೆ ಮುಂದೆ ಮದುವೆಯ ದಿಬ್ಬಣ ಬಂದು ನಿಂತಾಗ ಹೇಳದೆ ಕೇಳದೆ ಓಡಿ ಹೋದವನ ಜೊತೆ ಓಡಿ ಹೋಗುವುದು ಸರಿಯಲ್ಲ ಎಂಬುದು ಅವಳಿಗೆ ಚೆನ್ನಾಗಿ ಅರಿವಾಗಿತ್ತು. ಆಕೆ ಅವನಿಂದ "ಸಾಯುವುದರ ಒಳಗೊಮ್ಮೆ ನನ್ನನೊಮ್ಮೆ ನನ್ನ ಮನೆಯಲ್ಲಿ ಬಂದು ನೋಡು..." ಎಂದು ಭಾಷೆ ತೆಗೆದುಕೊಂಡು ಅವನನ್ನು ತರಾಟೆಗೆ ತೆಗೆದುಕೊಂಡು ಮಾತಿನಿಂದ ಚುಚ್ಚಿ ಸಾಯಿಸಿ ಕಳುಹಿಸಿದಳು. ದೇವದಾಸನ ಹೇಡಿತನ ಹಾಗೂ ಅವನ ಮನೆಯವರು ಮಾಡಿದ ಅವಮಾನದ ಸೇಡಿನಿಂದ ಬೇರೆ ಹುಡುಗನೊಂದಿಗೆ ಮದುವೆಯಾಗಿ ಊರು ಬಿಟ್ಟಳು. ಅವಳ ನೆನಪಲ್ಲಿ ಕೊರಗುತ್ತಾ ಮನೆಯವರೊಂದಿಗೆ ಜಗಳವಾಡಿಕೊಂಡು ದೇವದಾಸ ಸಹ ಊರು ಬಿಟ್ಟು ಕಲ್ಕತ್ತಾ ಸೇರಿಕೊಂಡನು.
ದೇವದಾಸನ ಮೇಲಿನ ಸೇಡಿನಿಂದಾಗಿ ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಿ ಆಕೆ ದೊಡ್ಡ ತಪ್ಪು ಮಾಡಿ ಪಶ್ಚಾತ್ತಾಪ ಪಟ್ಟಳು. ಏಕೆಂದರೆ ಅವಳ ಗಂಡ ಭುವನ ಚೌದರಿಗೆ ಈಗಾಗಲೇ ಮದುವೆಯಾಗಿ ಮೂರು ಮಕ್ಕಳಿದ್ದರು. ತನಗಿಂತಲೂ ವಯಸ್ಸಿನಲ್ಲಿ ಹನ್ನೆರಡು ವರ್ಷ ದೊಡ್ಡವನಾದ ಅರ್ಧ ಮುದುಕನೊಂದಿಗೆ ಹಾಸಿಗೆ ಹಂಚಿಕೊಂಡು ಸಂಸಾರ ಮಾಡಲು ಆಕೆ ಸಿದ್ಧಳಿದ್ದಳು. ಆದರೆ ಅವಳ ಗಂಡ ಸತ್ತು ಹೋದ ಮೊದಲ ಹೆಂಡತಿಯ ನೆನಪಲ್ಲಿ ನಾಸ್ತಿಕನಾಗಿದ್ದನು. ಆತ ಅವಳ ಸೌಂದರ್ಯದಲ್ಲಿ ಆಸಕ್ತಿ ತೋರಿಸದೇ ಅವಳನ್ನು ಮೂಲೆಗುಂಪು ಮಾಡಿದನು. ಅವಳು ಅವನ ಮಕ್ಕಳ ಸಾಕು ತಾಯಿಯಾಗಷ್ಟೇ ಇರಬೇಕಾಯಿತು. ಅವಳ ಗಂಡ ಜಮೀನುದಾರಿಯನ್ನು ನೋಡಿಕೊಳ್ಳುತ್ತಾ ಅವಳಿಂದ ಬಹುದೂರವೇ ಇರುತ್ತಿದ್ದನು. ಆದರೆ ಆಕೆ ತನ್ನ ಮಾಜಿ ಪ್ರಿಯಕರ ದೇವದಾಸನ ನೆನಪುಗಳಲ್ಲಿ ನರಕಯಾತನೆಯನ್ನು ಅನುಭವಿಸಲು ಪ್ರಾರಂಭಿಸಿದಳು. ದೇವದಾಸನ ನೆನಪುಗಳ ನಿರಂತರ ದಾಳಿಯ ಜೊತೆಗೆ ಹಿಂಸಿಸುವ ಹರೆಯದ ಆಸೆಗಳು ಅವಳನ್ನು ಹಣ್ಣಾಗಿಸಿದನು. ಆಕೆ ಪ್ರೇಮ ವೈರಾಗ್ಯವನ್ನು ಕೊಲ್ಲಲು ಗಂಡನ ತೋಳಿನಾಸರೆಯನ್ನು ಬಯಸಿದಳು. ಆದರೆ ಅವಳಿಗೆ ಅದರ ಬದಲಾಗಿ ಗಂಡನಿಂದಲೂ ವೈರಾಗ್ಯ ಸಿಕ್ಕಾಗ ಆಗ ಮಾನಸಿಕವಾಗಿ ಕುಸಿದು ಬಿದ್ದಳು. ಅವಳ ಗಂಡನ ಸಂಪತ್ತಿನಂತೆ ಅವಳ ಸೌಂದರ್ಯವೂ ಸಹ ನಶ್ವರವಾಯಿತು. ದೇವದಾಸನನ್ನು ಮರೆಯಲಾಗದೆ ಆಕೆ ಮನಶಾಂತಿಗಾಗಿ ಪೂಜಾ ಪಾಠಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕಾಲವನ್ನು ನೂಕತೊಡಗಿದಳು.
ಮನಸ್ಸಿಲ್ಲದ ಮದುವೆಯಾಗಿ ಪಾರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಳು. ಅತ್ತ ಕಡೆ ಕಲ್ಕತ್ತಾದಲ್ಲಿ ದೇವದಾಸ "ತನ್ನ ಹೇಡಿತನದಿಂದಾಗಿ ಮನಸ್ಸಲ್ಲಿರುವವಳನ್ನು ಮದುವೆಯಾಗದೆ ಬೇರೆಯವನಿಗೆ ಬಿಟ್ಟು ಕೊಟ್ಟೆನಲ್ಲ" ಎಂದು ಕೊರಗಲು ಪ್ರಾರಂಭಿಸಿದನು. ಅವನು ಎಷ್ಟೇ ಪ್ರಯತ್ನಿಸಿದರೂ ಪಾರುವಿನ ಗುಂಗಿನಿಂದ ಹೊರಬರಲು ಅವನಿಗೆ ಸಾಧ್ಯವಾಗಲಿಲ್ಲ. ಬೇಡವೆಂದರೂ ಬೆನ್ನಟ್ಟಿ ಬರುವ ಅವಳ ನೆನಪುಗಳಿಂದ ತಪ್ಪಿಸಿಕೊಳ್ಳಲಾಗದೆ ಆತ ಕುಡಿಯಲು ಪ್ರಾರಂಭಿಸಿದನು. ಕುಡಿತದ ಜೊತೆಜೊತೆಗೆ ಸಿಗರೇಟ್ ಸುಂದರಿಯನ್ನು ಸಹ ತುಟಿಗಂಟಿಸಿಕೊಂಡನು. ಇಷ್ಟಾದರೂ ಅವನ ವಿರಹ ಕೊನೆಯಾಗಲಿಲ್ಲ. ಅವನ ಗೆಳೆಯ ಚುನ್ನಿಲಾಲನಿಂದಾಗಿ ಆತ ಚಂದ್ರಮುಖಿ ಎಂಬ ವೈಷ್ಯೆಯ ಸೆರಗಲ್ಲಿ ಸಿಲುಕಿಕೊಂಡನು. ಆತ ಮಿತಿ ಮೀರಿ ಕುಡಿಯುತ್ತಾ, ಲೆಕ್ಕವಿಲ್ಲದಷ್ಟು ಸಿಗರೇಟಗಳನ್ನು ಸುಡುತ್ತಾ ಚಂದ್ರಮುಖಿಯ ಸೆರಗಿಗೆ ಸುತ್ತಿಕೊಂಡು ಅವಳ ಮನೆಯಲ್ಲಿಯೇ ಬಿದ್ದಿರಲು ಶುರುಮಾಡಿದನು. ಆತ ಚಂದ್ರಮುಖಿಯಲ್ಲಿಯೆ ತನ್ನ ಪಾರುವನ್ನು ಕಾಣಲು ಪ್ರಾರಂಭಿಸಿದನು.
ದೇವದಾಸ ಚಂದ್ರಮುಖಿಯನ್ನು ಪಾರು ಅಂತ ಭಾವಿಸಿ ಅವಳೊಂದಿಗೆ ಪ್ರೀತಿ ಮಾತುಗಳನ್ನಾಡುವಾಗ ಆಕೆ ಅವನಿಗೆ ಮನಸೋತಳು. ಆಕೆ ಅವನನ್ನು ಪ್ರೀತಿಸತೊಡಗಿದಳು. ಆಕೆ ಅವನ ಮನಸ್ಸಲ್ಲಿರುವ ಪಾರುವನ್ನು ಕಿತ್ತಾಕಿ ತಾನು ಅವನ ಮನಸೇರಲು ಸಾಕಷ್ಟು ಪ್ರಯತ್ನಿಸಿದಳು. ಆದರೆ ಅವನ ಮನಸ್ಸಲ್ಲಿ ಬರೀ ಪಾರುವಿಗೆ ಮಾತ್ರ ಜಾಗವಿತ್ತು. ಆಕೆ ಅವನ ದುಶ್ಚಟಗಳನ್ನು ಬಿಡಿಸಲು ಪ್ರಯತ್ನಿಸಿದಳು. ಆದರೆ ಏನು ಪ್ರಯೋಜನವಾಗಲಿಲ್ಲ. ದೇವದಾಸ ಪಾರುವಿನ ನೆನಪಲ್ಲಿ ಲೆಕ್ಕವಿಲ್ಲದಷ್ಟು ಕುಡಿದು ತನ್ನ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸಿಕೊಂಡನು. ತಾನಿನ್ನು ಜಾಸ್ತಿ ದಿನ ಬದುಕಲ್ಲ ಎಂಬುದು ಖಾತ್ರಿಯಾದಾಗ ಆತನಿಗೆ ಪಾರುವಿಗೆ ಕೊಟ್ಟ ಮಾತು ನೆನಪಾಯಿತು. ಕೊಟ್ಟ ಮಾತಿನಂತೆ ಕೊನೆಯ ಸಲ ಪಾರುವನ್ನು ನೋಡಲು ಆತ ಅವಳ ಊರಿಗೆ ಹೋದನು. ಆದರೆ ಅವಳನ್ನು ನೋಡಲಾಗದೆ ಅವಳ ಮನೆ ಎದುರಿಗೇನೆ ಪ್ರಾಣ ಬಿಟ್ಟನು. ಅವನ ಸಾವಿನ ಸುದ್ದಿ ಕೇಳಿ ಅವನನ್ನು ನೋಡಲು ಪಾರು ಓಡೋಡಿ ಬರುವಾಗ ಅವಳ ಮನೆಯವರು ಅವಳನ್ನು ತಡೆದರು. ಆಕೆ ಎಷ್ಟೇ ಬೇಡಿಕೊಂಡರೂ ದೇವದಾಸನನ್ನು ನೋಡಲು ಅವಳ ಮನೆಯವರು ಅವಕಾಶ ಮಾಡಿಕೊಡಲಿಲ್ಲ. ಅತಿಯಾಗಿ ಪ್ರೀತಿಸಿ ಆತ ಅವಳ ಮನೆ ಬಾಗಿಲಲ್ಲಿ ಸತ್ತನು. ಸತ್ತ ಪ್ರಿಯಕರನ ಮುಖವನ್ನು ನೋಡಲಾಗದೆ ಪಾರು ಇದ್ದು ಸತ್ತಂತೆ ಬದುಕಿ ಸತ್ತಳು...
ಈ ದೇವದಾಸನದ್ದು ಕಾಲ್ಪನಿಕ ಕಥೆಯಾದರೂ ಅವನಿನ್ನು ಎಲ್ಲ ವಿರಹಿಗಳ ಉಸಿರಲ್ಲಿ ಹೊಗೆಯಾಗಿಕೊಂಡು ಬದುಕಿದ್ದಾನೆ. ಪ್ರೀತಿಸಿದವಳನ್ನು ಪಡೆದುಕೊಳ್ಳಲಾಗದ ಹೇಡಿ ದೇವದಾಸನಿಗಾಗಿ ಕೊರಗಬೇಕೋ ಅಥವಾ ಸಂದರ್ಭಕ್ಕೆ ಶರಣಾಗಿ ನಾಸ್ತಿಕನನ್ನು ಮದುವೆಯಾಗಿ ನರಕಯಾತನೆಯನ್ನು ಅನುಭವಿಸಿದ ಪ್ರೇಮ ಸುಂದರಿ ಪಾರುಗಾಗಿ ಕೊರಗಬೇಕೋ ಎಂಬುದು ತಿಳಿಯಲ್ಲ. ಇದಿಷ್ಟು ದೇವದಾಸನ ಪ್ರೇಮಕಥೆ. ಇಷ್ಟವಿದ್ದರೆ ಈ ಪ್ರೇಮಕಥೆಯನ್ನು ನಿಮ್ಮ ಮಾಜಿ ಪ್ರೀತಿಪಾತ್ರರೊಡನೆ ಶೇರ್ ಮಾಡಿ ಮತ್ತು ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ...
3) ಲೈಲಾ ಮಜನು ಪ್ರೇಮಕಥೆ : Love Story of Laila Majnu in Kannada
ಪ್ರೀತಿಯೊಂದು ಸುಂದರ ಭಾವನೆ. ಮರೆಯಲಾಗದ ಮಧುರ ಅನುಭವ. ಎಲ್ಲರೂ ಪ್ರೇಮಕಥೆಗಳನ್ನು ಪ್ರೀತಿಸುತ್ತಾರೆ. ಆದರೆ ಗೆದ್ದ ಪ್ರೀತಿಗಿಂತ ಬಿದ್ದ ಪ್ರೀತಿಯೇ ಹೆಚ್ಚಿಗೆ ಪ್ರಖ್ಯಾತಿಯನ್ನು ಪಡೆಯುತ್ತದೆ. ಅಂಥದ್ದೇ ಬಿದ್ದು ಪ್ರಖ್ಯಾತಿ ಪಡೆದ ಪ್ರೇಮಕಥೆಗಳ ಗುಂಪಿಗೆ ಲೈಲಾ ಮಜನು ಪ್ರೇಮಕಥೆ ಸೇರಿಕೊಳ್ಳುತ್ತದೆ. ಲೈಲಾ ಮಜನುರದ್ದು ಒಂದು ಮಹಾನ್ ಹುಚ್ಚು ಪ್ರೇಮಕಥೆ.
ಸುಮಾರು 7ನೇ ಶತಮಾನದಲ್ಲಿ ಉತ್ತರ ಅರೇಬಿಯಾದ ಪೆನ್ಸಿಲೆನಿಯಾ ಎಂಬಲ್ಲಿ 'ಕಯಾಸ್ ಇಬ್ನ್ ಅಲ್ - ಮುಲ್ವಾಹಲ್' ಎಂಬ ನವ ತರುಣನಿದ್ದನು. ಆತ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವುದರಿಂದ ಅವನ ಮನಸ್ಸು ಹಾಗೂ ಮೆದುಳು ಎರಡೂ ಪರಿಪೂರ್ಣವಾಗಿ ಪಕ್ವವಾಗಿದ್ದವು. ಅವನಿಗೆ ಬದುಕು ಹೆಜ್ಜೆ ಹೆಜ್ಜೆಗೂ ಪಾಠ ಕಲಿಸಿರುವುದರಿಂದ ಆತ ಅನುಭವದ ಮೂರ್ತಿಯಾಗಿದ್ದನು. ಅವನ ಕಷ್ಟಗಳು ಅವನಿಗೆ ಬದುಕುವುದನ್ನು ಕಲಿಸಿದ್ದವು. ಆದರೆ ಆತ ಕಷ್ಟಗಳನ್ನು ದ್ವೇಷಿಸುತ್ತಿರಲಿಲ್ಲ. ಅದರ ಬದಲಾಗಿ ತನ್ನ ಜೀವನವನ್ನು ಪ್ರೀತಿಸುತ್ತಿದ್ದನು. ಜೀವನದ ಮೇಲಿನ ಪ್ರೀತಿಯಿಂದಾಗಿ ಅವನಲ್ಲೊಂದು ಕವಿ ಹೃದಯ ಜನ್ಮ ತಾಳಿತ್ತು. ಅವನೆದೆಯಿಂದ ಕವನಗಳು ನಿರಂತರವಾಗಿ ಕುಡಿಯೊಡೆಯಲು ಪ್ರಾರಂಭಿಸಿದವು. ಒಂದಿನ ಹೀಗೆಯೇ ಕವನಗಳನ್ನು ಕಟ್ಟುತ್ತಾ ಊರಲ್ಲಿ ಅಲೆಯುತ್ತಿರುವಾಗ ಆತನ ಕಣ್ಣಿಗೆ ಒಬ್ಬಳು ಸುಂದರವಾದ ನವ ತರುಣಿ ಬಿದ್ದಳು. ಅವಳೇ 'ಲೈಲಾ ಅಲ್ ಅಮಿರಿಯಾ'. ಲೈಲಾ ಒಂದು ಶ್ರೀಮಂತ ಕುಟುಂಬದ ಕನ್ಯೆಯಾಗಿದ್ದಳು. ಅವಳ ತಂದೆ ಅವಳನ್ನು ರಾಜಕುಮಾರಿಯಂತೆ ಬೆಳೆಸಿದ್ದರು. ಅವಳ ಮೇಲೆ ಕಯಾಸನಿಗೆ ಮನಸ್ಸಾಯಿತು. ಆತ ಅವಳನ್ನು ಕಂಡ ಕ್ಷಣದಿಂದಲೇ ಪ್ರೀತಿಸಲು ಪ್ರಾರಂಭಿಸಿದನು. ಬೀದಿ ಭೀಕಾರಿಯಂತಿದ್ದ ಕಯಾಸನಿಗೂ ರಾಜಕುಮಾರಿಯಂತಿದ್ದ ಲೈಲಾಳಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಆದರೂ ಕಯಾಸ ಅವಳನ್ನು ಹುಚ್ಚನಂತೆ ಪ್ರೀತಿಸಲು ಪ್ರಾರಂಭಿಸಿದನು.
ಕಯಾಸ ತನ್ನ ಕನಸುಗಳ ಲೋಕದಲ್ಲಿ ಲೈಲಾಳನ್ನು ಕಲ್ಪಿಸಿಕೊಂಡು ಪ್ರೇಮ ಕವನಗಳನ್ನು ಬರೆಯಲು ಪ್ರಾರಂಭಿಸಿದನು. ಅವನ ಪ್ರೇಮಕವನಗಳಲ್ಲಿ ಲೈಲಾಳ ಹೆಸರು ಹಾಗೂ ಸೌಂದರ್ಯ ಪದೇಪದೇ ಸದ್ದು ಮಾಡತೊಡಗಿತು. ಅವನ ಪ್ರೇಮ ಕವನಗಳು ಪ್ರೇಮ ಬಾಣಗಳಂತೆ ಲೈಲಾಳ ಹೃದಯಕ್ಕೆ ತಾಕಿದವು. ಆಕೆ ಅವನ ಕವನಗಳನ್ನು ಮೆಚ್ಚಿ ಪ್ರೇಮಕವಿ ಕಯಾಸನನ್ನು ಪ್ರೀತಿಸಲು ಪ್ರಾರಂಭಿಸಿದಳು. ಅವನ ಪ್ರೇಮ ಕವನಗಳಿಂದಾಗಿ ಅವನ ಪ್ರೇಮಕಥೆ ಊರಲೆಲ್ಲ ಫೇಮಸ್ ಆಯ್ತು. ಅವನು ಹುಚ್ಚನಂತೆ ಲೈಲಾಳನ್ನು ಪ್ರೀತಿಸುವುದನ್ನು ಕಂಡ ಊರ ಜನ ಅವನನ್ನು ಲೈಲಾ ಮಜನು ಎಂದು ಕರೆಯತೊಡಗಿದರು. ಲೈಲಾ ಮಜನು ಎಂದರೆ ಲೈಲಾಳಿಂದ ಹುಚ್ಚನಾದವ ಎಂದರ್ಥ. ಅವನ ಗೆಳೆಯರು ಸಹ ಅವನನ್ನು ಲೈಲಾ ಮಜನು ಎಂದು ಕರೆದು ಅವನನ್ನು ಛೇಡಿಸಿದರು. ಆದರೆ ಆತ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಪ್ರೇಮ ಕವನಗಳಲ್ಲಿ ಲೈಲಾಳನ್ನು ಆರಾಧಿಸಿದನು.
ಪ್ರೇಮ ಕವನಗಳ ನೆರಳಿನಲ್ಲಿ ಲೈಲಾ ಮತ್ತು ಕಯಾಸನ ಪ್ರೇಮಕಥೆ ಸಾಗಿತ್ತು. ಆದರೆ ಕಯಾಸ್ ಆತುರದಲ್ಲಿ ಲೈಲಾಳ ತಂದೆಗೆ "ಲೈಲಾಳನ್ನು ಕೊಟ್ಟು ಮದುವೆ ಮಾಡುವಿರಾ...?" ಎಂದು ಕೇಳಿ ದುಡುಕಿದನು. ಲೈಲಾಳ ತಂದೆ ಲೈಲಾಳನ್ನು ಕಯಾಸನಿಗೆ ಕೊಟ್ಟು ಮದುವೆ ಮಾಡಲು ಒಂಚೂರು ಒಪ್ಪಲಿಲ್ಲ. ಏಕೆಂದರೆ ಅವರ ಕಣ್ಣಲ್ಲಿ ಕಯಾಸ್ ಬರೀ ಕವನಗಳನ್ನು ಬರೆಯುತ್ತಾ ಕೆಲಸವಿಲ್ಲದೆ ಬೀದಿಬೀದಿ ಅಲೆಯುವ ಬೀದಿ ಭೀಕಾರಿಯಾಗಿದ್ದನು. ಅಂತಸ್ತಿನಲ್ಲಿ ಆತ ಅತ್ಯಂತ ಕೆಳಗಿರುವುದರಿಂದ ಹಾಗೂ ಅವನಿಗೆ ಯಾವುದೇ ಕೆಲಸ ಇರದಿರುವುದರಿಂದ ಲೈಲಾಳ ತಂದೆ ಅವನನ್ನು "ಕೆಲಸವಿಲ್ಲದೆ ಅಲೆಯುವ ನಿನ್ನ ಕವಿತೆಗಳಿಂದ ನನ್ನ ಮಗಳ ಹೊಟ್ಟೆ ತುಂಬಲ್ಲ..." ಎಂದು ಬೈದು ಬುದ್ಧಿವಾದ ಹೇಳಿ ಕಳುಹಿಸಿದರು. "ರಾಜಕುಮಾರಿಯಂತೆ ಸಾಕಿದ ಮಗಳನ್ನು ಬಡವರ ಮನೆಗೆ ಧಾರೆಯೆರೆದು ಕೊಡಲು ಯಾವ ತಂದೆಯು ಒಪ್ಪಲ್ಲ. ಕಯಾಸನ ಪ್ರೇಮ ಕವನಗಳು ತಂದೆಯ ದೃಷ್ಟಿಯಲ್ಲಿ ಪ್ರಯೋಜನಕ್ಕೆ ಬರಲ್ಲ..." ಎಂಬುದು ಗೊತ್ತಾದಾಗ ಲೈಲಾ ಊಟ ನೀರನ್ನು ಬಿಟ್ಟು ಮನೆಯಲ್ಲಿ ಮೌನ ಚಳುವಳಿಯನ್ನು ಪ್ರಾರಂಭಿಸಿದಳು. ಹೀಗಾಗಿ ಅವಳ ತಂದೆ ಬಲವಂತವಾಗಿ ಅವಳ ಮದುವೆಯನ್ನು 'ವರದ ಅಲ್ತಾಫಿ' ಎಂಬ ಶ್ರೀಮಂತ ವ್ಯಾಪಾರಿಯೊಡನೆ ಸದ್ದಿಲ್ಲದೆ ಮಾಡಿದರು. ಆಕೆ ಮನಸ್ಸಿಲ್ಲದ ಮನಸ್ಸಿನಿಂದ ಗಂಡನ ಮನೆ ಸೇರಿ ಕಣ್ಣೀರಲ್ಲಿ ಕೈ ತೊಳೆಯತೊಡಗಿದಳು. ಅವಳ ಗಂಡನಿಗೆ ಅವಳ ಪ್ರೇಮಕಥೆ ಗೊತ್ತಾದಾಗ ಆತ ಅವಳೊಂದಿಗೆ ಶಾರೀರಿಕ ಸಂಬಂಧವನ್ನು ಬೆಳೆಸದೆ ಅಸಲಿ ಪುರುಷನೆನೆಸಿಕೊಂಡನು.
ಜಾತಿ ಒಂದೇ ಆದರೂ ಅಂತಸ್ತಿನ ಅಸಮಾನತೆಯಿಂದಾಗಿ ಕಯಾಸನ ಪ್ರೀತಿ ಲೈಲಾಳ ಬಲವಂತದ ಮದುವೆಯಲ್ಲಿ ಸದ್ದಿಲ್ಲದೆ ಬಲಿಯಾಯಿತು. ಯಾವಾಗ ಲೈಲಾಳ ಮದುವೆಯ ಸುದ್ದಿ ಕಯಾಸನ ಕಿವಿಗೆ ಬಿತ್ತೋ ಆಗವನ ಮನಸ್ಸು ಮುರಿದು ನೂಚ್ಚು ನೂರಾಯಿತು. ಆತ ನಿಂತ ಜಾಗದಲ್ಲಿಯೇ ಕುಸಿದು ಬಿದ್ದನು. ಆತ ಸುಧಾರಿಸಿಕೊಂಡ ನಂತರ ಊರ ಬಿಟ್ಟು ಸಮೀಪದ ಮರಭೂಮಿಯಲ್ಲಿ ಲೈಲಾಳನ್ನು ಹುಡುಕುತ್ತಾ ಅಲೆಯಲು ಶುರುಮಾಡಿದನು. ಅವನಿಗೆ ಲೈಲಾ ಎಲ್ಲಿದ್ದಾಳೆ ಎಂಬುದೇ ಗೊತ್ತಿರಲಿಲ್ಲ. ಆದರೂ ಆತ ಅವಳನ್ನು ದಿಕ್ಕು ದೆಸೆಯಿಲ್ಲದೆ ಹುಡುಕುತ್ತಾ ಹೊರಟನು. ಅವನ ಮನೆಯವರು ಅವನನ್ನು ಎಲ್ಲೆಡೆಗೆ ಹುಡುಕಾಡಿ ಸುಸ್ತಾದರು. ಅವನಿನ್ನೂ ಮರಳಿ ಬರಲ್ಲವೆಂದು ಅವನ ಶ್ರಾದ್ಧ ಆಚರಿಸಿದರು. ಆದರೆ ಕಯಾಸ ಕಂಡಕಂಡ ಕಲ್ಲುಗಳ ಮೇಲೆ ಮತ್ತು ಮರಭೂಮಿಯ ಮರಳಿನಲ್ಲಿ ಕೋಲಿನಿಂದ ಕವಿತೆಗಳನ್ನು ಬರೆಯುತ್ತಾ, ಲೈಲಾಳನ್ನು ಹುಡುಕುತ್ತಾ ಹಾಗೆಯೇ ಗೊತ್ತು ಗುರಿಯಿಲ್ಲದೆ ಮುಂದೆ ಸಾಗಿದನು.
ಲೈಲಾಳ ಹುಡುಕಾಟದಲ್ಲಿ ಅಲೆದು ಕಯಾಸ ವಿಶಾಲವಾದ ಮರಭೂಮಿ ಪಾಲಾದನು. ಲೈಲಾ ಕೂಡ ಅವನ ನೆನಪುಗಳಲ್ಲಿ ನರಳಿ ತನ್ನ ಕೊನೆಯ ದಿನಗಳನ್ನು ಹತ್ತಿರವಾಗಿಸಿಕೊಂಡಳು. ಕಯಾಸನಿಂದ ದೂರಾಗಿ ದೂರದ ಗಂಡನ ಮನೆಗೆ ಬಂದಾಗ ಲೈಲಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಸಿದು ಹಾಸಿಗೆ ಹಿಡಿದಳು. ಅವಳ ಮನೋ ಕಾಯಿಲೆಯನ್ನು ಗುಣಪಡಿಸುವುದಕ್ಕಾಗಿ ಅವಳ ಗಂಡ ಅವಳನ್ನು ಇರಾಕಗೆ ಕರೆದುಕೊಂಡು ಹೋದನು. ಆದರೆ ಅವಳ ಮನೋರೋಗ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಯಿತು. ಕೊನೆಗಾಕೆ ಕಯಾಸನ ನೆನಪುಗಳ ನೋವನ್ನು ತಾಳಲಾರದೇ ಎದೆಯೊಡೆದುಕೊಂಡು ಪ್ರಾಣ ತ್ಯಾಗ ಮಾಡಿದಳು.
ಲೈಲಾಳ ಅಕಾಲಿಕ ಸಾವಿನ ಸುದ್ದಿ ಅವಳೂರಿಗೆ ತಲುಪಿದಾಗ ಕಯಾಸನ ಗೆಳೆಯರು ಅವನಿಗಾಗಿ ಬಹಳಷ್ಟು ಹುಡುಕಾಡಿದರು. ಆದರೆ ಆತ ಅವರಿಗೆ ಸಿಗಲಿಲ್ಲ. ಕೆಲವು ದಿನಗಳು ಕಳೆದ ನಂತರ ಅವನ ಮೃತ ಶರೀರ ಲೈಲಾಳ ಗೋರಿಯ ಪಕ್ಕದಲ್ಲಿ ಕಂಡು ಬಂದಿತು. ಆತ ಅವಳನ್ನು ಹುಡುಕಿಕೊಂಡು ಇರಾಕಿಗೆ ಬರುವಷ್ಟರಲ್ಲಿ ಅವಳು ಗೋರಿ ಸೇರಿದ್ದಳು. ಅದನ್ನು ತಿಳಿದ ಕಯಾಸ ಅವಳ ಗೋರಿ ಪಕ್ಕದಲ್ಲಿದ್ದ ಕಲ್ಲುಗಳ ಮೇಲೆ ಅವಳಿಗಾಗಿ ಮೂರು ಸಾಲಿನ ಪ್ರೇಮ ಕವನವೊಂದನ್ನು ಬರೆದು ಕಣ್ಮುಚ್ಚಿದ್ದನು.
ಕಯಾಸ ಲೈಲಾಳನ್ನು ಪ್ರೀತಿಸುತ್ತಾ ಹುಚ್ಚನಾಗಿ ಊರ ಜನರಿಂದ ಲೈಲಾಮಜನು ಎಂಬ ಬಿರುದನ್ನು ಪಡೆದುಕೊಂಡರೂ ಅವಳೊಂದಿಗೆ ಬಾಳಿ ಬದುಕಲಾರದೆ ದುರಂತ ಸಾವಿಗೆ ಶರಣಾದನು. ಪ್ರೇಮ ಕವನಗಳೇ ಅವನ ಆಸ್ತಿಯಾಗಿದ್ದವು. ಲೈಲಾಳ ಕಣ್ಣಿಗೆ ಅಮೂಲ್ಯವಾಗಿ ಕಂಡ ಅವನ ಪ್ರೇಮ ಕವನಗಳು ಅವಳ ತಂದೆಯ ಕಣ್ಣಿಗೆ ಕೇವಲವಾಗಿ ಕಂಡವು. ಒಂದು ವೇಳೆ ಲೈಲಾಳಿಗೆ ಅಮೂಲ್ಯವಾಗಿ ಕಂಡ ಕಯಾಸನ ಕವನಗಳು ಅವಳ ತಂದೆಗೂ ಅಮೂಲ್ಯವಾಗಿ ಕಂಡಿದ್ದರೆ ಆತನಿಗೆ ಲೈಲಾ ಸಿಗುತ್ತಿದ್ದಳು. ಆತ ಕೊನೆಯ ಸಲ ಲೈಲಾಳಿಗಾಗಿ ಅವಳ ಗೋರಿಯ ಕಲ್ಲುಗಳ ಮೇಲೆ ಬರೆದ "ಲೈಲಾ ಹಾದು ಹೋದ ಈ ಗೋಡೆಗಳ ಮೂಲಕ ನಾನು ಹಾದು ಹೋಗುತ್ತೇನೆ. ಲೈಲಾ ಚುಂಬಿಸಿದ ಈ ಗೋಡೆಗಳನ್ನು ನಾನು ಚುಂಬಿಸುತ್ತೇನೆ. ಇದು ಗೋಡೆಗಳ ಮೇಲಿರುವ ಪ್ರೇಮವಲ್ಲ. ಆ ಗೋಡೆಗಳ ಮಧ್ಯೆ ಮಲಗಿರುವ ಲೈಲಾಳ ಮೇಲಿರುವ ಪ್ರೇಮ" ಎಂಬ ಕವನ ನನ್ನನ್ನು ಇಂದಿಗೂ ಕಾಡುತ್ತದೆ. ಇದಿಷ್ಟು ಲೈಲಾ ಮಜುನುವಿನ ಪ್ರೇಮಕಥೆ. ಈ ಪ್ರೇಮಕಥೆ ನಿಮಗಿಷ್ಟವಾಗಿದ್ದರೆ ತಪ್ಪದೆ ಇದನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಮೆಂಟ್ ಮಾಡಿ.
Note : This love story is inspired by Love poems written by Persian poet Nizami Ganjavi.
![]() |
4) ರತಿಯ ಪ್ರೇಮಕಥೆ : Love Story of Rati in Kannada ಜಗತ್ತಿನಲ್ಲಿ ಪ್ರೀತಿಯನ್ನು ಹರಡುವುದಕ್ಕಾಗಿ ಬ್ರಹ್ಮ ಕಾಮದೇವನನ್ನು ಸೃಷ್ಟಿಸಿದನು. ಕಾಮದೇವನು ಬಯಕೆ, ಪ್ರೇಮ, ಕಾಮಗಳ ದೇವರಾಗಿದ್ದಾನೆ. ಆತ ಗಿಳಿಯ ಮೇಲೆ ಸಂಚರಿಸುತ್ತಾ ತನ್ನ ಹೂಬಾಣಗಳಿಂದ ಜಗತ್ತಿನೆಲ್ಲೆಡೆ ಪ್ರೀತಿಯನ್ನು ಹರಡುತ್ತಾನೆ. ಒಂದಿನ ಬ್ರಹ್ಮ ದಕ್ಷ ಪ್ರಜಾಪತಿಗೆ ಕಾಮದೇವನಿಗಾಗಿ ಒಂದು ಸೂಕ್ತವಾದ ಹುಡುಗಿಯನ್ನು ಹುಡುಕುವಂತೆ ಹೇಳಿದನು. ಆಗ ದಕ್ಷ ಪ್ರಜಾಪತಿ ಬ್ರಹ್ಮನ ಮಾತನ್ನು ನಿರ್ಲಕ್ಷಿಸಿದನು. ಆಗ ಕೋಪದಲ್ಲಿ ಕಾಮದೇವ ತನ್ನ ಪುಷ್ಪ ಬಾಣಗಳನ್ನು ದಕ್ಷ ಪ್ರಜಾಪತಿ ಮತ್ತು ಬ್ರಹ್ಮನ ಮೇಲೆ ಚೆಲ್ಲಿದನು. ಆದರೆ ಆ ಬಾಣಗಳು ಗುರಿ ತಪ್ಪಿ ಬ್ರಹ್ಮನ ಮಗಳಾದ ಸಂಧ್ಯಾಳಿಗೆ ತಗುಲಿದವು. ಆಗ ಅವಳು ನಾಚಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಇದರಿಂದ ಎಚ್ಚೆತ್ತ ದಕ್ಷ ಪ್ರಜಾಪತಿ ಕೂಡಲೇ ತನ್ನ ಮೈ ಬೆವರಿನಿಂದ ಒಂದು ಸುಂದರವಾದ ಕನ್ಯೆಯನ್ನು ಸೃಷ್ಟಿಸಿದನು. ಸರ್ವಾಂಗ ಸುಂದರನಾದ ಕಾಮದೇವನಿಗೆ ಸರ್ವಾಂಗ ಸುಂದರಿಯಾದ ರತಿ ಸೂಕ್ತ ಜೋಡಿಯಾದಳು. ರತಿ ಹಾಗೂ ಕಾಮದೇವರು ಪರಸ್ಪರ ಆಕರ್ಷಿತರಾದರು. ಕಾಮದೇವನಂತೆ ರತಿ ಕೂಡ ಪ್ರೇಮದ, ಕಾಮದ, ಬಯಕೆಯ ದೇವತೆಯಾಗಿದ್ದಾಳೆ. ರತಿ ಹಾಗೂ ಕಾಮದೇವನ ಪ್ರೀತಿ ಅಮರಾಜರವಾಗಿದೆ. ಪ್ರೇಮವಿಲ್ಲದ ಕಾಮ ಅಪರಾಧವೆನ್ನುವುದು ರತಿಯ ವಾದವಾಗಿದೆ. ಪ್ರೇಮ ಮನಸ್ಸಿನ ಆಹಾರವಾದರೆ, ಕಾಮ ಮೈಯ ಆಹಾರ ಎನ್ನುವುದು ಕಾಮದೇವನ ಅಭಿಪ್ರಾಯವಾಗಿದೆ. ಅದಕ್ಕಾಗಿ ಅವರಿಬ್ಬರೂ ಪರಸ್ಪರ ಪ್ರೇಮಿಸುತ್ತಾ, ಕಾಮಿಸುತ್ತಾ ಈ ಜಗತ್ತಿಗೆ ಪ್ರೇಮಸೂತ್ರಗಳೊಂದಿಗೆ ಕಾಮ ಸೂತ್ರಗಳನ್ನು ಸಹ ಬೋಧಿಸಿದ್ದಾರೆ. ಅವರ ಪ್ರೇಮ ಪ್ರತೀಕವಾಗಿ ಎಷ್ಟೋ ಕಾಮದ ಭಂಗಿಗಳು ಈ ಜಗತ್ತಿಗೆ ಪರಿಚಯವಾಗಿವೆ. ರತಿ ಹಾಗೂ ಕಾಮದೇವ ಇಬ್ಬರು ಸೇರಿ ಪ್ರೇಮವನ್ನು ಜಗತ್ತಿನೆಲ್ಲೆಡೆ ಹರಡುತ್ತಾ ಸಂತೋಷವಾಗಿದ್ದರು. ಆದರೆ ಲೋಕ ಕಲ್ಯಾಣಕ್ಕಾಗಿ ಕಾಮದೇವ ಬಲಿಯಾದಾಗ ರತಿ ಸಹ ತನ್ನ ದೇಹ ತ್ಯಾಗ ಮಾಡಬೇಕಾದ ಕ್ರೂರ ಪರಿಸ್ಥಿತಿ ಎದುರಾಗಿ ಅವರ ಸರಸ ಸಲ್ಲಾಪಗಳಿಗೆ ಅರ್ಧವಿರಾಮ ಬಿದ್ದಿತು. ದಕ್ಷ ಪ್ರಜಾಪತಿಯು ಲೋಕ ಕಲ್ಯಾಣಕ್ಕಾಗಿ ಒಂದು ಮಹಾಯಜ್ಞವನ್ನು ಮಾಡುತ್ತಿದ್ದನು. ಅದರಲ್ಲಿ ಭಾಗವಹಿಸಲು ದೇವಾನು ದೇವತೆಗಳೆಲ್ಲರು ಆಮಂತ್ರಿತರಾಗಿದ್ದರು. ಆದರೆ ಆಗ ಶಿವನನ್ನು ಆಮಂತ್ರಿಸಿರಲಿಲ್ಲ. ಏಕೆಂದರೆ ದಕ್ಷನ ಮಗಳು ದ್ರಾಕ್ಷಾಯಣಿ ಅವನ ವಿರುದ್ಧವಾಗಿ ಶಿವನನ್ನು ಮದುವೆಯಾಗಿದ್ದಳು. ಈ ಸಿಟ್ಟಿನಿಂದಾಗಿ ದಕ್ಷ ಶಿವನನ್ನು ಆಮಂತ್ರಿಸಿಲಿರಲಿಲ್ಲ. ಆದರೆ ದ್ರಾಕ್ಷಾಯಣಿಗೆ ತನ್ನ ತಂದೆ ಮಾಡುತ್ತಿರುವ ಯಜ್ಞದಲ್ಲಿ ಭಾಗವಹಿಸುವ ಮನಸ್ಸಾಯಿತು. ಶಿವ ಅವಳಿಗೆ ಎಷ್ಟೇ ತಿಳಿಸಿ ಹೇಳಿದರೂ ಆಕೆ ಕೇಳದೆ ದಕ್ಷನ ಯಜ್ಞಕ್ಕೆ ಹೋದಳು. ಆಗ ದಕ್ಷ ಪ್ರಜಾಪತಿ ಅವಳ ಕಣ್ಣೆದುರಿಗೆ ಶಿವನನ್ನು ಗೇಲಿ ಮಾಡಿ ಅವಮಾನಿಸಿದನು. ಶಿವನ ನಿಂದನೆಯನ್ನು ಕೇಳಿ ಕೋಪದಲ್ಲಿ ದ್ರಾಕ್ಷಾಯಣಿ ಅದೇ ಯಜ್ಞ ಕುಂಡದಲ್ಲಿ ಹಾರಿ ಪ್ರಾಣ ಬಿಟ್ಟಳು. ತನ್ನ ಮಡದಿ ಬೆಂಕಿಗೆ ಆಹುತಿಯಾಗಿರುವುದನ್ನು ಕೇಳಿ ಶಿವ ಆ ಯಜ್ಞವನ್ನು ನಾಶಪಡಿಸಿ ವೈರಾಗಿಯಾದನು. ಆತ ದ್ರಾಕ್ಷಾಯಣಿಯನ್ನು ಕಳೆದುಕೊಂಡ ನಂತರದಿಂದ ವಿಲಾಸಿಯಾದನು. ಆತ ಎಲ್ಲವನ್ನು ತ್ಯಜಿಸಿ ಬರೀ ಧ್ಯಾನದಲ್ಲಿ ಕಾಲ ಕಳೆಯತೊಡಗಿದನು. ಶಿವ ಜಗತ್ತನ್ನು ಮರೆತು ಧ್ಯಾನಾಸಕ್ತನಾಗಿರುವುದರಿಂದ ಜಗತ್ತಿನ ಕೆಲಸ ಕಾರ್ಯಗಳೆಲ್ಲ ಏರುಪೇರಾಗಿದ್ದವು. ಅದಕ್ಕಾಗಿ ಶಿವನ ತಪಸ್ಸನ್ನು ಭಂಗ ಮಾಡಲೇಬೇಕಾದ ಅನಿವಾರ್ಯತೆ ಇತ್ತು. ಅಲ್ಲದೆ ಅದೇ ಸಮಯಕ್ಕೆ ತಾರಕಾಸುರ ಎಂಬ ರಾಕ್ಷಸ ಬ್ರಹ್ಮನಿಂದ "ಸಾವು ಬಂದರೆ ಬರೀ ಶಿವ ಸುತನಿಂದ ಮಾತ್ರ ಬರಬೇಕು'' ಎಂಬ ವರವನ್ನು ಪಡೆದುಕೊಂಡು ಲೋಕ ಕಂಟಕನಾಗಿದ್ದನು. ಶಿವನ ಸತಿ ದ್ರಾಕ್ಷಾಯಣಿ ಸತ್ತಿರುವುದರಿಂದ ಶಿವನಿಗೆ ಸಂತಾನವಾಗುವುದಿಲ್ಲ, ನಾನು ಸಾಯುವುದಿಲ್ಲ ಎಂಬ ಕುರುಡು ಯೋಚನೆಯಲ್ಲಿ ತಾರಾಕಾಸುರ ಎಲ್ಲ ಅನೀತಿ ಅತ್ಯಾಚಾರಗಳನ್ನು ಮಾಡುತ್ತಾ ಮುಂದೆ ಸಾಗಿದನು. ದ್ರಾಕ್ಷಾಯಣಿ ಪರ್ವತರಾಜನ ಮಗಳು ಪಾರ್ವತಿಯಾಗಿ ಮರು ಜನ್ಮ ತಾಳಿದ್ದಳು. ಶಿವನ ತಪಸ್ಸನ್ನು ಭಂಗಗೊಳಿಸಿ ಪಾರ್ವತಿಯೊಂದಿಗೆ ವಿವಾಹ ಮಾಡಿಸಿದರೆ ಅವರ ಸಂತಾನದಿಂದ ತಾರಕಾಸುರನ ವಧೆಯಾಗುವುದು ಎಂಬ ನಂಬಿಕೆಯಲ್ಲಿ ದೇವತೆಗಳಿದ್ದರು. ಅದಕ್ಕಾಗಿ ಶಿವನ ತಪಸ್ಸನ್ನು ಮುರಿಯುವ ಪ್ರಯತ್ನವನ್ನು ಅವರು ಪ್ರಾರಂಭಿಸಿದರು. ಶಿವನ ತಪಸ್ಸನ್ನು ಭಂಗಗೊಳಿಸಲು ನಾನಾ ರೀತಿಯಲ್ಲಿ ಪ್ರಯತ್ನಿಸಿ ದೇವತೆಗಳೆಲ್ಲರು ಸೋತರು. ಗಾಳಿ, ಮಳೆ, ಬಿಸಿಲು ಸಹ ಶಿವನ ಧ್ಯಾನವನ್ನು ಕದಲಿಸುವಲ್ಲಿ ವಿಫಲವಾದವು. ಪಾರ್ವತಿ ಶಿವನನ್ನು ಪ್ರೀತಿಸುವುದರೊಂದಿಗೆ ಅವನನ್ನು ಪೂಜಿಸಲು ಸಹ ಪ್ರಾರಂಭಿಸಿದಳು. ಆದರೆ ಅವಳ ಪೂಜೆಯಾಗಲಿ, ಪ್ರೇಮವಾಗಲಿ ಶಿವನ ಧ್ಯಾನವನ್ನು ಮುರಿಯುವಲ್ಲಿ ಯಶಸ್ವಿಯಾಗಲಿಲ್ಲ. ಆಗ ದೇವತೆಗಳೆಲ್ಲರು ಸೇರಿ ಕಾಮದೇವನ ಸಹಾಯಕ್ಕಾಗಿ ಅಂಗಲಾಚಿದರು. ಕಾಮದೇವ ತನ್ನ ಮಡದಿ ರತಿಯೊಡನೆ ರಾಸಲೀಲೆಗಳಲ್ಲಿ ಮುಳುಗಿದ್ದನು. ಆದರೂ ಆತ ಲೋಕ ಕಲ್ಯಾಣಕ್ಕಾಗಿ ಶಿವನ ತಪಸ್ಸನ್ನು ಮುರಿಯುವ ಜವಾಬ್ದಾರಿಯನ್ನು ಸ್ವೀಕರಿಸಿದನು. ಶಿವನ ತಪಸ್ಸನ್ನು ಭಂಗಗೊಳಿಸಿದರೆ ಅವನ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ಕಾಮದೇವನಿಗೆ ಗೊತ್ತಿತ್ತು. ಆದರೂ ಆತ ತನ್ನ ಹೂಬಾಣಗಳಿಂದ ಶಿವನ ತಪಸ್ಸನ್ನು ಭಂಗಗೊಳಿಸಿದನು. ಆದರೆ ತನ್ನ ತಪಸ್ಸು ಭಂಗವಾದ ಕೋಪದಲ್ಲಿ ಶಿವ ತನ್ನ ಮೂರನೇ ಕಣ್ಣಿನಿಂದ ಕಾಮದೇವನನ್ನು ಸುಟ್ಟು ಬೂದಿ ಮಾಡಿದನು. ತನ್ನ ಪ್ರಿಯಕರ ಸುಟ್ಟು ಬೂದಿಯಾದಾಗ ರತಿಯ ಅಳುವಿನ ಸೂತಕ ಮುಗಿಲು ಮುಟ್ಟಿತು. ಶಿವ ಶೋಕತಪ್ತ ರತಿಯನ್ನು ಸಂತೈಸಿ ಒಂದು ವರ್ಷದಲ್ಲಿ ನಿನ್ನ ಪತಿ ಮತ್ತೆ ದೇಹವನ್ನು ಪಡೆಯುತ್ತಾನೆ ಎಂಬ ವರ ನೀಡಿದನು. ಕಾಮದೇವನಿಂದ ಶಿವನ ತಪಸ್ಸು ಭಂಗವಾಗಿರುವುದರಿಂದ ಶಿವ ಜಗತ್ತಿನ ಕಡೆಗೆ ಸ್ವಲ್ಪ ಕಾಳಜಿ ವಹಿಸಿದನು. ಅಷ್ಟರಲ್ಲಿಯೇ ಪಾರ್ವತಿ ಶಿವನನ್ನು ಒಲಿಸಿಕೊಳ್ಳಲು ಘೋರ ತಪಸ್ಸನ್ನು ಆಚರಿಸಲು ಪ್ರಾರಂಭಿಸಿದ್ದಳು. ಶಿವ ಅವಳ ಭಕ್ತಿಗೆ ಪ್ರಸನ್ನನಾಗಿ ಅವಳ ಪ್ರೇಮವನ್ನು ಒಪ್ಪಿಕೊಂಡು ಅವಳನ್ನು ವಿವಾಹವಾಗಲು ಒಪ್ಪಿದನು. ಅದರೆ ರತಿ ಶರೀರವಿಲ್ಲದ ಕಾಮದೇವನನ್ನು ಕಂಡು ಕಣ್ಣೀರಾಕಿದಳು. ಒಂದು ವೇಳೆ ಆಕೆ ಮನಸ್ಸು ಮಾಡಿದ್ದರೆ ಶರೀರವಿಲ್ಲದ ಕಾಮದೇವನನ್ನು ಬಿಟ್ಟು ಬೇರೆ ಯಾವುದೋ ದೇವರನ್ನು ಮತ್ತೆ ಮದುವೆಯಾಗಬಹುದಿತ್ತು. ಆದರೆ ಹಾಗೇ ಮಾಡದೆ ಕಾಮದೇವನಿಗಾಗಿ ಕಾಯಲು ಸಿದ್ಧಳಾದಳು. ಅವಳದ್ದು ನಿಜವಾದ ಪ್ರೀತಿ. ಮುಂದೆ ಶಿವ ಪಾರ್ವತಿಯನ್ನು ವಿವಾಹವಾದನು. ಅವರ ಸಂತಾನ ಕಾರ್ತಿಕೇಯ ತಾರಕಾಸುರನನ್ನು ಸಂಹರಿಸಿದನು. ಅದೇ ರೀತಿ ಶಿವನ ವರದಂತೆ ಕಾಮದೇವ ಶ್ರೀಕೃಷ್ಣನ ಮಗ ಪ್ರದ್ಯುಮ್ನನಾಗಿ ಜನಿಸಿದನು. ರತಿ ದೇಹತ್ಯಾಗ ಮಾಡಿ ಮಾಯಾವತಿಯಾಗಿ ಭೂಮಿಯ ಮೇಲೆ ಜನಿಸಿ ಪ್ರದ್ಯುಮ್ನನ ರೂಪದಲ್ಲಿರುವ ಕಾಮದೇವನನ್ನು ಸೇರಿದಳು. ಈ ರೀತಿ ರತಿ ಮತ್ತು ಮತ್ತೆ ಕಾಮದೇವ ಮತ್ತೆ ಮಿಲನವಾಗಿ ಜಗತ್ತಿನಲ್ಲೆಡೆ ಮತ್ತೆ ಪ್ರೇಮವನ್ನು ಪಸರಿಸಲು ಪ್ರಾರಂಭಿಸಿದರು. ಇವತ್ತು ಸಹ ಅವರಿಬ್ಬರು ಪ್ರತಿಯೊಬ್ಬರ ಮನಸ್ಸಲ್ಲಿದ್ದಾರೆ... 5) ಮೇನಕೆಯ ಮಾಯಾ ಪ್ರೇಮಕಥೆ - Love Story of Menaka and Vishwamitra in Kannada ಗಾಧಿತನಯನಾದ ಕೌಶಿಕ ರಾಜ ಕುಶ ರಾಜ್ಯವನ್ನು ಆಳಿಕೊಂಡು ಖುಷಿಯಾಗಿದ್ದನು. ಶಾಸ್ತ್ರದ ಜೊತೆಗೆ ಸಕಲ ಶಸ್ತ್ರವಿದ್ಯೆಗಳನ್ನು ಕಲಿತು ಕೌಶಿಕ ಅತ್ಯಂತ ಪರಾಕ್ರಮಿಯಾದನು. ತನ್ನ ಪರಾಕ್ರಮದಿಂದ ಸುತ್ತಮುತ್ತಲಿನ ಸಾಮಂತರನ್ನೆಲ್ಲ ಸದೆ ಬಡಿದು ಸಾಮ್ರಾಜ್ಯವನ್ನು ವಿಸ್ತರಿಸಿ ಕೌಶಿಕ ಸಾಮ್ರಾಟನಾದನು. ಆತ ಒಮ್ಮೆ ಪರಿವಾರ ಸಮೇತನಾಗಿ ಬ್ರಹ್ಮರ್ಷಿಗಳಾದ ವಸಿಷ್ಟರ ಆಶ್ರಮಕ್ಕೆ ಹೋದನು. ಆಗ ವಸಿಷ್ಠರು ಸಕಲ ರಾಜ ಪರಿವಾರವನ್ನು ನಂದಿನಿಯ ಕರುಣೆಯಿಂದ ಉಪಚರಿಸಿದರು. ಕೇಳಿದ್ದನ್ನು ತಕ್ಷಣವೇ ಕೊಡುವ ಕಾಮಧೇನು ನಂದಿನಿಯನ್ನು ಕಂಡು ಕೌಶಿಕ ರಾಜನ ಮನ ಚಂಚಲವಾಯಿತು. ಅವನಿಗೆ ನಂದಿನಿಯನ್ನು ಹೊಂದುವ ಆಸೆಯಾಯಿತು. ಅದಕ್ಕಾಗಿ ಆತ ವಶಿಷ್ಟರಿಗೆ ನಂದಿನಿಯನ್ನು ಕೊಡುವಂತೆ ಬೇಡಿಕೆ ಇಟ್ಟನು. ಅವನಾಸೆಗೆ ವಸಿಷ್ಠರು ಒಪ್ಪದಿದ್ದಾಗ "ನಂದಿನಿಯ ಬದಲಾಗಿ ಕೋಟಿ ಗೋವುಗಳನ್ನು ಕೊಡುತ್ತೇನೆ..." ಎಂಬ ಆಮಿಷವನ್ನು ಒಡ್ಡಿದನು. ಈಗಲೂ ವಸಿಷ್ಟರು ಒಪ್ಪದಿದ್ದಾಗ ಕೌಶಿಕ ರಾಜ ಕ್ರೋಧಿತನಾದನು. ಆತ ಬಲವಂತದಿಂದ ನಂದಿನಿಯನ್ನು ಒಳೆದೊಯ್ಯಲು ತನ್ನ ಸೈನಿಕರಿಗೆ ಆದೇಶಿಸಿದನು. ಆದರೆ ವಸಿಷ್ಟರು ತಮ್ಮ ಬ್ರಹ್ಮದಂಡವನ್ನು ಮುಂದಿರಿಸಿಕೊಂಡು ತಪೋನಿರತರಾದಾಗ ಕೌಶಿಕನ ಎಲ್ಲ ಶಸ್ತ್ರಾಸ್ತ್ರಗಳನ್ನು ಅವರ ಬ್ರಹ್ಮದಂಡವು ನುಂಗಿತು. ನಂದಿನಿಯನ್ನು ಒಳದೊಯ್ಯಲಾಗದೆ ತಲೆ ತಗ್ಗಿಸಿ ಕೌಶಿಕ ರಾಜ ತನ್ನ ಅರಮನೆಗೆ ಮರಳಿದನು. ವಸಿಷ್ಠರ ಆಶ್ರಮದಲ್ಲಾದ ಅವಮಾನವನ್ನು ಕೌಶಿಕ ರಾಜ ಹಗುರವಾಗಿ ತೆಗೆದುಕೊಳ್ಳಲಿಲ್ಲ. ಅವನಿಗೆ ಕ್ಷತ್ರಿಯರ ಶಸ್ತ್ರ ಬಲಕ್ಕಿಂತ ಬ್ರಹ್ಮತೇಜದ ಬಲವೇ ಅತ್ಯಂತ ಶ್ರೇಷ್ಠ ಎಂದೆನಿಸಿತು. ಅದಕ್ಕಾಗಿ ಕೌಶಿಕ ರಾಜ ತನ್ನ ಸಾಮ್ರಾಜ್ಯವನ್ನೆಲ್ಲ ಮಂತ್ರಿಗಳಿಗೆ ಒಪ್ಪಿಸಿ ತಪಸ್ಸನ್ನು ಆಚರಿಸಲು ಪ್ರಾರಂಭಿಸಿದನು. ಕೌಶಿಕ ರಾಜ ಕಠಿಣವಾದ ತಪಸ್ಸುಗಳನ್ನು ಆಚರಿಸಿ ಹಲವಾರು ಸಿದ್ಧಿಗಳನ್ನು ಸಾಧಿಸಿ ವಿಶ್ವಾಮಿತ್ರನೆಂದು ಪ್ರಸಿದ್ಧಿ ಪಡೆದನು. ಎಷ್ಟೇ ಸಿದ್ಧಿಗಳನ್ನು ಸಾಧಿಸಿದರೂ ವಿಶ್ವಾಮಿತ್ರನ ಮನ ಶಾಂತವಾಗಲಿಲ್ಲ. ಏಕೆಂದರೆ ವಶಿಷ್ಟರಿಂದ ಬ್ರಹ್ಮರ್ಷಿಯೆಂದು ಕರೆಯಿಸಿಕೊಳ್ಳುವ ಹಂಬಲ ವಿಶ್ವಾಮಿತ್ರನಿಗಿತ್ತು. ಅದಕ್ಕಾಗಿ ಆತ ಘೋರ ತಪಸ್ಸನ್ನು ಆಚರಿಸಲು ಪ್ರಾರಂಭಿಸಿದನು. ಇದೇ ರೀತಿ ಘೋರ ತಪಸ್ಸನ್ನು ಆಚರಿಸಿ ಹೊಸದಾದ ಸೃಷ್ಟಿಯನ್ನು ರೂಪಿಸುವುದು ವಿಶ್ವಾಮಿತ್ರನ ಉದ್ದೇಶವಾಗಿತ್ತು. ವಿಶ್ವಾಮಿತ್ರನ ಘೋರ ತಪಸ್ಸಿನ ಸುದ್ದಿ ದೇವತೆಗಳ ರಾಜ ದೇವೆಂದ್ರನಿಗೆ ತಲುಪಿತು. ವಿಶ್ವಾಮಿತ್ರ ಹೀಗೆಯೇ ತಪಸ್ಸು ಮಾಡಿದರೆ ಈಡೀ ಸ್ವರ್ಗವನ್ನೇ ಕೇಳಬಹುದೆಂದು ದೇವೇಂದ್ರ ಚಿಂತಿತನಾದನು. ಚಳಿ, ಮಳೆ, ಗಾಳಿ, ಬಿಸಿಲುಗಳ ಪರಿವಿಲ್ಲದೆ ವಿಶ್ವಾಮಿತ್ರನ ತಪಸ್ಸು ಯಶಸ್ವಿಯಾಗಿ ಸಾಗಿತ್ತು. ಆದರೆ ದೇವೆಂದ್ರನ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಯಿತು. ಕೊನೆಗೆ ದೇವೇಂದ್ರ ಹೇಗಾದರೂ ಮಾಡಿ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಲು ನಿರ್ಧರಿಸಿದನು. ಅದಕ್ಕಾಗಿ ಆತ ದೇವಲೋಕದ ಸುಂದರ ಅಪ್ಸರೆ ಮೇನಕೆಯನ್ನು ಕರೆದು ಅವಳಿಗೆ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸುವ ಜವಾಬ್ದಾರಿಯನ್ನು ವಹಿಸಿದನು. ಮೇನಕೆ ಸಮುದ್ರ ಮಂಥನದ ಸಮಯದಲ್ಲಿ ಹೊರಬಂದ ಅಪರೂಪದ ಅಪ್ಸರೆಯಾಗಿದ್ದಳು. ಅವಳ ಸೌಂದರ್ಯದ ಮೇಲೆ ದೇವೇಂದ್ರನಿಗೆ ಅಭಿಮಾನವಿತ್ತು. ಅದಕ್ಕಾಗಿ ಆತ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಲು ಮೇನಕೆಯನ್ನೇ ಭೂಮಿಗೆ ಕಳುಹಿಸಿದನು. ಕ್ರೂರ ಕಾಡು ಪ್ರಾಣಿಗಳ ಕೀರುಚಾಟದಲ್ಲಿ ಮಳೆ, ಗಾಳಿ, ಚಳಿ, ಬಿಸಿಲನ್ನು ಲೆಕ್ಕಿಸದೇ ತಪಸ್ಸನ್ನು ಆಚರಿಸುತ್ತಾ ಕುಳಿತ ವಿಶ್ವಾಮಿತ್ರನನ್ನು ನೋಡಿ ಮೇನಕೆ ಆಶ್ಚರ್ಯ ಚಕಿತಳಾದಳು. ಅವನನ್ನು ನೋಡಿದ ಮೊದಲ ಕ್ಷಣದಿಂದಲೇ ಮೇನಕೆ ತನ್ನ ಕೆಲಸವನ್ನು ಪ್ರಾರಂಭಿಸಿದಳು. ಅವನ ತಪಸ್ಸನ್ನು ಭಂಗಗೊಳಿಸಲು ನಾನಾ ರೀತಿಯಲ್ಲಿ ಪ್ರಯತ್ನಿಸಿದಳು. ಮೇನಕೆ ಪಕ್ಷಿಗಳ ಕಲರವದ ಜೊತೆಗೆ ತನ್ನ ಸುಮಧುರ ಧ್ವನಿಯನ್ನು ಜೊತೆಗೂಡಿಸಿ ಹಾಡಿದಳು, ತಂಗಾಳಿಯ ಹೆಜ್ಜೆಗಳನ್ನು ಅನುಕರಿಸುತ್ತಾ ಗೆಜ್ಜೆ ಕಟ್ಟಿ ಕುಣಿದಳು. ಆದರೂ ವಿಶ್ವಾಮಿತ್ರ ಅವಳನ್ನು ಗಮನಿಸಲಿಲ್ಲ. ಏಕೆಂದರೆ ಅವನಲ್ಲಿ ಭಾವನೆಗಳು ಬತ್ತಿ ಹೋಗಿದ್ದವು. ಕಠಿಣ ತಪಸ್ಸಿನಿಂದ ಅವನ ಮನಸ್ಸು ಕಲ್ಲಾಗಿದ್ದರೆ, ದೇಹ ಕಬ್ಬಿಣವಾಗಿತ್ತು. ಆದರೂ ಮೇನಕೆ ತನ್ನ ಪ್ರಯತ್ನದಿಂದ ಹಿಂದೆ ಸರಿಯಲಿಲ್ಲ. ಮೇನಕೆ ತನ್ನ ಸೀರೆಯ ಸೆರಗನ್ನು ಗಾಳಿಯಲ್ಲಿ ತೇಲಿಬಿಟ್ಟು ವಿಶ್ವಾಮಿತ್ರನ ಸಮೀಪಕ್ಕೆ ಸುಳಿದಾಡಿದಳು. ಆಗ ವಿಶ್ವಾಮಿತ್ರ ಕಣ್ತೆರೆದನು. ಮೇನಕೆಯ ಹಾರಾಡುವ ಕೂದಲು, ಕೊಲ್ಲುವ ಕಣ್ಣೋಟ, ಕೈಬೀಸಿ ಕರೆಯುವ ಕಿವಿಯೋಲೆ, ಎದೆಚುಚ್ಚುವ ತುಟಿಗಳು, ಅರ್ಧಂಬರ್ಧ ಮುಚ್ಚಿದ ಎದೆ, ಬಳ್ಳಿಯಂತೆ ಬಳಕುವ ನಡು, ಮಾದಕವಾದ ಮೈಮಾಟಗಳನ್ನೆಲ್ಲ ನೋಡಿ ವಿಶ್ವಾಮಿತ್ರ ಹುಚ್ಚನಾದನು. ಮೇನಕೆಯ ಸೌಂದರ್ಯದ ಸೆಳೆತಕ್ಕೆ ಸೋತು ವಿಶ್ವಾಮಿತ್ರ ತನ್ನ ತಪಸ್ಸನ್ನು ಅರ್ಧಕ್ಕೆ ಕೈಬಿಟ್ಟನು. ಈ ರೀತಿ ಕೊನೆಗೂ ಮೇನಕೆಯ ಕಾಮದ ನೆರಳು ವಿಶ್ವಾಮಿತ್ರನ ತಪಸ್ಸನ್ನು ಮುರಿಯುವಲ್ಲಿ ಸಫಲವಾಯಿತು. ವಿಶ್ವಾಮಿತ್ರ ತನ್ನ ತಪಸ್ಸನ್ನು ಮರೆತು ಮೇನಕೆಯೊಂದಿಗೆ ಮೈಮರೆತನು. ಮೇನಕೆ ದೇವೇಂದ್ರ ತನಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದಳು. ವಿಶ್ವಾಮಿತ್ರನೊಂದಿಗೆ ಹುಸಿ ಪ್ರೇಮದ ನಾಟಕವಾಡುತ್ತಾ ಅವನನ್ನು ತನ್ನ ಸೌಂದರ್ಯದ ನೆರಳಲ್ಲಿ ನರಳುವಂತೆ ಮಾಡಿದಳು. ವಿಶ್ವಾಮಿತ್ರ ಹಗಲು ರಾತ್ರಿಗಳನ್ನು ಲೆಕ್ಕಿಸದೆ ಮೇನಕೆಯ ಸೆರಗು ಸೋಕಿ ತನ್ನ ಸಿದ್ಧಿಗಳನ್ನೆಲ್ಲ ಕಳೆದುಕೊಂಡನು. ಆದರೂ ಆತ ಮೇನಕೆಯನ್ನು ಬಿಡುವ ಮನಸ್ಸನ್ನು ಮಾಡಲಿಲ್ಲ. ಆತ ಅವಳ ಸೌಂದರ್ಯವನ್ನು ಮನಬಂದಂತೆ ಅನುಭವಿಸಿದನು. ಅವನ ಮನಸ್ಸು ಮೇನಕೆಯ ಸುಂದರವಾದ ಮೈ ಮೇಲಿತ್ತು. ಆದರೆ ಅವಳ ಮನಸ್ಸು ಸ್ವರ್ಗಲೋಕದ ಸುಖಗಳ ನೆನಪುಗಳಲ್ಲಿ ಸುತ್ತುತ್ತಿತ್ತು. ಮೇನಕೆ ದೇವೇಂದ್ರ ಹೇಳಿದಂತೆ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಿದ್ದಳು. ಅದಕ್ಕಾಗಿ ಆಕೆ ಬೇಗನೆ ಸ್ವರ್ಗಕ್ಕೆ ಹಿಂತಿರುಗಲು ಹಾತೊರೆಯುತ್ತಿದ್ದಳು. ಆದರೆ ಮತ್ತೆ ವಿಶ್ವಾಮಿತ್ರ ತನ್ನ ತಪಸ್ಸನ್ನು ಪ್ರಾರಂಭಿಸಬಹುದೆಂದು ಅವನೊಂದಿಗೆ ಅಲ್ಲಿಯೇ ಉಳಿದಳು. ಮೇನಕೆಯ ಅಸಹಾಯಕತೆಯ ಲಾಭ ಪಡೆದುಕೊಂಡು ವಿಶ್ವಾಮಿತ್ರ ಅವಳ ಸೌಂದರ್ಯವನ್ನು ಸರಿಯಾಗಿ ಬೇಟೆಯಾಡಿದನು. ಆತ ಅವಳನ್ನು ನಿಜವಾಗಿಯೂ ಪ್ರೀತಿಸಲು ಪ್ರಾರಂಭಿಸಿದನು. ಆದರೆ ಆಕೆ ಪ್ರೀತಿಸುವ ನಾಟಕವಾಡುತ್ತಿದ್ದಳು. ಅವರಿಬ್ಬರ ಮಾಯಾ ಪ್ರೀತಿಯ ಸಂಕೇತವಾಗಿ ಒಂದು ಹೆಣ್ಣು ಮಗು ಜನ್ಮ ತಾಳಿತು. ವಿಶ್ವಾಮಿತ್ರ ನಿರಂತರವಾಗಿ ಮೇನಕೆಯನ್ನು ಅನುಭವಿಸುತ್ತಾ ವರ್ಷಗಳನ್ನು ಕಳೆದನು. ಅವನ ಸರಸ ಸಲ್ಲಾಪದಲ್ಲಿ ಇನ್ಮುಂದೆ ನರಳಲು ಇಷ್ಟವಿಲ್ಲದೆ ಮೇನಕೆ ವಿಶ್ವಾಮಿತ್ರನನ್ನು ಬಿಟ್ಟು ಸ್ವರ್ಗಕ್ಕೆ ಹಿಂತಿರುಗಲು ಸಿದ್ಧಳಾದಳು. ಹತ್ತು ವರ್ಷಗಳು ಕಳೆದ ನಂತರ ಋಷಿ ವಿಶ್ವಾಮಿತ್ರನಿಗೆ ತನ್ನ ತಪ್ಪಿನ ಅರಿವಾಯಿತು. ಜೊತೆಗೆ ಮೇನಕೆಯನ್ನು ಮುಂದಿಟ್ಟುಕೊಂಡು ದೇವೇಂದ್ರ ಮಾಡಿದ ಕುಟಿಲತೆಯೂ ಅರ್ಥವಾಯಿತು. ಕೋಪದಲ್ಲಿ ವಿಶ್ವಾಮಿತ್ರ ಮೇನೆಕೆಗೆ ಶಾಪವಿಟ್ಟು ಮತ್ತೆ ತಪಸ್ಸನ್ನಾಚರಿಸಲು ಕಾಡಿಗೆ ಹೋದನು. ವಿಶ್ವಾಮಿತ್ರ ಮತ್ತು ಮೇನಕೆಯರ ಪ್ರೀತಿಯ ಫಲವಾಗಿ ಜನಿಸಿದ ಹೆಣ್ಣು ಮಗುವನ್ನು ಮೇನಕೆ ಕಣ್ವ ಮಹರ್ಷಿಗಳಿಗೆ ಕೊಟ್ಟು ಆಕೆ ಸ್ವರ್ಗಕ್ಕೆ ಹಿಂತಿರುಗಿದಳು. ಆ ಹೆಣ್ಣು ಮಗು ಕಣ್ವರ ಸಾಕು ಮಗಳಾದಳು. ಅವಳೇ ಮುಂದೆ ಶಕುಂತಲೆ ಎಂಬ ಹೆಸರಿನಿಂದ ಪ್ರಖ್ಯಾತಳಾದಳು. ಅತ್ತ ಕಡೆ ವಿಶ್ವಾಮಿತ್ರ ಮೇನಕೆಯ ಮೈಮಾಟಕ್ಕೆ ಮರುಳಾಗಿ ಮೈಮರೆತ ತಪ್ಪಿಗೆ ಪಶ್ಚಾತ್ತಾಪಪಟ್ಟು ಮತ್ತೆ ಘೋರ ತಪಸ್ಸನ್ನಾಚರಿಸಿ ತನ್ನ ಸಿದ್ಧಿಗಳನ್ನು ಪುನ: ಸಂಪಾದಿಸಿದನು. ವಿಶ್ವಾಮಿತ್ರನಂಥ ಮಹಾನ್ ತಪಸ್ಸಿಗಳೇ ಹೆಣ್ಣಿನ ಸೌಂದರ್ಯಕ್ಕೆ ದಾಸರಾಗಿ ತಮ್ಮ ಸಿದ್ಧಿಗಳನ್ನು ತ್ಯಜಿಸಿರುವಾಗ ಇನ್ನು ನಮ್ಮ ಕಾಲೇಜ ಹುಡುಗರು ಹುಡುಗಿಯರ ಹಿಂದೆ ಅಲೆದು ಓದನ್ನು ನಿರ್ಲಕ್ಷಿಸುವುದರಲ್ಲಿ ಅಚ್ಚರಿಯೇನಿಲ್ಲ ಅನಿಸುತ್ತೆ. ಈ ಕಥೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಮೆಂಟ್ ಮಾಡಿ... 6) ಪಾರ್ಟಟೈಮ ಗೆಳತಿ ಕನ್ನಡ ಫ್ರೆಂಡಶೀಪ ಸ್ಟೋರಿ - Kannada Friendship Story![]() ಆ್ಯಕ್ಚುಲಿ ನಾನು ಕೆಲವೊಂದಿಷ್ಟು ವಿಷಯಗಳ ಬಗ್ಗೆ ಬರೆಯಬಾರದು ಅಂತಾ ಬಹಳಷ್ಟು ಅನ್ಕೊತ್ತಿನಿ. ಆದರೆ ಆ ವಿಷಯ ಪದೇಪದೇ ಕಾಡಲು ಪ್ರಾರಂಭಿಸಿದಾಗ ಅದನ್ನು ಬರೆಯಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅಂಥ ಅನಿವಾರ್ಯತೆಯಲ್ಲಿ ಹುಟ್ಟಿದ ನೈಜಕಥೆಯೇ ಈ "ಪಾರ್ಟಟೈಮ ಗೆಳತಿ". ನಾನು ನಿಮಗೆಲ್ಲ ಗೊತ್ತು. ಆದರೆ ನನಗೆ ಸಿಕ್ಕ ಪಾರ್ಟಟೈಮ ಗೆಳತಿ ಯಾರಂತ ನಿಮಗೆ ಗೊತ್ತಿಲ್ಲ. ಅವಳು ಯಾರಂತ ನಿಮಗೆ ಗೊತ್ತಾಗೊದು ನನಗಿಷ್ಟವಿಲ್ಲ. ಅದಕ್ಕಾಗಿ ಪೂರ್ತಿ ಕಥೆಯಲ್ಲಿ ಅವಳು ಅವಳಾಗೆ ಇರ್ತಾಳೆ. ಅವಳು ಅಂಥ ಸುಂದರಿ ಏನಲ್ಲ. ಸಿಂಪಲ್ ಸುಂದರಿ ಅಂದ್ರೆ ತಪ್ಪೇನಿಲ್ಲ. ಬಟ್ ಅವಳು ಬಹಳಷ್ಟು ಬುದ್ಧಿವಂತೆ. ಅವಳ ಧ್ವನಿ ಕೂಡ ಸುಮಧುರವಾಗಿದೆ. ನನಗೂ ಅವಳಿಗೂ ಕ್ಲಾಸಲ್ಲಿ ತುಂಬಾನೇ ಕಾಂಪಿಟೇಷನ್ ನಡಿತಾಯಿತ್ತು. ಅವಳು ನನ್ನ ದುಶ್ಮನ ತರಹ ನೊಡ್ತಾಯಿದ್ಲು. ಆದರೆ ನಾನು ಅವಳನ್ನು ಆ ತರಹ ನೋಡ್ತಾ ಇರಲಿಲ್ಲ. ನಾನು ಅವಳ ಜೊತೆಗೆ ಫ್ರೆಂಡಶೀಪ ಮಾಡಬೇಕು ಅಂತಾ ಬಹಳಷ್ಟು ಸಲ ಅನ್ಕೊಂಡಿದ್ದೆ. ಆದರೆ ಅವಳು ನನಗೆ ಆ ಅವಕಾಶವನ್ನು ಕೊಡಲಿಲ್ಲ. ನಮ್ಮ ಕ್ಲಾಸಲ್ಲಿನ ಫಸ್ಟ ಬೆಂಚ್ ಕಮಂಗಿಗಳ ಜೊತೆಗೆಲ್ಲ ಅವಳು ಮಾತಾಡುತ್ತಿದ್ದಳು. ಆದರೆ ನನ್ನ ಜೊತೆಗೆ ಮಾತಾಡುತ್ತಿರಲಿಲ್ಲ. ನನ್ನನ್ನು ಅವೈಡ ಮಾಡಿ ದೂರ ಓಡುತ್ತಿದ್ದಳು. ಆದರೆ ಎಲ್ಲದರಲ್ಲೂ ನನ್ನೊಂದಿಗೆ ಕಾಂಪಿಟೇಷನ್ ಮಾಡುತ್ತಿದ್ದಳು. ಈ ಒಣ ಕಾಂಪಿಟೇಷನನಲ್ಲೇ ಎರಡು ವರ್ಷ ಕಳೆದೊಯಿತು. ನಾವಿಬ್ಬರು 10thಗೆ ಕಾಲಿಟ್ಟೆವು. ಈಗಲಾದರೂ ಅವಳು ನನ್ನೊಂದಿಗೆ ಮಾತಾಡ್ತಾಳೆ ಅಂತಾ ನಾನು ಅಂದುಕೊಂಡೆ. ಆದರೆ ಅವಳಿಗೆ ನನ್ನ ಮೇಲೆ ಜಲಸಿ ಮತ್ತಷ್ಟು ಹೆಚ್ಚಾಯಿತು. ಆಕೆಗೆ ನಾನೆಲ್ಲಿ ಅವಳ ಫಸ್ಟ Rank ಕಿತ್ಕೊಂಡ ಬಿಡ್ತಿನಿ ಅನ್ನೋ ಭಯವಿತ್ತು ಅನಿಸುತ್ತೆ. ಅದಕ್ಕೆ ಅವಳು ಆ ರೀತಿ ನನ್ನೊಂದಿಗೆ ದೂರದ ದುಶ್ಮನಿ ಮಾಡುತ್ತಿದ್ದಳೋ ಏನೋ ಗೊತ್ತಿಲ್ಲ. ನಾನು ಕಥೆ, ಕವನ, ಕಬ್ಬಡ್ಡಿ, ಚೆಸ್, ಕ್ರಿಕೆಟ್ ಅಂತಾ ಕಲ್ಚರಲ್ ಆ್ಯಕ್ಟಿವಿಟಿಗಳಲ್ಲಿ ಬಿಜಿಯಾಗಿರತ್ತಿದ್ದೆ. ನನಗೆ ಸಿಗುತ್ತಿದ್ದ ಗೌರವ ಹಾಗೂ ಫ್ಯಾನ ಫಾಲೋಯಿಂಗ ನೋಡಿ ಅವಳು ಕಲ್ಚರಲ ಆ್ಯಕ್ಟಿವಿಟಿಗಳಲ್ಲಿ ಪಾರ್ಟಿಸಿಪೆಟ ಮಾಡಲು ಪ್ರಾರಂಭಿಸಿದಳು. ಕ್ವೀಜ ಹಾಗೂ ಚೆಸಲ್ಲಿ ನನ್ನ ಜೊತೆಗೆ ಕಾಂಪಿಟೇಷನ್ ಮಾಡಿ ಸೋತಳು. ಅವಳು ಗೆಲ್ಲಲಿ ಅಂತಾ ನಾನು ಬಹಳಷ್ಟು ಕೆಟ್ಟದಾಗಿ ಪರಫಾರ್ಮ ಮಾಡಿದ್ದೆ. ಆದರೂ ಸಹ ಸೋತಳು. ಕ್ವೀಜ ಕಾಂಪಿಟೇಷನಲ್ಲಂತು ಅವಳ ಈಗೋಗೆ ಬಹಳಷ್ಟು ಹರ್ಟಾಯಿತು. ![]() ಅವಳು ಸ್ಕೂಲಲ್ಲಿ ದಿನಾ ನನ್ನೆಡೆಗೆ ಕ್ರಾಸಲುಕ ಕೊಡುವಾಗ ನನಗೆ ಬೇಜಾರಾಗುತ್ತಿತ್ತು. ಅವಳು ನನ್ನೊಂದಿಗೆ ನೇರವಾಗಿ ಮಾತನಾಡುತ್ತಿರಲಿಲ್ಲ. ಆದರೆ ಇನಡೈರೆಕ್ಟಾಗಿ ಕಾಲೆಳೆಯುತ್ತಿದ್ದಳು. ಅವಳ ಗೆಳತಿಯರ ಮುಂದೆ ನನ್ನ ಬೈಯ್ಯುತ್ತಿದ್ದಳು. ನಾನು ಯಾವುದಕ್ಕೂ ಕೇರ ಮಾಡದೆ ನನ್ನ ಓದಿನಲ್ಲಿ ಬಿಜಿಯಾದೆ. ಏಕೆಂದರೆ ನಾನು 9th ಕ್ಲಾಸಲ್ಲಿದ್ದಾಗ ನಮ್ಮ ಇಂಗ್ಲೀಷ್ ಟೀಚರ ತುಂಬಿದ ಕ್ಲಾಸಲ್ಲಿ ನನಗೆ "ಎದೆ ಸೀಳಿದರೆ ಎರಡಕ್ಷರ ಹೊರಬರಲ್ಲ, ಕಥೆ ಕವನಗಳಿಂದ ಹೊಟ್ಟೆ ತುಂಬಲ್ಲ, ಮೊದಲು ಸರಿಯಾಗಿ ಕ್ಲಾಸಿಗೆ ಅಟೆಂಡಾಗು..." ಅಂತೆಲ್ಲ ಬೈದು ನನ್ನ ಮಾನ ಮರ್ಯಾದೆಯನ್ನು ಮೂರಕಾಸಿಗೆ ಹರಾಜಾಕಿದ್ದರು. ಆಗ ಅವಳ ಮುಖದ ಮೇಲಿನ ಖುಷಿಯನ್ನು ನೋಡಿ ನನಗೆ ಮತ್ತೆಮತ್ತೆ ನಮ ಇಂಗ್ಲೀಷ್ ಟೀಚರ ಕಡೆಯಿಂದ ಬೈಯ್ಯಿಸಿಕೊಳ್ಳಬೇಕು ಅಂತಾ ಅನಿಸ್ತಾಯಿತ್ತು. ಅಷ್ಟೊಂದು ಖುಷಿಯಾಗಿದ್ದಳು ಅವಳು ಆ ದಿನ. ಆದರೆ ನನ್ನ ಈಗೋಗೆ ಅವತ್ತು ಬಹಳಷ್ಟು ಹರ್ಟಾಗಿತ್ತು. ಆಗಲೇ ನಾನು "10th ಎಕ್ಸಾಮಲ್ಲಿ ನಾನೇ ಟಾಪ ಮಾಡೋದು..." ಅಂತಾ ಫಿಕ್ಸಾಗಿದ್ದೆ. ಅದಕ್ಕೆ ಅವತ್ತಿನಿಂದಲೇ ನಾನು ಚೆನ್ನಾಗಿ ಸ್ಟಡಿ ಮಾಡಲು ಪ್ರಾರಂಭಿಸಿದ್ದೆ. ಈಗ 10thಗೆ ಬಂದಾಗ ಬಹಳಷ್ಟು ಸೀರಿಯಸ್ಸಾಗಿ ಸ್ಟಡಿ ಮಾಡ್ತಿದ್ದೆ. ಆದರೆ ಅವಳಿಗೆ ಇದು ಗೊತ್ತಿರಲಿಲ್ಲ. ಅವಳು ನಾನು ಕಲ್ಚರಲ್ ಆ್ಯಕ್ಟಿವಿಟಿಯಲ್ಲಿ ಮಾತ್ರ ಬಿಜಿಯಿದಿನಿ ಅಂತಾ ನನ್ನ ಇಗ್ನೋರ ಮಾಡಿದಳು. ಆದರೆ ನಾನು ಅದರ ಜೊತೆಗೆ ಸ್ಟಡಿಯಲ್ಲಿ ಕೂಡ ಬಹಳಷ್ಟು ಬಿಜಿಯಾಗಿದ್ದೆ. ಅವಳು ನಮ್ಮ ಕ್ಲಾಸಲ್ಲಿನ ಫಸ್ಟಬೆಂಚ್ ಗೂಬೆಗಳ ಜೊತೆಗೆ ಮಾತಾಡುತ್ತಿದ್ದಳು. ನೋಟ್ಸ ಶೇರ್ ಮಾಡುತ್ತಿದ್ದಳು. ನಾನು ಲಾಸ್ಟ ಬೆಂಚರ ಅಂಥ ನನಗೆ ಯಾರು ಅಷ್ಟೊಂದು ಇಂಪಾರಟನ್ಸ ಕೊಡುತ್ತಿರಲಿಲ್ಲ. ಕ್ಲಾಸ ಆಚೆ ನನಗೆ ಬೆಲೆಯಿದ್ದರೂ ಕ್ಲಾಸಲ್ಲಿ ನನಗೆ ಕವಡೆ ಕಾಸಿನ ಬೆಲೆ ಇರಲಿಲ್ಲ. ಆದರೂ ಅವಳು ನನ್ನ ದುಶ್ಮನ ತರ ನೋಡುತ್ತಿದ್ದಳು. ನಾನು ಸ್ಟಡಿ ಮಾಡ್ತಿದೀನಿ ಅನ್ನೋದು ನನಗಷ್ಟೇ ಗೊತ್ತಿತ್ತು. ಹೀಗೆ ಮೌನಯುದ್ಧದಲ್ಲಿ ನಮ್ಮ 10th ಬೋರ್ಡ ಎಕ್ಸಾಮ ಬಂತು. ನಾನು ಚೆನ್ನಾಗಿ ಪ್ರೀಪೇರಾಗಿದ್ದೆ. ಸೋ ಯಾವುದೇ ಟೆನ್ಶನ ಇಲ್ಲದೆ ಎಕ್ಸಾಮ ಬರೆದೆ. ಕೊನೆಯ ಎಕ್ಸಾಮ ದಿನ ನಾನವಳನ್ನು ಕೊನೆಯ ಸರತಿ ನೋಡಿದ್ದು. ಆದಾದ ಮೇಲೆ ನಾನವಳನ್ನು ಇಲ್ಲಿ ತನಕ ನೇರವಾಗಿ ನೋಡೇ ಇಲ್ಲ. ನಮ್ಮ ರಿಜಲ್ಟ ಬಂತು. ಎಲ್ಲರೂ ಅವಳು ಟಾಪ ಮಾಡಿರತಾಳೆ ಅಂತಾ ಅನ್ಕೊಂಡಿದ್ದರು. ನಮ್ಮ ಟೀಚರ್ಸರೆಲ್ಲ ಅವಳಿಗೆ ಸನ್ಮಾನ ಮಾಡೋಕೆ ಎಲ್ಲ ತಯಾರಿ ಮಾಡಿಕೊಂಡಿದ್ದರು. ಆದರೆ ನಾನು ಟಾಪ ಮಾಡಿದ್ದೆ. ನಾನು 95.68% ಮಾಡಿ ಸೆಂಟರಗೆ ಫಸ್ಟ ಬಂದಿದ್ದೆ. ಅವಳು 89% ಮಾಡಿ ಸೆಕೆಂಡ್ ಬಂದಿದ್ದಳು. ಯಾರಿಗೂ ಈ ರಿಜಲ್ಟನ್ನು ನಂಬಲಾಗಲಿಲ್ಲ. ಏಕೆಂದರೆ ಯಾರಿಗೂ ನನ್ನ ಮೇಲೆ ಯಾವುದೇ ತರಹದ ನಂಬಿಕೆ ಇರಲಿಲ್ಲ. ನಾನು ಕ್ಲಾಸಲ್ಲಿ ಬೈಯ್ಯಿಸಿಕೊಂಡಾಗ ಅವಳು ಎಷ್ಟು ಖುಷಿಪಟ್ಟಿದ್ದಳೋ ಅದಕ್ಕಿಂತಲೂ ಹೆಚ್ಚಿನ ದು:ಖವನ್ನು ಅವಳು ರಿಜಲ್ಟ ಬಂದ ದಿನ ಅನುಭವಿಸಿದಳು. ಅವತ್ತವಳು ಕಣ್ಣೀರಾಕಿದಳು. ನನಗೆ ಇದರಿಂದ ಸ್ವಲ್ಪ ಬೇಜಾರಾಯಿತು. ಏಕೆಂದರೆ ನನ್ನ ಗೆಲುವನ್ನು ಸಂಭ್ರಮಿಸಲು ನನ್ನೊಂದಿಗೆ ನನ್ನ ಬೆಸ್ಟ ಫ್ರೆಂಡ ಒಬ್ಬಳನ್ನು ಬಿಟ್ಟು ಬೇರೆ ಯಾರು ಇರಲಿಲ್ಲ. ಎಲ್ಲರೂ ಅವಳನ್ನು ಸಮಾಧಾನ ಮಾಡುವಲ್ಲಿ ಬಿಜಿಯಾಗಿದ್ದರು. ನಾನು ಎಲ್ಲವನ್ನೂ ತಲೆಯಿಂದ ಡಿಲಿಟ ಮಾಡಿ ಧಾರವಾಡಕ್ಕೆ ಫಸ್ಟ ಪಿಯುಸಿ ಸಾಯನ್ಸಗೆ ಜಾಯಿನಾದೆ. ಓದಿನಲ್ಲಿ ಮತ್ತೆ ಕಥೆ, ಕವನ, ಕಬ್ಬಡ್ಡಿ, ಚೆಸಗಳಲ್ಲಿ ಕಳೆದೊದೆ. ಪಿಯುಸಿ ಆಯ್ತು, ನಂತರ ಬಿಎಸ್ಸಿ ಡಿಗ್ರಿ ಕೂಡ ಆಯ್ತು. ನನಗೆ ಅವಳ ನೆನಪು ಕೂಡ ಬಂದಿರಲಿಲ್ಲ. ಏಕೆಂದರೆ ನಾನು ನನ್ನ ಓದು, ಓದಿನ ಫೀಸ್ ಹೊಂದಿಸಲು ಎರಡೆರಡು ಪಾರ್ಟಟೈಮ ಕೆಲಸ ಅಂತೆಲ್ಲ ಬಿಜಿಯಾಗಿದ್ದೆ. ಗರ್ಲಫ್ರೆಂಡ ದೂರದ ಮಾತು ಬಾಯಫ್ರೆಂಡಗಳು ಸಹ ಯಾರಿರಲಿಲ್ಲ. ಡಿಗ್ರಿಗೆ ಬಂದಾಗ ತಲೆಯಲ್ಲಿ ಓಡುತ್ತಿದ್ದ ನೂರಾರು ಬಿಜನೆಸ ಐಡಿಯಾಗಳಿಂದ ನಾನು ನಿದ್ದೆಗೆಟ್ಟು ನರಳುತ್ತಿದ್ದೆ. ಹೇಗೋ ಸಕ್ಸೆಸಫುಲ್ಲಾಗಿ ಡಿಗ್ರಿ ಕಂಪ್ಲಿಟಾಯ್ತು. ನಂತರ ನಾನು ಫೋಟೋಗ್ರಾಫಿ, ಫಿಲ್ಮ ಮೇಕಿಂಗ್ ಹಾಗೂ ಬಿಜನೆಸ್ ಸ್ಟಡಿಗಳಲ್ಲಿ ಶಾರ್ಟ್ ಕೋರ್ಸ್ ಮಾಡಿ ನಾನು ನನ್ನ ಬಿಜನೆಸ್ ಸ್ಟಾರ್ಟ ಮಾಡಿದೆ. ಆರಂಭದಲ್ಲಿ ಮಾಡಿಕೊಂಡ ಎಂದೆರಡು ಸಣ್ಣ ಯಡವಟ್ಟುಗಳಿಂದ ಹಣದ ಕೊರತೆ ಎದುರಾಯಿತು. ಹಾಗಂತ ನನ್ನ ಸ್ಟಾರ್ಟಪನ್ನು ಅರ್ಧಕ್ಕೆ ನಿಲ್ಲಿಸುವ ಹೇಡಿತನ ನನಗೆ ಬರಲಿಲ್ಲ. ನಾನು ಕಾಲೇಜಿನಲ್ಲಿದ್ದಾಗ ಪಾರ್ಟಟೈಮ ಕಾರ ಡ್ರೈವರ ಕೆಲಸ ಮಾಡುತ್ತಿದ್ದೆ. ಈಗ ಅದೇ ಕೆಲಸವನ್ನು ಫುಲಟೈಮಾಗಿ ಮಾಡಬೇಕಾಯಿತು. ನಾನು ಅದನ್ನು ಖುಷಿಯಿಂದ ಮಾಡ್ತಾಯಿದ್ದೆ. ಏಕೆಂದರೆ ನಮ್ಮದು ಟ್ಯೂರಿಸಂಗೆ ಸಂಬಂಧಿಸಿದ ಸ್ಟಾರ್ಟಪ ಆಗಿರುವುದರಿಂದ ನನ್ನ ಕೆಲಸವೇ ನನ್ನ ಬಿಜನೆಸಗೆ ಬ್ಯಾಕಬೋನ ತರ ಸಪೋರ್ಟ್ ಮಾಡುತ್ತಿತ್ತು. ![]() ನಾನು ನನ್ನ ಆಫೀಸಿಯಲ್ ವೆಬಸೈಟ www.Skkannada.com ಮೂಲಕ ಬರೆಯುತ್ತಿದ್ದೆ. ಲಕ್ಷಾಂತರ ಓದುಗ ಬಳಗ ಸೃಷ್ಟಿಯಾಯಿತು. ಒಂದಿನ ನನ್ನ ಹೈಸ್ಕೂಲ್ ಹುಡುಗಿ 5 ವರ್ಷದ ನಂತರ ಫೇಸ್ಬುಕಲ್ಲಿ ನನಗೆ ಕಾಣಿಸಿದಳು. ನಾನು ಎರಡು ವರ್ಷದ ನಂತರ ನನ್ನ ಪರ್ಸನಲ್ ಫೇಸ್ಬುಕ್ ಅಕೌಂಟನ್ನು ಒಪನ ಮಾಡಿದಾಗ ನನ್ನ ಕಣ್ಣಿಗೆ ಅವಳ ಪ್ರೋಫೈಲ್ ಕಾಣಿಸಿತು. ನನಗೆ ಮತ್ತೆ ಮೊದಲ ಸಲ ಅವಳ ನೆನಪಾಯಿತು. ನಾನು ತಕ್ಷಣವೇ ಅವಳಿಗೆ ಫ್ರೆಂಡ ರಿಕ್ವೇಸ್ಟ ಕಳುಹಿಸಿದೆ. ಆದರೆ ಅವಳು ಆ್ಯಕ್ಸೆಪ್ಟ ಮಾಡದಿದ್ದರೆ ಬೇಜಾರಾಗುತ್ತೆ ಅಂತ ರಿಕ್ವೇಸ್ಟ ವಾಪಸ ತಗೊಂಡೆ. ಆದರವಳು ಅವಳಾಗೇ ಮತ್ತೆ ಫ್ರೆಂಡ ರಿಕ್ವೇಸ್ಟ ಕಳುಹಿಸಿದಳು. ನನ್ನ ಖುಷಿಗೆ ಪಾರವೇ ಇರಲಿಲ್ಲ. ನಾನವಳ ಫ್ರೆಂಡ ರಿಕ್ವೇಸ್ಟ ಆ್ಯಕ್ಸೆಪ್ಟ ಮಾಡಿದೆ. ಆ ಕ್ಷಣವೇ ಅವಳು ನನಗೆ ಹಾಯ್ ಅಂತ ಮೆಸೆಜ ಕಳುಹಿಸಿದಳು. ನಾನು ಹಾಯ ಅಂತಾ ರಿಪ್ಲೆ ಮಾಡಿದಾಗ ಚಾಟ ಶುರುವಾಯಿತು. ಎರಡ್ಮೂರು ದಿನ ಹಗಲು ರಾತ್ರಿ ಚಾಟ ಮಾಡಿದಾಗ ನನಗವಳು ಈಗ ಮೆಡಿಕಲ್ ಸ್ಟಡಿ ಮಾಡ್ತಿದಾಳೆ, ಮುಂದೆ ಒಂದ ವರ್ಷದಲ್ಲಿ ಡಾಕ್ಟರಾಗುತ್ತಾಳೆ ಅಂತಾ ಗೊತ್ತಾಯಿತು. ಕೊನೆಗೂ ನನ್ನನ್ನು ದುಶ್ಮನ ತರ ಟ್ರೀಟ ಮಾಡುತ್ತಿದ್ದ ಹುಡುಗಿ ಫ್ರೆಂಡ ಆದಳಲ್ಲ ಅಂತ ನಾನು ಬಹಳಷ್ಟು ಖುಷಿಯಾಗಿದ್ದೆ. ಒಂದು ವಾರದ ತನಕ ನಮ್ಮಿಬ್ಬರ ಚಾಟ ನಡಿತಾ ಇತ್ತು. ಚಾಟಲ್ಲಿ ಬರೀ ಅವಳು ತನ್ನ ಬಗ್ಗೆಯೇ ಮಾತಾಡುತ್ತಿದ್ದಳು. ಕಾಲೇಜಲ್ಲಿ ಅವಳ ಹವಾ ಸಖತ್ತಾಗಿದೆ ಅಂತೆಲ್ಲ ಹೇಳುತ್ತಿದ್ದಳು. ನನ್ನ ಬಗ್ಗೆ ಇಲ್ಲಿ ತನಕ ಏನು ಕೇಳಿರಲಿಲ್ಲ. ಒಂದಿನ ನನಗೆ "ಈಗ ಯಾವ ಕೋರ್ಸ ಮಾಡ್ತಿದಿಯಾ? MSc ಹೇಗ ನಡಿತಿದೆ?" ಅಂತಾ ಕೇಳಿದಳು. ನಾನದಕ್ಕೆ "ನಾನು ಸ್ಟಡಿ ಕಂಟಿನ್ಯು ಮಾಡಿಲ್ಲ. ಸ್ಟಾರ್ಟಪ ಸ್ಟಾರ್ಟ ಮಾಡಿರುವೆ, ಹಣದ ಕೊರತೆಯಿಂದಾಗಿ ಟೂರಿಸ್ಟ ಟ್ರಾವೆಲ್ಸ ಕಾರಗಳಿಗೆ ಡ್ರೈವರ ಕೆಲಸ ಮಾಡ್ತಿರುವೆ..." ಅಂತಾ ಇರೋ ವಿಷಯವನ್ನು ಹೇಳಿದೆ. ಆದರೆ ಆಕೆ ನನಗೆ "What? ನೀನು ಸ್ಟಡಿ ಕಂಟಿನ್ಯುವ ಮಾಡಿಲ್ವಾ? Oh Shit, ನೀನು ಏನೋ ಆಗ್ತಿಯಾ ಅಂತಾ ನಾನು ಅನ್ಕೊಂಡಿದ್ದೆ. ಆದರೆ ನೀನು ಡ್ರೈವರ ಆಗಿದಿಯಲ್ಲ. I can't continue relationship with you. Sorry bye..." ಅಂತೇಳಿ ತಕ್ಷಣವೇ ನನ್ನ ಬ್ಲಾಕ್ ಮಾಡಿದಳು. ಅವಳು ನನ್ನ ದುಡ್ಡಿನಿಂದ, ಸ್ಟೇಟಸನಿಂದ ಅಳೆದು ದೂರಾದಳು. ಅವಳು ಡಾಕ್ಟರ ಆಗೋಳು, ನಾನು ಡ್ರೈವರ ಅಂದ್ರೆ ಅವಳಿಗೆ ನಂಜೊತೆಗೆ ಫ್ರೆಂಡಶೀಪ ಮಾಡೋಕೆ ಮುಜುಗುರ ಆಗಿರಬಹುದು ಅಂತಂದುಕೊಂಡು ನಾನು ಸುಮ್ಮನಾದೆ. ಆದರೆ ಅವಳು ನನ್ನ ಬಗ್ಗೆ ಊರಲ್ಲಿ ಎಲ್ಲರಿಗೂ ಕೇವಲವಾಗಿ ಹೇಳಿಕೊಂಡು ತಿರುಗಾಡ್ತಿದಾಳೆ ಅನ್ನೋ ಸುದ್ದಿಗಳು ಬಂದವು. ಆದ್ರೆ ನಾನು ಗಾಳಿ ಸುದ್ದಿಗಳಿಗೆ ಅಷ್ಟೊಂದು ಬೆಲೆ ಕೊಡಲ್ಲ. ಸೋ ಇಗ್ನೋರ ಮಾಡಿ ಸುಮ್ಮನಾದೆ. ನಾನು ಸ್ಕೂಲಲ್ಲಿರುವಾಗ ಅವಳೊಂದಿಗೆ ಫ್ರೆಂಡಶೀಪ ಮಾಡಬೇಕು ಅಂತಷ್ಟೇ ಬಯಸಿದ್ದೆ. ಬೇರೆ ಯಾವ ಫೀಲಿಂಗ್ಸೂ ಇರಲಿಲ್ಲ. ಅವಳೇನು ನನ್ನ ಕ್ರಷಲ್ಲ, ಒನವೇ ಪ್ರೇಯಸಿಯೂ ಅಲ್ಲ. She is nothing to me. ಆದರೂ ಅವಳು ನಾನು ಡ್ರೈವರಂತ ಗೊತ್ತಾದಾಗ ನನ್ನ ಫ್ರೆಂಡಶೀಪ ಕಟ ಮಾಡಿದಳಲ್ಲ ಅಂತಾ ಸಿಕ್ಕಾಪಟ್ಟೆ ಬೇಜಾರಾಯಿತು. ನಂತರ ಒಂದು ವಾರದಲ್ಲೇ ನನಗೆ ಬ್ಯಾಂಕ್ ಲೋನ ಸಿಕ್ಕಿತು. ನಾನು ಮತ್ತೆ ನನ್ನ ಸ್ಟಾರ್ಟಪ ಕಂಟಿನ್ಯುವ ಮಾಡಿದೆ. ಅದು ಒಂದು ವರ್ಷದೊಳಗೆ ಪ್ರೋಫಿಟಿಗೆ ಬಂತು. ನಾನು ಕನಸಲ್ಲೂ ಊಹಿಸಿರದಷ್ಟು ಹಣ ಹರಿದು ನಮ್ಮ ಕಂಪನಿ ಬ್ಯಾಂಕ್ ಅಕೌಂಟಿಗೆ ಬಂತು. ನಾನು ಲೈಫಲ್ಲಿ ಸೆಟ್ಲಾಗಿರುವೆ. ನನಗೆ ಈಗ ಹಣದ ಕೊರತೆಯಿಲ್ಲ. ಆದರೆ ನನ್ನ ಕನಸುಗಳಿಗೆ ಸದ್ಯಕ್ಕೆ ನನ್ನ ಬಳಿಯಿರುವ ಕೋಟಿ ಹಣ ಸಾಕಾಗಲ್ಲ. ಏಕೆಂದರೆ ಆರ್ಡಿನರಿಯಾಗಿ ಬದುಕಿ ಹೆಸರಿಲ್ಲದೆ ಸಾಯೋ ಜಾಯಮಾನ ನನ್ನದಲ್ಲ. ನನ್ನ ಕನಸಿನ ಪ್ರೊಜೆಕ್ಟಗೆ 100 CR ಬೇಕು. ನಾನು ನನ್ನ ಬಳಿಯಿರುವ ಎಲ್ಲ ಅಸೆಟ್ಸಗಳ ಜೊತೆಗೆ ನನ್ನನ್ನು ಮಾರಿಕೊಂಡಾಗ ಅದರ 1% ಹಣ ಅರೇಂಜ್ ಆಗುತ್ತೆ ಅಷ್ಟೇ. ಇನ್ನು 99% ಹಣಕ್ಕಾಗಿ ನಾನು ಹಗಲು ರಾತ್ರಿ ಕೆಲಸ ಮಾಡಲೇಬೇಕು. ![]() ಅವಳು ನನ್ನನ್ನು ಸ್ಟೇಟಸನಿಂದ ಅಳೆದ ದಿನವೇ ನನಗೆ ಹುಡುಗಿಯರ ಫ್ರೆಂಡಶೀಪ ಹಾಗೂ ಪ್ರೀತಿಯ ಮೇಲಿನ ನಂಬಿಕೆ ಹೊರಟು ಹೋಗಿದೆ. ಈದಾದ ನಂತರವೂ ಒಂದಿಬ್ಬರು ಹುಡುಗಿಯರು ಬಂದು ಫ್ರೆಂಡಶೀಪ ಮಾಡೋ ಪ್ರಯತ್ನ ಮಾಡಿದರು. ಆದರೆ ನಾನು ನನ್ನ ಸ್ಟಾರ್ಟಪಗಳಲ್ಲಿ ಬಿಜಿಯಾಗಿದ್ದೆ. ನಾನು ನಮ್ಮ ಮ್ಯಾನೇಜರ್ ಕಾಲ್ ಬಿಟ್ಟರೆ ಬೇರೆ ಯಾವುದಕ್ಕೂ ರೆಸ್ಪೋನ್ಡ ಮಾಡುತ್ತಿರಲಿಲ್ಲ. ಆ ಹುಡುಗಿಯರಿಗೆ ಟೈಮ ಕೊಡಲಾಗಲಿಲ್ಲ ನನಗೆ. ಅವರೊಂದಿಗೆ ನೇರವಾಗಿ ಒಂದಿನ ಮಾತನಾಡಲು ಸಹ ನನಗೆ ಆಗಲಿಲ್ಲ. ಅವರು ಬಯಸುವಂತೆ ಅವರೊಂದಿಗೆ ಸಿನಿಮಾ, ಪಾರ್ಕು, ಕ್ಲಬ್ ಸುತ್ತುವಷ್ಟು ಸಮಯವೂ ನನಗಾಗ ಇರಲಿಲ್ಲ. ಏಕೆಂದರೆ ಸಾರ್ಟಪ ಅಂದರೆ ಸುಮ್ಮನೆ ಅಲ್ಲ. ಆಫೀಸ್ ಕಸ ಗೂಡಿಸುವುದರಿಂದ ಹಿಡಿದು ಕಂಪನಿ ಲೀಡಿಂಗ ತನಕ ಎಲ್ಲವನ್ನೂ ನಾವೇ ಮಾಡಬೇಕಾಗುತ್ತದೆ. ಎಲ್ಲರೂ ವೀಕೆಂಡ್ ಪಾರ್ಟಿ ಮಾಡುತ್ತಿರುವಾಗ ನಾವು ಮುಂದಿನ ಆರು ತಿಂಗಳ ಸೇಲ್ಸ ಪ್ಲ್ಯಾನ ಮಾಡಬೇಕಾಗುತ್ತದೆ. ಬಂದ ಪ್ರೋಫೀಟನಲ್ಲಿ ಟೀಮ ಮೆಂಬರಗಳಿಗೆ ಸ್ಯಾಲರಿ ಕೊಟ್ಟು ಖಾಲಿ ಕೈಯಲ್ಲಿ ತಿರುಗಬೇಕಾಗುತ್ತದೆ. Entrepreneurship ಅಂದ್ರೆ ಹಿಂಗೆನೆ. ಸಕ್ಸೆಸಫುಲ್ ಆದಾಗ ಸಾವಿರ ಸುಂದರಿಯರು ಕ್ಯೂನಲ್ಲಿ ಕಾಯ್ತಾರೆ. ಆದರೆ ಸ್ಟ್ರಗಲ ಮಾಡುವಾಗ ಯಾವಳು ಮಾತನಾಡಿಸಲ್ಲ. ಅದಕ್ಕೆ ಅವರು ನನ್ನೊಂದಿಗೆ ಫ್ರೆಂಡಶೀಪ ಕೂಡ ಮಾಡಲಿಲ್ಲ. ನಾನು ಎಲ್ಲ ಹುಡುಗರ ತರಹ ಕೆಲಸ ಕಾರ್ಯ ಎಲ್ಲ ಬಿಟ್ಟು ಅವರ ಹಿಂದೆ ಅಲೆಯಲ್ಲ ಎಂಬುದು ಅವರಿಗೆ ಒಂದು ವಾರದಲ್ಲೇ ಗೊತ್ತಾಯಿತು. ಅದಕ್ಕೆ ಅವರು ಸೈಲೆಂಟಾಗಿ ಕಣ್ಮರೆಯಾದರು. ಲಾಕಡೌನನಲ್ಲಿ ನಾನು ಆರು ತಿಂಗಳು ಮಹಾಬಲೇಶ್ವರದಲ್ಲಿ ತುಂತುರು ಮಳೆ, ಹಸಿರು ಕಾಡು ಹಾಗೂ ನಿಸರ್ಗದ ಜೊತೆಗೆ ಕಾಲ ಕಳೆಯುತ್ತಾ ಹಾಯಾಗಿದ್ದೆ. ಆಗ ನನ್ನ ಬೆಸ್ಟ ಫ್ರೆಂಡ ನನಗೆ "ಎಲ್ಲ ಇದ್ರೂ ಯಾಕ ಸಿಂಗಲಾಗಿದಿಯಾ? ಬರೀ 24ನೇ ವಯಸ್ಸಿಗೇನೆ ವೈರಾಗ್ಯ ಯಾಕ ಬಂತು ನಿನಗೆ?" ಅಂತಾ ಕೇಳಿ ಕೇಳಿ ತಲೆ ತಿಂದಳು. ಆಗ ಅವಳಿಗೆ ಇರೋ ಕಾರಣ ಹೇಳುವಾಗ ನನ್ನ ಪಾರ್ಟಟೈಮ ಫೇಸ್ಬುಕ್ ಗೆಳತಿ ಮತ್ತೆ ನೆನಪಾದಳು. ಅದಕ್ಕೆ ಈ ನೈಜ ಕಥೆಯನ್ನು ಬರೆಯಲೇಬೇಕಾಯಿತು. ನನಗೇನು ಹುಡುಗಿಯರ ಮೇಲೆ ಕೆಟ್ಟ ಅಭಿಪ್ರಾಯವಿಲ್ಲ. ಏಕೆಂದರೆ ಎಲ್ಲ ಹುಡುಗಿಯರು ಹಣ ನೋಡಲ್ಲ ಅಂತ ಗೊತ್ತು. ಆದರೆ ಈಗ ಸ್ನೇಹ, ಪ್ರೀತಿ ಹಾಗೂ ಮದುವೆ ಎಲ್ಲವೂ ಕಮರ್ಷಿಯಲ್ ಆಗಿವೆ. ಒಂಥರಾ ಬಿಜನೆಸ ಆಗಿವೆ. ಸ್ನೇಹ, ಪ್ರೀತಿ ಹಾಗೂ ಮದುವೆಯಾಗೋಕ್ಕಿಂತ ಮುಂಚೆ ಈಗ ಎಲ್ಲರೂ ಹಣ, ಆಸ್ತಿ, ಅಂತಸ್ತು, ಜಾಬ್, ಬ್ಯಾಂಕ್ ಬ್ಯಾಲನ್ಸ ನೋಡಿ ಅಳೆದು ತೂಗಿ ಸಂಬಂಧ ಬೆಳೆಸ್ತಾರೆ. ನಾನು ಬಿಜನೆಸ್ಸಲ್ಲಿ ಲಾಭ ಇರದಿದ್ದರೂ ಕೆಲವೊಂದಿಷ್ಟು ಸಲ ಖುಷಿಗಾಗಿ ಕೆಲಸ ಮಾಡ್ತಿನಿ. ಆದ್ರೆ ಇವರು ಲಾಭ ಇರದಿದ್ದರೆ ಏನನ್ನು ಮಾಡಲ್ಲ. ಪ್ರೀತಿ, ಮದುವೆ ದೂರದ ಮಾತು. ಅಟ್ ಲೀಸ್ಟ ಫ್ರೆಂಡಶೀಪ ಸಹ ಮಾಡಲ್ಲ. ಸರಿಯಾಗಿ ಮಾತೂ ಆಡಲ್ಲ. ಯಾವುದೇ ಸ್ವಾರ್ಥವಿರದ ಸ್ನೇಹ, ಪ್ರೀತಿ, ಬಾಳ ಸಂಗಾತಿ ಈಗಿನ ಕಾಲದಲ್ಲಿ ಸಿಗ್ತಾಳೆ ಅನ್ನೋ ನಂಬಿಕೆ ನನಗಿಲ್ಲ. ಅಲ್ಲದೇ ಅವಳನ್ನು ಹುಡುಕಾಡೋವಷ್ಟು ಟೈಮೂ ನನಗಿಲ್ಲ. ನನ್ನ ಪಾರ್ಟಟೈಮ ಗೆಳತಿ ನನಗೆ ಪೂರ್ತಿ ಜೀವನಕ್ಕಾಗೋವಷ್ಟು ಪಾಠವನ್ನು ಕಲಿಸಿದ್ದಾಳೆ. ಅವಳೀಗ ಎಲ್ಲಿದ್ದಾಳೆ? ಬದುಕಿದ್ದಾಳಾ ಅಥವಾ ಇಲ್ವಾ ಎಂಬುದು ಯಾವುದು ಗೊತ್ತಿಲ್ಲ. ಆದರೆ ಅವಳು ಕೊಟ್ಟ ಒಂದು ಕಹಿ ನೆನಪು ಆವಾಗಾವಾಗ ಕಾಡುತ್ತೆ. ಅದಕ್ಕೆ ನಾನು ನನ್ನನ್ನು, ನನ್ನ ಕಂಪನಿಯನ್ನು, ನನ್ನ ಸ್ಟಾರ್ಟಪಗಳನ್ನು, ನಮ್ಮ ದೇಶವನ್ನು ಪ್ರೀತಿಸುತ್ತಿರುವೆ. ಈ ಪ್ರೀತಿಯಲ್ಲಿ ಬಹಳಷ್ಟು ಖುಷಿಯಾಗಿರುವೆ. ಈ ಖುಷಿಯನ್ನು ಕಿತ್ತುಕೊಳ್ಳಲು ಯಾವುದೇ ಪಾರ್ಟಟೈಮ ಪ್ರೇಯಸಿ ಬರದಿರಲಿ ಎಂಬ ಪ್ರಾರ್ಥನೆಯಿದೆ, ಯಾವುದೇ ಸ್ವಾರ್ಥವಿಲ್ಲದೆ ಪ್ರೀತಿಸಿ, ಕನಸ್ಸಲ್ಲೂ ಮೋಸ ಮಾಡದೇ ಜೀವನಪೂರ್ತಿ ಜೊತೆಗಿರ್ತಿನಿ ಅನ್ನೋ ಗುಣವಂತೆ ಬಂದರೆ ಸ್ವಾಗತವಿದೆ.... ![]() |
7) ನಳ ದಮಯಂತಿಯ ಪ್ರೇಮಕಥೆ : Olden Golden Love story of Nala Damayanti in Kannada
ದಮಯಂತಿ ವಿದರ್ಭ ದೇಶದ ರಾಜ ಭೀಷ್ಮಕನ ಮಗಳು. ಅವಳು ಗುಣವತಿ, ರೂಪವತಿ ಎರಡೂ ಆಗಿದ್ದಳು. ಅಷ್ಟದಿಕ್ಕುಗಳಲ್ಲಿಯೂ ಅವಳ ಗುಣಗಾನ ಹಬ್ಬಿತ್ತು. ಅವಳನ್ನು ಮದುವೆಯಾಗಲು ಎಲ್ಲ ದೇಶದ ರಾಜಕುಮಾರರು ಸಿದ್ಧರಿದ್ದರು. ಆದರೆ ದಮಯಂತಿ ನಿಷಧ ದೇಶದ ರಾಜಕುಮಾರ ನಳನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಅವಳ ಪ್ರೀತಿ ಪವಿತ್ರವಾಗಿತ್ತು. ಏಕೆಂದರೆ ಆಕೆ ನಳನನ್ನು ಮುಖ ನೋಡದೆ ಪ್ರೀತಿಸುತ್ತಿದ್ದಳು. ಹೇಗೆ ದಮಯಂತಿಯ ಸೌಂದರ್ಯದ ಖ್ಯಾತಿ ಎಲ್ಲೆಡೆಗೆ ಹಬ್ಬಿತ್ತೋ ಅದೇ ರೀತಿ ನಳ ಮಹಾರಾಜನ ಶೌರ್ಯ, ಸದ್ಗುಣಗಳ ಕೀರ್ತಿ ಎಲ್ಲೆಡೆಗೆ ಹಬ್ಬಿತ್ತು. ಒಂದಿನ ನಳ ಮಹಾರಾಜನು ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗ ಕೊಳದಲ್ಲಿನ ಒಂದು ಹಂಸವನ್ನು ಹಿಡಿದನು. ಆಗ ಆ ಹಂಸ "ದಯಾಳು ರಾಜನೇ, ದಯಮಾಡಿ ನನ್ನನ್ನು ಬಿಟ್ಟು ಬಿಡು. ನಾನು ದಮಯಂತಿಯ ಬಳಿ ಹೋಗಿ ನಿನ್ನ ಗುಣಗಾನ ಮಾಡುವೆ..." ಎಂದೇಳಿತು. ಅದಕ್ಕಾತ ಆ ಹಂಸವನ್ನು ಸುಮ್ಮನೆ ಬಿಟ್ಟನು. ನಂತರ ಆ ಹಂಸ ದಮಯಂತಿಯ ಬಳಿ ಹೋಗಿ ನಳ ಮಹಾರಾಜನ ಶೌರ್ಯ, ಸಾಹಸ, ಸದ್ಗುಣಗಳ ಪ್ರಶಂಸೆ ಮಾಡಿ "ನಿನಗೆ ಯೋಗ್ಯನಾದ ವರನೇಂದರೆ ನಳ ರಾಜನೇ..." ಎಂದೇಳಿತು. ಪ್ರೇಮ ಸಂದೇಶ ತಂದ ಆ ಹಂಸಕ್ಕೆ ದಮಯಂತಿ ಧನ್ಯವಾದಗಳನ್ನು ಅರ್ಪಿಸಿ ನಳನ ನೆನಪಲ್ಲಿ ಕಳೆದೋದಳು. ಈ ರೀತಿ ರಾಜಹಂಸದ ಮೂಲಕ ನಳ ದಮಯಂತಿಯರಿಬ್ಬರು ಪರಸ್ಪರ ಪರಿಚಿತರಾಗಿ ಪ್ರೇಮಪಕ್ಷಿಗಳಾದರು.
ದಮಯಂತಿ ನಳನ ನೆನಪುಗಳಲ್ಲಿ ಖುಷಿಯಾಗಿದ್ದಳು. ಆದರೆ ಶನಿ ನಳನನ್ನು ಕಾಡಲು ಕಾಯುತ್ತಿದ್ದನು. ಅಂಥ ಸಮಯದಲ್ಲಿಯೇ ಭೀಷ್ಮಕ ರಾಜ ದಮಯಂತಿಯ ಸ್ವಯಂವರವನ್ನು ಏರ್ಪಡಿಸಿದನು. ಈ ಸುದ್ದಿಯನ್ನು ಕೇಳಿದ ತಕ್ಷಣವೇ ನಳ ಸ್ವಯಂವರದಲ್ಲಿ ಭಾಗವಹಿಸಲು ವಿದರ್ಭ ದೇಶಕ್ಕೆ ಪ್ರಯಾಣ ಬೆಳೆಸಿದನು. ನಳ ಸರಿಯಾಗಿ ನಿಯಮ ಪಾಲನೆ ಮಾಡುತ್ತಾ ರಾಜ್ಯಭಾರ ಮಾಡುತ್ತಿದ್ದನು. ಹೀಗಾಗಿ ಅವನನ್ನು ಕಾಡುವುದು ಶನಿದೇವನಿಗೆ ಕಷ್ಟದ ಕೆಲಸವಾಗಿತ್ತು. ಅದಕ್ಕಾಗಿ ಆತ ದೇವೇಂದ್ರನಿಗೆ ದಮಯಂತಿಯ ಸ್ವಯಂವರಕ್ಕೆ ಹೋಗಲು ಪ್ರೇರೆಪಿಸಿದನು. ದಮಯಂತಿಯ ಸೌಂದರ್ಯದ ಬಗ್ಗೆ ಬಹಳಷ್ಟು ಕೇಳಿದ್ದ ದೇವೇಂದ್ರ ಅವಳನ್ನು ಮದುವೆಯಾಗುವ ಕನಸನ್ನು ಹೊತ್ತು ಸ್ವಯಂವರಕ್ಕೆ ಹೊರಡಲು ಸಿದ್ಧನಾದನು. ಶನಿದೇವನು ದೇವೆಂದ್ರನನ್ನು ದಮಯಂತಿಯ ಸ್ವಯಂವರಕ್ಕೆ ಕಳುಹಿಸುವ ಮೂಲಕ ತನ್ನ ಕಾಡಾಟವನ್ನು ಪ್ರಾರಂಭಿಸಿದನು.
ದೇವೇಂದ್ರ ಅಗ್ನಿ, ವರುಣ ಮತ್ತು ವಾಯುದೇವರ ಸಮೇತ ದಮಯಂತಿಯ ಸ್ವಯಂವರಕ್ಕೆ ಹೋದನು. ದಾರಿಮಧ್ಯೆದಲ್ಲಿ ಅವರಿಗೆ ಉತ್ಸಾಹದಿಂದ ಹೊರಟಿರುವ ನಳ ಮಹಾರಾಜ ಕಂಡನು. ಆಗ ದೇವೇಂದ್ರ ನಳನನ್ನು ಕರೆದು "ನೀನು ಪ್ರೇಮ ದ್ಯೂತನಾಗಿ ಹೋಗಿ ದಮಯಂತಿಗೆ ದೇವತೆಗಳಲ್ಲಿ ಯಾರಾದರೂ ಒಬ್ಬರನ್ನು ಮದುವೆಯಾಗುವಂತೆ ಹೇಳು..." ಎಂದೇಳಿ ದೇವತೆಗಳೊಂದಿಗೆ ಮಾಯವಾದನು. ನಳ ಮಹಾರಾಜ ದೇವೇಂದ್ರ ಹೇಳಿದಂತೆಯೇ ದಮಯಂತಿಗೆ ತಿಳಿಸಿದನು. ಆದರೆ ಆಕೆ ದೇವೇಂದ್ರನ ಕೋರಿಕೆಯನ್ನು ತಳ್ಳಿಹಾಕಿದಳು. ಮೊದಲೇ ಆಕೆ ಮುಖ ನೋಡದೆ ನಳನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಈಗ ನಳನೇ ಕಣ್ಣೆದುರಿಗೆ ಬಂದಾಗ ಅವನನ್ನು ಮದುವೆಯಾಗುವ ಮನದಾಸೆಗೆ ಶರಣಾದಳು. ಅವಳ ಪ್ರೀತಿಯನ್ನು ಒಪ್ಪಿಕೊಂಡು ನಳ ಅವಳನ್ನು ಮದುವೆಯಾಗಲು ನಿರ್ಧರಿಸಿದನು. ನಂತರ ದಮಯಂತಿಯ ನಿರ್ಧಾರವನ್ನು ದೇವತೆಗಳಿಗೆ ತಿಳಿಸಿ ನಳ ನಾಳೆಯ ಸ್ವಯಂವರಕ್ಕೆ ಸಿದ್ಧನಾಗತೊಡಗಿದನು.
ಮಾರನೇ ದಿನ ದಮಯಂತಿ ಮಾಲೆ ಹಿಡಿದುಕೊಂಡು ಸ್ವಯಂವರಕ್ಕೆ ಬಂದಾಗ ನಳನನ್ನು ಗುರ್ತಿಸಲಾಗದೆ ಕಕ್ಕಾಬಿಕ್ಕಿಯಾದಳು. ಏಕೆಂದರೆ ಸ್ವಯಂವರದಲ್ಲಿ ಭಾಗವಹಿಸಿದ್ದವರೆಲ್ಲರು ನಳನಂತೆಯೇ ಕಾಣಿಸುತ್ತಿದ್ದರು. ಅವಳಿಗೆ ಇದು ತನ್ನನ್ನು ಮದುವೆಯಾಗಲು ಬಯಸಿದ್ದ ದೇವತೆಗಳ ಕುಟಿಲತೆ ಎಂಬುದು ಅರ್ಥವಾಯಿತು. ಅದಕ್ಕಾಕೆ ಕೈಮುಗಿದು "ದೇವತೆಗಳೇ, ನಾನು ನಳನನ್ನು ಮನಸಾರೆ ಪ್ರೀತಿಸಿರುವೆ, ಅವನನ್ನು ಈಗಾಗಲೇ ಮಾನಸಿಕವಾಗಿ ಮದುವೆಯಾಗಿರುವೆ. ಅಲ್ಲದೆ ಮಾನವಳಾದ ನಾನು ದೇವತೆಗಳನ್ನು ಮದುವೆಯಾಗುವುದು ಸರಿಯಲ್ಲ. ಆದ್ದರಿಂದ ನೀವು ನಾನು ಮದುವೆಯಾಗಲು ಬಯಸಿರುವ ನಳನನ್ನು ದಯಮಾಡಿ ತೋರಿಸಿ..." ಎಂದು ಪ್ರಾರ್ಥಿಸಿದಳು. ದಮಯಂತಿಯ ಕೋರಿಕೆಗೆ ಮನಸೋತು ದೇವತೆಗಳು ತಮ್ಮ ನೈಜ ರೂಪದೊಂದಿಗೆ ಪ್ರತ್ಯಕ್ಷವಾದರು. ಜೊತೆಗೆ ಅವಳ ಪರಿಶುದ್ಧ ಪ್ರೇಮವನ್ನು ಮೆಚ್ಚಿ ನೀರು, ಬೆಂಕಿಗಳಿಲ್ಲದೇ ಪಾಕ ತಯಾರಿಸುವ ವಿದ್ಯೆಯನ್ನು ಕಲಿಸಿ ಹರಸಿ ಹೋದರು. ದಮಯಂತಿ ನಳರಾಜನ ಪತ್ನಿಯಾಗಿ ನಿಷಧ ದೇಶಕ್ಕೆ ಬಂದಳು. ನಳ ದಮಯಂತಿಯ ಸರಸ ಸಲ್ಲಾಪಗಳ ಫಲವಾಗಿ ಇಬ್ಬರು ಮುದ್ದಾದ ಮಕ್ಕಳು ಜನಿಸಿದರು. ಅವರಿಬ್ಬರ ಸಂಸಾರ ಸಂತೋಷದಿಂದ ಸಾಗಿತು.
ನಳನ ಸಂಸಾರ ಸುಸೂತ್ರವಾಗಿ ಸಾಗಿತ್ತು. ಆದರೆ ಶನಿಗೆ ಅವನನ್ನು ಕಾಡಲೇಬೇಕಿತ್ತು. ಹೀಗಾಗಿ ಶನಿ ಅವಕಾಶಕ್ಕಾಗಿ ಕಾಯುತ್ತಾ ಕುಳಿತ್ತಿದ್ದನು. ಅದೇ ಸಂದರ್ಭದಲ್ಲಿ ನಳರಾಜನು ತಪ್ಪಿ ಅಶುದ್ಧವಾದ ನೀರನ್ನು ಕುಡಿದನು. ಈ ಅವಕಾಶವನ್ನು ಅಸ್ತ್ರವಾಗಿ ಬಳಸಿಕೊಂಡು ಶನಿ ನಳನನ್ನು ಕಾಡಲು ಪ್ರಾರಂಭಿಸಿದನು. ನಳನ ಸಹೋದರನಾದ ಪುಷ್ಕರನನ್ನು ಪ್ರೇರೇಪಿಸಿ ಜೂಜಾಟ ಆಡುವಂತೆ ಮಾಡಿದನು. ಆ ಜೂಜಾಟದಲ್ಲಿ ಶನಿಯ ಅಪಕೃಪೆಯಿಂದ ನಳರಾಜ ಸೋತು ಎಲ್ಲವನ್ನೂ ಕಳೆದುಕೊಂಡು ಬರಿಗೈ ದಾಸನಾದನು. ಜೂಜಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾ ನಳರಾಜ ತನ್ನ ಮಕ್ಕಳನ್ನು ಕುಂಡಿನಪುರಕ್ಕೆ ಕಳುಹಿಸಿ ಪತ್ನಿ ದಮಯಂತಿಯೊಂದಿಗೆ ಕಾಡು ಸೇರಿದನು. ಮಹಾರಾಣಿಯಾಗಿ ಮೆರೆಯಬೇಕಿದ್ದ ದಮಯಂತಿ ನಳನೊಂದಿಗೆ ಕಾಡಿನಲ್ಲಿ ಆಹಾರಕ್ಕಾಗಿ ಅಲೆಯುವಂತಾಯಿತು.
ಕಾಡಿನಲ್ಲಿ ಅನ್ನ ನೀರಿಗಾಗಿ ಅಲೆದು ಸುಸ್ತಾಗಿದ್ದ ದಮಯಂತಿ ಒಂದು ತಂಪಾದ ಮರದ ಕೆಳಗೆ ನಿದ್ರೆಗೆ ಜಾರಿದಳು. ಆಗ ಅವಳ ಕಾವಲಿಗೆ ಕುಳಿತ್ತಿದ್ದ ನಳರಾಜನ ಕಣ್ಣಿಗೆ ಬಂಗಾರದ ಬಣ್ಣದ ಎರಡು ಪಕ್ಷಿಗಳು ಕಂಡವು. ಆಗ ಅವನ ಮನಸ್ಸಲ್ಲಿ "ಆ ಪಕ್ಷಿಗಳನ್ನು ಹಿಡಿದು ಮಾರಾಟ ಮಾಡಿದರೆ ದುಡ್ಡು ಸಿಗಬಹುದು..." ಎಂಬ ದೂರಾಲೋಚನೆ ಮೂಡಿತು. ಕೂಡಲೇ ಆತ ಆ ಪಕ್ಷಿಗಳನ್ನು ಹಿಡಿಯುವುದಕ್ಕಾಗಿ ತಾನು ಧರಿಸಿದ್ದ ಬಟ್ಟೆಗಳನ್ನು ಆ ಪಕ್ಷಿಗಳ ಮೇಲೆ ಎಸೆದನು. ಆದರೆ ಆ ಪಕ್ಷಿಗಳು ಬಟ್ಟೆಗಳ ಸಮೇತ ಹಾರಿಹೋದಾಗ ನಳರಾಜ ಅರೆಬೆತ್ತಲಾದನು. ನಳರಾಜನಿಗೆ ಅತೀವ ನಿರಾಸೆಯಾಯಿತು. ಅಲ್ಲದೆ ದಮಯಂತಿಯ ಬಗ್ಗೆ ಯೋಚಿಸಿ ದು:ಖವಾಯಿತು. "ನಾನು ದಮಯಂತಿಯನ್ನು ಹೀಗೆಯೆ ಕಾಡಿನಲ್ಲಿ ಬಿಟ್ಟು ಹೋದರೆ ಆಕೆ ಅತ್ತು ತನ್ನ ತಂದೆಯ ಮನೆಗೆ ಹೋಗಿ ಸ್ವಲ್ಪ ದಿನಗಳು ಕಳೆದ ನಂತರ ಸುಖವಾಗಿರುತ್ತಾಳೆ..." ಎಂದು ಭಾವಿಸಿ ನಳರಾಜ ದಮಯಂತಿಯ ಸೀರೆಯ ಸ್ವಲ್ಪ ಭಾಗವನ್ನು ಹರಿದು ಅದರಿಂದ ತನ್ನ ಮಾನ ಮುಚ್ಚಿಕೊಂಡು ಅವಳನ್ನು ಅಲ್ಲೇ ಬಿಟ್ಟು ಹೊರಟು ಹೋದನು.
ನಳ ಹೋದ ಕೆಲವು ಗಂಟೆಗಳ ನಂತರ ನಿದ್ರೆಯಿಂದೆದ್ದ ದಮಯಂತಿ ನಳನನ್ನು ಕಾಣದೇ ಅತ್ಯಂತ ದುಃಖಿತಳಾದಳು. ಆಕೆ ತನ್ನ ತವರು ಮನೆಗೆ ಹೋಗುವ ಬದಲು ಅದೇ ಕಾಡಲ್ಲಿದ್ದುಕೊಂಡು ನಳನನ್ನು ಹುಡುಕಲು ಪ್ರಾರಂಭಿಸಿದಳು. ಆದರೆ ಆಕೆ ಕಾಡಲ್ಲಿದ್ದ ಬೇಟೆಗಾರರ ವಶವಾದಳು. ಅದೃಷ್ಟವೆಂಬಂತೆ ಕಾಡಿನಿಂದ ಹೋಗುತ್ತಿದ್ದ ಕೆಲವು ವ್ಯಾಪಾರಿಗಳಿಂದ ಆಕೆ ರಕ್ಷಿಸಲ್ಪಟ್ಟಳು. ನಂತರ ಆಕೆ ಚೇದಿರಾಜನ ಆಸ್ಥಾನಕ್ಕೆ ತಲುಪಿ ಅಲ್ಲಿನ ಮಹಾರಾಣಿಯನ್ನು ಕಾಡಿಬೇಡಿ ಅಂತಃಪುರದ ದಾಸಿಯಾದಳು.
ದಮಯಂತಿ ಇಷ್ಟೋತ್ತಿಗೆ ಅವಳ ತವರಿಗೆ ತಲುಪಿ ಸುರಕ್ಷಿತವಾಗಿರುತ್ತಾಳೆ ಎಂಬ ಭ್ರಮೆಯಲ್ಲಿ ನಳರಾಜ ಕಾಡಲ್ಲಿ ಅಲೆಯುತ್ತಿದ್ದನು. ಆದರೆ ಅವಳು ತವರಿಗೆ ಹೋಗದೆ ಚೇದಿರಾಜನ ರಾಣಿಯ ದಾಸಿಯಾಗಿದ್ದಳು. ನಳನ ಲೆಕ್ಕಾಚಾರ ತಲೆಕೆಳಗಾಗಿತ್ತು. ಗೂಢಾಚಾರರ ಮೂಲಕ ದಮಯಂತಿಯ ತಂದೆ ಭೀಷ್ಮಕನಿಗೆ ತಮ್ಮ ಮಗಳು ಮತ್ತು ಅಳಿಯ ಎಲ್ಲವನ್ನು ಕಳೆದುಕೊಂಡು ಕಾಡು ಪಾಲಾಗಿರುವ ಸುದ್ದಿ ತಿಳಿಯಿತು. ಭೀಷ್ಮಕ ರಾಜ ಅತ್ಯಂತ ದು:ಖಿತನಾಗಿ ಮಗಳು ಮತ್ತು ಅಳಿಯನನ್ನು ಹುಡುಕಲು ಸೈನಿಕರನ್ನು ನಿಯೋಜಿಸಿದನು. ಅವರು ಬೇರೆ ಬೇರೆ ರಾಜ್ಯಗಳಿಗೆ ತೆರಳಿ ನಳ ದಮಯಂತಿಯರನ್ನು ಹುಡುಕಲು ಪ್ರಾರಂಭಿಸಿದರು.
ಒಮ್ಮೆ ನಳರಾಜನು ಕಾಡಿನಲ್ಲಿ ಅಲೆಯುತ್ತಿರುವಾಗ ಅವನ ಕಣ್ಣಿಗೆ ಬೆಂಕಿಯಲ್ಲಿ ಬಿದ್ದು ಬೇಯುತ್ತಿದ್ದ ಕಾರ್ಕೋಟಕ ಸರ್ಪ ಬಿದ್ದಿತು. ನಳನನ್ನು ನೋಡಿ ಆ ಸರ್ಪ "ಮಹಾರಾಜ ನನ್ನನ್ನು ರಕ್ಷಿಸು..." ಎಂದು ಬೇಡಿಕೊಂಡಿತು. ನಳರಾಜ ಅದನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ಆ ಕಾರ್ಕೋಟಕ ಸರ್ಪ ನಳರಾಜನನ್ನೇ ಕಚ್ಚಿತು. ಇದರಿಂದಾಗಿ ನಳನ ದೇಹ ವಿಕಾರವಾಯಿತು. ಆಗ ಕಾರ್ಕೋಟಕ ನಳನಿಗೆ "ನಳರಾಜ ಚಿಂತಿಸಬೇಡಿ. ಈ ವಿಕಾರ ಸ್ವರೂಪದಿಂದ ನಿನಗೆ ಲಾಭವಿದೆ. ನಿನಗೆ ಬೇಕಾದಾಗ ನೀನು ನನ್ನನ್ನು ಸ್ಮರಿಸಿ ನಿನಗೆ ಮೊದಲಿನ ಸುಂದರ ಸ್ವರೂಪ ಸಿಗುವುದು..." ಎಂದೇಳಿ ಮಾಯವಾಯಿತು. ನಂತರ ನಳರಾಜ ಬಾಹುಕನೆಂಬ ಹೆಸರಿಟ್ಟುಕೊಂಡು ಅಯೋಧ್ಯೆಯ ರಾಜ ಋತುಪರ್ಣನ ಆಶ್ರಯ ಪಡೆದುಕೊಂಡನು. ಅಲ್ಲಿ ನಳರಾಜ ಕುದುರೆಗಳನ್ನು ನೋಡಿಕೊಳ್ಳುವುದರ ಜೊತೆಗೆ ಅಡುಗೆ ಮನೆಯಲ್ಲಿನ ಕೆಲಸಗಳನ್ನು ಮಾಡುತ್ತಿದ್ದನು. ನಳನ ಪಾಕ ಕಲೆಗೆ ಮತ್ತು ಕೈರುಚಿಗೆ ಎಲ್ಲರೂ ಮನಸೋತಿದ್ದರು. ಅಷ್ಟರಲ್ಲಿ ಭೀಷ್ಮಕನ ಸೈನಿಕರು ಚೇದಿ ರಾಜ್ಯದಲ್ಲಿ ದಾಸಿಯಾಗಿದ್ದ ದಮಯಂತಿಯನ್ನು ಗುರ್ತಿಸಿ ಅವಳನ್ನು ಮರಳಿ ತವರಿಗೆ ಕರೆದುಕೊಂಡು ಹೋದರು. ನಂತರ ನಳನನ್ನು ಹುಡುಕುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ನಳನ ಪಾಕ ಕಲೆಗಳ ಪರಿಚಯವಿದ್ದ ದಮಯಂತಿಗೆ ಋತುಪರ್ಣನ ಆಸ್ಥಾನದಲ್ಲಿರುವ ಬಾಹುಕನೇ ನಳನೆಂಬ ಅನುಮಾನ ಹುಟ್ಟಿಕೊಂಡಿತು. ಹೀಗಾಗಿ ಆಕೆ "ದಮಯಂತಿಯ ಎರಡನೇ ಸ್ವಯಂವರ ನಡೆಯಲಿದೆ..." ಎಂಬ ಸುಳ್ಳು ಸುದ್ದಿಯನ್ನು ಋತುಪರ್ಣನಿಗೆ ಕಳುಹಿಸಿದಳು. ಈ ಸುದ್ದಿ ಬಾಹುಕನ ವೇಷದಲ್ಲಿದ್ದ ನಳಿನಿಗೂ ಸಹ ತಲುಪಿತು. ತಡಮಾಡದೆ ಬಾಹುಕ ಋತುಪರ್ಣನೊಂದಿಗೆ ವೇಗವಾಗಿ ರಥವನ್ನು ಓಡಿಸಿಕೊಂಡು ವಿದರ್ಭ ರಾಜ್ಯಕ್ಕೆ ಹೊರಟನು. ವೇಗವಾಗಿ ಕುದುರೆ ಓಡಿಸುತ್ತಿರುವ ಬಾಹುಕನ ಮೇಲೆ ಋತುಪರ್ಣನಿಗೆ ಬಹಳಷ್ಟು ಆಶ್ಚರ್ಯವಾಯಿತು. ಅದಕ್ಕಾಗಿ ಆತ ಬಾಹುಕನಿಗೆ "ಯಾರು ನೀನು? ನಿಜಹೇಳು" ಎಂದನು. ಆಗ ಬಾಹುಕ ತಾನೇ ನಳನೆಂದು ಒಪ್ಪಿಕೊಂಡನು. ಋತುಪರ್ಣ ನಳರಾಜನಿಗೆ ಅಕ್ಷವಿದ್ಯೆಯನ್ನು (ಜೂಜಾಡುವ ಕಲೆ) ಕಲಿಸಿದನು. ಅದಕ್ಕೆ ಬದಲಾಗಿ ನಳ ಅವನಿಗೆ ಅಶ್ವ ವಿದ್ಯೆಯನ್ನು (ಕುದುರೆ ಓಡಿಸುವ ಕಲೆ) ಕಲಿಸಿದನು. ನಂತರ ಅವರಿಬ್ಬರು ದಮಯಂತಿಯ ಸ್ವಯಂವರವನ್ನು ತಡೆಯಲು ವೇಗವಾಗಿ ಧಾವಿಸಿದರು.
ಬಾಹುಕ ವಿದರ್ಭಕ್ಕೆ ತಲುಪಿದ ನಂತರ ಅವನನ್ನು ಪರೀಕ್ಷಿಸುವುದಕ್ಕಾಗಿ ದಮಯಂತಿ ತನ್ನ ಮಕ್ಕಳನ್ನು ಅವನೆಡಗೆ ಕಳುಹಿಸಿದಾಗ ಅವಳಿಗೆ ಬಾಹುಕನೇ ನಳನೆಂಬುದು ಗೊತ್ತಾಯಿತು. ಆಗ ಬಾಹುಕ "ತನ್ನ ಕುರೂಪ ವೇಷವನ್ನು ನೋಡಿಯೂ ಮತ್ತೆ ನನ್ನನ್ನು ಪತಿಯಾಗಿ ಸ್ವೀಕರಿಸುವೆಯಾ?" ಎಂದು ಕೇಳಿದಳು. ಅದಕ್ಕೆ ದಮಯಂತಿ ನಿಮ್ಮ ಸೌಂದರ್ಯವನ್ನು ನೋಡಿ ನಾನು ನಿಮ್ಮನ್ನು ಪ್ರೀತಿಸಿಲ್ಲ. ನಿಮ್ಮ ಮುಖ ನೋಡದೇನೆ ನಿಮ್ಮನ್ನು ಪ್ರೀತಿಸಿ ಮದುವೆಯಾಗಿದ್ದನ್ನು ಮರೆತು ಹೋದಿರಾ?" ಎಂದು ಪ್ರಶ್ನಿಸಿದಳು. ದಮಯಂತಿಯ ಮಾತು ಬಾಹುಕನ ಮನಸ್ಸಿಗೆ ಮುದ್ದಾಗಿ ಚುಚ್ಚಿತು. ಆಗ ಬಾಹುಕ ಕಾರ್ಕೋಟಕನನ್ನು ಸ್ಮರಿಸಿ ತನ್ನ ಮೊದಲಿನ ಸುಂದರ ರೂಪವನ್ನು ಧರಿಸಿ ಮತ್ತೆ ನಳನಾದನು. ನಳ ದಮಯಂತಿಗೆ ಆಕೆಯ ಎರಡನೆಯ ಸ್ವಯಂವರದ ಬಗ್ಗೆ ಕೇಳಿದಾಗ ಆಕೆ ನಗುತ್ತಾ "ಇದು ನಿಮ್ಮನ್ನು ಇಲ್ಲಿಗೆ ಕರೆಸಲು ಮಾಡಿದ ಒಂದು ಸಣ್ಣ ಉಪಾಯವೆಂದು ಹೇಳಿ ಸುಮ್ಮನಾದಳು. ನಂತರ ನಳರಾಜ ತನ್ನ ಸೋದರ ಪುಷ್ಕರನೊಂದಿಗೆ ಜೂಜಾಡಿ ತಾನು ಕಳೆದುಕೊಂಡಿದ್ದೆಲ್ಲವನ್ನು ಮರಳಿ ಪಡೆದನು. ನಂತರ ಮುದ್ದಿನ ಮಡದಿ ದಮಯಂತಿಯೊಂದಿಗೆ ಸರಸವಾಡುತ್ತಾ, ಎರಡು ಮುದ್ದಾದ ಮಕ್ಕಳೊಂದಿಗೆ ತುಂಟಾಟವಾಡುತ್ತಾ ನಳರಾಜ ಸಂತೋಷದಿಂದ ರಾಜ್ಯಭಾರ ಮಾಡಿಕೊಂಡಿರಲು ಪ್ರಾರಂಭಿಸಿದನು...
ಈ ರೀತಿ ನಳ ದಮಯಂತಿಯರ ಅಮರ ಪ್ರೇಮಕಥೆ ಮುಕ್ತಾಯವಾಗುತ್ತದೆ. ಪ್ರಾಚೀನ ಪ್ರೇಮಕಥೆಗಳನ್ನು ಗಮನಿಸಿದರೆ ಈಗಿನ ಪ್ರೇಮಿಗಳ ಮೇಲೆ ದ್ವೇಷ ಹುಟ್ಟುತ್ತದೆ. ನಿಮಗೆ ಏನನ್ನಿಸುತ್ತದೆ ಎಂಬುದನ್ನು ತಪ್ಪದೆ ಕಮೆಂಟ ಮಾಡಿ. ಜೊತೆಗೆ ಈ ಅಂಕಣವನ್ನು ಎಲ್ಲೆಡೆಗೆ ಶೇರ್ ಮಾಡಿ...
8) ರಂಭೆಯ ಶಾಪ : Curse of Rambha Mythological Story in Kannada - Rambha Story in Kannada
ಒಂದಿನ ರಾವಣ ತನ್ನ ರಾಕ್ಷಸ ಸೈನ್ಯವನ್ನು ತೆಗೆದುಕೊಂಡು ಸ್ವರ್ಗವನ್ನು ಗೆಲ್ಲಲು ಹೊರಟನು. ಅವರೆಲ್ಲರು ಸ್ವರ್ಗಕ್ಕೆ ಹೋಗುವಾಗ ಕೈಲಾಸ ಪರ್ವತವನ್ನು ತಲುಪಿದಾಗ ರಾತ್ರಿಯಾಗಿತ್ತು. ಅದಕ್ಕಾಗಿ ರಾವಣ ರಾಕ್ಷಸ ಸೈನ್ಯದೊಂದಿಗೆ ಕೈಲಾಸ ಪರ್ವತದಲ್ಲಿ ವಸತಿ ಹೂಡಿದನು. ಕೊರೆಯುವ ಚಳಿಯಲ್ಲಿ ಕೈಲಾಸ ಪರ್ವತ ಅವನನ್ನು ಆಕರ್ಷಿಸಿತು. ಆಗಸದಲ್ಲಿ ಫಳಫಳನೆ ಹೊಳೆಯುವ ಚಂದ್ರನನ್ನು ನೋಡುತ್ತಾ ರಾವಣ ಅರ್ಧರಾತ್ರಿಯನ್ನು ಕಳೆದನು. ರಾವಣನ ಮನಸ್ಸಲ್ಲಿಗ ಕಾಮ ಭಾವನೆ ಉದಯಿಸಿತ್ತು. ಕಾಕತಾಳೀಯವೆಂಬಂತೆ ಅವನ ಕಣ್ಣಿಗೆ ಆಕಾಶದಲ್ಲಿ ಚಲಿಸುತ್ತಿರುವ ಸುಂದರವಾದ ಅಪ್ಸರೆ ರಂಭೆ ಕಾಣಿಸಿದಳು. ರಂಭೆ ಅಪ್ಸರೆಯರ ರಾಣಿಯಾಗಿದ್ದಳು. ಅವಳ ಸೌಂದರ್ಯಕ್ಕೆ ಆಕರ್ಷಿತನಾಗಿ ರಾವಣ ರಂಭೆಯನ್ನು ಅಡ್ಡಗಟ್ಟಿದನು. ತಂಗಾಳಿಯ ಹಿನ್ನೆಲೆ ಸಂಗೀತದ ಜೊತೆಗೆ ಚಂದ್ರನ ಪ್ರೇಮದ ಬೆಳಕಿನಲ್ಲಿ ರಂಭೆಯನ್ನು ಕಂಡ ರಾವಣನ ಮನಸ್ಸಲ್ಲಿ ಕಾಮದ ಸುನಾಮಿ ಎದ್ದಿತು. ಆತ ಅವಳನ್ನು ದೈಹಿಕ ಸುಖಕ್ಕಾಗಿ ಪೀಡಿಸಲು ಪ್ರಾರಂಭಿಸಿದನು.
ರಂಭೆ ಈ ರಾತ್ರಿಯ ಸಮಯದಲ್ಲಿ ತನ್ನ ಪ್ರಿಯತಮ ನಳಕುಬೇರನ ಕಡೆಗೆ ಹೊರಟಿದ್ದಳು. ಆದರೆ ದುರಾದೃಷ್ಟಕ್ಕೆ ರಾವಣನ ಕೈಯಲ್ಲಿ ಸಿಕ್ಕಿಹಾಕಿಕೊಂಡಳು. ರಾವಣ ಅವಳನ್ನು ಬಲವಂತ ಮಾಡತೊಡಗಿದಾಗ ಆಕೆ ಅವನಿಗೆ "ನಾನು ನಿನಗೆ ಸೊಸೆ ಸಮಾನ. ದಯಮಾಡಿ ನನ್ನನ್ನು ಬಿಟ್ಟು ಬಿಡು..." ಎಂದು ಬೇಡಿಕೊಂಡಳು. ಆಗ ರಾವಣ ರಂಭೆಗೆ "ನೀನೇಗೆ ನನಗೆ ಸೊಸೆಯಾಗುವೆ...?" ಎಂದು ಪ್ರಶ್ನಿಸಿದನು. ಆಗ ರಂಭೆ "ನಾನು ನಿನ್ನ ಸೋದರ ಕುಬೇರನ ಮಗನಾದ ನಳಕುಬೇರನನ್ನು ಪ್ರೀತಿಸುತ್ತಿರುವೆ. ಅವನನ್ನೇ ಮದುವೆಯಾಗಲಿರುವೆ. ಹೀಗಾಗಿ ನಾನು ನಿನಗೆ ಸೊಸೆ ಸಮಾನಳು. ನೀನು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಲಾರೆ. ದಯಮಾಡಿ ನನ್ನನ್ನು ಬಿಟ್ಟು ಬಿಡು..." ಎಂದು ಮತ್ತೆ ಬೇಡಿಕೊಂಡಳು. ಆಗ ರಾವಣ ನಗುತ್ತಾ "ಇಂಥ ನಿಯಮಗಳೆಲ್ಲ ಪತಿವ್ರತೆಯರಿಗೆ ಮಾತ್ರ ಅನ್ವಯಿಸುತ್ತವೆ. ಆದರೆ ನೀನೇನು ಪತಿವ್ರತೆಯಲ್ಲ. ನೀನು ದೇವೆಂದ್ರನ ಆಸ್ಥಾನದಲ್ಲಿ ನೃತ್ಯ ಮಾಡುತ್ತಾ, ಋಷಿಗಳ ತಪಸ್ಸನ್ನು ಕೆಡಿಸುವ ಅಪ್ಸರೆಯಷ್ಟೇ. ನಿನಗೆ ಮದುವೆ ಗಂಡಂದಿರೆಲ್ಲ ಶೋಭಿಸುವುದಿಲ್ಲ..." ಎಂದೇಳಿ ರಾವಣ ರಂಭೆಯನ್ನು ತನ್ನೆಡೆಗೆ ಎಳೆದುಕೊಂಡನು. ಅವಳನ್ನು ಬಲವಂತವಾಗಿ ಬಳಸಿಕೊಂಡ ನಂತರ ಅವಳನ್ನು ಖುಷಿಯಿಂದ ಬಿಳ್ಕೊಟ್ಟನು.
ರಾವಣನಿಂದ ಅತ್ಯಾಚಾರಕ್ಕೊಳಗಾದ ರಂಭೆ ಅಳುತ್ತಾ ತನ್ನ ಪ್ರಿಯಕರ ನಳಕುಬೇರನ ಬಳಿ ಹೋಗಿ ರಾವಣನ ದುಷ್ಟ ಕಾರ್ಯದ ಬಗ್ಗೆ ವಿವರಿಸಿದಳು. ರಾವಣನ ಅನಾಚಾರವನ್ನು ಕೇಳಿ ನಳಕುಬೇರ ಕೆರಳಿ ಕೆಂಡಾಮಂಡಲವಾದನು. ಆದರೆ ನೇರವಾಗಿ ರಾವಣನ ಮೇಲೆ ಸೇಡು ತೀರಿಸಿಕೊಳ್ಳುವಷ್ಟು ಶಕ್ತಿ ಅವನಲ್ಲಿರಲಿಲ್ಲ. ಅದಕ್ಕಾಗಿ ಆತ ರಾವಣನಿಗೆ "ಇನ್ಮುಂದೆ ರಾವಣ ಯಾವುದೇ ಪರಸ್ತ್ರೀಯನ್ನು ಬಲವಂತವಾಗಿ ಮುಟ್ಟಕೂಡದು, ಅಲ್ಲದೇ ಅವರನ್ನು ಅಪಹರಿಸಿ ತನ್ನ ಅರಮನೆಯಲ್ಲಿ ಇಡಕೂಡದು. ಒಂದು ವೇಳೆ ರಾವಣ ಪರಸ್ತ್ರೀಯನ್ನು ಬಲವಂತವಾಗಿ ಮುಟ್ಟಿದರೆ ಇಲ್ಲವೇ ಅಪಹರಿಸಿ ಅರಮನೆಯಲ್ಲಿ ಬಂಧಿಸಿಟ್ಟರೆ ಅವನ ತಲೆ ನೂರು ಹೋಳಾಗಿ ಛಿದ್ರಛಿದ್ರವಾಗಿ ಒಡೆದು ಹೋಗಲಿ..." ಎಂದು ಶಾಪವನ್ನು ಕೊಟ್ಟನು. ರಂಭೆಯನ್ನು ಬಲವಂತವಾಗಿ ಅನುಭವಿಸಿದ್ದಕ್ಕಾಗಿ ರಾವಣ ನಳಕುಬೇರನ ಶಾಪಕ್ಕೆ ತುತ್ತಾದನು. ಸಹಜವಾಗಿ ರಾವಣ ಋಷಿಗಳ, ದೇವತೆಗಳ, ನಾಗಗಳ, ಮನುಷ್ಯರ ಸುಂದರ ಪತ್ನಿಯರನ್ನು ಅಪಹರಿಸಿ ಅವರನ್ನು ಬಲವಂತವಾಗಿ ಅನುಭವಿಸುತ್ತಿದ್ದನು. ಆದರೆ ಈಗ ನಳಕುಬೇರ ಕೊಟ್ಟ ಶಾಪದಿಂದ ರಾವಣನ ಕೆಟ್ಟ ಪ್ರವೃತ್ತಿ ಅಂತ್ಯವಾಯಿತು. ಆದರೆ ರಾವಣ ಮತ್ತೆ ತನ್ನ ಕೆಟ್ಟ ಚಾಳಿಯನ್ನು ಮುಂದುವರೆಸಿದನು. ರಾಮನ ಕಣ್ತಪ್ಪಿಸಿ ಸಂನ್ಯಾಸಿಯ ಮಾರುವೇಷ ಧರಿಸಿ ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಬಂದನು. ಆದರೆ ರಂಭೆಯ ಕಾರಣಕ್ಕೆ ನಳ ಕುಬೇರ ಕೊಟ್ಟ ಶಾಪಕ್ಕೆ ಹೆದರಿ ಸೀತೆಯನ್ನು ಮುಟ್ಟದೆ ಬಿಟ್ಟನು. ಅಲ್ಲದೇ ಅವಳನ್ನು ಅರಮನೆಯ ಬದಲಾಗಿ ಅಶೋಕ ವನದಲ್ಲಿ ಬಂಧಿಸಿಟ್ಟನು...
ರಂಭೆಯಿಂದಾಗಿ ಶಾಪಗ್ರಸ್ತನಾದಾಗಲೇ ರಾವಣ ಬುದ್ಧಿ ಕಲಿತಿದ್ದರೆ ಅವನು ರಾಮನಿಂದ ಸಾಯುತ್ತಿರಲಿಲ್ಲ. ಆದರೆ ಅವನು ಬುದ್ಧಿ ಕಲಿಯಲಿಲ್ಲ. ಇದಿಷ್ಟು ರಂಭೆಯ ಶಾಪದ ಕಥೆವ್ಯಥೆ. ಈ ಅಂಕಣ ನಿಮ್ಮಗಿಷ್ಟವಾಗಿದ್ದರೆ ತಪ್ಪದೇ ಇದನ್ನು ಲೈಕ ಮಾಡಿ ಮತ್ತು ನಿಮ್ಮ ಸ್ನೇಹಿತರೊಡನೆ ಶೇರ್ ಮಾಡಿ...
9) ರಾಧೆ ಮತ್ತು ಕೃಷ್ಣನ ಪ್ರೇಮಕಥೆ : Love Story of Radha Krishna in Kannada
ಕೃಷ್ಣನಿಗೆ ರುಕ್ಮಿಣಿ ಸಮೇತ ಏಳು ಮಹಾರಾಣಿಯರಲ್ಲದೆ ಒಟ್ಟು 16,100 ಪತ್ನಿಯರಿದ್ದರು. 1,61,080 ಮಕ್ಕಳಿದ್ದರು. ಆದರೆ ಪ್ರೇಯಸಿ ಮಾತ್ರ ಒಬ್ಬಳೇ ಇದ್ದಳು. ಅವಳೇ ರಾಧೆ. ಕೃಷ್ಣನ ಮನಸ್ಸು ಸಂಪೂರ್ಣವಾಗಿ ರಾಧೆಯ ಸ್ವತ್ತಾಗಿತ್ತು. ರಾಧೆಯ ಹೆಸರಿಲ್ಲದೆ ಕೃಷ್ಣನ ಹೆಸರು, ಪ್ರಖ್ಯಾತಿ, ಫೋಟೋಗಳೆಲ್ಲವು ಅಪೂರ್ಣ. ರಾಧೆ ಶ್ರೀಕೃಷ್ಣನನ್ನು ಮದುವೆಯಾಗಲಿಲ್ಲ. ಆದರೂ ಸಾವಿರಾರು ಪತ್ನಿಯರಿಗೆ ಸಿಗದ ಸ್ಥಾನ, ಗೌರವ, ಪ್ರಖ್ಯಾತಿ ರಾಧೆಗೆ ಸಿಕ್ಕಿದೆ.
ಬ್ರಂದಾವನದಲ್ಲಿ ಕೃಷ್ಣ ಕೊಳಲು ಬಾರಿಸಿದಾಗ ಬರೀ ಗೋವುಗಳಷ್ಟೇ ಬರುತ್ತಿರಲಿಲ್ಲ. ಅವುಗಳ ಜೊತೆಗೆ ಗೋಪಿಕೆಯರು ಸಹ ಬರುತ್ತಿದ್ದರು. ಅವರಲ್ಲಿ ಕೃಷ್ಣನ ಮನ ಕದ್ದವಳು ರಾಧೆ ಮಾತ್ರ. ಕೃಷ್ಣನ ನೀಲಿ ಮೈಬಣ್ಣ, ಬಾದಾಮಿ ಆಕಾರದ ಕಂಗಳು, ತಿಳಿ ಗುಲಾಬಿ ತುಟಿಗಳು, ಉಕ್ಕಿನಂಥ ಶರೀರ, ಕಪ್ಪು ಗುಂಗುರು ಕೂದಲುಗಳಲ್ಲಿ ಸಿಲುಕಿಸಿದ ನವಿಲು ಗರಿ, ತುಂಟತನವನ್ನು ನೋಡಿ ಎಲ್ಲ ಗೋಪಿಕೆಯರು ಅವನ ಮೇಲೆ ಮೋಹಿತರಾಗಿದ್ದರು. ಆದರೆ ರಾಧೆ ಮಾತ್ರ ಕೃಷ್ಣನ ಕೊಳಲ ಧ್ವನಿಗೆ ತನ್ನ ಮನಸ್ಸನ್ನು ಕಳೆದುಕೊಂಡಿದ್ದಳು. ಕೃಷ್ಣನ ಕೊಳಲ ನಾದಕ್ಕೆ ರಾಧೆ ನರ್ತಿಸುವಾಗ ಸ್ವರ್ಗದ ಸೊಬಗೆಲ್ಲವು ಬ್ರಂದಾವನದಲ್ಲಿ ಸೃಷ್ಟಿಯಾಗುತ್ತಿತ್ತು. ಪ್ರತಿ ಮನೆಯಲ್ಲಿ ಬೆಣ್ಣೆ ಕದಿಯುತ್ತಿದ್ದ ಕಳ್ಳ ಕೃಷ್ಣನ ಮನಸ್ಸನ್ನು ರಾಧೆ ಕದ್ದಿದ್ದಳು. ಕೃಷ್ಣ ಅವಳನ್ನು ಮದುವೆಯಾಗಲು ಬಯಸಿದಾಗ ಆಕೆ ಬಲವಾದ ಹಾಗೂ ಪವಿತ್ರವಾದ ಕಾರಣಗಳನ್ನಿಟ್ಟುಕೊಂಡು ಅವನನ್ನು ಮದುವೆಯಾಗಲು ನಿರಾಕರಿಸಿದಳು.
ರಾಧೆಗೆ 6 ವರ್ಷವಿದ್ದಾಗ ಆಯನ್ ಎಂಬುವ ಯೋಧನೊಂದಿಗೆ ಬಾಲ್ಯ ವಿವಾಹವಾಗಿತ್ತು. ಆದರೆ ಆತ ಮದುವೆಯಾದ ಒಂದು ವರ್ಷದೊಳಗೆ ಗತಿಸಿದನು. ಅನಂತರ ರಾಧೆ ಕೃಷ್ಣನಿಗೆ ಸಿಕ್ಕಳು. ಆಕೆ ಕೃಷ್ಣನಿಗಿಂತ ಮೂರ್ನಾಲ್ಕು ವರ್ಷ ದೊಡ್ಡವಳಾಗಿದ್ದಳು. ತನಗೆ ಈಗಾಗಲೇ ಮದುವೆಯಾಗಿರುವುದರಿಂದ ರಾಧೆ ತನ್ನ ಮೂರ್ಖ ಭಾವನೆಗಳನ್ನು ಬಚ್ಚಿಟ್ಟು ಕೃಷ್ಣನ ಮೇಲೆ ಪ್ರೇಮದ ಭಾವನೆಗಳನ್ನಷ್ಟೇ ಹೊಂದಿದಳು. ಅವಳು ಕೃಷ್ಣನನ್ನು ಪ್ರೀತಿಸಿದಳು. ಆದರೆ ತನಗೆ ಈಗಾಗಲೇ ಮದುವೆಯಾಗಿರುವುದರಿಂದ ಅವನನ್ನು ಮದುವೆಯಾಗಲು ನಿರಾಕರಿಸಿದಳು. ಅಲ್ಲದೆ "ಕೃಷ್ಣ ರಾಜನಾಗುವವನು, ಆದರೆ ನಾನು ಗೋವುಗಳನ್ನು ಮೇಯಿಸುವ ಸಾಮಾನ್ಯ ಗೋಪಿಕೆ" ಎಂಬ ಕೀಳು ಭಾವನೆ ಅವಳ ಮನಸ್ಸಲ್ಲಿ ಮನೆ ಮಾಡಿತ್ತು.
ಈಗಾಗಲೇ ಮದುವೆಯಾಗಿದ್ದರು, ತಾನು ಸಾಮಾನ್ಯ ದನ ಕಾಯೋಳು ಎಂಬ ಭಾವನೆಯಿದ್ದರೂ ರಾಧೆ ಮನಸ್ಸು ಮಾಡಿದ್ದರೆ ಶ್ರೀಕೃಷ್ಣನನ್ನೇ ಮದುವೆಯಾಗುತ್ತಿದ್ದಳು. ಆದರೆ ಅವಳ ಪ್ರೇಮದ ಪರಿಕಲ್ಪನೆಯೇ ಬೇರೆಯಾಗಿತ್ತು. ರಾಧೆಯ ಹಾಗೂ ಕೃಷ್ಣನ ಮನಸ್ಸುಗಳು ಪರಸ್ಪರ ಮಿಲನವಾಗಿದ್ದವು. ಅವರಿಬ್ಬರು ಎರಡು ದೇಹ ಒಂದೇ ಮನಸ್ಸು ಎಂಬತ್ತಾಗಿದ್ದರು. ಅವರ ಮಿಲನವಾದ ಮನಸ್ಸುಗಳನ್ನು ಮದುವೆಯ ಬಂಧದಿಂದ ಇಲ್ಲವೇ ದೈಹಿಕ ಸಂಬಂಧದಿಂದ ಮಲಿನ ಮಾಡುವ ಆಸಕ್ತಿ ರಾಧೆಗೆ ಇರಲಿಲ್ಲ. ಅಲ್ಲದೇ ಮನಸ್ಸುಗಳ ಪ್ರೀತಿಗೆ ಮದುವೆಯ ಬೇಲಿ ಅನಾವಶ್ಯಕ ಎಂಬುದು ಅವಳ ಬಲವಾದ ನಂಬಿಕೆಯಾಗಿತ್ತು. ಅದಕ್ಕಾಗಿ ರಾಧೆ ಶ್ರೀಕೃಷ್ಣನನ್ನು ಮದುವೆಯಾಗಲಿಲ್ಲ.
ರಾಧೆಯ ಮಾತನ್ನು ಮನ್ನಿಸಿ ಶ್ರೀಕೃಷ್ಣ ತನ್ನ ಜವಾಬ್ದಾರಿಗಳನ್ನು ನಿಭಾಯಿಸುವುದಕ್ಕಾಗಿ ಬ್ರಂದಾವನವನ್ನು ಬಿಟ್ಟು ದ್ವಾರಕೆಗೆ ಬಂದನು. ಆತ ರಾಜನಾದ ಮೇಲೆ ಮತ್ತೆ ಯಾವತ್ತೂ ಮರಳಿ ಬ್ರಂದಾವನಕ್ಕೆ ತೆರಳಲೇ ಇಲ್ಲ. ರಾಧೆ ತನ್ನ ಜೀವನದ ಪ್ರತಿ ಕ್ಷಣವನ್ನು ಶ್ರೀಕೃಷ್ಣನ ನೆನಪಲ್ಲಿ ಕಳೆದಳು. ರಾಜನಾದ ಮೇಲೆ ಕೃಷ್ಣನಿಗೆ ಸಾಕಷ್ಟು ಜವಾಬ್ದಾರಿಗಳಿರುವುದರಿಂದ ಆತ ರಾಧೆಯನ್ನು ಭೇಟಿಯಾಗಲಿಲ್ಲ. ಆದರೆ ಅವನ ಮನಸ್ಸು ಸಂಪೂರ್ಣವಾಗಿ ರಾಧೆಯಲ್ಲಿಯೇ ಇತ್ತು. ಅವರಿಬ್ಬರೂ ಶಾರೀರಿಕವಾಗಿ ದೂರಾಗಿದ್ದರೂ ಮಾನಸಿಕವಾಗಿ ಹತ್ತಿರವಾಗಿದ್ದರು. ರಾಧೆ ಒಂದಿನ ಹಾಲು ಕಾಯಿಸುವಾಗ ಕೈಜಾರಿ ಹಾಲನ್ನು ತನ್ನ ಕಾಲ ಮೇಲೆ ಸುರಿದುಕೊಂಡಳು. ಆದರೆ ಅವಳ ಬದಲಾಗಿ ಶ್ರೀಕೃಷ್ಣನ ಕಾಲ ಮೇಲೆ ಬೊಬ್ಬೆಗಳಾದವು. ಈ ಘಟನೆ ಸಾಕು ಅವರ ಪವಿತ್ರ ಪ್ರೇಮವನ್ನು ಅರಿಯಲು. ಅವರಿಬ್ಬರೂ ಆತ್ಮ ಸಂಗಾತಿಗಳಾಗಿದ್ದರು.
ರಾಧೆ ಎಷ್ಟು ಕಾದರೂ ಶ್ರೀಕೃಷ್ಣ ಬ್ರಂದಾವನಕ್ಕೆ ಬರಲೇ ಇಲ್ಲ. ಕೊನೆಗೆ ಮುದುಕಿಯಾದ ಮೇಲೆ ರಾಧೆ ಅವನನ್ನು ಹುಡುಕಿಕೊಂಡು ದ್ವಾರಕೆಗೆ ಬಂದಳು. ಕೊನೆಯ ಸಾರಿ ಶ್ರೀಕೃಷ್ಣನನ್ನು ಕಣ್ತುಂಬಿಕೊಂಡಳು. ಕೊನೆಯ ಸಲ ಕೃಷ್ಣ ಅವಳಿಗಾಗಿ ಅವಳಿಷ್ಟದ ಕೊಳಲ ರಾಗವನ್ನು ನುಡಿಸಿ ತನ್ನ ಕೊಳಲನ್ನು ಮುರಿದು ಬೀಸಾಕಿದನು. ಅವನ ಕೊಳಲು ನಾದಕ್ಕೆ ನಾಲ್ಕು ಹೆಜ್ಜೆಗಳನ್ನು ಹಾಕಿ ನಗುನಗುತ್ತಾ ರಾಧೆ ಪ್ರಾಣ ಬಿಟ್ಟಳು.
"ಪ್ರೀತಿ ಎನ್ನುವುದು ಮನಸ್ಸುಗಳ ಮಾತೇ ಹೊರತು ಮೈಗಳ ಮಾತಲ್ಲ. ಪ್ರೀತಿಸಿದರೆ ಮದುವೆಯಾಗಬೇಕು ಇಲ್ಲವೇ ಸದಾ ಮೈಗಂಟಿಕೊಂಡಿರಬೇಕು ಎಂಬ ನಿಯಮವೇನಿಲ್ಲ. ಪ್ರೀತಿ ಎರಡು ಆತ್ಮಗಳ ಅನ್ಯೋನ್ಯತೆ. ಎರಡು ದೇಹಗಳು ಒಂದೇ ಆತ್ಮದಲ್ಲಿರುವುದೇ ನಿಜವಾದ ಪ್ರೀತಿ..." ಎಂಬುದನ್ನು ರಾಧೆ ನಮಗೆ ಕಲಿಸಿ ಕೊಟ್ಟಿದ್ದಾಳೆ. ದೈಹಿಕ ಸಂಬಂಧ ಬೆಳೆಸದೆ, ಸದಾ ಜೊತೆಗಿರದೆ ಮಾನಸಿಕವಾಗಿ ಪ್ರೀತಿಸಿ ಜಗತ್ತಿಗೆ ನಿಜವಾದ ಪ್ರೀತಿಯೆಂದರೆ ಏನು ಎಂಬುದನ್ನು ತೋರಿಸಿದ ರಾಧೆ ಸೂರ್ಯ ಚಂದ್ರರಿರುವರೆಗೂ ಅಜರಾಮರಳು. ಅವಳ ಪ್ರೇಮಕಥೆಯಿಂದ ಇವತ್ತಿನ ಪ್ರೇಮಿಗಳು ಕಲಿಯುವುದು ಸಾಕಷ್ಟಿದೆ. ಈ ಪ್ರೇಮಕಥೆಯ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ತಿಳಿಸಿ ಮತ್ತು ಇದನ್ನು ನಿಮ್ಮ ಪ್ರೀತಿಪಾತ್ರರೊಡನೆ ಶೇರ್ ಮಾಡಿ...


















10) ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada
ಇಟಲಿಯ ವೆರೊನಾ ನಗರದ ಎರಡು ಪ್ರಖ್ಯಾತ ಕುಟುಂಬಗಳಾದ ಮಾಂಟೆಗ್ಯೂ ಮತ್ತು ಕ್ಯಾಪುಲೆಟಗಳ ಮಧ್ಯೆ ಹಲವಾರು ವರ್ಷಗಳಿಂದ ಶೀತಲ ಸಮರ ನಡೆದುಕೊಂಡು ಬಂದಿತ್ತು. ಆ ಎರಡು ಕುಟುಂಬಗಳ ಮಧ್ಯೆ ಆಗಾಗ ನಡೆಯುವ ಕಲಹಗಳಿಂದ ವೆರೊನಾ ನಗರದ ಶಾಂತಿ ಹಾಳಾಗಿತ್ತು. ಹೀಗಾಗಿ ವೆರೊನಾದ ರಾಜ ಪ್ರಿನ್ಸ್ ಎಸ್ಕಾಲಸ್ ಆ ಎರಡು ಕುಟುಂಬಗಳ ಮುಖ್ಯಸ್ಥರಿಗೆ ಬಹಳ ಖಡಕ್ಕಾದ ಎಚ್ಚರಿಕೆಯನ್ನು ಕೊಟ್ಟನು. ಒಂದು ವೇಳೆ ನಿಮ್ಮ ಕಲಹದಿಂದಾಗಿ ನಗರದ ಶಾಂತಿ ಭಂಗವಾದರೆ ಯಾವುದೇ ಮುಲಾಜಿಲ್ಲದೆ ನಿಮಗೆ ಮರಣ ದಂಡನೆ ವಿಧಿಸುವುದಾಗಿ ಹೆದರಿಸಿ ಅವರನ್ನು ಸ್ವಲ್ಪ ಮಟ್ಟಿಗೆ ಶಾಂತವಾಗಿರಿಸಿದನು. ಈ ಶಾಂತ ಸಂದರ್ಭವನ್ನು ಗಮನಿಸಿ ಪ್ರಿನ್ಸ್ ಎಸ್ಕಾಲಸನ ಸೋದರ ಸಂಬಂಧಿಯಾದ ಕೌಂಟ್ ಪ್ಯಾರಿಸ್ ಕ್ಯಾಪುಲೆಟನ ಮಗಳಾದ ಜ್ಯೂಲಿಯಟಳನ್ನು ಮದುವೆಯಾಗುವ ಮನದಿಂಗಿತವನ್ನು ವ್ಯಕ್ತಪಡಿಸುತ್ತಾನೆ. ಆದರೆ ಕ್ಯಾಪುಲೆಟ್ ತನ್ನ ಮಗಳಿನ್ನು ಚಿಕ್ಕವಳಿರುವುದರಿಂದ ಅವನಿಗೆ ಇನ್ನೆರಡು ವರ್ಷ ಕಾಯಲು ಹೇಳುತ್ತಾನೆ. ಕ್ಯಾಪುಲೆಟನ ಮಾತಿಗೆ ಕೌಂಟ್ ಪ್ಯಾರಿಸ್ ಒಪ್ಪಿಕೊಳ್ಳುತ್ತಾನೆ. ಅವನ ಹಾಗೂ ಜ್ಯೂಲಿಯಟಳ ಮದುವೆ ನಿಗದಿಯಾಗುತ್ತದೆ. ಈ ಖುಷಿಯಲ್ಲಿ ಕ್ಯಾಪುಲೆಟ್ ಒಂದು ಬಾಲರೂಮ್ ಡ್ಯಾನ್ಸ್ ಪಾರ್ಟಿಯನ್ನು ಆಯೋಜಿಸುತ್ತಾನೆ. ಆದರೆ ಜ್ಯೂಲಿಯಟಳಿಗೆ ಈ ಮದುವೆ ಇಷ್ಟವಾಗುವುದಿಲ್ಲ. ಅವಳ ತಾಯಿ ಹಾಗೂ ಅವಳ ನರ್ಸ್ ಅವಳನ್ನು ಈ ಮದುವೆಗೆ ಒಪ್ಪಿಕೊಳ್ಳುವಂತೆ ಪುಸಲಾಯಿಸುತ್ತಾರೆ. ಆದರೆ ಆಕೆ ತನ್ನ ನಿರ್ಧಾರವನ್ನು ತಿಳಿಸದೆ ಅಡ್ಡ ಗೋಡೆಯ ಮೇಲೆ ದೀಪವಿಡುತ್ತಾಳೆ.
ಕ್ಯಾಪುಲೆಟನ ಕುಟುಂಬ ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡುತ್ತಾ ಸಂತಸದ ಕಡಲಲ್ಲಿ ತೇಲಾಡುತ್ತಿತ್ತು. ಆದರೆ ಅವನ ಬದ್ಧವೈರಿ ಮಾಂಟೆಗ್ಯೂನ ಕುಟುಂಬ ಯಾವುದೇ ಸಡಗರವಿಲ್ಲದೆ ಶಾಂತವಾಗಿತ್ತು. ಮಾಂಟೆಗ್ಯೂವಿನ ಮಗ ರೋಮಿಯೋ ತನ್ನ ಅತ್ತೆ ಮಗಳಾದ ರೊಸಾಲಿನಳನ್ನು ಪ್ರೀತಿಸಿ ಅವಳಿಂದ ದೂರಾಗಿ ವಿರಹ ಯಾತನೆಯನ್ನು ಅನುಭವಿಸುತ್ತಿರುತ್ತಾನೆ. ರೋಮಿಯೊನ ಮನೋಯಾತನೆಗೆ ಕಾರಣವೇನೆಂಬುದು ಅವನ ಚಿಕ್ಕಪ್ಪ ಬೆನ್ವೊಲಿಯೋನಿಗೆ ಗೊತ್ತಾಗುತ್ತದೆ. ಆತ "ರೊಸಾಜಿನ ಕ್ಯಾಪುಲೆಟನ ಡ್ಯಾನ್ಸ್ ಪಾರ್ಟಿಗೆ ಖಂಡಿತ ಬಂದಿರುತ್ತಾಳೆ" ಎಂಬ ನಂಬಿಕೆಯ ಮೇಲೆ ರೋಮಿಯೋನನ್ನು ಕ್ಯಾಪುಲೆಟನ ಪಾರ್ಟಿಗೆ ಹೋಗಿ ಅವಳನ್ನು ಭೇಟಿಯಾಗಿ ಮಾತಾಡಿ ಅವಳ ಮನವೊಲಿಸಿ ರಾಜಿಯಾಗುವಂತೆ ಹೇಳುತ್ತಾನೆ. ಚಿಕ್ಕಪ್ಪನ ಮಾತಿಗೆ ರೋಮಿಯೋ ನಿರಾಕರಿಸಿದಾಗ ಅವನ ಗೆಳೆಯ ಮರ್ಕುಟಿಯೋ ಅವನನ್ನು ಒತ್ತಾಯ ಮಾಡಿ ರೊಸಾಲಿನಳನ್ನು ಭೇಟಿಯಾಗಲು ಕ್ಯಾಪುಲೆಟನ ಪಾರ್ಟಿಗೆ ಕಳುಹಿಸುತ್ತಾನೆ.
ರೊಸಾಲಿನಳನ್ನು ಭೇಟಿಯಾಗುವುದಕ್ಕಾಗಿ ರೋಮಿಯೋ ತಮ್ಮ ಬದ್ಧವೈರಿ ಕ್ಯಾಪುಲೆಟನ ಪಾರ್ಟಿಗೆ ಅನುಮತಿಯಿಲ್ಲದೆ ನುಗ್ಗುತ್ತಾನೆ. ಪಾರ್ಟಿಯಲ್ಲಿ ಎಲ್ಲರೂ ಬರೀ ಕಣ್ಣುಗಳಷ್ಟೇ ಕಾಣುವಂತೆ ಮುಖಕ್ಕೆ ಮುಖವಾಡಗಳನ್ನು ಹಾಕಿಕೊಂಡು ಮಧ್ಯ ಸೇವಿಸಿ ಕುಣಿಯುತ್ತಿರುತ್ತಾರೆ. ರೋಮಿಯೋ ಕೂಡ ಮುಖಕ್ಕೆ ಮುಖವಾಡವನ್ನು ಧರಿಸಿ ಆ ಪಾರ್ಟಿಯಲ್ಲಿ ರೊಸಾಲಿನಳನ್ನು ಹುಡುಕಲು ಪ್ರಾರಂಭಿಸುತ್ತಾನೆ. ಆತ ಎಷ್ಟೇ ಹುಡುಕಿದರೂ ಅವನಿಗೆ ರೊಸಾಲಿನ ಸಿಗುವುದಿಲ್ಲ. ಆದರೆ ಅವನಿಗೆ ಅವಳ ಬದಲಾಗಿ ಕ್ಯಾಪುಲೆಟನ ಮಗಳಾದ ಜ್ಯೂಲಿಯಟ್ ಸಿಗುತ್ತಾಳೆ. ರೋಮಿಯೋ ಜ್ಯೂಲಿಯಟಳ ಸುಂದರವಾದ ಕಣ್ಣುಗಳನ್ನು ನೋಡಿ ಅವಳೆಡೆಗೆ ಆಕರ್ಷಿತನಾಗುತ್ತಾನೆ. ಅಷ್ಟರಲ್ಲಿ ಜ್ಯೂಲಿಯಟಳ ಚಿಕ್ಕಪ್ಪ ಟೈಬಾಲ್ಟ ರೋಮಿಯೊನನ್ನು ಗುರ್ತಿಸುತ್ತಾನೆ. ವೈರಿ ಕುಟುಂಬದ ಕುಡಿಯನ್ನು ಹೊಸಕಿ ಹಾಕಬೇಕು ಎಂಬ ಯೋಚನೆ ಟೈಲಾಬ್ಟನ ತಲೆಯಲ್ಲಿ ಬರುತ್ತದೆ. ಆದರೆ ಸಂತಸದ ಪಾರ್ಟಿಯಲ್ಲಿ ರಕ್ತದೊಕಳಿಯನ್ನು ಆಡುವುದು ಉಚಿತವಲ್ಲವೆಂದು ಆತ ಸುಮ್ಮನಾಗುತ್ತಾನೆ. ರೋಮಿಯೋ ಜ್ಯೂಲಿಯಟಳೊಂದಿಗೆ ಮಾತನಾಡಲು ಮುಂದಾಗುತ್ತಾನೆ. ಆದರೆ ಟೈಬಾಲ್ಟ ಮಧ್ಯ ಪ್ರವೇಶಿಸಿದಾಗ ರೋಮಿಯೋ ಅಲ್ಲಿಂದ ಫರಾರಿಯಾಗುತ್ತಾನೆ.
ರೋಮಿಯೋ ಜಗಳವಾಡಿಕೊಂಡು ದೂರಾದ ರೊಸಾಲಿನಳನ್ನು ಮರೆತು ಜ್ಯೂಲಿಯಟಳನ್ನು ಪ್ರೀತಿಸಲು ಪ್ರಾರಂಭಿಸುತ್ತಾನೆ. ಕಣ್ಣುಗಳಿಂದ ಬಳಿ ಸೆಳೆದ ಸುಂದರಿ ಜ್ಯೂಲಿಯಟಳನ್ನು ಕನಸುಗಳೊಳಗೆ ಬಿಟ್ಟುಕೊಂಡು ನಿದ್ರೆ ಬಾರದೆ ಒದ್ದಾಡುತ್ತಾನೆ. ಮರುದಿನ ರೋಮಿಯೋ ಜ್ಯೂಲಿಯಟಳನ್ನು ಭೇಟಿಯಾಗುವುದಕ್ಕಾಗಿ ರಹಸ್ಯವಾಗಿ ಅವಳ ಮನೆಗೆ ಹೋಗುತ್ತಾನೆ. ಅಷ್ಟರಲ್ಲಿ ಅವಳು ಸಹ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ಅವನಿಗಾಗಿ ಕಾಯುತ್ತಿರುತ್ತಾಳೆ. ಆತ ಅವಳ ಮನೆ ಪಕ್ಕದಲ್ಲಿದ್ದ ಮರವನ್ನೇರಿ ಅವಳ ಮಹಡಿ ಮನೆಯನ್ನು ಪ್ರವೇಶಿಸುತ್ತಾನೆ. ರೋಮಿಯೋ ಜ್ಯೂಲಿಯಟಳಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಆಕೆ ಅವನ ಧೈರ್ಯಕ್ಕೆ ಮೆಚ್ಚಿ ಅವನ ಪ್ರೀತಿಯನ್ನು ಕ್ಷಣಾರ್ಧದಲ್ಲೇ ಒಪ್ಪಿಕೊಳ್ಳುತ್ತಾಳೆ. ಆನಂತರ ಅವರಿಬ್ಬರೂ ಎಲ್ಲರ ಕಣ್ತಪ್ಪಿಸಿ ಜ್ಯೂಲಿಯಟಳ ಮನೆ ಬಾಲ್ಕನಿಯಲ್ಲಿ ದಿನಾಲು ಭೇಟಿಯಾಗುತ್ತಾರೆ. ಅವರ ಕಣ್ಣಾಮುಚ್ಚಾಲೆ ಆಟ ಹೀಗೆಯೇ ಕೆಲವು ದಿನಗಳವರೆಗೆ ಸಾಗುತ್ತದೆ. ಅವರಿಗೂ ನಂತರ ತಾವಿಬ್ಬರೂ ಬದ್ಧವೈರಿಗಳ ಕುಟುಂಬದ ಕುಡಿಗಳು ಎಂಬುದು ಗೊತ್ತಾಗುತ್ತದೆ. ಆದರೆ ಅವರಿಗೆ ತಾವು ಶತ್ರುಗಳೆಂಬ ಸತ್ಯ ಗೊತ್ತಾಗುವಷ್ಟರಲ್ಲಿ ಅವರಿಬ್ಬರೂ ಅನ್ಯೋನ್ಯ ಪ್ರೇಮಿಗಳಾಗಿರುತ್ತಾರೆ. ತಮ್ಮ ಕುಟುಂಬಗಳ ಮಧ್ಯೆಯಿರುವ ದ್ವೇಷಕ್ಕೆ ಹೆದರಿ ರೋಮಿಯೋ ಹಾಗೂ ಜ್ಯೂಲಿಯಟರಿಬ್ಬರು ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸರವರ ಸಹಾಯದಿಂದ ಗುಟ್ಟಾಗಿ ಮದುವೆಯಾಗುತ್ತಾರೆ.
ಗುಟ್ಟಾಗಿ ಮದುವೆಯಾದ ನಂತರವೂ ರೋಮಿಯೋ ಜ್ಯೂಲಿಯಟರಿಬ್ಬರು ಎಲ್ಲರ ಕಣ್ತಪ್ಪಿಸಿ ಕದ್ದು ಮುಚ್ಚಿ ಭೇಟಿಯಾಗುತ್ತಲೇ ಇರುತ್ತಾರೆ. ಜ್ಯೂಲಿಯಟಳ ಚಿಕ್ಕಪ್ಪ ಟೈಬಾಲ್ಟನಿಗೆ ಇನ್ನೂ ರೋಮಿಯೋ ಮೇಲಿನ ಕೋಪ ತಣ್ಣಗಾಗಿರುವುದಿಲ್ಲ. ಅವನು ರೋಮಿಯೋನ ಮೇಲೆ ಎಗರಿ ಬೀಳಲು ಕಾಯುತ್ತಿರುತ್ತಾನೆ. ಒಂದಿನ ರೋಮಿಯೋ ತನ್ನ ಗೆಳೆಯ ಮರ್ಕುಟಿಯೋನೊಂದಿಗೆ ಬೀದಿಯಲ್ಲಿ ಹೊರಟಿರುವುದನ್ನು ಕಂಡ ಟೈಬಾಲ್ಟ ಅವರೊಂದಿಗೆ ವಾಗ್ವಾದ ನಡೆಸುತ್ತಾನೆ. ಜ್ಯೂಲಿಯಟಳ ಸಂಬಂಧಿ ಎಂಬ ಕಾರಣಕ್ಕೆ ರೋಮಿಯೋ ಸುಮ್ಮನಾಗುತ್ತಾನೆ. ಆದರೆ ಅವನ ಗೆಳೆಯ ಮರ್ಕುಟಿಯೋ ಟೈಬಾಲ್ಟನೊಂದಿಗೆ ಕೈಕೈ ಮಿಲಾಯಿಸುತ್ತಾನೆ. ಈ ಹೊಡೆದಾಟದಲ್ಲಿ ಟೈಬಾಲ್ಟ ಮರ್ಕುಟಿಯೋನನ್ನು ಸಾಯಿಸುತ್ತಾನೆ. ನಂತರ ರೊಚ್ಚಿಗೆದ್ದ ರೋಮಿಯೋ ಟೈಬಾಲ್ಟನನ್ನು ಸಾಯಿಸುತ್ತಾನೆ.
ಶಾಂತವಾಗಿದ್ದ ವೆರೊನಾ ನಗರ ಟೈಬಾಲ್ಟನ ಕೊಲೆಯಿಂದಾಗಿ ಮತ್ತೆ ಅಶಾಂತವಾಗುತ್ತದೆ. ಕ್ಯಾಪುಲೆಟ್ ಮತ್ತು ಮಾಂಟೆಗ್ಯೂ ಕುಟುಂಬಗಳ ನಡುವೆ ಮಧ್ಯೆ ಮುಸುಕಿನ ಗುದ್ದಾಟ ಪ್ರಾರಂಭವಾಗುತ್ತದೆ. ನಗರದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪ್ರಿನ್ಸ್ ಎಸ್ಕಾಲಸ್ ರೋಮಿಯೋನನ್ನು ಗಡಿಪಾರು ಮಾಡುತ್ತಾನೆ. ಒಂದು ವೇಳೆ ರೋಮಿಯೋ ಮರಳಿ ಬಂದರೆ ಅವನನ್ನು ನೇರವಾಗಿ ಗಲ್ಲಿಗೇರಿಸಲಾಗುವುದೆಂದು ಘೋಷಿಸುತ್ತಾನೆ. ರೋಮಿಯೋ ಮಾಡಿಕೊಂಡ ಯಡವಟ್ಟಿನಿಂದಾಗಿ ಜ್ಯೂಲಿಯಟ್ ಕಂಗಾಲಾಗುತ್ತಾಳೆ. ಅವತ್ತಿನ ರಾತ್ರಿ ರೋಮಿಯೋ ಜ್ಯೂಲಿಯಟಳನ್ನು ರಹಸ್ಯವಾಗಿ ಭೇಟಿಯಾಗುತ್ತಾನೆ. ಅವರಿಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಅಳುತ್ತಾರೆ. ನಂತರ ಅವರಿಬ್ಬರೂ ತಮ್ಮ ಮೊದಲ ರಾತ್ರಿಯ ಮಿಲನವನ್ನು ಆಚರಿಸುತ್ತಾರೆ. ಇನ್ಮುಂದೆ ತನಗೆ ರೋಮಿಯೋ ಸಿಗಲ್ಲವೆಂದು ಭಾವಿಸಿ ಜ್ಯೂಲಿಯಟ್ ತನ್ನನ್ನು ಅವನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾಳೆ. ಸೂರ್ಯ ಕಣ್ಣು ಬಿಡುವಷ್ಟರಲ್ಲಿಯೇ ರೋಮಿಯೋ ಜ್ಯೂಲಿಯಟಳಿಗೆ ಬಾಯ್ ಹೇಳಿ ವೆರೊನಾ ನಗರ ಬಿಟ್ಟು ಸಮೀಪದ ನಗರ ಸೇರುತ್ತಾನೆ.
ರೋಮಿಯೋ ವೆರೊನಾ ನಗರದಿಂದ ಶಾಶ್ವತವಾಗಿ ದೂರಾದಾಗ ಜ್ಯೂಲಿಯಟ್ ದು:ಖದಿಂದ ತತ್ತರಿಸುತ್ತಾಳೆ. ಅವಳ ತಾಯಿಗೆ ಅವಳ ಅಳುವಿನ ಹಿಂದಿರುವ ಅಸಲಿ ಕಾರಣ ಗೊತ್ತಾಗುತ್ತದೆ. ಅವರು ಅವಳಿಗೆ ಕೌಂಟ್ ಪ್ಯಾರಿಸನನ್ನು ಸದ್ಯಕ್ಕೆ ಮದುವೆಯಾಗುವಂತೆ ಒತ್ತಾಯಿಸುತ್ತಾರೆ. ಆದರೆ ಆಕೆ ತಾಯಿಯ ಒತ್ತಾಯಕ್ಕೆ ಮಣಿಯುವುದಿಲ್ಲ. ಏಕೆಂದರೆ ಆಕೆ ಈಗಾಗಲೇ ರೋಮಿಯೋನನ್ನು ಮದುವೆಯಾಗಿ ಅವನೊಂದಿಗೆ ತನ್ನ ಮೈ ಮನಸ್ಸುಗಳೆರಡನ್ನು ಹಂಚಿಕೊಂಡಿರುತ್ತಾಳೆ. ಮನೆಯವರ ಭಯಕ್ಕೆ ಜ್ಯೂಲಿಯಟ ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸನನ್ನು ಭೇಟಿಯಾಗಿ ಸಹಾಯಕ್ಕಾಗಿ ಅಂಗಲಾಚುತ್ತಾಳೆ. ಆಗ ಆತ ಅವಳಿಗೆ "ಈ ಡ್ರಗ್ಸನ್ನು ತೆಗೆದುಕೋ, ಇದನ್ನು ಸೇವಿಸಿದ ನಂತರ ನೀನು ಎರಡ್ಮೂರು ಗಂಟೆಗಳ ಕಾಲ ಪ್ರಜ್ಞಾಹೀನಳಾಗುವೆ. ನೀನು ಸತ್ತಂತೆ ನಾಟಕವಾಡು. ಅಷ್ಟರಲ್ಲಿ ನಾನು ರೋಮಿಯೋನನ್ನು ನಿನ್ನ ಬಳಿಗೆ ಕಳುಹಿಸುವೆ. ನೀನು ಪ್ರಜ್ಞೆ ಬಂದ ನಂತರ ರೋಮಿಯೋನೊಂದಿಗೆ ದೂರ ಓಡಿ ಹೋಗಿ ಹಾಯಾಗಿ ಬದುಕು" ಎಂದೇಳಿ ಒಂದು ಔಷಧಿಯನ್ನು ಕೊಡುತ್ತಾನೆ. ಅವನು ಕೊಟ್ಟ ಔಷಧಿಯನ್ನು ತೆಗೆದುಕೊಂಡು ಜ್ಯೂಲಿಯಟ್ ಮನೆಗೆ ಬರುತ್ತಾಳೆ ಮತ್ತು ಆ ಔಷಧಿಯನ್ನು ಸೇವಿಸುತ್ತಾಳೆ. ಪಾದ್ರಿ ಹೇಳಿದಂತೆ ಅವಳು ಪ್ರಜ್ಞಾಹೀನಳಾಗುತ್ತಾಳೆ. ಅವಳು ಸತ್ತಳೆಂದು ತಿಳಿದು ಅವಳ ಮನೆಯವರು ಗೋಳಿಡುತ್ತಾರೆ.
ಪ್ರಜ್ಞಾಹೀನಳಾಗಿದ್ದ ಜ್ಯೂಲಿಯಟ್ ನಿಜವಾಗಿಯೂ ಸತ್ತಿದ್ದಾಳೆಂದು ತಿಳಿದು ಅವಳ ಮನೆಯವರು ಅವಳ ಅಂತ್ಯ ಸಂಸ್ಕಾರದ ಸಿದ್ಧತೆಗಳಿಗೆ ಮುಂದಾಗುತ್ತಾರೆ. ಅವರ ಸಂಪ್ರದಾಯದಂತೆ ಅವಳ ಶವವನ್ನು ಒಂದು ಕೋಫಿನಿನಲ್ಲಿ ಹಾಕಿ ಅವರ ಮನೆಯ ರಹಸ್ಯ ನೆಲಮಾಳಿಗೆಯಲ್ಲಿ ಇಡುತ್ತಾರೆ. ಅವಳು ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸ್ ಮಾತು ಕೇಳಿ ಇಷ್ಟೆಲ್ಲ ಮಾಡಿಕೊಂಡಿರುತ್ತಾಳೆ. ಅವಳಿಗೆ ತಿಳಿಸಿದಂತೆ ಅವಳ ಬಳಿ ರೋಮಿಯೋನನ್ನು ಕಳುಹಿಸುವುದಕ್ಕಾಗಿ ಒಬ್ಬ ದ್ಯೂತನನ್ನು ಕಳುಹಿಸುತ್ತಾನೆ. ಆದರೆ ಆ ದ್ಯೂತ ರೋಮಿಯೋನ ಬಳಿ ಹೋಗಿ ಫ್ರಿಯರ್ ಲಾರೆನ್ಸನ ಪ್ಲ್ಯಾನ್ ತಿಳಿಸುವ ಮುಂಚೆಯೇ ರೋಮಿಯೋ ವೆರೋನಾ ನಗರಕ್ಕೆ ವಾಪಸ್ಸು ಬಂದು ಬಿಡುತ್ತಾನೆ. ಜ್ಯೂಲಿಯಟಳ ಹುಸಿ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಗಡಿಪಾರಾದ ರೋಮಿಯೋನನ್ನು ತಲುಪಿರುತ್ತದೆ. ಅವಳ ಹುಸಿ ಸಾವಿನ ಸುದ್ದಿಯನ್ನು ನಿಜವೆಂದು ನಂಬಿ ರೋಮಿಯೋ ಬಿಕ್ಕಿ ಬಿಕ್ಕಿ ಅಳುತ್ತಾನೆ. ನಂತರ ಹತಾಷೆಯಲ್ಲಿ ಒಂದು ವಿಷದ ಬಾಟಲಿಯನ್ನು ಖರೀದಿಸಿ ಜ್ಯೂಲಿಯಟಳನ್ನು ನೋಡಲು ಹೋಗುತ್ತಾನೆ. ಜ್ಯೂಲಿಯಟಳ ಶವವನ್ನು ಇರಿಸಿದ್ದ ರಹಸ್ಯ ನೆಲಮಾಳಿಗೆಗೆ ರೋಮಿಯೋ ಪ್ರವೇಶಿಸಿರುತ್ತಾನೆ. ಅಷ್ಟರಲ್ಲಿ ಕೌಂಟ್ ಪ್ಯಾರಿಸ್ ಅವಳ ಮೃತ ಶರೀರದ ದರ್ಶನಕ್ಕಾಗಿ ಅಲ್ಲಿಗೆ ಬರುತ್ತಾನೆ. ಜ್ಯೂಲಿಯಟಳ ಸಾವಿಗೆ ಅವನೇ ಕಾರಣನೆಂದು ಕೋಪದಲ್ಲಿ ರೋಮಿಯೋ ಅವನೊಂದಿಗೆ ಕಾದಾಡಿ ಅವನನ್ನು ಸಾಯಿಸುತ್ತಾನೆ. ನಂತರ ಪ್ರಜ್ಞಾಹೀನಳಾಗಿ ಮಲಗಿದ್ದ ಜ್ಯೂಲಿಯಟ್ ನಿಜವಾಗಿಯೂ ಸತ್ತಿದ್ದಾಳೆಂದು ಭಾವಿಸಿ ಅವಳ ಹಣೆಗೆ ಮುತ್ತಿಟ್ಟು ರೋಮಿಯೋ ತಾನು ತಂದಿದ್ದ ವಿಷವನ್ನು ಕುಡಿದು ಪ್ರಾಣ ಬಿಡುತ್ತಾನೆ.
ರೋಮಿಯೋ ಸತ್ತ ಕೆಲವು ಗಂಟೆಗಳ ನಂತರ ಜ್ಯೂಲಿಯಟಳಿಗೆ ಪ್ರಜ್ಞೆ ಬರುತ್ತದೆ. ಆಗ ಆಕೆ ರಕ್ತಸಿಕ್ಕವಾದ ರೋಮಿಯೋನ ಚೂರಿಯನ್ನು ಕಂಡು ಗಾಬರಿಯಾಗುತ್ತಾಳೆ. ಜೊತೆಗೆ ಸತ್ತ ರೋಮಿಯೋನನ್ನು ನೋಡಿ ಎದೆ ಬಡಿದುಕೊಂಡು ಅಳುತ್ತಾಳೆ. ಅವಳಿಂದ ಅವನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. "ಯಾರೊಂದಿಗೆ ನಾನು ಓಡಿಹೋಗಿ ಹೊಸ ಜೀವನ ಪ್ರಾರಂಭಿಸಬೇಕು ಎಂದುಕೊಂಡಿದ್ದೇನೋ ಈಗ ಅವನೇ ಸತ್ತು ಮಲಗಿರುವಾಗ ಬದುಕಿ ನಾನೇನು ಸಾಧಿಸಲಿ?" ಎಂಬ ಹತಾಷೆಯಲ್ಲಿ ಜ್ಯೂಲಿಯಟ್ ಚೂರಿಯಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾಳೆ. ಅವಳು ನಿಜವಾಗಿಯೂ ಸತ್ತ ನಂತರ ಅವಳ ಮನೆಯವರು ಆ ರಹಸ್ಯ ನೆಲ ಮಾಳಿಗೆಗೆ ಬರುತ್ತಾರೆ. ಅವರು ಅಲ್ಲಿನ ಪ್ಯಾರಿಸನ ಕೊಲೆ, ರೋಮಿಯೋ ಜ್ಯೂಲಿಯಟರ ಆತ್ಮಹತ್ಯೆ ಎಲ್ಲವನ್ನೂ ನೋಡಿ ಬೆಚ್ಚಿ ಬೀಳುತ್ತಾರೆ. ಅಷ್ಟರಲ್ಲಿ ಪ್ರಿನ್ಸ್ ಎಸ್ಕಾಲಸ್ ಸಹ ಬರುತ್ತಾನೆ. ಅವನ ಬೆನ್ನಿಂದೆ ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸ್ ಬಂದು ಅವರಿಬ್ಬರ ಮನೆಯವರಿಗೆ ಅವರ ಪ್ರೇಮಕಥೆಯನ್ನು, ರಹಸ್ಯ ವಿವಾಹವನ್ನು ಮತ್ತು ಸತ್ತಂತೆ ನಾಟಕವಾಡಿ ಓಡಿ ಹೋಗುವ ಯೋಜನೆಯನ್ನು ವಿವರಿಸುತ್ತಾನೆ. ರೋಮಿಯೋ ಜ್ಯೂಲಿಯಟರ ದಾರುಣ ಸಾವಿಗೆ ಅವರಿಬ್ಬರ ಮನೆಯವರು ಮರಗುತ್ತಾರೆ. ನಂತರ ಪ್ರಿನ್ಸ್ ಎಸ್ಕಾಲಸ್ ಅವರಿಬ್ಬರ ಮನೆಯವರಿಗೆ ಬುದ್ಧಿ ಹೇಳಿ ರಾಜಿಯಾಗುವಂತೆ ಆದೇಶಿಸುತ್ತಾನೆ. ಈ ರೀತಿ ಕ್ಯಾಪುಲೆಟ್ ಮತ್ತು ಮಾಂಟೆಗ್ಯೂ ಕುಟುಂಬಗಳ ಮಧ್ಯೆ ಎಷ್ಟೋ ವರ್ಷಗಳಿಂದ ಇದ್ದ ಸೇಡು, ದ್ವೇಷ ಎಲ್ಲವೂ ರೋಮಿಯೋ ಜ್ಯೂಲಿಯಟರ ಸಾವಿನೊಂದಿಗೆ ಅಂತ್ಯವಾಗುತ್ತದೆ.
ದೂರ ಓಡಿ ಹೋಗಿ ಒಂದಾಗಿ ಬಾಳಬೇಕೆಂದಿದ್ದ ಪ್ರೇಮಿಪಕ್ಷಿಗಳು ಸಾವಿನಲ್ಲಿ ಒಂದಾಗಿ ಎರಡು ಬದ್ಧವೈರಿಗಳನ್ನು ಒಂದಾಗಿಸುತ್ತವೆ. ಇದಿಷ್ಟು ರೋಮಿಯೋ ಜ್ಯೂಲಿಯಟರ್ ಪ್ರೇಮಕಥೆ. ಈ ಕಥೆ ನಿಮಗಿಷ್ಟವಾಗಿದ್ದರೆ ಇದನ್ನು ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಜೊತೆಗೆ ಈ ಪ್ರೇಮಕಥೆಯ ಬಗ್ಗೆ ನಿಮಗನ್ನಿಸಿದ್ದನ್ನು ಕಮೆಂಟ್ ಮಾಡಿ. ಶೇಕ್ಸ್‌ಪಿಯರ್ ಸತ್ತ ಮೇಲೂ ಬದುಕಿದ್ದಾನೆ ಎಂಬುದನ್ನು ನಿರೂಪಿಸಲು ಈ ಪ್ರೇಮಕಥೆ ಸಾಕು. ಇದೇ ರೀತಿ ಪ್ರತಿದಿನ ಪ್ರೇಮಕತೆಗಳನ್ನು ಓದಲು ನನ್ನನ್ನು ಫೇಸ್ಬುಕ್, ಇನಸ್ಟಾಗ್ರಾಮ್, ಟ್ವಿಟರ್ ಇತ್ಯಾದಿಗಳಲ್ಲಿ ತಪ್ಪದೆ ಫಾಲೋ ಮಾಡಿ....
11) ಸಲೀಮ ಅನಾರ್ಕಲಿ ಪ್ರೇಮಕಥೆ : Love Story of Salim Anarkali in Kannada
ಮೊಘಲ ಸಾಮ್ರಾಟ ಅಕ್ಬರನ ಮಗನಾದ ಸಲೀಮ ಬಾಲ್ಯದಲ್ಲಿ ಅತ್ಯಂತ ತುಂಟ ಹಾಗೂ ಹಟಮಾರಿಯಾಗಿದ್ದನು. ಅವನ ಹಟಮಾರಿತನವನ್ನು ಹೋಗಲಾಡಿಸಲು ಅಕ್ಬರ ಅವನನ್ನು ದೂರದ ಸೇನಾ ಶಾಲೆಗೆ ಕಳುಹಿಸಿದನು. ಸಲೀಮ ಸೇನಾ ಶಾಲೆಯಲ್ಲಿ ತನ್ನ ಶಿಕ್ಷಣ ಹಾಗೂ ಶಸ್ತ್ರಾಭ್ಯಾಸವನ್ನು ಪೂರೈಸಿಕೊಂಡು 14 ವರ್ಷಗಳ ನಂತರ ಮರಳಿ ಬಂದನು. ತನ್ನ ಮಗ ಮನೆಗೆ ಬಂದ ಖುಷಿಯಲ್ಲಿ ಅಕ್ಬರ ತನ್ನ ಅರಮನೆಯಲ್ಲಿ ಒಂದು ದೊಡ್ಡ ಮುಜ್ರಾವನ್ನು (ಸಮಾರಂಭವನ್ನು) ಏರ್ಪಡಿಸಿದನು. ಆ ಸಮಾರಂಭದ ಆಕರ್ಷಣೆಯನ್ನು ಹೆಚ್ಚಿಸುವುದಕ್ಕಾಗಿ ತನ್ನ ನೆಚ್ಚಿನ ನರ್ತಕಿಯಾದ ನದಿರಾಳನ್ನು ಆಹ್ವಾನಿಸಿದನು. ನದಿರಾಳ ನಿಜವಾದ ಹೆಸರು "ಶರಿಫ ಊನ್ ನಿಸ್ಸಾ" ಎಂದಿತ್ತು. ಅವಳ ಸೌಂದರ್ಯ ಹಾಗೂ ನೃತ್ಯ ಕಲೆಯನ್ನು ಮೆಚ್ಚಿ ಜನ ಅವಳಿಗೆ ಅನಾರ್ಕಲಿ ಎಂಬ ಬಿರುದನ್ನು ಕೊಟ್ಟಿದ್ದರು. ಅನಾರ್ಕಲಿ ಎಂದರೆ ಸೌಂದರ್ಯದ ಮೊಗ್ಗು ಎಂದರ್ಥ. ಅನಾರ್ಕಲಿ ಅಕ್ಬರನ ನೆಚ್ಚಿನ ನರ್ತಕಿಯಾಗಿದ್ದಳು. ಹೀಗಾಗಿ ಅಕ್ಬರ ಸಮಾರಂಭದಲ್ಲಿ ಅವಳ ನೃತ್ಯವನ್ನು ಏರ್ಪಡಿಸಿದನು.
ಸಮಾರಂಭದಲ್ಲಿ ಅನಾರ್ಕಲಿಯ ಸೌಂದರ್ಯ ಹಾಗೂ ನೃತ್ಯ ಕಲೆಗಳನ್ನು ನೋಡಿ ಸಲೀಮ ಅವಳ ಮೇಲೆ ಮೋಹಿತನಾದನು. ಆತ ಅವಳನ್ನು ಆಳವಾಗಿ ಪ್ರೀತಿಸಲು ಪ್ರಾರಂಭಿಸಿದನು. ಆದರೆ ಅನಾರ್ಕಲಿ ಅವನಿಂದ ದೂರ ಉಳಿಯಲು ಪ್ರಯತ್ನಿಸಿದಳು. ಏಕೆಂದರೆ ಆಕೆ ಬರೀ ನೃತ್ಯಗಾರ್ತಿಯಾಗಿರಲಿಲ್ಲ. ಅವಳು ನಗರದ ಪ್ರಮುಖ ವೈಷ್ಯ ಸಹ ಆಗಿದ್ದಳು. ಅವಳಿಗೆ ತನ್ನ ಯೋಗ್ಯತೆ ಏನೆಂಬುದು ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿ ಆಕೆ ಅವನಿಂದ ದೂರ ಉಳಿಯಲು ಸಾಕಷ್ಟು ಪ್ರಯತ್ನ ಪಟ್ಟಳು. ಆದರೆ ಸಲೀಮ ಅವಳ ಬೆನ್ನು ಬಿಡಲಿಲ್ಲ. ಆತ ಅವಳನ್ನು ಭೇಟಿಯಾಗುವುದಕ್ಕಾಗಿ, ಅವಳೊಂದಿಗೆ ಸೇರುವುದಕ್ಕಾಗಿ ಎಲ್ಲ ಸರ ಹದ್ದುಗಳನ್ನು ಮೀರಿದನು. ಕೊನೆಗೆ ಆಕೆ ಅವನ ಪ್ರೀತಿಗೆ ಶರಣಾದಳು. ಸಲೀಮ ತನ್ನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾ ಸಾಗಿದನು. ಆದರೆ ಅಕ್ಬರನಿಗೆ ಗೊತ್ತಾದರೆ ತನ್ನ ಪ್ರಾಣಕ್ಕೆ ಸಂಚಕಾರ ಬರುವುದೆಂದು ಹೆದರಿ ಅನಾರ್ಕಲಿ ತನ್ನ ಪ್ರೀತಿಯನ್ನು ಬಚ್ಚಿಡುವ ಹರಸಾಹಸ ಮಾಡಿದಳು.
ಒಂದಿನ ಸಲೀಮ ಅನಾರ್ಕಲಿಯ ಪ್ರೀತಿ ಅಕ್ಬರನ ಕಿವಿಗೆ ತಲುಪಿತು. ತನ್ನ ಮಗ ಸಲೀಮ ವೈಷ್ಯ ಅನಾರ್ಕಲಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಮಾತನ್ನು ಅವನಿಂದ ಸುಲಭವಾಗಿ ಅರಗಿಸಿಕೊಳ್ಳಲಾಗಲಿಲ್ಲ. ಏಕೆಂದರೆ ಎಲ್ಲರಂತೆ ಅವನು ಸಹ ಅನಾರ್ಕಲಿಯೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದ್ದನು. ಅಕ್ಬರ ಸಲೀಮನನ್ನು ಕರೆದು ಅನಾರ್ಕಲಿಯಿಂದ ದೂರ ಉಳಿಯಲು ಹೇಳಿದನು. ಆದರೆ ಸಲೀಮ ಅವನ ಮಾತನ್ನು ಧಿಕ್ಕರಿಸಿ ಮತ್ತೆ ಗುಟ್ಟಾಗಿ ಅನಾರ್ಕಲಿಯೊಂದಿಗೆ ಸಂಬಂಧ ಬೆಳೆಸಿದನು. ಇದರಿಂದ ಕೆರಳಿದ ಅಕ್ಬರ ಅನಾರ್ಕಲಿಯನ್ನು ಸಲೀಮನ ಕಣ್ಣುಗಳಿಂದ ಅಡಗಿಸಿ ರಹಸ್ಯ ಬಂಧನದಲ್ಲಿ ಇರಿಸಿದನು. ಈ ವಿಷಯ ತಿಳಿದ ಸಲೀಮ ತನ್ನ ತಂದೆ ಅಕ್ಬರನ ಮೇಲೆ ಯುದ್ಧ ಸಾರಿದನು. ಆದರೆ ಅಕ್ಬರನ ಬೃಹತ ಸೇನೆ ಸಲೀಮನ ಸಣ್ಣ ಸೇನೆಯನ್ನು ಸುಲಭವಾಗಿ ಬಗ್ಗು ಬಡಿಯಿತು. ಅಕ್ಬರ್ ಸಲೀಮನನ್ನು ಬಂಧಿಸಿ ಮರಣ ದಂಡನೆ ವಿಧಿಸಿದನು.
ತನ್ನ ಪ್ರಿಯಕರ ಮಾಡಿಕೊಂಡ ಅನಾಹುತದಿಂದ ಅನಾರ್ಕಲಿ ವಿಚಲಿತಳಾದಳು. ಆಕೆ ಅಕ್ಬರನ ಬಳಿ ಹೋಗಿ ಸಲೀಮನನ್ನು ಕ್ಷಮಿಸಿ ಸಾಯಿಸದೇ ಸುಮ್ಮನೆ ಬಿಡಲು ಅಂಗಲಾಚಿ ಬೇಡಿಕೊಂಡಳು. ಅದಕ್ಕೆ ಅಕ್ಬರ್ "ನೀನು ಅವನಿಂದ ಶಾಶ್ವತವಾಗಿ ದೂರಾಗಲು ಒಪ್ಪಿದರೆ ನಾನು ಅವನನ್ನು ಕ್ಷಮಿಸುವೆ" ಎಂದೇಳಿದನು. ಅದಕ್ಕಾಗಿ ಅನಾರ್ಕಲಿ ಒಪ್ಪಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿದಳು. ಅಕ್ಬರ್ ಹೇಳಿದಂತೆ ಸಲೀಮನಿಂದ ಶಾಶ್ವತವಾಗಿ ದೂರಾಗಲು ಮುಂದಾದಳು. ಸಲೀಮನ ತಲೆಯಿಂದ ಅನಾರ್ಕಲಿಯನ್ನು ಕೊಲ್ಲುವುದಕ್ಕಾಗಿ ಅಕ್ಬರ ಅವಳನ್ನು ಒಂದು ಗುಮ್ಮಟದಲ್ಲಿ ಸಲೀಮನ ಕಣ್ಣೆದುರಿಗೇನೆ ಜೀವಂತ ಸಮಾಧಿ ಮಾಡಿದನು. ಅವಳು ಸತ್ತಳೆಂದು ತಿಳಿದು ಸಲೀಮ ಸ್ವಲ್ಪ ದಿನ ಕೊರಗಿ ಅವಳನ್ನು ಮರೆತು ಬಿಟ್ಟನು. ಆದರೆ ಅವನೆಂದುಕೊಂಡಂತೆ ಅನಾರ್ಕಲಿ ಸತ್ತಿರಲಿಲ್ಲ. ಆಕೆ ಅಕ್ಬರನ ಯೋಜನೆಯಂತೆ ಒಂದು ರಹಸ್ಯ ಮಾರ್ಗದ ಮೂಲಕ ಗುಮ್ಮಟದಿಂದ ಹೊರಬಂದು ದೇಶ ಬಿಟ್ಟು ಪಲಾಯನ ಮಾಡಿದ್ದಳು. ಪ್ರಿಯಕರನ ರಕ್ಷಣೆಗಾಗಿ ಆಕೆ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಆಕೆ ಶಾಶ್ವತವಾಗಿ ದೇಶಾಂತರ ಹೋದಳು. ಆಕೆ ಮರಳಿ ಯಾವತ್ತೂ ಬರಲಿಲ್ಲ.
ಅನಾರ್ಕಲಿಯ ಅಗಲಿಕೆಯಿಂದ ಭಗ್ನಪ್ರೇಮಿಯಾದ ಸಲೀಮ ಅಕ್ಬರನ ನಿಧನಾನಂತರ ಮೊಘಲ ಸಾಮ್ರಾಟ ಜಹಾಂಗೀರನಾದನು. ಅವನು ಸಾಯುವಾಗ ಅವನ ತುಟಿಗಳ ಮೇಲೆ ಅನಾರ್ಕಲಿಯ ಹೆಸರಿತ್ತು. ಇದಿಷ್ಟು ಸಲೀಮ ಅನಾರ್ಕಲಿಯ ಪ್ರೇಮಕಥೆ. ಈ ಪ್ರೇಮಕಥೆ ನಿಮಗಿಷ್ಟವಾಗಿದ್ದರೆ ತಪ್ಪದೆ ಇದನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ. ಇದೇ ರೀತಿ ಪ್ರೇಮಕಥೆಗಳನ್ನು ಓದಲು ಫೇಸ್ಬುಕ್, ಇನಸ್ಟಾಗ್ರಾಮ್, ಟ್ವೀಟರಗಳಲ್ಲಿ ನನ್ನನ್ನು ಫಾಲೋ ಮಾಡಿ...
12) ದುಷ್ಯಂತ - ಶಕುಂತಲೆಯ ಪ್ರೇಮಕಥೆ : Love Story of Dushyant and Shakuntala in Kannada
ಮೇನಕೆಯು ದೇವೇಂದ್ರನ ಆದೇಶದ ಮೇರೆಗೆ ನನ್ನ ಮಹಾ ತಪಸ್ಸನ್ನು ಮುರಿಯಲು ಬಂದಿದ್ದಾಳೆ ಅಷ್ಟೇ, ಅವಳ ಪ್ರೀತಿ ಪ್ರೇಮವೆಲ್ಲ ನಾಟಕವೆಂದು ಗೊತ್ತಾದಾಗ ವಿಶ್ವಾಮಿತ್ರ ಮುನಿ ಅವಳನ್ನು ಶಪಿಸಿ ಕಾಡಿಗೆ ತೆರಳಿ ಮತ್ತೆ ತಪಸ್ಸನ್ನು ಪ್ರಾರಂಭಿಸಿದನು. ಮೇನಕೆ ತನ್ನ ಹಾಗೂ ವಿಶ್ವಾಮಿತ್ರರ ಪ್ರೇಮದ ಫಲವಾಗಿ ಜನಿಸಿದ ಹೆಣ್ಣು ಮಗುವನ್ನು ಕಣ್ವ ಮಹರ್ಷಿಗಳ ಕೈಗಿಟ್ಟು ಸ್ವರ್ಗಕ್ಕೆ ಹಿಂತಿರುಗಿದಳು. ಕಣ್ವರು ಆ ಮಗುವನ್ನು ಅತ್ಯಂತ ಮುದ್ದಿನಿಂದ ಸಾಕಿ ಸಲುಹಿದರು. ಅವರ ಸಾಕು ಮಗಳೇ ಶಕುಂತಲೆ. ಅವಳು ಅತ್ಯಂತ ಸುಂದರಿಯಾಗಿದ್ದಳು. ಬೆಳದಿಂಗಳ ಬೆಳಕನ್ನು ಸಹಿಸದಷ್ಟು ಕೋಮಲೆ ಅವಳಾಗಿದ್ದಳು.
ಪೌರವ ಸಾಮ್ರಾಜ್ಯವನ್ನು ದುಷ್ಯಂತನೆಂಬ ರಾಜ ಆಳಿಕೊಂಡಿದ್ದನು. ಅವನು ತನ್ನ ಆಕರ್ಷಕ ಮೈಕಟ್ಟು, ದಕ್ಷ ಆಡಳಿತ ಮತ್ತು ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದನು. ಒಮ್ಮೆ ಆಶ್ರಮವಾಸಿಗಳು ಕಾಡಿನಲ್ಲಿ ಕ್ರೂರ ಮೃಗಗಳ ಹಾವಳಿ ಹೆಚ್ಚಾಗಿದೆ ಎಂದು ರಾಜ ದುಷ್ಯಂತನ ಬಳಿ ದೂರು ನೀಡಿದರು. ಅವರ ದೂರಿಗೆ ಸ್ಪಂದಿಸಿ ಪ್ರಜಾಪ್ರಿಯ ರಾಜನಾದ ದುಷ್ಯಂತ ಆ ಕ್ರೂರ ಮೃಗಗಳನ್ನು ಬೇಟೆಯಾಡಲು ಕಾಡಿಗೆ ಹೋದನು.
ರಾಜಾ ದುಷ್ಯಂತ ತನ್ನ ಅಂಗರಕ್ಷಕರೊಂದಿಗೆ ಕಾಡಿನಲ್ಲಿ ಆಶ್ರಮವಾಸಿಗಳಿಗೆ ತೊಂದರೆ ಕೊಡುತ್ತಿದ್ದ ಕ್ರೂರ ಮೃಗಗಳನ್ನು ಬೇಟೆಯಾಡಲು ಪ್ರಾರಂಭಿಸಿದನು. ಆಗ ಅವನ ಕಣ್ಣಿಗೊಂದು ಸುಂದರವಾದ ಜಿಂಕೆ ಕಂಡಿತು. ರಾಜಾ ದುಷ್ಯಂತ ಕ್ರೂರ ಮೃಗಗಳನ್ನು ಮರೆತು ಆ ಸುಂದರವಾದ ಜಿಂಕೆಯ ಬೆನ್ನಟ್ಟಿದನು. ಅದರ ಮೀನಿನ ಹೆಜ್ಜೆಗಳನ್ನು ಹದ್ದಿನಂತೆ ಹಿಂಬಾಲಿಸಿದನು. ಕಾಡಿನಲ್ಲಿ ಆ ಜಿಂಕೆ ವೇಗವಾಗಿ ಓಡಿದಂತೆ ಆತನು ಸಹ ಅದನ್ನು ರಥದಲ್ಲಿ ಕುಳಿತುಕೊಂಡು ವೇಗವಾಗಿ ಹಿಂಬಾಲಿಸಿದನು. ಸ್ವಲ್ಪ ಸಮಯದಲ್ಲಿ ಅವನ ರಥಕ್ಕೆ ಅಡ್ಡಲಾಗಿ ಕೆಲವು ತಪಸ್ವಿಗಳು ಎದುರಾದರು. ಆ ತಪಸ್ವಿಗಳು ದುಷ್ಯಂತ ರಾಜನಿಗೆ "ಮಹಾರಾಜನೇ, ಇದು ಆಶ್ರಮದ ಜಿಂಕೆ, ಇದನ್ನು ಕೊಲ್ಲದಿರು..." ಎಂದು ಆಜ್ಞಾಪಿಸಿದರು. ಅವರ ಮಾತನ್ನು ಗೌರವಿಸಿ ದುಷ್ಯಂತ ತನ್ನ ಬಿಲ್ಲು ಬಾಣಗಳನ್ನು ಪುನ: ರಥದಲ್ಲಿಟ್ಟು ಅವರಿಗೆ ನಮಸ್ಕರಿಸಿದನು. ಅವನ ನಯವಿನಯತೆಯನ್ನು ಮೆಚ್ಚಿ ಆ ತಪಸ್ವಿಗಳು ಅವನಿಗೆ "ದು:ಖಿತರಾದ ಆಶ್ರಮವಾಸಿಗಳನ್ನು ರಕ್ಷಿಸಲು ಬಂದ ನಿನ್ನಿಂದ ಅಪಚಾರವಾಗುವುದು ತಪ್ಪಿತು. ನಿನ್ನ ನಡೆನುಡಿಯಿಂದ ನಮಗೆ ಸಂತೋಷವಾಗಿದೆ. ನೀನು ಚಕ್ರವರ್ತಿಯಾಗುವಂಥ ಸಂತಾನವನ್ನು ಪಡೆಯುವೆ. ನಿನಗೆ ಶುಭವಾಗಲಿ..." ಎಂದು ಹಾರೈಸಿದರು. ಜೊತೆಗೆ "ಇಲ್ಲಿಯೇ ಸನಿಹದಲ್ಲಿ ಕಣ್ವ ಮಹರ್ಷಿಗಳ ಆಶ್ರಮವಿದೆ. ನೀನು ವಿಶ್ರಾಂತಿಯ ಸಮಯದಲ್ಲಿ ಆಶ್ರಮಕ್ಕೆ ಭೇಟಿ ನೀಡಿದರೆ ಅವರ ಆಶೀರ್ವಾದವು ಸಿಗುವುದು" ಎಂದೇಳಿ ಹೊರಟು ಹೋದರು.
ದುಷ್ಯಂತ ರಾಜ ಬೇಟೆಗಾಗಿ ಹಾಕಿಕೊಂಡ ರಕ್ಷಾ ಕವಚಗಳನ್ನು ಕಳಚಿಟ್ಟು ಕಣ್ವರ ದರ್ಶನಕ್ಕಾಗಿ ಆಶ್ರಮದ ಕಡೆಗೆ ಹೊರಟನು. ಅನುಮಾಲಿನಿ ನದಿ ತೀರದಲ್ಲಿರುವ ಕಣ್ವರ ಆಶ್ರಮವನ್ನು ದೂರದಿಂದಲೇ ಕಂಡು ರಾಜಾ ದುಷ್ಯಂತ ರಥದಿಂದ ಇಳಿದು ವಿನಯಪೂರ್ವಕವಾಗಿ ಆಶ್ರಮವನ್ನು ಪ್ರವೇಶಿಸಿದನು. ಸುಂದರವಾದ ಹೂಗಿಡಗಳು, ಹಣ್ಣು ಹಂಪಲುಗಳ ಮರಗಳು ಆಶ್ರಮದ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದವು. ಶಕುಂತಲೆ ಸೇರಿ ಆಶ್ರಮದ ತಪಸ್ವಿ ಕನ್ನಿಕೆಯರೆಲ್ಲ ನೀರಿನ ಕೊಡಗಳನ್ನು ಹಿಡಿದುಕೊಂಡು ಗಿಡ ಮರಗಳಿಗೆ ನೀರಾಕುತ್ತಿದ್ದರು. ಗಿಡಮರ ಬಳ್ಳಿಗಳನ್ನು ಪ್ರೀತಿಯಿಂದ ಬೆಳೆಸುವ ಅವರ ಪರಿಯನ್ನು ನೋಡಿ ರಾಜಾ ದುಷ್ಯಂತ ಮಂತ್ರಮುಗ್ಧನಾದನು. ಅವನ ದೃಷ್ಟಿ ಗಾಳಿಯ ರಭಸಕ್ಕೆ ಬಳಕುವ ಬಳ್ಳಿಗಿಂತಲೂ ಕೋಮಲೆಯಾದ ಶಕುಂತಲೆಯ ಕಡೆಗೆ ಹರಿಯಿತು. ಆತ ಮರೆಯಲ್ಲಿದ್ದುಕೊಂಡು ಅವಳ ಚಟುವಟಿಕೆಗಳನ್ನು ಗಮನಿಸುತ್ತಾ ನಿಂತನು.
ಶಕುಂತಲೆ ಗಿಡಗಳಿಗೆ ಪ್ರೀತಿಯಿಂದ ನೀರೆರೆಯುತ್ತಿದ್ದಳು. ಅಷ್ಟರಲ್ಲಿ ಒಂದು ದುಂಬಿ ಬಂದು ಅವಳನ್ನು ಕಾಡತೊಡಗಿತು. ಆಕೆ ಆ ದುಂಬಿಯನ್ನು ದೂರ ಓಡಿಸಿದಷ್ಟು ಅದು ಮತ್ತೆ ಅವಳ ಸಮೀಪಕ್ಕೆ ಸುಳಿಯತೊಡಗಿತು. ಕೊನೆಗೆ ಅದನ್ನು ಹೆದರಿಸಲಾಗದೆ ಶಕುಂತಲೆ ಅವಳ ಗೆಳತಿಯರ ಸಹಾಯವನ್ನು ಕೇಳಿದಳು. ಆಗ ಅವರು "ನಿನ್ನನ್ನು ಆ ದೇವರೇ ರಕ್ಷಿಸಬೇಕು ಇಲ್ಲ ಈ ದೇಶದ ರಾಜ ದುಷ್ಯಂತನೇ ಕಾಪಾಡಬೇಕು..." ಎಂದು ಅವಳನ್ನು ಛೇಡಿಸಿದರು. ಆಗ ಮರದ ಮರೆಯಲ್ಲಿ ನಿಂತು ಎಲ್ಲವನ್ನೂ ನೋಡುತ್ತಿದ್ದ ದುಷ್ಯಂತ ಶಕುಂತಲೆಯ ಬಳಿ ಬಂದು "ನನ್ನ ರಾಜ್ಯದಲ್ಲಿ ನನ್ನ ಪ್ರೀತಿಯ ಪ್ರಜೆಗಳಿಗೆ ತೊಂದರೆ ಕೊಡುತ್ತಿರುವವರು ಯಾರು?" ಎಂದೇಳಿ ಅವಳಿಗೆ ತೊಂದರೆ ಕೊಡುತ್ತಿದ್ದ ದುಂಬಿಯನ್ನು ಹೊಡೆದು ದೂರ ಓಡಿಸಿದನು. ಆಕೆ ಅವನನ್ನು ನೋಡಿ ಆಶ್ಚರ್ಯಚಕಿತಳಾದಳು. ನಂತರ ಅವನನ್ನು ಆಶ್ರಮಕ್ಕೆ ಆಮಂತ್ರಿಸಿ ಅತಿಥಿ ಸತ್ಕಾರ ಮಾಡಿದಳು.
ಶಕುಂತಲೆಯ ಗೆಳತಿಯರಾದ ಪ್ರಿಯವಂದಾ ಹಾಗೂ ಅನುಸೂಯಾರಿಂದ ರಾಜಾ ದುಷ್ಯಂತ ಶಕುಂತಲೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಂಡನು. ಆಕೆ ಕಣ್ವರ ಸಾಕು ಮಗಳೆಂದು ತಿಳಿದ ನಂತರ ಅವಳನ್ನು ಗಂಧರ್ವ ವಿವಾಹವಾಗಿ ಅವಳೊಂದಿಗೆ ಅಲ್ಲಿಯೇ ಉಳಿದನು. ಕೆಲವು ದಿನಗಳ ಕಾಲ ಅವಳೊಂದಿಗೆ ಹಾಯಾಗಿ ಕಳೆದು, ನಂತರ ಆಶ್ರಮವಾಸಿಗಳಿಗೆ ಕಾಟ ಕೊಡುತ್ತಿದ್ದ ಕ್ರೂರ ಮೃಗಗಳನ್ನು ಬೇಟೆಯಾಡಿ ಮುಗಿಸಿದನು. ಕೆಲವು ದಿನಗಳ ನಂತರ ರಾಜ ಮರ್ಯಾದೆಯೊಂದಿಗೆ ಶಕುಂತಲೆಯನ್ನು ಅರಮನೆಗೆ ಕರೆಸಿಕೊಳ್ಳುವೆ ಎಂದೇಳಿ ರಾಜ ದುಷ್ಯಂತ ಅರಮನೆಗೆ ಮರಳಿದನು. ಶಕುಂತಲೆ ಅವನ ಕರೆಯುವಿಕೆಗೆ ಕಾಯುತ್ತಾ ಅವನ ಸವಿ ನೆನಪುಗಳಿಗೆ ಶರಣಾದಳು.
ಕಣ್ವ ಮಹರ್ಷಿಗಳು ಸೋಮನಾಥ ತೀರ್ಥಯಾತ್ರೆಯಿಂದ ಮರಳಿ ಆಶ್ರಮಕ್ಕೆ ಬಂದಾಗ ಶಕುಂತಲೆ ತಾನು ದುಷ್ಯಂತ ರಾಜನೊಂದಿಗೆ ಗಂಧರ್ವ ವಿವಾಹವಾಗಿರುವುದನ್ನು ತಿಳಿಸಿದಳು. ಅವಳನ್ನು ಹರಿಸಿ ಕಣ್ವರು ತಮ್ಮ ಪೂಜಾ ಪಾಠಗಳಲ್ಲಿ ನಿರತರಾದರು. ಆದರೆ ಶಕುಂತಲೆ ಯಾವಾಗಲೂ ದುಷ್ಯಂತನ ನೆನಪುಗಳಲ್ಲಿಯೇ ಕಳೆದು ಹೋಗುತ್ತಿದ್ದಳು. ಹೀಗೆ ಒಂದಿನ ಆಕೆ ನೀರಿನ ಅಲೆಗಳಲ್ಲಿ ದುಷ್ಯಂತನ ಪ್ರತಿಬಿಂಬವನ್ನು ಕಲ್ಪಿಸಿಕೊಂಡು ಮೈಮರೆತ್ತಿದ್ದಳು. ಅದೇ ಸಮಯಕ್ಕೆ ಕಣ್ವರು ಅವಳ ಬಳಿ ಬಂದರು. ಅವಳ ಎಲ್ಲ ಸಖಿಯರು ಕಣ್ವರಿಗೆ ನಮಸ್ಕರಿಸಿದರು. ಆದರೆ ಶಕುಂತಲೆ ದುಷ್ಯಂತನ ನೆನಪುಗಳಲ್ಲಿ ಅವರನ್ನು ನಿರ್ಲಕ್ಷಿಸಿದಳು. ಆಗ ಕಣ್ವರು ಕೋಪದಲ್ಲಿ ಅವಳಿಗೆ "ನೀನು ಯಾರ ನೆನಪುಗಳಲ್ಲಿ ಕಳೆದು ಹೋಗಿರುವೆಯೋ ಅವನು ನಿನ್ನನ್ನು ಮರೆತು ಬಿಡಲಿ..." ಎಂದು ಶಾಪವಿಟ್ಟರು. ಅವರ ಶಾಪದಿಂದಾಗಿ ದುಷ್ಯಂತ ಶಕುಂತಲೆಯನ್ನು ಮರೆತು ಬಿಟ್ಟನು.
ದುಷ್ಯಂತ ಶಕುಂತಲೆಯನ್ನು ಮದುವೆಯಾಗಿ ಒಂದು ವರ್ಷ ಕಳೆದು ಹೋದರೂ ಆತ ಅವಳನ್ನು ತನ್ನ ಅರಮನೆಗೆ ಕರೆಯಿಸಿಕೊಳ್ಳಲಿಲ್ಲ. ಏಕೆಂದರೆ ಕಣ್ವರ ಶಾಪದ ಪ್ರಭಾವದಿಂದಾಗಿ ಆತ ಅವಳನ್ನು ಮರೆತಿದ್ದನು. ಈ ಸಮಯದಲ್ಲಿ ಶಕುಂತಲೆ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಳು. ಆ ಮಗುವಿಗೆ ಕಣ್ವ ಮಹರ್ಷಿಗಳು ಸರ್ವದಮನ ಎಂದು ಹೆಸರಿಟ್ಟರು. ಶಕುಂತಲೆಯನ್ನು ಮತ್ತು ಮಗುವನ್ನು ದುಷ್ಯಂತನ ಅರಮನೆಗೆ ಬಿಟ್ಟು ಬರಲು ಕಣ್ವರು ತಮ್ಮ ಶಿಷ್ಯೆ ತಾಪಸಿಯನ್ನು ಕಳುಹಿಸಿದರು. ಆದರೆ ಶಕುಂತಲೆ ಮಗನೊಂದಿಗೆ ದುಷ್ಯಂತನ ಎದುರಿಗೆ ಬಂದಾಗ ಆತ ಅವರನ್ನು ಗುರ್ತಿಸಲೇ ಇಲ್ಲ. ಆತ ಅವಳೊಂದಿಗೆ ಅಪರಿಚಿತನಂತೆ ವರ್ತಿಸಿದನು.
ಶಕುಂತಲೆ ಕಣ್ಣೀರಾಕುತ್ತಾ ತಮ್ಮ ಪ್ರೇಮಕಥೆಯನ್ನು ಹೇಳಿದರೂ ಸಹ ದುಷ್ಯಂತ ಅವಳನ್ನು ಪತ್ನಿಯಾಗಿ ಸ್ವೀಕರಿಸಲಿಲ್ಲ. ಕೊನೆಗೆ ಆಕೆ ಅಳುತ್ತಾ ಅರಮನೆಯಿಂದ ಹೊರಬರುವಾಗ "ದುಷ್ಯಂತ, ನೀನು ತಪ್ಪು ಮಾಡುತ್ತಿರುವೆ. ಈಕೆ ಶಕುಂತಲೆ, ನಿನ್ನ ಧರ್ಮಪತ್ನಿ. ಈತ ನಿನ್ನ ಮಗ ಸರ್ವದಮನ. ನೀನು ಕಣ್ವರ ಶಾಪದಿಂದಾಗಿ ಇವರನ್ನು ಮರೆತಿರುವೆ..." ಎಂದು ಆಕಾಶವಾಣಿಯಾಯಿತು. ಆಕಾಶವಾಣಿಯನ್ನು ಕೇಳಿಸಿಕೊಂಡ ನಂತರ ದುಷ್ಯಂತನಿಗೆ ತನ್ನ ಹಾಗೂ ಶಕುಂತಲೆಯ ಪ್ರೇಮಕಥೆ ನೆನಪಾಯಿತು. ದುಷ್ಯಂತ ಶಕುಂತಲೆಗೆ ಕ್ಷಮೆ ಕೇಳಿ ಅವಳನ್ನು ಧರ್ಮಪತ್ನಿಯಾಗಿ ಸ್ವೀಕರಿಸಿದನು. ಅವರ ಮಗ ಸರ್ವದಮನ ಮುಂದೆ ಭರತ ಚಕ್ರವರ್ತಿಯಾದನು. ಅವನಿಂದಲೇ ನಮ್ಮ ದೇಶಕ್ಕೆ ಭಾರತವೆಂಬ ಹೆಸರು ಬಂದಿತು...
ಈ ರೀತಿ ಶಕುಂತಲೆಯ ಪ್ರೇಮಕಥೆ ಸುಖಾಂತ್ಯ ಕಂಡಿತು. ಆದರೆ ಕವಿರತ್ನ ಕಾಳಿದಾಸನು ತನ್ನ ಅಭಿಜ್ಞಾನ ಶಾಕುಂತಲೆ ನಾಟಕದಲ್ಲಿ "ದುಷ್ಯಂತ ರಾಜನು ಮುದ್ರೆಯುಂಗುರವನ್ನು ಕೊಡುವುದು, ಅದನ್ನು ಶಕುಂತಲೆ ಕಳೆದುಕೊಳ್ಳುವುದು, ನಂತರ ಅದು ಮೀನುಗಾರನ ಕೈಗೆ ಸಿಗುವುದು..." ಇಂಥ ಸಂಗತಿಗಳನ್ನು ಹೊಸದಾಗಿ ಸೃಷ್ಟಿಸಿದ್ದಾನೆ. ಮೂಲಕಥೆಯಲ್ಲಿ ಇವೆಲ್ಲ ಸಂಗತಿಗಳಿಲ್ಲ. ಆದರೆ ಕಾಳಿದಾಸನ ಕಲ್ಪನೆಗೆ ಸರಿಸಾಟಿ ಯಾರಿಲ್ಲ. I love his imagination. ನಾನು ಅವನ ಕಲ್ಪನೆಯನ್ನು ಪ್ರೀತಿಸುವೆ. ಈ ಪ್ರೇಮಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ಮತ್ತು ನಿಮ್ಮ ಪ್ರೀತಿಪಾತ್ರರೊಡನೆ ಶೇರ್ ಮಾಡಿ...
13) ಮರು ಮದುವೆ : ಕನ್ನಡ ರೊಮ್ಯಾಂಟಿಕ್ ಪ್ರೇಮ ಕಥೆ - Kannada Romantic Love Story - Remarriage Story in Kannada

ಈ ಪ್ರೀತಿ ಯಾವಾಗ ಹೇಗೆ ಯಾಕೆ ಹುಟ್ಟಿಕೊಳ್ಳುತ್ತೆ ಅಂತಾ ಹೇಳೊಕ್ಕಾಗಲ್ಲ. ಅನ್ವರ ಬೆಂಗಳೂರಿನ ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಸ್ಯಾಲರಿ ಪ್ಯಾಕೇಜೆನೋ ಚೆನ್ನಾಗಿತ್ತು. ಆದರೆ ಸಂತೋಷ ಅನ್ನೋದು ಸ್ವಲ್ಪವೂ ಇರಲಿಲ್ಲ. ಎಂಜಿನಿಯರಿಂಗಲ್ಲಿ ಸಿಂಗಲ್ ಸಂತನಾಗಿದ್ದವನು ಇನ್ನೂ ಸಿಂಗಲ್ ಸಂತನಾಗೆ ಇದ್ದನು. ಅವನ ಮನಸ್ಸಿಗೆ ಹಿಡಿಸುವ ಹುಡುಗಿ ಅವನಿಗಿನ್ನೂ ಸಿಕ್ಕಿರಲಿಲ್ಲ. ಮನೆಯಲ್ಲಿ ಅವನಿಗೆ ಹುಡುಗಿ ಹುಡುಕುತ್ತಿದ್ದರು. ಆದರೆ ಮನೆಯವರು ತೋರಿಸುವ ಪೆದ್ದು ಹುಡುಗಿಯನ್ನು ಮದುವೆಯಾಗುವಷ್ಟು ಪೆದ್ದನೂ ಅವನಾಗಿರಲಿಲ್ಲ. ಅವನು ತನಗೆ ಸರಿ ಹೊಂದುವ ಐಟಿ ಪ್ರೊಫೆಷನ್ ಹುಡುಗಿಯನ್ನು ಹುಡುಕುತ್ತಿದ್ದನು. ಆತ ಮುಸ್ಲಿಂ ಅನ್ನೋ ಕಾರಣಕ್ಕೆ ಆಫೀಸಿನಲ್ಲಿ ಎಲ್ಲರೂ ಅವನನ್ನು ಸ್ವಲ್ಪ ವಿಚಿತ್ರವಾಗಿ ನೋಡುತ್ತಿದ್ದರು. ಆದರೆ ಅವನ ಕ್ಲೋಸ್ ಗೆಳೆಯರೆಲ್ಲ ಹಿಂದೂಗಳೇ ಆಗಿದ್ದರು. ಅವನ ತಲೆಯಲ್ಲಿ ಹಿಂದೂ ಮುಸ್ಲಿಂ ಜಗಳಗಳ ಯೋಚನೆ ಯಾವತ್ತೂ ಬರ್ತಿರ್ಲಿಲ್ಲ. ಏಕೆಂದರೆ ಅವನ ಕುಚುಕುಗಳೆಲ್ಲ ಹಿಂದೂಗಳೇ ಆಗಿದ್ದರು. ವಯಸ್ಸು ಮೀರಿ ಹೋಗುತ್ತಿತ್ತು. ಆದರೆ ಸರಿಯಾದ ಹುಡುಗಿ ಸಿಗೋ ತನಕ ಕಾಯ್ತಿನಿ ಅನ್ನೋ ಹಠ ಅವನಿಗಿತ್ತು. ಅದಕ್ಕಾಗಿ ಆತ ತಾನಾಯ್ತು ತನ್ನ ಕೆಲಸವಾಯಿತು ಅಂತಾ ಇರುತ್ತಿದ್ದನು.

ಅನ್ವರ ತುಂಬಾ ಮೌನಿಯಾಗಿದ್ದನು. ಮಾತು ಕಮ್ಮಿ ಕೆಲಸ ಜಾಸ್ತಿ ಅವನ ಸಿದ್ಧಾಂತವಾಗಿತ್ತು. ಅವನ ಮೌನ ಮುರಿಯಲು ಅವನ ಲೈಫಲ್ಲಿ ಒಬ್ಬಳು ಮಾತಿನ ಮಲ್ಲಿಯ ಎಂಟ್ರಿಯಾಯಿತು. ಐಶ್ವರ್ಯ ಹೊಸ ಪ್ರೊಜೆಕ್ಟ ಮ್ಯಾನೇಜರ್ ಆಗಿ ಕಂಪನಿಗೆ ಜಾಯಿನ್ ಆಗಿದ್ದಳು. ಅವಳು ನೋಯ್ಡಾದವಳು. ಕಂಪನಿಯ ಸ್ಪೆಷಲ್ ಪ್ರೊಜೆಕ್ಟ ಕೆಲಸದ ಮೇಲೆ ಅವಳು ಬೆಂಗಳೂರಿಗೆ ಬಂದಿದ್ದಳು. ಅವಳಿಗೆ ಬೆಂಗಳೂರು ಹೊಸದು. ಅವಳು ಕಂಪನಿಗೆ ಕಾಲಿಟ್ಟ ಮೊದಲ ದಿನವೇ ಎಲ್ಲರನ್ನು ಸೆಳೆದಳು. ಅವಳು MBA ಮಾಡಿದ್ದರೂ ಇಂಗ್ಲೀಷ ಅವಳಿಗೆ ಕಷ್ಟವಾಗುತ್ತಿತ್ತು. ಇಲ್ಲಿ ಬೆಂಗಳೂರಲ್ಲಿ ಎಲ್ಲರೂ ಇಂಗ್ಲೀಷನಲ್ಲಿ ಸೂಪರಾಗಿ ಮಾತಾಡುತ್ತಿದ್ದರು. ಅವಳಿಗೆ ಟೀಂನ್ನು ಲೀಡ್ ಮಾಡುವುದು ಕಷ್ಟವಾಗತೊಡಗಿತು. ಮುಂಚೆ ನೋಯ್ಡಾದಲ್ಲಿ ಅವಳು ಹಿಂದಿಯಲ್ಲಿ ಅವಾಜ ಹಾಕಿ ಟೀಂ ಲೀಡ್ ಮಾಡುತ್ತಿದ್ದಳು. ಆದರೆ ಈಗ ಭಾಷೆಯ ಸಮಸ್ಯೆಯಿಂದಾಗಿ ಸೈಲೆಂಟಾಗಿದ್ದಳು. ಅವಳು ಕಂಪನಿ ಕೆಲಸವನ್ನು ಸರಿಯಾಗಿ ಮಾಡಿಕೊಂಡು ಮುಂದೆ ಸಾಗಿದ್ದಳು. ಅವಳ ಟೀಮಲ್ಲಿ ಯಾವಾಗಲೂ ಸೈಲೆಂಟ್ ಆಗಿರೋ ಅನ್ವರನನ್ನ ನೋಡಿ ಅವಳು ಒಂದಿನ ಅವನನ್ನು ವಿಚಾರಿಸಿಕೊಂಡಳು. ಆಗ ಅನ್ವರ ಅವಳೊಂದಿಗೆ ಹಿಂದಿಯಲ್ಲಿ ಫಟಾಫಟ್ ಅಂತಾ ಮಾತನಾಡಿದನು. ಅವನಿಗೂ ಇಂಗ್ಲೀಷ ಕಷ್ಟವಾಗುತ್ತಿತ್ತು. ಅದಕ್ಕೆ ಆತ ಮೌನವಾಗಿರುತ್ತಿದ್ದನು. ಈಗ ಐಶ್ವರ್ಯಳಿಂದಾಗಿ ಅವನ ಮೌನ ಮುರಿಯಿತು. ಅವರಿಬ್ಬರು ಬೆಸ್ಟ ಫ್ರೆಂಡ್ಸ ಆದರು.

ಬೆಸ್ಟ ಫ್ರೆಂಡ್ಸ ಆಗಿದ್ದ ಐಶ್ವರ್ಯಾ ಹಾಗೂ ಅನ್ವರ ಯಾವಾಗ ಪ್ರೇಮಿಗಳಾದರು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಇಬ್ಬರು ಎರಡು ದೇಹ ಒಂದು ಜೀವ ಅನ್ನೋವಷ್ಟು ಹತ್ತಿರವಾದರು. ಅನ್ವರ ಇಂಜಿನಿಯರಿಂಗ ಓದಲು ಬೆಂಗಳೂರಿಗೆ ಬಂದವನು ಇಲ್ಲೇ ತಳ ಉರಿದ್ದನು. ಅವನಿಗೆ ಬೆಂಗಳೂರು ಚೆನ್ನಾಗಿ ಗೊತ್ತಿತ್ತು. ಆತ ಐಶ್ವರ್ಯಾಳನ್ನ ಬೈಕ ಮೇಲೆ ಕೂಡಿಸಿಕೊಂಡು ಬೆಂಗಳೂರೆಲ್ಲಾ ಸುತ್ತಿಸಿದನು. ಅವಳಿಗೆ ಕರ್ನಾಟಕದ ಮೈಸೂರ್ ಅರಮನೆ, ಮುರುಡೇಶ್ವರ, ಗೋಕರ್ಣ, ಯಾನಾ, ಮಡಿಕೇರಿ, ವಿಜಯಪುರದ ಗೋಲ್ ಗುಂಬಜ್, ಹಂಪಿ, ಬಾದಾಮಿ, ಐಹೊಳೆಗಳನ್ನೆಲ್ಲ ತೋರಿಸಿದನು. ಬೈಕ್ ಮೇಲೆ ಅರ್ಧ ಕರ್ನಾಟಕವನ್ನೇ ಸುತ್ತಿಸಿದನು. ಐಶ್ವರ್ಯಾ ಅವನ ಮೇಲೆ ಈಗ ಸಂಪೂರ್ಣ ಭರವಸೆ ಇಟ್ಟಳು. ಪ್ರೀತಿ ಹೆಸರಲ್ಲಿ ಪಾರ್ಕ್ ಸುತ್ತಿಸಿ ಹಾಸಿಗೆ ಹಂಚಿಕೊಂಡು ಮಾಯವಾಗುವ ಕಚಡಾ ಹುಡುಗ ನನ್ನವನಲ್ಲ ಎಂಬುದು ಅವಳಿಗೆ ಖಾತ್ರಿಯಾಯಿತು. ಅದಕ್ಕೆ ಅವಳು ಅವನೊಂದಿಗೆ ಮದುವೆ ವಿಚಾರವಾಗಿ ಮಾತನಾಡಿದಳು. ಅವಳ ಮದುವೆ ಆಫರಗೆ ಅನ್ವರ ತಕ್ಷಣವೇ ಒಪ್ಪಿಕೊಂಡನು. ಅವರಿಬ್ಬರು ತಮ್ಮತಮ್ಮ ಮನೆಯವರಿಗೆ ತಮ್ಮ ಪ್ರೀತಿಯ ಬಗ್ಗೆ ಹೇಳಿ ಮದುವೆಗೆ ಅನುಮತಿ ಕೇಳಿದರು. ಆದರೆ ಅವರ ಮನೆಯವರು ಅವರ ಮದುವೆಗೆ ಒಂಚೂರು ಒಪ್ಪಲಿಲ್ಲ. ಅವರ ಪ್ರೀತಿಗೆ ಜಾತಿ ಅಡ್ಡ ಗೋಡೆಯಾಗಿ ನಿಂತಿತು. ಅನ್ವರ ಮುಸ್ಲಿಂ ಮನೆತನದ ಹುಡುಗನಾದರೆ ಐಶ್ವರ್ಯಾ ಬ್ರಾಹ್ಮಣ ಸಮುದಾಯದ ಹುಡುಗಿಯಾಗಿದ್ದಳು.

ಐಶ್ವರ್ಯಾ ಹಾಗೂ ಅನ್ವರ ತಮ್ಮ ಮನೆಯವರನ್ನು ಒಪ್ಪಿಸಲು ಪದೇಪದೇ ಪ್ರಯತ್ನ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಬೇಸತ್ತು ಅವರು ಎಲ್ಲರನ್ನು ಎದುರಾಕಿಕೊಂಡು ರೆಜಿಸ್ಟರ್ ಮ್ಯಾರೇಜ್ ಆದರು. ಅವರ ಮದುವೆಗೆ ಅವರ ಸ್ನೇಹಿತರು ಸಾಥ ನೀಡಿದರು. ಅವರಿಗೆ ಒಂದೊಳ್ಳೆ ಬಾಡಿಗೆ ಮನೆ ನೋಡಿ ಅವರಿಗೆ ಹೊಸ ಜೀವನಕ್ಕೆ ಕಾಲಿಡಲು ಸಹಾಯ ಮಾಡಿದರು. ನಂತರ ಅವರಿಬ್ಬರಿಗೆ ಬೆಸ್ಟ ಆಫ್ ಲಕ್ ಹೇಳಿ ಸ್ನೇಹಿತರೆಲ್ಲ ಅವರವರ ಮನೆಗೆ ತೆರಳಿದರು. ಮನೆಯಲ್ಲಿ ಈಗ ಅನ್ವರ ಹಾಗೂ ಐಶ್ವರ್ಯಾ ಇಬ್ಬರೇ ಉಳಿದರು. ಇಷ್ಟು ದಿನ ಪ್ರೇಮಿಗಳಾಗಿ ರೆಕ್ಕೆ ಬಿಚ್ಚಿ ಹಾರಾಡುತ್ತಿದ್ದವರು ಈಗ ಗಂಡ ಹೆಂಡತಿಯರಾಗಿದ್ದರು. ಸಂಸಾರದ ಜವಾಬ್ದಾರಿ ಅವರ ಸ್ವಾತಂತ್ರ್ಯವನ್ನು ಮೊದಲ ದಿನವೇ ಕಿತ್ತುಕೊಂಡಿತು. ಮೊದಲ ರಾತ್ರಿಯಲ್ಲಿ ಸರಸವಾಡುವುದನ್ನು ಬಿಟ್ಟು ಅವರಿಬ್ಬರು ತಮ್ಮ ತಂದೆತಾಯಿ, ಸಂಬಂಧಿಕರನ್ನೆಲ್ಲ ಕಳೆದುಕೊಂಡು ಅನಾಥರಾಗಿದಕ್ಕೆ ಕಣ್ಣಿರಾಕುತ್ತಾ ಕುಳಿತರು. ಅನ್ವರ ಐಶ್ವರ್ಯಾಳನ್ನು ಮಡಿಲಲ್ಲಿ ಮಲಗಿಸಿಕೊಂಡು ಅವಳಿಗೆ ಸಾಂತ್ವನ ಹೇಳಿದನು. ಐಶ್ವರ್ಯಾ ಅವನ ಕೊರಳಿಗೆ ಬಿದ್ದು ಬಿಕ್ಕಿಬಿಕ್ಕಿ ಅತ್ತು ತನ್ನ ಮನಸನ್ನು ಹಗುರಾಗಿಸಿಕೊಂಡಳು.

ಮರು ದಿನದಿಂದ ಅವರಿಬ್ಬರ ಅಸಲಿ ಸಾಂಸಾರಿಕ ಜೀವನ ಶುರುವಾಯಿತು. ಐಶ್ವರ್ಯಾಳಿಗೆ ಸರಿಯಾಗಿ ಅಡುಗೆ ಮಾಡಲು ಬರುತ್ತಿರಲಿಲ್ಲ. ಅವಳು ದಿನಾ ಅಡುಗೆಯಲ್ಲಿ ಏನಾದರೂ ಒಂದನ್ನು ಹೆಚ್ಚಿಗೆ ಹಾಕುತ್ತಿದ್ದಳು. ಆದರೆ ಅನ್ವರ ಅವಳು ಮಾತು, ಪ್ರೀತಿ ಎಲ್ಲದರಲ್ಲೂ ಹೆಚ್ಚಿಗೆ ಇದಾಳೆ ಅಂತಾ ಸುಮ್ಮನೆ ತಿನ್ನುತ್ತಿದ್ದನು. ಅವಳಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಿದ್ದನು. ದಿನವೆಲ್ಲ ಕಂಪನಿ ಕೆಲಸ ರಾತ್ರಿಯೆಲ್ಲಾ ಪೋಲಿ ಮಾತು ಒಂದೆರಡು ಬಿಸಿ ಮುತ್ತುಗಳಲ್ಲಿ ಅವರಿಬ್ಬರ ಜೀವನ ಸುಖವಾಗಿ ಸಾಗಿತ್ತು. ಆದರೆ ಮೂರು ತಿಂಗಳ ನಂತರ ಅವರ ಜೀವನ ಅವರಿಗೆ ಬೋರಾಯ್ತು. ಕೆಲಸದ ಒತ್ತಡದಿಂದಾಗಿ ಅವರಿಗೆ ಮನೆ ಕೆಲಸ ಹಿಂಸೆ ಅನಿಸತೊಡಗಿತು. ಐಶ್ವರ್ಯಾ ಸಹ ದಿನವೆಲ್ಲ ಅನ್ವರನಂತೆ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬರುತ್ತಿದ್ದಳು. ಬಂದ ಮೇಲೆ ಅವನಿಗೆ ಟೀ ಮಾಡಿಕೊಟ್ಟು ಮನೆ ಕಸಗೂಡಿಸಿ ಅಡುಗೆ ತಯಾರಿ ಮಾಡಬೇಕಿತ್ತು. ಆದರೆ ಅನ್ವರಗೆ ಯಾವುದೇ ಕೆಲಸ ಇರುತ್ತಿರಲಿಲ್ಲ. ಆತ ಮೊಬೈಲನಲ್ಲಿ ಗೇಮ್ ಆಡುತ್ತಾ ಕುಳಿತುಕೊಂಡು ಬಿಡುತ್ತಿದ್ದನು. ಸಾಲದಕ್ಕೆ ಮೇಲಾಗಿ ಬೇಗನೆ ಅಡುಗೆ ಮಾಡು ಹೊಟ್ಟೆ ಹಸಿತಿದೆ ಅಂತಾ ಆರ್ಡರ್ ಮಾಡುತ್ತಿದ್ದನು.

ಮದುವೆಯಾದ ಹೊಸತರಲ್ಲಿ ಅನ್ವರ ಐಶ್ವರ್ಯಾಳ ಮೈ ಮುಟ್ಟುವ ಆಸೆಯಲ್ಲಿ ಅವಳಿಗೆ ಅಡುಗೆ ಮಾಡಲು, ಮನೆಗೆಲಸ ಮಾಡಲು ಸಹಾಯ ಮಾಡುತ್ತಿದ್ದನು. ಅಡುಗೆ ಮನೆಯಲ್ಲಿ ಅವಳು ತರಕಾರಿ ಹೆರಚುವಲ್ಲಿ ಬಿಜಿಯಾಗಿರುವಾಗ ಆತ ಅವಳನ್ನು ಹಿಂದಿನಿಂದ ಗಟ್ಟಿಯಾಗಿ ಅಪ್ಪಿಕೊಂಡು ಅವಳ ಸೊಂಟ ಸವರುತ್ತಾ ಅವಳ ಕತ್ತಿಗೆ ಮುತ್ತಿಡುತ್ತಾ ಅವಳಿಗೆ ಡಿಸ್ಟರ್ಬ್ ಮಾಡುತ್ತಿದ್ದನು. ಅವಳು ಸಹ ಅವನೊಂದಿಗೆ ಮೆಲ್ಲನೆ ಸರಸವಾಡುತ್ತಾ ಅಡುಗೆ ಮಾಡುತ್ತಿದ್ದಳು. ಅಡುಗೆ ರೆಡಿಯಾದ ನಂತರ ಇಬ್ಬರು ಪರಸ್ಪರ ತಿನ್ನಿಸುತ್ತಾ ರೊಮ್ಯಾಂಟಿಕ್ ಆಗಿ ಊಟ ಮಾಡುತ್ತಿದ್ದರು. ನಂತರ ಆಕೆ ಪಾತ್ರೆ ಉಜ್ಜಿಟ್ಟು ಬರುವಷ್ಟರಲ್ಲಿ ಆತ ಬೆಡರೂಮಲ್ಲಿ ಅವಳಿಗೋಸ್ಕರ ಕಾಯುತ್ತಿದ್ದನು. ಅವಳು ಬರುತ್ತಿದ್ದಂತೆ ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಅವಳನ್ನು ಬೆಡ್ ಮೇಲೆ ಮಲಗಿಸಿ ಅವಳ ತುಟಿಗಳಲ್ಲಿನ ಪ್ರೀತಿ ಮುತ್ತುಗಳನ್ನು ಲೂಟಿ ಮಾಡುತ್ತಿದ್ದನು. ಆತ ಅವಳ ಸೊಂಟ ಸವರುತ್ತಾ ಎದೆಗೆ ಮುತ್ತಿಡುತ್ತಾ ಅವಳನ್ನು ಬೆತ್ತಲೆ ಮಾಡುವ ಪ್ರಯತ್ನ ಮಾಡುತ್ತಿದ್ದನು. ಆದರೆ ಅವಳು ಅವನಿಗೆ ಮುಂದುವರೆಯುವ ಅವಕಾಶ ನೀಡುತ್ತಿರಲಿಲ್ಲ. ಅವಳಿಗೆ ಇಷ್ಟು ಬೇಗನೆ ತಾಯಿಯಾಗುವ ಆಸೆ ಇರಲಿಲ್ಲ. ಬೇಗನೆ ಸ್ವಂತ ಮನೆ ಮಾಡಿ ಆಮೇಲೆ ಮಡಿಲು ತುಂಬಿಸಿಕೊಳ್ಳುವ ಕನಸು ಅವಳದ್ದಾಗಿತ್ತು. ಆದರೆ ಕೆಲಸದ ಒತ್ತಡದಿಂದಾಗಿ ಅವರ ಸಂಸಾರದ ಗೋಡೆಯಲ್ಲಿ ಬಿರುಕು ಮೂಡಿತು.

ಅನ್ವರ ಹಾಗೂ ಐಶ್ವರ್ಯಾ ಪರಸ್ಪರ ಪ್ರೀತಿಸಿ ಜಗತ್ತನ್ನೇ ಎದುರಾಕಿಕೊಂಡು ಮದುವೆಯಾಗಿದ್ದರು. ಆದರೆ ಅವರಿಗೆ ಮದುವೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಅವರಿಬ್ಬರ ನಡುವೆ ದಿನಾ ಒಂದಲ್ಲ ಒಂದು ಕಾರಣಕ್ಕೆ ಸಣ್ಣಪುಟ್ಟ ಜಗಳಗಳಾಗಲು ಪ್ರಾರಂಭಿಸಿದವು. ಅವರಿಬ್ಬರ ನಡುವೆ ಅನ್ಯೋನ್ಯತೆ ಈಗ ಕನಸಿನ ಮಾತಾಯಿತು. ಪ್ರೀತಿ ಮಾತುಗಳ ಬದಲಾಗಿ ದ್ವೇಷದ ಮಾತುಗಳು ಹೆಚ್ಚಾದವು. ಮದುವೆಯಾದ ಆರು ತಿಂಗಳಲ್ಲೇ ಅವರ ಸಾಂಸಾರಿಕ ಜೀವನ ಮುರಿದು ಬಿತ್ತು. ಒಂದಿನ ಐಶ್ವರ್ಯಾ ತನ್ನ ಗಂಡ ಅನ್ವರನಿಗೆ ಏನನ್ನು ಹೇಳದೆ ತನ್ನ ತವರು ಮನೆ ನೋಯ್ಡಾಗೆ ಹೋದಳು. ಅವಳು ತನ್ನ ತಾಯಿ ಜೊತೆಗೆ ಗುಟ್ಟಾಗಿ ಮಾತಾಡುತ್ತಿದ್ದಳು. ಅವಳ ತಾಯಿಗೆ ಈ ಮದುವೆ ಇಷ್ಟವಿರಲಿಲ್ಲ. ಅದಕ್ಕೆ ಅವರ ಮಗಳ ಕಿವಿ ಚುಚ್ಚಿ ಕೊನೆಗೂ ಅವಳನ್ನು ತಮ್ಮ ಮನೆಗೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾದರು. ಮಧ್ಯಾಹ್ನದಿಂದಲೇ ಅನ್ವರ ಆಫೀಸಿನಲ್ಲಿ ಐಶ್ವರ್ಯಾಳನ್ನು ಹುಡುಕುತ್ತಿದ್ದನು. ಅವಳ ಫೋನ್ ಸ್ವಿಚ್ ಆಫ್ ಅಂತಾ ಬರ್ತಿತ್ತು. ಅವಳು ಮನೆಗೆ ಹೋಗಿರಬಹುದು ಅಂತಂದುಕೊಂಡು ಆತ ಕೆಲಸದಲ್ಲಿ ಬಿಜಿಯಾದನು. ಸಂಜೆ ಮನೆಗೆ ಬಂದಾಗ ಆಕೆ ಮನೆಯಲ್ಲಿ ಇಲ್ಲದಿರುವುದನ್ನು ನೋಡಿ ಗಾಬರಿಯಾದರು. ಮತ್ತೆ ಅವಳಿಗೆ ಕಾಲ್ ಮಾಡಿದನು. ಅವಳು ರಿಸೀವ್ ಮಾಡಿ "ನಾನು ನನ್ನ ಅಮ್ಮನ ಮನೆಗೆ ಬಂದಿರುವೆ. ಒಂದು ವಾರ ಬಿಟ್ಟು ಬರುವೆ..." ಅಂತಾ ಹೇಳಿದಳು. ಅದನ್ನ ಕೇಳಿ ಅನ್ವರ ಕೋಪದಲ್ಲಿ "ಯಾರನ್ನ ಕೇಳಿ ನೀನು ಅಲ್ಲಿಗೆ ಹೋದೆ? ನನಗೆ ಒಂದು ಮಾತು ಹೇಳಿ ಹೋಗಬಹುದಿತ್ತಲ್ಲ. ಅಲ್ಲೇ ಇರು ವಾಪಸ ಬರಬೇಡ..." ಅಂತೆಲ್ಲ ರೇಗಿದನು. ಅಷ್ಟರಲ್ಲಿ ಅವಳಮ್ಮ ಫೋನ್ ಕಿತ್ತುಕೊಂಡು ಅಳಿಯನಿಗೆ ಕೋರ್ಟು ಕಛೇರಿ ಅಂತೆಲ್ಲ ಧಮಕಿ ಹಾಕಿ ಕಾಲ್ ಕಟ್ ಮಾಡಿದರು.

ಐಶ್ವರ್ಯಾ ಹೇಳದೆ ಕೇಳದೆ ತವರಿಗೆ ಹೋಗಿದ್ದರಿಂದ ಅನ್ವರ ಅಪ್ಸೆಟ್ ಆಗಿದ್ದನು. ಕೋಪದಲ್ಲಿ ಅವಳಿಗೆ ಏನೇನೋ ಅಂದಿದ್ದು ಸಾಲದಂತ ಕೆಟ್ಟದಾಗಿ ಮೆಸೇಜ್ ಕೂಡ ಕಳುಹಿಸಿದನು. ಅವಳು ಸಹ ಅವನಿಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದಳು. ಅನ್ವರ್ "ಬರೀ ಅವಳಿಗಷ್ಟೇ ಮನೆ ಇದೆಯಾ? ನಂಗಿಲ್ಲವ?" ಅಂತಾ ಕೆಲ್ಸಕ್ಕೆ ರಜೆ ಹಾಕಿ ತನ್ನ ಊರಿಗೆ ಹೋದನು. ಅವನು ಮನೆಗೆ ಹೋಗಿ ಎರಡು ವರ್ಷವಾಗಿತ್ತು. ಮನೆಯಲ್ಲಿ ಎಲ್ಲರೂ ಅವನನ್ನು ಪ್ರೀತಿಯಿಂದ ನೋಡಿಕೊಂಡು ಅವನ ತಲೆ ಸವರಿ ಐಶ್ವರ್ಯಾಳಿಗೆ ಡೈವೋರ್ಸ್ ಕೊಟ್ಟು ಬೇರೆ ಮದುವೆಯಾಗುವಂತೆ ಒತ್ತಡ ಹೇರಿದರು. ಏಕೆಂದರೆ ಅವರಿಗೆ ಈ ಮದುವೆ ಇಷ್ಟವಿರಲಿಲ್ಲ. ಅದಕ್ಕೆ ಹೇಗಾದರೂ ಮಾಡಿ ಈ ಮದುವೆಯನ್ನು ಮುರಿಯಲು ಅವರು ತುದಿಗಾಲ ಮೇಲೆ ನಿಂತಿದ್ದರು. ಅವನ ತಲೆಯಲ್ಲಿ ಏನೇನೋ ತುಂಬಿ ಅವನಿಗೆ ಐಶ್ವರ್ಯಾಳ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದರು. ಅನ್ವರ್ ಐಶ್ವರ್ಯಾಳಿಗೆ ಡೈವೋರ್ಸ್ ಕೊಡಬೇಕಾ ಬೇಡವಾ ಅಂತಾ ಯೋಚಿಸುವಷ್ಟ್ರಲ್ಲಿ ಅವನಿಗೆ ಐಶ್ವರ್ಯಾಳ ಕಡೆಯಿಂದ ಡೈವೋರ್ಸ್ ನೊಟೀಸ್ ಬಂತು. ಅವಳ ಅಮ್ಮ ತಮ್ಮ ಮಗಳ ತಲೆ ಕೆಡಿಸಿ ಈ ರೀತಿ ತಮ್ಮ ಹಠ ಸಾಧಿಸಿದರು. ಅನ್ವರ್ ಅವಳೊಂದಿಗೆ ಮಾತನಾಡಬೇಕು ಅಂತಾ ಅವಳಿಗೆ ಎಷ್ಟೋ ಸಲ ಕಾಲ್ ಮಾಡಿದನು. ಆದರೆ ಪ್ರತಿಸಲ ಅವಳ ಅಮ್ಮ ಕಾಲ್ ರಿಸೀವ್ ಮಾಡುತ್ತಿದ್ದರು ಇಲ್ಲ ಅವಳಕ್ಕ ರಿಸೀವ್ ಮಾಡುತ್ತಿದ್ದಳು. ಐಶ್ವರ್ಯಾಳ ಅಮ್ಮನ ಮಾತುಗಳನ್ನು ಅರಗಿಸಿಕೊಳ್ಳಲಾಗದೆ ಅನ್ವರ ಅವಳಿಗೆ ಡೈವೋರ್ಸ್ ಕೊಡಲು ಮುಂದಾದನು. ಒಂದುವರೆ ವರ್ಷದಲ್ಲಿ ಅವರಿಬ್ಬರು ಡೈವೋರ್ಸ್ ತೆಗೆದುಕೊಂಡು ದೂರಾದರು.

"ಹಿಂದೂ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಆರು ತಿಂಗಳು ಸಹ ನೆಟ್ಟಗೆ ಹೆಂಡತಿಯನ್ನ ಚೆನ್ನಾಗಿ ನೋಡಿಕೊಳ್ಳದ ಬೇವರ್ಷಿ..." ಅಂತಾ ಈ ಸಮಾಜ ಅನ್ವರನ ಮುಖಕ್ಕೆ ಕ್ಯಾಕರಿಸಿ ಉಗಿಯತೊಡಗಿತು. ಅವನ ಹಿಂದೂ ಗೆಳೆಯರು ಅವನ ಮೇಲೆ ಬಹಳಷ್ಟು ಭರವಸೆ ಇಟ್ಟು ಅವನಿಗೆ ಮದುವೆ ಮಾಡಿಸಿದ್ದರು. ಆದರೆ ಆತ ಐಶ್ವರ್ಯಾಳನ್ನು ಸರಿಯಾಗಿ ನೋಡಿಕೊಳ್ಳದೆ ಅವಳನ್ನು ತವರಿಗೆ ಓಡಿಸಿ ಡೈವೋರ್ಸ್ ಕೊಟ್ಟು ದೂರಾಗಿ ಪ್ರೀತಿಗೆ ಕಳಂಕ ತಂದಿದ್ದರಿಂದ ಅವನ ಗೆಳೆಯರೆಲ್ಲ ಅವನಿಗೆ ಚೆನ್ನಾಗಿ ಬೈದು ಅವನಿಂದ ದೂರಾದರು. ಅವನ ಮನೆಯಲ್ಲಿ ಅವನಿಗೆ ಮರು ಮದುವೆ ಮಾಡಲು ಮುಸ್ಲಿಂ ಹುಡುಗಿ ಹುಡುಕಲು ಪ್ರಾರಂಭಿಸಿದರು. ಆದರೆ ಅವನಿಗೆ ಪ್ರೀತಿಸಿದ ಹುಡುಗಿ ಹಾಗೂ ಜೀವದ ಗೆಳೆಯರನ್ನು ಮರೆತು ಹೊಸ ಜೀವನ ಪ್ರಾರಂಭಿಸುವ ಮನಸ್ಸಿರಲಿಲ್ಲ. ಆತ ಹಳೇ ಸುಮಧುರ ನೆನಪುಗಳೊಂದಿಗೆ ಒಂಟಿ ಜೀವನ ಕಳೆಯಲು ನಿರ್ಧರಿಸಿ ಕೆಲಸದ ನೆಪ ಹೇಳಿ ಬೆಂಗಳೂರಿಗೆ ಬಂದನು. ತನ್ನ ಕೆಲಸ ಮಾಡುತ್ತಾ ಮತ್ತೆ ಜೀವಂತ ಶವದಂತೆ ಬದುಕಲು ಪ್ರಾರಂಭಿಸಿದನು.

ಅತ್ತ ಕಡೆ ಐಶ್ವರ್ಯಾಳನ್ನು ಸಹ ಸಮಾಜ ಕ್ಯಾಕರಿಸಿ ಉಗಿತಾಯಿತ್ತು. "ಮುಸ್ಲಿಂ ಹುಡುಗನೊಂದಿಗೆ ಓಡಿ ಹೋಗಿ ಮದುವೆಯಾಗಿ ಆರ ತಿಂಗಳು ಸಹ ನೆಟ್ಟಗೆ ಸಂಸಾರ ಮಾಡದೇ ಮತ್ತೆ ಮನೆಗೆ ಓಡಿ ಬಂದಿದ್ದಾಳೆ, ನಡತೆಗೆಟ್ಟವಳು, ಮತ್ತೆ ಯಾರ ಜೊತೆಗೆ ಓಡಿ ಹೋಗ್ತಾಳೋ ಏನೋ...?" ಅಂತೆಲ್ಲ ಅಕ್ಕಪಕ್ಕದ ಮನೆಯವರು ಮಾತಾಡಲು ಪ್ರಾರಂಭಿಸಿದರು. ಇದ್ಯಾವುದಕ್ಕೂ ಕೇರ್ ಮಾಡದೇ ಅವರಮ್ಮ ಅವಳಿಗೆ ಮರುಮದುವೆ ಮಾಡಲು ಹೊಸ ಹುಡುಗನನ್ನು ಹುಡುಕಲು ಪ್ರಾರಂಭಿಸಿದರು. ಆದರೆ ಅವಳನ್ನು ನೋಡಲು ಬರುವ ಗಂಡುಗಳೆಲ್ಲ ಅವಳ ಶೀಲದ ಮೇಲೆಯೇ ಸಂಶಯ ಪಡುತ್ತಿದ್ದರು. ಅವಳ ಜೊತೆಗೆ ಪರ್ಸನಲ್ಲಾಗಿ ಮಾತಾಡ್ಬೇಕು ಅಂತಾ ರೂಮಿಗೆ ಹೋಗಿ "ನೀನು ವರ್ಜಿನ್ ಹೌದಾ ಅಲ್ವಾ?" ಎಂದು ಕೇಳುತ್ತಿದ್ದರು. ತಮಗೆ ಎರಡು ಮಕ್ಕಳಿರುವ ಗಂಡುಗಳು ಸಹ ಅವಳ ವರ್ಜಿನಿಟಿಯ ಬಗ್ಗೆ ಕೇಳುತ್ತಿದ್ದರು. ಇದರಿಂದ ಐಶ್ವರ್ಯಾ ಬೇಸರಗೊಂಡು ಅಮ್ಮನ ಕೊರಳಿಗೆ ಬಿದ್ದು ಅಳಲು ಪ್ರಾರಂಭಿಸಿದಳು. ಆಗ ಅವಳಮ್ಮ ಅವಳಿಗೆ ಸಮಾಧಾನ ಮಾಡುತ್ತಾ "ನೀನು ಆ ಆಯೋಗ್ಯನನ್ನ ಮದುವೆಯಾಗಿರದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ..." ಅಂತೇಳಿ ಎಲ್ಲ ಅವಳದೆ ತಪ್ಪು ಅನ್ನೋ ಹಾಗೆ ಮಾತಾಡಿ ಅವಳ ಮೇಲೆ ಗೂಬೆ ಕೂಡಿಸಿ ತಾವು ಬಚಾವಾದರು. ಅಕ್ಕಪಕ್ಕದ ಮನೆಯವರ ಚುಚ್ಚು ಮಾತುಗಳಿಂದ ನೊಂದು ಐಶ್ವರ್ಯಾ ಆತ್ಮಹತ್ಯೆಗೆ ಯತ್ನಿಸಿದಳು. ಆಗ ಅವಳಕ್ಕ ಬಂದು ಅವಳ ಮೂಡ್ ಚೇಂಜ್ ಮಾಡಲು ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋದಳು.

ಅಕ್ಕನ ಮನೆಗೆ ಹೋದರೂ ಸಹ ಐಶ್ವರ್ಯಾಳಿಗೆ ಹಳೇ ನೆನಪುಗಳು ಕಾಡಲು ಪ್ರಾರಂಭಿಸಿದವು. ಕೊನೆಗೂ ಅವಳಿಗೆ ತನ್ನ ಮನೆಯವರು ತಮ್ಮ ಹಠ ಸಾಧಿಸಲು ನನಗೆ ಡೈವೋರ್ಸ್ ಕೊಡೆಸಿ ನನ್ನ ಬಾಳನ್ನು ಹಾಳು ಮಾಡಿದ್ರು ಎಂಬುದು ಅರಿವಾಯಿತು. ಅನ್ವರಗೆ ಇದು ಯಾವತ್ತೋ ಅರ್ಥವಾಗಿತ್ತು. ಇದು ಅರ್ಥವಾದ ದಿನವೇ ಆತ ಮನೆ ಬಿಟ್ಟು ಬೆಂಗಳೂರು ಸೇರಿದ್ದನು. ಆದರೆ ಐಶ್ವರ್ಯಾ ಇನ್ನೂ ಕೆಲ್ಸಕ್ಕೆ ಹೋಗದೆ ಮನೆಯಲ್ಲೇ ಇದ್ದಳು. ಅವಳಿಗೆ ನಾನು ಅನ್ವರನೊಂದಿಗೆ ಒಂದ್ಸಲ ಸರಿಯಾಗಿ ಮಾತಾಡಿದ್ರೆ ನಮ್ಮ ಜೀವನ ಸರಿಯಾಗುತಿತ್ತು ಅಂತಾ ಅನ್ನಿಸತೊಡಗಿತು. ಅವಳಿಗೆ ಕೊನೆಗೂ ಕೆಟ್ಟ ಮೇಲೆಯೆ ಬುದ್ಧಿ ಬಂತು. ಆದರೆ ಈಗ ಕಾಲ ಮಿಂಚಿ ಹೋಗಿತ್ತು. ಅವರಿಬ್ಬರೂ ಕಾನೂನಿನ ಪ್ರಕಾರ ಡೈವೋರ್ಸ್ ತೆಗೆದುಕೊಂಡು ದೂರಾಗಿದ್ದರು. ಅವಳಕ್ಕ ಅವಳಿಗೆ ಹೇಗಾದರೂ ಮಾಡಿ ಮದುವೆ ಮಾಡಿಸಬೇಕು ಅಂತಾ ಅಲ್ಲಿಯೂ ಅವಳಿಗೆ ಗಂಡುಗಳನ್ನ ತೋರಿಸಲು ಪ್ರಾರಂಭಿಸಿದಳು. ಒಂದಿನ ಅವಳನ್ನು ನೋಡಲು ಗಂಡಿನ ಕಡೆಯವರು ಬರುವವರಿದ್ದರು. ಅವಳಕ್ಕ ಗಡಿಬಿಡಿಯಲ್ಲಿ ಎಲ್ಲ ತಯಾರಿ ಮಾಡುವಷ್ಟರಲ್ಲಿ ಸ್ವಲ್ಪ ತಡವಾಗಿತ್ತು. ಅವಳಕ್ಕ ಅವಳಿಗೆ ಬೇಗನೆ ಸೀರೆಯುಟ್ಟುಕೊಂಡು ರೆಡಿಯಾಗು ಅಂತೇಳಿ ಕೆಲಸದಲ್ಲಿ ಬಿಜಿಯಾದಳು. ಆದರೆ ಐಶ್ವರ್ಯಾ ರೆಡಿಯಾಗದೆ ರೂಮಲ್ಲಿ ಸುಮ್ಮನೆ ಕುಳಿತ್ತಿದ್ದಳು. ಏಕೆಂದರೆ ಅವಳಿಗೆ ಸೀರೆಯುಡಲು ಬರುತ್ತಿರಲಿಲ್ಲ. ಅಲ್ಲದೇ ಅವಳಿಗೆ ಪದೇಪದೇ ಬೇರೆಬೇರೆ ಗಂಡುಗಳನ್ನ ನೋಡಿ ಮುಜುಗುರಕ್ಕೆ ಒಳಗಾಗುವುದು ಇಷ್ಟವಿರಲಿಲ್ಲ. ಅದಕ್ಕೆ ಅವಳು ರೂಮಲ್ಲಿ ಸಪ್ಪೆ ಮೊರೆ ಹಾಕಿಕೊಂಡು ಕುಳಿತ್ತಿದ್ದಳು.

ಅವಳಕ್ಕ ಮನೆ ಕೆಲಸ ಮುಗಿಸಿ ಬಂದರೂ ಐಶ್ವರ್ಯಾ ಇನ್ನೂ ರೆಡಿಯಾಗಿರಲಿಲ್ಲ. ಅದಕ್ಕೆ ಅವಳು ಅವಳನ್ನು ರೇಗಿದಳು. ಆಗ ಅವಳಿಗೆ ಸೀರೆಯುಡಲು ಬರಲ್ಲ ಎಂಬುದು ಅವಳಿಗೆ ಗೊತ್ತಾಯಿತು. ಕೂಡಲೇ ಅವಳಕ್ಕ ಅವಳಿಗೆ ಸೀರೆಯುಡಿಸಲು ಪ್ರಾರಂಭಿಸಿದಳು. ಆದರೆ ಆತುರದಲ್ಲಿ ಬಾಗಿಲ ಚಿಲಕ ಹಾಕುವುದನ್ನು ಮರೆತ್ತಿದ್ದಳು. ಬಾಗಿಲನ್ನು ಬರೀ ಮುಂದೆ ಮಾಡಿ ಅವಳಿಗೆ ಸೀರೆಯುಡಿಸುತ್ತಿದಳು. ಪೂರ್ತಿ ಸೀರೆಯುಡಿಸಿ ಸೇಫ್ಟಿ ಪಿನ್ ಹಾಕಬೇಕು ಅನ್ನೋವಷ್ಟರಲ್ಲಿ ಅವಳ ಭಾವ ಅಂದ್ರೆ ಅವಳಕ್ಕನ ಗಂಡ ಅವಳ ರೂಮಿಗೆ ಸಡನ್ನಾಗಿ ಬಂದು "ಗಂಡಿನ ಕಡೆಯವರು ಬಂದರು. ಇನ್ನೂ ರೆಡಿಯಾಗಿಲ್ವಾ?" ಅಂತಾ ಕೇಳಿದನು. ಜೊತೆಗೆ ಐಶ್ವರ್ಯಾಳನ್ನು ಮೊದಲ ಸಲ ಸೀರೆಯಲ್ಲಿ ನೋಡಿ ಆತ ಮನಸೋತನು. ಐಶ್ವರ್ಯಾಳಿಗೆ ತನ್ನನ್ನು ನೋಡಲು ಬಂದ ಗಂಡು ಇಷ್ಟವಾಗಲಿಲ್ಲ. ಅದಕ್ಕೆ ಅವಳು ರೂಮಲ್ಲಿ ಹೋಗಿ ಅಳುತ್ತಾ ಕುಂತಳು. ಅವಳಕ್ಕ ಅವಳನ್ನು ಸಮಾಧಾನ ಮಾಡುತ್ತಿದ್ದಳು. ಅಷ್ಟರಲ್ಲಿ ಅವಳ ಭಾವ ಸಹ ಅವಳನ್ನು ಸಮಾಧಾನ ಮಾಡಲು ಪ್ರಾರಂಭಿಸಿದನು. ಅವಳಕ್ಕ ಅವಳಿಗೆ ಟೀ ತರಲು ಅಡುಗೆ ಮನೆಗೆ ಹೋದಳು. ಆಗ ಅವಳ ಭಾವ ಅವಳ ಭುಜದ ಮೇಲೆ ಕೈಹಾಕಿ ಅವಳ ಭುಜ ಸವರುತ್ತಾ "ಚಿಂತಿಸಬೇಡ, ನಿನ್ನನ್ನು ಯಾರು ಮದುವೆಯಾಗದಿದ್ದರೆ ನಾನು ಮದುವೆಯಾಗುವೆ...." ಅಂತಾ ಹೇಳಿ ತನ್ನ ಮನದಾಸೆ ವ್ಯಕ್ತಪಡಿಸಿದನು. ಅಷ್ಟರಲ್ಲಿ ಅವಳಕ್ಕ ಟೀ ತೆಗೆದುಕೊಂಡ ಬಂದಾಗ ಭಾವ ಅಲ್ಲಿಂದ ಕಾಲ್ಕಿತ್ತನು. ಐಶ್ವರ್ಯಾಳಿಗೆ ಒಂಟಿ ಹೆಣ್ಣನ್ನು ಈ ಸಮಾಜ ಯಾವ ರೀತಿ ನೋಡುತ್ತೆ ಎಂಬುದು ಅರ್ಥವಾಯಿತು. ಅದಕ್ಕೆ ಅವಳು ಮತ್ತೆ ಕೆಲ್ಸಕ್ಕೆ ಸೇರಿಕೊಂಡು ಸ್ವತಂತ್ರ ಜೀವನ ಸಾಗಿಸಲು ನಿರ್ಧರಿಸಿದಳು. ಅಕ್ಕನಿಗೆ ಇದನ್ನು ಹೇಳಿ ತಕ್ಷಣವೇ ತಯಾರಾಗಿ ಅವಳ ಮನೆ ಬಿಟ್ಟು ನೋಯ್ಡಾಗೆ ತೆರಳಿದಳು.

ಐಶ್ವರ್ಯಾ ಬಸ್ಸಿನಲ್ಲಿ ಹೋಗುವಾಗ ತನ್ನ ಹಳೇ ಕಂಪನಿ ಮ್ಯಾನೇಜರಗೆ ಕಾಲ ಮಾಡಿ "ನನ್ನ ಹೇಗಾದರೂ ಮಾಡಿ ಬೆಂಗಳೂರ ಬ್ರಾಂಚಗೆ ಕಳುಹಿಸಿ ಕೊಡಿ..." ಅಂತಾ ಬೇಡಿಕೊಂಡಳು. ಅದಕ್ಕೆ ಅವರು ಒಪ್ಪಿ ಅವಳಿಗೆ ನಾಳೇನೇ ಕೆಲ್ಸಕ್ಕೆ ಜಾಯಿನ್ ಆಗಲು ಹೇಳಿದರು. ಐಶ್ವರ್ಯಾ ನೋಯ್ಡಾಗೆ ಹೋದ ನಂತರ ಮನೆಗೋಗುವ ಬದಲು ಬೆಂಗ್ಳೂರಿಗೆ ಹೋಗಲು ರೈಲ್ವೆ ಸ್ಟೇಷನಿನ ದಾರಿ ಹಿಡಿದಳು. ಅವಳು ಏನಾದರೂ ಮಾಡಿ ಅನ್ವರನನ್ನು ಮೀಟಾಗಿ ಅವನೊಂದಿಗೆ ಒಂದ್ಸಲ ಮಾತಾಡಲು ಹಂಬಲಿಸುತ್ತಿದ್ದಳು. ಅತ್ತ ಕಡೆ ಅನ್ವರ ಕೂಡ ಅವಳ ನೆನಪಲ್ಲೇ ಸಿಂಗಲ ಸನ್ಯಾಸಿ ಜೀವನ ಸಾಗಿಸುತ್ತಿದ್ದನು. ಐಶ್ವರ್ಯಾ ಇದೇ ಯೋಚನೆಯಲ್ಲಿ ರೈಲ್ವೆ ಸ್ಟೇಷನ್ ತಲುಪಿದಳು.

ರಾತ್ರಿ ಬಹಳಷ್ಟು ಟೈಮ್ ಆಗಿತ್ತು. ಸ್ಟೇಷನ್ ಆಲ್ ಮೋಸ್ಟ ಖಾಲಿ ಹೊಡೀತಾಯಿತ್ತು. ಅಷ್ಟರಲ್ಲಿ ಒಂದಿಬ್ಬರು ಪೋಲಿ ಹುಡುಗರು ಬಂದು ಅವಳೊಂದಿಗೆ ಕೆಟ್ಟದಾಗಿ ವರ್ತಿಸತೊಡಗಿದರು. ಅವಳು ಸಹಾಯಕ್ಕೆ ಕೂಗಿಕೊಂಡಳು. ಆದರೆ ಅಲ್ಲಿ ಯಾರೂ ಇರಲಿಲ್ಲ. ಅವರು ಅವಳ ಕೈಹಿಡಿದು ಎಳೆದಾಡತೊಡಗಿದರು. ಅಷ್ಟರಲ್ಲಿ ಒಬ್ಬ ಯುವಕ ಅವಳನ್ನು ನೋಡಿ ಅವಳನ್ನು ಕಾಪಾಡಲು ಓಡಿ ಬಂದನು. ಆತ ಸಮೀಪಕ್ಕೆ ಬಂದಾಗ ಐಶ್ವರ್ಯಾ ಆಶ್ಚರ್ಯಚಕಿತಳಾಗಿ ನಿಂತಳು. ಅವಳನ್ನು ಕಾಪಾಡಲು ಓಡಿ ಬಂದ ಯುವಕ ಅನ್ವರ ಆಗಿದ್ದನು. ಆತ ಅವಳನ್ನು ಬಿಟ್ಟಿರಲಾಗದೆ ಅವಳನ್ನು ಒಂದಲ್ಸ ಮಾತಾಡಿಸಿಕೊಂಡು ಹೋಗಲು ನೋಯ್ಡಾಗೆ ಬಂದಿದ್ದನು. ಆದರೆ ಅವಳ ಮನೆ ಎಲ್ಲಿದೆ ಅಂತಾ ಗೊತ್ತಾಗದೆ ಸ್ಟೇಷನನಲ್ಲೇ ಕುಳಿತ್ತಿದ್ದನು. ಆ ಪೋಲಿ ಹುಡುಗರು ಅವಳನ್ನು ಎಳೆದಾಡುತ್ತಿರುವುದನ್ನು ನೋಡಿ ಓಡಿ ಬಂದನು. ಐಶ್ವರ್ಯಾ ಏನು ಮಾತಾಡದೇ ಅನ್ವರನನ್ನ ಅಪ್ಪಿಕೊಂಡಳು. ಆ ಪೋಲಿ ಹುಡುಗರು ಹತಾಶೆಯಲ್ಲಿ ಅನ್ವರನ ಕೈಗೆ ಚಾಕುವಿನಿಂದ ಕೊರೆದು ಓಡಿ ಹೋದರು. ಅವನ ಕೈಯಿಂದ ರಕ್ತ ಸುರಿಯಲು ಪ್ರಾರಂಭಿಸಿತು. ಅದನ್ನು ನೋಡಿ ಐಶ್ವರ್ಯಾಳ ಕಣ್ಣಿನಿಂದ ನೀರು ಸುರಿಯಲು ಪ್ರಾರಂಭಿಸಿತು. ಆಕೆ ತನ್ನ ಕರ್ಚಿಫಿನಿಂದ ಅವನ ಕೈಗೆ ಕಟ್ಟಿದಳು. ನಂತರ ಅವನನ್ನು ಹಾಸ್ಪಿಟಲಗೆ ಕರೆದುಕೊಂಡು ಹೋದಳು. ಅಲ್ಲಿ ಅವನಿಗೆ ಟ್ರೀಟ್ಮೆಂಟ್ ಕೊಡೆಸಿ ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋದಳು. ಆದರೆ ಅವಳ ಮನೆಯಲ್ಲಿ ಅವರಿಬ್ಬರಿಗೆ ಜಾಗ ಕೊಡದೇ ಬೈದು ಅವಮಾನ ಮಾಡಿ ಕಳುಹಿಸಿದರು. ಅಲ್ಲಿಂದ ಅವರಿಬ್ಬರು ಮುಂಜಾನೆ ಟ್ರೇನ್ ಹಿಡಿದು ಸೀದಾ ಬೆಂಗಳೂರಿಗೆ ಬಂದರು.

ಬೆಂಗಳೂರಿಗೆ ಬಂದ ನಂತರ ಅನ್ವರ ಐಶ್ವರ್ಯಾಳನ್ನು ತನ್ನ ಸ್ವಂತ ಮನೆಗೆ ಕರೆದುಕೊಂಡು ಹೋದನು. ಆ ಮನೆಗೆ ಕಾಲಿಟ್ಟ ನಂತರ ಐಶ್ವರ್ಯಾ ಖುಷಿಯಿಂದ ಅನ್ವರನನ್ನು ಅಪ್ಪಿಕೊಂಡು ಕಣ್ಣೀರಾಕಿದಳು. ಏಕೆಂದರೆ ಹೊಸ ಮನೆಯಲ್ಲಿ ಅನ್ವರ ಐಶ್ವರ್ಯಾಳ ಒಂದೊಂದು ವಸ್ತುವನ್ನು ಭದ್ರವಾಗಿ ಇಟ್ಟಿದ್ದನು. ಅವಳ ಗಿಫ್ಟ ಕಲೆಕ್ಷನ್, ಒಡವೆ, ಬಟ್ಟೆ, ಲ್ಯಾಪಟಾಪ್ ಇತ್ಯಾದಿಗಳೆಲ್ಲವನ್ನು ಕ್ಷೇಮವಾಗಿ ಇಟ್ಟಿದ್ದನು. ತಕ್ಷಣವೇ ಅನ್ವರ ತನ್ನ ಗೆಳೆಯರಿಗೆಲ್ಲ ಕಾಲ ಮಾಡಿ ಮನೆಗೆ ಬರಲು ಹೇಳಿದನು. ಅವರಿಬ್ಬರು ತಮ್ಮ ತಪ್ಪನ್ನು ತಿದ್ದಿಕೊಂಡು ಮತ್ತೆ ಮರು ಮದುವೆಯಾಗ್ತಿವಿ ಅಂದಾಗ ಅವರ ಗೆಳೆಯರು ಮತ್ತೆ ಅವರಿಗೆ ಸಹಾಯ ಮಾಡಲು ಮುಂದಾದರು. ಆದರೆ ಈ ಸಲ ಅವರು ರೆಜಿಸ್ಟರ್ ಮದುವೆ ಮಾಡಿಸದೇ ಸೀದಾ ಅವರಿಬ್ಬರನ್ನು ಒಂದು ಕಾರಲ್ಲಿ ಮೊದಲು ಅನ್ವರನ ಮನೆಗೆ ಕರೆದುಕೊಂಡು ಹೋದರು.

ಅನ್ವರನ ಮನೆಯಲ್ಲಿ ಮಗ ಒಂಟಿಯಾಗಿ ನರಳುವುದಕ್ಕಿಂತ ಅವಳನ್ನೇ ಮದುವೆಯಾಗಿ ಸುಖವಾಗಿರಲಿ ಅಂತಾ ಅವರ ಮದುವೆಗೆ ಒಪ್ಪಿದರು. ಅವರಿಬ್ಬರು ಪ್ರೀತಿಸಿ ಮದುವೆಯಾಗಿ ಕಿತ್ತಾಡಿ ಡೈವೋರ್ಸ್ ತೆಗೆದುಕೊಂಡು ಬೇರೆಯಾಗಿ ಮತ್ತೆ ಮದುವೆಯಾಗುತ್ತಿರುವುದನ್ನು ನೋಡಿ ಅವರಿಬ್ಬರ ಪ್ರೀತಿ ನಿಜ ಅಂತಾ ಅವರ ಮನೆಯಲ್ಲಿ ಅವರಿಬ್ಬರನ್ನು ಬೆಂಬಲಿಸಿದರು. ಅವರ ಅಪ್ಪ ನಾನೇ ಮುಂದೆ ನಿಂತು ಅದ್ದೂರಿಯಾಗಿ ನಿಮ್ಮ ಮದುವೆ ಮಾಡುವುದಾಗಿ ಹೇಳಿದರು. ಅನ್ವರನ ಮನೆಯಲ್ಲಿ ಅವರ ಮದುವೆಗೆ ಒಪ್ಪಿಗೆ ಸಿಕ್ಕಿತು. ಆದರೆ ಐಶ್ವರ್ಯಾಳ ಮನೆಯವರ ಮನ ನೋಯಿಸಿ ಮದುವೆ ಮಾಡುವುದು ಅವರ ಗೆಳೆಯರಿಗೆ ಇಷ್ಟವಿರಲಿಲ್ಲ. ಅದಕ್ಕವರು ಅವಳ ಮನೆಯವರನ್ನು ಒಪ್ಪಿಸಲು ನೋಯ್ಡಾಗೆ ಹೋದರು. ಅವಳಿಗೆ ಎರಡನೇ ಮದುವೆ ಮಾಡಲು ಯೋಗ್ಯ ಹುಡುಗನನ್ನು ಹುಡುಕಲು ಸಾಧ್ಯವಾಗದೆ ಅವರಮ್ಮನ ಹಠ ಜಂಭ ಎರಡು ಇಳಿದಿದ್ದವು. ಅದಕ್ಕೆ ಅವಳ ಮನೆಯಲ್ಲೂ ಅವರಿಬ್ಬರ ಮದುವೆಗೆ ಅನುಮತಿ ಕೊಟ್ಟರು. ಇಬ್ಬರ ಮನೆಯವರು ತಾವೇ ಮುಂದೆ ನಿಂತು ಅವರಿಬ್ಬರ ಮದುವೆಯನ್ನು ಅದ್ದೂರಿಯಾಗಿ ಮಾಡಿದರು. ಪ್ರೀತಿ ಹಾಗೂ ಡೈವೋರ್ಸನಲ್ಲಿ ಹೋದ ಅವರ ಮರ್ಯಾದೆ ಈಗ ಮರು ಮದುವೆಯಲ್ಲಿ ಮರಳಿ ಬಂತು.

ಮದುವೆ ಶಾಸ್ತ್ರಗಳೆಲ್ಲ ಆದ ನಂತರ ಅವರಿಬ್ಬರು ತಮ್ಮ ಬೆಂಗಳೂರಿನ ಮನೆ ಸೇರಿದರು. ಅದು ಅವರ ಪ್ರೀತಿ ಗೂಡಾಯಿತು. ಈಗ ಅನ್ವರ ಆರ್ಥಿಕವಾಗಿ ಸಬಲನಾಗಿದ್ದನು. ಸ್ವಂತ ಮನೆ ಸಹ ಮಾಡಿದ್ದನು. ಹೀಗಾಗಿ ಐಶ್ವರ್ಯಾಳಿಗೆ ಈಗ ಕೆಲ್ಸ ಮಾಡುವ ಅವಶ್ಯತೆಯಿರಲಿಲ್ಲ. ಆದರೆ ಅವಳು ಜಾಬ್ ಮಾಡ್ತೀನಿ ಅಂದಾಗ ಅನ್ವರ ಬೇಡ ಅನ್ನದೇ ಅವಳನ್ನು ಬೆಂಬಲಿಸಿದನು. ಮನೆ ಕೆಲಸ ಮಾಡಲು ಒಬ್ಬಳು ಮನೆ ಗೆಲಸದವಳನ್ನು ನೇಮಿಸಿದನು. ಈಗ ಐಶ್ವರ್ಯಾಳಿಗೆ ಮನೆಯಲ್ಲಿ ಯಾವ ಕೆಲ್ಸಾನೂ ಇರಲಿಲ್ಲ. ದಿನಾ ಬೆಳಿಗ್ಗೆ ಬೇಗನೆ ಎದ್ದು ಅವರಿಬ್ಬರು ವಾಕಿಂಗಗೆ ಹೋಗುತ್ತಿದ್ದರು. ನಂತರ ವಾಪಸ್ ಬಂದು ರೆಡಿಯಾಗಿ ಟಿಫಿನ್ ಮಾಡಿ ಜೊತೆಯಾಗಿ ಬೈಕ್ ಮೇಲೆ ಒಂದೇ ಕಂಪನಿಗೆ ಹೋಗುತ್ತಿದ್ದರು. ಸಂಜೆ ಮನೆಗೆ ಬಂದ ನಂತರ ಲೈಟಾಗಿ ಏನಾದರೂ ತಿಂದು ಟೀ ಕುಡಿದು ಸೀಟಿ ಸುತ್ತಲೂ ಹೋಗುತ್ತಿದ್ದರು. ಬೇಗನೆ ಮನೆಗೆ ಬಂದು ಊಟ ಮಾಡಿ ಸ್ವಲ್ಪ ಹೊತ್ತು ಮನೆ ಟೆರೆಸ್ ಮೇಲೆ ವಾಕ್ ಮಾಡಿ ಬೆಡ್ರೂಮ ಸೇರಿ ಗೋಡೆಗಳು ನಾಚಿ ಕಣ್ಮುಚ್ಚಿಕೊಳ್ಳುವಂತೆ ಸರಸವಾಡುತ್ತಿದ್ದರು. ವೀಕೆಂಡಲ್ಲಿ ಟೈಮ್ ಸಿಕ್ರೆ ಯಾವುದಾದರೂ ಟೂರಿಸ್ಟ ಸ್ಪಾಟಿಗೆ ಹೋಗುತ್ತಿದ್ದರು. ಈ ರೀತಿ ಅವರಿಬ್ಬರ ಜೀವನ ಸುಖವಾಗಿ ಸಾಗಿತು. ಅವರ ಪ್ರೇಮದ ಸಂಕೇತವಾಗಿ ಒಂದು ವರ್ಷದಲ್ಲಿ ಅವರ ಮನೆಗೆ ಒಬ್ಬಳು ಪುಟ್ಟ ರಾಜಕುಮಾರಿಯ ಆಗಮನವಾಯಿತು. ಅವರಿಬ್ಬರ ಪ್ರೀತಿ, ಮದುವೆ ಎಲ್ಲವೂ ಸಾರ್ಥಕವಾಯಿತು.....

13) ಊರ್ವಶಿ ಮತ್ತು ಪುರುರವನ ಪ್ರೇಮಕಥೆ - Love Story of Urvashi and Pururava in Kannada
ಊರ್ವಶಿ ಇಂದ್ರನ ಆಸ್ಥಾನದ ಅತ್ಯಂತ ಸುಂದರ ಅಪ್ಸರೆಯರಲ್ಲಿ ಒಬ್ಬಳು. ದಿನಾಲು ಇಂದ್ರನ ಆಸ್ಥಾನದಲ್ಲಿ ನೃತ್ಯ ಮಾಡಿ ದೇವತೆಗಳನ್ನು ರಂಜಿಸುವುದು ಊರ್ವಶಿಯ ಕೆಲಸವಾಗಿತ್ತು. ಸ್ವರ್ಗದ ಸುಖಗಳಲ್ಲಿ ತೇಲಾಡಿ ಅವಳಿಗೆ ಬೇಸರವಾಗಿತ್ತು. ಸ್ವಲ್ಪವೂ ಕಷ್ಟಗಳಿಲ್ಲದ ಸ್ವರ್ಗದ ನೀರಸ ಜೀವನ ಅವಳನ್ನು ಹಿಂಸಿಸುತ್ತಿತ್ತು. ಅದಕ್ಕಾಗಿ ಆಕೆ ಸ್ವರ್ಗವನ್ನು ಬಿಟ್ಟು ಸ್ವಲ್ಪ ದಿನ ಸುತ್ತಾಡಲು ಭೂಮಿಗೆ ಬಂದಳು. ಭೂಮಿ ಮೇಲಿನ ಜನರ ಜೀವನ ಅವಳಿಗೆ ಬಹಳಷ್ಟು ಹಿಡಿಸಿತು. ದಿನಾಲು ಹೊಸಹೊಸ ವಿಷಯಗಳಿಂದ ಕೂಡಿದ ಭೂಮಿಯ ಜನಜೀವನ ಅವಳನ್ನು ಸೆಳೆಯಿತು. ಜನರ ಜೀವನದಲ್ಲಿ ಬರುವ ಕಷ್ಟ-ನಷ್ಟಗಳು ಅವಳಿಗೆ ಸಾಹಸಗಳಂತೆ ಕಂಡವು. ಅವಳಿಗೆ ಸ್ವರ್ಗಕ್ಕಿಂತ ಭೂಮಿಯ ಮೇಲಿನ ಜೀವನವೇ ಹೆಚ್ಚಿಷ್ಟವಾಯಿತು. ಅವಳಿಗೆ ಮರಳಿ ಸ್ವರ್ಗಕ್ಕೆ ಹೋಗುವ ಮನಸ್ಸಿರಲಿಲ್ಲ. ಆದರೂ ಆಕೆ ಹೋಗಲೇಬೇಕಾದ ಸಂದರ್ಭ ಎದುರಾಯಿತು. ಅದಕ್ಕಾಗಿ ಆಕೆ ಒಲ್ಲದ ಮನಸ್ಸಿನಿಂದ ಸ್ವರ್ಗದೆಡೆಗೆ ತನ್ನ ಸವಾರಿ ಬೆಳೆಸಿದಳು.
ಊರ್ವಶಿ ಭೂಮಿ ಮೇಲಿನ ವಾತಾವರಣವನ್ನು ಪದೇಪದೇ ನೆನಪಿಸಿಕೊಳ್ಳುತ್ತಾ ಸ್ವರ್ಗದೆಡೆಗೆ ಸಾಗಿದ್ದಳು. ಆದರೆ ಅಷ್ಟರಲ್ಲಿ ಅವಳ ದುರಾದೃಷ್ಟವೆಂಬಂತೆ ಅವಳನ್ನು ಒಬ್ಬ ರಾಕ್ಷಸ ಅಡ್ಡಗಟ್ಟಿ ಅವಳೊಂದಿಗೆ ಕೆಟ್ಟದಾಗಿ ನಡೆದುಕೊಳ್ಳಲು ಪ್ರಾರಂಭಿಸಿದನು. ಅವಳು ಸಹಾಯಕ್ಕಾಗಿ ಕೀರಚಲು ಪ್ರಾರಂಭಿಸಿದಳು. ಅವಳ ಹೆದರಿದ ಧ್ವನಿಯನ್ನು ಕೇಳಿ ಪುರುರವ ಬಂದನು. ಪುರುರವ ಭೂಮಿ ಮೇಲಿನ ಒಬ್ಬ ಪರಾಕ್ರಮಿ ರಾಜನಾಗಿದ್ದನು. ಆತ ಬುಧನ ಮಗ ಕೂಡ. ಅವನ ಪರಾಕ್ರಮ, ಶಕ್ತಿ ಸಾಮರ್ಥ್ಯ ಎಷ್ಟಿತ್ತೆಂದರೆ ಇಂದ್ರದೇವನು ರಾಕ್ಷಸರ ವಿರುದ್ಧ ಹೋರಾಡಲು ಪುರುರವನ ಸಹಾಯವನ್ನು ಪಡೆದುಕೊಳ್ಳುತ್ತಿದ್ದನು. ಅಂಥ ಸಾಹಸಿ ಪುರುರವ ಊರ್ವಶಿಯ ಸಹಾಯಕ್ಕೆ ಬಂದಿರುವುದು ಅವಳ ಅದೃಷ್ಟವಾಗಿತ್ತು. ಆತ ಊರ್ವಶಿಯನ್ನು ಆ ರಾಕ್ಷಸನಿಂದ ರಕ್ಷಿಸಿದನು. ಆದರೆ ಅವಳನ್ನು ರಕ್ಷಿಸುವಾಗ ಪುರುರವ ಊರ್ವಶಿಯನ್ನು ಸ್ಪರ್ಶಿಸಿದನು. ಅವನ ಸ್ಪರ್ಶ ಊರ್ವಶಿಯಲ್ಲಿ ಒಂದು ರೀತಿಯ ರೋಮಾಂಚನವನ್ನು ಉಂಟು ಮಾಡಿತು. ಏಕೆಂದರೆ ಅವಳಿಗೆ ಮಾನವರ ಸ್ಪರ್ಶದ ಅನುಭವವಿರಲಿಲ್ಲ. ಪುರುರವನಿಗೂ ಅಷ್ಟೇ, ಅಪ್ಸರೆಯಾದ ಊರ್ವಶಿಯ ಸ್ಪರ್ಶ ಹೊಸಹೊಸ ಆಸೆಗಳನ್ನು ಹುಟ್ಟು ಹಾಕಿತು. ಆದರೆ ಪುರುರವನ ಜೊತೆ ಲಲ್ಲೆ ಹೊಡೆಯುವಷ್ಟು ಸಮಯ ಊರ್ವಶಿಯ ಬಳಿ ಇರಲಿಲ್ಲ. ಆಕೆ ಅವನಿಗೆ ಧನ್ಯವಾದಗಳನ್ನು ಅರ್ಪಿಸಿ ಸ್ವರ್ಗಕ್ಕೆ ಅವಸರದಿಂದ ಹೋದಳು.
ಸ್ವರ್ಗಕ್ಕೆ ಹೋದ ಮೇಲೂ ಊರ್ವಶಿ ಪುರುರವನನ್ನು ನೆನಪಿಸಿಕೊಳ್ಳುತ್ತಿದ್ದಳು. ಅವನ ಸ್ಪರ್ಶ ಅವಳ ತಲೆ ಕೆಡಿಸಿತ್ತು. ಅದೇ ರೀತಿ ಪುರುರವನು ಸಹ ಊರ್ವಶಿಯ ನೆನಪುಗಳಲ್ಲಿ ನರಳುತ್ತಿದ್ದನು. ಒಮ್ಮೆ ಊರ್ವಶಿ ನಾಟಕದಲ್ಲಿ ಲಕ್ಷ್ಮೀದೇವಿಯ ಪಾತ್ರವನ್ನು ನಿಭಾಯಿಸುತ್ತಿದ್ದಳು. ಆವಾಗಾಕೆ ಪುರುಷೋತ್ತಮ ಎಂದೇಳುವ ಬದಲು ಪುರುರವ ಎಂದೇಳಿದಳು. ಆಗ ನಾಟಕವನ್ನು ನಿರ್ದೇಶಿಸಿದ್ದ ಭರತ ಮುನಿಗಳು ಕೋಪಿಸಿಕೊಂಡು ಅವಳಿಗೆ "ನೀನು ಸ್ವರ್ಗದ ಸುಖಗಳನ್ನು ಬಿಟ್ಟು ಭೂಮಿಯ ಹುಲು ಮನುಜನ ಬಗ್ಗೆ ಚಿಂತಿಸುತ್ತಾ ಅಪಚಾರವೆಸಗಿರುವೆ. ಅದಕ್ಕಾಗಿ ನೀನು ಭೂಮಿಗೆ ಹೋಗಿ ಮನುಷ್ಯಳಾಗಿರು..." ಎಂದು ಶಾಪವಿಟ್ಟರು. ಅವರ ಶಾಪವನ್ನು ಖುಷಿಯಿಂದ ಸ್ವೀಕರಿಸಿ ಊರ್ವಶಿ ಭೂಮಿಗೆ ಬಂದಳು.
ಕನಸಲ್ಲಿ ಕಾಡುತ್ತಿದ್ದ ಕನ್ಯೆ ಕಣ್ಮುಂದೆ ಬಂದಾಗ ಪುರುರವ ಆಶ್ಚರ್ಯ ಚಕಿತನಾದನು. ಜೊತೆಗೆ ತನ್ನ ಪ್ರೀತಿಯನ್ನು ಒಪ್ಪಿಕೊಂಡು ತನ್ನೊಂದಿಗೆ ಇರುವಂತೆ ಊರ್ವಶಿಯನ್ನು ಕೇಳಿಕೊಂಡನು. ಆಗ ಊರ್ವಶಿ ಅವನಿಗೆ "ನೀನು ನನ್ನ ಎರಡು ಮೇಕೆಗಳ ರಕ್ಷಣೆ ಮಾಡಬೇಕು, ನಾನು ಬರೀ ತುಪ್ಪವನ್ನಷ್ಟೇ ಸೇವಿಸುವೆ. ನೀನು ದಿನಾಲು ತಪ್ಪದೆ ನನಗೆ ತುಪ್ಪದ ವ್ಯವಸ್ಥೆ ಮಾಡಬೇಕು. ಮಿಲನದ ಸಂದರ್ಭ ಹೊರತು ಪಡಿಸಿ ನಾನು ನಿನ್ನನ್ನು ನಗ್ನವಾಗಿ ನೋಡಲು ಬಯಸುವುದಿಲ್ಲ. ಒಂದು ವೇಳೆ ನೀನು ಈ ನಿಯಮಗಳನ್ನು ಉಲ್ಲಂಘಿಸಿದರೆ ಅವತ್ತೇ ನಾನು ನಿನ್ನನ್ನು ಬಿಟ್ಟು ಮತ್ತೆ ಸ್ವರ್ಗಲೋಕಕ್ಕೆ ಹೋಗುವೆ" ಎಂಬ ಮೂರು ಷರತ್ತುಗಳ ಮೇರೆಗೆ ಆಕೆ ಅವನೊಂದಿಗೆ ಇರಲು ಒಪ್ಪಿದಳು.
ಊರ್ವಶಿಯಂಥ ಸುಂದರ ಅಪ್ಸರೆ ತನ್ನ ಪ್ರೀತಿಯನ್ನು ಒಪ್ಪಿಕೊಂಡು ತನ್ನೊಂದಿಗೆ ಇರಲು ಒಪ್ಪಿದ್ದರಿಂದ ಪುರುರವ ಗಾಳಿಯಲ್ಲಿ ತೇಲಾಡತೊಡಗಿದನು. ಊರ್ವಶಿಗೆ ಮೊದಲೇ ಭೂಮಿಯ ಜನಜೀವನ ಇಷ್ಟವಾಗಿತ್ತು. ಈಗ ಆಕೆ ಪುರುರವನ ಪ್ರೇಯಸಿಯಾಗಿ ಅವನ ಅರಮನೆಯಲ್ಲಿ ಇರಲು ಪ್ರಾರಂಭಿಸಿದಾಗ ಅವಳಿಗೆ ಸ್ವರ್ಗ ಮರೆತೇ ಹೋಯಿತು. ಪುರುರವ ಊರ್ವಶಿಯ ಸೌಂದರ್ಯವನ್ನು ಆನಂದಿಸುತ್ತಿದ್ದನು. ಪುರುರವ ಹಾಗೂ ಊರ್ವಶಿ ಮೋಜು ಮಸ್ತಿ ಮಾಡುತ್ತಾ ವರ್ಷಗಳನ್ನು ಕಳೆದರು. ಊರ್ವಶಿ ಪುರುರವನ ಆಸರೆಯಲ್ಲಿ ಆನಂದವಾಗಿದ್ದಳು. ಅವಳಿಗೆ ಸ್ವರ್ಗ ಬೇಡವಾಗಿತ್ತು. ಆದರೆ ಅತ್ತ ಕಡೆ ಸ್ವರ್ಗ ಅವಳಿಲ್ಲದೆ ಬೀಕೋ ಎನ್ನುತ್ತಿತ್ತು. ಸ್ವರ್ಗವಾಸಿಗಳೆಲ್ಲ ಅವಳನ್ನು ಮತ್ತೆ ಸ್ವರ್ಗಕ್ಕೆ ಕರೆಯಿಸಿಕೊಳ್ಳಲು ಸಂಚು ರೂಪಿಸಿದರು. ಅದರ ಜವಾಬ್ದಾರಿಯನ್ನು ವಿಶ್ವಾವಸು ಎಂಬ ಗಂಧರ್ವನಿಗೆ ವಹಿಸಿದರು.
ವಿಶ್ವಾವಸು ಒಂದು ಸರಿಯಾದ ರಾತ್ರಿ ತನ್ನ ಗಂಧರ್ವ ಗೆಳೆಯರೊಂದಿಗೆ ಪುರುರವನ ಅರಮನೆಗೆ ಬಂದಿಳಿದನು. ಆಗ ಊವರ್ಶಿ ಹಾಗೂ ಪುರುರವ ಮಿಲನ ಕ್ರಿಯೆಯಲ್ಲಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡು ವಿಶ್ವಾವಸು ಊರ್ವಶಿಯ ಒಂದು ಮೇಕೆಯನ್ನು ಅಪಹರಿಸಿದನು. ಆ ಮೇಕೆಯ ಕೂಗನ್ನು ಕೇಳಿ ಊರ್ವಶಿ ಜಾಗೃತಳಾಗಿ ಪುರುರವನಿಗೆ ಮೇಕೆಯನ್ನು ಕಾಪಾಡುವಂತೆ ಹೇಳಿದಳು. ಆದರೆ ವಸ್ತ್ರಹೀನನಾದ ಪುರುರವ ಹಾಸಿಗೆಯಿಂದ ಮೇಲೆಳಲು ಹಿಂದೇಟು ಹಾಕಿದನು. ಹೀಗಾಗಿ ವಿಶ್ವಾವಸು ಮತ್ತೊಂದು ಮೇಕೆಯನ್ನು ಸಹ ಸುಲಭವಾಗಿ ಅಪಹರಿಸಿದನು. ತನ್ನ ಎರಡನೇ ಮೇಕೆಯು ಕಾಣೆಯಾದಾಗ ಊರ್ವಶಿ ಕೆರಳಿ ಕೀರುಚಿದಳು. ಆಗ ಪುರುರವ "ಈಗ ರಾತ್ರಿ ಕತ್ತಲಿರುವುದರಿಂದ ಊರ್ವಶಿ ನನ್ನನ್ನು ನೋಡಲಾರಳು" ಎಂಬ ಧೈರ್ಯದ ಮೇಲೆ ಆತ ಮೇಕೆಗಳನ್ನು ಕಾಪಾಡುವುದಕ್ಕಾಗಿ ಹಾಸಿಗೆಯಿಂದ ಮೇಲೆದ್ದನು. ಆಗ ವಿಶ್ವಾವಸು ತನ್ನ ಮಾಯಾಶಕ್ತಿಯಿಂದ ಅವನ ಮೇಲೆ ಹರಿತವಾದ ಬೆಳಕನ್ನು ಚೆಲ್ಲಿದನು. ಆಗ ಊರ್ವಶಿ ಪುರುರವನನ್ನು ಬಟ್ಟೆಯಿಲ್ಲದೆ ಬೆತ್ತಲೆಯಾಗಿ ನೋಡಿದಳು. ಆತ ಮೇಕೆಗಳನ್ನು ರಕ್ಷಿಸಲು ಆ ಗಂಧರ್ವರನ್ನು ಹಿಂಬಾಲಿಸಿದನು. ಆದರೆ ಪುರುರವ ತನ್ನ ಎಲ್ಲ ನಿಯಮಗಳನ್ನು ಉಲ್ಲಂಘಿಸಿದನಲ್ಲ ಎಂಬ ಬೇಜಾರಲ್ಲಿ ಸ್ವರ್ಗಕ್ಕೆ ಹಿಂತಿರುಗಿದಳು.
ಪುರುರವ ಮೇಕೆಗಳು ಸಿಗದೆ ಮರಳಿ ಬರುವಷ್ಟರಲ್ಲಿ ಊರ್ವಶಿ ಅವನಿಗೆ ಒಂದು ಮಾತನ್ನು ಹೇಳದೆ ಸ್ವರ್ಗಕ್ಕೆ ಹಿಂತಿರುಗಿದ್ದಳು. ತನ್ನ ಪ್ರೇಯಸಿ ಹೇಳದೆ ಕೇಳದೆ ಕಾಣೆಯಾಗಿರುವುದರಿಂದ ಪುರುರವ ಅತೀವವಾಗಿ ನೊಂದನು. ಊರ್ವಶಿಗೂ ಸ್ವರ್ಗಕ್ಕೆ ಹೋಗುವ ಮನಸ್ಸಿರಲಿಲ್ಲ. ಆದರೆ ಸಂದರ್ಭ ಅವಳನ್ನು ದಾರಿ ತಪ್ಪಿಸಿತ್ತು. ಈ ರೀತಿ ಸ್ವರ್ಗವಾಸಿಗಳ ಸಂಚಿಗೆ ಊರ್ವಶಿ ಹಾಗೂ ಪುರುರವನ ಪ್ರೇಮಕಥೆ ಕಣ್ಣೀರಲ್ಲಿ ಕೊನೆಯಾಯಿತು. ಎಲ್ಲ ಮುರಿದ ಪ್ರೇಮಕಥೆಗಳಲ್ಲಿ ಯಾರಾದರೂ ಒಬ್ಬರು ಖಳನಾಯಕರು ಇದ್ದೇ ಇರುತ್ತಾರೆ. ಈ ಪ್ರೇಮಕಥೆಯನ್ನು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಡನೆ ಶೇರ್ ಮಾಡಿ...
14) ಅಮೃತಮತಿಯ ಪ್ರಣಯ ಕಥೆ : ಯಶೋಧರ ಚರಿತ್ರೆ - Yashodhar Charitre in Kannada
ಅಯೋಧ್ಯೆಯ ರಾಜ ಮಾರಿದತ್ತನು ಅತ್ಯಂತ ಕ್ರೂರ ವ್ಯಕ್ತಿತ್ವದವನಾಗಿದ್ದವು. ಆತ ಪ್ರಾಣಿಬಲಿ, ನರಬಲಿಗಳಿಗೆ ಹಿಂಜರಿಯುತ್ತಿರಲಿಲ್ಲ. ಆತ ಚಂಡಮಾರಿ ಯಾಗಕ್ಕೆ ನರಬಲಿ ಕೊಡುವುದಕ್ಕಾಗಿ ಎರಡು ಮುದ್ದಾದ ಹುಡುಗರನ್ನು ಎಳೆತರಿಸಿದ್ದನು. ಆಗ ಅವನು ಮಾಡುತ್ತಿರುವ ನರಬಲಿಯನ್ನು ತಡೆಯುವುದಕ್ಕಾಗಿ ಮತ್ತು ಅಹಿಂಸೆಯ ಮಹತ್ವವನ್ನು ವಿವರಿಸುವುದಕ್ಕಾಗಿ ಅಭಯರುಚಿ ಕುಮಾರ ಮಾರಿದತ್ತನಿಗೆ ಯಶೋಧರ ಚರಿತ್ರೆಯನ್ನು ಹೇಳುತ್ತಾನೆ. ಆ ಯಶೋಧರ ಚರಿತ್ರೆಯಲ್ಲಿ ಅಮೃತಮತಿಯ ಮನಚುಚ್ಚುವ ಅಕ್ರಮ, ಅಧಾರ್ಮಿಕ ಪ್ರಣಯ ಪ್ರಸಂಗವಿದೆ. ಈ ಪ್ರಣಯ ಪ್ರಸಂಗ ಜನ್ನನ ಯಶೋಧರ ಚರಿತ್ರೆಯಲ್ಲಿಯು ಸೊಗಸಾಗಿ ಮೂಡಿ ಬಂದಿದೆ.
ಯಶೋಧರ ಉಜ್ಜಯನಿಯ ರಾಜ ಯಶೌಘ ಮತ್ತು ಚಂದ್ರಮತಿಯ ಮಗನಾಗಿದ್ದಾನೆ. ಅವನ ಸ್ರುರದ್ರೂಪಿ ಮಡದಿಯೇ ಅಮೃತಮತಿ. ಯಶೋಧರ ಸಕಲ ಶಾಸ್ತ್ರ ಮತ್ತು ಶಸ್ತ್ರಗಳಲ್ಲಿ ಸಮರ್ಥನಾದಾಗ ರಾಜಾ ಯಶೌಘ ರಾಜ್ಯಭಾರದ ಜವಾಬ್ದಾರಿಯನ್ನು ಮಗ ಯಶೋಧರನಿಗೆ ವಹಿಸಿ ಕಾಡು ಸೇರಿದನು. ಯಶೋಧರ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಸಮರ್ಥವಾಗಿ ರಾಜ್ಯಭಾರ ಮಾಡಿಕೊಂಡಿದ್ದನು. ಅವನ ಸುಂದರವಾದ ಮಡದಿ ಅಮೃತಮತಿ ಅವನ ಮನಪ್ರಿಯೆಯಾಗಿದ್ದಳು. ಒಂದಿನ ರಾತ್ರಿ ರಾಜಾ ಯಶೋಧರ ಹಾಗೂ ಅಮೃತಮತಿ ತಮ್ಮ ಖಾಸಗಿ ಅರಮನೆಯಲ್ಲಿ ಏಕಾಂತದಲ್ಲಿದ್ದರು. ಅಮೃತಮತಿ ಯಶೋಧರನಿಂದ ಸಾಕಷ್ಟು ದೈಹಿಕ ಸುಖವನ್ನು ಬಯಸುತ್ತಿದ್ದಳು. ಆದರೆ ಆತ ಒಬ್ಬ ಸದ್ಗುಣಗಳಿರುವ ವ್ಯಕ್ತಿಯಾಗಿದ್ದನು. ಹೀಗಾಗಿ ಅಮೃತಮತಿ ಸಾತ್ವಿಕ ಗುಣಗಳನ್ನು ತುಂಬಿಕೊಂಡ ಗಂಡನಲ್ಲಿ ದೈಹಿಕ ಸುಖವನ್ನು ಅನುಭವಿಸದಾದಳು. ಅವಳಿಗೆ ಅವನಿಂದ ಸುಖ ಸಿಗದಾದಾಗ ಆಕೆ ಬೇಸರಗೊಂಡಳು. ಅದೇ ಸಮಯಕ್ಕೆ ಆಕೆಯ ಕಿವಿಗಳಿಗೆ ಗಜಶಾಲೆಯಿಂದ ಸೊಗಸಾದ ಹಾಡೊಂದು ಕೇಳಿಸಿತು. ರಾಣಿ ಅಮೃತಮತಿ ಆ ಕ್ಷಣದಲ್ಲಿಯೇ ಆ ಹಾಡನ್ನು ಹಾಡುತ್ತಿರುವ ಹಾಡುಗಾರನಿಗೆ ತನ್ನ ಮನಸ್ಸನ್ನು ಕೊಟ್ಟು ಬಿಟ್ಟಳು.
ಮರುದಿನ ಬೆಳಗಾದಾಗ ರಾಣಿ ಅಮೃತಮತಿ ತನ್ನ ಗೆಳತಿಗೆ ಗಜಶಾಲೆಗೆ ಹೋಗಿ ನಿನ್ನೆ ರಾತ್ರಿ ಹಾಡೇಳುತ್ತಿರುವ ಹಾಡುಗಾರನ ಪತ್ತೆ ಹಚ್ಚಿಕೊಂಡು ಬರಲು ಹೇಳಿದಳು. ಆಕೆಯ ಗೆಳತಿ ಗಜಶಾಲೆಗೆ ಹೋಗಿ ನೋಡಿದಾಗ ಆಕೆಗೆ ಆ ಹಾಡುಗಾರನ ಮೇಲೆ ಹೇಸಿಕೆಯಾಯಿತು. ಏಕೆಂದರೆ ಆತ ಗಜಶಾಲೆಯ ಮಾವುತ ಅಷ್ಟಾವಂಕನಾಗಿದ್ದನು. ಹೆಸರೇ ಹೇಳುವಂತೆ ಅವನ ದೇಹದ ಎಂಟು ಕಡೆಗಳಲ್ಲಿ ಗೂನುಗಳಿದ್ದವು. ಕೂಡಲೇ ಅಮೃತಮತಿಯ ಗೆಳತಿ ಅಲ್ಲಿಂದ ಮರಳಿ ನಗುತ್ತಾ ಅವಳಿಗೆ ಅಷ್ಟಾವಂಕನ ಬಗ್ಗೆ ತಿಳಿಸಿದಳು. ಆಕೆ ಅಮೃತಮತಿಗೆ "ನೀನು ನಿನ್ನೆ ರಾತ್ರಿ ಹಾಡು ಕೇಳಿದ್ದು ಗಜಶಾಲೆಯ ಮಾವುತ ಅಷ್ಟಾವಂಕನದ್ದು. ಆತ ನೋಡಲು ತುಂಬಾ ವಿಕಾರವಾಗಿದ್ದಾನೆ. ಆತ ರಾತ್ರಿ ಕುಡಿದು ಮನ ಬಂದಂತೆ ಕೀರುಚುತ್ತಾನೆ ಅದನ್ನೇ ನೀನು ಹಾಡೆಂದುಕೊಂಡಿರುವೆ ಅಷ್ಟೇ..." ಎಂದು ತಿಳಿಸಿ ಹೇಳುತ್ತಾಳೆ. ಆದರೂ ಅಮೃತಮತಿ ಅವಳ ಮಾತನ್ನು ಕೇಳುವುದಿಲ್ಲ. ಏಕೆಂದರೆ ಆಕೆ ಅವನ ಹಾಡನ್ನು ಕೇಳಿದ ಕ್ಷಣದಲ್ಲೇ ತನ್ನ ಮನಸ್ಸನ್ನು ಅವನಿಗೆ ಕೊಟ್ಟು ಬಿಟ್ಟಿರುತ್ತಾಳೆ. ತನ್ನ ಗೆಳತಿಯ ಮಾತನ್ನು ಲೆಕ್ಕಿಸದೇ ಅಮೃತಮತಿ ಅಷ್ಟಾವಂಕನನ್ನು ಭೇಟಿಯಾಗುತ್ತಾಳೆ. ಅಷ್ಟಾವಂಕ ಒಬ್ಬ ಕುರೂಪಿ, ಕುಡುಕ, ಕ್ರೂರ ಹಾಗೂ ಒರಟನೆಂದು ಗೊತ್ತಾದ ಮೇಲು ಆಕೆ ಅವನನ್ನು ಪ್ರೀತಿಸಲು ಮುಂದಾಗುತ್ತಾಳೆ. ಏಕೆಂದರೆ ಆಕೆ ದೇಹದ ಹಸಿವಿನಿಂದ ಬಳಲಿ ಬೆಂಡಾಗಿರುತ್ತಾಳೆ. ಆಕೆ ಅಷ್ಟಾವಂಕನನ್ನು ಪ್ರೀತಿಸುತ್ತಾಳೆ. ರಾಜಾ ಯಶೋಧರನ ಕಣ್ತಪ್ಪಿಸಿ ಅವನೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸುತ್ತಾಳೆ.
ಅಮೃತಮತಿ ದೇಹದ ಹಸಿವನ್ನು ಈಡೇರಿಸಿಕೊಳ್ಳಲು ಅಷ್ಟಾವಂಕನ ಜೊತೆಗೆ ಪ್ರೇಮ ಪ್ರಣಯ ಪ್ರಸಂಗಗಳನ್ನು ಧೈರ್ಯವಾಗಿ ಮುಂದುವರೆಸುತ್ತಾಳೆ. ಆದರೆ ಒಂದಿನ ರಾಣಿ ಅಮೃತಮತಿ ಹಾಗೂ ಗಜಶಾಲೆಯ ಮಾವುತ ಅಷ್ಟಾವಂಕನ ಅಕ್ರಮ ಸಂಬಂಧ ರಾಜಾ ಯಶೋಧರನಿಗೆ ಗೊತ್ತಾಗುತ್ತದೆ. ಆತ ರಾತ್ರಿ ಅವಳನ್ನು ಗುಟ್ಟಾಗಿ ಹಿಂಬಾಲಿಸುತ್ತಾನೆ. ರಾಣಿ ಅಮೃತಮತಿ ಗಜಶಾಲೆಗೆ ಹೋಗುತ್ತಾಳೆ. ಅಷ್ಟಾವಂಕ ಆಗಲೇ ಅವಳಿಗಾಗಿ ಬಹಳ ಸಮಯದಿಂದ ಕಾಯುತ್ತಾ ನಿಂತಿರುತ್ತಾನೆ. ಅಮೃತಮತಿ ಅವನ ಹತ್ತಿರ ಬಂದ ನಂತರ ಏರು ಧ್ವನಿಯಲ್ಲಿ ಆತ "ಯಾಕೆ ತಡವಾಗಿ ಬಂದೆ...?" ಎಂದು ಕೇಳುತ್ತಾನೆ. ಆಗಾಕೆ "ಎಲ್ಲರ ಕಣ್ತಪ್ಪಿಸಿ ಬರಲು ತಡವಾಯಿತು" ಎಂದು ಉತ್ತರಿಸುತ್ತಾಳೆ. ಅವಳ ಹಾರಿಕೆಯ ಉತ್ತರದಿಂದ ಅಷ್ಟಾವಂಕನ ಕೋಪ ಮತ್ತಷ್ಟು ಹೆಚ್ಚಾಗುತ್ತದೆ. ಆತ ಕೋಪದಲ್ಲಿ ಅಮೃತಮತಿಗೆ ಕೆಟ್ಟ ಶಬ್ದಗಳಿಂದ ತೆಗಳುತ್ತಾನೆ. ಆಗಾಕೆ ಅವನನ್ನು ಪರಿಪರಿಯಾಗಿ ಬೇಡಿಕೊಂಡು ಸಮಾಧಾನ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಆತ ಕೋಪದಲ್ಲಿ ಅವಳನ್ನು ಕಾಲಿನಿಂದ ಒದೆಯುತ್ತಾನೆ. ಅವಳ ತಲೆಗೂದಲುಗಳನ್ನು ಹಿಡಿದು ಎಳೆದಾಡುತ್ತಾನೆ. ಇಷ್ಟೆಲ್ಲ ಆದರೂ ಅಮೃತಮತಿ ಆ ಕ್ರೂರ ಕುರೂಪಿ ಅಷ್ಟಾವಂಕನನ್ನು ತನ್ನ ಸೆರಗು ಜಾರಿಸಿ ಸಂತೈಸುತ್ತಾಳೆ.
ಅಮೃತಮತಿ ತಾನು ಒಬ್ಬ ರಾಜನ ಮಡದಿಯೆಂಬುದನ್ನು ಮರೆತು ಕೀಳು ಮಾವುತನೊಂದಿಗೆ ಗಜಶಾಲೆಯಲ್ಲಿ ಬೆತ್ತಲಾಗುತ್ತಾಳೆ. ಇಷ್ಟಾದರೂ ಒರಟ ಅಷ್ಟಾವಂಕನ ಕೋಪ ಸಂಪೂರ್ಣವಾಗಿ ತಣ್ಣಗಾಗಿರುವುದಿಲ್ಲ. ಆತ ಅಮೃತಮತಿಯ ಕೋಮಲವಾದ ಶರೀರವನ್ನು ತನ್ನ ಒರಟಾದ ಬೆರಳುಗಳಿಂದ ಪರಚುತ್ತಾನೆ. ಅವಳ ನಾಜೂಕಾದ ಕೆನ್ನೆ, ಕತ್ತು, ಕಿವಿ, ತುಟಿಗಳನ್ನು ಕಚ್ಚುತ್ತಾನೆ. ಅವಳನ್ನು ಹಿಂಸಿಸುತ್ತಾ ಅವಳನ್ನು ವಿಕೃತವಾಗಿ ಕಾಮಿಸುತ್ತಾನೆ. ಆದರೂ ಅಮೃತಮತಿ ಅವನ ಈ ವಿಕೃತತೆಯನ್ನು ಆನಂದಿಸುತ್ತಿರುತ್ತಾಳೆ. ಈ ಕ್ರೂರ ಸನ್ನಿವೇಶವನ್ನು ನೋಡುತ್ತಾ ನಿಂತಿದ್ದ ರಾಜಾ ಯಶೋಧರನ ಕಣ್ಣಲ್ಲಿ ಕಣ್ಣೀರು ಕಾಲು ಚಾಚುತ್ತದೆ. ಜೊತೆಗೆ ತನ್ನ ಮುದ್ದಿನ ಮಡದಿಯ ಮೇಲೆ ಅಸಹ್ಯವಾಗುತ್ತದೆ. ಆತ ಕೋಪದಲ್ಲಿ ಅವರಿಬ್ಬರನ್ನು ಕೊಲ್ಲುವುದಕ್ಕಾಗಿ ತನ್ನ ಖಡ್ಗವನ್ನು ಹೊರ ತೆಗೆಯುತ್ತಾನೆ. ಆದರೆ ಹಿಂಸೆ ಜೈನ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಸುಮ್ಮನೆ ತನ್ನ ಅರಮನೆಗೆ ಮರಳುತ್ತಾನೆ.
ರಾಣಿ ಅಮೃತಮತಿ ಹಾಗೂ ಅಷ್ಟಾವಂಕನ ವಿಚಿತ್ರ ಅಕ್ರಮ ಪ್ರಣಯವನ್ನು ಕಂಡು ರಾಜಾ ಯಶೋಧರ ಮಾನಸಿಕ ಆಘಾತಕ್ಕೆ ಒಳಗಾಗಿರುತ್ತಾನೆ. ಅದೇ ಸಮಯದಲ್ಲಿ ಅವನ ಸಪ್ಪೆ ಮುಖವನ್ನು ನೋಡಿ ಅವನ ತಾಯಿ ಅವನ ಈ ಮೌನಕ್ಕೆ ಕಾರಣವೇನೆಂದು ಕೇಳುತ್ತಾಳೆ. ಆಗಾತ ಒಂದು ಭಯಂಕರವಾದ ಕೆಟ್ಟ ಕನಸ್ಸನ್ನು ಕಂಡೆ ಅಷ್ಟೇ ಎಂದೇಳಿ ಜಾರಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಅವನ ತಾಯಿ "ಆ ಕನಸ್ಯಾವುದು...?" ಎಂದು ಕೇಳುತ್ತಾಳೆ. ಆಗ ರಾಜಾ ಯಶೋಧರ "ಸುಂದರವಾದ ರಾಜ ಹಂಸವೊಂದು ಕೊಚ್ಚೆಯಲ್ಲಿ ಬಿದ್ದು ಹೊರಳಾಡುತ್ತಿರುವುದನ್ನು ಕಂಡೆ..." ಎಂದೇಳಿ ಅಲ್ಲಿಂದ ಹೋಗುತ್ತಾನೆ. ಅವನ ತಾಯಿ ಜೋತಿಷಿಗಳನ್ನು ಕರೆಯಿಸಿ ತಮ್ಮ ಮಗನ ನೆಮ್ಮದಿ ತಿಂದ ಆ ಕನಸಿಗೆ ಪರಿಹಾರವೆನೆಂದು ಕೇಳುತ್ತಾರೆ. ಆಗ ಜೋತಿಷಿಗಳು "ಒಂದು ಹುಂಚವನ್ನು ಬಲಿ ಕೊಡಿ. ಎಲ್ಲವೂ ಸರಿ ಹೋಗುತ್ತದೆ..." ಎಂದೇಳುತ್ತಾರೆ. ಆದರೆ ಅಹಿಂಸಾ ವಾದಿಯಾದ ರಾಜಾ ಯಶೋಧರ ಹುಂಜವನ್ನು ಬಲಿ ಕೊಡಲು ಒಪ್ಪುವುದಿಲ್ಲ. ಅದಕ್ಕಾಗಿ ಹಿಟ್ಟಿನ ಹುಂಜವನ್ನು ಮಾಡಿ ಬಲಿಕೊಟ್ಟು ಬಂದಿರುವ ಸಮಸ್ಯೆಯನ್ನು ಪರಿಹರಿಸುವ ನಿರ್ಧಾರ ಅಂತಿಮವಾಗುತ್ತದೆ. ಅದರಂತೆ ಒಂದು ಹಿಟ್ಟಿನ ಹುಂಜವನ್ನು ಮಾಡಿ ಅದನ್ನು ಬಲಿಕೊಡಲು ಸಕಲ ಸಿದ್ಧತೆಗಳಾಗುತ್ತವೆ. ಆದರೆ ಆ ಹಿಟ್ಟಿನ ಹುಂಜದ ಅಂದಕ್ಕೆ ಆಕರ್ಷಿತವಾಗಿ ಒಂದು ಆತ್ಮ ಅದರಲ್ಲಿ ಬಂದು ಸೇರಿಕೊಳ್ಳುತ್ತದೆ. ಅದನ್ನರಿಯದೆ ರಾಜಾ ಯಶೋಧರ ಆ ಹಿಟ್ಟಿನ ಹುಂಜವನ್ನು ತನ್ನ ಖಡ್ಗದಿಂದ ಕತ್ತರಿಸುತ್ತಾನೆ. ಆಗ ಅದರಲ್ಲಿದ್ದ ಆತ್ಮ ರಕ್ತ ಕಾರಿಕೊಂಡು ಹೊರ ಬೀಳುತ್ತದೆ. ಅದನ್ನು ನೋಡಿದ ಯಶೋಧರ ನನ್ನಿಂದ ಪ್ರಾಣಿ ಹಿಂಸೆಯಾಯಿತೆಂದು ಭಾವಿಸಿ ಪ್ರಾಯಶ್ಚಿತ್ತಕ್ಕಾಗಿ ಕಾಡಿಗೆ ಹೋಗಲು ನಿರ್ಧರಿಸುತ್ತಾನೆ.
ಯಶೋಧರ ಹುಂಜವನ್ನು ಬಲಿ ಕೊಡಲು ಮಾಡಿದ ಯಾಗದ ಹಿಂದಿರುವ ಕಾರಣ ತಿಳಿದು ಅಮೃತಮತಿ ಅವನ ಮೇಲೆ ಹಲ್ಲು ಕಿರಿಯುತ್ತಾಳೆ. ಸುಂದರವಾದ ರಾಜ ಹಂಸವೊಂದು ಕೊಚ್ಚೆಯಲ್ಲಿ ಹೊರಳಾಡುತ್ತಿರುವುದನ್ನು ಕಂಡೆ ಎಂದೇಳಿದ ಮಾತಲ್ಲಿ ನಾನೇ ಆ ರಾಜ ಹಂಸ ಎಂಬುದನ್ನು ಅಮೃತಮತಿ ಸುಲಭವಾಗಿ ಅರಿಯುತ್ತಾಳೆ. ಅಲ್ಲದೆ ಆಕೆಗೆ ಅಷ್ಟಾವಂಕನೊಂದಿಗೆ ಬೆಳೆಸಿದ ಅಕ್ರಮ ಸಂಬಂಧ ಯಶೋಧರನಿಗೆ ಗೊತ್ತಾಗಿದೆ ಎಂಬುದು ಸಹ ತಿಳಿಯುತ್ತದೆ. ಅದಕ್ಕಾಗಿ ಆಕೆ ರಾಜಾ ಯಶೋಧರನನ್ನು ಕೊಲ್ಲಲು ಸಂಚು ರೂಪಿಸುತ್ತಾಳೆ. ಆ ಸಂಚಿನಂತೆ ನಯವಾಗಿ ಮಾತನಾಡುತ್ತಾ ಯಶೋಧರನಿಗೆ ಹಾಗೂ ಅವನ ತಾಯಿಗೆ ಊಟ ಬಡಿಸುವ ನೆಪದಲ್ಲಿ ಅವರಿಬ್ಬರಿಗೆ ವಿಷ ಉಣಿಸಿ ಸಾಯಿಸುತ್ತಾಳೆ. ಜೈನ ಧರ್ಮವನ್ನು ಅನುಸರಿಸಿ ಅಹಿಂಸೆಯನ್ನು ಪಾಲಿಸಿದ ರಾಜಾ ಯಶೋಧರ ತನ್ನ ಮನಪ್ರಿಯ ನಡತೆಗೆಟ್ಟ ಮಡದಿಯಿಂದಲೇ ಕೊಲೆಯಾಗುತ್ತಾನೆ. ಅವನ ಸಾವಿನ ನಂತರವೂ ಕಾಮಕ್ಕಾಗಿ ಕ್ರೂರಳಾದ ಕೆಟ್ಟ ಹೆಣ್ಣಾದ ಅಮೃತಮತಿ ಅಷ್ಟಾವಂಕನೊಂದಿಗೆ ಅದೇ ರೀತಿ ಅಕ್ರಮ ಸಂಬಂಧವನ್ನು ಮುಂದುವರೆಸಿ ಸಾವಿನ ನಂತರ ಧೂಮಪ್ರಭೆ ಎಂಬ ನರಕಕ್ಕೆ ಹೋಗಿ ನರಳುತ್ತಾಳೆ.
ಅಹಿಂಸಾ ವಾದಿಯಾದ ಯಶೋಧರನ ಚರಿತ್ರೆಯನ್ನು ಕೇಳಿದ ನಂತರ ಅಯೋಧ್ಯೆಯ ರಾಜ ಮಾರಿದತ್ತ ನರಬಲಿ ಮತ್ತು ಹಿಂಸೆಯಿಂದ ಹಿಂದೆ ಸರಿಯುತ್ತಾನೆ. ಚಂಡಮಾರಿ ಯಾಗಕ್ಕಾಗಿ ಆತ ಸೆರೆ ಹಿಡಿದಿದ್ದ ಅಮಾಯಕ ಹುಡುಗರನ್ನು ಬಿಡುಗಡೆಗೊಳಿಸುತ್ತಾನೆ. ಇಷ್ಟು ದಿನ ತಾನು ಮಾಡಿದ ಹಿಂಸೆಗೆ ಪ್ರಾಯಶ್ಚಿತ್ತವಾಗಿ ಅಹಿಂಸಾ ವಾದವನ್ನು ಒಪ್ಪಿಕೊಂಡು ಕಾಡಿಗೆ ತೆರಳುತ್ತಾನೆ. ಇದಿಷ್ಟು ಯಶೋಧರ ಚರಿತ್ರೆಯಲ್ಲಿ ಬರುವ ಅಮೃತಮತಿಯ ಅಕ್ರಮ ಪ್ರಣಯ ಪ್ರಸಂಗ. ಪ್ರೇಮಕ್ಕೆ ಕಣ್ಣಿಲ್ಲವೆಂಬುದು ಜಗಜ್ಜಾಹೀರಾದ ಮಾತು. ಆದರೆ ಕಾಮಕ್ಕೂ ಕಣ್ಣಿಲ್ಲವೆಂಬುದು ಅಮೃತಮತಿಯಿಂದ ಜಗಜ್ಜಾಹೀರಾಗುವ ಮಾತು. ಅಮೃತಮತಿಯಂಥ ಕೆಟ್ಟ ಕಾಮುಕಿ ಯಾರಿಗೂ ಮಡದಿಯಾಗಿ ಸಿಗದಿರಲಿ ಎಂಬ ಆಶಯ ನನ್ನದು. ಈ ಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿ...
15) ರುರು ಮತ್ತು ಪ್ರಮದ್ವರರ ಪ್ರೇಮಕಥೆ : Great Untold Love Story of Ruru and Pramadvara in Kannada
ಮೂವರು ನವ ತರಣರು ವನವಿಹಾರಕ್ಕಾಗಿ ಕಾಡಿಗೆ ಹೋದರು. ಕಾಡಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ಅವರು ಸುತ್ತಾಡಿ ಸುಸ್ತಾದರು. ಅವರಿಗೆ ಅತೀವ ಬಾಯಾರಿಕೆಯಾಗಿತ್ತು. ಅದೇ ಸಮಯಕ್ಕೆ ಅವರ ಕಣ್ಣಿಗೆ ಸ್ಥೂಲಕೇಶ ಮಹರ್ಷಿಗಳ ಆಶ್ರಮ ಕಾಣಿಸಿತು. ಅವರು ಬಾಯಾರಿಕೆಯನ್ನು ಆರಿಸಿಕೊಳ್ಳಲು ಆ ಆಶ್ರಮಕ್ಕೆ ಕಾಲಿಟ್ಟರು. ಆಶ್ರಮದಲ್ಲಿ ಮಹರ್ಷಿಗಳಿರಲಿಲ್ಲ. ಬದಲಾಗಿ ಅವರ ಮಗಳು ಪ್ರಮದ್ವರಾ ಇದ್ದಳು. ಅವಳು ಗಾಯಕೊಂಡ ಪಕ್ಷಿಯ ಶೂಶ್ರುಸೆಯನ್ನು ಮಾಡುತ್ತಿದ್ದಳು. ಅದೇ ಸಮಯದಲ್ಲಿ ಆ ಮೂವರು ತರುಣರಲ್ಲೊಬ್ಬ "ಕುಡಿಯಲು ಸ್ವಲ್ಪ ನೀರು ಸಿಗಬಹುದಾ?" ಎಂದು ಕೂಗಿದನು. ಅವನ ಕೂಗನ್ನು ಕೇಳಿಸಿಕೊಂಡ ನಂತರ ಪ್ರಮದ್ವರ ಕಂಕುಳಲ್ಲಿ ಕೊಡವನ್ನು ಹೊತ್ತುಕೊಂಡು ಬಳಕುತ್ತಾ ಹೊರ ಬಂದಳು. ಆ ಮೂವರಲ್ಲೊಬ್ಬ ಅವಳನ್ನು ತೀಕ್ಷವಾಗಿ ನೋಡುತ್ತಿದ್ದನು. ಅವನು ಏನು ಮಾತಾಡದೆ ಅವಳನ್ನೇ ಗಮನಿಸುತ್ತಿದ್ದನು. ಅವನೇ ರುರು. ಅವನ ನೋಟ ಅವಳ ಕೋಪಕ್ಕೆ ಕಾರಣವಾಗುವ ಮುಂಚೆಯೇ ಅವನ ಗೆಳೆಯ ರುರುವಿಗೆ ಎಚ್ಚರಿಸಿದನು. ಆಗ ಕನಸುಗಳ ನೆರಳಿನಿಂದ ಹೊರ ಬಂದ ರುರು ಬೊಗಸೆಯಲ್ಲಿ ನೀರನ್ನು ಕುಡಿದು ತನ್ನ ಬಾಯಾರಿಕೆಯನ್ನು ಈಡೇರಿಸಿಕೊಂಡನು. ಜೊತೆಗೆ ಪ್ರಮದ್ವರಾಳೊಂದಿಗೆ ಮಾತು ಬೆಳೆಸಲು "ನೀರು ತುಂಬಾ ಸಿಹಿಯಾಗಿದೆ" ಎಂದನು. ಆದರೆ ಆಕೆ "ನೀವು ಬಾಯಾರಿಕೆಯಿಂದ ಬಳಲಿ ಬಂದಿರುವಿರಿ. ಅದಕ್ಕೆ ನೀರು ಸಿಹಿಯೆನಿಸಿದೆ" ಎಂದೇಳಿ ಮಾತು ಮುಗಿಸಿದಳು. ಆಗ ಅವನ ಗೆಳೆಯರು "ನೀರು ಸಿಹಿಯಾಗಿದೆಯಾ ಅಥವಾ ನೀರು ಕೊಟ್ಟವರು ಸಿಹಿಯಾಗಿದ್ದಾರಾ? ಎಂದು ರಾಗವೆಳೆದು ರುರುವಿನ ಕಾಲೆಳೆದರು.
ರುರು ಪ್ರಮದ್ವರಾಳಿಗೆ ಧನ್ಯವಾದಗಳನ್ನು ಅರ್ಪಿಸಿ ತನ್ನ ಇಬ್ಬರು ಗೆಳೆಯರೊಂದಿಗೆ ಮನೆಯ ಕಡೆಗೆ ಹೆಜ್ಜೆ ಹಾಕಿದನು. ಅದರೆ ಮನಸ್ಸು ಕೇಳದೆ ಮತ್ತೆ ಮತ್ತೆ ಆಶ್ರಮದ ಕಡೆಗೆ ಹಿಂತಿರುಗಿ ನೋಡಿದನು. ಪ್ರಮದ್ವರೆ ಅವನನ್ನು ಮರೆಯಲ್ಲಿ ನಿಂತುಕೊಂಡು ಗಮನಿಸುತ್ತಿದ್ದಳು. ರುರು ಪ್ರಮದ್ವರೆಗೆ ಮನಸೋತಿದ್ದನು. ಆತ ಮೊದಲ ನೋಟದಲ್ಲೇ ಅವಳಿಗೆ ತನ್ನ ಮುದ್ದು ಮನಸ್ಸನ್ನು ಕೊಟ್ಟು ಬಿಟ್ಟಿದ್ದನು. ರುರು ಮನೆಗೆ ಬಂದ ನಂತರ ಬರೀ ಅವಳನ್ನೇ ನೆನಪಿಸಿಕೊಂಡು ಒಬ್ಬನೇ ನಗುತ್ತಿದ್ದನು. ಅದನ್ನು ಗಮನಿಸಿದ ಅವನ ಗೆಳೆಯರು ಅವನ ತಂದೆಗೆ ಪ್ರಮದ್ವರೆಯ ವಿಷಯ ತಿಳಿಸಿದರು. ರುರು ಸಹ ತನ್ನ ತಂದೆ ಪ್ರಮತಿಗೆ ಇರೋ ಪ್ರೀತಿಯ ವಿಷಯವನ್ನು ತಿಳಿಸಿದನು. ರುರುವಿನ ತಂದೆ ಪ್ರಮತಿಯು ಪ್ರಮದ್ವರೆಯ ತಂದೆಯಾದ ಸ್ಥೂಲಕೇಶರೊಂದಿಗೆ ಮಾತಾಡಿ ಅವರಿಬ್ಬರ ಮದುವೆಯನ್ನು ನಿಶ್ಚಯಿಸಿದರು. ತಮ್ಮ ಮಕ್ಕಳ ಮದುವೆ ನಿಶ್ಚಯವಾದ ಖುಷಿಯಲ್ಲಿ ಅವರಿಬ್ಬರು ಒಂದು ಚಿಕ್ಕ ಮನೋರಂಜನಾ ಸಮಾರಂಭವನ್ನು ಆಚರಿಸಿದರು. ಆದರೆ ಯುವ ಪ್ರೇಮಿಗಳು ಅವರ ಕಣ್ತಪ್ಪಿಸಿ ಮದುವೆಗೂ ಮುಂಚೆಯೇ ತಮ್ಮ ಕಣ್ಣಾಮುಚ್ಚಾಲೆ ಆಟಗಳನ್ನು ಪ್ರಾರಂಭಿಸಿದರು. ಪ್ರಮದ್ವರೆ ಮಾತಲ್ಲಿ ಮನೆ ಕಟ್ಟಿದರೆ, ರುರು ಮುತ್ತಲ್ಲಿ ಮಳೆ ಬರಿಸಿದನು.
ಮದುವೆ ನಿಶ್ಚಯವಾದ ಒಂದು ದಿನಕ್ಕಿಂತ ಮುಂಚೆ ಪ್ರಮದ್ವರಾ ತನ್ನ ಗೆಳತಿಯರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಳು. ಆಗವಳು ಹೆಜ್ಜೆ ತಪ್ಪಿ ತನ್ನ ಪಾಡಿಗೆ ಸಾಗಿದ್ದ ನಾಗರಹಾವಿನ ಮೇಲೆ ಕಾಲಿಟ್ಟಳು. ತನ್ನನ್ನು ಘಾಸಿಗೊಳಿಸಿದ್ದರಿಂದ ಗಾಬರಿಗೊಂಡ ಹಾವು ಅವಳನ್ನು ಕಚ್ಚಿ ಪೊದೆಯಲ್ಲಿ ಮಾಯವಾಯಿತು. ನೋವು ತಾಳಲಾರದೆ ಅವಳು ಜೋರಾಗಿ ಕಿರುಚುತ್ತಾ ಬಿರುಗಾಳಿಗೆ ಮುರಿದು ಬೀಳುವ ಮರದಂತೆ ನೆಲಕ್ಕುರುಳಿದಳು. ತಕ್ಷಣವೇ ಅವಳ ಗೆಳತಿಯರು ಅವಳನ್ನು ಆಶ್ರಮಕ್ಕೆ ಕರೆದುಕೊಂಡೋಗಿ ಅವಳಿಗೆ ಚಿಕಿತ್ಸೆ ಮಾಡಿದರು. ಅವಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಿದರು. ಆದರೆ ಪ್ರಮದ್ವರಾ ಬದುಕುಳಿಯಲು ಸಾಧ್ಯವಾಗಲಿಲ್ಲ. ಆಕೆ ಶಾಶ್ವತವಾಗಿ ಮಲಗಿಕೊಂಡಳು.
ನಾಳೆ ತನ್ನ ಮಡದಿಯಾಗಬೇಕಿದ್ದ ಪ್ರೇಯಸಿ ಪ್ರಮದ್ವರಾ ಸಾವಿನ ಬಾಯಿಗೆ ಆಹಾರವಾದಾಗ ರುರುವಿನ ಆಹಾಕಾರ ಮುಗಿಲು ಮುಟ್ಟಿತು. ಆತ ಜೋರಾಗಿ ಎದೆ ಬಡಿದುಕೊಂಡು ಅಳಲು ಪ್ರಾರಂಭಿಸಿದನು. ಅವಳ ಅಳು ಅಲ್ಲಿದ್ದವರ ಕರುಳನ್ನು ಕಿತ್ತಿತ್ತು. ಆತ ಕ್ರೂರ ವಿಧಿಯ ಮೇಲೆ ಕೀರುಚಾಡಲು ಪ್ರಾರಂಭಿಸಿದನು. ಬೇಕಾದರೆ ತನ್ನ ತಪೋಶಕ್ತಿ ಹಾಗೂ ಪ್ರಾಣವನ್ನು ತೆಗೆದುಕೊಂಡು ಪ್ರಮದ್ವರೆಯನ್ನು ಬದುಕಿಸುವಂತೆ ಆತ ಕೀರುಚತೊಡಗಿದನು. ಅವನ ಅಳಲನ್ನು ನೋಡಲಾಗದೆ "ರುರು ನಿನ್ನ ಪ್ರೀತಿಗೆ ಯಮಧರ್ಮರಾಜಾ ಪ್ರಸನ್ನನಾಗಿದ್ದಾನೆ. ನೀನು ನಿನ್ನ ಅರ್ಧಾಯುಷ್ಯವನ್ನು ಪ್ರಮದ್ವರೆಗೆ ಧಾರೆಯೆರೆದರೆ ಅವಳು ಬದುಕಬಹುದು..." ಎಂದು ಆಕಾಶವಾಣಿಯಾಯಿತು. ಆತ ಯೋಚಿಸದೆ ತನ್ನ ಅರ್ಧಾಯುಷ್ಯವನ್ನು ತ್ಯಾಗ ಮಾಡಿ ಪ್ರಮದ್ವರೆಯನ್ನು ಬದುಕಿಸಿಕೊಂಡನು. ಪ್ರೀತಿಸಿದವಳಿಗಾಗಿ ಅರ್ಧಾಯುಷ್ಯ ತ್ಯಾಗ ಮಾಡಿ ರುರು ಅವಳೊಂದಿಗೆ ಮಿಕ್ಕ ಜೀವನವನ್ನು ಸುಖವಾಗಿ ಜೀವಿಸಿ ಮಾದರಿ ಪ್ರೇಮಿಯಾದನು...
ಮನಸ್ಸು ಮಾಡಿದರೆ ರುರು ಮಡಿದ ಪ್ರಮದ್ವರೆಯನ್ನು ಮರೆತುಬಿಟ್ಟು ಮತ್ತೆ ಬೇರೆಯವಳನ್ನು ಪ್ರೀತಿಸಬಹುದಿತ್ತು. ಆತ ಅವಳನ್ನೇನು ಮದುವೆಯಾಗಿರಲಿಲ್ಲ. ಆದರೂ ಆತ ಪ್ರೀತಿಸಿದವಳಿಗಾಗಿ ತನ್ನ ಅರ್ಧಾಯುಷ್ಯವನ್ನು ತ್ಯಾಗ ಮಾಡಿದನು. ಆದರೆ ರುರುವಿನ ಕಥೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಎಲ್ಲರಿಗೂ ಸತಿ ಸಾವಿತ್ರಿ ಗೊತ್ತು. ಆದರೆ ರುರು ಗೊತ್ತಿಲ್ಲ. ರುರು ಹಾಗೂ ಪ್ರಮದ್ವರೆಯರ ಪ್ರೇಮಕಥೆ ಇತಿಹಾಸದ ಪುಟಗಳಲ್ಲಿ ಕಳೆದುಹೋದ ಒಂದು ಅಮರ ಪ್ರೇಮಕಥೆ. ಈ ಪ್ರೇಮಕಥೆಯನ್ನು ನಿಮ್ಮ ಪ್ರೀತಿಪಾತ್ರರೊಡನೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಮೆಂಟ್ ಮಾಡಿ...
16) ಹೀರ್-ರಾಂಜಾ ಪ್ರೇಮಕಥೆ - Love Story of Heer Ranja in Kannada
ಜಗತ್ತಿನ ದುರಂತ ಪ್ರೇಮಕಥೆಗಳಲ್ಲಿ ಹೀರ್-ರಾಂಜಾ ಪ್ರೇಮಕಥೆಯು ಒಂದಾಗಿದೆ. ಆದರೂ ಕಥೆ ಇಂಟರೆಸ್ಟಿಂಗ್ ಆಗಿದೆ ಓದಿ. ಪಾಕಿಸ್ತಾನ ಪಂಜಾಬನ ಚೆನಾಬ್ ನದಿ ಪಕ್ಕದಲ್ಲಿ ತಖ್ತ ಹಜಾರಾ ಎಂಬ ಸುಂದರವಾದ ಹಳ್ಳಿಯಿತ್ತು. ಆ ಹಳ್ಳಿಯಲ್ಲಿ ಧೀಡೊ ರಾಂಜಾ ಎಂಬ ಆಲಸಿ ಯುವಕನಿದ್ದನು. ಆತ ಜಾಟ್ ಬುಡಕಟ್ಟಿನ ರಾಂಜಾ ಜನಾಂಗಕ್ಕೆ ಸೇರಿದವನಾಗಿದ್ದನು. ಆತನ ಹೆಸರು ಧೀಡೊ ಆಗಿದ್ದರೂ ಎಲ್ಲರೂ ಅವನನ್ನು ಬರೀ ರಾಂಜಾ ಎಂದೇ ಕರೆಯುತ್ತಿದ್ದರು. ಅವನು ತನ್ನ ತಂದೆತಾಯಿಗಳಿಗೆ ನಾಲ್ಕನೆಯ ಹಾಗೂ ಕಿರಿಯ ಮಗನಾಗಿದ್ದನು. ಚಿಕ್ಕವನೆಂಬ ಕಾರಣಕ್ಕೆ ರಾಂಜಾ ತನ್ನ ತಂದೆಗೆ ಬಹಳಷ್ಟು ಅಚ್ಚುಮೆಚ್ಚಾಗಿದ್ದನು. ರಾಂಜಾ ತನ್ನ ತಂದೆಗೆ ಅತ್ಯಂತ ಮುದ್ದಿನ ಮಗನಾಗಿದ್ದರಿಂದ ಆತ ತನ್ನ ಉಳಿದ ಸೋದರರಂತೆ ಗದ್ದೆಯಲ್ಲಿ ದುಡಿಯುತ್ತಿರಲಿಲ್ಲ. ಆತ ಕೊಳಲು ನುಡಿಸುತ್ತಾ ಮನಬಂದಂತೆ ಅಲೆಯುತ್ತಾ ವಿಲಾಸಿ ಜೀವನ ನಡೆಸುತ್ತಿದ್ದನು. ಮನೆಯಲ್ಲಿನ ಬಡತನವನ್ನು ಹೋಗಲಾಡಿಸಲು ಮೈಮುರಿದು ದುಡಿಯುವ ಬದಲು ಕೊಳಲು ನುಡಿಸುತ್ತಾ ಊರತುಂಬ ಅಲೆಯುತ್ತಿದ್ದನು. ಆದರೆ ತನ್ನ ತಂದೆಯ ನಿಧನದ ನಂತರ ರಾಂಜಾನ ಜೀವನ ಸಂಕಷ್ಟಕ್ಕೆ ಸಿಲುಕಿತು. ಏನು ಕೆಲಸ ಮಾಡಲ್ಲ ಎಂಬ ಕಾರಣಕ್ಕೆ ಅವನ ಅತ್ತಿಗೆಯರು ಅವನಿಗೆ ಪ್ರತಿದಿನ ಊಟಕ್ಕೆ ಬಡಿಸುವಾಗ ನಿಂದಿಸುತ್ತಿದ್ದರು. ಕೆಲವು ಸಲ ಊಟ ನೀಡಲು ನಿರಾಕರಿಸುತ್ತಿದ್ದರು. ಅಲ್ಲದೆ ಅವನ ಸೋದರರು ಸಹ ಅವನೊಂದಿಗೆ ಜಗಳವಾಡಲು ಪ್ರಾರಂಭಿಸಿದರು. ಅವರ ಕಾಟಕ್ಕೆ ಬೇಸತ್ತು ರಾಂಜಾ ಮನೆ ಬಿಟ್ಟು ಓಡಿ ಹೋದನು. ಕೊಳಲು ನುಡಿಸುತ್ತಾ ದಾರಿ ಕಂಡ ಕಡೆಗೆ ಪ್ರಯಾಣ ಬೆಳೆಸಿದನು.
ರಾಂಜಾ ಜನ ಕೊಟ್ಟ ಭಿಕ್ಷೆಯನ್ನು ತಿಂದು ಕೊಳಲು ನುಡಿಸುತ್ತಾ, ಊರುರು ಅಲೆಯುತ್ತಾ ಪಾಕಿಸ್ತಾನ ಪಂಜಾಬನ ಜಾಂಗ್ ಎಂಬ ಹಳ್ಳಿಗೆ ಬಂದನು. ಅದು ಹೀರಳ ಊರಾಗಿತ್ತು. ಆ ಅಪರಿಚಿತ ಊರಲ್ಲಿ ರಾಂಜಾಗೆ ಯಾರು ಕರುಣೆ ತೋರಿಸಲಿಲ್ಲ. ಅದಕ್ಕಾಗಿ ಆತ ರಾತ್ರಿ ಮಸೀದಿಯಲ್ಲಿ ಆಶ್ರಯ ಪಡೆದನು ಮತ್ತು ಕೊಳಲನ್ನು ನುಡಿಸಲು ಪ್ರಾರಂಭಿಸಿದನು. ಆಗ ಕೊಳಲು ನಾದ ಇಸ್ಲಾಂಗೆ ಸಂಬಂಧಪಟ್ಟಿದ್ದಲ್ಲ, ಅದನ್ನು ನುಡಿಸದಿರು ಎಂದು ಮಸೀದಿಯ ಮೌಲ್ವಿ ಹೇಳಿದನು. ಆಗ ರಾಂಜಾ ಅವನಿಗೆ "ನೀವು ಮಾಡುತ್ತಿರುವ ಅಕ್ರಮಗಳೆಲ್ಲವು ನನಗೆ ಗೊತ್ತು..." ಎಂದೇಳಿ ಆ ಮೌಲ್ವಿಯ ಬಾಯ್ಮುಚ್ಚಿಸಿ ಕೊಳಲು ನುಡಿಸಿದನು. ಮರುದಿನ ಮಸೀದಿಯನ್ನು ಬಿಟ್ಟು ಊರೊಳಗೆ ಹೋಗಿ ಕೊಳಲು ನುಡಿಸಲು ಪ್ರಾರಂಭಿಸಿದನು. ಅವನ ಕೊಳಲ ನಾದವನ್ನು ಮೆಚ್ಚಿ ಹೀರಳ ತಂದೆ ಅವನಿಗೆ ತಮ್ಮ ದನಗಳನ್ನು ಮೇಯಿಸುವ ಕೆಲಸ ಕೊಟ್ಟರು. ಹೀರ್ ಸಿಯಾಲ ಬುಡಕಟ್ಟು ಜನಾಂಗದ ಶ್ರೀಮಂತ ಕುಟುಂಬದ ಮನೆ ಮಗಳಾಗಿದ್ದಳು. ಅವಳ ಹೆಸರೇ ಹೇಳುವಂತೆ ಅವಳು ವಜ್ರದಂತೆ ಹೊಳೆಯುವ ಮೈಬಣ್ಣವನ್ನು ಹಾಗೂ ಆಯಸ್ಕಾಂತದಂತೆ ಸೆಳೆಯುವ ಸೌಂದರ್ಯವನ್ನು ಹೊಂದಿದ್ದಳು. ಅವಳ ಮತ್ತು ರಾಂಜಾನ ಮಧ್ಯೆ ಯಾವುದೇ ಸಾಮ್ಯತೆಯಿರಲಿಲ್ಲ. ಆದರೂ ಸಹ ಅವಳು ರಾಂಜಾನ ಪ್ರೇಮದಲ್ಲಿ ಸಿಲುಕಿದಳು. ಅವನ ಕೊಳಲ ನಾದಕ್ಕೆ, ವಿಚಿತ್ರ ಮಾತುಗಳಿಗೆ ಹಾಗೂ ಉದ್ದನೆಯ ಗುಂಗುರು ಕೂದಲುಗಳಿಗೆ ಮನಸೋತು ಹೀರ ರಾಂಜಾನನ್ನು ಮನಸಾರೆ ಪ್ರೀತಿಸಲು ಪ್ರಾರಂಭಿಸಿದಳು. ರಾಂಜಾ ದನ ಮೇಯಿಸುತ್ತಾ ಯಾವುದೋ ಒಂದು ಗದ್ದೆಯಲ್ಲಿ ಕೊಳಲು ನುಡಿಸುತ್ತಾ ಕೂಡುತ್ತಿದ್ದನು. ಹೀರ್ ಎಲ್ಲರ ಕಣ್ತಪ್ಪಿಸಿ ಅವನನ್ನು ಕದ್ದುಮುಚ್ಚಿ ಭೇಟಿಯಾಗುತ್ತಿದ್ದಳು.
ಹೀರ್ ಹಾಗೂ ರಾಂಜಾರ ಪ್ರೇಮದ ಕಣ್ಣಾಮುಚ್ಚಾಲೆ ಆಟಗಳು, ಗುಪ್ತ ಭೇಟಿಗಳು ಕೆಲವು ವರ್ಷಗಳ ಕಾಲ ನಡೆದವು. ಆದರೆ ಒಂದಿನ ಹೀರ್ ಹಾಗೂ ರಾಂಜಾ ಜೊತೆಯಲ್ಲಿರುವಾಗ ಅವಳ ಚಿಕ್ಕಪ್ಪ ಕೈಡೋ ಕೈಗೆ ಸಿಕ್ಕಿಬಿದ್ದರು. ಕೈಡೋಗೆ ಹೀರಳ ಮೇಲೆ ತುಂಬಾ ಹೊಟ್ಟೆ ಕಿಚ್ಚಿತ್ತು. ಅದಕ್ಕಾಗಿ ಆತ ಅವಳ ಪ್ರೇಮಕಥೆಯನ್ನು ಅವಳ ತಂದೆತಾಯಿಗಳಾದ ಚುಚಕ್ ಮತ್ತು ಮಲ್ಕಿಗೆ ಹೇಳಿ ದೊಡ್ಡ ರಾದ್ಧಾಂತವನ್ನು ಸೃಷ್ಟಿಸಿದನು. ಹೀರಳ ತಂದೆ ರಾಂಜಾನನ್ನು ಹೊಡೆದು ಕೆಲಸದಿಂದ ತೆಗೆದಾಕಿದರು ಮತ್ತು ಹೀರಳನ್ನು ಅವನಿಂದ ದೂರ ಮಾಡಿ ಅವನೊಂದಿಗೆ ಸೇರದಂತೆ ಗೃಹಬಂಧನದಲ್ಲಿಟ್ಟರು. ಹೀರಳ ಮನಸ್ಸು ರಾಂಜಾನನ್ನು ನೋಡಲು, ಅವನೊಂದಿಗೆ ಸೇರಲು ಹಾತೊರೆಯುತ್ತಿತ್ತು. ಆದರೆ ಅವಳ ತಂದೆತಾಯಿಗಳು, ಅವಳ ಚಿಕ್ಕಪ್ಪ ಕೈಡೋ ಹಾಗೂ ಊರಿನ ಮೌಲ್ವಿ ಅವಳನ್ನು ಬೇರೆಯವನೊಂದಿಗೆ ಮದುವೆ ಮಾಡಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದರು. ಸೈದಾ ಖೇರಾ ಎಂಬುವವನ್ನು ಮದುವೆಯಾಗುವಂತೆ ಅವಳನ್ನು ಒತ್ತಾಯಿಸಿದರು. ಆದರೆ ಹೀರ್ ಅವನನ್ನು ಮದುವೆಯಾಗಲು ನಿರಾಕರಿಸಿದಳು. ಆಗ ಎಲ್ಲರೂ ಸೇರಿ ಅವಳನ್ನು ಹೆದರಿಸಿ ಬೆದರಿಸಿ ಸೈದಾ ಖೇರಾನೊಂದಿಗೆ ಅವಳ ಮದುವೆ ಮಾಡಿದರು. ಸೈದಾ ಖೇರನನ್ನು ಮದುವೆಯಾಗಿ ಎದೆತುಂಬ ನೋವು ತುಂಬಿಕೊಂಡು ಹೀರ್ ಬೇರೆ ಊರಿಗೆ ಹೋದಳು.
ಹೀರ್ ಸೈದಾ ಖೇರಾನನ್ನು ಮದುವೆಯಾಗಿ ಯಾವ ಊರಿಗೆ ಹೋದಳೆಂಬುದು ರಾಂಜಾನಿಗೆ ಗೊತ್ತಾಗಲಿಲ್ಲ. ಆತ ಅವಳಿಲ್ಲದ ಜೀವನವನ್ನು ಕಲ್ಪಿಸಿಕೊಂಡು ಅರೆಹುಚ್ಚನಾದನು. ಮುರಿದ ಮನಸ್ಸಿನಿಂದ ಕೊಳಲನ್ನು ನುಡಿಸುತ್ತಾ ಊರುರು ಅಲೆಯುಲು ಪ್ರಾರಂಭಿಸಿದನು. ಆದರೆ ಅವನಿಗೆ ಯಾವ ಊರಲ್ಲೂ ಹೀರಳ ಸುಳಿವು ಸಿಗಲಿಲ್ಲ. ಅದಕ್ಕಾಗಿ ಆತ ಊರು ಬಿಟ್ಟು ಕಾಡು ಸೇರಿದನು. ಅಂದರೆ ಪರ್ವತ ಗುಡ್ಡಗಳಲ್ಲಿ ಅಲೆಯಲು ಪ್ರಾರಂಭಿಸಿದನು. ಹೀಗೆ ಅಲೆಯುತ್ತಿರುವಾಗ ಒಂದಿನ ಅವನಿಗೆ ಟಿಲ್ಲಾ ಜೋಗಿಯಾನನಲ್ಲಿ (ತಪಸ್ಸಿಗಳ ಬೆಟ್ಟದಲ್ಲಿ) ಮಹಾನ್ ಸಂನ್ಯಾಸಿ ಜೋಗಿ ಗೋರಖನಾಥರು ಭೇಟಿಯಾದರು. ಆತ ಅವರ ತತ್ವಾದರ್ಶಗಳಿಗೆ ಆಕರ್ಷಿತನಾಗಿ ಅವರ ಕಾನ್ಫಟಾ ಪಂಥವನ್ನು ಸೇರಿಕೊಂಡನು. ಅವರಿಂದ ಸಂನ್ಯಾಸ ದೀಕ್ಷೆಯನ್ನು ಪಡೆದುಕೊಂಡು ತಾನು ಜೋಗಿಯಾದನು.
ರಾಂಜಾ ಜೋಗಿಯಾದ ನಂತರ ಕಾನ್ಫಟಾ ಪಂಥದ ಪ್ರಸಾರ ಮಾಡುತ್ತಾ ಊರುರು ಅಲೆದು ಭಿಕ್ಷೆ ಬೇಡಿಕೊಂಡು ಬದುಕಲು ಪ್ರಾರಂಭಿಸಿದನು. ಹೀಗೇ ಸಾಗುತ್ತಿರಬೇಕಾದರೆ ಆತ ಒಂದಿನ ಹೀರಳ ಊರಿಗೆ ಬರುತ್ತಾನೆ. ಅಲ್ಲಿ ಆತ ಹೀರಳನ್ನು ಭೇಟಿಯಾಗುತ್ತಾನೆ. ಮತ್ತೆ ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಗುತ್ತದೆ. ರಾಂಜಾ ಒಂದಿನ ಭಿಕ್ಷೆ ಬೇಡುವುದಕ್ಕಾಗಿ ಒಂದು ಮನೆಯ ಬಾಗಿಲನ್ನು ತಟ್ಟುತ್ತಾನೆ. ಆಗ ಭಿಕ್ಷೆ ನೀಡಲು ಬಂದ ಯುವತಿಯೊಬ್ಬಳು ರಾಂಜಾನನ್ನು ಗುರ್ತಿಸುತ್ತಾಳೆ. ಆ ಯುವತಿ ಹೀರಳ ನಾದಿನಿಯಾಗಿರುತ್ತಾಳೆ. ಅಂದರೆ ಅವಳ ಗಂಡ ಸೈದಾ ಖೇರಾನ ತಂಗಿ ಸಹತಿಯಾಗಿರುತ್ತಾಳೆ. ಅವಳಿಗೆ ಹೀರಳ ಪ್ರೇಮಕಥೆ ಗೊತ್ತಿರುತ್ತದೆ. ಆಕೆ ಸೈದಾನ ಬಲವಂತದ ಮದುವೆಗೆ ವಿರುದ್ಧವಾಗಿರುತ್ತಾಳೆ. ಹೀರ ಬೇರೆಯವನನ್ನು ಇಷ್ಟಪಡುತ್ತಿದ್ದಾಳೆ ಎಂಬುದು ಗೊತ್ತಾದ ನಂತರವೂ ಅವಳನ್ನು ಮದುವೆಯಾದ ತನ್ನ ಅಣ್ಣನ ಮೇಲೆ ಅವಳಿಗೆ ಬೇಜಾರಿರುತ್ತದೆ. ಅದಕ್ಕಾಗಿ ಸಹತಿ ಹೀರ್ ಹಾಗೂ ರಾಂಜಾರಿಗೆ ಮನೆ ಬಿಟ್ಟು ದೂರ ಓಡಿ ಹೋಗಲು ಸಹಾಯ ಮಾಡುತ್ತಾಳೆ. ಹೀರ್ ಹಾಗೂ ರಾಂಜಾ ಅಲ್ಲಿಂದ ಓಡಿ ಹೋಗುತ್ತಾರೆ.
ಗಂಡನ ಮನೆಯಿಂದ ಹೀರ್ ರಾಂಜಾನೊಂದಿಗೆ ಸುರಕ್ಷಿತವಾಗಿ ಓಡಿ ಹೋಗುತ್ತಾಳೆ. ಆದರೆ ಅವರಿಬ್ಬರೂ ರಾತ್ರಿ ಆ ಊರಿನ ರಾಜನ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ರಾಜ ಅವರಿಬ್ಬರನ್ನು ಬಹಳಷ್ಟು ವಿಚಾರಣೆಗೆ ಒಳಪಡಿಸುತ್ತಾನೆ. ನೀವು ನಿಜವಾಗಿಯೂ ಪ್ರೇಮಿಗಳೆಂದು ಹೇಗೆ ನಂಬುವುದು? ಎಂದು ಪ್ರಶ್ನಿಸುತ್ತಾನೆ. ಅವರಿಬ್ಬರ ಬಳಿ ತಾವು ಪ್ರೇಮಿಗಳು ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷಾಧಾರಗಳಿರಲಿಲ್ಲ. ಆಗ ಹೀರ್ ತಮ್ಮ ಪ್ರೇಮದ ಸಾಕ್ಷಿಯಾಗಿ ಉರಿಯುತ್ತಿರುವ ಬೆಂಕಿಯ ಮೇಲೆ ಕೈಯಿಡುತ್ತಾಳೆ. ರಾಜನಿಗೆ ಅವಳ ಮಾತಿನ ಮೇಲೆ ನಂಬಿಕೆ ಬರುತ್ತದೆ. ಆತ ಅವರಿಬ್ಬರನ್ನು ಬಿಟ್ಟು ಬಿಡುತ್ತಾನೆ.
ರಾಜನಿಂದ ಬಿಡುಗಡೆಯಾದ ನಂತರ ಹೀರ್ ರಾಂಜಾನೊಂದಿಗೆ ತನ್ನ ತವರು ಮನೆಗೆ ಹೋಗುತ್ತಾಳೆ. ತಾನು ಗಂಡನ ಮನೆಯಿಂದ ಓಡಿ ಬಂದಿರುವ ವಿಷಯ ತಿಳಿಸಿ ನಾನು ರಾಂಜಾನೊಂದಿಗೆ ಮದುವೆಯಾಗುವೆ ಎಂದು ಹಠ ಹಿಡಿಯುತ್ತಾಳೆ. ಅವಳ ಮನೆಯವರಿಗೆ ಸದ್ಯಕ್ಕೆ ಅವಳ ಖುಷಿಗಿಂತ ಅವರ ಮನೆ ಮರ್ಯಾದೆ ಮುಖ್ಯವಾಗಿರುತ್ತದೆ. ಅದಕ್ಕಾಗಿ ಅವರು ಹೀರಳಿಗೆ "ನಾವು ನಿಮ್ಮಿಬ್ಬರ ಮದುವೆಗೆ ಒಪ್ಪಿದ್ದೇವೆ" ಎಂದೇಳಿ ಅವಳಿಗೆ ನಂಬಿಕೆ ದ್ರೋಹ ಮಾಡುತ್ತಾರೆ. ಅವಳನ್ನು ಹಾಗೂ ರಾಂಜಾನನ್ನು ರಹಸ್ಯವಾಗಿ ಕೊಲ್ಲಲು ಸಂಚು ರೂಪಿಸಲು ಪ್ರಾರಂಭಿಸುತ್ತಾರೆ. ಹೀರಳ ಚಿಕ್ಕಪ್ಪ ಕೈಡೋನಿಗೆ ಅವಳ ಮರುಮದುವೆ ಇಷ್ಟವಿರುವುದಿಲ್ಲ. ಆತ ಅವಳ ಮನೆಯಲ್ಲಿರುವ ಹಿತಶತ್ರುವಾಗಿರುತ್ತಾನೆ. ಯಾವಾಗಲೂ ಶಕುನಿಯಂತೆ ಸಲಹೆಗಳನ್ನು ಕೊಟ್ಟು ಬೆನ್ನಿಗೆ ಚೂರಿ ಹಾಕುತ್ತಿರುತ್ತಾನೆ. ಈಗಾತ ಹೀರಳ ರಹಸ್ಯ ಕೊಲೆಗೆ ಯೋಜನೆಯನ್ನು ತಯಾರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ಹೀರ ಹಾಗೂ ರಾಂಜಾರ ಮದುವೆಯ ದಿನವೇ ಅವರಿಬ್ಬರನ್ನು ಕೊಲ್ಲುವುದು ಕೈಡೋವಿನ ಯೋಜನೆಯಾಗಿರುತ್ತದೆ.
ಮದುವೆಯ ದಿನ ಹೀರ್ ತನ್ನ ಕೋಣೆಯಲ್ಲಿ ಅಲಂಕಾರ ಮಾಡಿಕೊಳ್ಳುತ್ತಿರುತ್ತಾಳೆ. ಆಗ ಕೈಡೋ ಅವಳಿಷ್ಟದ ಲಡ್ಡುವಿನಲ್ಲಿ ವಿಷ ಬೆರೆಸಿ ಅವಳಿಗೆ ಕಳುಹಿಸಿ ಕೊಡುತ್ತಾನೆ. ಈ ಸಂಚು ರಾಂಜಾನಿಗೆ ಹೇಗೋ ಗೊತ್ತಾಗುತ್ತದೆ. ಆತ ಓಡೋಡಿ ಬರುವಷ್ಟರಲ್ಲಿ ಹೀರ್ ಆ ವಿಷಯುಕ್ತ ಲಡ್ಡುಗಳನ್ನು ಸೇವಿಸಿ ರಕ್ತಕಾರಿಕೊಂಡು ಪ್ರಾಣ ಬಿಡುತ್ತಾಳೆ. ತನ್ನ ಪ್ರೇಯಸಿ ತನ್ನ ಕಣ್ಮುಂದೆಯೆ ಸಾಯುವುದನ್ನು ನೋಡಿ ರಾಂಜಾ ಸಹ ಆ ವಿಷಯುಕ್ತ ಲಡ್ಡುಗಳನ್ನು ಸೇವಿಸಿ ಪ್ರಾಣಬಿಡುತ್ತಾನೆ. ಹೀರಳೊಂದಿಗೆ ಒಂದಾಗಿ ಸಂತೋಷವಾಗಿ ಬಾಳಬೇಕೆಂದಿದ್ದ ರಾಂಜಾ ಸಾವಿನಲ್ಲಿ ಅವಳೊಂದಿಗೆ ಸೇರಿಕೊಳ್ಳುತ್ತಾನೆ. ಈ ರೀತಿ ಹೀರ್ ರಾಂಜಾರ ಪ್ರೇಮಕಥೆ ದು:ಖಾಂತ್ಯವಾಗುತ್ತದೆ. ನಂತರ ಅವರಿಬ್ಬರನ್ನು ಹೀರಳ ಹುಟ್ಟೂರಾದ ಜಾಂಗನಲ್ಲಿ ಸಮಾಧಿ ಮಾಡಲಾಗುತ್ತದೆ. ಈಗಲೂ ಅಲ್ಲಿ ಹೃದಯ ಮುರಿದ ಪ್ರೇಮಿಗಳು ಭೇಟಿ ಕೊಡುತ್ತಾರೆ. ನೀವು ಇದೇ ತರಹದ ಆಸಕ್ತಿದಾಯಕ ಪ್ರೇಮಕಥೆಗಳನ್ನು ಓದಲು www.Skkannada.comಗೆ ಭೇಟಿ ಕೊಡಿ. ಈ ಪ್ರೇಮಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ಮತ್ತು ಈ ಕಥೆಯನ್ನು ಶೇರ್ ಮಾಡಿ....
17) ದೇವಯಾನಿಯ ಪ್ರೇಮಕಥೆಗಳು : Love Stories of Devayani in Kannada
ದೇವರಿಗೂ ಹಾಗೂ ದಾನವರಿಗೂ ನಿರಂತರವಾಗಿ ಪದೇಪದೇ ಯುದ್ಧವಾಗುತ್ತಲೇ ಇತ್ತು. ದೇವರುಗಳು ರಾಕ್ಷಸರನ್ನು ಸಂಹರಿಸಿದರೂ ರಾಕ್ಷಸರ ಸಂಖ್ಯೆ ಹೆಚ್ಚಾಗುತ್ತಿತ್ತು. ಇದಕ್ಕೆ ರಾಕ್ಷಸರ ಗುರು ಶುಕ್ರಾಚಾರರಿಗೆ ಗೊತ್ತಿರುವ ಮೃತ್ಯು ಸಂಜೀವಿನಿ ವಿದ್ಯೆ ಕಾರಣವಾಗಿತ್ತು. ಈ ವಿದ್ಯೆಯಿಂದ ಶುಕ್ರಾಚಾರ್ಯರು ದೇವತೆಗಳಿಂದ ಸತ್ತ ರಾಕ್ಷಸರನ್ನು ಪುನ: ಬದುಕಿಸುತ್ತಿದ್ದರು. ಸತ್ತರೂ ಮತ್ತೆ ಹುಟ್ಟಿ ಬರುವ ರಾಕ್ಷಸರು ದೇವತೆಗಳಿಗೆ ದೊಡ್ಡ ತಲೆ ನೋವಾದರು. ಏಕೆಂದರೆ ಮೃತ್ಯು ಸಂಜೀವಿನಿ ವಿದ್ಯೆ ಇಡೀ ಜಗತ್ತಿನಲ್ಲಿ ಶುಕ್ರಾಚಾರ್ಯರಿಗಷ್ಟೇ ಗೊತ್ತಿತ್ತು. ದೇವತೆಗಳ ಗುರುವಾದ ಬ್ರಹಸ್ಪತಿಗೂ ಈ ಮೃತ್ಯು ಸಂಜೀವಿನಿ ವಿದ್ಯೆಯ ಜ್ಞಾನವಿರಲಿಲ್ಲ. ದೇವತೆಗಳ ಉಳಿವಿಗಾಗಿ ಮೃತ್ಯು ಸಂಜೀವಿನಿ ವಿದ್ಯೆಯನ್ನು ಹೇಗಾದರೂ ಮಾಡಿ ಕಲಿಯಲೇಬೇಕಾಗಿತ್ತು. ಅದಕ್ಕಾಗಿ ಬ್ರಹಸ್ಪತಿ ತಮ್ಮ ಮಗನಾದ ಕಚನನ್ನು ಶುಕ್ರಾಚಾರ್ಯರ ಬಳಿ ಉಪಾಯದಿಂದ ಕಳುಹಿಸಿದರು. ರಾಕ್ಷಸರ ಕಣ್ತಪ್ಪಿಸಿ ಶುಕ್ರಾಚಾರ್ಯರಿಂದ ಮೃತ್ಯು ಸಂಜೀವಿನಿ ವಿದ್ಯೆಯನ್ನು ಕಲಿಯುವುದು ಸುಲಭದ ಮಾತಾಗಿರಲಿಲ್ಲ. ಶುಕ್ರಾಚಾರ್ಯರ ಮಗಳಾದ ದೇವಯಾನಿಯ ಮನಗೆದ್ದರೇ ಮೃತ್ಯು ಸಂಜೀವಿನಿ ವಿದ್ಯೆಯನ್ನು ಯಶಸ್ವಿಯಾಗಿ ಕಲಿತು ಬರಬಹುದು ಎಂಬ ಕಿವಿಮಾತನ್ನು ಕಚನಿಗೆ ಹೇಳಿ ಬ್ರಹಸ್ಪತಿ ಅವನನ್ನು ಬೀಳ್ಕೊಟ್ಟರು.
ತನ್ನ ತಂದೆಯ ಆಜ್ಞೆಯಂತೆ ದೇವತೆಗಳ ಉಳಿವಿಗಾಗಿ ಮೃತ್ಯು ಸಂಜೀವಿನಿ ವಿದ್ಯೆಯನ್ನು ಕಲಿಯಲು ಕಚ ಶುಕ್ರಾಚಾರ್ಯರ ಬಳಿ ಬಂದನು. ಈ ಸಮಯದಲ್ಲಿ ಶುಕ್ರಾಚಾರ್ಯರು ರಾಕ್ಷಸರ ರಾಜ ಪರ್ವರಾಜನ ಸಾಮ್ರಾಜ್ಯದಲ್ಲಿದ್ದರು. ಕಚ ಶುಕ್ರಾಚಾರ್ಯರ ಮನವೊಲಿಸಿ ಅವರ ಶಿಷ್ಯನಾದನು. ಅವನ ಕಲಿಕೆ ಕುಶಾಲವಾಗಿ ಸಾಗಿತ್ತು. ಅವನು ಸುಂದರ, ಸುಶೀಲ, ಸಜ್ಜನನಾಗಿರುವುದರಿಂದ ದೇವಯಾನಿಗೆ ಅವನು ಬಹಳ ಇಷ್ಟವಾದನು. ದೇವಯಾನಿ ರಾಕ್ಷಸರ ಗುರುವಾದ ಶುಕ್ರಾಚಾರ್ಯರ ಮಗಳು. ಒಬ್ಬಳೇ ಮಗಳೆಂಬ ಕಾರಣಕ್ಕೆ ಶುಕ್ರಾಚಾರ್ಯರು ಅವಳನ್ನು ಬಹಳ ಮುದ್ದಿನಿಂದ ಬೆಳೆಸಿದ್ದರು. ಹೀಗಾಗಿ ದೇವಯಾನಿ ಹುಟ್ಟಿನಿಂದಲೇ ಹಠವಾದಿವಾಗಿದ್ದಳು. ಅವಳು ತನ್ನ ಹಠದಿಂದಲೇ ಬೇಡದ ಯಡವಟ್ಟುಗಳನ್ನು ಮಾಡಿಕೊಂಡು ಕೊರಗುತ್ತಿದ್ದಳು. ಅವಳಿಗೆ ತನ್ನ ಸೌಂದರ್ಯದ ಬಗ್ಗೆ ಗರ್ವವೂ ಇತ್ತು. ಅಂಥವಳು ಕಚನ ಮೇಲೆ ಮೋಹಿತಳಾದಳು. ಅವನನ್ನು ಗುಟ್ಟಾಗಿ ಪ್ರೀತಿಸಲು ಪ್ರಾರಂಭಿಸಿದಳು. ಆದರೆ ಆಕೆ ಅವಳ ಪ್ರೀತಿಯನ್ನು ತಪ್ಪಿಯೂ ಯಾವತ್ತೂ ಕಚನಿಗೆ ಹೇಳುವ ಸಾಹಸ ಮಾಡಲಿಲ್ಲ. ಕಚ ತನ್ನ ಕಾರ್ಯ ಸಾಧನೆಗಾಗಿ ದೇವಯಾನಿಯೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದನು. ಹೀಗಾಗಿ ಆಕೆ ಕಚನೂ ಸಹ ತನ್ನನ್ನು ಪ್ರೀತಿಸುತ್ತಿದ್ದಾನೆಂದು ತಪ್ಪಾಗಿ ಭಾವಿಸಿದಳು. ಆಕೆ ಕಚನ ಕನಸುಗಳಲ್ಲಿ ಕಳೆದೋದರೆ ಆತ ತನ್ನ ಕಲಿಕೆಯಲ್ಲಿ ಮಗ್ನನಾಗಿರುದ್ದನು.
ದೇವತೆಗಳ ಗುರು ಬ್ರಹಸ್ಪತಿಯ ಮಗನಾದ ಕಚನು ಶುಕ್ರಾಚಾರ್ಯರಿಂದ ಮೃತ್ಯು ಸಂಜೀವಿನಿ ವಿದ್ಯೆಯನ್ನು ಕಲಿಯುತ್ತಿದ್ದಾನೆ ಎಂಬುದು ರಾಕ್ಷಸರಿಗೆ ಗೊತ್ತಾಯಿತು. ಕೋಪಗೊಂಡ ರಾಕ್ಷಸರು ಕಚನನ್ನು ಕೊಲ್ಲಲು ಮುಂದಾದರು. ಆದರೆ ಶುಕ್ರಾಚಾರ್ಯರ ಕೋಪಕ್ಕೆ ಹೆದರಿ ಹಿಂದೆ ಸರಿದರು. ಕೆಲ ದಿನಗಳ ನಂತರ ರಾಕ್ಷಸರು ರಹಸ್ಯವಾಗಿ ಕಚನನ್ನು ಕೊಂದರು. ತನ್ನ ಗುಪ್ತ ಪ್ರಿಯಕರ ಕಚನ ಸಾವನ್ನು ದೇವಯಾನಿಯಿಂದ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಆಕೆ ತನ್ನ ತಂದೆ ಶುಕ್ರಾಚಾರ್ಯರನ್ನು ಕಾಡಿಬೇಡಿ ಮೃತ್ಯು ಸಂಜೀವಿನಿ ವಿದ್ಯೆಯನ್ನು ಪ್ರಯೋಗಿಸಿ ಕಚನನ್ನು ಬದುಕಿಸಿದಳು. ಆದರೆ ಕೆಲ ದಿನಗಳು ಕಳೆದ ನಂತರ ಮತ್ತೆ ರಾಕ್ಷಸರು ಕಚನನ್ನು ಕೊಂದರು. ಮುದ್ದಿನ ಮಗಳ ಮಮಕಾರದಿಂದ ಶುಕ್ರಾಚಾರ್ಯರು ಮೃತ್ಯು ಸಂಜೀವಿನಿ ವಿದ್ಯೆಯಿಂದ ಮತ್ತೆ ಕಚನನ್ನು ಬದುಕಿಸಿದರು. ತಮ್ಮ ಶತ್ರು ಪದೇಪದೇ ಬದುಕಿ ಬರುತ್ತಿರುವುದನ್ನು ಕಂಡು ರಾಕ್ಷಸರು ಕೆರಳಿ ಕೆಂಡಾಮಂಡಲವಾದರು. ಅದೇ ಕೋಪದಲ್ಲಿ ಕಚನನ್ನು ಶಾಶ್ವತವಾಗಿ ಕೊಲ್ಲಲು ಯೋಜನೆ ರೂಪಿಸಿದರು. ಮೂರನೇ ಬಾರಿ ರಾಕ್ಷಸರು ಕಚನನ್ನು ಕೊಂದರು. ನಂತರ ಅವನ ಶವವನ್ನು ಸುಟ್ಟರು. ಅವನ ಅಂತ್ಯಕ್ರಿಯೆಯ ಬೂದಿಯನ್ನು ಮದ್ಯದಲ್ಲಿ ಬೆರೆಸಿ ತಮ್ಮ ಗುರು ಶುಕ್ರಾಚಾರ್ಯರಿಗೆ ಕೊಟ್ಟರು. ಇದರ ಅರಿವಿಲ್ಲದ ಶುಕ್ರಾಚಾರ್ಯರು ಕಚನ ದಹನವಿರುವ ಮದ್ಯವನ್ನು ಕುಡಿದರು. ತಮ್ಮ ಶತ್ರು ಶಾಶ್ವತವಾಗಿ ಸತ್ತನೆಂಬ ಖುಷಿಯಲ್ಲಿ ರಾಕ್ಷಸರೆಲ್ಲ ಸಂಭ್ರಮಾಚರಿಸಲು ತೆರಳಿದರು.
ತಮ್ಮ ಶತ್ರು ಕಚ ಶಾಶ್ವತವಾಗಿ ಸತ್ತ ಖುಷಿಯಲ್ಲಿ ರಾಕ್ಷಸರೆಲ್ಲ ಕುಡಿದು ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ದೇವಯಾನಿ ತನ್ನ ಪ್ರಿಯಕರ ಕಾಣದಿರುವುದಕ್ಕಾಗಿ ಚಿಂಚಿತಳಾದಳು. ಆಕೆ ಎಲ್ಲೆಡೆಗೆ ಕಚನನ್ನು ಹುಡುಕಿ ನಿರಾಶಳಾದಳು. ಕೊನೆಗೆ ಆಕೆ ತನ್ನ ತಂದೆಯ ಬಳಿ ಹೋಗಿ ಕಚನನ್ನು ಹುಡುಕಿ ಕೊಡುವಂತೆ ಬೇಡಿಕೆಯಿಟ್ಟಳು. ಶುಕ್ರಾಚಾರ್ಯರು ತಮ್ಮ ತಪೋಬಲದಿಂದ ಕಚನನ್ನು ಹುಡುಕಿದಾಗ ಆತ ಸತ್ತು ತಮ್ಮ ಹೊಟ್ಟೆ ಸೇರಿರುವ ವಿಷಯ ಗೊತ್ತಾಯಿತು. ಕಚನ ಭಯಾನಕ ಸಾವಿನ ಸುದ್ದಿ ಕೇಳಿ ದೇವಯಾನಿ ಬೆಚ್ಚಿ ಬಿದ್ದಳು. ಹೇಗಾದರೂ ಸರಿ ಕಚನನ್ನು ಬದುಕಿಸುವಂತೆ ದೇವಯಾನಿ ಹಠವಿಡಿದು ಕುಂತಳು. ತಮ್ಮ ಮಗಳ ಹಠದ ಬಗ್ಗೆ ಚೆನ್ನಾಗಿ ಅರಿತಿದ್ದ ಶುಕ್ರಾಚಾರ್ಯರು ಬೇರೆ ವಿಧಿಯಿಲ್ಲದೆ ಕಚನ ಆತ್ಮಕ್ಕೆ ಮೃತ್ಯು ಸಂಜೀವಿನಿ ವಿದ್ಯೆಯನ್ನು ಬೋಧಿಸಿದರು. ಕಚ ಶುಕ್ರಾಚಾರ್ಯರ ಹೊಟ್ಟೆಯನ್ನು ಸೀಳಿಕೊಂಡು ಹೊರಬಂದನು. ಮತ್ತೆ ಬದುಕಿ ಬಂದ ಕಚನನ್ನು ಕಂಡು ದೇವಯಾನಿ ಆನಂದ ಭಾಷ್ಪಗಳನ್ನು ಸುರಿಸುವ ಮುಂಚೆಯೇ ಶುಕ್ರಾಚಾರ್ಯರು ಪ್ರಾಣ ಬಿಟ್ಟರು. ನಂತರ ಕಚ ತಾನು ಕಲಿತ ಮೃತ್ಯು ಸಂಜೀವಿನಿ ಮಂತ್ರದಿಂದ ಶುಕ್ರಾಚಾರ್ಯರನ್ನು ಬದುಕಿದನು. ತನ್ನ ತಂದೆ ಮತ್ತು ಪ್ರಿಯಕರರಿಬ್ಬರು ಬದುಕಿರುವುದನ್ನು ಕಂಡ ಖುಷಿಯಲ್ಲಿ ದೇವಯಾನಿ ತನ್ನ ಗುಪ್ತ ಪ್ರೀತಿಯನ್ನು ಬಹಿರಂಗಪಡಿಸಿದಳು. ಆದರೆ ಕಚ ಅವಳ ಪ್ರೀತಿಯನ್ನು ನಿರಾಕರಿಸಿದನು. ಏಕೆಂದರೆ ಆತ ಅವಳನ್ನು ಪ್ರೀತಿಸುತ್ತಿರಲಿಲ್ಲ. ಆತ ಮೃತ್ಯು ಸಂಜೀವಿನಿ ವಿದ್ಯೆಯನ್ನು ಕಲಿಯಲು ದೇವಯಾನಿಯೊಡನೆ ಆತ್ಮೀಯವಾಗಿದ್ದನು ಅಷ್ಟೇ. ಹೀಗಾಗಿ ಆತ "ನಾನು ನನ್ನ ಗುರುಗಳಾದ ಶುಕ್ರಾಚಾರ್ಯರನ್ನು ಆದರಿಸುತ್ತೇನೆ. ಹೀಗಾಗಿ ನಾನು ಗುರುಪುತ್ರಿಯನ್ನು ವರಿಸಲಾರೆ. ಅಲ್ಲದೆ ನಾನು ಈ ಕ್ಷಣವಷ್ಟೇ ಅವರ ಹೊಟ್ಟೆಯಿಂದ ಮರುಜನ್ಮ ಪಡೆದಿರುವೆ. ಅವರು ನನ್ನ ತಂದೆ ಸಮಾನವಾಗುತ್ತಾರೆ. ನೀನು ನನಗೆ ಸೋದರಿಯಾಗುವೆ..." ಎಂದೇಳಿ ಕಚ ನಯವಾಗಿ ದೇವಯಾನಿಯನ್ನು ತಿರಸ್ಕರಿಸಿದನು. ತನ್ನ ಪ್ರೀತಿ ತನಗೆ ಸಿಗದೇ ಹೋಯಿತಲ್ಲ ಎಂಬ ಬೇಜಾರಲ್ಲಿ ದೇವಯಾನಿ ಕಚನಿಗೆ "ನೀನು ಕಲಿತ ಮೃತ್ಯು ಸಂಜೀವಿನಿ ವಿದ್ಯೆ ನಿನ್ನ ಪ್ರಯೋಜನಕ್ಕೆ ಬಾರದಿರಲಿ..." ಎಂಬ ಶಾಪವಿಟ್ಟಳು. ಅತ್ತ ಕಡೆ ಕಚನು ಸಹ "ನಿನ್ನಂಥ ಹಠಮಾರಿ ಹೆಣ್ಣಿಗೆ ಯಾವುದೇ ಬ್ರಾಹ್ಮಣ ಹುಡುಗ ಸಿಗದಿರಲಿ. ನಿನ್ನನ್ನು ಕೈಹಿಡಿಯುವವ ಚಾರಿತ್ರ್ಯಹೀನನಾಗಿರಲಿ..." ಎಂದು ಶಾಪ ಹಾಕಿ ದೇವಲೋಕಕ್ಕೆ ಹೊರಟು ಹೋದನು.
ದೇವಲೋಕಕ್ಕೆ ಹೋದ ನಂತರ ಕಚ ನಡೆದ ಸಂಗತಿಗಳನ್ನೆಲ್ಲ ವಿವರಿಸಿ ತನ್ನ ತಂದೆ ಬ್ರಹಸ್ಪತಿಗೆ ಮೃತ್ಯು ಸಂಜೀವಿನಿಯನ್ನು ಬೋಧಿಸಿ ತನಗೆ ವಹಿಸಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದನು. ಆದರೆ ಇತ್ತ ಕಡೆ ದೇವಯಾನಿ ಕಚನ ಪ್ರೀತಿ ತನಗೆ ಸಿಗಲಿಲ್ಲವೆಂಬ ಕೊರಗಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಅನ್ನ ಆಹಾರವನ್ನು ತ್ಯಜಿಸಿದಳು. ಕೆಲ ದಿನಗಳು ಕಳೆದ ನಂತರ ದೇವಯಾನಿ ಕಚನನ್ನು ಮರೆತಳು. ನಂತರ ಅವಳು ಪರ್ವರಾಜನ ಮಗಳಾದ ಶರ್ಮಿಷ್ಟೆಯ ಆಪ್ತ ಸಖಿಯಾದಳು. ಅಂತಸ್ತಿನ ಅಡ್ಡಗೋಡೆಯಿಲ್ಲದೆ ದೇವಯಾನಿ ಹಾಗೂ ಶರ್ಮಿಷ್ಟೆ ಇಬ್ಬರು ಆತ್ಮೀಯ ಗೆಳತಿಯರಾದರು.
ಒಂದಿನ ದೇವಯಾನಿ ಶರ್ಮಿಷ್ಟೆಯ ಕೋರಿಕೆಗೆ ಮೇರೆಗೆ ವನ ವಿಹಾರಕ್ಕೆ ಹೋದಳು. ನಾಲ್ಕಾರು ಆಪ್ತ ಸೇವಕಿಯರೊಂದಿಗೆ ಶರ್ಮಿಷ್ಟೆ ಮತ್ತು ದೇವಯಾನಿ ಕಾಡಿನಲ್ಲಿ ಮೋಜು ಮಾಡುತ್ತಾ ಜೋರಾಗಿ ಮಾತನಾಡುತ್ತಾ ಮುನ್ನಡೆದರು. ಅವರ ಕಣ್ಣಿಗೆ ಒಂದು ಸುಂದರವಾದ ಕೊಳ ಕಂಡಿತು. ಆಗ ಅವರೆಲ್ಲರು ಆ ಕೊಳದಲ್ಲಿ ಜಲಕ್ರೀಡೆಗಳನ್ನು ಆಡಲು ನಿರ್ಧರಿಸಿ ಕೊಳದಲ್ಲಿ ಇಳಿದರು. ಶರ್ಮಿಷ್ಟೆ ಹಾಗೂ ದೇವಯಾನಿ ಕೊಳದ ನೀರನ್ನು ಪರಸ್ಪರರ ಮೇಲೆ ಎರಚಿ ಜಲಕ್ರೀಡೆಗಳನ್ನು ಆಡುತ್ತಿದ್ದರು. ಆದರೆ ಅಚಾನಾಕಾಗಿ ಒಂದು ಸುಂಟರಗಾಳಿ ಅಲ್ಲಿಂದ ಸುಳಿದು ಹೋಯಿತು. ಅವರೆಲ್ಲರು ಹೆದರಿ ಕೊಳದಿಂದ ಆಚೆ ಬಂದು ತಮ್ಮತಮ್ಮ ಬಟ್ಟೆಗಳನ್ನು ಧರಿಸಲು ಆತುರಪಟ್ಟರು. ಗಾಳಿಯ ರಭಸಕ್ಕೆ ಎಲ್ಲರ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವಸರದಲ್ಲಿ ಶರ್ಮಿಷ್ಟೆ ಅರಿವಿಲ್ಲದೆ ದೇವಯಾನಿಯ ಬಟ್ಟೆಗಳನ್ನು ಧರಿಸಿದ್ದಳು. ಇಷ್ಟಕ್ಕೆ ದೇವಯಾನಿ ಶರ್ಮಿಷ್ಟೆಯೊಂದಿಗೆ ಜಗಳಕ್ಕಿಳಿದಳು. "ನೀನು ರಾಜಪುತ್ರಿಯಾಗಿರಬಹುದು. ಆದರೆ ಗುರುಪುತ್ರಿಯ ಬಟ್ಟೆಗಳನ್ನು ಮುಟ್ಟುವ ಯೋಗ್ಯತೆ ನಿನಗಿಲ್ಲವೆಂದು" ದೇವಯಾನಿ ಶರ್ಮಿಷ್ಟೆಯನ್ನು ಜರಿದಳು. ಅದಕ್ಕೆ ಪ್ರತ್ಯುತ್ತರವಾಗಿ ಶರ್ಮಿಷ್ಟೆ "ನೀನು ಮತ್ತು ನಿನ್ನ ತಂದೆಯೆಲ್ಲರು ನನ್ನ ತಂದೆಯ ಸೇವಕರು..." ಎಂದು ದೇವಯಾನಿಯನ್ನು ಹೀಯಾಳಿಸಿದಳು. ಹೀಗೆ ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಕೋಪದಲ್ಲಿ ಶರ್ಮಿಷ್ಟೆ ದೇವಯಾನಿಯನ್ನು ಅಲ್ಲಿದ್ದ ಹಾಳು ಬಾವಿಗೆ ತಳ್ಳಿ ತನ್ನ ಸೇವಕಿಯರೊಡನೆ ಅರಮನೆಗೆ ತೆರಳಿದಳು.
ಒಂದು ಸಣ್ಣ ವಿಷಯಕ್ಕೆ ದೊಡ್ಡ ಜಗಳ ಮಾಡಿಕೊಂಡು ದೇವಯಾನಿ ನೀರಿಲ್ಲದ ಹಾಳು ಬಾವಿಗೆ ಬಿದ್ದು ಒದ್ದಾಡಲು ಪ್ರಾರಂಭಿಸಿದಳು. ತನ್ನೆಲ್ಲ ಶಕ್ತಿ ಬಳಸಿ "ಕಾಪಾಡಿ ಕಾಪಾಡಿ..." ಎಂದು ಕೂಗಲು ಪ್ರಾರಂಭಿಸಿದಳು. ಅವಳು ಕೂಗು ಅಲ್ಲಿಗೆ ಬೇಟೆಯಾಡಲು ಬಂದಿದ್ದ ಯಯಾತಿಗೆ ಕೇಳಿಸಿತು. ಯಯಾತಿ ಹಸ್ತಿನಾಪುರದ ರಾಜ ನಹುಷನ ಮಗನಾಗಿದ್ದನು. ಆತ ಶಸ್ತ್ರ ಹಾಗೂ ಶಾಸ್ತ್ರಗಳೆರಡನ್ನು ಕರಗತ ಮಾಡಿಕೊಂಡು ರಾಜ್ಯಭಾರದ ಹೊಣೆಯನ್ನು ಹೊರಲು ಸಿದ್ಧನಾಗಿದ್ದನು. ಅದಕ್ಕಿನ್ನೂ ಸ್ವಲ್ಪ ಸಮಯವಿರುವುದರಿಂದ ದಿನಾಲು ಬೇಟೆಯಾಡಲು ಹೋಗುತ್ತಿದ್ದನು. ಇವತ್ತು ಅದೇ ರೀತಿ ಬೇಟೆಯಾಡಲು ಬಂದು ಬಾಯಾರಿಕೆಯಿಂದ ಬಳಲುತ್ತಿದ್ದನು. ಅಷ್ಟರಲ್ಲಿ ಅವನಿಗೆ ದೇವಯಾನಿಯ ಕೂಗು ಕೇಳಿಸಿತು. ಆತ ಓಡೋಡಿ ಬಂದು ಆ ಹಾಳು ಬಾವಿಯಲ್ಲಿ ಇಣುಕಿದನು. ವೀವಸ್ತ್ರಳಾಗಿರುವ ಸುಂದರಿಯನ್ನು ಕಂಡು ಬೆರಗಾದನು. ಆದರೆ ಕರ್ತವ್ಯ ಪ್ರಜ್ಞೆಯರಿತ ಯಯಾತಿ ದೇವಯಾನಿಯನ್ನು ಮೇಲೆತ್ತಿ ತನ್ನ ರಾಜ್ಯಕ್ಕೆ ಮರಳಿದನು. ಆದರೆ ದೇವಯಾನಿ ಆಶ್ರಮಕ್ಕೆ ಹಿಂತುರುಗದೇ ಶರ್ಮಿಷ್ಟೆಯ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಹಠವಿಡಿದು ಅಲ್ಲೇ ಕಾಡಲ್ಲೇ ಕುಳಿತಳು.
ಸಂಜೆಯ ಸಮಯವಾದರೂ ತಮ್ಮ ಮಗಳು ಮರಳಿ ಬರದಿರುವುದರಿಂದ ಶುಕ್ರಾಚಾರ್ಯರು ದೇವಯಾನಿಯನ್ನು ಹುಡುಕಿಕೊಂಡು ಕಾಡಿಗೆ ತೆರಳಿದರು. ದೇವಯಾನಿ ಮೊಸಳೆ ಕಣ್ಣೀರನ್ನು ಸುರಿಸುತ್ತಾ ಕಾಡಲ್ಲೇ ಕುಳಿತ್ತಿದ್ದಳು. ಮುದ್ದಿನ ಮಗಳ ಕಣ್ಣೀರಿಗೆ ಶುಕ್ರಾಚಾರ್ಯರು ಕರಗಿ ನೀರಾದರು. ಆಗ ದೇವಯಾನಿ ತಾನು ಮಾಡಿದ ತಪ್ಪನ್ನು ಬಚ್ಚಿಟ್ಟು ಶರ್ಮಿಷ್ಟೆಯ ಬಗ್ಗೆ ದೂರಿತ್ತಳು. ಶರ್ಮಿಷ್ಟೆ ಬಂದು ಕ್ಷಮೆ ಕೇಳುವವರೆಗೆ ನಾನು ಆಶ್ರಮಕ್ಕೆ ಬರವುದಿಲ್ಲವೆಂದು ಹಠವಿಡಿದು ಕುಂತಳು. ಮಗಳ ಹಠವನ್ನರಿತ ಶುಕ್ರಾಚಾರ್ಯರು ನೇರವಾಗಿ ಅರಮನೆಗೆ ತೆರಳಿ ಪರ್ವರಾಜನಿಗೆ ಶರ್ಮಿಷ್ಟೆಯ ಅಪರಾಧದ ಬಗ್ಗೆ ತಿಳಿಸಿದರು. ಆಕೆ ಬಂದು ಕ್ಷಮೆ ಕೇಳದಿದ್ದರೆ "ನಾನು ಈ ರಾಜ್ಯವನ್ನು ತೋರೆಯುತ್ತೇನೆ..." ಎಂದು ಖಡಾಖಂಡಿತವಾಗಿ ಹೇಳಿದರು. ಗುರುಗಳ ಆಜ್ಞೆಯಂತೆ ಪರ್ವರಾಜ ಶರ್ಮಿಷ್ಟೆಯೊಂದಿಗೆ ಕಾಡಿಗೆ ತೆರಳಿ ದೇವಯಾನಿಯ ಕ್ಷಮೆ ಕೇಳಿದನು. ಆದರೆ ಬರೀ ಅಷ್ಟಕ್ಕೆ ದೇವಯಾನಿಯ ದುಷ್ಟ ಮನ ಕರಗಲಿಲ್ಲ. "ಶರ್ಮಿಷ್ಟೆ ಜೀವನ ಪರ್ಯಂತ ನನ್ನ ದಾಸಿಯಾಗಲು ಸಿದ್ಧಳಾದರೆ ಮಾತ್ರ ನಾನು ಮರಳಿ ಆಶ್ರಮಕ್ಕೆ ಕಾಲಿಡುವೆ..." ಎಂದು ಹೇಳಿದಳು. ಅವಳ ಬೇಡಿಕೆಯನ್ನು ಕೇಳಿ ಪರ್ವರಾಜ ಕುಸಿದು ಬಿದ್ದನು. ತನ್ನ ತಂದೆಯ ಸಾಮ್ರಾಜ್ಯದ ಉಳಿವಿಗೆ ಶುಕ್ರಾಚಾರ್ಯರ ಸಹಾಯ ಬೇಕೇ ಬೇಕು ಎಂಬುದನ್ನರಿತ ಶರ್ಮಿಷ್ಟೆ ದೇವಯಾನಿಯ ದಾಸಿಯಾಗಲು ಒಪ್ಪಿದಳು. ಆಗ ದೇವಯಾನಿ ವಿಕೃತವಾಗಿ ನಗುತ್ತಾ ಆಶ್ರಮಕ್ಕೆ ಮರಳಿದಳು.
ಮರುದಿನ ಶರ್ಮಿಷ್ಟೆ ತನ್ನ ಸಾವಿರ ಸೇವಕಿಯರೊಂದಿಗೆ ದೇವಯಾನಿಯ ದಾಸಿಯಾದಳು. ದುಷ್ಟ ದೇವಯಾನಿ ಗೆಳತಿಯೆಂಬುದನ್ನು ನೋಡದೆ ರಾಜಪುತ್ರಿ ಶರ್ಮಿಷ್ಟೆಯನ್ನು ಅತ್ಯಂತ ಕೀಳಾಗಿ ನಡೆಸಿಕೊಂಡಳು. ಆದಿನ ತನ್ನನ್ನು ಹಾಳು ಬಾವಿಯಿಂದ ಮೇಲೆತ್ತಿದ್ದ ರಾಜಕುಮಾರನ ಮೇಲೆ ದೇವಯಾನಿ ಮೋಹಿತಳಾಗಿದ್ದಳು. ಆಕೆ ಅವನ ನೆನಪುಗಳಲ್ಲಿ ಪದೇಪದೇ ಕಳೆದೋಗುತ್ತಿದ್ದಳು. ಯಯಾತಿ ಮತ್ತೆ ಆ ಕಾಡಿನ ಕೊಳಕ್ಕೆ ಬರಬಹುದು ಎಂಬ ನಂಬಿಕೆಯ ಮೇಲೆ ದೇವಯಾನಿ ಶರ್ಮಿಷ್ಟೆ ಸೇರಿ ಸಾವಿರ ಸೇವಕಿಯರೊಡನೆ ಕಾಡಿಗೆ ತೆರಳಿದಳು. ಅಲ್ಲಿದ್ದ ಉದ್ಯಾನವನದಲ್ಲಿ ರಾಣಿಯಂತೆ ಕುಳಿತು ತನ್ನ ದುರಹಂಕಾರವನ್ನು ಪ್ರದರ್ಶಿಸುತ್ತಿದ್ದಳು. ಆಕೆ ಈಗಲೂ ಸಹ ಶರ್ಮಿಷ್ಟೆಯನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ದೇವಯಾನಿ ಎಂದುಕೊಂಡಂತೆ ಯಯಾತಿ ಅಲ್ಲಿಗೆ ಬಂದನು. ಏಕೆಂದರೆ ದೇವಯಾನಿಯನ್ನು ಆದಿನ ವಸ್ತ್ರಹೀನವಾಗಿ ಕಂಡಾಗಿನಿಂದ ಅವನ ನಿದ್ರೆ ಹಾರಿ ಹೋಗಿತ್ತು. ಅವನು ಸಹ ಅವಳ ಮೇಲೆ ಮೋಹಿತನಾಗಿದ್ದನು. ರಾಜಾ ಯಯಾತಿ ದೇವಯಾನಿಯ ಬಗ್ಗೆ ತಿಳಿದುಕೊಂಡು ಅವಳನ್ನು ಮದುವೆಯಾಗುವ ಮನದಿಂಗಿತವನ್ನು ವ್ಯಕ್ತಪಡಿಸಿದನು. ಶುಕ್ರಾಚಾರ್ಯರ ಬಳಿ ಈ ಪ್ರೇಮ ಸಮಾಚಾರ ತಲುಪಿದಾಗ ಅವರು ಕಚನ ಶಾಪದಿಂದಾಗಿ ತಮ್ಮ ಮಗಳು ಬ್ರಾಹ್ಮಣನ ಬದಲಾಗಿ ಕ್ಷತ್ರಿಯನ ಕೈಹಿಡಿಯುತ್ತಿರುವಳೆಂದು ಸಮಾಧಾನ ಮಾಡಿಕೊಂಡು ತಾವೇ ಮುಂದೆ ನಿಂತು ಮುದ್ದಿನ ಮಗಳು ದೇವಯಾನಿಯ ಮದುವೆಯನ್ನು ನೆರವೇರಿಸಿದರು.
ದೇವಯಾನಿ ಯಯಾತಿಯೊಡನೆ ಹಸ್ತಿನಾಪುರಕ್ಕೆ ಬಂದು ಮಹಾರಾಣಿಯಾಗಿ ಮೆರೆದಳು. ಆದರೆ ಅವಳಂಥ ದುಷ್ಟಳೊಡನೆ ಸ್ನೇಹ ಬೆಳೆಸಿದ ತಪ್ಪಿಗಾಗಿ ಯುವರಾಣಿಯಾಗಿದ್ದ ಶರ್ಮಿಷ್ಟೆ ದಾಸಿಯಾಗಿ ಸವೆದಳು. ಯಯಾತಿ ಬಹಳಷ್ಟು ರಸಿಕ ರಾಜನಾಗಿದ್ದನು. ಆತ ಸದಾಕಾಲ ಚಿರಯೌವ್ವನದಲ್ಲೇ ಇರಬೇಕೆಂದು ಬಯಸುತ್ತಿದ್ದನು. ಸರ್ವಸುಖಗಳನ್ನು ಸವಿಯಲು ಸಾಯುತ್ತಿದ್ದನು. ಸದಾಕಾಲ ಸ್ತ್ರೀಯರನ್ನು ಸುಖಿಸಲು ಹಂಬಲಿಸುತ್ತಿದ್ದನು. ಕಚನ ಶಾಪದಂತೆ ದೇವಯಾನಿ ಚಾರಿತ್ರ್ಯಹೀನ, ಸ್ತ್ರೀಲಂಪಟ ಯಯಾತಿಯನ್ನು ಮದುವೆಯಾಗಿ ಶಾಪವನ್ನು ಮೈಮೇಲೆ ಎಳೆದುಕೊಂಡಳು. ರಸಿಕ ರಾಜ ಯಯಾತಿ ಸೌಂದರ್ಯವತಿಯಾದ ದೇವಯಾನಿಯನ್ನು ಮನಸೋಯಿಚ್ಛೆ ಅನುಭವಿಸಿದನು. ಆದರೆ ದೇವಯಾನಿಯಿಂದ ಅವನ ದೇಹದ ಹಸಿವು ತಣಿಯಲಿಲ್ಲ. ಅದಕ್ಕಾಗಿ ಆತ ದೇವಯಾನಿಯ ದಾಸಿಯರ ಮೇಲೆ ಕಣ್ಣಾಕಲು ಪ್ರಾರಂಭಿಸಿದನು. ಅವರಲ್ಲಿ ದೇವಯಾನಿಗಿಂತಲೂ ಸುಂದರವಾಗಿದ್ದ ಶರ್ಮಿಷ್ಟೆ ಸಹಜವಾಗಿ ಯಯಾತಿಗೆ ಇಷ್ಟವಾದಳು. ತನ್ನ ಪತ್ನಿಯ ದಾಸಿ ತನಗೂ ದಾಸಿಯೆಂಬ ದಬ್ಬಾಳಿಕೆಯ ಮೇಲೆ ಆತ ಶರ್ಮಿಷ್ಟೆಯನ್ನು ಗುಟ್ಟಾಗಿ ಸಂಭೋಗಿಸಿ ನಂತರ ಗುಟ್ಟಾಗಿ ಮದುವೆಯಾದನು. ದೇವಯಾನಿಯನ್ನು ಸಾಕಾಗುವಷ್ಟು ಸುಖಿಸಿದರೂ ಸಿಗದ ಸುಖ ಯಯಾತಿಗೆ ಶರ್ಮಿಷ್ಟೆಯಿಂದ ಸಿಕ್ಕಿತು. ಅದಕ್ಕಾಗಿ ಆತ ಸದಾ ಅವಳಿಗೆ ಅಂಟಿಕೊಂಡಿರಲು ಪ್ರಾರಂಭಿಸಿದನು. ಹಗಲು ರಾತ್ರಿಯೆನ್ನದೆ ಸದಾ ಶರ್ಮಿಷ್ಟೆಯ ಸೆರಗು ಸೋಕಿ ಯಯಾತಿ ದೇವಯಾನಿಯನ್ನು ಕಡೆಗಣಿಸಿದನು.
ಯಯಾತಿ ಹಾಗೂ ಶರ್ಮಿಷ್ಟೆ ಸಂತೋಷವಾಗಿರುವುದನ್ನು ದೇವಯಾನಿಗೆ ಸಹಿಸಲಾಗಲಿಲ್ಲ. ಅದಕ್ಕಾಗಿ ಆಕೆ ತನ್ನ ತಂದೆ ಶುಕ್ರಾಚಾರ್ಯರ ಬಳಿ ಹೋಗಿ ತನ್ನ ಗಂಡ ಯಯಾತಿ ತನಗೆ ಮೋಸ ಮಾಡುತ್ತಿದ್ದಾನೆ ಎಂದು ದೂರಿತ್ತಳು. ತಮ್ಮ ಮುದ್ದಿನ ಮಗಳಿಗೆ ಅನ್ಯಾಯವಾಯಿತಲ್ಲ ಎಂಬ ಕೋಪದಲ್ಲಿ ಶುಕ್ರಾಚಾರ್ಯರು ಯಯಾತಿಗೆ "ಸ್ತ್ರೀ ಲಂಪಟನಾದ ನೀನು ಈಗಲೇ ವೃದ್ಧನಾಗು..." ಎಂದು ಶಾಪವಿತ್ತರು. ಶುಕ್ರಾಚಾರ್ಯರ ಶಾಪದಿಂದ ಯಯಾತಿ ನಡು ಯೌವ್ವನದಲ್ಲಿಯೇ ವೃದ್ಧನಾದನು. ವೃದ್ಧನಾದ ಯಯಾತಿಯನ್ನು ದೇವಯಾನಿ ಕಡೆಗಣಿಸಿದಳು. ಆದರೆ ಶರ್ಮಿಷ್ಟೆ ಅವನನ್ನು ಅತ್ಯಂತ ಆದರದಿಂದ ನೋಡಿಕೊಳ್ಳಲು ಪ್ರಾರಂಭಿಸಿದಳು. ಸಣ್ಣ ವಿಷಯಗಳಿಗೆಲ್ಲ ಕೋಪ ಮಾಡಿಕೊಂಡು ರಾದ್ಧಾಂತ ಸೃಷ್ಟಿಸುವುದು ದೇವಯಾನಿಯ ಹುಟ್ಟುಗುಣವಾಗಿತ್ತು. ಯಯಾತಿ ವೃದ್ಧನಾಗಿದ್ದರೂ ಶರ್ಮಿಷ್ಟೆ ಅವನಿಗೆ ಹತ್ತಿರವಾಗಿರಿವುದನ್ನು ದೇವಯಾನಿಯಿಂದ ನೋಡಲಾಗಲಿಲ್ಲ. ಅಲ್ಲದೆ ನಾನು ಯಯಾತಿಗೆ ಯೌವ್ವನವನ್ನು ಕರುಣಿಸಿದರೆ ಆತ ಶರ್ಮಿಷ್ಟೆಯನ್ನು ಬಿಟ್ಟು ಮತ್ತೆ ತನ್ನ ಬಳಿ ಬರಬಹುದು ಎಂಬಾಸೆ ದೇವಯಾನಿಯ ಮನದಲ್ಲಿ ಮೊಳಕೆ ಒಡೆಯಿತು. ಅದಕ್ಕಾಗಿ ಆಕೆ ಮತ್ತೆ ತನ್ನ ತಂದೆ ಶುಕ್ರಾಚಾರ್ಯರ ಬಳಿ ತೆರಳಿ ತನ್ನ ಗಂಡ ಯಯಾತಿಯ ಯೌವ್ವನ ಮರಳಿ ಬರಲೆಂದು ಪ್ರಾರ್ಥಿಸಿದಳು. ಆದರೆ ಅದಷ್ಟು ಸುಲಭದ ಮಾತಾಗಿರಲಿಲ್ಲ. ಅದಕ್ಕೆ ಶುಕ್ರಾಚಾರ್ಯರು "ಯಯಾತಿಯ ಮಕ್ಕಳಲ್ಲಿ ಯಾರಾದರೂ ಅವನ ವೃದ್ಧಾಪ್ಯವನ್ನು ಸ್ವೀಕರಿಸಿದರೆ ಅವನಿಗೆ ನಾನು ಯೌವ್ವನವನ್ನು ಮರಳಿಸಬಹುದು..." ಎಂದೇಳಿದರು. ದೇವಯಾನಿ ಈ ವಿಷಯವನ್ನು ಯಯಾತಿಗೆ ತಿಳಿಸಿದಳು. ಖುಷಿಯಿಂದ ಯಯಾತಿ ತನ್ನೆಲ್ಲ ಮಕ್ಕಳಿಗೆ ತನ್ನ ವೃದ್ಧಾಪ್ಯವನ್ನು ಸ್ವೀಕರಿಸುವಂತೆ ಬೇಡಿಕೊಂಡರು. ಅವನ ಹಿರಿಯ ಮಕ್ಕಳೆಲ್ಲರು ಅವನ ಕೋರಿಕೆಯನ್ನು ತಳ್ಳಿ ಹಾಕಿದರು. ಆದರೆ ಅವನ ಕಿರಿಯ ಮಗ ಪುರು ಮನ್ನಿಸಿದನು. ಪುರು ತನ್ನ ಯೌವ್ವನವನ್ನು ತಂದೆ ಯಯಾತಿಗೆ ಕೊಟ್ಟು ತಾನು ವೃದ್ಧಾಪ್ಯವನ್ನು ಸ್ವೀಕರಿಸಿದನು.
ಮರಳಿ ಯೌವ್ವನ ಸಿಕ್ಕ ಖುಷಿಯಲ್ಲಿ ಯಯಾತಿ ಸುಖ ಸಾಗರದಲ್ಲಿ ಮುಳುಗಿದನು. ಮೊದಲಿನಿಂದಲೂ ಆತ ಯೌವ್ವನವನ್ನು ಪ್ರೀತಿಸುತ್ತಿದ್ದನು. ಸ್ತ್ರೀ ಸುಖಕ್ಕಾಗಿ ಹಂಬಲಿಸುತ್ತಿದ್ದನು. ಈಗ ಯೌವ್ವನ ಮರಳಿ ಬಂದಿರುವುದರಿಂದ ಯಯಾತಿ ಮತ್ತೆ ಸ್ತ್ರೀಯರನ್ನು ಸುಖಿಸಿತೊಡಗಿದನು. ಈಗಲೂ ಯಯಾತಿ ದೇವಯಾನಿಯನ್ನು ದೂರವಿರಿಸಿ ಶರ್ಮಿಷ್ಟೆಯನ್ನಷ್ಟೇ ಸುಖಿಸಿದನು. ಆಕೆ ಎಷ್ಟೇ ಹಠ ಸಾಧಿಸಿದರೂ ಅವಳಿಗೆ ಯಯಾತಿಯ ಪ್ರೀತಿ ಸಿಗಲಿಲ್ಲ. ಯಯಾತಿ ಸುಖಭೋಗಗಳಲ್ಲಿ ಮೈಮರೆತ್ತಿದ್ದನು. ಆದರೆ ಪುರು ವೃದ್ಧಾಪ್ಯವನ್ನು ಸಹಿಸಲಾಗದೆ ಒದ್ದಾಡುತ್ತಿದ್ದನು. ಅವನನ್ನು ನೋಡಿ ಅವನ ಸುಂದರ ಹೆಂಡತಿ ಸ್ವರ್ಣರೇಖೆ ಕಣ್ಣೀರಾಕುತ್ತಿದ್ದಳು. ಅವಳ ಕಣ್ಣೀರು ಯಯಾತಿಯ ಪಾಪಪ್ರಜ್ಞೆಯನ್ನು ಬಡಿದೆಬ್ಬಿಸಿತು. ತನ್ನ ತಪ್ಪನ್ನರಿತ ಯಯಾತಿ ಪುರುವಿಗೆ ಯೌವ್ವನವನ್ನು ಮರಳಿಸಿ ತನ್ನ ವೃದ್ಧಾಪ್ಯವನ್ನು ಪುನ: ಸ್ವೀಕರಿಸಿದನು. ನಂತರ ಯಯಾತಿ ಪುರುವಿಗೆ ರಾಜ್ಯಭಾರದ ಜವಾಬ್ದಾರಿಯನ್ನು ವಹಿಸಿ ಶರ್ಮಿಷ್ಟೆಯೊಡನೆ ಕಾಡಿಗೆ ತೆರಳಿದನು. ಈಗಲೂ ಸಹ ದೇವಯಾನಿಗೆ ತನ್ನ ಗಂಡನ ಪ್ರೀತಿ ಸಿಗಲಿಲ್ಲ. ಆಕೆ ಒಂಟಿಯಾಗಿಯೇ ಉಳಿದು ಅಳಿದಳು.
ಈ ರೀತಿ ಹಠಮಾರಿ ದೇವಯಾನಿಗೆ ಗೆಳೆಯ ಕಚನ ಪ್ರೀತಿಯೂ ಸಿಗಲಿಲ್ಲ, ಗಂಡ ಯಯಾತಿಯ ಪ್ರೀತಿಯೂ ಬಹುಕಾಲ ಸಿಗಲಿಲ್ಲ, ಕೊನೆಪಕ್ಷ ಗೆಳತಿ ಶರ್ಮಿಷ್ಟೆಯ ಸ್ನೇಹವೂ ಸಿಗಲಿಲ್ಲ. ದುಷ್ಟ ದೇವಯಾನಿ ಒಬ್ಬಳು ಪಾಪದ ಹೆಣ್ಣು ಎಂಬುದರಲ್ಲಿ ಎರಡು ಮಾತಿಲ್ಲ. ಗೆಳೆಯರೇ, ನಿಮ್ಮ ಜೀವನದಲ್ಲಿ ನಿಮಗೆ ಯಾರಾದರೂ ದೇವಯಾನಿಯರು ಸಿಕ್ಕಿದ್ದರೆ ಅವರ ಬಗ್ಗೆ ಕಮೆಂಟ್ ಬಾಕ್ಸಲ್ಲಿ ಬರೆಯಿರಿ ಮತ್ತು ಈ ಅಂಕಣವನ್ನು ನಿಮ್ಮೆಲ್ಲ ಗೆಳೆಯರೊಂದಿಗೆ ತಪ್ಪದೇ ಶೇರ್ ಮಾಡಿ....
18) ಮೋಹಿನಿಯ ಮಾಯೆಗಳು : Maya's of Mohini in Kannada
ಹಿಂದು ಪುರಾಣಗಳಲ್ಲಿನ ಅತ್ಯಂತ ಸುಂದರವಾದ ಹೆಣ್ಣೆಂದರೆ ಮೋಹಿನಿ ಮಾತ್ರ. ಮೋಹಿನಿಯ ಮೇಲೆ ಮೋಹಗೊಳ್ಳದ ದೇವತೆ ಅಥವಾ ದಾನವ ಇರಲಿಲ್ಲ. ಪ್ರತಿಯೊಬ್ಬರು ಮೋಹಿನಿಯ ಮಾಯೆಗೆ ಒಳಗಾಗಿದ್ದಾರೆ. ಸಮುದ್ರ ಮಂಥನ ಸಮಯದಲ್ಲಿ ಅಮೃತ ಸಿಕ್ಕಾಗ ದೇವತೆಗಳಿಗೂ ಮತ್ತು ದಾನವರಿಗೂ ಮತ್ತೆ ಘೋರ ಯುದ್ಧ ಶುರುವಾಯಿತು. ಏಕೆಂದರೆ ಅಮೃತವನ್ನು ಪಾನಿಸಿದರೆ ಅಮರತ್ವ ಸಿಗುವುದೆಂದು ಗೊತ್ತಾಗಿತ್ತು. ಅದಕ್ಕಾಗಿ ಅಮರತ್ವದ ಆಸೆಗಾಗಿ ಅಮೃತವನ್ನು ಪಾಣಿಸಲು ದೇವತೆಗಳಿಗೂ ಮತ್ತು ದಾನವರಿಗೂ ಕದನ ಶುರುವಾಯಿತು. ದಾನವರಿಗೆ ಅಮೃತವನ್ನು ಕೊಡುವ ಮನಸ್ಸು ದೇವತೆಗಳಿಗೆ ಇರಲಿಲ್ಲ. ಅದಕ್ಕಾಗಿ ಸಾಕ್ಷಾತ್ ಮಹಾ ವಿಷ್ಣುವೇ ಮೋಹಿನಿಯ ಅವತಾರ ತಾಳಿದನು. ಮೋಹಿನಿಯ ಸೌಂದರ್ಯಕ್ಕೆ ಸಾಟಿಯಾದದ್ದು ಯಾವುದು ಇರಲಿಲ್ಲ. ಮೋಹಿನಿಯನ್ನು ಕಂಡ ಕ್ಷಣದಲ್ಲೇ ದಾನವರ ಸಮೇತ ದೇವತೆಗಳು ಸಹ ಮರುಳಾದರು. ದಾನವರು ಮೋಹಿನಿ ಹೇಳಿದಂತೆ ಕೇಳತೊಡಗಿದರು. ಅಲ್ಲದೆ ಅವರು ಮೋಹಿನಿಯ ಸೌಂದರ್ಯದ ಸೆಳೆತಕ್ಕೆ ಒಳಗಾಗಿ ಅಮೃತವನ್ನು ಮರೆತು ಬಿಟ್ಟರು. ಮೋಹಿನಿ ನೃತ್ಯ ಮಾಡುತ್ತಾ ಬರೀ ದೇವತೆಗಳಿಗಷ್ಟೇ ಅಮೃತವನ್ನು ಪಾನಿಸಲು ಪ್ರಾರಂಭಿಸಿದಳು. ಅವಳ ವಂಚನೆ ರಾಹು ಎಂಬ ರಾಕ್ಷಸನಿಗೆ ಗೊತ್ತಾಯಿತು. ಆತ ಅಮೃತವನ್ನು ಪಾನಿಸುವುದಕ್ಕಾಗಿ ದೇವತೆಯ ವೇಷ ಧರಿಸಿ ದೇವತೆಗಳ ಸಾಲಿನಲ್ಲಿ ಬಂದು ಕುಳಿತು ಅಮೃತವನ್ನು ಪಾನಿಸಿದನು. ಆದರೆ ಅವನ ಕುಟಿಲತೆ ಮೋಹಿನಿಗೆ ಗೊತ್ತಾದಾಗ ಆಕೆ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಅವನ ಶಿರಛೇಧನ ಮಾಡಿದಳು. ಅದೇ ರೀತಿ ನೃತ್ಯ ಮಾಡುತ್ತಾ ಮೋಹಿನಿ ಅಮೃತವನ್ನೆಲ್ಲ ಬರೀ ದೇವತೆಗಳಿಗಷ್ಟೇ ಪಾನಿಸಿ ಅವರಿಗೆ ಅಮರತ್ವವನ್ನು ಕರುಣಿಸಿ ದೇವತೆಗಳನ್ನು ರಕ್ಷಿಸಿದಳು. ಇದು ಮೋಹಿನಿಯ ಮೊದಲ ಮಾಯೆ.
ಮೋಹಿನಿಯ ಮಾಯೆಗಳು ಸುಲಭವಾಗಿ ಮುಗಿಯುವಂಥದ್ದಲ್ಲ. ಮೋಹಿನಿ ಪುರುಷರಲ್ಲಿ ಪ್ರೀತಿಯ ಆಸೆಯನ್ನು ಬಿತ್ತಿ ಅವರನ್ನು ತನ್ನ ಕೈವಶ ಮಾಡಿಕೊಂಡು ಕೈಬೆರಳ ಸನ್ನೆಯ ಮೇಲೆ ಕುಣಿಸುತ್ತಾಳೆ. ಮೋಹಿನಿಯ ಮಾಯೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಇಂದ್ರಿಯಗಳನ್ನು ಜಯಿಸಿದ ಶಿವನು ಸಹ ಮೋಹಿನಿಯ ಸೌಂದರ್ಯಕ್ಕೆ ಸೋತು ಅವಳನ್ನು ಬೆನ್ನಟ್ಟಿದನು. ಆತ ಅವಳನ್ನು ಮದುವೆಯಾಗಲು ಸಹ ಸಿದ್ಧನಿದ್ದನು. ಶಿವ ಮೋಹಿನಿಯನ್ನು ಬಲವಂತವಾಗಿ ಅಪ್ಪಿಕೊಂಡಾಗ ಮೋಹಿನಿ ತನ್ನ ನಿಜ ರೂಪವನ್ನು ಅವನಿಗೆ ಪ್ರದರ್ಶಿಸಿ "ಮೋಹಿನಿಯ ಮಾಯೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ..." ಎಂದೇಳಿ ಮಾಯವಾದಳು. ಕಾಮ ಎನ್ನುವುದು ದೇವಾನು ದೇವತೆಗಳನ್ನು ಸಹ ಬಿಟ್ಟಿಲ್ಲ ಎಂಬುದು ಮೋಹಿನಿಯ ಈ ಮಾಯೆಯಿಂದ ಸಾಬೀತಾಗುತ್ತದೆ.
ಒಬ್ಬ ರಾಕ್ಷಸ ಶಿವನನ್ನು ಕುರಿತು ಘೋರ ತಪಸ್ಸು ಮಾಡಿ "ನಾನು ಯಾರ ತಲೆ ಮೇಲೆ ಕೈಯಿಡುತ್ತೇನೆಯೋ ಅವರು ಸುಟ್ಟು ಭಸ್ಮವಾಸಬೇಕು" ಎಂಬ ವಿಚಿತ್ರ ವರವನ್ನು ಪಡೆದುಕೊಂಡನು. ಆ ರಾಕ್ಷಸ ಕಂಡಕಂಡವರ ತಲೆ ಮೇಲೆ ಕೈಯಿಟ್ಟು ಅವರನ್ನೆಲ್ಲ ಸುಟ್ಟು ಭಸ್ಮ ಮಾಡಲು ಪ್ರಾರಂಭಿಸಿದ್ದರಿಂದ ಅವನು ಭಸ್ಮಾಸುರನೆಂದು ಪ್ರಸಿದ್ಧನಾದನು. ದಿನ ಕಳೆದಂತೆ ಅವನ ಶತ್ರುಗಳೆಲ್ಲ ಸುಲಭವಾಗಿ ನಾಶವಾಗಿದ್ದರಿಂದ ಭಸ್ಮಾಸುರನಿಗೆ ಅಹಂಕಾರ ಹೆಚ್ಚಾಯಿತು. ಅದಕ್ಕಾಗಿ ಆತ ಶಿವನ ತಲೆ ಮೇಲೆ ಕೈಯಿಟ್ಟು ಶಿವನನ್ನು ಸುಟ್ಟು ಭಸ್ಮ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದನು. ಅವನಿಂದ ತಪ್ಪಿಸಿಕೊಂಡು ಶಿವ ಕೈಲಾಸ ಪರ್ವತದಿಂದ ಬೇರೆಡೆಗೆ ಓಡಿದನು. ಆತ ಶಿವನ ತಲೆ ಮೇಲೆ ಕೈಯಿಡುವುದಕ್ಕಾಗಿ ಅವನನ್ನು ಬೆನ್ನಟ್ಟಿದನು. ಭಸ್ಮಾಸುರನಿಗೆ ಹೆದರಿ ಓಡುತ್ತಿರುವ ಶಿವನನ್ನು ಕಾಪಾಡುವುದಕ್ಕಾಗಿ ಮೋಹಿನಿ ಭಸ್ಮಾಸುರನ ಎದುರು ಪ್ರತ್ಯಕ್ಷಳಾದಳು. ಮೋಹಿನಿಯ ಮೈಮಾಟಕ್ಕೆ ಭಸ್ಮಾಸುರ ಮರುಳಾಗಿ ಅವಳನ್ನು ಮದುವೆಯಾಗುವ ಮನದಾಸೆಯನ್ನು ವ್ಯಕ್ತಪಡಿಸಿದನು. ಆವಾಗ ಮೋಹಿನಿ ಅವನಿಗೆ ನೀನು ನೃತ್ಯದಲ್ಲಿ ನನ್ನನ್ನು ಮೆಚ್ಚಿಸಿದರೆ ನಾನು ನಿನ್ನನ್ನು ಮದುವೆಯಾಗುವೆ ಎಂದೇಳಿ ನೃತ್ಯ ಮಾಡಲು ಪ್ರಾರಂಭಿಸಿದಳು. ಮೋಹಿನಿಯನ್ನು ನೋಡಿ ಭಸ್ಮಾಸುರನು ಕುಣಿಯಲು ಪ್ರಾರಂಭಿಸಿದನು. ಮೋಹಿನಿ ಹಾಗೆಯೇ ಕುಣಿಯುತ್ತಾ ಸುಸ್ತಾಗಿ ಕೊನೆಗೆ ತನ್ನ ತಲೆಯ ಮೇಲೆ ಕೈಯಿಟ್ಟುಕೊಂಡಳು. ಅವಳ ಸೌಂದರ್ಯದ ಸೆಳೆತಕ್ಕೆ ಸೋತು ಹೋಗಿದ್ದ ಭಸ್ಮಾಸುರನು ಸಹ ತಲೆಯ ಮೇಲೆ ಕೈಯಿಟ್ಟುಕೊಂಡನು. ಕೂಡಲೇ ಭಸ್ಮಾಸುರ ಸುಟ್ಟು ಭಸ್ಮವಾದನು. ಈ ರೀತಿ ಮೋಹಿನಿ ಉಪಾಯದಿಂದ ಭಸ್ಮಾಸುರರನ್ನು ಕೊಂದು ಶಿವನನ್ನು ಕಾಪಾಡಿದಳು. ಈ ರೀತಿ ಮೋಹಿನಿಯ ಮಾಯೆಗಳು ರೋಚಕವಾಗಿ ಸಾಗುತ್ತವೆ.
ಇದಿಷ್ಟು ಮೋಹಿನಿಯ ಮಾಯೆಗಳು. ಮೋಹಿನಿ ಸೌಂದರ್ಯದ ಶಾರದೆಯಾಗಿದ್ದಾಳೆ. ಅವಳು ಪುರುಷನನ್ನು ಸೆಳೆದು ತನ್ನ ಕೈ ಸನ್ನೆಯ ಮೇಲೆ ಕುಣಿಸುತ್ತಾಳೆ. ರಾತ್ರಿ ಕನಸ್ಸಲ್ಲಿ ಬಂದು ಕಾಡುತ್ತಾಳೆ. ಅವಳ ಮಾಯೆಗಳು ಮುಗಿಯುವುದಿಲ್ಲ. ಈ ಅಂಕಣದ ಬಗ್ಗೆ ತಪ್ಪದೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ. ಜೊತೆಗೆ ಇದನ್ನು ನಿಮ್ಮ ಸ್ನೇಹಿತರೊಡನೆ ಶೇರ್ ಮಾಡಿ...
ಶ್ರೀರಾಮಚಂದ್ರ ಅಶ್ವಮೇಧಯಾಗ ಮಾಡಲು ಒಂದು ಕುದುರೆಯನ್ನು ಬಿಟ್ಟಿದ್ದನು. ಆ ಕುದುರೆಗೆ ನಮಸ್ಕರಿಸಿ ಎಲ್ಲ ರಾಜರು ಕಪ್ಪು ಕಾಣಿಕೆಗಳನ್ನು ಕೊಟ್ಟು ರಾಮನಿಗೆ ಶರಣಾಗಿದ್ದರು. ಆದರೆ ಲವಕುಶರು ರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿದರು. ಸೀತೆ ಆ ಕುದುರೆಯನ್ನು ಬಿಡಲು ಹೇಳಿದರೂ ಸಹ ಅವರು ಬಿಡಲಿಲ್ಲ. ಆ ಕುದುರೆಯನ್ನು ಬಿಡಿಸಿಕೊಳ್ಳಲು ಬಂದ ಭರತ ಶತ್ರುಘ್ನರು ಲವಕುಶರಂಥ ಬಾಲಕರಿಂದ ಸೋತಾಗ ಸ್ವತಃ ರಾಮನೇ ಅಶ್ವಮೇಧಯಾಗದ ಕುದುರೆಯನ್ನು ಬಿಡಿಸಿಕೊಳ್ಳಲು ಬರಬೇಕಾಯಿತು. ತಂದೆ ಹಾಗೂ ಮಕ್ಕಳ ಯುದ್ಧವನ್ನು ನೋಡುವಷ್ಟು ಗಟ್ಟಿ ಗುಂಡಿಗೆ ಸೀತೆಗೆ ಇರಲಿಲ್ಲ. ಲವಕುಶರಿಂದಾಗಿ ರಾಮ ಕಾಡಿಗೆ ಬರುವಂತಾಯಿತು. ಅವನಿಗೆ ಲವಕುಶರು ತಮ್ಮ ಮಕ್ಕಳೆಂಬುದು ತಿಳಿಯಿತು. ಆಗ ರಾಮ ಸೀತೆಯನ್ನು ನೋಡಲು ಬಯಸಿ ಅವಳ ಕುಟೀರಕ್ಕೆ ಬಂದಾಗ ಒಮ್ಮೆಲೇ ಭೂಮಿ ಬೀರಿಯಿತು. ಭೂಮಿಯಿಂದ ಬಂದ ಸೀತೆ ಮತ್ತೆ ಭೂಮಿ ಸೇರಿದಳು...
ಒಂದಿನ ಮಾನವನೊಬ್ಬ ಸೌದೆ ತರಲು ಕಾಡಿಗೆ ಹೋದ. ಒಂದು ದೊಡ್ಡ ಮರವನ್ನು ಹುಡುಕಿ, ಅದರ ಕೊಂಬೆಗೆ ತನ್ನ ಹರಿತವಾದ ಕೊಡಲಿಯನ್ನು ಬೀಸಿದ. ಮರುಕ್ಷಣವೇ ಆ ಮರವು ಕಣ್ಣೀರಾಕುತ್ತಾ, "ಅಯ್ಯೋ ಪರಿಸರ ಮಾತೆ ಈ ಬುದ್ಧಿಯಿಲ್ಲದ, ಉಪಕಾರವರಿಯದ ಮನುಷ್ಯನನ್ನು ಕ್ಷಮಿಸಿ, ರಕ್ಷಿಸು ತಾಯಿ" ಎಂದು ಕೀರುಚಿತು. ಆಗ ಎಚ್ಚೆತ್ತ ಮಾನವ ಮರದೊಂದಿಗೆ ಮಮಕಾರದ ಮಾತುಗಳನ್ನು ಪ್ರಾರಂಭಿಸಿದನು.
ಗೆಳೆಯರೇ ನಿಸರ್ಗವನ್ನು ಪ್ರೀತಿಸಿ ಮತ್ತು ರಕ್ಷಿಸಿ. ಆದರೆ ಮೋಹಿಸಬೇಡಿ. ಇವತ್ತು ನೀವು ನಿಸರ್ಗವನ್ನು ಸರ್ವನಾಶ ಮಾಡಿದರೆ, ಮುಂದೊಂದು ದಿನ ಬದುಕಿರುವಾಗಲೇ ನರಕವನ್ನು ನೋಡಬೇಕಾಗುತ್ತದೆ. ಎಲ್ಲೆಡೆ ಆಮ್ಲಜನಕದ ಟ್ಯಾಂಕಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಈಗಲೇ ಎಚ್ಚೆತ್ತುಕೊಳ್ಳಿ... ನಿಸರ್ಗವನ್ನು ಪ್ರೀತಿಸಿ, ಪೂಜಿಸಿ ಮತ್ತು ಸಂರಕ್ಷಿಸಿ...
ಕನ್ನಡ ಕಥೆ ಪುಸ್ತಕಗಳು - Kannada Story Books
Note: This article is coming out in the form of Animated Short Movie. For more updates keep in touch with Roaring Creations/YouTube.

ನನ್ನ ಜೀವನದಲ್ಲಿ ಸದ್ಯಕ್ಕೆ ಹೇಳಿಕೊಳ್ಳುವಂಥ ದೊಡ್ಡ ವಿಷಯಗಳೇನು ಆಗಿಲ್ಲ. ಆದರೆ ಆಗುತ್ತಿರುವುದೆಲ್ಲವು ವಿಶೇಷವಾಗಿವೆ. ನನಗೆ ನಿಮ್ಮಂತೆ ಹತ್ತಾರು ಜನ ಗೆಳೆಯರಿಲ್ಲ. ನನಗೆ ಇರುವುದು ಇಬ್ಬರೇ ಗೆಳೆಯರು. ಅವರಲ್ಲಿ ಒಂದು ನನ್ನ ಲೇಖನಿಯಾದರೆ, ಮತ್ತೊಂದು ಅವಳು. ಅವಳಿಗೂ ಅಷ್ಟೇ..! ಅವಳಿಗೆ ಅವಳ ಕ್ಯಾಮೆರಾವನ್ನು ಬಿಟ್ಟರೆ ನಾನೊಬ್ಬನೇ ಗೆಳೆಯ. ನಿನ್ನೆ ನಮ್ಮಿಬ್ಬರ ಕಣ್ಣಿಗೆ ಬಸ್ಸಲ್ಲಿ ಬಿಸಲೇರಿ ವಾಟರ್ ಬಾಟಲಗಳನ್ನು ಮಾರುತ್ತಿರುವ ೬೫ ವಯಸ್ಸಿನ ಒಬ್ಬಳು ಹಣ್ಣಾದ ಮುದುಕಿ ಕಾಣಿಸಿದಳು. ಅವಳನ್ನು ನೋಡಿದಾಗ ನನ್ನವಳ ಕಣ್ಣ೦ಚಲ್ಲಿ ಕಣ್ಣೀರು ಕಾಲು ಚಾಚಿತು.
19) ಚಂದ್ರನ ಪ್ರೇಮಕಥೆ : Love Story of Chandra in Kannada
ಬ್ರಹ್ಮನ ಮಗನಾದ ಅತ್ರಿಮುನಿಯ ಕಣ್ಣುಗಳಿಂದ ಹಾಲಿನಂಥ ಮೈಬಣ್ಣ ಹೊಂದಿದ ಚಂದ್ರ ಜನಿಸಿದನು. ಆತ ಪರಾಕ್ರಮಿಯಾಗಿರುವುದರಿಂದ ಬ್ರಹ್ಮ ಚಂದ್ರನನ್ನು ಗ್ರಹಗಳ ಹಾಗೂ ನಕ್ಷತ್ರಗಳ ರಾಜನನ್ನಾಗಿ ನೇಮಿಸಿದನು. ಆದರೆ ಪರಾಕ್ರಮಿಯಾದ ಚಂದ್ರ ಮೂರು ಲೋಕಗಳನ್ನು ಜಯಿಸಿ ರಾಜಸೂಯ ಯಾಗವನ್ನು ಮಾಡಿದನು. ಮೂರು ಲೋಕಗಳ ಮೇಲೆ ಹಿಡಿತ ಸಾಧಿಸಿರುವುದರಿಂದ ಚಂದ್ರನಲ್ಲಿ ಒಣ ಅಹಂಕಾರ ಹೆಚ್ಚಾಗಿತ್ತು. ತನ್ನ ಪರಾಕ್ರಮಕ್ಕೆ ಸರಿಸಾಟಿಯಾದವರು ಯಾರಿಲ್ಲವೆಂದು ಆತ ಮೆರೆಯುತ್ತಿದ್ದನು. ಅಲ್ಲದೇ ಚಂದ್ರನಲ್ಲಿ ಪ್ರೇಮ ಕಾಮಗಳ ಪ್ರಖರತೆ ಮೊದಲಿನಿಂದಲೂ ಅತ್ಯಧಿಕವಾಗಿತ್ತು. ಆತನ ಹೊಳೆಯುವ ಕಂಗಳು, ಹಾಲಿನಂಥ ಮೈಬಣ್ಣ, ಕ್ಷಾತ್ರ ತೇಜಸ್ಸಿಗೆ ಯಾವ ಸ್ತ್ರೀಯಾದರೂ ಸುಲಭವಾಗಿ ಸೋಲುತ್ತಿದ್ದಳು. ಆತ 27 ನಕ್ಷತ್ರಗಳನ್ನು ವಿವಾಹವಾದನು. 27 ಜನ ಮಡದಿಯರಲ್ಲಿ ರೋಹಿನಿ ಅವನಿಗೆ ಹೆಚ್ಚು ಮುದ್ದಿನವಳಾಗಿದ್ದಳು.
ದಿನ ಕಳೆದಂತೆ ಚಂದ್ರನ ಅಹಂಕಾರ ಹೆಚ್ಚಾಗುತ್ತಲೇ ಹೋಯಿತು. ಆತ ದೇವತೆಗಳ ಗುರುವಾದ ಬ್ರಹಸ್ಪತಿಯ ಹೆಂಡತಿ ತಾರೆಯ ಮೇಲೆ ಮೋಹಿತನಾದನು. ಅವಳಂದಕ್ಕೆ ಆಕರ್ಷಿತನಾಗಿ ಆತ ಅವಳನ್ನು ಹುಚ್ಚನಂತೆ ಪ್ರೀತಿಸಲು ಪ್ರಾರಂಭಿಸಿದನು. ತನ್ನ ಪರಾಕ್ರಮಕ್ಕೆ ಸರಿಸಾಟಿಯಾದವರು ಈ ಮೂರು ಲೋಕಗಳಲ್ಲಿ ಯಾರು ಇಲ್ಲ ಎಂಬ ಮೊಂಡು ಧೈರ್ಯದ ಮೇಲೆ ಚಂದ್ರ ತಾರೆಯನ್ನು ಬಲವಂತವಾಗಿ ಹೊತ್ತುಕೊಂಡು ಹೋದನು. ಬ್ರಹಸ್ಪತಿ ನಾನಾ ರೀತಿಯಲ್ಲಿ ತನ್ನ ಹೆಂಡತಿಯನ್ನು ಮರಳಿ ಕೊಡುವಂತೆ ಎಷ್ಟೇ ಕೇಳಿಕೊಂಡರು ಸಹ ಚಂದ್ರ ತಾರೆಯನ್ನು ಬಿಟ್ಟು ಕೊಡಲಿಲ್ಲ. ಆತ ತಾರೆಯನ್ನು ತನ್ನ ವಶದಲ್ಲೇ ಇಟ್ಟುಕೊಂಡನು. ಇದರಿಂದಾಗಿ ಗುರು ಮತ್ತು ಚಂದ್ರರ ನಡುವೆ ವೈಷಮ್ಯ ಬೆಳೆಯಿತು. ಶಿವನ ಸಹಿತ ದೇವತೆಗಳೆಲ್ಲರು ಗುರುವಿನ ಬೆಂಬಲಕ್ಕೆ ನಿಂತರು. ತಮ್ಮ ಗುರು ಶುಕ್ರಾಚಾರ್ಯರೊಂದಿಗೆ ರಾಕ್ಷಸರೆಲ್ಲ ಚಂದ್ರನ ಬೆಂಬಲಕ್ಕೆ ನಿಂತರು.
ತಾರೆಗಾಗಿ ಗುರು ಹಾಗೂ ಚಂದ್ರನ ನೇತ್ರತ್ವದಲ್ಲಿ ದೇವ ದಾನವರ ನಡುವೆ ಭಯಂಕರ ಯುದ್ಧ ಪ್ರಾರಂಭವಾಯಿತು. ಈ ಯುದ್ಧದ ಭೀಕರ ಪರಿಣಾಮವನ್ನು ನೋಡಲಾಗದೆ ಗುರುವಿನ ತಂದೆಯಾದ ಅಂಗೀರಸ ಮುನಿಗಳು ಬ್ರಹ್ಮನ ಬಳಿ ಹೋಗಿ ಹೇಗಾದರೂ ಮಾಡಿ ದೇವ ದಾನವರ ಯುದ್ಧವನ್ನು ನಿಲ್ಲಿಸಲು ಸೂಚಿಸಿದನು. ಆಗ ಸ್ವತಃ ಬ್ರಹ್ಮನೇ ಖುದ್ದಾಗಿ ಯುದ್ಧಭೂಮಿಗೆ ಬಂದು ಚಂದ್ರನಿಗೆ ಧಿಕ್ಕಾರ ಹಾಕಿ ತಾರೆಯನ್ನು ಬ್ರಹಸ್ಪತಿಯ ವಶಕ್ಕೆ ಒಪ್ಪಿಸಿದನು. ಆದರೆ ಅಷ್ಟೊತ್ತಿಗೆ ತಾರೆ ಗರ್ಭವತಿಯಾಗಿದ್ದಳು. ಈ ವಿಷಯ ತಿಳಿದು ಗುರು ಕೆರಳಿ ಕೆಂಡಾಮಂಡಲವಾದನು. "ನೀನು ಈ ಕ್ಷಣವೇ ಗರ್ಭಪಾತ ಮಾಡಿಕೋ ಇಲ್ಲವಾದರೆ ನಿನ್ನನ್ನು ಸುಟ್ಟು ಬಿಡುವೆ..." ಎಂದು ಗುರು ಗುಡುಗಿದನು. ಆದರೆ ಸ್ವಲ್ಪ ಸಮಯದ ನಂತರ ಗುರುವಿನ ಕೋಪ ತಣ್ಣಗಾದಾಗ "ಗಂಡು ಮಗುವಾದರೆ ನಿನ್ನನ್ನು ಕ್ಷಮಿಸುವೆ..." ಎಂದೇಳಿ ಶಾಂತನಾದನು.
ಗುರುವಿನ ಕೋಪವೇನೋ ತಣ್ಣಗಾಯಿತು. ಆದರೆ ಸ್ವಾಭಿಮಾನಿಯಾದ ತಾರೆ ತಾನು ಪವಿತ್ರಳೆಂದು ಸಾರಲು ತನ್ನ ಗರ್ಭವನ್ನು ಕಳಚಿ ಹಾಕಿದಳು. ಅವಳ ಗರ್ಭದಿಂದ ಹೊರಬಿದ್ದ ಮಗು ಚಂದ್ರನಂತೆ ಹೊಳೆಯುತ್ತಿತ್ತು. ಬೆಳ್ಳಿಯಂತೆ ಹೊಳೆಯುತ್ತಿರುವ ಮಗು ತಮಗೇ ಬೇಕೆಂದು ಚಂದ್ರ ಮತ್ತು ಗುರು ಇಬ್ಬರು ಕಿತ್ತಾಡಲು ಪ್ರಾರಂಭಿಸಿದರು. ಅವರಿಬ್ಬರಲ್ಲಿ ಮತ್ತೆ ಕದನ ಶುರುವಾಯಿತು. ಚಂದ್ರ ಹಾಗೂ ಗುರುಗಳ ಕಾದಾಟವನ್ನು ಬಿಡಿಸುವ ಬದಲು ಅಲ್ಲಿದ್ದ ದೇವ ದಾನವರೆಲ್ಲರೂ ಆ ಮಗುವಿನ ನಿಜವಾದ ತಂದೆ ಯಾರೆಂದು ಕೇಳತೊಡಗಿದರು. ಆದರೆ ತಾರೆ ನಾಚಿಕೆಯಿಂದ ತಲೆ ತಗ್ಗಿಸಿ ಸುಮ್ಮನೆ ನಿಂತಳು. ಅವರೆಲ್ಲ ಪದೇಪದೇ ಆ ಮಗುವಿನ ತಂದೆ ಯಾರೆಂದು ಚುಚ್ಚಿ ಚುಚ್ಚಿ ಕೇಳಿದಾಗ ತಾರೆ ಅಳತೊಡಗಿದಳು. ಆಗ ಬ್ರಹ್ಮ ಅವಳನ್ನು ಸಮಾಧಾನಿಸಿ ಅದೇ ಪ್ರಶ್ನೆಯನ್ನು ಕೇಳಿದಾಗ ತಾರೆ ನಾಚಿಕೆಯಿಂದ ಸುಮ್ಮನಾದಳು.
ತಾರೆಯ ಮಹಾಮೌನ ಎಲ್ಲರನ್ನೂ ಚಿಂತೆಗೀಡು ಮಾಡಿತ್ತು. ಆಗ ಆಗತಾನೇ ಜನಿಸಿದ ಮಗು ತಾರೆಗೆ "ಏ ನಡತೆ ಗೆಟ್ಟವಳೇ, ನಡೆದಿರುವುದನ್ನು ನಡೆದಂತೆ ಹೇಳು. ಯಾಕೆ ಸುಮ್ಮನಿರುವೆ?" ಎಂದು ಗದರಿಸಿತು. ಆ ಮಗುವಿನ ಮಾತಿನಿಂದ ತಾರೆಗೆ ಕೋಪ ಉಕ್ಕಿ ಬಂತು. ಆಗ ತಾರೆ ಕೋಪದಲ್ಲಿ ಚಂದ್ರನೇ ಆ ಮಗುವಿನ ತಂದೆ ಎಂದೇಳಿ ತನ್ನ ತಪ್ಪನ್ನು ಒಪ್ಪಿಕೊಂಡಳು. ತಾರೆ ಚಂದ್ರನ ಪ್ರೇಮ ಬಾಣಗಳಿಗೆ ವಿರುದ್ಧವಾಗಿ ಹೋರಾಡಲಾಗದೆ ತನ್ನ ಮೈಯೊಪ್ಪಿಸಿ ಶರಣಾಗಿದ್ದಳು. ಕೊನೆಗೆ ಬ್ರಹ್ಮ, ತಾರೆ ಮತ್ತು ಚಂದ್ರನೇ ಆ ಬುದ್ಧಿವಂತ ಮಗುವಿನ ಜನಕರೆಂದು ಸಾರಿದನು. ನಂತರ ಆ ಬುದ್ಧಿವಂತ ಮಗುವಿಗೆ ಬುಧನೆಂದು ಹೆಸರಿಟ್ಟರು. ಮುಂದೆ ತಾರೆ ನಡೆದಿದ್ದನ್ನೆಲ್ಲ ಮರೆತು ಗಂಡನಾದ ಬ್ರಹಸ್ಪತಿಯ ಸೇವೆ ಮಾಡಿ ಪತಿವ್ರತೆ ಎಂಬ ಹೆಸರನ್ನು ಸಂಪಾದಿಸಿದಳು. ಆದರೆ 27 ಹೆಂಡತಿಯರ ಗಂಡನಾದ ಚಂದ್ರ ತಾರೆಯಿಲ್ಲದೆ ವಿರಹಿಯಾಗಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಲು ಪ್ರಾರಂಭಿಸಿದನು....
ಇದಿಷ್ಟು ನಮ್ಮ ಹಿಂದು ಪುರಾಣಗಳಲ್ಲಿ ಉಲ್ಲೇಖವಾಗಿರುವ ಚಂದ್ರನ ಪ್ರೇಮಕಥೆ. ಈ ಕಥೆ ನಿಮಗಿಷ್ಟವಾಗಿದ್ದರೆ ಇದನ್ನು ಶೇರ್ ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ...
20) ಪಂಚ ಪತಿವ್ರತೆಯರ ಕಥೆಗಳು - Stories of Panch Pativruta in Kannada
ನಮ್ಮ ಹಿಂದು ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಅಸಂಖ್ಯ ರೋಚಕ ಕಥೆಗಳಿವೆ. ಇವೆರಡು ಗ್ರಂಥಗಳು ಯಾವುದೇ ಕಮರ್ಷಿಯಲ್ ಮೂವಿಗೆ ಕಮ್ಮಿಯಿಲ್ಲ. ಒಂದು ಮನರಂಜನಾತ್ಮಕ ಮೂವಿಯಲ್ಲಿರಬೇಕಾದ ಎಲ್ಲ ಮಸಾಲೆ ಪದಾರ್ಥಗಳು ಇವೆರಡು ಗ್ರಂಥಗಳಲ್ಲಿವೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಪತಿ ಸೇವೆ ಮಾಡಿ ಪ್ರಖ್ಯಾತಿ ಪಡೆದ ಐವರು ಪವಿತ್ರ ಸ್ತ್ರೀಯರನ್ನು ಪತಿವ್ರತೆಯರೆಂದು ಪಟ್ಟಿ ಮಾಡಿದ್ದಾರೆ. ಸೀತಾ, ಮಂಡೋದರಿ, ದ್ರೌಪದಿ, ತಾರಾ ಮತ್ತು ಅಹಲ್ಯ ಇವರೇ ಆ ಪಂಚ ಪತಿವ್ರತೆಯರು. ಅವರ ಕಥೆಗಳು ಸಂಕ್ಷಿಪ್ತ ರೂಪದಲ್ಲಿ ಇಲ್ಲಿವೆ :
೧) ಸೀತೆಯ ಕಥೆ :
ರಾಕ್ಷಸರ ರಾಜ ರಾವಣನ ಅತ್ಯಾಚಾರಗಳು ಅಧಿಕವಾಗುತ್ತಾ ಸಾಗಿದ್ದವು. ಆತ ಒಮ್ಮೆ ಮಹಾವಿಷ್ಣುವಿನ ಪರಮಭಕ್ತೆಯಾದ ವೇದವತಿಯನ್ನು ಬಲವಂತವಾಗಿ ಬಳಸಿಕೊಳ್ಳಲು ಮುಂದಾಗಿ ಅವಳನ್ನು ಅತಿಯಾಗಿ ಗೋಳಿಡಿದುಕೊಂಡು ತನ್ನಾಸೆಯನ್ನು ತೀರಿಸಿಕೊಂಡನು. ಅವನ ಅತ್ಯಾಚಾರವನ್ನು ಕಂಡು ಕೋಪಗೊಂಡ ಲಕ್ಷ್ಮೀದೇವಿ ರಾವಣನ ಅಂತ್ಯಕ್ಕೆ ಮುಂದಾದಳು. ಆದರೆ ಮಹಾವಿಷ್ಣು ಬ್ರಹ್ಮನಿಂದ ಈಗಾಗಲೇ ಸಿದ್ಧವಾದ ರಾವಣನ ಅಂತ್ಯದ ಯೋಜನೆಯನ್ನು ವಿವರಿಸಿದನು. ಆ ಯೋಜನೆಯ ಅನುಸಾರವಾಗಿ ಮಹಾವಿಷ್ಣು ರಾಮನ ಅವತಾರದಲ್ಲಿ ಭೂಮಿಗೆ ಬಂದನು. ಅದೇ ರೀತಿ ಲಕ್ಷ್ಮೀದೇವಿ ಸೀತೆಯ ಅವತಾರದಲ್ಲಿ ಭೂಮಿಗೆ ಬಂದಳು.
ವೇದವತಿ ತನ್ನ ಮೇಲೆ ಅತ್ಯಾಚಾರವೆಸಗಿದ ರಾವಣನಿಗೆ ಶಾಪ ನೀಡಿದ್ದಳು. ಅವಳ ಶಾಪವನ್ನು ನಿಜವಾಗಿಸಲು ಮತ್ತು ರಾವಣನ ಅಂತ್ಯಕ್ಕೆ ನಾಂದಿ ಹಾಡಲು ಲಕ್ಷ್ಮೀದೇವಿ ಲಂಕೆಯ ಕೊಳದಲ್ಲಿ ಬಂಗಾರದ ಕಮಲದಲ್ಲಿ ಜನಿಸಿದಳು. ರಾವಣನ ಸಮೇತ ಸಮಸ್ತ ರಾಕ್ಷಸ ಕುಲವನ್ನು ಸರ್ವನಾಶ ಮಾಡಲು ಲಕ್ಷ್ಮೀದೇವಿ ಈ ಅವತಾರವೆತ್ತಿದ್ದಳು. ಈ ವಿಷಯ ತಿಳಿದ ನಂತರ ರಾವಣ ಬಂಗಾರದ ಕಮಲದಲ್ಲಿ ಜನಿಸಿದ ಹೆಣ್ಣು ಮಗುವನ್ನು ಒಂದು ಬಂಗಾರದ ಪೆಟ್ಟಿಗೆಯಲ್ಲಿ ಹಾಕಿ ದೂರ ದೇಶದಲ್ಲಿ ಹೂತು ಬರಲು ಆದೇಶಿಸಿದನು. ಅವನ ಆಜ್ಞೆಯಂತೆ ಅವನ ಸೈನಿಕರು ಆ ಹೆಣ್ಣು ಮಗುವಿರುವ ಪೆಟ್ಟಿಗೆಯನ್ನು ಬೇರೆ ದೇಶದಲ್ಲಿ ಹೂತು ಬಂದರು.
ರಾವಣನ ಸೈನಿಕರು ಹೆಣ್ಣು ಮಗುವಿರುವ ಬಂಗಾರದ ಪೆಟ್ಟಿಗೆಯನ್ನು ಮಿಥಿಲಾ ದೇಶದಲ್ಲಿ ಹೂತು ಬಂದಿದ್ದರು. ಆ ದೇಶದಲ್ಲಿ ಭೀಕರ ಬರಗಾಲ ಬಿದ್ದಿದ್ದರಿಂದ ಆ ದೇಶದ ರಾಜ ಜನಕರಾಜ ಸ್ವತಃ ತಾನೇ ನೇಗಿಲು ಹಿಡಿದು ಉಳುಮೆ ಮಾಡಿ ಯಜ್ಞದ ಸಿದ್ಧತೆಗಳನ್ನು ಮಾಡುತ್ತಿದ್ದನು. ಆ ಸಮಯದಲ್ಲಿ ರಾವಣನ ಸೈನಿಕರು ಹೂತು ಹೋಗಿದ್ದ ಬಂಗಾರದ ಪೆಟ್ಟಿಗೆ ಅವರ ನೇಗಿಲನ್ನು ತಡೆಯಿತು. ಅವರು ಭೂಮಿಯನ್ನು ಅಗೆದಾಗ ಅವರಿಗೆ ಆ ಬಂಗಾರದ ಪೆಟ್ಟಿಗೆ ಸಿಕ್ಕಿತು. ಅದನ್ನು ತೆರೆದು ನೋಡಿದಾಗ ಜನಕ ರಾಜನ ಸಮೇತ ಸರ್ವರು ಆಶ್ಚರ್ಯ ಚಕಿತರಾದರು. ಜನಕರಾಜ ಸಂತಾನಕ್ಕಾಗಿ ಹಲವಾರು ಯಜ್ಞಯಾಗಾದಿಗಳನ್ನು ಮಾಡಿದ್ದನು. ಹೀಗಾಗಿ ಆತ ಭೂಮಿಯಲ್ಲಿ ಸಿಕ್ಕ ಹೆಣ್ಣು ಮಗುವನ್ನು ಪ್ರೀತಿಯಿಂದ ಎತ್ತಿಕೊಂಡು ತನ್ನ ಮಗಳಂತೆ ಸ್ವೀಕರಿಸಲು ನಿರ್ಧರಿಸಿದನು. ಜನಕರಾಜ ಹಾಗೂ ಅವನ ಮಡದಿ ಸುನೈನಾಳ ಸಾಕು ಮಗಳೇ ಸೀತೆಯಾದಳು. ಅವಳನ್ನು ಜಾನಕಿಯೆಂತಲೂ ಕರೆಯುತ್ತಾರೆ.
ಒಂದಿನ ಜನಕರಾಜ ತಮ್ಮ ಕುಲಗುರು ವಶಿಷ್ಟರೊಂದಿಗೆ ಆಪ್ತ ಸಮಾಲೋಚನೆಯಲ್ಲಿದ್ದಾಗ ಸೀತೆ ಸುಲಭವಾಗಿ ಶಿವ ಧನಸ್ಸನ್ನು ಎತ್ತಿ ಆಟವಾಡುತ್ತಿದ್ದಳು. ಇದನ್ನು ಗಮನಿಸಿದ ವಶಿಷ್ಟರು ಸೀತೆ ಸಾಮಾನ್ಯದವಳಲ್ಲ, ಅವಳು ದೈವಮಾನವಳು ಎಂಬ ಸತ್ಯವನ್ನು ವಿವರಿಸಿ ಆ ಶಿವಧನಸ್ಸನ್ನು ಎತ್ತಿ ಮೀಟಿದ ಶೂರನೊಂದಿಗೆ ಅವಳ ವಿವಾಹ ಮಾಡು ಎಂದು ಜನಕರಾಜನಿಗೆ ಹೇಳಿದರು. ಅದೇ ರೀತಿ ಜನಕರಾಜ ಸೀತೆ ತಾರುಣ್ಯಕ್ಕೆ ತಲುಪಿದಾಗ ಅವಳ ಸ್ವಯಂವರ ಏರ್ಪಡಿಸಿದನು. ಶ್ರೀರಾಮಚಂದ್ರ ಆ ಸ್ವಯಂವರದಲ್ಲಿ ಭಾಗವಹಿಸಿ ಆ ಬಲಿಷ್ಟವಾದ ಶಿವಧನಸ್ಸನ್ನು ಹೆದೆಯೇರಿಸಿ ಸೀತೆಯನ್ನು ವಿವಾಹವಾದನು.
ರಾಮನನ್ನು ಮದುವೆಯಾಗಿ ಸೀತೆ ನೂರಾರು ಕನಸುಗಳನ್ನು ಹೊತ್ತು ಅಯೋಧ್ಯೆಗೆ ಬಂದಳು. ಆದರೆ ಮಂಥರೆಯ ಮಾತು ಕೇಳಿ ಕೈಕೆ ದಶರಥನಿಗೆ ಕೇಳಿದ ವರದಿಂದಾಗಿ ರಾಮ ಪಟ್ಟದ ರಾಜನಾಗುವ ಬದಲು ಕಾಡು ಸೇರಬೇಕಾಯಿತು. ಆದರೂ ಸೀತೆ ಖುಷಿಯಿಂದ 14 ವರ್ಷ ವನವಾಸವನ್ನು ಅನುಭವಿಸಲು ಅವನೊಂದಿಗೆ ಹೆಜ್ಜೆ ಹಾಕಿದಳು. ಆದರೆ ರಾವಣನಿಂದ ಅಪಹರಿತಳಾಗಿ ಲಂಕೆಯ ಅಶೋಕ ವನ ಸೇರಿದಳು. ಮುಂದೆ ರಾಮ ವಾನರ ಸೈನ್ಯದೊಂದಿಗೆ ಲಂಕೆಗೆ ಬಂದು ರಾವಣನನ್ನು ಸಂಹರಿಸಿ ಅವಳನ್ನು ಬಂಧಮುಕ್ತಗೊಳಿಸಿದನು. ಸೀತೆ ರಾಮನನ್ನು ಸೇರಲು ಹಂಬಲಿಸುತ್ತಿದ್ದಳು. ಆದರೆ ರಾಮ ಅವಳ ಚಾರಿತ್ರ್ಯದ ಮೇಲೆ ಸವಾಲಗಳು ಏಳಬಾರದು ಎಂಬ ಕಾರಣಕ್ಕೆ ಅವಳನ್ನು ಅಗ್ನಿ ಪರೀಕ್ಷೆಗೆ ನೂಕಿದನು. ಸಹನಾಮಯಿ, ಸದ್ಗುಣಿ ಸೀತೆ ಆ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದು ರಾಮನ ತೋಳು ಸೇರಿದಳು.
14 ವರ್ಷ ವನವಾಸ ಮುಗಿಸಿ ಸೀತೆ ರಾಮನೊಂದಿಗೆ ಮತ್ತೆ ಅಯೋಧ್ಯೆ ಸೇರಿದಳು. ಈಗಲಾದರೂ ಸೀತೆಗೆ ಸಂತೋಷದ ಕ್ಷಣಗಳು ಸಿಕ್ಕವು ಎಂದೆನ್ನುವಷ್ಟರಲ್ಲಿ ವಿಧಿ ಮತ್ತೆ ಅವಳ ಬಾಳಲ್ಲಿ ಆಟವಾಡಿತು. ಲೋಕ ನಿಂದನೆಯನ್ನು ಕೇಳಲಾಗದೆ ರಾಮ ಮತ್ತೆ ಸೀತೆಯನ್ನು ಕಾಡು ಪಾಲು ಮಾಡಿದನು. ಸೀತೆ ಮತ್ತೆ ವನವಾಸವನ್ನು ಅನುಭವಿಸುವಂತಾಯಿತು. ರಾಮ ಅವಳನ್ನು ಕಾಡಿಗಟ್ಟಿದಾಗ ಅವಳು ಗರ್ಭಿಣಿಯಾಗಿದ್ದಳು. ಅವಳು ವಾಲ್ಮೀಕಿ ಮಹರ್ಷಿಯ ಆಶ್ರಮದಲ್ಲಿ ಆಶ್ರಯ ಪಡೆದಳು. ಅವಳಿಗೆ ಲವಕುಶ ಎಂಬ ಮಕ್ಕಳಾದರು. ಲವಕುಶರು ಬಾಲ್ಯದಲ್ಲಿಯೇ ಬಿಲ್ವಿದ್ಯೆಯನ್ನು ಕಲಿತು ಮಹಾನ್ ಪರಾಕ್ರಮಿಗಳಾದರು.
ಶ್ರೀರಾಮಚಂದ್ರ ಅಶ್ವಮೇಧಯಾಗ ಮಾಡಲು ಒಂದು ಕುದುರೆಯನ್ನು ಬಿಟ್ಟಿದ್ದನು. ಆ ಕುದುರೆಗೆ ನಮಸ್ಕರಿಸಿ ಎಲ್ಲ ರಾಜರು ಕಪ್ಪು ಕಾಣಿಕೆಗಳನ್ನು ಕೊಟ್ಟು ರಾಮನಿಗೆ ಶರಣಾಗಿದ್ದರು. ಆದರೆ ಲವಕುಶರು ರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿದರು. ಸೀತೆ ಆ ಕುದುರೆಯನ್ನು ಬಿಡಲು ಹೇಳಿದರೂ ಸಹ ಅವರು ಬಿಡಲಿಲ್ಲ. ಆ ಕುದುರೆಯನ್ನು ಬಿಡಿಸಿಕೊಳ್ಳಲು ಬಂದ ಭರತ ಶತ್ರುಘ್ನರು ಲವಕುಶರಂಥ ಬಾಲಕರಿಂದ ಸೋತಾಗ ಸ್ವತಃ ರಾಮನೇ ಅಶ್ವಮೇಧಯಾಗದ ಕುದುರೆಯನ್ನು ಬಿಡಿಸಿಕೊಳ್ಳಲು ಬರಬೇಕಾಯಿತು. ತಂದೆ ಹಾಗೂ ಮಕ್ಕಳ ಯುದ್ಧವನ್ನು ನೋಡುವಷ್ಟು ಗಟ್ಟಿ ಗುಂಡಿಗೆ ಸೀತೆಗೆ ಇರಲಿಲ್ಲ. ಲವಕುಶರಿಂದಾಗಿ ರಾಮ ಕಾಡಿಗೆ ಬರುವಂತಾಯಿತು. ಅವನಿಗೆ ಲವಕುಶರು ತಮ್ಮ ಮಕ್ಕಳೆಂಬುದು ತಿಳಿಯಿತು. ಆಗ ರಾಮ ಸೀತೆಯನ್ನು ನೋಡಲು ಬಯಸಿ ಅವಳ ಕುಟೀರಕ್ಕೆ ಬಂದಾಗ ಒಮ್ಮೆಲೇ ಭೂಮಿ ಬೀರಿಯಿತು. ಭೂಮಿಯಿಂದ ಬಂದ ಸೀತೆ ಮತ್ತೆ ಭೂಮಿ ಸೇರಿದಳು...
೨) ದ್ರೌಪದಿಯ ಕಥೆ :
ರಾಜಾ ದ್ರುಪದನು ದ್ರೋಣಾಚಾರ್ಯರನ್ನು ಅವಮಾನಿಸಿ ದೊಡ್ಡ ಯಡವಟ್ಟನ್ನು ಮಾಡಿಕೊಂಡಿದ್ದನು. ಅದಕ್ಕಾಗಿ ಗುರು ದ್ರೋಣಾಚಾರ್ಯರು ದ್ರುಪದ ರಾಜನ ಮೇಲೆ ಸೇಡು ತೀರಿಸಿಕೊಳ್ಳಲು ಸದಾ ಕಾಯುತ್ತಿದ್ದರು. ಅದೇ ಸಮಯದಲ್ಲಿ ಶಿಕ್ಷಣ ಪೂರ್ಣವಾದ ಮೇಲೆ ಕೌರವರು ಮತ್ತು ಪಾಂಡವರು ಗುರು ದ್ರೋಣಾಚಾರ್ಯರಿಗೆ "ಏನು ಗುರುದಕ್ಷಿಣೆ ಕೊಡಬೇಕೆಂದು" ಕೇಳಿದರು. ಆಗವರು "ರಾಜಾ ದ್ರುಪದನನ್ನು ಹೆಡೆಮೂರಿ ಕಟ್ಟಿ ನನ್ನ ಬಳಿಗೆ ತನ್ನಿ, ಅದೇ ನೀವು ಕೊಡುವ ಗುರುದಕ್ಷಿಣೆ..." ಎಂದು ಹೇಳಿದರು. ಆಗ ಕೌರವರು ದ್ರುಪದ ರಾಜನನ್ನು ಹಿಡಿಯಲು ಪ್ರಯತ್ನಿಸಿ ವಿಫಲರಾದರು. ಆದರೆ ಪಾಂಡವರು ಅವನೊಂದಿಗೆ ಹೋರಾಡಿ ದ್ರುಪದರಾಜನನ್ನು ಹೇಡೆಮೂರಿ ಕಟ್ಟಿಕೊಂಡು ಕರೆ ತಂದರು. ಆಗ ಗುರು ದ್ರೋಣಾಚಾರ್ಯರು ತಮ್ಮ ಅಪಮಾನದ ಬದಲಾಗಿ ದ್ರುಪದನ ಅರ್ಧ ರಾಜ್ಯವನ್ನು ಕಿತ್ತುಕೊಂಡು ಕಳುಹಿಸಿ ತಮ್ಮ ಸೇಡನ್ನು ತೀರಿಸಿಕೊಂಡರು.
ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವ ಬದಲು ರಾಜಾ ದ್ರುಪದ ಅರ್ಧ ರಾಜ್ಯವನ್ನು ಕಿತ್ತುಕೊಂಡ ದ್ರೋಣಾಚಾರ್ಯರ ಮೇಲೆ ಹಲ್ಲು ಕಡೆಯಲು ಪ್ರಾರಂಭಿಸಿದನು. ಹೇಗಾದರೂ ಮಾಡಿ ಮತ್ತೆ ಗುರು ದ್ರೋಣಾಚಾರ್ಯರನ್ನು ಅವಮಾನಕ್ಕೀಡು ಮಾಡಬೇಕು, ಅವರಿಂದ ಮತ್ತೆ ತನ್ನ ಅರ್ಧ ರಾಜ್ಯವನ್ನು ಕಿತ್ತುಕೊಳ್ಳಬೇಕು ಎಂದು ಕುದಿಯತೊಡಗಿದನು. ಅದಕ್ಕಾಗಿ ಆತ ಮತ್ತಷ್ಟು ಬಲಿಷ್ಟನಾಗಲು ಯಜ್ಞ ಯಾಗಾದಿಗಳನ್ನು ಮಾಡಿದನು. ಜೊತೆಗೆ ಅಗ್ನಿದೇವನನ್ನು ಒಲಿಸಿಕೊಳ್ಳುವುದಕ್ಕಾಗಿ ಒಂದು ದೊಡ್ಡ ಹೋಮವನ್ನು ಆಯೋಜಿಸಿದನು. ಆಗ ಮೊದಲು ಆ ಹೋಮಕುಂಡದಿಂದ ಪರಾಕ್ರಮಶಾಲಿಯಾದ ದುಷ್ಟದುಮ್ನ ಹೊರ ಬಂದನು. ನಂತರ ಅದೇ ಹೋಮಕುಂಡದಿಂದ ಕಮಲ ನೇತ್ರದ, ಚಂದ್ರನ ಮೈಬಣ್ಣ ಹೊಂದಿದ ಸುಂದರಿ ಕ್ರಷ್ಣೆ ಹೊರ ಬಂದಳು. ಅವಳ ಸೌಂದರ್ಯ ಎಲ್ಲರನ್ನೂ ಆಯಸ್ಕಾಂತದಂತೆ ಸೆಳೆಯುತ್ತಿತ್ತು. ಆ ಕ್ರಷ್ಣೆಯೇ ಮುಂದೆ ದ್ರೌಪದಿಯೆಂದು ಹೆಸರುವಾಸಿಯಾದಳು.
ದ್ರೌಪದಿ ದೊಡ್ಡವಳಾದಾಗ ದ್ರುಪದ ರಾಜ ಅವಳ ಸ್ವಯಂವರವನ್ನು ಏರ್ಪಡಿಸಿದನು. ದ್ರೌಪದಿ ಕರ್ಣನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಸೂತಪುತ್ರನೆಂಬ ಅಪವಾದದಿಂದಾಗಿ ಅವನಿಗೆ ಸ್ವಯಂವರದಲ್ಲಿ ಭಾಗವಹಿಸುವ ಅವಕಾಶ ಸಿಗಲಿಲ್ಲ. ಅದೇ ಸಂದರ್ಭದಲ್ಲಿ ಅಜ್ಞಾತ ವಾಸದಲ್ಲಿದ್ದ ಪಾಂಡವರು ಅವಳ ಸ್ವಯಂವರದಲ್ಲಿ ಭಾಗವಹಿಸಿದರು. ಅರ್ಜುನ ಕೆಳಗಿಟ್ಟಿರುವ ತೈಲದಲ್ಲಿ ನೋಡಿ ಮೇಲೆ ತಿರುಗುತ್ತಿರುವ ಮೀನಿನ ಕಣ್ಣಿಗೆ ಗುರಿಯಿಟ್ಟು ಹೊಡೆದು ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದನು. ನಂತರ ದ್ರೌಪದಿ ಪಾಂಡವರೊಂದಿಗೆ ಕುಂತಿಯನ್ನು ಭೇಟಿಯಾಗಲು ಹೋದಾಗ ಆದ ಒಂದು ಸಣ್ಣ ಯಡವಟ್ಟಿನಿಂದಾಗಿ ಆಕೆ ಪಂಚ ಪಾಂಡವರನ್ನು ಮದುವೆಯಾಗಬೇಕಾಯಿತು. ಅಲ್ಲದೆ ಆಕೆ ಪೂರ್ವ ಜನ್ಮದಲ್ಲಿ ಮಾಡಿದ ಪಾಪದಿಂದಾಗಿ ಆಕೆ ಪಂಚ ಪತಿಯರನ್ನು ಮದುವೆಯಾಗಿ ಪಾಂಚಾಲಿಯಾಗಬೇಕಾಯಿತು. ಪೂರ್ವ ಜನ್ಮದಲ್ಲಿ ಆಕೆ ಸರ್ವಗುಣಗಳಿರುವ ಪತಿ ಬೇಕೆಂದು ಶಿವನನ್ನು ಕುರಿತು ತಪಸ್ಸು ಮಾಡಿದ್ದಳು. ಆದರೆ ಸರ್ವಗುಣಗಳು ಒಬ್ಬನಲ್ಲಿರುವ ಸಾಧ್ಯವಿಲ್ಲ. ಆದ್ದರಿಂದ ಆಕೆ ಸರ್ವಗುಣಗಳನ್ನು ಹೊಂದಿರುವ ಪಂಚ ಪಾಂಡವರ ಪತ್ನಿಯಾಗಬೇಕಾಯಿತು. ಅದಕ್ಕಾಗಿ ಶಿವ ಆಕೆಗೆ ಪವಿತ್ರವಾಗಿದ್ದುಕೊಂಡು ಸಂಸಾರ ಸಾಗಿಸಲು ಶಾಶ್ವತವಾಗಿ ಕಳೆದು ಹೋಗದ ಕನ್ಯತ್ವದ ವರ ನೀಡಿದನು.
ದ್ರೌಪದಿ ಪಂಚ ಪಾಂಡವರ ಮುದ್ದಿನ ಪತ್ನಿಯಾಗಿ ಸಂತೋಷವಾಗಿದ್ದಳು. ಆದರೆ ಆಕೆ ಇಂದ್ರಪ್ರಸ್ಥದ ಅರಮನೆಯಲ್ಲಿ ಅನಾವಶ್ಯಕವಾಗಿ ದುರ್ಯೋಧನನನ್ನು ಕುರುಡು ತಂದೆಯ ಕುರುಡು ಮಗನೆಂದು ಅವಮಾನಿಸಿ ಮಹಾಭಾರತ ಯುದ್ಧಕ್ಕೆ ನಾಂದಿ ಹಾಡಿದಳು. ದ್ರೌಪದಿಯ ಕೊಂಕು ನಗುವಿನಿಂದಾಗಿ ದುರ್ಯೋಧನ ದುಷ್ಟನಾದನು. ಮುಂದೆ ಪಾಂಡವರು ಪಗಡೆಯಾಟದಲ್ಲಿ ಸೋತಾಗ ದುಶ್ಯಾಸನ ತುಂಬಿದ ಸಭೆಯಲ್ಲಿ ಅವಳ ಸೀರೆಯನ್ನು ಸೆಳೆಯಲು ಹೆಣಗಿ ಸೋತನು. ನಂತರ ದ್ರೌಪದಿ ದುಶ್ಯಾಸನನ ಎದೆಬಗೆದ ರಕ್ತವನ್ನು ನೋಡುವ ತನಕ ಮೂಡಿ ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಮಹಾಭಾರತ ಯುದ್ಧಕ್ಕೆ ತುಪ್ಪ ಸುರಿದಳು. ಪಾಂಡವರ ಮತ್ತು ಕೌರವರ ಮಧ್ಯೆ ಇದೇ ರೀತಿ ವೈಷಮ್ಯಗಳು ಮುಂದುವರೆದು ಒಂದಿನ ಕುರುಕ್ಷೇತ್ರದಲ್ಲಿ ಮಹಾಭಾರತ ಯುದ್ಧ ಘೋಷಣೆಯಾಯಿತು. 18 ದಿನ ನಡೆದ ಮಹಾಭಾರತ ಯುದ್ಧದಲ್ಲಿ ಕೌರವರು ಮಣ್ಣು ಪಾಲಾಗಿದ್ದನ್ನು ನೋಡಿ ದ್ರೌಪದಿ ಖುಷಿಪಟ್ಟಳು.
ಮಹಾಭಾರತ ಯುದ್ಧ ಮುಗಿದ ನಂತರ ಕೆಲವು ವರ್ಷಗಳ ಕಾಲ ರಾಜ್ಯಭಾರ ಮಾಡಿ ಪಾಂಡವರು ದೇಹ ಸಮೇತ ಸ್ವರ್ಗಕ್ಕೆ ತೆರಳಲು ಸಿದ್ಧರಾದರು. ಪಾಂಡವರು ಎಲ್ಲ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಸ್ವರ್ಗಕ್ಕೆ ಪ್ರವೇಶಿಸಲು ಕೈಲಾಸ ಪರ್ವತವನ್ನು ಹತ್ತುವಾಗ ಮೊದಲು ದ್ರೌಪದಿಯ ಪ್ರಾಣ ಹೋಯಿತು. ಏಕೆಂದರೆ ಆಕೆ ಪಂಚ ಪತಿಯರಲ್ಲಿ ಅರ್ಜುನನನ್ನು ಹೆಚ್ಚಾಗಿ ಪ್ರೀತಿಸಿದ್ದಳು ಮತ್ತು ಕರ್ಣನನ್ನು ಗುಟ್ಟಾಗಿ ಬಯಸಿದ್ದಳು. ಅಲ್ಲದೆ ಮುತ್ತೈದೆಯಾಗಿ ಸಾಯುವ ಸೌಭಾಗ್ಯ ಬಯಸಿದ್ದರಿಂದ ಯಮ ಮೊದಲು ಆಕೆಯ ಪ್ರಾಣವನ್ನು ತೆಗೆದುಕೊಂಡನು. ಮುಂದೆ ಒಂದೊಂದು ಕಾರಣಗಳಿಗಾಗಿ ಎಲ್ಲರ ಪ್ರಾಣಗಳು ಯಮನಿಗೆ ಆಹುತಿಯಾದವು. ಧರ್ಮರಾಜ ಮಾತ್ರ ದೇಹ ಸಮೇತ ಸ್ವರ್ಗಕ್ಕೆ ಹೋದನು. ಈ ರೀತಿ ದ್ರೌಪದಿಯಿಂದಾಗಿ ಮಹಾಭಾರತ ಯುದ್ಧವಾಗಿ ಎಲ್ಲರಿಗೂ ಒಂದು ಜೀವನ ಪಾಠ ಕಲಿಯುವಂತಾಯಿತು...
೩) ಮಂಡೋದರಿಯ ಕಥೆ :
ಮಧುರಾ ಎಂಬ ಸುಂದರವಾದ ಅಪ್ಸರೆಯಿದ್ದಳು. ಅವಳು ಶಿವನ ಮೇಲೆ ಮೋಹಿತಳಾಗಿ ಶಿವನನ್ನೇ ಮದುವೆಯಾಗುವ ಮನಸ್ಸು ಮಾಡಿದಳು. ಅದಕ್ಕಾಗಿ 16 ಸೋಮವಾರ ವ್ರತವನ್ನು ಮಾಡಿ ಶಿವನನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ಅವಳ ವ್ರತ ಅವಳಿಗೆ ಫಲ ಕೊಡದಿದ್ದಾಗ ಆಕೆ ಕೈಲಾಸ ಪರ್ವತಕ್ಕೆ ಹೋದಳು. ಪಾರ್ವತಿ ಇಲ್ಲದ ಸಮಯವನ್ನು ನೋಡಿಕೊಂಡು ಶಿವನನ್ನು ತನ್ನೆಡೆಗೆ ಸೆಳೆಯಲು ಮುಂದಾದಳು. ಆದರೆ ಅವಳ ದುರಾದೃಷ್ಟಕ್ಕೆ ಪಾರ್ವತಿ ದೇವಿ ಅಲ್ಲಿಗೆ ಬಂದಳು. ತನ್ನ ಗಂಡನನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಮೂರ್ಖ ಅಪ್ಸರೆಯನ್ನು ಕಂಡು ಕೆರಳಿ ಕೆಂಡಾಮಂಡಲವಾದಳು. ಕೋಪದಲ್ಲಿ ಆ ಅಪ್ಸರೆಗೆ ಕಪ್ಪೆಯಾಗಿರುವಂತೆ ಶಾಪವಿಟ್ಟಳು. ಶಿವ ಪಾರ್ವತಿಯ ಕೋಪವನ್ನು ಕಡಿಮೆ ಮಾಡಿ ಅಪ್ಸರೆ ಮಧುರಾಗೆ "ನೀನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟರೆ ನೀನು ಮತ್ತೆ ಮೊದಲಿನಂತೆ ಸುಂದರವಾದ ಹೆಣ್ಣಾಗುವೆ ಮತ್ತು ಅತ್ಯಂತ ಪರಾಕ್ರಮಿಶಾಲಿಯಾದ ರಾಜನನ್ನು ಮದುವೆಯಾಗುವೆ..." ಎಂಬ ವರವನ್ನು ನೀಡಿ ಕಳುಹಿಸಿದನು.
ಪಾರ್ವತಿಯ ಶಾಪದಿಂದಾಗಿ ಮಧುರಾ 12 ವರ್ಷಗಳ ಕಾಲ ಕಾಡಿನ ಬಾವಿಯಲ್ಲಿ ಕಪ್ಪೆಯಾಗಿರಬೇಕು. ಅಸುರರ ರಾಜನಾದ ಮಾಯಾಸುರನು ತನ್ನ ಪತ್ನಿಯಾದ ಹೇಮಾಳೊಡನೆ ಹೆಣ್ಣು ಸಂತಾನಕ್ಕಾಗಿ ಶಿವ ಪೂಜೆ ಮಾಡುತ್ತಿದ್ದನು. ಒಂದಿನ ಆತ ಶಿವಪೂಜೆ ಮಾಡುವುದಕ್ಕಾಗಿ ಬಾವಿನಿಂದ ನೀರನ್ನು ತಂದು ಶಿವಲಿಂಗದ ಮೇಲೆ ಹಾಕುವಾಗ ಕಪ್ಪೆಯ ರೂಪದಲ್ಲಿದ್ದ ಮಧುರಾ ಸುಂದರ ಹೆಣ್ಣಾಗಿ ಜನ್ಮ ತಾಳಿದಳು. ಶಿವನ ವರಪ್ರಸಾದವೆಂದು ತಿಳಿದು ಮಾಯಾಸುರ ಹಾಗೂ ಹೇಮಾ ಆ ಹೆಣ್ಣನ್ನು ತಮ್ಮ ಮಗಳಾಗಿ ಸ್ವೀಕರಿಸಿದರು. ಕಪ್ಪೆಯ ಜನ್ಮದಿಂದ ಮುಕ್ತಳಾಗಿ ಮಾಯಾಸುರನ ಮಗಳಾದಾಗ ಮಧುರಾ ಮಂಡೋಧರಿಯಾದಳು. ಒಂದಿನ ರಾವಣ ಮಾಯಾಸುರನ ಅರಮನೆಗೆ ಬಂದಾಗ ಆತ ಮಂಡೋಧರಿಯ ಸೌಂದರ್ಯಕ್ಕೆ ಸೋತು ಅವಳನ್ನು ಮದುವೆಯಾಗಲು ನಿರ್ಧರಿಸಿದನು. ಆದರೆ ಅವನ ಅವಗುಣಗಳ ಬಗ್ಗೆ ತಿಳಿದಿದ್ದ ಮಂಡೋದರಿ ಅವನನ್ನು ಮದುವೆಯಾಗಲು ನಿರಾಕರಿಸಿದಳು. ಆದರೆ ರಾಕ್ಷಸ ರಾವಣ ಮಂಡೋಧರಿಯನ್ನು ಬಲವಂತವಾಗಿ ವಿವಾಹವಾದನು.
ರಾಕ್ಷಸರ ರಾಜ ರಾವಣನನ್ನು ಮದುವೆಯಾದಾಗ ಮಂಡೋದರಿ ಬಂಗಾರದ ಲಂಕೆಗೆ ರಾಣಿಯಾದಳು. ಆಕೆ ರಾವಣನನ್ನು ಹೆಜ್ಜೆಹೆಜ್ಜೆಗೂ ತಿದ್ದಲು ಪ್ರಯತ್ನಿಸಿದಳು. ಆದರೆ ರಾವಣ ಅವಳ ಮಾತಿಗೆ ಕಿವಿ ಕೊಡದೆ ಸೀತೆಯನ್ನು ಅಪಹರಿಸಿ ರಾಮನಿಂದ ಮಡಿದು ಮಣ್ಣು ಸೇರಿದನು. ರಾವಣನ ನಿಧನದ ನಂತರ ಮಂಡೋಧರಿ ರಾಮನ ಸಲಹೆಯ ಮೇರೆಗೆ ವಿಭಿಷಣನನ್ನು ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಿದಳು. ರಾವಣನಿಂದ ನರಕವಾಗಿದ್ದ ಲಂಕೆ ಕೊನೆಗಾಲದಲ್ಲಿ ಮಂಡೋಧರಿಯಿಂದಾಗಿ ಸ್ವರ್ಗವಾಯಿತು...
೪) ತಾರೆಯ ಕಥೆ :
ಬ್ರಹ್ಮನ ಮಗನಾದ ಅತ್ರಿಮುನಿಯ ಕಣ್ಣುಗಳಿಂದ ಹಾಲಿನಂಥ ಮೈಬಣ್ಣ ಹೊಂದಿದ ಚಂದ್ರ ಜನಿಸಿದನು. ಆತ ಪರಾಕ್ರಮಿಯಾಗಿರುವುದರಿಂದ ಬ್ರಹ್ಮ ಚಂದ್ರನನ್ನು ಗ್ರಹಗಳ ಹಾಗೂ ನಕ್ಷತ್ರಗಳ ರಾಜನನ್ನಾಗಿ ನೇಮಿಸಿದನು. ಆದರೆ ಪರಾಕ್ರಮಿಯಾದ ಚಂದ್ರ ಮೂರು ಲೋಕಗಳನ್ನು ಜಯಿಸಿ ರಾಜಸೂಯ ಯಾಗವನ್ನು ಮಾಡಿದನು. ಮೂರು ಲೋಕಗಳ ಮೇಲೆ ಹಿಡಿತ ಸಾಧಿಸಿರುವುದರಿಂದ ಚಂದ್ರನಲ್ಲಿ ಒಣ ಅಹಂಕಾರ ಹೆಚ್ಚಾಗಿತ್ತು. ತನ್ನ ಪರಾಕ್ರಮಕ್ಕೆ ಸರಿಸಾಟಿಯಾದವರು ಯಾರಿಲ್ಲವೆಂದು ಆತ ಮೆರೆಯುತ್ತಿದ್ದನು. ಅಲ್ಲದೇ ಚಂದ್ರನಲ್ಲಿ ಪ್ರೇಮ ಕಾಮಗಳ ಪ್ರಖರತೆ ಮೊದಲಿನಿಂದಲೂ ಅತ್ಯಧಿಕವಾಗಿತ್ತು. ಆತನ ಹೊಳೆಯುವ ಕಂಗಳು, ಹಾಲಿನಂಥ ಮೈಬಣ್ಣ, ಕ್ಷಾತ್ರ ತೇಜಸ್ಸಿಗೆ ಯಾವ ಸ್ತ್ರೀಯಾದರೂ ಸುಲಭವಾಗಿ ಸೋಲುತ್ತಿದ್ದಳು. ಆತ 27 ನಕ್ಷತ್ರಗಳನ್ನು ವಿವಾಹವಾದನು. 27 ಜನ ಮಡದಿಯರಲ್ಲಿ ರೋಹಿನಿ ಅವನಿಗೆ ಹೆಚ್ಚು ಮುದ್ದಿನವಳಾಗಿದ್ದಳು.
ದಿನ ಕಳೆದಂತೆ ಚಂದ್ರನ ಅಹಂಕಾರ ಹೆಚ್ಚಾಗುತ್ತಲೇ ಹೋಯಿತು. ಆತ ದೇವತೆಗಳ ಗುರುವಾದ ಬ್ರಹಸ್ಪತಿಯ ಹೆಂಡತಿ ತಾರೆಯ ಮೇಲೆ ಮೋಹಿತನಾದನು. ಅವಳಂದಕ್ಕೆ ಆಕರ್ಷಿತನಾಗಿ ಆತ ಅವಳನ್ನು ಹುಚ್ಚನಂತೆ ಪ್ರೀತಿಸಲು ಪ್ರಾರಂಭಿಸಿದನು. ತನ್ನ ಪರಾಕ್ರಮಕ್ಕೆ ಸರಿಸಾಟಿಯಾದವರು ಈ ಮೂರು ಲೋಕಗಳಲ್ಲಿ ಯಾರು ಇಲ್ಲ ಎಂಬ ಮೊಂಡು ಧೈರ್ಯದ ಮೇಲೆ ಚಂದ್ರ ತಾರೆಯನ್ನು ಬಲವಂತವಾಗಿ ಹೊತ್ತುಕೊಂಡು ಹೋದನು. ಬ್ರಹಸ್ಪತಿ ನಾನಾ ರೀತಿಯಲ್ಲಿ ತನ್ನ ಹೆಂಡತಿಯನ್ನು ಮರಳಿ ಕೊಡುವಂತೆ ಎಷ್ಟೇ ಕೇಳಿಕೊಂಡರು ಸಹ ಚಂದ್ರ ತಾರೆಯನ್ನು ಬಿಟ್ಟು ಕೊಡಲಿಲ್ಲ. ಆತ ತಾರೆಯನ್ನು ತನ್ನ ವಶದಲ್ಲೇ ಇಟ್ಟುಕೊಂಡನು. ಇದರಿಂದಾಗಿ ಗುರು ಮತ್ತು ಚಂದ್ರರ ನಡುವೆ ವೈಷಮ್ಯ ಬೆಳೆಯಿತು. ಶಿವನ ಸಹಿತ ದೇವತೆಗಳೆಲ್ಲರು ಗುರುವಿನ ಬೆಂಬಲಕ್ಕೆ ನಿಂತರು. ತಮ್ಮ ಗುರು ಶುಕ್ರಾಚಾರ್ಯರೊಂದಿಗೆ ರಾಕ್ಷಸರೆಲ್ಲ ಚಂದ್ರನ ಬೆಂಬಲಕ್ಕೆ ನಿಂತರು.
ತಾರೆಗಾಗಿ ಗುರು ಹಾಗೂ ಚಂದ್ರನ ನೇತ್ರತ್ವದಲ್ಲಿ ದೇವ ದಾನವರ ನಡುವೆ ಭಯಂಕರ ಯುದ್ಧ ಪ್ರಾರಂಭವಾಯಿತು. ಈ ಯುದ್ಧದ ಭೀಕರ ಪರಿಣಾಮವನ್ನು ನೋಡಲಾಗದೆ ಗುರುವಿನ ತಂದೆಯಾದ ಅಂಗೀರಸ ಮುನಿಗಳು ಬ್ರಹ್ಮನ ಬಳಿ ಹೋಗಿ ಹೇಗಾದರೂ ಮಾಡಿ ದೇವ ದಾನವರ ಯುದ್ಧವನ್ನು ನಿಲ್ಲಿಸಲು ಸೂಚಿಸಿದನು. ಆಗ ಸ್ವತಃ ಬ್ರಹ್ಮನೇ ಖುದ್ದಾಗಿ ಯುದ್ಧಭೂಮಿಗೆ ಬಂದು ಚಂದ್ರನಿಗೆ ಧಿಕ್ಕಾರ ಹಾಕಿ ತಾರೆಯನ್ನು ಬ್ರಹಸ್ಪತಿಯ ವಶಕ್ಕೆ ಒಪ್ಪಿಸಿದನು. ಆದರೆ ಅಷ್ಟೊತ್ತಿಗೆ ತಾರೆ ಗರ್ಭವತಿಯಾಗಿದ್ದಳು. ಈ ವಿಷಯ ತಿಳಿದು ಗುರು ಕೆರಳಿ ಕೆಂಡಾಮಂಡಲವಾದನು. "ನೀನು ಈ ಕ್ಷಣವೇ ಗರ್ಭಪಾತ ಮಾಡಿಕೋ ಇಲ್ಲವಾದರೆ ನಿನ್ನನ್ನು ಸುಟ್ಟು ಬಿಡುವೆ..." ಎಂದು ಗುರು ಗುಡುಗಿದನು. ಆದರೆ ಸ್ವಲ್ಪ ಸಮಯದ ನಂತರ ಗುರುವಿನ ಕೋಪ ತಣ್ಣಗಾದಾಗ "ಗಂಡು ಮಗುವಾದರೆ ನಿನ್ನನ್ನು ಕ್ಷಮಿಸುವೆ..." ಎಂದೇಳಿ ಶಾಂತನಾದನು.
ತಾರೆಯ ಮಹಾಮೌನ ಎಲ್ಲರನ್ನೂ ಚಿಂತೆಗೀಡು ಮಾಡಿತ್ತು. ಆಗ ಆಗತಾನೇ ಜನಿಸಿದ ಮಗು ತಾರೆಗೆ "ಏ ನಡತೆ ಗೆಟ್ಟವಳೇ, ನಡೆದಿರುವುದನ್ನು ನಡೆದಂತೆ ಹೇಳು. ಯಾಕೆ ಸುಮ್ಮನಿರುವೆ?" ಎಂದು ಗದರಿಸಿತು. ಆ ಮಗುವಿನ ಮಾತಿನಿಂದ ತಾರೆಗೆ ಕೋಪ ಉಕ್ಕಿ ಬಂತು. ಆಗ ತಾರೆ ಕೋಪದಲ್ಲಿ ಚಂದ್ರನೇ ಆ ಮಗುವಿನ ತಂದೆ ಎಂದೇಳಿ ತನ್ನ ತಪ್ಪನ್ನು ಒಪ್ಪಿಕೊಂಡಳು. ತಾರೆ ಚಂದ್ರನ ಪ್ರೇಮ ಬಾಣಗಳಿಗೆ ವಿರುದ್ಧವಾಗಿ ಹೋರಾಡಲಾಗದೆ ತನ್ನ ಮೈಯೊಪ್ಪಿಸಿ ಶರಣಾಗಿದ್ದಳು. ಕೊನೆಗೆ ಬ್ರಹ್ಮ, ತಾರೆ ಮತ್ತು ಚಂದ್ರನೇ ಆ ಬುದ್ಧಿವಂತ ಮಗುವಿನ ಜನಕರೆಂದು ಸಾರಿದನು. ನಂತರ ಆ ಬುದ್ಧಿವಂತ ಮಗುವಿಗೆ ಬುಧನೆಂದು ಹೆಸರಿಟ್ಟರು. ಮುಂದೆ ತಾರೆ ನಡೆದಿದ್ದನ್ನೆಲ್ಲ ಮರೆತು ಗಂಡನಾದ ಬ್ರಹಸ್ಪತಿಯ ಸೇವೆ ಮಾಡಿ ಪತಿವ್ರತೆ ಎಂಬ ಹೆಸರನ್ನು ಸಂಪಾದಿಸಿದಳು....
೫) ಅಹಲ್ಯಳ ಕಥೆ :
ದೇವಲೋಕದಲ್ಲಿ ತಾನೇ ಬಹು ಸುಂದರಿ ಎಂಬ ಅಹಂ ಊರ್ವಶಿಯ ತಲೆ ಸೇರಿತ್ತು. ಅವಳ ಸೊಕ್ಕನ್ನು ಅಡಗಿಸುವುದಕ್ಕಾಗಿ ಬ್ರಹ್ಮ ಓರ್ವ ಅಪರೂಪದ ಸುಂದರಿಯನ್ನು ಸೃಷ್ಟಿಸಲು ಮುಂದಾದನು. ಬ್ರಹ್ಮ ಬಹಳಷ್ಟು ತಲೆ ಉಪಯೋಗಿಸಿ ನೀರಿನಿಂದ ಓರ್ವ ಸುಂದರಿಯನ್ನು ಸೃಷ್ಟಿಸಿದನು. ಜಗತ್ತಿನಲ್ಲಿರುವ ಎಲ್ಲ ಸುಂದರ ವಸ್ತುಗಳ ಸೌಂದರ್ಯವನ್ನು ಹೊಸೆದು ಆ ಸುಂದರಿಯ ದೇಹದ ಪ್ರತಿಯೊಂದು ಅಂಗ ಅಂಗಗಳಲ್ಲಿ ಸೇರಿಸಿದನು. ಅವಳಲ್ಲಿ ಕುರೂಪತನದ ಒಂದು ಕಳೆಯೂ ಇರಲಿಲ್ಲ. ಅದಕ್ಕಾಗಿ ಅವಳಿಗೆ ಅಹಲ್ಯ ಎಂದು ಹೆಸರಿಟ್ಟನು. ಅಹಲ್ಯ ನಿಜಕ್ಕೂ ಮನಮೋಹಕ ಸುಂದರಿಯಾಗಿದ್ದಳು. ಅದಕ್ಕಾಗಿ ಬ್ರಹ್ಮ ಅವಳು ತಾರುಣ್ಯ ತಲುಪುವವರೆಗೆ ಅವಳನ್ನು ಗೌತಮ ಮಹರ್ಷಿಯ ಆಶ್ರಮಲ್ಲಿರಿಸಿದನು.
ಅಹಲ್ಯ ಗೌತಮ ಮಹರ್ಷಿಯ ಸುಂದರವಾದ ಆಶ್ರಮದಲ್ಲಿ ಹಾಡಿ ನಲಿಯುತ್ತಾ ತಾರುಣ್ಯ ತಲುಪಿದಳು. ಅವಳು ಋತುಮತಿಯಾದಾಗ ಗೌತಮ ಮಹರ್ಷಿ ಅವಳನ್ನು ಬ್ರಹ್ಮನ ವಶಕ್ಕೊಪ್ಪಿಸಿ ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿದನು. ಗೌತಮನ ನಿಯತ್ತಿಗೆ ಬ್ರಹ್ಮ ಮನಸೋತನು. ಅಹಲ್ಯಳಂಥ ಸುಂದರಿಯನ್ನು ಸಂರಕ್ಷಿಸಿ ಸುರಕ್ಷಿತವಾಗಿ ತನ್ನ ಬಳಿ ಮರಳಿ ಕರತಂದಿದ್ದಕ್ಕೆ ಬ್ರಹ್ಮ ಗೌತಮ ಮಹರ್ಷಿಯನ್ನು ಹಾಡಿ ಹೊಗಳಿದನು. ಅವನ ಪ್ರಾಮಾಣಿಕತೆಯನ್ನು ಮೆಚ್ಚಿ ಅಹಲ್ಯಳನ್ನು ಅವನಿಗೆ ಕಾಣಿಕೆಯಾಗಿ ನೀಡಿದನು. ಆದರೆ ಬ್ರಹ್ಮನ ಈ ನಿರ್ಧಾರಕ್ಕೆ ದೇವತೆಗಳ ರಾಜ ದೇವೇಂದ್ರ ಸಮ್ಮತಿಸಲಿಲ್ಲ. ಜಗತ್ತಿನಲ್ಲಿರುವ ಪ್ರತಿಯೊರ್ವ ಸುಂದರ ಹೆಣ್ಣು ಬರೀ ನನ್ನ ಸೊತ್ತು ಎಂಬುದು ದೇವೇಂದ್ರನ ವಾದವಾಗಿತ್ತು. ಅವನ ಮೊಂಡುವಾದದಿಂದಾಗಿ ಬ್ರಹ್ಮ ಅಹಲ್ಯಳ ಸ್ವಯಂವರವನ್ನು ಏರ್ಪಡಿಸಿದನು.
ದೇವಲೋಕದ ಸುರ ಅಸುರರು ಅಹಲ್ಯಳಿಗಾಗಿ ಪರಿತಪಿಸುತ್ತಿದ್ದರು. ಏಕೆಂದರೆ ಅವಳು ಸುರಸುಂದರಿಯರಿಗಿಂತಲೂ ಸುಂದರವಾಗಿದ್ದಳು. ದೇವತೆಗಳ ರಾಜ ದೇವೇಂದ್ರ ಅವಳಿಗಾಗಿ ಹಗಲು ರಾತ್ರಿ ಹಂಬಲಿಸುತ್ತಿದ್ದನು. ಅವಳನ್ನು ಮನಸೋಯಿಚ್ಛೆ ಅನುಭವಿಸಲು ಪ್ರತಿಕ್ಷಣ ಚಟಪಡಿಸುತ್ತಿದ್ದನು. ದೇವೇಂದ್ರನ ಸಮೇತ ಎಲ್ಲರ ಕಣ್ಣುಗಳು ಅಹಲ್ಯಳ ಮೇಲಿದ್ದವು. ಒಂದಿನ ಬ್ರಹ್ಮ ಅವಳ ಸ್ವಯಂವರವನ್ನು ಏರ್ಪಡಿಸಿದನು. ಯಾರು ಮೊದಲು ಮೂರು ಲೋಕಗಳನ್ನು ಪ್ರದಕ್ಷಿಣೆ ಹಾಕಿ ಮರಳಿ ಬರುವರೋ ಅಹಲ್ಯ ಅವರ ಸ್ವತ್ತಾಗುತ್ತಾಳೆಂದು ಘೋಷಿಸಿದನು. ಇಂದ್ರ ತ್ರಿಲೋಕ ಪ್ರದಕ್ಷಿಣೆಗೆ ಹೊರಟು ಹೋದ ನಂತರ ಗೌತಮ ಮಹರ್ಷಿಯು ಕರುವಿಗೆ ಜನ್ಮ ನೀಡುತ್ತಿದ್ದ ಕಾಮಧೇನುವಿಗೆ ಪ್ರದಕ್ಷಿಣೆ ಹಾಕಿ ಸ್ವಯಂವರದಲ್ಲಿ ಗೆದ್ದು ಅಹಲ್ಯಯನ್ನು ವರಿಸಿದನು. ಏಕೆಂದರೆ ವೇದಗಳ ಪ್ರಕಾರ ಕಾಮಧೇನು ಮೂರು ಲೋಕಗಳಿಗೆ ಸಮವಾಗಿತ್ತು.
ಅಹಲ್ಯ ಗೌತಮನ ಕೈಹಿಡಿದು ಮಿಥಿಲೆಯಲ್ಲಿರುವ ಅವನಾಶ್ರಮಕ್ಕೆ ಬಂದಳು. ಗೋದಾವರಿ ನದಿ ತಟದಲ್ಲಿದ್ದ ಆ ಆಶ್ರಮ ಅಹಲ್ಯಳ ಪಾದಸ್ಪರ್ಶದಿಂದ ಪಾವನವಾಯಿತು. ಅಹಲ್ಯಳಂಥ ಸುಂದರಿ ಗೌತಮನ ಸತಿಯಾಗಿ ಬಂದಿದ್ದರಿಂದ ಆಶ್ರಮದ ಸೌಂದರ್ಯ ಮತ್ತಷ್ಟು ಹೆಚ್ಚಾಯಿತು. ತನಗಿಂತಲೂ ವಯಸ್ಸಿನಲ್ಲಿ ಎಷ್ಟೋ ವರ್ಷ ಹಿರಿಯನಾಗಿರುವ ಗೌತಮನನ್ನು ಅಹಲ್ಯ ಮನಸ್ಸಪೂರ್ವಕವಾಗಿ ಒಪ್ಪಿಕೊಂಡು ತನ್ನನ್ನು ಸಂಪೂರ್ಣವಾಗಿ ಅವನಿಗೆ ಸಮರ್ಪಿಸಿಕೊಂಡಳು. ಸ್ವಚ್ಛ ಮನಸ್ಸಿನಿಂದ ತನ್ನ ಸತಿಧರ್ಮವನ್ನು ನಿಭಾಯಿಸಿ ಪಂಚ ಪತಿವ್ರತೆಯರಲ್ಲಿ ಮೊದಲನೇ ಸ್ಥಾನವನ್ನು ಅಲಂಕರಿಸಿದಳು. ಆಕೆ ಕಾಯಾ ವಾಚಾ ಮನಸಾ ತನ್ನ ಪತಿಯನ್ನು ಆದರಿಸುತ್ತಿದ್ದಳು. ಆದರೆ ದೇವೇಂದ್ರನ ವಕ್ರದೃಷ್ಟಿ ಇನ್ನು ಅವಳ ಮೇಲೆಯೇ ನೆಟ್ಟಿತ್ತು. ಏನಾದರೂ ಅಹಲ್ಯಳನ್ನು ಒಂದು ಸಲ ಅನುಭವಿಸಲೇಬೇಕು ಎಂಬ ಹಠದಲ್ಲಿ ಅವನಿದ್ದನು.
ದೇವೇಂದ್ರನಲ್ಲಿ ಕಪಟತನಕ್ಕೇನು ಕೊರತೆಯಿರಲಿಲ್ಲ. ಆತ ಗೌತಮನ ದಿನಚರಿಯನ್ನು ಅಧ್ಯಯನ ಮಾಡಿ ಗೌತಮ ದಿನನಿತ್ಯ ಮುಂಜಾನೆ ಸುರ್ಯೋದಯಕ್ಕಿಂತ ಮುಂಚೆ ಸಂಧ್ಯಾವಂದನೆಗಾಗಿ ನದಿಗೆ ತೆರಳುತ್ತಾನೆ, ಆ ಸಮಯದಲ್ಲಿ ಆಶ್ರಮದಲ್ಲಿ ಅಹಲ್ಯ ಒಬ್ಬಳೇ ಇರುತ್ತಾಳೆ ಎಂಬುದನ್ನು ಕಂಡುಕೊಂಡನು. ತನ್ನ ಕಪಟ ಯೋಜನೆಯಂತೆ ದೇವೇಂದ್ರ ಮಧ್ಯರಾತ್ರಿ ಕೋಳಿಯನ್ನು ಕೂಗಿಸಿ ಗೌತಮನನ್ನು ನದಿಯೆಡೆಗೆ ಹೋಗುವಂತೆ ಮಾಡಿದನು. ನಂತರ ಚಂದ್ರನಿಗೆ ಮುಂಜಾನೆಯ ತನಕ ಮರೆಯಲ್ಲಿರಲು ಕೇಳಿಕೊಂಡು ಆಶ್ರಮಕ್ಕೆ ಕಾಲಿಟ್ಟನು. ಆಶ್ರಮದಲ್ಲಿ ಗೌತಮನಿಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ತನ್ನ ಮಾಯಾಶಕ್ತಿಯನ್ನು ಬಳಸಿಕೊಂಡು ಗೌತಮನ ಮಾರುವೇಷ ಧರಿಸಿ ಅಹಲ್ಯಳ ಕೋಣೆ ಸೇರಿದನು.
ಮಂದಸ್ಮಿತಳಾಗಿ ಮಲಗಿದ್ದ ಅಹಲ್ಯಳ ನಿದ್ರಾಭಂಗ ಮಾಡಿದ ದೇವೇಂದ್ರ ಅವಳಂದವನ್ನು ವರ್ಣಿಸಲು ಪ್ರಾರಂಭಿಸಿದನು. ಮೊದಮೊದಲು ಅವಳಿಗೆ ದೇವೇಂದ್ರನ ಕಪಟತನ ತಿಳಿಯಲಿಲ್ಲ. ಆದರೆ ಸ್ವಲ್ಪ ಸಮಯದಲ್ಲೇ ಅವಳಿಗೆ ದೇವೇಂದ್ರನ ಸಂಚು ಅರ್ಥವಾಯಿತು. ಆದರೆ ದೇವೇಂದ್ರ ಅವಳನ್ನು ಹಾಗೆಯೇ ವರ್ಣಿಸುತ್ತಾ ಅವಳನ್ನು ಮರಳು ಮಾಡಿದನು. ಅಳತೆಕಟ್ಟಿನ ಶರೀರದ, ಸಪೂರ ಸೊಂಟದ ಸುಂದರಿ ನೀನೊಬ್ಬಳೇ ಎಂದು ವರ್ಣಿಸಿ ಅವಳನ್ನು ಸಂಪೂರ್ಣವಾಗಿ ತನ್ನ ಕೈವಶಮಾಡಿಕೊಂಡನು. ದೇವೇಂದ್ರ ಇಷ್ಟೆಲ್ಲ ಹರಸಾಹಸ ಮಾಡಿ ಅವಳನ್ನು ಹುಡುಕಿಕೊಂಡು ಬಂದಿದ್ದರಿಂದ ಅವಳಿಗೆ ತಾನೇ ವಿಶ್ವಸುಂದರಿಯೆಂಬ ಅಹಂ ತಲೆಸೇರಿತು. ಅವಳು ತನ್ನ ಸೌಂದರ್ಯದ ಮೇಲೆ ಒಣಜಂಭಪಟ್ಟುಕೊಂಡು ಗೌತಮನ ಮಾರುವೇಷದಲ್ಲಿದ್ದ ದೇವೇಂದ್ರನಿಗೆ ಶರಣಾದಳು.
ಸ್ವತಃ ದೇವತೆಗಳ ರಾಜ ದೇವೇಂದ್ರ ಅವಳಿಗಾಗಿ ಸ್ವರ್ಗದಿಂದ ಧರೆಗಿಳಿದು ಬಂದಿದ್ದಕ್ಕೆ ಅವಳು ತನ್ನ ಮೇಲೆ ಅಭಿಮಾನಪಟ್ಟಳು. ದೇವೇಂದ್ರನ ಕಾಮದ ಕಳ್ಳ ಕೋರಿಕೆಯನ್ನು ಧಿಕ್ಕರಿಸುವ ಧೈರ್ಯ ಅಹಲ್ಯಳಲ್ಲಿರಲಿಲ್ಲ. ಅಲ್ಲದೆ ದೇವೇಂದ್ರ ದೇವತೆಗಳ ರಾಜನಾಗಿರುವುದರಿಂದ ಆತ ಗೌತಮನ ಕೋಪದಿಂದ ತನ್ನನ್ನು ಕಾಪಾಡಬಲ್ಲನು ಎಂಬ ಮೊಂಡು ಧೈರ್ಯದ ಮೇಲೆ ಅಹಲ್ಯ ತನ್ನನ್ನು ಅವನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಳು. ಆತ ಮಧ್ಯರಾತ್ರಿಯಿಂದ ಮುಂಜಾನೆ ತನಕ ಅವಳನ್ನು ಮನಬಂದಂತೆ ಅನುಭವಿಸಿ ತನ್ನಾಸೆಯನ್ನು ತೀರಿಸಿಕೊಂಡನು. ಅವಳ ಪ್ರತಿ ಅಂಗಾಂಗಗಳಲ್ಲಿ ಸೌಂದರ್ಯ ಅಡಗಿತ್ತು. ಅವಳು ಪ್ರತಿ ಅಂಗದಿಂದಲೂ ಪರಮ ಸುಂದರಿಯಾಗಿದ್ದಳು. ಅವಳನ್ನು ಸಂತೃಪ್ತನಾಗುವ ತನಕ ಅನುಭವಿಸಿದ ದೇವೇಂದ್ರ ಮುಂಜಾನೆ ಅವಳನ್ನು ಹಾಗೆಯೇ ಬಿಟ್ಟು ಹೊರಡಲು ಸಿದ್ಧನಾದನು.
ಅಹಲ್ಯಳ ಸನ್ನೆಯ ಮೇರೆಗೆ ದೇವೇಂದ್ರ ಅವಸರದಿಂದ ಆಶ್ರಮದಿಂದ ಫರಾರಿಯಾಗುವಾಗ ಗೌತಮ ಮಹರ್ಷಿಯ ಕಣ್ಣಿಗೆ ಬಿದ್ದನು. ತನ್ನ ತಪಸ್ಸಶಕ್ತಿಯಿಂದ ಗೌತಮನಿಗೆ ಎಲ್ಲವೂ ಅರ್ಥವಾಯಿತು. ಆತ ಕೆರಳಿ ಕೆಂಡಾಮಂಡಲವಾದನು. ಅವನ ಕೂಗಾಟವನ್ನು ಕೇಳಿ ಅಹಲ್ಯ ಹೆದರುತ್ತಾ ಓಡೋಡಿ ಬಂದು ಅವನ ಕಾಲಿಗೆ ಬಿದ್ದು ಗೋಳಾಡಿ ಕ್ಷಮೆ ಕೇಳಿದಳು. ಆದರೆ ಗೌತಮನ ಕೋಪ ಅವಳ ಮೊಸಳೆ ಕಣ್ಣೀರಿಗೆ ಕರಗಲಿಲ್ಲ. ಅವನು ಅವಳಿಗೆ ಕಲ್ಲಾಗಿರುವಂತೆ ಶಾಪವಿಟ್ಟನು.
ಗೌತಮನ ಕೋಪಕ್ಕೆ ಹೆದರಿ ದೇವೇಂದ್ರ ಮರದ ಹಿಂದೆ ಅಡಗಿ ನಿಂತಿದ್ದನು. ಅವನಿಗೂ ಸಹ ಗೌತಮ ಮಹರ್ಷಿ ಶಾಪವಿಟ್ಟು ಹಿಮಾಲಯಕ್ಕೆ ತೆರಳಿದನು. ಗೌತಮನ ಶಾಪದಿಂದ ದೇವೇಂದ್ರನ ಜನನಾಂಗಗಳು ಒಡೆದು ಸಾವಿರ ತುಂಡುಗಳಾದವು. ಅವನ ಮೈಮೇಲೆ ಸಾವಿರ ಜನನಾಂಗಗಳಾದವು. ನಂತರ ಆತ ಶಿವನ ಅನುಗ್ರಹದಿಂದ ಮೈಮೇಲಿದ್ದ ಸಾವಿರ ಜನನಾಂಗಗಳನ್ನು ಸಾವಿರ ಕಣ್ಣುಗಳಾಗಿ ಪರಿವರ್ತಿಸಿಕೊಂಡು ಶಾಪಮುಕ್ತನಾದನು. ಆದರೆ ಅಹಲ್ಯ ಸಾವಿರಾರು ವರ್ಷಗಳ ಕಾಲ ಕಲ್ಲಾಗಿರಬೇಕಾಯಿತು. ಮೋಡದ ಮರೆಯಲ್ಲಿರುವ ಸೂರ್ಯನಂತೆ, ಕಲೆಗಳಲ್ಲಿ ಮುಚ್ಚಿದ ಚಂದ್ರನ ಬೆಳದಿಂಗಳಂತೆ, ಹೊಗೆಯಲ್ಲಿ ಮರೆಯಾಗಿರುವ ಬೆಂಕಿಯಂತೆ ಅವಳು ಸಾವಿರಾರು ವರ್ಷಗಳ ಕಾಲ ಕಲ್ಲಾಗಿರಬೇಕಾಯಿತು. ಮುಂದೆ ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರನ ಪವಿತ್ರ ಪಾದ ಸ್ಪರ್ಶದಿಂದ ಅಹಲ್ಯ ಶಾಪಮುಕ್ತಳಾಗಿ ಸ್ವರ್ಗ ಸೇರಿದಳು. ಈ ರೀತಿ ಅಹಲ್ಯಳ ಅಮಾಯಕತೆ ಎಲ್ಲರಿಗೂ ಒಂದು ನೀತಿಪಾಠವಾಗಿದೆ...
21) ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada
ಶಿವಾಜಿಯ ನಿಧನಾನಂತರ ಮರಾಠಾ ಸಾಮ್ರಾಜ್ಯ ಒಗ್ಗಟ್ಟಿನ ಕೊರತೆಯಿಂದ ಅವನತಿಯ ದಾರಿ ಹಿಡಿಯುವ ಆತಂಕದಲ್ಲಿತ್ತು. ಆದರೆ ಛತ್ರಪತಿ ಶಾಹು ಮಹಾರಾಜರ ದಕ್ಷ ಆಡಳಿತದಿಂದ ಮರಾಠಾ ಸಾಮ್ರಾಜ್ಯಕ್ಕೆ ಮತ್ತೆ ನವಕಳೆ ಬಂದಿತು. ಶಾಹು ಮಹಾರಾಜರಿಂದ ನೇಮಿಸಲ್ಪಟ್ಟ ಪೇಶ್ವೆಗಳು ಮರಾಠಾ ಸಾಮ್ರಾಜ್ಯದ ಬೆನ್ನೆಲುಬಾಗಿದ್ದರು. ಅಂಥ ಪೇಶ್ವೆಗಳಲ್ಲಿ ಬಾಲಾಜಿ ವಿಶ್ವನಾಥರು ಒಬ್ಬರು. ಪೇಶ್ವೆ ಬಾಲಾಜಿ ವಿಶ್ವನಾಥ ಹಾಗೂ ಅವರ ಧರ್ಮಪತ್ನಿ ರಾಧಾಬಾಯಿಯವರ ಮುದ್ದಿನ ಮಗನೇ ಬಾಜೀರಾವ. ಬಾಜೀರಾವನನ್ನು ಎಲ್ಲರೂ ಪ್ರೀತಿಯಿಂದ ರಾವ್ ಎಂದು ಕರೆಯುತ್ತಿದ್ದರು. ಬಾಜೀರಾವ್ ಚಿಕ್ಕ ವಯಸ್ಸಿನಿಂದಲೇ ತನ್ನ ತಂದೆಯ ಜೊತೆ ಸೇರಿ ಕುದುರೆ ಸವಾರಿ, ಕತ್ತಿ ವರಸೆ, ಶಾಸ್ತ್ರಗಳನ್ನು ಬಹಳ ಶ್ರದ್ಧೆಯಿಂದ ಕಲಿತಿದ್ದನು. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಮರಾಠಾ ಸಾಮ್ರಾಜ್ಯದ ಉಜ್ವಲ ಭವಿಷ್ಯ ಬಾಜೀರಾವನ ಬಾಲ್ಯದಲ್ಲಿ ಕಂಗೊಳಿಸುತ್ತಿತ್ತು.
ವೀರ ಮರಾಠಾ ಪೇಶ್ವೆ ಬಾಲಾಜಿ ವಿಶ್ವನಾಥರ ಅಕಾಲ ನಿಧನದ ನಂತರ ಛತ್ರಪತಿ ಶಾಹು ಮಹಾರಾಜರು ಅವರ ಮಗ ಬಾಜೀರಾವನನ್ನು ಮರಾಠಾ ಪೇಶ್ವೆಯಾಗಿ ಘೋಷಿಸಿದರು. ತನ್ನ ತಂದೆಯ ನಿಧನದ ನಂತರ ಅಖಂಡ ಮರಾಠಾ ಸಾಮ್ರಾಜ್ಯದ ಜವಾಬ್ದಾರಿ 20ರ ನವಯುವಕನಾಗಿದ್ದ ಬಾಜೀರಾವನ ಹೇಗಲೆರಿತು. ತನ್ನ ತಂದೆಯೊಂದಿಗಿನ ಆಪ್ತ ಒಡನಾಟದಿಂದ ಅವನಿಗೆ ಶಸ್ತ್ರಗಳ ಮೇಲೆ ಸಂಪೂರ್ಣ ಹಿಡಿತು ಸಿಕ್ಕಿತ್ತು. ಜೊತೆಗೆ ಹುಟ್ಟು ಬ್ರಾಹ್ಮಣನಾಗಿರುವುದರಿಂದ ಸಕಲ ಶಾಸ್ತ್ರಗಳ ಅರಿವು ಸಹ ಇತ್ತು. ಹಲವರ ವಿರೋಧದ ನಡುವೆಯು 20ರ ನವ ಯುವಕ ಮರಾಠಾ ಸಾಮ್ರಾಜ್ಯದ ಪೇಶ್ವೆಯಾಗಿರುವುದರಿಂದ ಮರಾಠಾ ಸೈನ್ಯದಲ್ಲಿ ಒಂದು ಮಿಂಚಿನ ಸಂಚಾರ ಶುರುವಾಯಿತು. ನೋಡು ನೋಡುತ್ತಿದ್ದಂತೆ ಬಾಜೀರಾವ ತನ್ನ ಪರಾಕ್ರಮದ ಪ್ರದರ್ಶನದಿಂದ ಬಾಜೀರಾವ ಬಲ್ಲಾಳ ಎಂದು ಹೆಸರುವಾಸಿಯಾದನು.
ತೋಳಲ್ಲಿ ನೂರಾನೆ ತಾಕತ್ತು, ಕಣ್ಣಲ್ಲಿ ಕೆಂಡದಂಥ ಕೋಪ, ನಡೆಯಲ್ಲಿ ಚಿರತೆಯ ವೇಗದ ಜೊತೆಗೆ ಮರಾಠಾ ಸಾಮ್ರಾಜ್ಯವನ್ನು ವಿಸ್ತರಿಸಿ ಅಖಂಡ ಹಿಂದು ಸಾಮ್ರಾಜ್ಯವನ್ನು ಸ್ಥಾಪಿಸುವ ಗುರಿ ಬಾಜೀರಾವನ ನಿದ್ದೆಗಳನ್ನು ಕಿತ್ತುಕೊಂಡವು. "ರಾತ್ರಿಗಳು ನಿದ್ರಿಸಲು ಮೀಸಲಾಗಿಲ್ಲ. ಶೂರರಿಗೆ ರಾತ್ರಿಗಳು ತಮ್ಮ ಶತ್ರುಗಳನ್ನು ಸದೆ ಬಡಿದು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಸುವರ್ಣಾವಕಾಶಗಳಾಗಿವೆ" ಎಂಬುದು ಬಾಜೀರಾವನ ಬಲವಾದ ನಂಬಿಕೆಯಾಗಿತ್ತು. ಮೊಘಲರ ದೆಹಲಿಯ ಕೋಟೆಗಳ ಮೇಲೆ ಮರಾಠಾ ಭಗವಾ ಧ್ವಜಗಳು ರಾರಾಜಿಸುವಂತೆ ಮಾಡುವುದು ಬಾಜೀರಾವನ ಮಹಾಭಿಲಾಷೆಯಾಗಿತ್ತು. ಅವನ ಆರ್ಭಟಕ್ಕೆ ದೆಹಲಿ ಸುಲ್ತಾನರ ಸಿಂಹಾಸನಕ್ಕೆ ನಡುಕ ಉಂಟಾಗುತ್ತಿತ್ತು. ಆತ ತನ್ನ 20 ವರ್ಷಗಳ ಪೇಶ್ವೆ ಪದವಿಯಲ್ಲಿ ಮರಾಠಾ ಸಾಮ್ರಾಜ್ಯದ ವಿಸ್ತಾರಕ್ಕಾಗಿ ಸುಮಾರು 40ಕ್ಕೂ ಹೆಚ್ಚು ಯುದ್ಧಗಳನ್ನು ಮಾಡಿದನು. ಅದರಲ್ಲಿ ಆತ ಯಾವುದರಲ್ಲಿಯೂ ಸೋಲಿನ ರುಚಿ ನೋಡಲಿಲ್ಲ. ಹೆಜ್ಜೆಹೆಜ್ಜೆಗೂ ವಿಜಯಲಕ್ಷ್ಮಿ ಅವನಿಗೆ ಸಾಥ ಕೊಟ್ಟಿದ್ದಳು. ಆತ ನಿಜಕ್ಕೂ ಸೋಲಿಲ್ಲದ ಮರಾಠಾ ಶೂರ.
1728ರಲ್ಲಿ ಮಹ್ಮದ ಖಾನ್ ಬಂಗಷನು ಬುಂದೆಲಖಂಡದ ಮೇಲೆ ದಾಳಿ ಅಲ್ಲಿನ ರಾಜಾ ಛತ್ರಸಾಲನನ್ನು ಕುಟುಂಬ ಸಮೇತವಾಗಿ ಸೆರೆಮನೆಗೆ ತಳ್ಳಿದನು. ರಾಜಾ ಛತ್ರಸಾಲನು ಅವನ ಕಣ್ತಪ್ಪಿಸಿ ಮರಾಠಾ ಪೇಶ್ವೆ ಬಾಜೀರಾವನಿಗೆ ಸಹಾಯ ಕೋರಿ ಒಂದು ಗುಪ್ತ ಪತ್ರವನ್ನು ಬರೆದನು. ಆದರೆ ಆ ಸಮಯದಲ್ಲಿ ಬಾಜೀರಾವ ಮಾಳ್ವಾ ಕದನದಲ್ಲಿ ನಿರತನಾಗಿದ್ದನು. ಬಾಜೀರಾವ ಮಾಳ್ವಾ ಕದನದಲ್ಲಿ ವಿಜಯವಾಗಿ ಕೂಡಲೇ ಬುಂದೇಲಖಂಡದ ಮೇಲೆ ದಾಳಿ ಮಾಡಿ ಬಂಗಷನನ್ನು ಸದೆ ಬಡಿದು ರಾಜಾ ಛತ್ರಸಾಲನನ್ನು ಬಂಧಮುಕ್ತಗೊಳಿಸಿದನು. ಈ ಖುಷಿಯಲ್ಲಿ ರಾಜಾ ಛತ್ರಸಾಲನು ಬಾಜೀರಾವನಿಗೆ ತನ್ನ ಸಾಮ್ರಾಜ್ಯದ ಒಂದು ಭಾಗದ ಜೊತೆಗೆ 33 ಲಕ್ಷ ಚಿನ್ನದ ವರಹಗಳನ್ನು ಸೇರಿ ಇನ್ನು ಕೆಲವು ಬೆಲೆ ಬಾಳುವ ಉಡುಗೊರೆಗಳನ್ನು ನೀಡಿದನು. ಆತ ಬಾಜೀರಾವನನ್ನು ಉಚಿತ ರೀತಿಯಲ್ಲಿ ಸತ್ಕರಿಸಿದನು. ಅವನನ್ನು ಬಿಳ್ಕೊಡುವಾಗ ರಾಜಾ ಛತ್ರಸಾಲನು ತನ್ನ ಮಗಳಾದ ಮಸ್ತಾನಿಯ ಕೈಯನ್ನು ಮದುವೆಯಾಗುವುದಕ್ಕಾಗಿ ಬಾಜೀರಾವನಿಗೆ ನೀಡಿದನು.
ರಾಜಾ ಛತ್ರಸಾಲನ ಅತಿಥಿಯನ್ನು ನಿರಾಕರಿಸುವ ಮನಸ್ಸಾಗದೆ ಬಾಜೀರಾವ ಮಸ್ತಾನಿಯೊಂದಿಗೆ ವಿವಾಹವಾಗಿ ಪುಣೆಯ ದಾರಿ ಹಿಡಿದನು. ಮಸ್ತಾನಿಯನ್ನು ನೋಡುವುದಕ್ಕಿಂತ ಮುಂಚೆ ಬಾಜೀರಾವ ಅವಳ ಬಗ್ಗೆ ಬಹಳಷ್ಟು ಕೇಳಿದ್ದನು. ಆಕೆ ಕೇವಲ ಸೌಂದರ್ಯದ ಸೆಲೆಯಾಗಿ ಉಳಿಯದೇ ಬಹುಮುಖ ಪ್ರತಿಭೆಯಾಗಿದ್ದಳು. ಆಕೆ ಕುದುರೆ ಸವಾರಿ, ಕತ್ತಿ ವರಸೆ, ಶಾಸ್ತ್ರಗಳ ಅಧ್ಯಯನ, ಯುದ್ಧನೀತಿ, ಕವಿತೆಗಳನ್ನು ಬರೆಯುವುದು, ಸಂಗೀತ ವಾದ್ಯ ಗಳನ್ನು ನುಡಿಸುವುದು, ನೃತ್ಯ ಮಾಡುವುದರಲ್ಲಿ ಪ್ರವೀಣೆಯಾಗಿದ್ದಳು. ಅವಳ ಸೌಂದರ್ಯಕ್ಕಿಂತ ಅಧಿಕವಾಗಿ ಅವಳ ಬಹುಮುಖ ಪ್ರತಿಭೆಗೆ ಮನಸೋತು ಬಾಜೀರಾವ ಮಸ್ತಾನಿಯನ್ನು ಮನಸಾರೆ ಪ್ರೀತಿಸಲು ಪ್ರಾರಂಭಿಸಿದನು. ಈ ನವ ಜೋಡಿ ಪ್ರೇಮ ಪಕ್ಷಿಗಳು ನೂರಾರು ರೊಮ್ಯಾಂಟಿಕ್ ಕನಸುಗಳನ್ನು ಕಟ್ಟಿಕೊಂಡು ಪುಣೆಗೆ ಆಗಮಿಸಿದರು. ಆದರೆ ಪುಣೆಯಲ್ಲಿ ಅವರಿಗೆ ಬೇರೆ ರೀತಿಯ ಅತಿಥ್ಯ ಕಾದಿತ್ತು.
ಮಸ್ತಾನಿ ಬಾಜೀರಾವ ಬಲ್ಲಾಳನ ಎರಡನೇ ಪತ್ನಿಯಾಗಿ ಪುಣೆಗೆ ಆಗಮಿಸಿದ್ದು ಅವನ ಮನೆಯವರಷ್ಟೇ ಅಲ್ಲದೆ ಇಡೀ ಮರಾಠಾ ಸಾಮ್ರಾಜ್ಯಕ್ಕೆ ಕಸಿವಿಸಿ ಉಂಟು ಮಾಡಿತ್ತು. ಅಪ್ಪಟ ಬ್ರಾಹ್ಮಣರಾದ ಬಾಜೀರಾವನ ಮನೆಯವರು ಅರ್ಧ ಮುಸ್ಲಿಂ ಅರ್ಧ ಹಿಂದುವಾದ ಮಸ್ತಾನಿಯನ್ನು ಮನೆಸೊಸೆಯಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅವಳ ತಂದೆ ರಾಜಾ ಛತ್ರಸಾಲನು ಹಿಂದುವಾಗಿದ್ದನು. ಆದರೆ ಅವಳ ತಾಯಿ ರುಹಾನಿಬಾಯಿ ಬೇಗಂ ಮುಸ್ಲಿಮಳಾಗಿದ್ದಳು. ಮಸ್ತಾನಿ ತಂದೆಯಂತೆ ಶ್ರೀಕೃಷ್ಣನ ಭಕ್ತಳಾಗಿದ್ದರೂ ಸಹ ತಾಯಿಯಂತೆ ಮುಸ್ಲಿಂ ಸಂಪ್ರದಾಯವನ್ನು ಅನುಸರಿಸಿದ್ದಳು. ಹೀಗಾಗಿ ಅರೆಹಿಂದುವಾದ ಮಸ್ತಾನಿಯನ್ನು ಮನೆ ಸೊಸೆಯಾಗಿಸಿಕೊಳ್ಳಲು ಬಾಜೀರಾವನ ತಾಯಿ ರಾಧಾಬಾಯಿ ಹಿಂದೇಟು ಹಾಕಿದರು. ಎಲ್ಲರ ವಿರೋಧದ ನಡುವೆಯು ಬಾಜೀರಾವ ಮಸ್ತಾನಿಯನ್ನು ಪುಣೆಯ ಶನಿವಾರವಾಡಾದಲ್ಲಿ ಇರಿಸಿದನು. ಆದರೆ ಅವನ ಮನೆಯವರು ಅವಳನ್ನು ಪ್ರತಿಕ್ಷಣ ಮಾತಿನಿಂದ ಕೊಲ್ಲಲು ಪ್ರಾರಂಭಿಸಿದರು. ಸಾಲದಕ್ಕೆ ಅವಳು ಬಾಜೀರಾವನ ಪತ್ನಿಯಲ್ಲ, ಇಟ್ಟುಕೊಂಡ ಉಪಪತ್ನಿ ಎಂದೆಲ್ಲ ಹೀಯಾಳಿಸಿ ಅವಮಾನ ಮಾಡಿದರು. ತನ್ನ ಪ್ರೇಯಸಿ ಈ ರೀತಿಯ ಚುಚ್ಚು ಮಾತುಗಳನ್ನು ಕೇಳಿ ಕೊರಗುತ್ತಿರುವುದನ್ನು ಕಂಡ ಬಾಜೀರಾವ ಅವಳಿಗಾಗಿ ಪ್ರತ್ಯೇಕವಾದ ಒಂದು ಅರಮನೆಯನ್ನು ಕಟ್ಟಿದನು. ಮಸ್ತಾನಿ ಶನಿವಾರವಾಡಾವನ್ನು ಬಿಟ್ಟು ಅಲ್ಲಿ ವಾಸಿಸಲು ಪ್ರಾರಂಭಿಸಿದಾಗ ಆ ಅರಮನೆಗೆ ಮಸ್ತಾನಿ ಮಹಲ ಎಂಬ ಹೆಸರು ಬಂದಿತು.
ಮಸ್ತಾನಿ ಶನಿವಾರವಾಡಾ ಬಿಟ್ಟು ಬೇರೆ ಮನೆಯಲ್ಲಿದ್ದರೂ ಬಾಜೀರಾವನ ಮನೆಯವರಿಗೆ ಅವಳ ಮೇಲಿನ ವೈಮನಸ್ಸು ಕಮ್ಮಿಯಾಗಿರಲಿಲ್ಲ. ಅವರು ಬಾಜೀರಾವನನ್ನು ಅವಳಿಂದ ದೂರವಿರಿಸಲು ಸಾಕಷ್ಟು ಕುಟಿಲತೆಗಳನ್ನು ಮಾಡಿದರು. ಆದರೆ ಬಾಜೀರಾವ "ನಾನು ಮಸ್ತಾನಿಯನ್ನು ಪ್ರೀತಿಸಿ ಮದುವೆಯಾಗಿರುವೆ. ಯಾವುದೇ ಕಾರಣಕ್ಕೂ ನಾನು ಅವಳ ಕೈಬಿಡಲ್ಲ" ಎಂದೇಳಿ ಎಲ್ಲರ ಬಾಯ್ಮುಚ್ಚಿಸಿದನು. ಆದರೆ ಅವನ ಮೊದಲ ಹೆಂಡತಿ ಕಾಶಿಬಾಯಿ ಅವನ ಮಾತುಗಳನ್ನು ಕೇಳಿ ಸುಮ್ಮನೆ ಕೂಡಲಿಲ್ಲ. ಆಕೆ ಅವನನ್ನು ಚುಚ್ಚು ಮಾತುಗಳಿಂದ ಚುಚ್ಚಿ ಚುಚ್ಚಿ ಕೊಲ್ಲಲು ಪ್ರಾರಂಭಿಸಿದಳು. ಕಾಶೀಬಾಯಿಗೆ ಮಸ್ತಾನಿಯ ಮೇಲೆ ಯಾವುದೇ ದೊಡ್ಡ ಕೋಪವಿರಲಿಲ್ಲ. ಆದರೆ ಆಕೆ ಮರಾಠಾ ಸಾಮ್ರಾಜ್ಯದ ಉನ್ನತಿಗಾಗಿ ಬದ್ಧವೈರಿಗಳಾದ ಮುಸ್ಲಿಮರನ್ನು ದ್ವೇಷಿಸುತ್ತಿದ್ದಳು. ಅವಳಿಗೆ ಮಸ್ತಾನಿ ಮೇಲಿನ ಕೋಪಕ್ಕಿಂತ ಮರಾಠಾ ಸಾಮ್ರಾಜ್ಯದ ಮೇಲಿನ ಪ್ರೀತಿಯೇ ಹೆಚ್ಚಾಗಿತ್ತು. ಅದಕ್ಕಾಗಿ ಆಕೆ ಮಸ್ತಾನಿಯ ವಿಷಯದಲ್ಲಿ ಮೌನ ತಾಳಿ ಬಾಜೀರಾವನೊಂದಿಗೆ ಸಂಸಾರ ಸಾಗಿಸಿ ಮೂರು ಮಕ್ಕಳ ತಾಯಿಯಾದಳು. ಆದರೂ ಅವಳು ತನ್ನ ಅತ್ತೆಗೆ ಹೆದರಿ ಮಸ್ತಾನಿಯನ್ನು ದ್ವೇಷಿಸುವಂತೆ ನಟಿಸುತ್ತಿದ್ದಳು. ಏಕೆಂದರೆ ಆವಾಗಿನ ಕಾಲದಲ್ಲಿ ರಾಜಮಹಾರಾಜರು ನಾಲ್ಕಾರು ಪತ್ನಿಯರನ್ನು ಹೊಂದುವುದು ಸಾಮಾನ್ಯ ಸಂಗತಿಯಾಗಿತ್ತು.
ಬಾಜೀರಾವನ ಮನೆಯವರನ್ನು ಸೇರಿ ಮರಾಠಾ ಪ್ರಮುಖರು ಮಸ್ತಾನಿಯನ್ನು ದ್ವೇಷಿಸುತ್ತಲೇ ಬಂದರು. ಆದರೆ ಬಾಜೀರಾವ ಮಾತ್ರ ಮಸ್ತಾನಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಲೇ ಬಂದನು. ಅವರಿಬ್ಬರ ಪ್ರೀತಿಯ ಪ್ರತೀಕವಾಗಿ ಮಸ್ತಾನಿ ಓರ್ವ ಗಂಡು ಮಗುವಿಗೆ ಜನ್ಮವಿತ್ತಳು. ಮಸ್ತಾನಿ ಆ ಮಗುವಿಗೆ ಪ್ರೀತಿಯಿಂದ ಕೃಷ್ಣ ರಾವ್ ಎಂದು ಕರೆದಳು. ಆದರೆ ಪುಣೆಯಲ್ಲಿನ ಬ್ರಾಹ್ಮಣರು ಮಸ್ತಾನಿಯ ಮಗ ಕೃಷ್ಣನಿಗೆ ಉಪನಯನ ಮಾಡದೆ ತಮ್ಮ ಜಾತಿ ರಾಜಕಾರಣವನ್ನು ಹಾಗೆಯೇ ಮುಂದುವರೆಸಿದರು. ಇದರಿಂದ ಕೆರಳಿದ ಬಾಜೀರಾವ ಕೃಷ್ಣರಾವನ ಹೆಸರನ್ನು ಶಮಶೇರ್ ಬಹಾದ್ದೂರ ಎಂದು ಬದಲಿಸಿ ಬ್ರಾಹ್ಮಣರ ಹಠಕ್ಕೆ ತಕ್ಕ ತಿರುಗೇಟು ನೀಡಿದನು. ಈ ಘಟನೆ ಮರಾಠರಿಗೆ ಮಸ್ತಾನಿ ಮೇಲಿದ್ದ ವೈಮನಸ್ಸನ್ನು ಮತ್ತಷ್ಟು ಹೆಚ್ಚಿಸಿತು. ಮಸ್ತಾನಿಯ ವಿಷಯವಾಗಿ ಬಾಜೀರಾವನ ಮನೆಯಲ್ಲಿ ಪದೇಪದೇ ವಾಗ್ವಾದಗಳು ಆಗುತ್ತಲೇ ಹೋದವು. ಇದರಿಂದ ಬಾಜೀರಾವ ಮಾನಸಿಕವಾಗಿ ಕುಗ್ಗಿ ಹೋದನು. ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪತ್ನಿ ಕಾಶೀಬಾಯಿ ಹಾಗೂ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಸ್ತಾನಿ, ಈ ಇಬ್ಬರ ಪ್ರೇಮದ ಮಧ್ಯೆ ಸಿಲುಕಿ ಬಾಜೀರಾವ ನಲುಗಿ ಹೋದನು.
ತಾನು ಪ್ರೀತಿಸಿ ಮದುವೆಯಾದ ಹೆಣ್ಣಿಗೆ ಮನೆಯಲ್ಲಿ, ಸಮಾಜದಲ್ಲಿ ಗೌರವ ತಂದು ಕೊಡಲಾಗಲಿಲ್ಲವೆಂಬ ಕೊರಗಿನಲ್ಲಿ ಬಾಜೀರಾವ ಪೇಶ್ವೆ ಪದವಿಯ ಮೇಲಿನ ನಿಷ್ಠೆಯನ್ನು ಕಡಿಮೆ ಮಾಡಿದನು. ಮರಾಠರಿಗೆ ತಮ್ಮ ಸಾಮ್ರಾಜ್ಯ ವಿಸ್ತರಣೆ ಮುಖ್ಯವಾಗಿತ್ತು. ಆದರೆ ಬಾಜೀರಾವನಿಗೆ ಸದ್ಯಕ್ಕೆ ಮಸ್ತಾನಿಯ ಆತ್ಮಸನ್ಮಾನ ಹಾಗೂ ಗೌರವ ಮುಖ್ಯವಾಗಿತ್ತು. ಮಸ್ತಾನಿ ಬಾಜೀರಾವನ ಜೊತೆ ಸೇರಿ ಎಷ್ಟೋ ಯುದ್ಧಗಳಲ್ಲಿ ಮರಾಠಾ ಸಾಮ್ರಾಜ್ಯದ ವಿಸ್ತರಣೆಗಾಗಿ ಹೋರಾಡಿದ್ದಳು. ಆದರೂ ಅವಳನ್ನು ಮನೆ ಸೊಸೆಯಾಗಿ ಆದರಿಸಲು ಬಾಜೀರಾವನ ಮನೆಯವರು ಒಪ್ಪಲಿಲ್ಲ. ಸತತ 20 ವರ್ಷಗಳ ಕಾಲ ಮರಾಠಾ ಸಾಮ್ರಾಜ್ಯ ವಿಸ್ತರಣೆಗಾಗಿ 41 ಯುದ್ಧಗಳನ್ನು ಗೆದ್ದ ಸೋಲಿಲ್ಲದ ಸರದಾರ ಬಾಜೀರಾವ ಮಸ್ತಾನಿಯ ವಿಷಯದಲ್ಲಿ ತನ್ನ ಮನೆಯವರ ಮನಸ್ಸನ್ನು ಗೆಲ್ಲುವಲ್ಲಿ ಹೀನಾಯವಾಗಿ ಸೋತನು. ಇಂಥ ಇಕ್ಕಟ್ಟಿನ ಸಂದರ್ಭದಲ್ಲಿ ನೇರವಾಗಿ ದೆಹಲಿಯ ಮೇಲೆ ದಾಳಿ ಅಖಂಡ ಹಿಂದು ಸಾಮ್ರಾಜ್ಯದ ವಿಜಯ ಪತಾಕೆಯನ್ನು ಹಾರಿಸಲು ಮರಾಠಾ ಸೈನ್ಯ ಸಮರ್ಥವಾಗಿ ಬಾಜೀರಾವನಿಗಾಗಿ ಕಾಯುತ್ತಾ ನಿಂತಿತ್ತು. ಛತ್ರಪತಿ ಶಾಹು ಮಹಾರಾಜರ ಆದೇಶದ ಮೇರೆಗೆ ಮರಾಠಾ ಸೈನ್ಯ ಬಾಜೀರಾವನ ನೇತೃತ್ವದಲ್ಲಿ ದೆಹಲಿಯ ಕಡೆಗೆ ವೀರಾವೇಶದಿಂದ ಸಾಗಿತು.
ಬಾಜೀರಾವ ಯುದ್ಧಕ್ಕೆ ಹೋಗಿರುವುದರಿಂದ ಮಸ್ತಾನಿ ತನ್ನ ಮಹಲಿನಲ್ಲಿ ಒಂಟಿಯಾಗಿರುವುದನ್ನು ಗಮನಿಸಿ ಬಾಜೀರಾವನ ತಮ್ಮ ಚಿಮಾಜಿ ಅಪ್ಪ ಮಸ್ತಾನಿಯನ್ನು ಗೃಹ ಬಂಧನದಲ್ಲಿ ಇರಿಸಿದನು. ಅತ್ತ ಕಡೆ ಬಾಜೀರಾವ ನರ್ಮದಾ ನದಿ ತೀರದ ರಾವರಖೇಡಿ ಎಂಬಲ್ಲಿ ದೇಹದ ಉಷ್ಣತಾ ಹೊಡೆತದಿಂದ ಸಾವನ್ನಪ್ಪಿದನು. ಆತ ಗತಿಸಿದ ಒಂದು ವರ್ಷದೊಳಗೆ ಮಸ್ತಾನಿ ಸಹ ದೇಹತ್ಯಾಗ ಮಾಡಿದಳು. ಅವಳ ಸಾವಿನ ಬಗ್ಗೆ ಸ್ಪಷ್ಟವಾದ ಲಿಖಿತ ಮಾಹಿತಿಯಿಲ್ಲ. ಆಕೆ ಬಾಜೀರಾವನ ಸಾವಿನ ಸುದ್ದಿ ಕೇಳಿ ಎದೆಯೊಡೆದು ಸತ್ತಳು ಎಂಬ ಮಾತಿದೆ. ಅದರ ಜೊತೆಗೆ ಆಕೆ ಬಾಜೀರಾವನ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ತನ್ನ ವಜ್ರದುಂಗುರವನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡು ಸತ್ತಳು ಎಂಬ ಮಾತು ಇದೆ. ಮನಸಾರೆ ಪ್ರೀತಿಸಿ ಮದುವೆಯಾದ ಬಾಜೀರಾವ ಮಸ್ತಾನಿಯರು ಜಾತಿ ರಾಜಕಾರಣದ ವಿಷದಿಂದಾಗಿ ನೆಮ್ಮದಿಯಾಗಿ ಬಾಳಲಾರದೆ ಕಣ್ಣೀರಲ್ಲಿ ಕೈ ತೊಳೆದು ಕಣ್ಮರೆಯಾದರು. ಇಂದಿಗೂ ಅವರನ್ನು ಇತಿಹಾಸ ನೆನೆಯುತ್ತದೆ.
ಈ ಬಾಜೀರಾವ ಮಸ್ತಾನಿಯ ಪ್ರೇಮಕಥೆ ದಿನಾಲು ನನ್ನನ್ನು ಕಾಡುತ್ತದೆ. ಏಕೆಂದರೆ ಅವರಿದ್ದ ಪುಣೆ ನಗರದಲ್ಲಿ ನಾನು ವಾರಕ್ಕೊಮ್ಮೆ ಓಡಾಡುತ್ತೇನೆ. ಕಳೆದ ವರ್ಷ ನಾನು ಪುಣೆಯಲ್ಲಿ ಫ್ಯಾಷನ್ ಫೋಟೋಗ್ರಾಫಿ ಕಲಿಯಲು ಕಾಲೇಜು ಸೇರಿದಾಗ ಬಾಜೀರಾವನ ಶನಿವಾರವಾಡಾ ಹಾಗೂ ಮಸ್ತಾನಿಯ ಮಸ್ತಾನಿ ಮಹಲನ್ನು ದಿನಾ ನೋಡುತ್ತಿದ್ದೆ. ಏಕೆಂದರೆ ನಮ್ಮ ಕಾಲೇಜು ಅದೇ ಬೀದಿಯಲ್ಲಿತ್ತು. ಈಗಲೂ ಅಷ್ಟೇ ನಾನು ನನ್ನ ಬ್ಯುಸಿನೆಸ್ ನಿಮಿತ್ಯವಾಗಿ ವಾರಕ್ಕೊಮ್ಮೆ ಪುಣೆಗೆ ಹೋದಾಗ ಅಲ್ಲಿಗೆ ಹೋಗಿಯೇ ಬರುವೆ. ಏಕೆಂದರೆ ಪುಣೆಗೆ ಹೋದ ಮೇಲೆ ಶನಿವಾರವಾಡಾ ಕಣ್ಣಿಗೆ ಬೀಳದೆ ಇರದು. ನೀವು ಯಾವತ್ತಾದ್ರೂ ಪುಣೆಗೆ ಹೋದರೆ ತಪ್ಪದೆ ಶನಿವಾರವಾಡಾ ಮತ್ತು ಮಸ್ತಾನಿ ಮಹಲನ್ನು ನೋಡಿಕೊಂಡು ಬನ್ನಿ. ಮಸ್ತಾನಿ ಮಹಲ ಸದ್ಯಕ್ಕೆ ದಿನನಾಥ ಕೇಳ್ಕರ ವಸ್ತು ಸಂಗ್ರಹಾಲಯದ ಆವರಣದಲ್ಲಿ ಸೇರಿಕೊಂಡಿದೆ. ಸದ್ಯಕ್ಕೆ ಅವುಗಳಲ್ಲಿ ಹೇಳಿಕೊಳ್ಳುವಂಥ ವೈಭವವೇನು ಉಳಿದಿಲ್ಲ. ಆದರೆ ಒಂದ್ಸಲ ನೋಡುವುದರಲ್ಲಿ ಅಡ್ಡಿಯೆನಿಲ್ಲ. ನನಗಿರುವ ಮತ್ತೊಂದು ಬೇಜಾರು ಏನೆಂದರೆ ಅವತ್ತು ಮಸ್ತಾನಿ ಮಹಲಿನ ನೆರಳಿನಂತೆ ಇದ್ದ ಬೀದಿ ಇವತ್ತು ಬುಧವಾರ ಪೇಠ ಎಂಬ ಹೆಸರಿನಿಂದ ವೈಷ್ಯವರ ಸ್ವರ್ಗವಾಗಿದೆ. ಬೆಳಿಗ್ಗೆ ಪುಸ್ತಕಗಳ ಮಳಿಗೆಯಾಗಿ ತೆರೆದುಕೊಳ್ಳುವ ಆ ಬೀದಿ ಸಂಜೆಯಾಗುತ್ತಿದ್ದಂತೆ ರೆಡಲೈಟ್ ಏರಿಯಾವಾಗಿ ಬಿಡುತ್ತದೆ. ಅದು ಬೇರೆ ವಿಷಯ ಬಿಡಿ. ಬಾಜೀರಾವ ಮಸ್ತಾನಿಯ ಈ ಪ್ರೇಮಕಥೆಯನ್ನು ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಪ್ರತಿದಿನ ಇದೇ ರೀತಿ ಪ್ರೇಮಕಥೆಗಳನ್ನು ಓದಲು ಫೇಸ್ಬುಕ್, ಇನಸ್ಟಾಗ್ರಾಮ, ಟ್ವೀಟರ ಇತ್ಯಾದಿಗಳಲ್ಲಿ ತಪ್ಪದೆ ನನ್ನನ್ನು ಫಾಲೋ ಮಾಡಿ.
22) ಅವಳು ಮಾತಾಡಿದಾಗ ಕನ್ನಡ ನೀತಿ ಕಥೆ : Kannada Moral Story
ಒಂದಿನ ಮಾನವನೊಬ್ಬ ಸೌದೆ ತರಲು ಕಾಡಿಗೆ ಹೋದ. ಒಂದು ದೊಡ್ಡ ಮರವನ್ನು ಹುಡುಕಿ, ಅದರ ಕೊಂಬೆಗೆ ತನ್ನ ಹರಿತವಾದ ಕೊಡಲಿಯನ್ನು ಬೀಸಿದ. ಮರುಕ್ಷಣವೇ ಆ ಮರವು ಕಣ್ಣೀರಾಕುತ್ತಾ, "ಅಯ್ಯೋ ಪರಿಸರ ಮಾತೆ ಈ ಬುದ್ಧಿಯಿಲ್ಲದ, ಉಪಕಾರವರಿಯದ ಮನುಷ್ಯನನ್ನು ಕ್ಷಮಿಸಿ, ರಕ್ಷಿಸು ತಾಯಿ" ಎಂದು ಕೀರುಚಿತು. ಆಗ ಎಚ್ಚೆತ್ತ ಮಾನವ ಮರದೊಂದಿಗೆ ಮಮಕಾರದ ಮಾತುಗಳನ್ನು ಪ್ರಾರಂಭಿಸಿದನು.
ಮಾನವ : ಯೇ ಮರವೇ, ಯಾಕೆ ಅಳುತ್ತಿರುವೆ?
ಮರ : ನಿನ್ನ ಕರುಣೆಯಿಲ್ಲದ ಕೊಡಲಿ ಏಟು ನನ್ನನ್ನು ನೋಯಿಸಲಿಲ್ಲ. ನಿನ್ನಂಥ ಉಪಕಾರವರಿಯದ ಮನುಷ್ಯರ ಅಮಾನವೀಯತೆ ನನ್ನನ್ನು ನೋಯಿಸುತ್ತಿದೆ. ಅದಕ್ಕಾಗಿ ಅಳುತ್ತಿದ್ದೇನೆ.
ಮಾನವ : ಇದೇನಿದು? ಇಷ್ಟೊಂದು ಒಗಟು-ಒಗಟಾಗಿ ಮಾತನಾಡುತ್ತಿರುವೆ? ಸ್ವಲ್ಪ ಅರ್ಥವಾಗುವಂತೆ ಹೇಳಬಾರದೇ?
ಮರ : ಯೇ ಮೂರ್ಖ ಮನುಜ, ನೀನು ನಮ್ಮ ಹೊಟ್ಟೆಯಲ್ಲಿ ಹುಟ್ಟದಿದ್ದರೂ ನೀ ನಮ್ಮ ತನುಜನೇ. ನೀನು ನಮ್ಮ ಮಡಿಲಲ್ಲಿ ಆಟವಾಡಿಕೊಂಡು ಬೆಳೆದು ಬದುಕುತ್ತಿರುವ ಮುಗ್ಧ ಮಗು. ನಿಮಗೆ ನಾವು ಎಲ್ಲವನ್ನೂ ಧಾರೆಯೆರೆದು ಕೊಟ್ಟು ಬೆಳೆಸುತ್ತಿದ್ದೇವೆ. ಗಾಳಿ, ನೀರನ್ನು ಪುಕ್ಕಟೆಯಾಗಿ ಕೊಡುವುದಲ್ಲದೇ, ನಾವೇ ಸತ್ತು ನಿಮಗೆ ಆಹಾರವಾಗಿ ನಿಮ್ಮ ಹೊಟ್ಟೆ ಹಸಿವನ್ನು ನೀಗಿಸುತ್ತಿದ್ದೇವೆ. ಆದರೆ ನಿಮಗೆ ಕೃತಜ್ಞತೆ ಇಲ್ಲ. ನಮ್ಮ ಉಪಕಾರದ ಅರಿವು ಕೂಡ ನಿಮಗಿಲ್ಲ. ನಾವು ನಿಮಗಾಗಿ ಜೀವವನ್ನೇ ಕೊಟ್ಟಿದ್ದೇವೆ. ಆದರೆ ನೀವು ನಮಗೇನು ಕೊಟ್ಟಿರುವಿರಿ? ಬರೀ ನೋವು, ಕಣ್ಣೀರು, ಕಲುಷಿತ ಗಾಳಿ ಕೊನೆಗೆ ಸಾವು ಇಷ್ಟೇ. !!
ಮಾನವ : ಓ ಮಹಾತಾಯಿ ಈ ಪಾಪಿಯನ್ನು ಕ್ಷಮಿಸಿ ಬಿಡು. ಅರಿಯದೆ ತಪ್ಪು ಮಾಡುತ್ತಿದ್ದ ಕಟುಕನ ಕಣ್ಣು ತೆರೆಸಿ ಕರುಣೆ ಹುಟ್ಟಿಸಿದ ದೇವತೆ ನೀನು.
ಮರ : ಮಗು, ಇಷ್ಟು ದೊಡ್ಡ ಮಾತುಗಳೇಕೆ? ಮಗು ಒದ್ದರೆ ತಾಯಿಗೆ ನೋವಾಗುವುದೇ? ಇಲ್ಲ ತಾನೇ? ಹಾಗೆ ನೀವು ಅವಿವೇಕದಿಂದ ಎಸಗಿದ ಅಪಚಾರವನ್ನು ಮನ್ನಿಸಿ ನಾವೆಲ್ಲ ನಿಮ್ಮನ್ನು ಪ್ರೀತಿಸುತ್ತೇವೆ. ನಾವಷ್ಟೇ ಅಲ್ಲ. ನಮ್ಮ ಪರಿಸರ ಮಾತೆ ನಿಸರ್ಗ ದೇವತೆಯು ನಿಮ್ಮನ್ನು ಪ್ರೀತಿಸುತ್ತಾಳೆ. ಆದ್ದರಿಂದಲೇ ನೀವು ಮನುಷ್ಯರು ರಾಕ್ಷಸ ರೂಪ ತಾಳಿದರೂ ಇನ್ನೂ ಉಸಿರಾಡುತ್ತಿರುವಿರಿ. ನಿಸರ್ಗಕ್ಕೆ ಅಪಚಾರವೆಸಗಬೇಡಿ. ನಿಸರ್ಗವನ್ನು ಪ್ರೀತಿಸಿ.... ಶುದ್ಧ ಗಾಳಿ, ಪರಿಶುದ್ಧ ವಾತಾವರಣದೊಂದಿಗೆ ಸಂತೋಷವಾಗಿ ಬಾಳಿ...
ಮಾನವ : ಎಂಥ ಉದಾರಿಗಳು ತಾಯಿ ನೀವು. ನಾನು ಇಂದಿನಿಂದ ನಿಸರ್ಗವನ್ನು ಪ್ರೀತಿಸುತ್ತೇನೆ, ಪೂಜಿಸುತ್ತೇನೆ. ಆದರೆ ಕನಸಲ್ಲೂ ನಿಸರ್ಗವನ್ನು ಮೋಹಿಸುವುದಿಲ್ಲ. ನನ್ನ ಕಣ್ಣು ತೆರೆಸಿದ್ದಕ್ಕೆ ಧನ್ಯವಾದಗಳು ತಾಯಿ. ನಾನು ಇತರೇ ನನ್ನ ಸೋದರರ ಕಣ್ಣು ತೆರೆಸಲು ಹೋರಡುತ್ತೇನೆ. ಆರ್ಶಿವಧಿಸು ತಾಯಿ ಹೋಗಿ ಬರುತ್ತೇನೆ...
ಗೆಳೆಯರೇ ನಿಸರ್ಗವನ್ನು ಪ್ರೀತಿಸಿ ಮತ್ತು ರಕ್ಷಿಸಿ. ಆದರೆ ಮೋಹಿಸಬೇಡಿ. ಇವತ್ತು ನೀವು ನಿಸರ್ಗವನ್ನು ಸರ್ವನಾಶ ಮಾಡಿದರೆ, ಮುಂದೊಂದು ದಿನ ಬದುಕಿರುವಾಗಲೇ ನರಕವನ್ನು ನೋಡಬೇಕಾಗುತ್ತದೆ. ಎಲ್ಲೆಡೆ ಆಮ್ಲಜನಕದ ಟ್ಯಾಂಕಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಈಗಲೇ ಎಚ್ಚೆತ್ತುಕೊಳ್ಳಿ... ನಿಸರ್ಗವನ್ನು ಪ್ರೀತಿಸಿ, ಪೂಜಿಸಿ ಮತ್ತು ಸಂರಕ್ಷಿಸಿ...
ಕನ್ನಡ ಕಥೆ ಪುಸ್ತಕಗಳು - Kannada Story Books
Note: This article is coming out in the form of Animated Short Movie. For more updates keep in touch with Roaring Creations/YouTube.
23) ನೀ ಅತ್ತರೆ ತಾಯಿ ಮತ್ತೆ ಮರಳಿ ಬಾರಳು... - Kannada Story on Mother

ನನ್ನ ಜೀವನದಲ್ಲಿ ಸದ್ಯಕ್ಕೆ ಹೇಳಿಕೊಳ್ಳುವಂಥ ದೊಡ್ಡ ವಿಷಯಗಳೇನು ಆಗಿಲ್ಲ. ಆದರೆ ಆಗುತ್ತಿರುವುದೆಲ್ಲವು ವಿಶೇಷವಾಗಿವೆ. ನನಗೆ ನಿಮ್ಮಂತೆ ಹತ್ತಾರು ಜನ ಗೆಳೆಯರಿಲ್ಲ. ನನಗೆ ಇರುವುದು ಇಬ್ಬರೇ ಗೆಳೆಯರು. ಅವರಲ್ಲಿ ಒಂದು ನನ್ನ ಲೇಖನಿಯಾದರೆ, ಮತ್ತೊಂದು ಅವಳು. ಅವಳಿಗೂ ಅಷ್ಟೇ..! ಅವಳಿಗೆ ಅವಳ ಕ್ಯಾಮೆರಾವನ್ನು ಬಿಟ್ಟರೆ ನಾನೊಬ್ಬನೇ ಗೆಳೆಯ. ನಿನ್ನೆ ನಮ್ಮಿಬ್ಬರ ಕಣ್ಣಿಗೆ ಬಸ್ಸಲ್ಲಿ ಬಿಸಲೇರಿ ವಾಟರ್ ಬಾಟಲಗಳನ್ನು ಮಾರುತ್ತಿರುವ ೬೫ ವಯಸ್ಸಿನ ಒಬ್ಬಳು ಹಣ್ಣಾದ ಮುದುಕಿ ಕಾಣಿಸಿದಳು. ಅವಳನ್ನು ನೋಡಿದಾಗ ನನ್ನವಳ ಕಣ್ಣ೦ಚಲ್ಲಿ ಕಣ್ಣೀರು ಕಾಲು ಚಾಚಿತು.
ಆ ಮುದುಕಿಗೆ ಮಗ, ಸೊಸೆ, ಮೊಮ್ಮಕ್ಕಳೆಲ್ಲರು ಇದ್ದಾರೆ. ಆದರೆ ಎಳ್ಳಷ್ಟು ಪ್ರಯೋಜನವಿಲ್ಲ. ಮಗ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಆ ಮಹಾತಾಯಿ ಕಷ್ಟ ಪಡುತ್ತಿರುವುದನ್ನು ನೋಡಿದರೆ ಎಂಥ ಕಟುಕನ ಕಲ್ಲು ಹೃದಯವಾದರೂ ಕರಗಿ ಕನಿಕರ ತೋರಿಸುತ್ತೆ. ಆದರೆ ಅವಳ ಮಗ ಮತ್ತು ಸೊಸೆಯ ಹೃದಯವೇಕೋ ಕಲ್ಲಾಗಿದೆ. ಅಂಥ ಪರಿಸ್ಥಿತಿ ಯಾವ ತಾಯಿಗೂ ಬರದಿರಲಿ ಎಂಬ ಕಳಕಳಿ ನನ್ನದು. "ತಾಯಿ ದೇವರಾಗಬಹುದು. ಆದರೆ ದೇವರು ಎಷ್ಟೇ ಪ್ರಯತ್ನಿಸಿದರೂ ಯಾವತ್ತು ತಾಯಿಯಾಗಲಾರ". ಪ್ಲೀಸ್ ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ತಾಯಿ ತೀರಿ ಹೋದಾಗ ನೀವು ಅತ್ತರೆ,,, ತಾಯಿ ಮತ್ತೆ ಮರಳಿ ಬಾರಳು ಎಂಬುದು ನೆನಪಿರಲಿ... ನೀನು ಚಿಕ್ಕವನಿದ್ದಾಗ ನೀನು ಸ್ವಲ್ಪ ಅತ್ತರೆ ಸಾಕು ತಾಯಿ ಎಲ್ಲಿದ್ದರೂ ಓಡೋಡಿ ಬರುತ್ತಿದ್ದಳು. ಆದರೆ ಈಗ ನೀ ಬಿಕ್ಕಿಬಿಕ್ಕಿ ಅತ್ತರೂ ತಾಯಿ ಮರಳಿ ಬಾರಳು...
೧) ತಾಯಿ ಮತ್ತೆ ಮರಳಿ ಬಾರಳು...
ತಾಯಿ ಹಾಡಿದ ಜೋಗುಳದ ಗೀತೆ
ತಾಯಿ ಪ್ರೀತಿಯ ಮುಗಿಯದ ಕವಿತೆ
ತಾಯಿಯದ್ದು ಕರುಳು ಬಂಧದ ಮಮತೆ
ಅದನ್ಯಾಕೆ ನೀ ಮಡದಿ ಬಂದಾಗ ಮರೆತೆ?
ನವಮಾಸ ನಿನ್ನನ್ನು ಹೊತ್ತಳು
ನೀ ಹುಟ್ಟುವಾಗ ಸಂತಸದಿ ಅತ್ತಳು
ಜೀವತೆದು ನಿನ್ನ ಹೊಗಳಿ ಬೆಳೆಸಿದಳು
ನಿನಗಾಗಿ ವನವಾಸ ಅನುಭವಿಸಿದಳು..
ಓದಿಸಿದಳು ನಿನ್ನ ಹಗಲಿರುಳು ದುಡಿದು
ಮರುಗಿದಳು ದಿನಾ ಸಂಕಷ್ಟಗಳಲ್ಲಿ ಮಡಿದು
ನಿನ್ನ ಏಳ್ಗೆಗೆ ತಾಯಿ ಪಟ್ಟ ನೋವಿದು
ಇಂಥ ಮಾತೆಗೆ ಯಾವ ಉಡುಗೊರೆ ನಿನ್ನದು?
ನಿನ್ನ ಪ್ರೀತಿಗೆ ತಾಯಿ ಕೊಟ್ಟಳು ಒಪ್ಪಿಗೆ
ಬಂದ ಸೊಸೆ ಕಾಡುತಿಹಳು ಯಾವ ತಪ್ಪಿಗೆ?
ಜೀವ ಬಿಗಿಹಿಡಿದವಳೆ ಮೊಮ್ಮಕ್ಕಳ ಆಸೆಗೆ
ಮುದಿ ಮುದುಕಿ ಮೌನವಾಗಿರುವಳು
ನಿನ್ನ ಮುದ್ದಿನ ಮಡದಿಯ ಕಾಟಕ್ಕೆ.
ನೀನು ಹೋಗುವೆ ಖಂಡಿತ ನರಕಕ್ಕೆ...
ಸ್ವಾರ್ಥಿ ನಿನ್ನ ಹೆಂಡತಿ ತಾಯಿಯ ದೂಡಿದಳು
ಬೀದಿಲಿ ಬಿದ್ದ ತಾಯಿ ನಿನ್ನನ್ನೇ ಹರಸಿದಳು
ಕೊನೆಯುಸಿರೆಳೆದಳು ಸಿಗದೇ ಅನ್ನದಗಳು
ಈಗ ನೀ ಅತ್ತರೆ ತಾಯಿ ಮತ್ತೆ ಬಾರಳು...
ನೆನಪಿರಲಿ ತಾಯಿ ಮತ್ತೆ ಮರಳಿ ಬಾರಳು...
೨) ಅತ್ತೆ v/s ಕತ್ತೆ
ಮದುವೆಯ ಮುಂಚೆ ಮಕ್ಕಳು
ಹೆತ್ತವರಿಗೆ ಸೊಂಪಾದ ನೆರಳು
ಮದುವೆಯ ನಂತರ ಮಕ್ಕಳು
ಹೆಂಡ್ತಿ ಮಾತಿಗೆ ಮರಳು...
ಸೊಸೆ ತರುವ ಕಪಟ ತಿರುಳು
ಕಳಚುತ್ತೆ ಸಂಸಾರದ ಸರಳು
ಹೆಂಡತಿಯ ಮಾತಿಗೆ ಮಗ
ನೀಡ್ತಾನೆ ತನ್ನ ಮುಗ್ಧ ಕೊರಳು..
ಮಗನ ಅಗಲುವಿಕೆಯಿಂದ
ತತ್ತರಿಸುತ್ತೆ ಹೆತ್ತ ಕರಳು
ಇದು ಹೆಣ್ಣಿನ ದೌರ್ಭಾಗ್ಯದ ಉರುಳು
ತನ್ನ ಕಣ್ಣಲ್ಲೇ ಚುಚ್ಚಿಕೊಂಡ ಬೆರಳು...
ಹೆಣ್ಣಿಗೆ ಹೆಣ್ಣೆ ತಾನೆ ಶತ್ರುಳು?
ಹೆಣ್ಮಕ್ಕಳು ಒಂಥರಾ ಪಾಪಿ ದೇವತೆಗಳು.
ಏಕೆಂದರೆ ಈಗ ಅಳುತ್ತಿರುವ ಅತ್ತೆ,
ಒಂದು ಕಾಲದಲ್ಲಿ ಸೊಸೆಯಾಗಿ ಮೆರೆದ ಕತ್ತೆ...
24) ಹಿತ ಶತ್ರುಗಳು : Kannada Motivational Story - Best Story in Kannada - Kannada Inspirational Sotry
ಅವತ್ತು ಗಟ್ಟಿ ಗುಂಡಿಗೆಯ ಹರೆಯದ ಹುಡುಗನ ಕಣ್ಣಲ್ಲಿ ಕಣ್ಣೀರ ಧಾರೆ ಜಲಪಾತದಂತೆ ಧುಮುಕುತ್ತಿತ್ತು. ಅವನೆದೆಯಲ್ಲಿನ ನೋವು, ಆಕ್ರೋಶ, ಹತಾಶೆಗಳೆಲ್ಲವು ಕಣ್ಣೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವು. ಸಿಡಿಲಿಗು ಹೆದರದ ಗುಂಡಿಗೆ ಒಂದು ಸಣ್ಣ ನಷ್ಟಕ್ಕೆ ನಲುಗಿ ಹೋಗಿತ್ತು. ಅವನಿಗೆ ಮುಂದೇನು ಮಾಡಬೇಕು ಎಂಬುದು ತೋಚದಾಗಿತ್ತು. ಕಾಲ ಕೆಳಗಿನ ನೆಲ ಕಳಚಿದಂತಾಗಿತ್ತು. ಆತ ಬಿಕ್ಕಿಬಿಕ್ಕಿ ಅತ್ತು ಮನಸ್ಸನ್ನು ಹಗುರಾಗಿಸಿಕೊಂಡು ಹೈವೇ ಪಕ್ಕದಲ್ಲಿ ಸುಮ್ಮನೆ ಸೋಂಬೆರಿಯಂತೆ ಕುಳಿತ್ತಿದ್ದನು. ಆತ ಸುಮ್ಮನೆ ಕೂರುವ ವ್ಯಕ್ತಿಯೇ ಅಲ್ಲ. ಆದರೂ ಅವನಿಗೆ ಬಂದ ಸಂಕಷ್ಟ ಅವನ ಕೈಕಾಲುಗಳನ್ನು ಕಟ್ಟಿ ಹಾಕಿತ್ತು. ಅವನಿಗೆ ಜೀವದ ಮೇಲಿನ ಆಸೆಯೇ ಹೊರಟು ಹೋಗುವ ಹಂತಕ್ಕೆ ತಲುಪಿತ್ತು. ಅಷ್ಟರಲ್ಲಿ ಅವನಿಗೆ ಅವನ ಜೀವದ ಗೆಳತಿ ಆಕಾಂಕ್ಷಾಳ ಕರೆ ಬಂದಿತು. ಅವಳಿಗೆ ಅವನ ನೋವಿಗೆ ಕಾರಣವೇನೆಂಬುದು ಆಗಲೇ ಗೊತ್ತಾಗಿತ್ತು. ಆಕೆ "ದೋಸ್ತ ಬದುಕಲ್ಲಿ ಇವೆಲ್ಲ ಕಾಮನ್. ಸಕ್ಸೆಸನ್ನು ಸೆಲೆಬ್ರೆಟ್ ಮಾಡಬೇಕೆಂದರೆ ಇಂಥ ಸಂಕಷ್ಟಗಳು ಇರಲೇಬೇಕು ಬಿಡು. ಡೋಂಟ್ ವರಿ. ನಿನ್ನ ಬೆಂಬಲಕ್ಕೆ ನಾನಿದೀನಿ..." ಎಂದೇಳುತ್ತಿದ್ದಳು. ಅಷ್ಟರಲ್ಲಿ ಆತ ದು:ಖ ತಾಳಲಾರದೆ ಮತ್ತೊಮ್ಮೆ ಅತ್ತು ಬಿಟ್ಟನು. ಅವನಿಗೆ ಆತ್ಮೀಯರಂಥ ಇರುವುದು ಅವಳೊಬ್ಬಳೇ. ೧೨ ವರ್ಷದಿಂದ ಬೆಸ್ಟ್ ಫ್ರೆಂಡ್ ಅವಳು. ಅವನ ಪ್ರತಿ ಹೆಜ್ಜೆಗೆ ಹೆಗಲು ಕೊಟ್ಟವಳು ಅವಳೊಬ್ಬಳೇ. ಅವನ ಮುಖದಲ್ಲಿನ ಮಂದಹಾಸಕ್ಕೆ, ಎದೆಯಲ್ಲಿನ ಕಿಚ್ಚಿಗೆ ಸ್ಪೂರ್ತಿ ಅವಳೊಬ್ಬಳೇ. ಅವಳ ಸ್ಪೂರ್ತಿಯ ಮಾತುಗಳಿಂದ ಅವನು ಕಳೆದುಕೊಂಡಿದ್ದ ಆತ್ಮವಿಶ್ವಾಸ ಮತ್ತೆ ಅವನೆದೆ ಸೇರಿತು. ಆತ ನೋವಲ್ಲಿಯೂ ನಗುತ್ತಾ ಅವಳಿಗೆ ಥ್ಯಾಂಕ್ಸ್ ಹೇಳುತ್ತಾ ರಸ್ತೆ ಬದಿಯ ಚಹಾದಂಗಡಿಯಲ್ಲಿ ಚಹಾ ತೆಗೆದುಕೊಂಡು ಅದರೊಂದಿಗೆ ಸಿಗರೇಟ್ ಹೊತ್ತಿಸಿ ಹಳೆಯ ಟೆಶ್ನನಗಳಿಂದ ಹೊರಬಂದನು.
ಅವನಿಗೆ ಓದಿನಲ್ಲಿ ಅತೀವ ಆಸಕ್ತಿಯಿತ್ತು. ಆದರೆ ಕಾಲೇಜು ಓದು ಅವನ ಗುರಿಗೆ ಪೂರಕವಾಗಿರಲಿಲ್ಲ. ಅದಕ್ಕಾಗಿ ಆತ ಓದನ್ನು ಸ್ವಲ್ಪ ನಿರ್ಲಕ್ಷಿಸಿ ತನ್ನಿಷ್ಟದ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿದನು. ಯ್ಯುಟೂಬ ಗೂಗಲಗಳನ್ನು ಕಿತ್ತಾಕಿ ಹೊಸಹೊಸ ಸ್ಕೀಲಗಳನ್ನು ಕಲಿತನು. ಅದರ ಜೊತೆಗೆ ಪದವಿ ಕೂಡ ಮುಗಿಯಿತು. ಅವನಿಗೆ ಮುಂದೆ ಓದುವ ಮನಸ್ಸಿರಲಿಲ್ಲ. ಮನೆಯವರ ಒತ್ತಾಯಕ್ಕೆ ಓದಿ ಹಣವನ್ನು ವ್ಯಯಿಸುವ ಮುಠ್ಠಾಳತನ ಮಾಡುವ ಹುಡುಗ ಅವನಾಗಿರಲಿಲ್ಲ. ಅವನು ಮನೆಯವರ ಮನವೊಲಿಸಿ ತನ್ನಿಷ್ಟದ ಬ್ಯುಸಿನೆಸ್ ಮಾಡಲು ಮುಂದಾದನು. ಮನೆಯವರು ಸಂಗ್ರಹಿಸಿಟ್ಟ ಹಣವನ್ನು ಅವನಿಗೆ ನೀಡಿದರು. ಜೊತೆಗೆ ಸಂಬಂಧಿಕರು ಸಹ ಸಾಧ್ಯವಾದಷ್ಟು ಸಹಾಯ ಮಾಡಿದರು. ದೊಡ್ಡ ಪಟ್ಟಣದಲ್ಲಿ ದೊಡ್ಡ ಬಾಡಿಗೆ ಆಫೀಸ ಖರೀದಿಸುವಷ್ಟು ಹಣ ಅವನ ಬಳಿಯಿರಲಿಲ್ಲ. ಆತ ಆಫೀಸಿಗಾಗಿ ಬಿಲ್ಡಿಂಗ್ ಹುಡುಕುತ್ತಿರುವಾಗ ಅವನ ಅತೀ ಹತ್ತಿರದ ಸಂಬಂಧಿಯೊಬ್ಬರು ಬಂದು ನಮ್ಮ ಬಿಲ್ಡಿಂಗ್ ನಾಲ್ಕು ವರ್ಷದಿಂದ ಖಾಲಿ ಬಿದ್ದಿದೆ. ಸದ್ಯಕ್ಕೆ ನಮಗೇನು ದುಡ್ಡು ಕೊಡುವುದು ಬೇಡ, ಮುಂದೆ ನಿಮಗೆ ಸಕ್ಸೆಸ್ ಸಿಕ್ಕ ಮೇಲೆ ಖುಷಿಯಿಂದ ಸಾಧ್ಯವಾದಷ್ಟು ಕೊಡಿ ಎಂದೇಳಿದರು. ಅವರ ಮಾತನ್ನು ನಂಬಿ ಪಾಪ ಆ ಹುಡುಗ ೧೨ ಲಕ್ಷಕ್ಕೂ ಮೀರಿ ಸಾಲ ಮಾಡಿಕೊಂಡು ತನ್ನ ಬ್ಯುಸಿನೆಸ್ಸನ್ನು ಪ್ರಾರಂಭಿಸಿದನು. ಅವನ ಬ್ಯುಸಿನೆಸ್ ಸೂಪರಾಗಿ ಶುರುವಾಯಿತು. ಹಣ ಕೂಡ ಹರಿದು ಬರಲು ಪ್ರಾರಂಭವಾಯಿತು. ಅದಕ್ಕಾಗಿ ಅವನ ಮುಖದಲ್ಲಿ ನಗೆ ನಲಿದಾಡಿತು. ಆದರೆ ಅಷ್ಟರಲ್ಲಿ ಅವನಿಗೊಂದು ದೊಡ್ಡ ಆಘಾತ ಬಂದು ಎದೆಗಪ್ಪಳಿಸಿತು. ಆಫೀಸಗಾಗಿ ಬಿಲ್ಡಿಂಗ್ ನೀಡಿದ್ದವರು ದಿಢೀರನೆ ಬಂದು ಆಫೀಸ ಖಾಲಿ ಮಾಡಲು ಧರಣಿ ನಿಂತರು. ಅವನ ಕಾಲ ಕೆಳಗಿನ ನೆಲ ಒಮ್ಮೆಲೇ ಕೊಚ್ಚಿ ಹೋಯಿತು. ಅವನ ಕಣ್ಣಿನಿಂದ ಕಣ್ಣೀರಧಾರೆ ಜಲಪಾತದಂತೆ ಸುರಿಯಲು ಶುರುವಾಯಿತು. ಏಕೆಂದರೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಆತ ಬ್ಯುಸಿನೆಸ್ಸನ್ನು ಪ್ರಾರಂಭಿಸಿದ್ದನು. ಇದ್ದಕ್ಕಿದ್ದಂತೆ ಈ ರೀತಿ ಆಫೀಸ ಖಾಲಿ ಮಾಡಿ ಎಂದಾಗ ಅವನ ಆತ್ಮಸ್ಥೈರ್ಯ ಕುಸಿಯಿತು. ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾದವಳು ಆ ಬಿಲ್ಡಿಂಗನ ಮಾಲಕಿ ಮನೆಹಾಳಿ. ಅವಳಿಗೆ ಮೊದಲಿನಿಂದಲೂ ಆ ಹುಡುಗನ ಮೇಲೆ ಜಲಸಿಯಿತ್ತು. ಅವನ ಯಶಸ್ಸು ಅವಳಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಆಕೆ ಬೇಕಂತಲೇ ತನ್ನ ಗಂಡನ ಕಡೆಯಿಂದ ಹೇಳಿಸಿ ಬಿಲ್ಡಿಂಗ ಕೊಟ್ಟು ಮತ್ತೆ ಕಿತ್ತುಕೊಳ್ಳುವ ನಾಟಕವಾಡಿ ತನ್ನ ಕುಟಿಲತೆಯಲ್ಲಿ ಯಶಸ್ವಿಯಾದಳು. ಅವಳ ಮೈಯಲ್ಲಿ ರಕ್ತಕ್ಕಿಂತ ಹೆಚ್ಚಾಗಿ ಕೊಳಕುತನವೇ ತುಂಬಿತ್ತು. ಅವಳ ಒಣದ್ವೇಷಕ್ಕೆ ಆ ಹುಡುಗನ ಬ್ಯುಸಿನೆಸ್ ಹಾಡುಹಗಲೇ ನೆಲಕಚ್ಚಿತು. ಆತ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದನು.
ತನ್ನ ಜೀವದ ಗೆಳೆಯ ತನ್ನ ಹತ್ತಿರದ ಸಂಬಂಧಿಗಳ ಕುತಂತ್ರಕ್ಕೆ ಬಲಿಯಾಗಿ ಬೀದಿಗೆ ಬಂದಿರುವ ಸುದ್ದಿ ಕೇಳಿ ಆಕಾಂಕ್ಷಾಳ ಕಣ್ಣುಗಳು ಸಹ ತುಂಬಿ ಬಂದವು. ಆದರೆ ಅವಳು ಧೈರ್ಯ ಕಳೆದುಕೊಳ್ಳದೆ ಅವನನ್ನು ಸಂತೈಸಿದಳು. ಅವನಿಗೆ ಧೈರ್ಯ ತುಂಬಿ ಮತ್ತೆ ಬ್ಯುಸಿನೆಸ್ಸನ್ನು ಹೊಸದಾಗಿ ಪ್ರಾರಂಭಿಸಲು ಹುರಿದುಂಬಿಸಿದಳು. ಅವಳ ಸ್ಪೂರ್ತಿದಾಯಕ ಮಾತುಗಳಿಂದ ಅವನ ಆತ್ಮವಿಶ್ವಾಸ ಹೆಚ್ಚಾಯಿತು. ಆತ ಸಂಬಂಧಿಕರು ಮಾಡಿದ ಕುಟಿಲತೆಗೆ ತಕ್ಕ ಶಾಸ್ತಿ ಮಾಡಲು ನಿರ್ಧರಿಸಿದನು. ತನ್ನನ್ನು ಕಾಲ ಕೆಳಗಾಕಿ ತುಳಿದವರನ್ನು ತಲೆತಗ್ಗಿಸಿ ನಿಲ್ಲುವಂತೆ ಮಾಡಲು ಪಣತೊಟ್ಟನು. ಮತ್ತೆ ಅಲ್ಲಿಇಲ್ಲಿ ಸಾಲ ಮಾಡಿ ಹೊಸ ಆಫೀಸಿನ್ನು ಖರೀದಿಸಿ ಮತ್ತೆ ಅದೇ ಬ್ಯುಸಿನೆಸ್ಸನ್ನು ಹೊಸದಾಗಿ ಪ್ರಾರಂಭಿಸಿದನು. ಹೊರಗಿನ ಶತ್ರುಗಳೊಡನೆ ಹೋರಾಡಿ ಗೆಲ್ಲಬಹುದು. ಆದರೆ ಒಳಗಿನ ಹಿತಶತ್ರುಗಳನ್ನು ಗುರ್ತಿಸುವುದು ಸಹ ಸುಲಭವಲ್ಲ ಎಂಬುದು ಅವನಿಗೆ ಅರಿವಾಯಿತು. ರಣಹದ್ದುಗಳ ನಡುವೆ ಸಿಲುಕಿಕೊಂಡು ಒದ್ದಾಡುತ್ತಿರುವ ಒಂಟಿ ಗುಬ್ಬಚ್ಚಿಯಂತೆ ಅವನಾಗಿರುವಾಗ ಅವನಿಗೆ ಮಾನಸಿಕವಾಗಿ ಬೆಂಬಲ ನೀಡಿ ಮುಂದೆ ಸಾಗಲು ಸ್ಪೂರ್ತಿಯಾದ ಅವಳು ಮಾದರಿ ಗೆಳತಿಯಾದಳು. ಅವನ ಯಶಸ್ಸಿನ ಹಾದಿಗೆ ಆರಂಭದಲ್ಲೇ ಕಲ್ಲಾಕಿದ ಸಂಬಂಧಿಕರಲ್ಲಿನ ಕೊಳಕು ಹೆಣ್ಣು ಸಮಾಜದಲ್ಲಿ ಮಾನಗೇಡಿಯಾದಳು. ಅವನ ಯಶಸ್ಸನ್ನು ನೋಡಿ ಹೊಟ್ಟೆ ಉರಿದುಕೊಂಡು ಸಿಕ್ಕಲೆಲ್ಲ ಪರಚಿಕೊಂಡು ಹುಚ್ಚಿಯಾದಳು.
ಗೆಳೆಯರೇ, ಈ ನೈಜ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಹಂಬಲ ನನಗಿರಲಿಲ್ಲ. ಆದರೆ ಈ ಕಥೆಯ ಕಥಾನಾಯಕನಂತೆ ಎಷ್ಟೋ ಜನ ಅಮಾಯಕರು ಮೋಸ ಹೋಗಿದ್ದಾರೆ. ನಮ್ಮ ದೇಶದ ಯುವಕರು ಬರೀ ನೌಕರಿಗಾಗಿ ನಾಯಿಯಂತೆ ಅಲೆಯುತ್ತಾರೆ. ಅಂಥದರಲ್ಲಿ ಧೈರ್ಯ ಮಾಡಿ ಸ್ವಂತ ಬ್ಯುಸಿನೆಸ್ ಪ್ರಾರಂಭಿಸಿದವರನ್ನು ಸ್ವಂತದ ಸಂಬಂಧಿಕರೇ ಹೊಸಕಿ ಹಾಕಲು ಶಕುನಿ ತಂತ್ರಗಳನ್ನು ಹೆಣೆಯುತ್ತಾರೆ. ಇದು ನಮ್ಮ ದೇಶದ ದೌರ್ಭಾಗ್ಯ. ಆದರೆ ನಾವು ಹೆದರಬಾರದು. ತುಳಿಯುವವರು, ತುಳಿದವರು ತಲೆಯೆತ್ತಿ ನೋಡುವಷ್ಟರ ಮಟ್ಟಿಗೆ ನಾವು ಬೆಳೆದು ನಿಲ್ಲಬೇಕು. ಸಾಧ್ಯವಾದರೆ ನೀವು ಒಂದು ಹೊಸ ಬ್ಯುಸಿನೆಸ್ಸನ್ನು ಪ್ರಾರಂಭಿಸಿ ಬಿಲೇನಿಯರಗಳಾಗಿ. ಸಾಧ್ಯವಾಗದಿದ್ದರೆ ನಿಮ್ಮ ಸುತ್ತಮುತ್ತ ಹೊಸದಾಗಿ ಬ್ಯುಸಿನೆಸ್ ಪ್ರಾರಂಭಿಸಿದ ನವ ಯುವಕರಿಗೆ ನೈತಿಕ ಬೆಂಬಲ ನೀಡಿ ಅವರನ್ನು ಪ್ರೋತ್ಸಾಹಿಸಿ Please. ಧನ್ಯವಾದಗಳು...